ಮಂಗಳವಾರ, ಮಾರ್ಚ್ 22, 2011

ವಿಜ್ಞಾನ ಜಗತ್ತು ೨೦೧೦

ಪ್ರತಿವರ್ಷ ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಆಗುವ ಸಾಧನೆಗಳನ್ನು ಆಯಾ ವರ್ಷದ ಕೊನೆಯಲ್ಲಿ ಇಯರ್ ಬುಕ್ ರೂಪದಲ್ಲಿ ಪ್ರಕಟಿಸುವ ಅಭ್ಯಾಸ ಇಂಗ್ಲಿಷಿನಲ್ಲಿದೆ. ಆದರೆ ಈ ಕೆಲಸ ಈವರೆಗೆ ಕನ್ನಡದಲ್ಲಿ ಆಗಿರಲಿಲ್ಲ. ಗುಲ್ಬರ್ಗಾದ ಡಾ. ಪಿ. ಎಸ್. ಶಂಕರ್ ಪ್ರತಿಷ್ಠಾನ ಇತ್ತೀಚೆಗೆ ಪ್ರಕಟಿಸಿರುವ 'ವಿಜ್ಞಾನ ಜಗತ್ತು ೨೦೧೦' ಕೃತಿ ಕನ್ನಡದಲ್ಲಿ ಈ ಬಗೆಯ ಪುಸ್ತಕಗಳ ಕೊರತೆಯನ್ನು ತುಂಬಿಕೊಡುವತ್ತ ಮೊದಲ ಹೆಜ್ಜೆ ಇಟ್ಟಿದೆ.
ಹಿರಿಯ ವಿಜ್ಞಾನ ಲೇಖಕ ಶ್ರೀ ಟಿ ಆರ್ ಅನಂತರಾಮು ಈ ಪುಸ್ತಕವನ್ನು ರಚಿಸಿದ್ದಾರೆ. ೨೦೧೦ರಲ್ಲಿ ವಿಜ್ಞಾನ ಜಗತ್ತಿನ ಬೇರೆಬೇರೆ ಕ್ಷೇತ್ರಗಳು ಕಂಡ ಸಾಧನೆಗಳ ಪರಿಚಯವನ್ನು ಅವರು ಈ ಪುಸ್ತಕದಲ್ಲಿ ಮಾಡಿಕೊಟ್ಟಿದ್ದಾರೆ. ಪ್ರತಿ ಲೇಖನದ ಕೊನೆಯಲ್ಲೂ ಇರುವ 'ಮಾಹಿತಿ ಕಿಂಡಿ' ಹಲವು ಕುತೂಹಲಕರ ಅಂಶಗಳನ್ನು ತಿಳಿಸುತ್ತದೆ. ಕನ್ನಡದ ಮಟ್ಟಿಗೆ ಹೊಸತು ಎಂದೇ ಹೇಳಬೇಕಾದ ಈ ಪ್ರಯತ್ನಕ್ಕಾಗಿ ಶ್ರೀ ಟಿ ಆರ್ ಅನಂತರಾಮು ಹಾಗೂ ಡಾ. ಪಿ. ಎಸ್. ಶಂಕರ್ ಪ್ರತಿಷ್ಠಾನವನ್ನು ಇ-ಜ್ಞಾನ ಅಭಿನಂದಿಸುತ್ತದೆ.

ವಿಜ್ಞಾನ ಜಗತ್ತು ೨೦೧೦, ೪೮ ಪುಟಗಳು, ಬೆಲೆ ರೂ.೬೦, ಲೇಖಕರು: ಶ್ರೀ ಟಿ. ಆರ್. ಅನಂತರಾಮು, ಪ್ರಕಾಶಕರು: ಡಾ. ಪಿ. ಎಸ್. ಶಂಕರ್ ಪ್ರತಿಷ್ಠಾನ, ಗುಲ್ಬರ್ಗಾ

ಕಾಮೆಂಟ್‌ಗಳಿಲ್ಲ:

badge