ಟಿ. ಜಿ. ಶ್ರೀನಿಧಿ
ಡಿಜಿಟಲ್ ಕ್ಯಾಮೆರಾ ಬಂದ ಮೇಲೆ ಫೋಟೋಗ್ರಫಿ ಅದೆಷ್ಟು ಸುಲಭವಾಗಿದೆಯಲ್ಲ! ಬೇರೆಬೇರೆ ರೀತಿಯ ಚಿತ್ರಗಳನ್ನು ತೆಗೆಯಲು ಹತ್ತಾರು ಸುಲಭ ಆಯ್ಕೆಗಳು, ಸ್ವಯಂಚಾಲಿತ ಆಯ್ಕೆ ಬೇಡ ಎನ್ನುವುದಾದರೆ ಮ್ಯಾನ್ಯುಯಲ್ ಸೆಟ್ಟಿಂಗುಗಳು, ಚಿತ್ರದ ಗುಣಮಟ್ಟ ಹೇಗಿರಬೇಕು ಎಂದು ತೀರ್ಮಾನಿಸುವ ಸ್ವಾತಂತ್ರ್ಯ, ಹೈ ಡೆಫನಿಷನ್ ವೀಡಿಯೋ ಚಿತ್ರೀಕರಿಸುವ ಸೌಕರ್ಯ, ದೂರದೂರದ ದೃಶ್ಯಗಳನ್ನೂ ಕಣ್ಣೆದುರಿಗೆ ತಂದುನಿಲ್ಲಿಸುವ ಮೆಗಾಜೂಮ್ - ಹೀಗೆ ಆಧುನಿಕ ಕ್ಯಾಮೆರಾಗಳಲ್ಲಿರುವ ವೈಶಿಷ್ಟ್ಯಗಳ ಪಟ್ಟಿಗೆ ಕೊನೆಯೇ ಇಲ್ಲ.
ಕ್ಯಾಮೆರಾಗಳ ವೈಶಿಷ್ಟ್ಯ ಮಾತ್ರವಲ್ಲ, ಅವುಗಳ ವೈವಿಧ್ಯವೂ ಕಡಿಮೆಯೇನಲ್ಲ. ಮೊಬೈಲಿನಲ್ಲಿ, ಟ್ಯಾಬ್ಲೆಟ್ ಗಣಕಗಳಲ್ಲಿ, ಲ್ಯಾಪ್‌ಟಾಪಿನಲ್ಲಿ, ಪೆನ್ನಿನಲ್ಲಿ, ಕೊನೆಗೆ ಅಂಗಿಯ ಗುಂಡಿಯಲ್ಲೂ ಅಡಗಿ ಕೂರಬಲ್ಲ ಕ್ಯಾಮೆರಾಗಳಿವೆ.
ಆದರೆ ಕ್ಯಾಮೆರಾಗಳಲ್ಲಿ ಅದೇನೇ ವೈಶಿಷ್ಟ್ಯ-ವೈವಿಧ್ಯ ಇದ್ದರೂ ಒಂದು ವಿಷಯ ಮಾತ್ರ ಎಲ್ಲ ಬಗೆಯ ಕ್ಯಾಮೆರಾಗಳನ್ನೂ ಸಮಾನವಾಗಿ ಕಾಡುತ್ತದೆ. ಆ ವಿಷಯವೇ ಫೋಕಸ್.
ಬಾಲ್ಕನಿ ಕೈದೋಟದಲ್ಲಿ ಅರಳಿರುವ ಹೂವಿನ ಚಿತ್ರ ತೆಗೆಯಲು ಹೋದಾಗ ಆ ಹೂವಿಗಿಂತ ಸ್ಪಷ್ಟವಾಗಿ ಪಕ್ಕದಲ್ಲಿ ಒಣಗುತ್ತಿರುವ ಒರೆಸುವ ಬಟ್ಟೆ ಕಾಣುತ್ತಿರುತ್ತದೆ. ಯಾವುದೋ ಪ್ರವಾಸಿ ತಾಣದಲ್ಲಿ ಪ್ರೇಯಸಿಯ ಚಿತ್ರ ಕ್ಲಿಕ್ಕಿಸಿದ್ದೇನೆ ಎಂದು ನೀವು ಅಂದುಕೊಂಡರೆ ನಿಮ್ಮ ಕ್ಯಾಮೆರಾ ಅವಳ ಹಿಂದಿರುವ ಅಜ್ಜಿಯ ಕಡೆ ಹೆಚ್ಚಿನ ಗಮನ ಕೊಟ್ಟಿರುತ್ತದೆ. ಇನ್ನು ಕೆರೆ ದಡದಲ್ಲಿರುವ ಮರದ ಬೊಡ್ಡೆಯ ಮೇಲೆ ಕುಳಿತು ಬಿಸಿಲು ಕಾಯಿಸುತ್ತಿರುವ ಬೆಳ್ಳಕ್ಕಿಯ ಚಿತ್ರ ತೆಗೆಯಲು ಹೋದಿರೋ, ಅನುಮಾನವೇ ಬೇಡ, ಅತ್ಯಂತ ಸ್ಪಷ್ಟವಾಗಿ ಬಂದಿರುತ್ತದೆ - ಮರದ ಬೊಡ್ಡೆ!