ಶುಕ್ರವಾರ, ನವೆಂಬರ್ 27, 2015

ಡಿಸೆಂಬರ್ ೧೯-೨೦: ಬೆಂಗಳೂರಿನಲ್ಲಿ ವಿಕಿಪೀಡಿಯ ಸಂಪಾದನೋತ್ಸವ

ಇಜ್ಞಾನ ವಾರ್ತೆ

ಕೆಲ ತಿಂಗಳ ಹಿಂದೆ ಬೆಂಗಳೂರಿನ ಟೆಕ್ಸಸ್ ಇನ್‌ಸ್ಟ್ರುಮೆಂಟ್ಸ್ ಸಂಸ್ಥೆಯಲ್ಲಿ ನಡೆದ ಕನ್ನಡ ವಿಜ್ಞಾನ ಲೇಖಕರ ಶಿಬಿರ ನಿಮಗೆ ನೆನಪಿರಬಹುದು. ಇದೀಗ ಕನ್ನಡ ಮತ್ತು ವಿಜ್ಞಾನ ಬರವಣಿಗೆಗೆ ಸಂಬಂಧಪಟ್ಟ ಇನ್ನೊಂದು ಕಾರ್ಯಕ್ರಮ ಟೆಕ್ಸಸ್ ಇನ್‌ಸ್ಟ್ರುಮೆಂಟ್ಸ್‌ನಲ್ಲಿ ನಡೆಯುತ್ತಿದೆ. ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಬರಹಗಳನ್ನು ವಿಕಿಪೀಡಿಯಕ್ಕೆ ಸೇರಿಸುವುದು ಈ ಕಾರ್ಯಕ್ರಮದ ಉದ್ದೇಶ. ವಿಕಿಪೀಡಿಯ ಪರಿಚಯವಿಲ್ಲದವರಿಗೆ ಅಗತ್ಯ ತರಬೇತಿಯನ್ನೂ ನೀಡಲಾಗುವುದು.

ಗುರುವಾರ, ನವೆಂಬರ್ 12, 2015

ವಾಸ್ತವವಲ್ಲದ ವಾಸ್ತವ

ಟಿ. ಜಿ. ಶ್ರೀನಿಧಿ


ಈಗಿನ ಅಜ್ಜ-ಅಜ್ಜಿಯರು ಚಿಕ್ಕಮಕ್ಕಳಾಗಿದ್ದಾಗ ಜಾತ್ರೆ-ಸಂತೆಗಳಲ್ಲಿ ಬಯಾಸ್ಕೋಪ್ (ಅಥವಾ ಬಯೋಸ್ಕೋಪ್) ಎನ್ನುವುದೊಂದು ಆಕರ್ಷಣೆ ಇರುತ್ತಿತ್ತಂತೆ. ದಪ್ಪನೆಯದೊಂದು ಪೆಟ್ಟಿಗೆ, ಅದರೊಳಗೆ ಇಣುಕಲೊಂದು ಕಿಂಡಿ - ಇದು ಬಯಾಸ್ಕೋಪಿನ ಸ್ವರೂಪ. ನಾಲ್ಕಾಣೆಯನ್ನೋ ಎಂಟಾಣೆಯನ್ನೋ ಕೊಟ್ಟು ಆ ಪೆಟ್ಟಿಗೆಯೊಳಗೆ ಇಣುಕಿದರೆ ಮುಂಬಯಿ, ದೆಹಲಿ, ಆಗ್ರಾದ ದೃಶ್ಯಗಳೆಲ್ಲ ಕಣ್ಣೆದುರು ಮೂಡುತ್ತಿದ್ದವು. ಬಾಣಾವರದ ಸಂತೆಯಲ್ಲೇ ಭಾರತ ದರ್ಶನ!

ಕೆಲ ವರ್ಷಗಳ ನಂತರ ಇಂತಹವೇ ಪೆಟ್ಟಿಗೆಗಳು ಇನ್ನು ಸ್ವಲ್ಪ ಚಿಕ್ಕದಾಗಿ 'ವ್ಯೂ ಮಾಸ್ಟರ್' ಎಂಬ ಹೆಸರಿನೊಡನೆ ಮಕ್ಕಳ ಕೈಗೆ ಬಂದವು. ಗುಂಡನೆಯ ಡಿಸ್ಕುಗಳನ್ನು ಪುಟ್ಟದೊಂದು ಸಾಧನದೊಳಕ್ಕೆ ಸೇರಿಸಿ ಇಣುಕಿ ನೋಡಿದರೆ ಅದರಲ್ಲಿನ ಚಿತ್ರಗಳು ನಮ್ಮ ಕಣ್ಮುಂದೆ ಮೂಡುತ್ತಿದ್ದವು (ಈಗ ಇದರ ಥ್ರೀಡಿ ಆವೃತ್ತಿಯೂ ಲಭ್ಯ).

ಬುಧವಾರ, ನವೆಂಬರ್ 4, 2015

ಜೆನ್‌ಫೋನ್ ಲೇಸರ್: ಕೈಗೆಟುಕುವ ಬೆಲೆ, ಉತ್ತಮ ಗುಣಮಟ್ಟ


ಈಚಿನ ದಿನಗಳಲ್ಲಿ ಮೊಬೈಲ್ ಫೋನ್ ಮಾರುಕಟ್ಟೆಗೆ ಹೊಸ ಮಾದರಿಗಳು ಒಂದರ ಹಿಂದೊಂದರಂತೆ ಪ್ರವೇಶಿಸುತ್ತಲೇ ಇವೆ. ಆದಷ್ಟೂ ಹೆಚ್ಚಿನ ಸವಲತ್ತುಗಳನ್ನು ಸಾಧ್ಯವಾದಷ್ಟೂ ಕಡಿಮೆ ಬೆಲೆಯಲ್ಲಿ ಒದಗಿಸಲು ಇಲ್ಲಿ ಸ್ಪರ್ಧೆಯೇ ನಡೆದಿದೆ.

ಮೊಬೈಲ್ ದರಸಮರದಲ್ಲಿ ಅತ್ಯಂತ ಹೆಚ್ಚು ಲಾಭವಾಗಿರುವುದು ಹತ್ತು ಸಾವಿರ ರೂಪಾಯಿಗಿಂತ ಕಡಿಮೆ ಬೆಲೆಯ ಫೋನುಗಳನ್ನು ಬಳಸುವವರಿಗೆ ಎನ್ನಬಹುದು. ಇಷ್ಟು ಬೆಲೆಯ ಮಿತಿಯೊಳಗೆ ಸಾಕಷ್ಟು ಉತ್ತಮ ಸೌಲಭ್ಯಗಳನ್ನು ನೀಡುವ ಹಲವು ಫೋನುಗಳು ಇದೀಗ ಮಾರುಕಟ್ಟೆಯಲ್ಲಿವೆ.

ಇಂತಹ ಫೋನುಗಳಲ್ಲೊಂದು ಏಸಸ್ ಸಂಸ್ಥೆಯ 'ಜೆನ್‌ಫೋನ್ ೨ ಲೇಸರ್'.
badge