ಗುರುವಾರ, ಆಗಸ್ಟ್ 27, 2015

ಫಿಕಾಮ್ ಎನರ್ಜಿ 653: ಕಡಿಮೆ ಬೆಲೆಯ ಉತ್ತಮ ಮೊಬೈಲ್

ದೇಶದಲ್ಲಿರುವ ಜನರ ಸಂಖ್ಯೆಯ ಜೊತೆಗೆ ಮೊಬೈಲುಗಳ ಸಂಖ್ಯೆಯಲ್ಲೂ ವಿಶ್ವದ ರಾಷ್ಟ್ರಗಳಲ್ಲಿ ಭಾರತಕ್ಕೆ ಮುಂಚೂಣಿ ಸ್ಥಾನ. ಜೀವನಾವಶ್ಯಕ ವಸ್ತುಗಳ ಸಾಲಿನಲ್ಲಿ ಊಟ-ಬಟ್ಟೆ-ಸೂರಿನ ಜೊತೆಗೆ ಮೊಬೈಲ್ ದೂರವಾಣಿಯನ್ನು ಸೇರಿಸುವವರನ್ನೂ ನಾವಿಲ್ಲಿ ಕಾಣಬಹುದು.

ಕಾಲ ಬದಲಾದಂತೆ ತಂತ್ರಜ್ಞಾನವೂ ಬದಲಾಗುವುದು ಸಾಮಾನ್ಯ ತಾನೆ, ಅಂತಹ ಬದಲಾವಣೆಗಳಿಗೆ ಹೊಂದಿಕೊಳ್ಳುವುದರಲ್ಲೂನಾವು ಸದಾ ಮುಂದೆ. ಮೊದಲಿಗೆ ಮೊಬೈಲ್ ಫೋನುಗಳ ಪರಿಚಯವಾದಾಗ, ಸ್ಮಾರ್ಟ್‌ಫೋನುಗಳು ಮಾರುಕಟ್ಟೆಗೆ ಬಂದಾಗ, 2G ಹೋಗಿ 3Gಯ ಆಗಮನವಾದಾಗ - ಇಂತಹ ಎಲ್ಲ ಸಂದರ್ಭಗಳಲ್ಲೂ ಕಾಣಿಸಿದ ನಮ್ಮ ಉತ್ಸಾಹ ಮೊಬೈಲ್ ಸಂಸ್ಥೆಗಳ ಮಾರುಕಟ್ಟೆಯನ್ನು ವಿಸ್ತರಿಸಿತ್ತು; ತಂತ್ರಜ್ಞಾನದ ಬೆಳವಣಿಗೆಯನ್ನು ಇನ್ನಷ್ಟು ಪ್ರೋತ್ಸಾಹಿಸಿತ್ತು.

ಇದರಿಂದಾಗಿಯೇ ಏನೋ ಹೊಸ ಉತ್ಪನ್ನಗಳು ಒಂದರ ಹಿಂದೊಂದರಂತೆ ನಮ್ಮ ಮಾರುಕಟ್ಟೆಗೆ ಬರುತ್ತಲೇ ಇರುತ್ತವೆ.

ಬುಧವಾರ, ಆಗಸ್ಟ್ 26, 2015

ಕಂಪ್ಯೂಟರಿನಲ್ಲಿ ಕನ್ನಡ ಅಕ್ಷರ

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ  [ಹಿಂದಿನ ಲೇಖನ]

'ಸೇಡಿಯಾಪು' ತಂತ್ರಾಂಶ
ಕಂಪ್ಯೂಟರ್ ಪ್ರಪಂಚದಲ್ಲಿ ಕನ್ನಡ ಮೊದಲಿಗೆ ಬಳಕೆಯಾಗಿದ್ದು ಇಂಗ್ಲಿಷ್ ಲಿಪಿಯ ಮೂಲಕ. ಇಂಗ್ಲಿಷ್ ಅಕ್ಷರಗಳಲ್ಲಿ ಕನ್ನಡವನ್ನು ಮೂಡಿಸುವ ಈ ವಿಧಾನ 'ಕಂಗ್ಲಿಷ್' ಭಾಷೆ ಎಂದೇ ಜನಪ್ರಿಯ. ಕನ್ನಡದ 'ನಮಸ್ಕಾರ'ವನ್ನು ಇಂಗ್ಲಿಷಿನಲ್ಲಿ 'namaskaara' ಎಂದು ಲಿಪ್ಯಂತರ ಮಾಡಿ ಬರೆಯುವ ಈ ವಿಧಾನವನ್ನು ಇನ್ನೂ ಇಮೇಲ್-ಚಾಟ್-ಎಸ್ಸೆಮ್ಮೆಸ್ ಇತ್ಯಾದಿಗಳಲ್ಲಿ ಬಳಸಲಾಗುತ್ತದೆ.

ಕನ್ನಡದ ಪದಸಂಸ್ಕಾರಕ, ಅಂದರೆ ವರ್ಡ್ ಪ್ರಾಸೆಸರ್ ತಂತ್ರಾಂಶಗಳು ಬಂದಾಗ ಕಂಪ್ಯೂಟರ್ ಪ್ರಪಂಚದಲ್ಲಿ ಕನ್ನಡದ ಬಳಕೆಗೆ ಮೊದಲ ಪ್ರೋತ್ಸಾಹ ದೊರಕಿತು. ಈ ತಂತ್ರಾಂಶಗಳಿಂದಾಗಿ ಕಂಪ್ಯೂಟರಿನಲ್ಲಿ ಕನ್ನಡ ಅಕ್ಷರಗಳನ್ನು ಮೂಡಿಸುವುದು, ಕಂಪ್ಯೂಟರ್ ಸಹಾಯದಿಂದ ಅವನ್ನು ಮುದ್ರಿಸಿಕೊಳ್ಳುವುದು ಸಾಧ್ಯವಾಯಿತು.

ಶುಕ್ರವಾರ, ಆಗಸ್ಟ್ 21, 2015

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ

ಕಂಪ್ಯೂಟರ್ ಪ್ರಪಂಚದಲ್ಲಿ ಕನ್ನಡದ ಸಾಧ್ಯತೆಗಳು 

ಆಧುನಿಕ ಕಂಪ್ಯೂಟರುಗಳಿಗೆ, ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಹೆಚ್ಚೆಂದರೆ ಒಂದು ಶತಮಾನದಷ್ಟು ಇತಿಹಾಸವಿದೆ. ಜನಸಾಮಾನ್ಯರು ಮಾಹಿತಿ ತಂತ್ರಜ್ಞಾನದ ಸಂಪರ್ಕಕ್ಕೆ ಬಂದದ್ದಂತೂ ಈಚೆಗೆ, ಕೆಲ ದಶಕಗಳ ಹಿಂದೆಯಷ್ಟೆ. ಇಷ್ಟು ಕಡಿಮೆ ಅವಧಿಯಲ್ಲಿ, ಪ್ರಾಯಶಃ ಬೇರಾವ ಕ್ಷೇತ್ರಕ್ಕೂ ಸಾಧ್ಯವಾಗದಷ್ಟು ಪ್ರಮಾಣದಲ್ಲಿ, ನಮ್ಮ ಬದುಕಿನಲ್ಲಿ ಗಮನಾರ್ಹ ಬದಲಾವಣೆಗಳನ್ನು ತಂದದ್ದು ಮಾಹಿತಿ ತಂತ್ರಜ್ಞಾನದ ಹೆಗ್ಗಳಿಕೆಯೆಂದೇ ಹೇಳಬೇಕು.

ಮಾಹಿತಿ ತಂತ್ರಜ್ಞಾನ ಕ್ಷೇತ್ರ ಬೆಳೆಯುತ್ತಿದ್ದ ಸಮಯದಲ್ಲಿ ಅದರ ವ್ಯಾಪ್ತಿ ದೊಡ್ಡದೊಡ್ಡ ಸಂಸ್ಥೆಗಳಿಗೆ, ವಿಶ್ವವಿದ್ಯಾಲಯ-ಸಂಶೋಧನಾ ಕೇಂದ್ರಗಳಿಗಷ್ಟೆ ಸೀಮಿತವಾಗಿತ್ತು. ಅಂತಹ ಸಮಯದಲ್ಲಿ ಕಂಪ್ಯೂಟರುಗಳಿಂದ ಏನು ಕೆಲಸವಾಗಬಲ್ಲದು ಎನ್ನುವುದು ಮುಖ್ಯವಾಗಿತ್ತೇ ಹೊರತು ಆ ಕೆಲಸಕ್ಕೆ ಯಾವ ಭಾಷೆಯ ಮಾಧ್ಯಮ ಬಳಕೆಯಾಗಬೇಕು ಎನ್ನುವುದಕ್ಕೆ ಅಷ್ಟೇನೂ ಮಹತ್ವವಿರಲಿಲ್ಲ. ಆ ಸಮಯದಲ್ಲಿ ಕಂಪ್ಯೂಟರ್ ಪ್ರಪಂಚದ ಬಹುಪಾಲು ವ್ಯವಹಾರವೆಲ್ಲ ಇಂಗ್ಲಿಷಿನಲ್ಲೇ ನಡೆಯುತ್ತಿತ್ತು ಎನ್ನಬಹುದು.

ಆನಂತರದ ಸಮಯದಲ್ಲಿ ಮಾಹಿತಿ ತಂತ್ರಜ್ಞಾನದ ಹರವು ಇನ್ನಷ್ಟು ವಿಸ್ತರಿಸಿದಂತೆ ಅದು ಜನಸಾಮಾನ್ಯರ ಸಮೀಪಕ್ಕೂ ಬಂತು. ತಂತ್ರಜ್ಞಾನ ಸಾಮಾನ್ಯರಿಗೂ ಆಪ್ತವಾಗಬೇಕಾದರೆ ಅದು ಜನರ ಭಾಷೆಯನ್ನು ಕಲಿಯಬೇಕೇ ಹೊರತು ಜನರು ತಂತ್ರಜ್ಞಾನದ ಭಾಷೆ ಕಲಿಯುವಂತಾಗಬಾರದು ಎಂಬ ಅಭಿಪ್ರಾಯ ರೂಪುಗೊಂಡಿತು.

ಬುಧವಾರ, ಆಗಸ್ಟ್ 5, 2015

ಕಳೆದುಹೋದ ಕತ್ತಲು

ಮಾಲಿನ್ಯದ ಕಾಟ ಈಗ ಬರಿಯ ನೀರು-ಗಾಳಿಗಷ್ಟೇ ಸೀಮಿತವಾಗಿ ಉಳಿದಿಲ್ಲ. ಕೃತಕ ಬೆಳಕಿನ ಮಿತಿಮೀರಿದ ಬಳಕೆ ನಮ್ಮೆದುರಿಗೆ ಬೆಳಕಿನ ಮಾಲಿನ್ಯವೆಂಬ ಹೊಸದೊಂದು ಸಮಸ್ಯೆಯನ್ನು ತಂದಿಟ್ಟಿದೆ. ಈ ಕುರಿತು ಅತ್ಯಂತ ಮಾಹಿತಿಪೂರ್ಣವಾದ ಒಂದು ವೀಡಿಯೋ ಇಲ್ಲಿದೆ. ನೋಡಿ, ಹಂಚಿಕೊಳ್ಳಿ!


Video by International Dark-Sky Association
ಕನ್ನಡ ಅವತರಣಿಕೆ: ಜವಾಹರ್ ಲಾಲ್ ನೆಹರು ತಾರಾಲಯ

ಈ ವೀಡಿಯೋ ಅನ್ನು ಹಂಚಿಕೊಂಡಿದ್ದಕ್ಕಾಗಿ ಡಾ. ಬಿ. ಎಸ್. ಶೈಲಜಾ ಅವರಿಗೆ ವಿಶೇಷ ಕೃತಜ್ಞತೆಗಳು.

ಸೋಮವಾರ, ಆಗಸ್ಟ್ 3, 2015

ಸೆಲ್ಫಿ ಸಮಾಚಾರ



ಫೋಟೋ ಕ್ಲಿಕ್ಕಿಸುವ ಹವ್ಯಾಸವಿರುವವರಿಗೆ ಯಾವಾಗಲೂ ಒಂದು ಸಮಸ್ಯೆ: ಅವರು ಎಷ್ಟೇ ಒಳ್ಳೆಯ ಛಾಯಾಗ್ರಾಹಕರಾಗಿದ್ದರೂ ಅವರ ಫೋಟೋವನ್ನು ಬೇರೊಬ್ಬ ಛಾಯಾಗ್ರಾಹಕನೇ ಕ್ಲಿಕ್ಕಿಸಬೇಕು. ಅವರ ಕಲ್ಪನಾಶಕ್ತಿಯೇನಿದ್ದರೂ ಬೇರೆಯವರ ಚಿತ್ರಗಳನ್ನು ಕ್ಲಿಕ್ಕಿಸಲಷ್ಟೇ ಸೀಮಿತವಾಗಿರಬೇಕು, ಇಲ್ಲವೇ ಕ್ಯಾಮೆರಾವನ್ನು ತನ್ನತ್ತ ತಿರುಗಿಸಿಕೊಂಡು ಬೇಕಾದಂತೆ ಫೋಟೋ ಕ್ಲಿಕ್ಕಿಸಲು ತಿಣುಕಬೇಕು.

ಮೊಬೈಲ್ ಫೋನ್ ಕ್ಯಾಮೆರಾಗಳು ಜನಪ್ರಿಯವಾಗುವವರೆಗೆ ಈ ಸಮಸ್ಯೆ ಸಾಕಷ್ಟು ವ್ಯಾಪಕವಾಗಿಯೇ ಇತ್ತು. ಮೊಬೈಲಿನಲ್ಲೇ ಕ್ಯಾಮೆರಾ ಬಂದಮೇಲೆ ಸ್ವಂತಚಿತ್ರವನ್ನು ಕ್ಲಿಕ್ಕಿಸಿಕೊಳ್ಳಲು ದೊಡ್ಡ ಕ್ಯಾಮೆರಾವನ್ನು ತಿರುವುಮುರುವಾಗಿ ಹಿಡಿದುಕೊಂಡು ತಿಣುಕುವುದು ತಪ್ಪಿತು!
badge