ಶುಕ್ರವಾರ, ಜೂನ್ 30, 2017

ವಿಜ್ಞಾನದ ಇಜ್ಞಾನ: ಎಲ್ಲವೂ ಹೊಟ್ಟೆಗಾಗಿ, ಕೊನೆಗೆ ಉಳಿವಿಗಾಗಿ

ಕೊಳ್ಳೇಗಾಲ ಶರ್ಮ

ದಾಸರು ಹೇಳಿದ್ದರಂತೆ. “ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ”. ಬಹುಶಃ ಇದು ನಮ್ಮ ನಿತ್ಯ ಜೀವನಕ್ಕೆ ಹಿಡಿದ ಕನ್ನಡಿಯಾಗಿರಬಹುದು. ಆದರೆ ಜೀವಿಗಳ ಬದುಕಿನಲ್ಲಿ ತುಂಡು ಬಟ್ಟೆ, ಹೊಟ್ಟೆಗೆ ಎಷ್ಟು ಮಹತ್ವವಿದೆಯೋ ಅಷ್ಟೇ ಮಹತ್ವ ಮರಿ ಮಾಡುವುದಕ್ಕೂ ಇದೆ ಎನ್ನುವುದು ವಿಜ್ಞಾನಿಗಳ ಅಂಬೋಣ. “ನಾವಿಬ್ಬರು, ನಮಗಿಬ್ಬರು” ಎನ್ನುವ ಧ್ಯೇಯ ವಾಕ್ಯವನ್ನೇ ಆದರ್ಶವಾಗಿಟ್ಟುಕೊಂಡಿರುವ ನಮಗೆ ಇದು ತುಸು ವಿಚಿತ್ರ ಎನ್ನಿಸಬಹುದು. ಆದರೆ ಉಂಡು, ತಿಂದು ಬದುಕುಳಿದರೆ ಸಾಲದು. ತಮ್ಮ ಸಂತತಿಯೂ ಬದುಕಿ ಉಳಿಯಬೇಕು ಎನ್ನುವುದೇ ‘ಜೀವ’ ಎನ್ನುವುದರ ಪರಮೋಚ್ಚ ಧ್ಯೇಯ ಎನ್ನುತ್ತದೆ ಡಾರ್ವಿನ್ನನ ವಿಕಾಸವಾದ. ಜೀವಿಗಳ ಎಲ್ಲ ಬಗೆಯ ಹೊಂದಾಣಿಕೆಗಳು ಹಾಗೂ ಹೋರಾಟಗಳೂ ತಾವೆಷ್ಟು ಸಂತಾನವನ್ನು ಉಳಿಸಿ ಹೋಗಬಲ್ಲೆವು ಎನ್ನುವುದಕ್ಕಾಗಿಯೇ ಆಗಿರುವುದಂತೆ.

ಬುಧವಾರ, ಜೂನ್ 28, 2017

ನಮ್ಮದೇ ನೇರಪ್ರಸಾರ

ಟಿ. ಜಿ. ಶ್ರೀನಿಧಿ

ಕ್ರಿಕೆಟ್ ಮ್ಯಾಚು, ಸಂಸತ್ ಕಲಾಪಗಳಿಂದ ಪ್ರಾರಂಭಿಸಿ ಸೆಲೆಬ್ರಿಟಿ ಮದುವೆಗಳವರೆಗೆ ಅದೆಷ್ಟೋ ಕಾರ್ಯಕ್ರಮಗಳ ನೇರ ಪ್ರಸಾರ ಟೀವಿ ವಾಹಿನಿಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತದೆ. 'ಲೈವ್' ಎಂದು ಗುರುತಿಸುವುದು ಇಂತಹ ಪ್ರಸಾರವನ್ನೇ.

ಟೀವಿ ಹಾಗೂ ರೇಡಿಯೋ ಮಾಧ್ಯಮಗಳಲ್ಲಿ ಜನಪ್ರಿಯವಾಗಿರುವ ಈ ಪರಿಕಲ್ಪನೆ ಅಂತರಜಾಲ ಲೋಕದಲ್ಲೂ ಅಸ್ತಿತ್ವದಲ್ಲಿದೆ. ಇಲ್ಲಿಯೂ ಇದರ ಹೆಸರು ಲೈವ್ ಎಂದೇ. ಜಾಲತಾಣಗಳ ಮೂಲಕ ಪಠ್ಯ, ಚಿತ್ರಗಳನ್ನೆಲ್ಲ ಹಂಚಿಕೊಂಡ ಹಾಗೆ ವಿಡಿಯೋ ದೃಶ್ಯಾವಳಿಯ ನೇರಪ್ರಸಾರವನ್ನೂ ಹಂಚಿಕೊಳ್ಳಲು ನೆರವಾಗುವುದು ಈ ಪರಿಕಲ್ಪನೆಯ ವೈಶಿಷ್ಟ್ಯ.

ಸೋಮವಾರ, ಜೂನ್ 26, 2017

ನಮ್ಮದೂ ಒಂದು ಮೊಬೈಲ್ ಆಪ್

ಟಿ. ಜಿ. ಶ್ರೀನಿಧಿ

ಸ್ಮಾರ್ಟ್‌ಫೋನುಗಳು ಸರ್ವಾಂತರ್ಯಾಮಿಗಳಾಗಿರುವ ಈ ಕಾಲದಲ್ಲಿ ಎಲ್ಲ ಕೆಲಸಕ್ಕೂ ಒಂದೊಂದು ಆಪ್ ಬಳಸುವುದು ನಮಗೆ ಅಭ್ಯಾಸವಾಗಿಹೋಗಿದೆ. ಬೇರೆಯವರು ರೂಪಿಸಿದ ಇಷ್ಟೆಲ್ಲ ವೈವಿಧ್ಯಮಯ ಆಪ್‌ಗಳನ್ನು ಬಳಸುವಾಗ ನಾವೂ ಒಂದು ಆಪ್ ರೂಪಿಸುವಂತಿದ್ದರೆ ಎನ್ನುವ ಯೋಚನೆ ಕೆಲವರಿಗಾದರೂ ಬಾರದಿರದು.

ನಮಗೆ ಪ್ರೋಗ್ರಾಮಿಂಗ್ ಗೊತ್ತಿಲ್ಲ, ಹಾಗಾಗಿ ಈ ಯೋಚನೆ ಕಾರ್ಯಗತವಾಗುವುದಿಲ್ಲ ಎಂದು ನಿರಾಶರಾಗುವ ಅಗತ್ಯವೇನೂ ಇಲ್ಲ. ಏಕೆಂದರೆ ಪ್ರೋಗ್ರಾಮಿಂಗ್ ಬಾರದವರೂ ಆಪ್ ರೂಪಿಸಿಕೊಳ್ಳಲು ನೆರವಾಗುವ ಸೌಲಭ್ಯಗಳು ಜಾಲಲೋಕದಲ್ಲಿವೆ.

ಗುರುವಾರ, ಜೂನ್ 22, 2017

ಏನಿದು ಓಟಿಪಿ?

ಟಿ. ಜಿ. ಶ್ರೀನಿಧಿ

ಕಾರ್ಡುಗಳನ್ನು, ನೆಟ್‌ಬ್ಯಾಂಕಿಂಗ್ ಸೌಲಭ್ಯವನ್ನು ಬಳಸಿ ಹಣಪಾವತಿಸುವುದು ನಮ್ಮಲ್ಲಿ ಅನೇಕರಿಗೆ ಚೆನ್ನಾಗಿಯೇ ಅಭ್ಯಾಸವಾಗಿದೆ. ಹೀಗೆ ಪಾವತಿಸುವಾಗ ಹಣ ತೆಗೆಯಬೇಕಾದ್ದು ಯಾವ ಖಾತೆಯಿಂದ ಎಂದು ಬ್ಯಾಂಕಿಗೆ ಗೊತ್ತಾಗಬೇಕಲ್ಲ, ನಾವು ಖಾತೆಯ ವಿವರಗಳನ್ನು (ಲಾಗಿನ್, ಅಕೌಂಟ್ ಸಂಖ್ಯೆ ಇತ್ಯಾದಿ) ದಾಖಲಿಸುವುದು ಇದಕ್ಕಾಗಿಯೇ. ಅದನ್ನು ದಾಖಲಿಸುತ್ತಿರುವವರು ನಾವೇ ಎಂದೂ ಗೊತ್ತಾಗಬೇಡವೇ, ಅದಕ್ಕಾಗಿ ಪಾಸ್‌ವರ್ಡನ್ನೂ ಎಂಟರ್ ಮಾಡುತ್ತೇವೆ.

ಆದರೆ ನಮ್ಮ ಪಾಸ್‌ವರ್ಡ್ ನಮಗೆ ಮಾತ್ರ ಗೊತ್ತು ಎಂದು ಏನು ಗ್ಯಾರಂಟಿ? ಅದನ್ನು ಬೇರೆ ಯಾರೋ ಕದ್ದು ತಿಳಿದುಕೊಂಡುಬಿಟ್ಟಿರಬಹುದಲ್ಲ!

ಸೋಮವಾರ, ಜೂನ್ 19, 2017

ಬಗ್ ಮತ್ತು ಡೀಬಗ್

ಟಿ. ಜಿ. ಶ್ರೀನಿಧಿ


ಕಂಪ್ಯೂಟರಿಗಾಗಲೀ ಸ್ಮಾರ್ಟ್‌ಫೋನ್‌ಗಾಗಲಿ ಸ್ವಂತ ಬುದ್ಧಿ ಇರುವುದಿಲ್ಲ. ನಿರ್ದಿಷ್ಟ ಸಂದರ್ಭಗಳಲ್ಲಿ ಹೇಗೆ ಪ್ರತಿಕ್ರಿಯೆ ನೀಡಬೇಕೆಂದು ಅದಕ್ಕೆ ನಿರ್ದೇಶನ ನೀಡಲಾಗಿರುತ್ತದೆಯೋ ಅದರ ವರ್ತನೆ ಅದೇ ರೀತಿಯಾಗಿರುತ್ತದೆ. ಹೀಗೆ ನಿರ್ದೇಶನ ನೀಡುವುದು ಸಾಫ್ಟ್‌ವೇರ್, ಅಂದರೆ ತಂತ್ರಾಂಶದ ಕೆಲಸ.

ಗುರುವಾರ, ಜೂನ್ 15, 2017

RAMಗೂ ROMಗೂ ಏನು ವ್ಯತ್ಯಾಸ?

ಟಿ. ಜಿ. ಶ್ರೀನಿಧಿ


ಕಂಪ್ಯೂಟರ್ ಅಥವಾ ಮೊಬೈಲಿನಲ್ಲಿ ಕೆಲಸಮಾಡುವಾಗ ನಾವು ಒಂದಲ್ಲ ಒಂದು ರೀತಿಯ ಮಾಹಿತಿಯೊಡನೆ ವ್ಯವಹರಿಸುತ್ತಿರುತ್ತೇವೆ. ಕಾಲೇಜಿನ ಪ್ರಾಜೆಕ್ಟ್ ರಿಪೋರ್ಟು, ಕಚೇರಿಯ ಇಮೇಲ್, ಫೋಟೋಶಾಪಿನ ಚಿತ್ರ - ಇವೆಲ್ಲ ಮಾಹಿತಿಯೇ.

ಈ ಮಾಹಿತಿ ಅಂತಿಮವಾಗಿ ಹಾರ್ಡ್ ಡಿಸ್ಕ್‌ನಲ್ಲೋ, ಪೆನ್‌ಡ್ರೈವ್‌ನಲ್ಲೋ, ಮೆಮೊರಿ ಕಾರ್ಡಿನಲ್ಲೋ ಶೇಖರವಾಗುತ್ತದೆ ಸರಿ, ಆದರೆ ನಾವು ಕೆಲಸಮಾಡುತ್ತಿರುವಷ್ಟು ಹೊತ್ತು - ಕಡತವನ್ನು ಉಳಿಸುವ ಮೊದಲು - ಇದೆಲ್ಲ ಎಲ್ಲಿರುತ್ತದೆ?

ಸೋಮವಾರ, ಜೂನ್ 12, 2017

ಟ್ರೋಜನ್ ಹಾರ್ಸ್ ಎಂಬ ಮೋಸದ ಕತೆ

ಟಿ. ಜಿ. ಶ್ರೀನಿಧಿ

ಟ್ರೋಜನ್ ಯುದ್ಧದಲ್ಲಿ ಬಸವಳಿದಿದ್ದ ಗ್ರೀಕರು ದೊಡ್ಡದೊಂದು ಮರದ ಕುದುರೆಯ ಸಹಾಯದಿಂದ ಟ್ರಾಯ್ ನಗರವನ್ನು ಗೆದ್ದರು ಎನ್ನುವುದು ಇತಿಹಾಸ. ನೋಡಲು ನಿರುಪದ್ರವಿಯಾಗಿ ಕಾಣುತ್ತಿದ್ದ ಆ ಕುದುರೆಯೊಳಗೆ ('ಟ್ರೋಜನ್ ಹಾರ್ಸ್') ಸೈನಿಕರು ಅವಿತುಕೊಂಡು ಟ್ರಾಯ್ ನಗರದವರನ್ನು ಮೋಸಗೊಳಿಸಿದ್ದರಂತೆ.

ಇದೇ ರೀತಿ ನಿರಪಾಯಕಾರಿ ತಂತ್ರಾಂಶದ ಸೋಗಿನಲ್ಲಿ ಬರುವ ಕುತಂತ್ರಾಂಶಗಳು ಕಂಪ್ಯೂಟರ್ ಪ್ರಪಂಚದಲ್ಲಿವೆ. ಹೀಗಾಗಿಯೇ ಅವನ್ನು ಟ್ರೋಜನ್ ಹಾರ್ಸ್ ಅಥವಾ 'ಟ್ರೋಜನ್'ಗಳೆಂದು ಕರೆಯುತ್ತಾರೆ. ದತ್ತಾಂಶವನ್ನು ಅಥವಾ ಕಡತಗಳನ್ನು ಹಾಳುಮಾಡುವುದು, ಇತರ ಕುತಂತ್ರಾಂಶಗಳನ್ನು ಇನ್‌ಸ್ಟಾಲ್ ಮಾಡುವುದು, ಬಳಕೆದಾರರ ಖಾಸಗಿ ಮಾಹಿತಿಯನ್ನು ಕದಿಯುವುದು - ಹೀಗೆ ಟ್ರೋಜನ್‌ಗಳಿಗೆ ಅನೇಕ ಉದ್ದೇಶಗಳಿರುವುದು ಸಾಧ್ಯ.

ಗುರುವಾರ, ಜೂನ್ 8, 2017

ರಾಧಾಕೃಷ್ಣ ಭಡ್ತಿ ಹೇಳುತ್ತಾರೆ... "ಈ ಪತ್ರಿಕೆ ಅಪ್ಪಟ ಓದುಗರಿಗಾಗಿ. ಓದಿ ಎಚ್ಚರಗೊಳ್ಳುವವರಿಗಾಗಿ."

ವಿಶ್ವ ಪರಿಸರ ದಿನದ ಸುತ್ತಮುತ್ತಲಲ್ಲೇ ಕನ್ನಡಕ್ಕೆ ಹೊಸತೊಂದು ಪರಿಸರ - ವಿಜ್ಞಾನ ಪತ್ರಿಕೆ ದೊರಕುತ್ತಿದೆ. ಜಲ ಪತ್ರಕರ್ತ ರಾಧಾಕೃಷ್ಣ ಭಡ್ತಿಯವರ ನೇತೃತ್ವದಲ್ಲಿ ಭೂಮಿಗೀತ ಮೀಡಿಯಾ ಸಂಸ್ಥೆ ಹೊರತರುತ್ತಿರುವ ಈ ಪತ್ರಿಕೆಯ ಹೆಸರೇ 'ಹಸಿರುವಾಸಿ'. ಸಮಾಜಜಾಲಗಳಲ್ಲಿ ಸಾಕಷ್ಟು ಕುತೂಹಲಮೂಡಿಸಿರುವ 'ಹಸಿರುವಾಸಿ' ಇದೇ ಜೂನ್ ೧೦ರ ಶನಿವಾರ ಸಂಜೆ ಬೆಂಗಳೂರಿನಲ್ಲಿ ಲೋಕಾರ್ಪಣೆಯಾಗುತ್ತಿದೆ. ಲೋಕಾರ್ಪಣೆಯ  ಹೊಸ್ತಿಲಲ್ಲಿರುವ ಹೊಸ ಪತ್ರಿಕೆಯ ಸಂಪಾದಕರೊಡನೆ ಹೀಗೊಂದು ಲೋಕಾಭಿರಾಮ...


ಏನಿದು ಭೂಮಿಗೀತ?
ಇದೊಂದು ಮಾಧ್ಯಮ ಸಂಸ್ಥೆ. ಈವರೆಗೆ ವೈಯಕ್ತಿಕ ನೆಲೆಯಲ್ಲಿ ೧೭ ವರ್ಷಗಳಿಂದ ಮಾಡಿಕೊಂಡು ಬಂದಿದ್ದ ನೀರಿನ ಕೆಲಸವನ್ನು ಭೂಮಿಗೀತದ ಮೂಲಕ ಸಾಂಸ್ಥಿಕ ಸ್ವರೂಪದಲ್ಲಿ ರಾಜ್ಯಾದ್ಯಂತ ಕೈಗೊಳ್ಳಲು ನಿರ್ಧರಿಸಿದ್ದೇನೆ. ಜತೆಗೆ ಕೃಷಿ, ಪರಿಸರ, ಗ್ರಾಮೀಣ ಬದುಕು ಮತ್ತು ವಿಜ್ಞಾನದ ಕುರಿತಾದ ಕನ್ನಡದಲ್ಲೊಂದು ವಿನೂತನ ಪಾಕ್ಷಿಕ 'ಹಸಿರುವಾಸಿ' ಜೂನ್ ೧೦ರಂದು ಬಿಡುಗಡೆಗೊಳ್ಳಲಿದೆ.

ಸೋಮವಾರ, ಜೂನ್ 5, 2017

ವಿಶ್ವ ಪರಿಸರ ದಿನ ವಿಶೇಷ: ಈ ಜಗವೆಲ್ಲ ನನ್ನದೇ..?

ಪರಿಸರ - ವನ್ಯಜೀವನ ಕುರಿತು ಹಲವು ಬರಹಗಳನ್ನು - ಪುಸ್ತಕಗಳನ್ನು ರಚಿಸಿರುವ, 'ಕಾಡು ಕಲಿಸುವ ಪಾಠ' ಕೃತಿಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ (೨೦೧೩) ಪಡೆದಿರುವ ಲೇಖಕ ಶ್ರೀ ಟಿ. ಎಸ್. ಗೋಪಾಲ್ ಅವರ ಚಿಂತನ ಬರಹಗಳ ಸಂಕಲನ 'ಕೀರುತಿಯ ಬೆನ್ನು ಹತ್ತಿ...' ಸದ್ಯದಲ್ಲೇ ಪ್ರಕಟವಾಗಲಿದೆ. ಈ ಸಂಕಲನದಿಂದ ಆಯ್ದ ಒಂದು ಬರಹವನ್ನು ವಿಶ್ವ ಪರಿಸರ ದಿನದ ಅಂಗವಾಗಿ ಇಜ್ಞಾನ ಡಾಟ್ ಕಾಮ್ ಪ್ರಕಟಿಸುತ್ತಿದೆ.   

ಟಿ. ಎಸ್. ಗೋಪಾಲ್


ಮನುಷ್ಯ ಈ ಪ್ರಪಂಚದಲ್ಲಿ ಅವತರಿಸಿ ಕೆಲವು ಸಾವಿರ ವರುಷಗಳು ಕಳೆದಿರಬಹುದೇನೋ. ಆದರೆ, ಅಮೀಬಾದಂಥ ಏಕಾಣುಜೀವಿಯಿಂದ ಹಿಡಿದು ಆನೆಯಂಥ ದೊಡ್ಡಪ್ರಾಣಿಯವರೆಗೆ ಅಸಂಖ್ಯಜೀವಿಗಳು ಅದೆಷ್ಟೋ ಸಾವಿರ, ಅಷ್ಟೇ ಏಕೆ, ಲಕ್ಷಾಂತರ ವರುಷಗಳಿಂದಲೂ ಈ ಭೂಮಿಯ ಮೇಲೆ ಜೀವಿಸಿಕೊಂಡು ಬಂದಿವೆ. ಆದರೂ ಇವೆಲ್ಲಕ್ಕಿಂತ ಈಚಿನವನಾದ ಮನುಷ್ಯನೇ ಎಲ್ಲ ಪ್ರಾಣಿಗಳಲ್ಲಿ ಅತಿ ಬುದ್ಧಿವಂತ ಎಂದು ತಾನೇ ಹೇಳಿಕೊಂಡ. ಇವನ ಈ ಅತಿಬುದ್ಧಿವಂತಿಕೆಯೇ ಉಳಿದೆಲ್ಲ ಪ್ರಾಣಿಗಳ ಅಸ್ತಿತ್ವಕ್ಕೆ ಮಾರಕವಾಗಿಬಿಟ್ಟಿದೆ ಎನ್ನುವುದೇ ವಿಪರ್ಯಾಸ.

ಗುರುವಾರ, ಜೂನ್ 1, 2017

ಒಂದಷ್ಟು ಮಾತು, 'ಫಾಂಟ್' ಕುರಿತು...

ಟಿ. ಜಿ. ಶ್ರೀನಿಧಿ

ಮಾಹಿತಿಯ ಮಹಾಪೂರವೇ ನಮ್ಮನ್ನು ಆವರಿಸಿರುವುದು ಹೊಸ ಸಂಗತಿಯೇನಲ್ಲ. ಅದರಲ್ಲಿ ಪಠ್ಯರೂಪದ ಮಾಹಿತಿಯ ಪಾಲು ಬಹಳ ದೊಡ್ಡದು. ನೀವು ಓದುತ್ತಿರುವ ಪತ್ರಿಕೆ, ಕಂಪ್ಯೂಟರಿನಲ್ಲಿ ತೆರೆದಿರುವ ವೆಬ್‌ಸೈಟು, ಮೊಬೈಲ್ ಪರದೆಯಲ್ಲಿ ಕಾಣಿಸಿಕೊಂಡಿರುವ ಹೊಸ ವಾಟ್ಸ್‌ಆಪ್ ಸಂದೇಶ - ಒಂದಲ್ಲ ಒಂದು ಬಗೆಯಲ್ಲಿ ಪಠ್ಯರೂಪದ ಮಾಹಿತಿ ನಮ್ಮೆದುರು ಕಾಣಿಸಿಕೊಳ್ಳುತ್ತಲೇ ಇರುತ್ತದೆ.

ಈ ಮಾಹಿತಿಯೆಲ್ಲ ನಮಗೆ ತಲುಪಬೇಕಾದರೆ ಅದನ್ನು ಯಾರೋ ಒಬ್ಬರು ಕಂಪ್ಯೂಟರಿನಲ್ಲಿ ಅಥವಾ ಮೊಬೈಲಿನಲ್ಲಿ ಟೈಪಿಸಬೇಕು ತಾನೆ, ಹಾಗೆ ಮಾಡಲು ಅಕ್ಷರಶೈಲಿಗಳು ಬೇಕು.
badge