ಬುಧವಾರ, ಮಾರ್ಚ್ 30, 2016

'ಕಾಡು ಕಲಿಸುವ ಪಾಠ'ಕ್ಕೆ ಅಕಾಡೆಮಿ ಬಹುಮಾನ

ಕರ್ನಾಟಕ ಸಾಹಿತ್ಯ ಅಕಾಡೆಮಿ ೨೦೧೩ನೇ ಸಾಲಿನ ಪುಸ್ತಕ ಬಹುಮಾನಗಳನ್ನು ಪ್ರಕಟಿಸಿದ್ದು ಶ್ರೀ ಟಿ. ಎಸ್. ಗೋಪಾಲ್ ಅವರ 'ಕಾಡು ಕಲಿಸುವ ಪಾಠ' ಕೃತಿಗೆ ವಿಜ್ಞಾನ ಸಾಹಿತ್ಯ ಪ್ರಕಾರದ ಬಹುಮಾನ ದೊರೆತಿದೆ. ಅವರಿಗೆ ಇಜ್ಞಾನ ಬಳಗದ ಹಾರ್ದಿಕ ಅಭಿನಂದನೆಗಳು.


'ಕಾಡು ಕಲಿಸುವ ಪಾಠ' - ಪ್ರಕೃತಿಶಿಬಿರಕ್ಕೊಂದು ಕೈಪಿಡಿ

ಬುಧವಾರ, ಮಾರ್ಚ್ 23, 2016

ಮೊಬೈಲ್ ಲೋಕದಲ್ಲೊಂದು ಹೊಸ ಅಲೆ

ಹಿಂದೆ ಕಂಪ್ಯೂಟರುಗಳಲ್ಲಿ ಮಾಡುತ್ತಿದ್ದಂತೆ ಮೊಬೈಲುಗಳನ್ನೂ ಅಪ್‌ಗ್ರೇಡ್ ಮಾಡುವಂತಿದ್ದರೆ ಎಷ್ಟು ಚೆನ್ನಾಗಿತ್ತು! ರ್‍ಯಾಮ್ ಸಾಲದೆಬಂದಾಗ ಒಂದೆರಡು ಜಿಬಿ ಹೆಚ್ಚುವರಿ ರ್‍ಯಾಮ್ ಸೇರಿಸುವಂತಿದ್ದರೆ, ಕ್ಯಾಮೆರಾ ಚೆನ್ನಾಗಿಲ್ಲ ಎನ್ನಿಸಿದಾಗ ಹೊಸ ಕ್ಯಾಮೆರಾ ಅಳವಡಿಸಿಕೊಳ್ಳುವಂತಿದ್ದರೆ?
ಟಿ. ಜಿ. ಶ್ರೀನಿಧಿ


ಅತ್ಯಂತ ದುಬಾರಿ ಫೋನಿನ ಬೆಲೆ ಎಷ್ಟಿರಬಹುದು ಎಂದು ಯಾರಾದರೂ ಕೇಳಿದರೆ ನಾವು ಅರವತ್ತು-ಎಪ್ಪತ್ತು ಸಾವಿರ ರೂಪಾಯಿಯ ಫೋನಿಗಳನ್ನು ನೆನಪಿಸಿಕೊಳ್ಳುತ್ತೇವೆ. ಕಡಿಮೆ ಬೆಲೆಗೆ ಆದಷ್ಟೂ ಹೆಚ್ಚಿನ ಸೌಲಭ್ಯಗಳನ್ನು ನೀಡುವ ಫೋನುಗಳು ಜನಪ್ರಿಯವಾಗುತ್ತಿರುವ ಈ ಕಾಲದಲ್ಲಿ ಅರವತ್ತು-ಎಪ್ಪತ್ತು ಸಾವಿರ ರೂಪಾಯಿ ಬೆಲೆಯ ಮೊಬೈಲು ದುಬಾರಿಯೆನಿಸುವುದರಲ್ಲಿ ಆಶ್ಚರ್ಯವೂ ಇಲ್ಲ ಬಿಡಿ.

ಆದರೆ ಈ ಫೋನುಗಳು "ಅತ್ಯಂತ ದುಬಾರಿ" ಎನ್ನುವ ಪಟ್ಟದ ಹತ್ತಿರಕ್ಕೂ ಬರುವುದಿಲ್ಲ ಎನ್ನುವುದು ತಮಾಷೆಯ ವಿಷಯ. ಏಕೆಂದರೆ ಮೊಬೈಲ್ ಲೋಕದ ಮಹಾರಾಜರ ಬೆಲೆ ಹಲವು ಲಕ್ಷಗಳಲ್ಲಿರುತ್ತದೆ - ಕೆಲವೊಮ್ಮೆ ಕೋಟಿಗಳಲ್ಲಿರುವುದೂ ಉಂಟು.

ಮೊಬೈಲಿನ ಬೆಲೆ ಲಕ್ಷಗಳಲ್ಲಿ, ಕೋಟಿಗಳಲ್ಲಿ ಇರಲು ಅದರಲ್ಲೇನು ಚಿನ್ನ-ಬೆಳ್ಳಿ-ವಜ್ರವೈಡೂರ್ಯಗಳಿರುತ್ತವೆಯೇ?

ಖಂಡಿತಾ ಇರುತ್ತವೆ.

ಸೋಮವಾರ, ಮಾರ್ಚ್ 7, 2016

ಇಮೇಲ್‌‌ಗೊಂದು ವಿಳಾಸ ಕೊಟ್ಟ ರೇ ಟಾಮ್ಲಿನ್‌ಸನ್

ಟಿ. ಜಿ. ಶ್ರೀನಿಧಿ
ಖ್ಯಾತ ಕಂಪ್ಯೂಟರ್ ತಜ್ಞ ರೇ ಟಾಮ್ಲಿನ್‌ಸನ್ ನಿಧನರಾಗಿದ್ದಾರೆ. ವಿವಿಧ ಮಾಧ್ಯಮಗಳಲ್ಲಿ ಕೇಳಿಬರುತ್ತಿರುವ ಅವರ ನಿಧನವಾರ್ತೆಯಲ್ಲಿ ಅವರನ್ನು "ಇಮೇಲ್ ಸೃಷ್ಟಿಕರ್ತ" ಎಂದು ಗುರುತಿಸುತ್ತಿರುವುದನ್ನೂ ನಾವು ನೋಡುತ್ತಿದ್ದೇವೆ.
ಇಮೇಲ್ ತಂತ್ರಜ್ಞಾನದ ವಿಕಾಸದಲ್ಲಿ ಬಹು ಮಹತ್ವದ ಪಾತ್ರ ವಹಿಸಿದ್ದವರು ಟಾಮ್ಲಿನ್‌ಸನ್. ಆದರೆ ಅವರು ಇಮೇಲ್ ಸೃಷ್ಟಿಕರ್ತರೇನೂ ಆಗಿರಲಿಲ್ಲ. ಹಾಗಾದರೆ ಇಮೇಲ್ ತಂತ್ರಜ್ಞಾನಕ್ಕೆ ಹೊಸ ತಿರುವು ಕೊಟ್ಟ ಅವರ ಸಾಧನೆ ಏನು? ಅಗಲಿದ ಹಿರಿಯರಿಗೆ 
ಈ ಲೇಖನದ ಮೂಲಕ  ನಮ್ಮ ಶ್ರದ್ಧಾಂಜಲಿ...
ಇಮೇಲ್ ಕಂಡುಹಿಡಿದದ್ದು ಯಾರು? ಕಂಪ್ಯೂಟರ್ ಪ್ರಪಂಚದಲ್ಲಿ ಕೇಳಸಿಗುವ ಅನೇಕ ಉತ್ತರವಿಲ್ಲದ ಪ್ರಶ್ನೆಗಳಲ್ಲಿ ಇದೂ ಒಂದು.

ಹೌದು, ಇಮೇಲ್ ತಂತ್ರಜ್ಞಾನವನ್ನು ಯಾರೋ ಒಬ್ಬ ವಿಜ್ಞಾನಿ ಯಾವುದೋ ಒಂದು ದಿನ ಇದ್ದಕ್ಕಿದ್ದಂತೆ ಕಂಡುಹಿಡಿಯಲಿಲ್ಲ; ಕಂಪ್ಯೂಟರ್ ಲೋಕದ ಅದೆಷ್ಟೋ ಆವಿಷ್ಕಾರಗಳಂತೆ ಸಾಕಷ್ಟು ದೀರ್ಘವಾದ ಅವಧಿಯಲ್ಲಿ ಅನೇಕ ತಂತ್ರಜ್ಞರ ಶ್ರಮದಿಂದ ವಿಕಾಸವಾದ ತಂತ್ರಜ್ಞಾನ ಅದು.

ಆದರೆ ಇಮೇಲ್ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದ ಅನೇಕ ಸಂಗತಿಗಳಿವೆ - ಇಮೇಲ್ ವಿಳಾಸಗಳಲ್ಲಿ @ ಚಿಹ್ನೆಯ ಬಳಕೆ ಪ್ರಾರಂಭವಾದದ್ದು ಇಂತಹ ಮೈಲಿಗಲ್ಲುಗಳಲ್ಲಿ ಅತ್ಯಂತ ಮಹತ್ವಪೂರ್ಣವಾದದ್ದು.

ಭಾನುವಾರ, ಮಾರ್ಚ್ 6, 2016

ಅಗ್ರಮಾನ್ಯ ಅಗ್ರಿಬ್ರಹ್ಮ ಡಾ. ಎಸ್. ಡಬ್ಲ್ಯು. ಮೆಣಸಿನಕಾಯಿ

ವಿಜ್ಞಾನಿಗಳ ಸಾಧನೆ ಕುರಿತು ಓದುವುದು ಕುತೂಹಲ ಹುಟ್ಟಿಸುವ ವಿಷಯ. ವಿಜ್ಞಾನಿಗಳ ಬದುಕಿನ ಬಗ್ಗೆ ತಿಳಿದುಕೊಳ್ಳುವುದು ಇನ್ನೂ ವಿಶಿಷ್ಟವಾದ ಅನುಭವ. ಅದರಲ್ಲೂ ವಿಜ್ಞಾನಿಯ - ಅವರ ಸಾಧನೆಯ ಬಗ್ಗೆ ಮೊದಲು ಕೇಳಿಯೇ ಇಲ್ಲದಿದ್ದರಂತೂ ಈ ಅನುಭವ ಇನ್ನೂ ವಿಶೇಷವಾಗಿರುತ್ತದೆ.

ಇಂತಹ ವಿಶೇಷ ಅನುಭವ ನೀಡುವ ಪುಸ್ತಕ 'ಸಂಗಮಾದರ್ಶ'. ಖ್ಯಾತ ಕೃಷಿವಿಜ್ಞಾನಿ ಡಾ. ಸಂಗಮನಾಥ ವಿರೂಪಾಕ್ಷ ಮೆಣಸಿನಕಾಯಿಯವರ ಜೀವನ ಚಿತ್ರಣ ನೀಡುವ ಈ ಕೃತಿಯನ್ನು ಮತ್ತೊಬ್ಬ ಕೃಷಿವಿಜ್ಞಾನಿ ಡಾ. ಶರಣಬಸವೇಶ್ವರ ಅಂಗಡಿಯವರು ಬರೆದಿದ್ದಾರೆ. ಅಸಾಧಾರಣ ಕೃಷಿವಿಜ್ಞಾನಿ ಹಾಗೂ ಶಿಕ್ಷಣತಜ್ಞರಾಗಿದ್ದ ಸಂಗಮನಾಥ ಮೆಣಸಿನಕಾಯಿಯವರು ಧಾರವಾಡ ಕೃಷಿ ಕಾಲೇಜು - ವಿಶ್ವವಿದ್ಯಾಲಯಗಳ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದರು.
badge