ಟಿ. ಜಿ. ಶ್ರೀನಿಧಿ
ಈಚೆಗೆ ಅನೇಕ ಜಾಹೀರಾತುಗಳಲ್ಲಿ, ಜಾಲತಾಣಗಳಲ್ಲಿ ಚಿತ್ರವಿಚಿತ್ರ ವಿನ್ಯಾಸದ ಕಪ್ಪನೆಯ ಚೌಕಗಳು ಕಾಣಿಸಿಕೊಳ್ಳುತ್ತಿರುವುದನ್ನು ನೀವು ಗಮನಿಸಿರಬಹುದು; ಇಂತಹ ಚೌಕಗಳ ಪಕ್ಕದಲ್ಲೇ ಪ್ರಕಟವಾಗುವ "ಈ ಕ್ಯೂಆರ್ ಸಂಕೇತವನ್ನು ಸ್ಕ್ಯಾನ್ ಮಾಡಿ" ಎಂಬ ಸಂದೇಶವನ್ನೂ ನೋಡಿರಬಹುದು. ಇದೆಂತಹ ಸಂಕೇತ? ಇದನ್ನು ಸ್ಕ್ಯಾನ್ ಮಾಡುವುದು ಹೇಗೆ? ಸ್ಕ್ಯಾನ್ ಮಾಡಿದಾಗ ಏನಾಗುತ್ತದೆ? - ಇಂತಹ ಅನೇಕ ಪ್ರಶ್ನೆಗಳೂ ನಿಮ್ಮ ಮನಸ್ಸಿಗೆ ಬಂದಿರಬಹುದು.
ಹೌದು, ಈ ಕ್ಯೂಆರ್ ಕೋಡ್ ಅಂದರೇನು? ನೋಡೋಣ ಬನ್ನಿ.
ಇದು ಕ್ಯೂಆರ್ ಕೋಡ್
ಕ್ಯೂಆರ್ ಕೋಡ್ ಎನ್ನುವುದು ಕ್ವಿಕ್ ರೆಸ್ಪಾನ್ಸ್ ಕೋಡ್ ಎಂಬ ಹೆಸರಿನ ಹ್ರಸ್ವರೂಪ. ಅಂಗಡಿಯಲ್ಲಿರುವ ಪದಾರ್ಥಗಳ ಮೇಲೆ ನಾವೆಲ್ಲ ಬಾರ್‌ಕೋಡ್‌ಗಳನ್ನು ನೋಡುತ್ತೇವಲ್ಲ, ಕ್ಯೂಆರ್ ಕೋಡ್ ಅದರದೇ ಬೇರೆಯದೊಂದು ರೂಪ. ಒಂದೇ ಆಯಾಮದ ಸಾಮಾನ್ಯ ಬಾರ್‌ಕೋಡ್‌ಗಳಿಗಿಂತ ಕೊಂಚ ಭಿನ್ನವಾಗಿರುವ ಇವು ಎರಡು ಆಯಾಮದ ಸಂಕೇತಗಳು ಎನ್ನುವುದೇ ವಿಶೇಷ. ಸಾಮಾನ್ಯ ಬಾರ್‌ಕೋಡ್‌ಗಳಿಗಿಂತ ಹೆಚ್ಚಿನ ಪ್ರಮಾಣದ ಮಾಹಿತಿ ಸಂಗ್ರಹಿಸುವ ಸಾಮರ್ಥ್ಯ ಹೊಂದಿರುವುದು ಕ್ಯೂಆರ್ ಕೋಡ್‌ಗಳ ಮತ್ತೊಂದು ವೈಶಿಷ್ಟ್ಯ.
ಕ್ಯೂಆರ್ ಕೋಡ್‌ಗಳಲ್ಲಿರುವ ಪುಟ್ಟಪುಟ್ಟ ಚೌಕಗಳು ನಿರ್ದಿಷ್ಟ ಮಾಹಿತಿಯನ್ನು ಪ್ರತಿನಿಧಿಸಬಲ್ಲವು. ಅಂಗಡಿಯಲ್ಲಿಟ್ಟ ವಸ್ತುಗಳ ವಿವರಣಾ ಚೀಟಿಯಿಂದ ಪ್ರಾರಂಭಿಸಿ ಜಾಹೀರಾತುಗಳವರೆಗೆ ಕ್ಯೂಆರ್ ಕೋಡ್‌ಗಳನ್ನು ಅನೇಕ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಅನೇಕ ಸಂದರ್ಭಗಳಲ್ಲಿ ಇವು ಜಾಲತಾಣಗಳ ವಿಳಾಸವನ್ನು ಸೂಚಿಸಲು ಬಳಕೆಯಾಗುತ್ತವೆ.
ಇತಿಹಾಸ
ಕ್ಯೂಆರ್ ಕೋಡ್‌ಗಳು ಮೊದಲ ಬಾರಿ ಬಳಕೆಯಾದದ್ದು ಆಟೊಮೊಬೈಲ್ ಕ್ಷೇತ್ರದಲ್ಲಿ. ಕಾರ್ಖಾನೆಯೊಳಗೆ ಬಿಡಿಭಾಗಗಳ ಸಾಗಾಣಿಕೆಯ ಮೇಲೆ ನಿಗಾ ಇಡಲು ಟೊಯೋಟಾದ ಅಂಗಸಂಸ್ಥೆಯಾದ ಡೆನ್ಸೋ ವೇವ್ ೧೯೯೪ರಲ್ಲಿ ಈ ಸಂಕೇತವನ್ನು ಸೃಷ್ಟಿಸಿತು. ಸ್ಕ್ಯಾನ್ ಮಾಡಿದಾಗ ಹೆಚ್ಚಿನ ಪ್ರಮಾಣದ ಮಾಹಿತಿಯನ್ನು ಆದಷ್ಟೂ ಕಡಿಮೆ ಸಮಯದಲ್ಲಿ ಓದುವುದು ಸಾಧ್ಯವಾಗಬೇಕು ಎನ್ನುವುದು ಈ ಸಂಕೇತದ ಸೃಷ್ಟಿಯ ಹಿಂದಿದ್ದ ಉದ್ದೇಶ. ಬಹಳ ಬೇಗ ಜನಪ್ರಿಯವಾದ ಕ್ಯೂಆರ್ ಕೋಡ್ ಆಟೊಮೊಬೈಲ್ ಮಾತ್ರವಲ್ಲದೆ ಅನೇಕ ಇತರ ಕ್ಷೇತ್ರಗಳಲ್ಲೂ ಬಳಕೆಯಾಗುತ್ತಿದೆ.
ಓದುವ ರೀತಿ
ಕ್ಯೂಆರ್ ಕೋಡ್‌ಗಳಲ್ಲಿ ಅಡಕವಾಗಿರುವ ಮಾಹಿತಿಯನ್ನು ಓದಲು ಮೊದಲಿಗೆ ಕ್ಯೂಆರ್ ಕೋಡ್ ರೀಡರ್ ಉಪಕರಣಗಳನ್ನು ಬಳಸಲಾಗುತ್ತಿತ್ತು. ಆದರೆ ಈಗ ಬಹುತೇಕ ಎಲ್ಲ ಆಧುನಿಕ ಮೊಬೈಲ್ ದೂರವಾಣಿಗಳಲ್ಲೂ ಈ ಸಂಕೇತಗಳನ್ನು ಗುರುತಿಸುವ ತಂತ್ರಾಂಶ ಲಭ್ಯವಿರುವುದರಿಂದ ಪ್ರತ್ಯೇಕ ಉಪಕರಣದ ಆವಶ್ಯಕತೆ ಇಲ್ಲ.
ಮೊಬೈಲ್ ದೂರವಾಣಿ ಬಳಸಿ ಕ್ಯೂಆರ್ ಸಂಕೇತಗಳನ್ನು ಸ್ಕ್ಯಾನ್ ಮಾಡುವುದು ಬಹಳ ಸುಲಭ. ಮೊದಲಿಗೆ ನಿಮ್ಮ ದೂರವಾಣಿ ಉಪಕರಣದಲ್ಲಿ ಕ್ಯೂಆರ್ ಕೋಡ್ ರೀಡರ್ ತಂತ್ರಾಂಶವನ್ನು ಅಳವಡಿಸಿಕೊಳ್ಳಿ (ನಿಮ್ಮ ದೂರವಾಣಿಗೆ ಲಭ್ಯವಿರುವ ತಂತ್ರಾಂಶದ ಬಗೆಗೆ ತಿಳಿದುಕೊಳ್ಳಲು ಯಾವುದೇ ಸರ್ಚ್ ಇಂಜನ್ ಮೊರೆಹೋಗಬಹುದು). ಆ ತಂತ್ರಾಂಶವನ್ನು ಚಾಲೂ ಮಾಡಿ ನಿಮ್ಮ ದೂರವಾಣಿಯನ್ನು ಯಾವುದೇ ಕ್ಯೂಆರ್ ಕೋಡ್‌ನತ್ತ ತಿರುಗಿಸಿದರೆ ಸಾಕು, ಆ ತಂತ್ರಾಂಶ ಕ್ಯೂಆರ್ ಸಂಕೇತವನ್ನು ಅರ್ಥೈಸಿಕೊಂಡು ಅದರಲ್ಲಿ ಸೂಚಿಸಲಾಗಿರುವ ಕೆಲಸ ಮಾಡುತ್ತದೆ.
ಡೆನ್ಸೋ ವೇವ್ ಸಂಸ್ಥೆ ಕ್ಯೂಆರ್ ಸಂಕೇತಗಳ ಪೇಟೆಂಟ್ ಹಕ್ಕುಗಳನ್ನು ಹೊಂದಿದೆಯಾದರೂ ಅದು ಅವನ್ನು ಮುಕ್ತ ಬಳಕೆಗೆ ತೆರೆದಿಟ್ಟಿದೆ. ಹೀಗಾಗಿ ನಿಮ್ಮದೇ ಆದ ಕ್ಯೂಆರ್ ಸಂಕೇತಗಳ ರೂಪಿಸಿಕೊಳ್ಳುವುದು ಸುಲಭ ಮಾತ್ರವೇ ಅಲ್ಲ, ಉಚಿತವೂ ಹೌದು. ಕ್ಷಣಾರ್ಧದಲ್ಲೇ ಕ್ಯೂಆರ್ ಸಂಕೇತಗಳನ್ನು ರೂಪಿಸಿಕೊಡುವ ಅನೇಕ ಜಾಲತಾಣಗಳನ್ನು ಯಾವುದೇ ಸರ್ಚ್ ಇಂಜನ್ ನಿಮಗೆ ಹುಡುಕಿಕೊಡಬಲ್ಲದು.
ಏನೇನೆಲ್ಲ ಸಾಧ್ಯ
ಕಾರಿನ ಜಾಹೀರಾತಿನ ಜೊತೆಗಿರುವ ಕ್ಯೂಆರ್ ಕೋಡ್ ನಿಮ್ಮನ್ನು ಯೂಟ್ಯೂಬ್‌ನಲ್ಲಿರುವ ಆ ಕಾರಿನ ವೀಡಿಯೋದತ್ತ ಕೊಂಡೊಯ್ಯಬಹುದು; ಯಾವುದೋ ಜಾಲತಾಣದಲ್ಲಿರುವ ಸಂಕೇತ ಸ್ಕ್ಯಾನ್ ಮಾಡಿದರೆ ನಿಮ್ಮ ಮೊಬೈಲಿನಲ್ಲಿ ಆ ತಾಣದ ಮೊಬೈಲ್ ಸ್ನೇಹಿ ಆವೃತ್ತಿ ತೆರೆದುಕೊಳ್ಳಬಹುದು; ಇನ್ನಾವುದೋ ಸಂಕೇತ ನಿಮ್ಮ ಚಾಟಿಂಗ್ ಗೆಳೆಯರ ಪಟ್ಟಿಗೆ ಹೊಸ ಸ್ನೇಹಿತರನ್ನು ಸೇರಿಸಿಕೊಳ್ಳಲು ನೆರವಾಗಬಹುದು; ಹೊಸದಾಗಿ ಪರಿಚಯವಾದವರ ವಿಸಿಟಿಂಗ್ ಕಾರ್ಡ್ ಕೇಳಿದರೆ ಅವರು "ವಿಸಿಟಿಂಗ್ ಕಾರ್ಡ್ ಯಾಕೆ, ನನ್ನ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿಕೊಳ್ಳಿ; ನನ್ನ ಸಂಪರ್ಕದ ವಿವರಗಳೆಲ್ಲ ತಕ್ಷಣವೇ ನಿಮ್ಮ ಮೊಬೈಲಿಗೆ ಸೇರಿಕೊಳ್ಳುತ್ತವೆ" ಎಂದೂ ಹೇಳಬಹುದು. ಒಟ್ಟಿನಲ್ಲಿ ಕ್ಯುಆರ್ ಸಂಕೇತಗಳನ್ನು ಸ್ಕ್ಯಾನ್ ಮಾಡುವ ಮೂಲಕ ಅನೇಕ ಕೆಲಸಗಳನ್ನು ಪೂರೈಸಿಕೊಳ್ಳುವುದು ಸಾಧ್ಯ ಎನ್ನುವುದಂತೂ ಸತ್ಯ.
ರೀಡರ್ ತಂತ್ರಾಂಶದ ಸಹಾಯವಿಲ್ಲದೆ ಕ್ಯೂಆರ್ ಸಂಕೇತಗಳಲ್ಲಿರುವ ಮಾಹಿತಿ ಏನು ಎಂದು ಅರಿತುಕೊಳ್ಳುವುದು ಸಾಧ್ಯವಿಲ್ಲ. ಇದೇ ಅಂಶವನ್ನು ಆಧಾರವಾಗಿಟ್ಟುಕೊಂಡ ದುಷ್ಕರ್ಮಿಗಳು ಈ ಸಂಕೇತಗಳನ್ನು ಕೆಟ್ಟ ಉದ್ದೇಶಗಳಿಗಾಗಿಯೂ ಬಳಸಿಕೊಳ್ಳಬಹುದು ಎನ್ನುವುದೇ ವಿಪರ್ಯಾಸ.
ನಾವು ಸ್ಕ್ಯಾನ್ ಮಾಡುವ ಯಾವುದೋ ಸಂಕೇತ ನಮ್ಮನ್ನು ದುರುದ್ದೇಶಪೂರಿತ ಜಾಲತಾಣಗಳತ್ತ ಕೊಂಡೊಯ್ಯಬಹುದು, ಅಥವಾ ನಮ್ಮ ಮೊಬೈಲ್‌ನಲ್ಲಿರುವ ಮಾಹಿತಿಯನ್ನೆಲ್ಲ ಬೇರೆಯವರಿಗೆ ಕಳುಹಿಸಿಬಿಡಬಹುದಲ್ಲ! ಹೀಗಾಗಿಯೇ ನಂಬಲರ್ಹ ಎನಿಸದ ಯಾವುದೇ ಮೂಲದಿಂದ ದೊರಕುವ ಕ್ಯೂಆರ್ ಕೋಡ್‌ಗಳನ್ನು ಸ್ಕ್ಯಾನ್ ಮಾಡದಿರುವುದೇ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ.
ಸೆಪ್ಟೆಂಬರ್ ೨೦, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ