ಟಿ. ಜಿ. ಶ್ರೀನಿಧಿ
ತಂತ್ರಜ್ಞಾನದ ಲೋಕದಲ್ಲಿ ಸದಾಕಾಲವೂ ಹೊಸ ಸಂಗತಿಗಳದೇ ಭರಾಟೆ. ಪ್ರತಿದಿನವೂ ಒಂದಲ್ಲ ಒಂದು ಹೊಸ ಯಂತ್ರಾಂಶ ಅಥವಾ ತಂತ್ರಾಂಶದ ಸುದ್ದಿ ಇಲ್ಲಿ ಕೇಳಸಿಗುತ್ತಲೇ ಇರುತ್ತದೆ.
ಆದರೆ ಹಾಗೆ ಸುದ್ದಿಮಾಡುವ ಎಲ್ಲ ಉತ್ಪನ್ನಗಳೂ ಹೇಳಿದ ಸಮಯಕ್ಕೆ ಮಾರುಕಟ್ಟೆಗೆ ಬರುವುದಿಲ್ಲ. ಈ ಪೈಕಿ ಕೆಲ ಉತ್ಪನ್ನಗಳು ಮಾರುಕಟ್ಟೆಗೆ ಬರುವುದು ತೀರಾ ನಿಧಾನವಾದರೆ ಇನ್ನು ಕೆಲವು ಪತ್ರಿಕಾಗೋಷ್ಠಿಯಿಂದಾಚೆಗೆ ಎಲ್ಲಿಯೂ ಕಾಣಿಸಿಕೊಳ್ಳುವುದೇ ಇಲ್ಲ.
ಸೋಮವಾರ, ಆಗಸ್ಟ್ 7, 2017
ಗುರುವಾರ, ಆಗಸ್ಟ್ 3, 2017
ಡಿಜಿಟಲ್ ಲೋಕದಲ್ಲಿ ನಮ್ಮ ಹೆಜ್ಜೆಗುರುತು
ಟಿ. ಜಿ. ಶ್ರೀನಿಧಿ
ಮನೆಯಿಂದ ಹೊರಬಂದರೆ ಸಾಕು, ನಾವು ಹೋದಲ್ಲೆಲ್ಲ ಒಂದಲ್ಲ ಒಂದು ರೀತಿಯ ಕುರುಹುಗಳನ್ನು ಉಳಿಸುತ್ತಲೇ ಸಾಗುತ್ತೇವೆ. ನೀವು ಮನೆಯಿಂದ ಹೊರಹೋದದ್ದನ್ನು ಎದುರುಮನೆಯವರು ನೋಡಿರುತ್ತಾರೆ, ಪಕ್ಕದ ಬೀದಿಯ ಸಿಸಿಟಿವಿ ಕ್ಯಾಮೆರಾದಲ್ಲಿ ನಿಮ್ಮ ವಾಹನ ಹಾದುಹೋಗಿದ್ದು ದಾಖಲಾಗಿರುತ್ತದೆ, ಆಫೀಸಿಗೆ ಎಷ್ಟುಹೊತ್ತಿಗೆ ತಲುಪಿದಿರಿ ಎನ್ನುವುದನ್ನು ಕಚೇರಿಯ ಹಾಜರಾತಿ ವ್ಯವಸ್ಥೆ ಗುರುತಿಟ್ಟುಕೊಳ್ಳುತ್ತದೆ.
ಡಿಜಿಟಲ್ ಜಗತ್ತಿನಲ್ಲೂ ಹೀಗೆಯೇ.

ಸೋಮವಾರ, ಜುಲೈ 31, 2017
ಕನ್ನಡ ತಂತ್ರಾಂಶ ಲೋಕಕ್ಕೆ ಎರಡು ಹೊಸ ಸೇರ್ಪಡೆ
ಇಜ್ಞಾನ ವಾರ್ತೆ
ಸದಾಕಾಲವೂ ಬದಲಾಗುತ್ತಲೇ ಇರುವುದು ತಂತ್ರಜ್ಞಾನ ಜಗತ್ತಿನ ಹೆಗ್ಗಳಿಕೆ. ಈ ಮೂಲಕ ಸೃಷ್ಟಿಯಾಗುವ ಹೊಸಹೊಸ ಸೌಲಭ್ಯಗಳು ಎಲ್ಲ ಭಾಷೆಗಳ ಬಳಕೆದಾರರನ್ನೂ ತಲುಪುತ್ತವೆ. ಇದಕ್ಕೆ ನಮ್ಮ ಕನ್ನಡವೂ ಹೊರತಲ್ಲ. ಈಚೆಗೆ ಕನ್ನಡಕ್ಕೆ ಲಭ್ಯವಾಗಿರುವ ಇಂತಹ ಎರಡು ಹೊಸ ತಂತ್ರಾಂಶ ಸವಲತ್ತುಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ.
ದಾರಿ ತೋರುವ 'ವೇಜ಼್'
ನಮ್ಮ ಸುತ್ತಮುತ್ತಲ ಪ್ರದೇಶದ ಭೂಪಟವನ್ನೂ ಅದರಲ್ಲಿ ನಮ್ಮ ಓಡಾಟದ ದಾರಿಯನ್ನೂ ತೋರಿಸುವ ಸೌಲಭ್ಯವನ್ನು ನಾವು ಅನೇಕ ಆಪ್‌ಗಳಲ್ಲಿ, ಜಾಲತಾಣಗಳಲ್ಲಿ ಬಳಸುತ್ತೇವೆ. ವಾಹನ ಚಲಾಯಿಸಲು ನೆರವಾಗುವ ಗೂಗಲ್ ಮ್ಯಾಪ್ಸ್‌ನಂತಹ ತಂತ್ರಾಂಶಗಳಲ್ಲಂತೂ ಧ್ವನಿರೂಪದ ಮಾರ್ಗದರ್ಶನವೂ ಸಿಗುತ್ತವೆ.
ಈವರೆಗೆ ಇಂಗ್ಲಿಷಿನಲ್ಲಷ್ಟೇ ಇದ್ದ ಈ ಸೌಲಭ್ಯ ಇದೀಗ ಕನ್ನಡದಲ್ಲೂ ಸಿಗುತ್ತಿದೆ.

ಗುರುವಾರ, ಜುಲೈ 27, 2017
ವಿಜ್ಞಾನದ ಇಜ್ಞಾನ: ಹೀಗೊಂದು ಅವಲಂಬನೆಯ ಕತೆ
ಕ್ಷಮಾ ವಿ. ಭಾನುಪ್ರಕಾಶ್
ಇಂದು ಇಡೀ ವಿಶ್ವವೇ ಒಂದು ಪುಟ್ಟ ಊರಿದ್ದಂತೆ. ಆದರೆ ಜಗತ್ತಿನ ಯಾವುದೋ ಮೂಲೆಯಲ್ಲಿರುವವರೊಡನೆ ಕ್ಷಣಮಾತ್ರದಲ್ಲೇ ಸಂಪರ್ಕ ಸಾಧಿಸಲು ಗೊತ್ತಿರುವ ನಮಗೆ ಪಕ್ಕದ ಮನೆಯಲ್ಲಿರುವವರ ಪರಿಚಯವೇ ಇರುವುದಿಲ್ಲ. ಪಠ್ಯಪುಸ್ತಕಗಳಲ್ಲಿ ಓದಿದ "ಮಾನವ ಸಂಘಜೀವಿ" ಎನ್ನುವ ಹೇಳಿಕೆ ನಿಜವೇ ಎಂದು ನಮ್ಮನ್ನು ನಾವೇ ಕೇಳಿಕೊಳ್ಳಬೇಕಾಗಿರುವ ಪರಿಸ್ಥಿತಿ ಇಂದಿನದು.
ಹೀಗೆ ಸಹಜೀವನದ ಪರಿಕಲ್ಪನೆ ಮನುಷ್ಯರ ಜೀವನದಲ್ಲಿ ಮೌಲ್ಯ ಕಳೆದುಕೊಳ್ಳುತ್ತಿರಬಹುದು, ಆದರೆ ಪ್ರಾಣಿ ಪಕ್ಷಿ ಕೀಟ ಮತ್ತು ಸೂಕ್ಷ್ಮಾಣು ಜೀವಿಗಳ ಪ್ರಪಂಚದಲ್ಲಿ ಹಾಗೇನೂ ಆಗಿಲ್ಲ. ಅಲ್ಲಿನ ಸಸ್ಯಗಳ ನಡುವೆ, ಪ್ರಾಣಿಗಳ ನಡುವೆ, ಕೀಟಗಳ ನಡುವೆ ಅಥವಾ ಪ್ರಾಣಿ - ಸಸ್ಯ, ಸಸ್ಯ - ಕೀಟ, ಕೀಟ - ಸೂಕ್ಷ್ಮಾಣು ಜೀವಿ ಮೊದಲಾದ ಬೇರೆಬೇರೆ ಜೋಡಿಗಳ ನಡುವೆ ಸಹಬಾಳ್ವೆ ಒಂದು ಸಹಜ ಪ್ರಕ್ರಿಯೆ.
ಸೋಮವಾರ, ಜುಲೈ 24, 2017
ಜಿಬಿ, ಟಿಬಿ ಆದಮೇಲೆ?
ಟಿ. ಜಿ. ಶ್ರೀನಿಧಿ
ನಾವು ಟೈಪ್ ಮಾಡಿದ ಮಾಹಿತಿ - ಡೌನ್‌ಲೋಡ್ ಮಾಡಿ ತಂದ ಕಡತಗಳೆಲ್ಲ ಕಂಪ್ಯೂಟರಿನ ಮೆಮೊರಿಯಲ್ಲಿರುತ್ತವಲ್ಲ, ಅದೆಲ್ಲ ಕಂಪ್ಯೂಟರಿಗೆ ಅರ್ಥವಾಗಬೇಕಾದರೆ ಮೊದಲಿಗೆ ದ್ವಿಮಾನ ಪದ್ಧತಿಯ ಅಂಕಿಗಳಾಗಿ (೧ ಅಥವಾ ೦) ಬದಲಾದಾಗಬೇಕಾದ್ದು ಅನಿವಾರ್ಯ.
ದ್ವಿಮಾನ ಸಂಖ್ಯೆಯ ಆಂಗ್ಲ ಹೆಸರು ಬೈನರಿ ಡಿಜಿಟ್; ಈ ಹೆಸರಿನ ಮೊದಲ ಎರಡು ಹಾಗೂ ಕೊನೆಯದೊಂದು ಅಕ್ಷರಗಳನ್ನು ಸೇರಿಸಿ ಬಿಟ್ ಎಂಬ ಹೆಸರು ರೂಪಗೊಂಡಿದೆ. ಇದು ಮಾಹಿತಿಯ ಪ್ರಮಾಣ ಅಳೆಯಲು ಬಳಕೆಯಾಗುವ ಅತ್ಯಂತ ಸಣ್ಣ ಏಕಮಾನ.

ಗುರುವಾರ, ಜುಲೈ 20, 2017
ವಿಜ್ಞಾನದ ಇಜ್ಞಾನ: ಸಾರಾಯಿಯ ಚುಚ್ಚುಮದ್ದು ಜೀವರಕ್ಷಕ ಔಷಧವಾಗಬಹುದೇ?
ವಿನಾಯಕ ಕಾಮತ್
'ಸಾರಾಯಿಯ ಚುಚ್ಚುಮದ್ದು ಔಷಧವಾಗಬಹುದೇ?' ಎಂಬ ಪ್ರಶ್ನೆ ಯಾರಿಗಾದರೂ ಕೇಳಿದರೆ, ಎಂತಹ ನಿರಕ್ಷರಕುಕ್ಷಿಯೂ ನಕ್ಕಾನು. ಏಕೆಂದರೆ, ಹೆಂಡ-ಸಾರಾಯಿಗಳು ಎಂದಿಗೂ ಆರೋಗ್ಯಕ್ಕೆ ಹಾನಿಕರವೆಂಬುದು ಎಂಥವರಿಗೂ ಗೊತ್ತಿರುವ ಸತ್ಯ. ಆದರೆ ಇಂತಹ ಸಾರಾಯಿಯಲ್ಲಿರುವ ಎಥೆನೋಲ್ (ethanol) ಎಂಬ ರಾಸಾಯನಿಕವೂ, ಸಂದರ್ಭಕ್ಕೆ ಜೀವರಕ್ಷಕ ಪ್ರತಿವಿಷವಾಗಬಹುದು ಎಂದರೆ ನೀವು ನಂಬಲೇಬೇಕು!
![]() |
ಎಥೆನೋಲ್ ರಚನೆ |
ಸೋಮವಾರ, ಜುಲೈ 17, 2017
ಡಿಜಿಟಲ್ ಲೋಕದ ಒಂದು ಮೊಟ್ಟೆಯ ಕತೆ!
ಟಿ. ಜಿ. ಶ್ರೀನಿಧಿ
ಈಚೆಗೆ, ಹ್ಯಾರಿ ಪಾಟರ್ ಸರಣಿಯ ಮೊದಲ ಪುಸ್ತಕದ ೨೦ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಫೇಸ್‌ಬುಕ್‌ನಲ್ಲೊಂದು ವೈಶಿಷ್ಟ್ಯ ಕಾಣಿಸಿಕೊಂಡಿತ್ತು. ಹ್ಯಾರಿ ಪಾಟರ್‌ನದೋ ಆ ಸರಣಿಯಲ್ಲಿ ಬರುವ ಇತರ ಕೆಲ ಪಾತ್ರಗಳದೋ ಹೆಸರನ್ನು ನಮ್ಮ ಪೋಸ್ಟ್‌ನಲ್ಲಿ ಬರೆದರೆ ಅದು ಬೇರೆ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಿತ್ತು, ಅದರ ಮೇಲೆ ಕ್ಲಿಕ್ ಮಾಡಿದರೆ ಪರದೆಯ ಕೆಳಭಾಗದಲ್ಲಿ ಮಂತ್ರದಂಡವೊಂದು ಮೂಡಿ ಬಣ್ಣಬಣ್ಣದ ಚಿತ್ತಾರಗಳನ್ನೂ ಮೂಡಿಸುತ್ತಿತ್ತು!
ತಂತ್ರಾಂಶಗಳಲ್ಲಿ, ಜಾಲತಾಣಗಳಲ್ಲಿ ಕಾಣಸಿಗುವ ಇಂತಹ ವೈಶಿಷ್ಟ್ಯಗಳನ್ನು 'ಈಸ್ಟರ್ ಎಗ್'ಗಳೆಂದು ಕರೆಯುತ್ತಾರೆ.

ಗುರುವಾರ, ಜುಲೈ 13, 2017
ರೀಟೇಲ್ ಉದ್ಯಮದಲ್ಲೊಂದು ಹೊಸ ಸಂಚಲನ
ಉದಯ ಶಂಕರ ಪುರಾಣಿಕ
ಈ ಮೊದಲು ವಸತಿ ಪ್ರದೇಶಗಳಲ್ಲಿ ಚಿಲ್ಲರೆ ವ್ಯಾಪಾರಿಗಳು ಅಥವಾ ಕಿರಾಣಿ ಅಂಗಡಿಗಳು ಸಾಮಾನ್ಯವಾಗಿದ್ದವು. ನಂತರ ಡಿಪಾರ್ಟಮೆಂಟ್ ಸ್ಟೋರ್‌ಗಳು, ಸೂಪರ್ ಮಾರುಕಟ್ಟೆಗಳು, ಶಾಪಿಂಗ್ ಮಾಲ್‌ಗಳು ಬರಲಾರಂಭಿಸಿದವು. ದೂರವಾಣಿ ಕರೆ ಮಾಡಿ ಆರ್ಡರ್ ಮಾಡಿ, ನಿಮ್ಮ ಮನೆಗೆ ತಂದು ತಲುಪಿಸುತ್ತವೆ ಎನ್ನುವ ಪಿಜ್ಜಾ ಅಂಗಡಿಗಳಂತಹ ವ್ಯಾಪಾರ, ಡ್ರೈವ್ ಇನ್ ಶಾಪಿಂಗ್ ಮಾರುಕಟ್ಟೆ, ಅಂತರಜಾಲ ಮತ್ತು ಸ್ಮಾರ್ಟ್‌ಫೋನ್ ಬಳಸಿ ಮಾಡುವ ಆನ್‌ಲೈನ್ ಶಾಪಿಂಗ್ - ಹೀಗೆ ಗ್ರಾಹಕರಿಗೆ ವಿವಿಧ ರೀತಿಯ ಶಾಪಿಂಗ್ ಸೌಲಭ್ಯಗಳು ದೊರೆಯುತ್ತಿವೆ. ಇಷ್ಟೆಲ್ಲ ಬದಲಾಗಿರುವ ರೀಟೇಲ್ ಉದ್ಯಮದಲ್ಲಿ ಹೊಸ ಸಂಚಲನ ಮೂಡಿಸಿರುವುದು 'ಅಮೇಜಾನ್ ಗೋ' ಎಂಬ ಪರಿಕಲ್ಪನೆ.

ಸೋಮವಾರ, ಜುಲೈ 10, 2017
ಎಟಿಎಂ ಬಳಸುವಾಗ ಎಚ್ಚರವಹಿಸಿ!
ಟಿ. ಜಿ. ಶ್ರೀನಿಧಿ
ಕ್ರೆಡಿಟ್ ಕಾರ್ಡ್ - ಡೆಬಿಟ್ ಕಾರ್ಡುಗಳನ್ನು ಜಾಲತಾಣಗಳಲ್ಲಿ, ಅಂಗಡಿಗಳಲ್ಲಿ ಬಳಸುವಾಗ ಹುಷಾರಾಗಿರಬೇಕು ಎನ್ನುವುದು ನಮಗೆ ಪದೇಪದೇ ಕೇಳಸಿಗುವ ಸಲಹೆ. ಇಂತಹ ಸಂದರ್ಭಗಳಲ್ಲಿ ವಂಚನೆ ನಡೆಯುವ ಸಾಧ್ಯತೆ ಹೆಚ್ಚಿರುವುದರಿಂದ ಈ ಸಲಹೆಯನ್ನು ಪಾಲಿಸುವುದು ಅಪೇಕ್ಷಣೀಯವೂ ಹೌದು.
ಹಾಗೆಂದು ನಮ್ಮ ಕಾರ್ಡನ್ನು ಎಟಿಎಂಗಳಲ್ಲಿ ಬಳಸುವಾಗ ಎಚ್ಚರಿಕೆ ಬೇಡವೇ?

ಗುರುವಾರ, ಜುಲೈ 6, 2017
ಓಸಿಆರ್ ಎಂದರೇನು?
ಟಿ. ಜಿ. ಶ್ರೀನಿಧಿ
ಮುದ್ರಿತ ಅಥವಾ ಕೈಬರಹದ ಅಕ್ಷರಗಳನ್ನು ಕಂಪ್ಯೂಟರ್ ಸಹಾಯದಿಂದ ಗುರುತಿಸಲು ನೆರವಾಗುವುದು ಓಸಿಆರ್. ಇದು 'ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಶನ್' ಎನ್ನುವುದರ ಹ್ರಸ್ವರೂಪ. ಕಂಪ್ಯೂಟರ್ ಹಾಗೂ ಮಾನವರ ನಡುವಿನ ಸಂವಹನದ ಹೊಸದೊಂದು ಆಯಾಮವನ್ನು ಪರಿಚಯಿಸುವ ತಂತ್ರಜ್ಞಾನ ಇದು.
ಸ್ಕ್ಯಾನ್ ಮಾಡಿಯೋ ಫೋಟೋ ಕ್ಲಿಕ್ಕಿಸಿಯೋ ಅಕ್ಷರಗಳನ್ನು ಕಂಪ್ಯೂಟರಿಗೆ ಊಡಿಸುತ್ತೇವಲ್ಲ, ಆ ಚಿತ್ರದಲ್ಲಿ ಇರಬಹುದಾದ ಬರಹವನ್ನು ಗುರುತಿಸುವುದು ಹೇಗೆ, ಗುರುತಿಸಿದ ಚಿತ್ರವನ್ನು ಪಠ್ಯರೂಪಕ್ಕೆ ಬದಲಿಸುವುದು ಹೇಗೆ ಎನ್ನುವುದನ್ನೆಲ್ಲ ಕಂಪ್ಯೂಟರಿಗೆ ಹೇಳಿಕೊಡುವುದು ಓಸಿಆರ್ ತಂತ್ರಾಂಶದ ಕೆಲಸ.

ಬುಧವಾರ, ಜುಲೈ 5, 2017
ವಿಜ್ಞಾನದ ಎರಡು ವಿಶಿಷ್ಟ ಕೃತಿಗಳು
ಇಜ್ಞಾನ ವಾರ್ತೆ
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ೨೦೧೬-೧೭ನೇ ಸಾಲಿನ ಶ್ರೇಷ್ಠ ಲೇಖಕ ಪ್ರಶಸ್ತಿ ಪ್ರದಾನ ಸಮಾರಂಭ ಈ ಬುಧವಾರ (ಜುಲೈ ೫, ೨೦೧೭) ಬೆಂಗಳೂರಿನಲ್ಲಿ ನಡೆಯಲಿದೆ. ವಿಜ್ಞಾನ ವಿಭಾಗದಲ್ಲಿ ತಮ್ಮ ಲೇಖಕರಿಗೆ ಈ ಪ್ರಶಸ್ತಿ ತಂದುಕೊಟ್ಟಿರುವ ಎರಡು ಕೃತಿಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ.

ಸೋಮವಾರ, ಜುಲೈ 3, 2017
ಎಚ್‌ಡಿಎಂಐ: ಒಂದು ಪರಿಚಯ
ಟಿ. ಜಿ. ಶ್ರೀನಿಧಿ
ಉತ್ತಮ ಗುಣಮಟ್ಟದ ವೀಡಿಯೋ ಚಿತ್ರೀಕರಿಸುವುದು ಈಗ ಬಹಳ ಸುಲಭ. ವೀಡಿಯೋ ಕ್ಯಾಮೆರಾಗಳಲ್ಲಿ ಮಾತ್ರವೇ ಅಲ್ಲ, ಡಿಎಸ್‌ಎಲ್‌ಆರ್‌ಗಳಲ್ಲಿ, ಸಾಮಾನ್ಯ ಡಿಜಿಟಲ್ ಕ್ಯಾಮೆರಾಗಳಲ್ಲಿ, ಕಡೆಗೆ ಮೊಬೈಲ್ ಫೋನುಗಳಲ್ಲೂ ನಾವು ಸರಾಗವಾಗಿ ಎಚ್‌ಡಿ ವೀಡಿಯೋ ಚಿತ್ರೀಕರಿಸಿಕೊಳ್ಳಬಹುದು.
ಎಚ್‌ಡಿ ವೀಡಿಯೋ ಚಿತ್ರೀಕರಿಸಿ ಅದನ್ನು ಎಲ್ಲೋ ಒಂದು ಕಡೆ ಶೇಖರಿಸಿಟ್ಟುಬಿಟ್ಟರೆ ಆಯಿತೆ, ಅದನ್ನು ಅಷ್ಟೇ ಒಳ್ಳೆಯ ಗುಣಮಟ್ಟದಲ್ಲಿ ನೋಡಲೂಬೇಕಲ್ಲ? ಇದಕ್ಕೆ ನೆರವಾಗುವ ತಂತ್ರಜ್ಞಾನದ ಹೆಸರು ಎಚ್‌ಡಿಎಂಐ, ಅಂದರೆ ಹೈ ಡೆಫನಿಶನ್ ಮಲ್ಟಿಮೀಡಿಯಾ ಇಂಟರ್‌ಫೇಸ್.

ಶನಿವಾರ, ಜುಲೈ 1, 2017
ಪುಟ್ಟ-ಕಿಟ್ಟ ವಿಜ್ಞಾನ ಸಂವಾದ ಮಾಲಿಕೆ: ನವಕರ್ನಾಟಕದಿಂದ ಎಂಟು ಹೊಸ ಪುಸ್ತಕ
ಇಜ್ಞಾನ ವಾರ್ತೆ
ನವಕರ್ನಾಟಕ ಪ್ರಕಾಶನದ 'ಪುಟ್ಟ-ಕಿಟ್ಟ ವಿಜ್ಞಾನ ಸಂವಾದ' ಮಾಲಿಕೆಯ ಎಂಟು ಕೃತಿಗಳು ಇಂದು (ಜುಲೈ ೧, ೨೦೧೭) ಬೆಂಗಳೂರಿನಲ್ಲಿ ಬಿಡುಗಡೆಯಾಗಲಿವೆ. ಭೌತ ವಿಜ್ಞಾನದ ವಿಶ್ರಾಂತ ಪ್ರಾಧ್ಯಾಪಕ ಡಾ. ಎ. ಓ. ಆವಲಮೂರ್ತಿ ಈ ಪುಸ್ತಕಗಳನ್ನು ಬರೆದಿದ್ದಾರೆ.

ಶುಕ್ರವಾರ, ಜೂನ್ 30, 2017
ವಿಜ್ಞಾನದ ಇಜ್ಞಾನ: ಎಲ್ಲವೂ ಹೊಟ್ಟೆಗಾಗಿ, ಕೊನೆಗೆ ಉಳಿವಿಗಾಗಿ
ಕೊಳ್ಳೇಗಾಲ ಶರ್ಮ
ದಾಸರು ಹೇಳಿದ್ದರಂತೆ. “ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ”. ಬಹುಶಃ ಇದು ನಮ್ಮ ನಿತ್ಯ ಜೀವನಕ್ಕೆ ಹಿಡಿದ ಕನ್ನಡಿಯಾಗಿರಬಹುದು. ಆದರೆ ಜೀವಿಗಳ ಬದುಕಿನಲ್ಲಿ ತುಂಡು ಬಟ್ಟೆ, ಹೊಟ್ಟೆಗೆ ಎಷ್ಟು ಮಹತ್ವವಿದೆಯೋ ಅಷ್ಟೇ ಮಹತ್ವ ಮರಿ ಮಾಡುವುದಕ್ಕೂ ಇದೆ ಎನ್ನುವುದು ವಿಜ್ಞಾನಿಗಳ ಅಂಬೋಣ. “ನಾವಿಬ್ಬರು, ನಮಗಿಬ್ಬರು” ಎನ್ನುವ ಧ್ಯೇಯ ವಾಕ್ಯವನ್ನೇ ಆದರ್ಶವಾಗಿಟ್ಟುಕೊಂಡಿರುವ ನಮಗೆ ಇದು ತುಸು ವಿಚಿತ್ರ ಎನ್ನಿಸಬಹುದು. ಆದರೆ ಉಂಡು, ತಿಂದು ಬದುಕುಳಿದರೆ ಸಾಲದು. ತಮ್ಮ ಸಂತತಿಯೂ ಬದುಕಿ ಉಳಿಯಬೇಕು ಎನ್ನುವುದೇ ‘ಜೀವ’ ಎನ್ನುವುದರ ಪರಮೋಚ್ಚ ಧ್ಯೇಯ ಎನ್ನುತ್ತದೆ ಡಾರ್ವಿನ್ನನ ವಿಕಾಸವಾದ. ಜೀವಿಗಳ ಎಲ್ಲ ಬಗೆಯ ಹೊಂದಾಣಿಕೆಗಳು ಹಾಗೂ ಹೋರಾಟಗಳೂ ತಾವೆಷ್ಟು ಸಂತಾನವನ್ನು ಉಳಿಸಿ ಹೋಗಬಲ್ಲೆವು ಎನ್ನುವುದಕ್ಕಾಗಿಯೇ ಆಗಿರುವುದಂತೆ.

ಬುಧವಾರ, ಜೂನ್ 28, 2017
ನಮ್ಮದೇ ನೇರಪ್ರಸಾರ
ಟಿ. ಜಿ. ಶ್ರೀನಿಧಿ
ಕ್ರಿಕೆಟ್ ಮ್ಯಾಚು, ಸಂಸತ್ ಕಲಾಪಗಳಿಂದ ಪ್ರಾರಂಭಿಸಿ ಸೆಲೆಬ್ರಿಟಿ ಮದುವೆಗಳವರೆಗೆ ಅದೆಷ್ಟೋ ಕಾರ್ಯಕ್ರಮಗಳ ನೇರ ಪ್ರಸಾರ ಟೀವಿ ವಾಹಿನಿಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತದೆ. 'ಲೈವ್' ಎಂದು ಗುರುತಿಸುವುದು ಇಂತಹ ಪ್ರಸಾರವನ್ನೇ.
ಟೀವಿ ಹಾಗೂ ರೇಡಿಯೋ ಮಾಧ್ಯಮಗಳಲ್ಲಿ ಜನಪ್ರಿಯವಾಗಿರುವ ಈ ಪರಿಕಲ್ಪನೆ ಅಂತರಜಾಲ ಲೋಕದಲ್ಲೂ ಅಸ್ತಿತ್ವದಲ್ಲಿದೆ. ಇಲ್ಲಿಯೂ ಇದರ ಹೆಸರು ಲೈವ್ ಎಂದೇ. ಜಾಲತಾಣಗಳ ಮೂಲಕ ಪಠ್ಯ, ಚಿತ್ರಗಳನ್ನೆಲ್ಲ ಹಂಚಿಕೊಂಡ ಹಾಗೆ ವಿಡಿಯೋ ದೃಶ್ಯಾವಳಿಯ ನೇರಪ್ರಸಾರವನ್ನೂ ಹಂಚಿಕೊಳ್ಳಲು ನೆರವಾಗುವುದು ಈ ಪರಿಕಲ್ಪನೆಯ ವೈಶಿಷ್ಟ್ಯ.

ಸೋಮವಾರ, ಜೂನ್ 26, 2017
ನಮ್ಮದೂ ಒಂದು ಮೊಬೈಲ್ ಆಪ್
ಟಿ. ಜಿ. ಶ್ರೀನಿಧಿ
ಸ್ಮಾರ್ಟ್‌ಫೋನುಗಳು ಸರ್ವಾಂತರ್ಯಾಮಿಗಳಾಗಿರುವ ಈ ಕಾಲದಲ್ಲಿ ಎಲ್ಲ ಕೆಲಸಕ್ಕೂ ಒಂದೊಂದು ಆಪ್ ಬಳಸುವುದು ನಮಗೆ ಅಭ್ಯಾಸವಾಗಿಹೋಗಿದೆ. ಬೇರೆಯವರು ರೂಪಿಸಿದ ಇಷ್ಟೆಲ್ಲ ವೈವಿಧ್ಯಮಯ ಆಪ್‌ಗಳನ್ನು ಬಳಸುವಾಗ ನಾವೂ ಒಂದು ಆಪ್ ರೂಪಿಸುವಂತಿದ್ದರೆ ಎನ್ನುವ ಯೋಚನೆ ಕೆಲವರಿಗಾದರೂ ಬಾರದಿರದು.
ನಮಗೆ ಪ್ರೋಗ್ರಾಮಿಂಗ್ ಗೊತ್ತಿಲ್ಲ, ಹಾಗಾಗಿ ಈ ಯೋಚನೆ ಕಾರ್ಯಗತವಾಗುವುದಿಲ್ಲ ಎಂದು ನಿರಾಶರಾಗುವ ಅಗತ್ಯವೇನೂ ಇಲ್ಲ. ಏಕೆಂದರೆ ಪ್ರೋಗ್ರಾಮಿಂಗ್ ಬಾರದವರೂ ಆಪ್ ರೂಪಿಸಿಕೊಳ್ಳಲು ನೆರವಾಗುವ ಸೌಲಭ್ಯಗಳು ಜಾಲಲೋಕದಲ್ಲಿವೆ.

ಗುರುವಾರ, ಜೂನ್ 22, 2017
ಏನಿದು ಓಟಿಪಿ?
ಟಿ. ಜಿ. ಶ್ರೀನಿಧಿ
ಕಾರ್ಡುಗಳನ್ನು, ನೆಟ್‌ಬ್ಯಾಂಕಿಂಗ್ ಸೌಲಭ್ಯವನ್ನು ಬಳಸಿ ಹಣಪಾವತಿಸುವುದು ನಮ್ಮಲ್ಲಿ ಅನೇಕರಿಗೆ ಚೆನ್ನಾಗಿಯೇ ಅಭ್ಯಾಸವಾಗಿದೆ. ಹೀಗೆ ಪಾವತಿಸುವಾಗ ಹಣ ತೆಗೆಯಬೇಕಾದ್ದು ಯಾವ ಖಾತೆಯಿಂದ ಎಂದು ಬ್ಯಾಂಕಿಗೆ ಗೊತ್ತಾಗಬೇಕಲ್ಲ, ನಾವು ಖಾತೆಯ ವಿವರಗಳನ್ನು (ಲಾಗಿನ್, ಅಕೌಂಟ್ ಸಂಖ್ಯೆ ಇತ್ಯಾದಿ) ದಾಖಲಿಸುವುದು ಇದಕ್ಕಾಗಿಯೇ. ಅದನ್ನು ದಾಖಲಿಸುತ್ತಿರುವವರು ನಾವೇ ಎಂದೂ ಗೊತ್ತಾಗಬೇಡವೇ, ಅದಕ್ಕಾಗಿ ಪಾಸ್‌ವರ್ಡನ್ನೂ ಎಂಟರ್ ಮಾಡುತ್ತೇವೆ.
ಆದರೆ ನಮ್ಮ ಪಾಸ್‌ವರ್ಡ್ ನಮಗೆ ಮಾತ್ರ ಗೊತ್ತು ಎಂದು ಏನು ಗ್ಯಾರಂಟಿ? ಅದನ್ನು ಬೇರೆ ಯಾರೋ ಕದ್ದು ತಿಳಿದುಕೊಂಡುಬಿಟ್ಟಿರಬಹುದಲ್ಲ!

ಸೋಮವಾರ, ಜೂನ್ 19, 2017
ಬಗ್ ಮತ್ತು ಡೀಬಗ್
ಟಿ. ಜಿ. ಶ್ರೀನಿಧಿ
ಕಂಪ್ಯೂಟರಿಗಾಗಲೀ ಸ್ಮಾರ್ಟ್‌ಫೋನ್‌ಗಾಗಲಿ ಸ್ವಂತ ಬುದ್ಧಿ ಇರುವುದಿಲ್ಲ. ನಿರ್ದಿಷ್ಟ ಸಂದರ್ಭಗಳಲ್ಲಿ ಹೇಗೆ ಪ್ರತಿಕ್ರಿಯೆ ನೀಡಬೇಕೆಂದು ಅದಕ್ಕೆ ನಿರ್ದೇಶನ ನೀಡಲಾಗಿರುತ್ತದೆಯೋ ಅದರ ವರ್ತನೆ ಅದೇ ರೀತಿಯಾಗಿರುತ್ತದೆ. ಹೀಗೆ ನಿರ್ದೇಶನ ನೀಡುವುದು ಸಾಫ್ಟ್‌ವೇರ್, ಅಂದರೆ ತಂತ್ರಾಂಶದ ಕೆಲಸ.

ಗುರುವಾರ, ಜೂನ್ 15, 2017
RAMಗೂ ROMಗೂ ಏನು ವ್ಯತ್ಯಾಸ?
ಟಿ. ಜಿ. ಶ್ರೀನಿಧಿ
ಕಂಪ್ಯೂಟರ್ ಅಥವಾ ಮೊಬೈಲಿನಲ್ಲಿ ಕೆಲಸಮಾಡುವಾಗ ನಾವು ಒಂದಲ್ಲ ಒಂದು ರೀತಿಯ ಮಾಹಿತಿಯೊಡನೆ ವ್ಯವಹರಿಸುತ್ತಿರುತ್ತೇವೆ. ಕಾಲೇಜಿನ ಪ್ರಾಜೆಕ್ಟ್ ರಿಪೋರ್ಟು, ಕಚೇರಿಯ ಇಮೇಲ್, ಫೋಟೋಶಾಪಿನ ಚಿತ್ರ - ಇವೆಲ್ಲ ಮಾಹಿತಿಯೇ.
ಈ ಮಾಹಿತಿ ಅಂತಿಮವಾಗಿ ಹಾರ್ಡ್ ಡಿಸ್ಕ್‌ನಲ್ಲೋ, ಪೆನ್‌ಡ್ರೈವ್‌ನಲ್ಲೋ, ಮೆಮೊರಿ ಕಾರ್ಡಿನಲ್ಲೋ ಶೇಖರವಾಗುತ್ತದೆ ಸರಿ, ಆದರೆ ನಾವು ಕೆಲಸಮಾಡುತ್ತಿರುವಷ್ಟು ಹೊತ್ತು - ಕಡತವನ್ನು ಉಳಿಸುವ ಮೊದಲು - ಇದೆಲ್ಲ ಎಲ್ಲಿರುತ್ತದೆ?

ಸೋಮವಾರ, ಜೂನ್ 12, 2017
ಟ್ರೋಜನ್ ಹಾರ್ಸ್ ಎಂಬ ಮೋಸದ ಕತೆ
ಟಿ. ಜಿ. ಶ್ರೀನಿಧಿ
ಟ್ರೋಜನ್ ಯುದ್ಧದಲ್ಲಿ ಬಸವಳಿದಿದ್ದ ಗ್ರೀಕರು ದೊಡ್ಡದೊಂದು ಮರದ ಕುದುರೆಯ ಸಹಾಯದಿಂದ ಟ್ರಾಯ್ ನಗರವನ್ನು ಗೆದ್ದರು ಎನ್ನುವುದು ಇತಿಹಾಸ. ನೋಡಲು ನಿರುಪದ್ರವಿಯಾಗಿ ಕಾಣುತ್ತಿದ್ದ ಆ ಕುದುರೆಯೊಳಗೆ ('ಟ್ರೋಜನ್ ಹಾರ್ಸ್') ಸೈನಿಕರು ಅವಿತುಕೊಂಡು ಟ್ರಾಯ್ ನಗರದವರನ್ನು ಮೋಸಗೊಳಿಸಿದ್ದರಂತೆ.
ಇದೇ ರೀತಿ ನಿರಪಾಯಕಾರಿ ತಂತ್ರಾಂಶದ ಸೋಗಿನಲ್ಲಿ ಬರುವ ಕುತಂತ್ರಾಂಶಗಳು ಕಂಪ್ಯೂಟರ್ ಪ್ರಪಂಚದಲ್ಲಿವೆ. ಹೀಗಾಗಿಯೇ ಅವನ್ನು ಟ್ರೋಜನ್ ಹಾರ್ಸ್ ಅಥವಾ 'ಟ್ರೋಜನ್'ಗಳೆಂದು ಕರೆಯುತ್ತಾರೆ. ದತ್ತಾಂಶವನ್ನು ಅಥವಾ ಕಡತಗಳನ್ನು ಹಾಳುಮಾಡುವುದು, ಇತರ ಕುತಂತ್ರಾಂಶಗಳನ್ನು ಇನ್‌ಸ್ಟಾಲ್ ಮಾಡುವುದು, ಬಳಕೆದಾರರ ಖಾಸಗಿ ಮಾಹಿತಿಯನ್ನು ಕದಿಯುವುದು - ಹೀಗೆ ಟ್ರೋಜನ್‌ಗಳಿಗೆ ಅನೇಕ ಉದ್ದೇಶಗಳಿರುವುದು ಸಾಧ್ಯ.

ಗುರುವಾರ, ಜೂನ್ 8, 2017
ರಾಧಾಕೃಷ್ಣ ಭಡ್ತಿ ಹೇಳುತ್ತಾರೆ... "ಈ ಪತ್ರಿಕೆ ಅಪ್ಪಟ ಓದುಗರಿಗಾಗಿ. ಓದಿ ಎಚ್ಚರಗೊಳ್ಳುವವರಿಗಾಗಿ."
ವಿಶ್ವ ಪರಿಸರ ದಿನದ ಸುತ್ತಮುತ್ತಲಲ್ಲೇ ಕನ್ನಡಕ್ಕೆ ಹೊಸತೊಂದು ಪರಿಸರ - ವಿಜ್ಞಾನ ಪತ್ರಿಕೆ ದೊರಕುತ್ತಿದೆ. ಜಲ ಪತ್ರಕರ್ತ ರಾಧಾಕೃಷ್ಣ ಭಡ್ತಿಯವರ ನೇತೃತ್ವದಲ್ಲಿ ಭೂಮಿಗೀತ ಮೀಡಿಯಾ ಸಂಸ್ಥೆ ಹೊರತರುತ್ತಿರುವ ಈ ಪತ್ರಿಕೆಯ ಹೆಸರೇ 'ಹಸಿರುವಾಸಿ'. ಸಮಾಜಜಾಲಗಳಲ್ಲಿ ಸಾಕಷ್ಟು ಕುತೂಹಲಮೂಡಿಸಿರುವ 'ಹಸಿರುವಾಸಿ' ಇದೇ ಜೂನ್ ೧೦ರ ಶನಿವಾರ ಸಂಜೆ ಬೆಂಗಳೂರಿನಲ್ಲಿ ಲೋಕಾರ್ಪಣೆಯಾಗುತ್ತಿದೆ. ಲೋಕಾರ್ಪಣೆಯ ಹೊಸ್ತಿಲಲ್ಲಿರುವ ಹೊಸ ಪತ್ರಿಕೆಯ ಸಂಪಾದಕರೊಡನೆ ಹೀಗೊಂದು ಲೋಕಾಭಿರಾಮ...
ಏನಿದು ಭೂಮಿಗೀತ?
ಇದೊಂದು ಮಾಧ್ಯಮ ಸಂಸ್ಥೆ. ಈವರೆಗೆ ವೈಯಕ್ತಿಕ ನೆಲೆಯಲ್ಲಿ ೧೭ ವರ್ಷಗಳಿಂದ ಮಾಡಿಕೊಂಡು ಬಂದಿದ್ದ ನೀರಿನ ಕೆಲಸವನ್ನು ಭೂಮಿಗೀತದ ಮೂಲಕ ಸಾಂಸ್ಥಿಕ ಸ್ವರೂಪದಲ್ಲಿ ರಾಜ್ಯಾದ್ಯಂತ ಕೈಗೊಳ್ಳಲು ನಿರ್ಧರಿಸಿದ್ದೇನೆ. ಜತೆಗೆ ಕೃಷಿ, ಪರಿಸರ, ಗ್ರಾಮೀಣ ಬದುಕು ಮತ್ತು ವಿಜ್ಞಾನದ ಕುರಿತಾದ ಕನ್ನಡದಲ್ಲೊಂದು ವಿನೂತನ ಪಾಕ್ಷಿಕ 'ಹಸಿರುವಾಸಿ' ಜೂನ್ ೧೦ರಂದು ಬಿಡುಗಡೆಗೊಳ್ಳಲಿದೆ.

ಸೋಮವಾರ, ಜೂನ್ 5, 2017
ವಿಶ್ವ ಪರಿಸರ ದಿನ ವಿಶೇಷ: ಈ ಜಗವೆಲ್ಲ ನನ್ನದೇ..?
ಪರಿಸರ - ವನ್ಯಜೀವನ ಕುರಿತು ಹಲವು ಬರಹಗಳನ್ನು - ಪುಸ್ತಕಗಳನ್ನು ರಚಿಸಿರುವ, 'ಕಾಡು ಕಲಿಸುವ ಪಾಠ' ಕೃತಿಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ (೨೦೧೩) ಪಡೆದಿರುವ ಲೇಖಕ ಶ್ರೀ ಟಿ. ಎಸ್. ಗೋಪಾಲ್ ಅವರ ಚಿಂತನ ಬರಹಗಳ ಸಂಕಲನ 'ಕೀರುತಿಯ ಬೆನ್ನು ಹತ್ತಿ...' ಸದ್ಯದಲ್ಲೇ ಪ್ರಕಟವಾಗಲಿದೆ. ಈ ಸಂಕಲನದಿಂದ ಆಯ್ದ ಒಂದು ಬರಹವನ್ನು ವಿಶ್ವ ಪರಿಸರ ದಿನದ ಅಂಗವಾಗಿ ಇಜ್ಞಾನ ಡಾಟ್ ಕಾಮ್ ಪ್ರಕಟಿಸುತ್ತಿದೆ.
ಟಿ. ಎಸ್. ಗೋಪಾಲ್
ಮನುಷ್ಯ ಈ ಪ್ರಪಂಚದಲ್ಲಿ ಅವತರಿಸಿ ಕೆಲವು ಸಾವಿರ ವರುಷಗಳು ಕಳೆದಿರಬಹುದೇನೋ. ಆದರೆ, ಅಮೀಬಾದಂಥ ಏಕಾಣುಜೀವಿಯಿಂದ ಹಿಡಿದು ಆನೆಯಂಥ ದೊಡ್ಡಪ್ರಾಣಿಯವರೆಗೆ ಅಸಂಖ್ಯಜೀವಿಗಳು ಅದೆಷ್ಟೋ ಸಾವಿರ, ಅಷ್ಟೇ ಏಕೆ, ಲಕ್ಷಾಂತರ ವರುಷಗಳಿಂದಲೂ ಈ ಭೂಮಿಯ ಮೇಲೆ ಜೀವಿಸಿಕೊಂಡು ಬಂದಿವೆ. ಆದರೂ ಇವೆಲ್ಲಕ್ಕಿಂತ ಈಚಿನವನಾದ ಮನುಷ್ಯನೇ ಎಲ್ಲ ಪ್ರಾಣಿಗಳಲ್ಲಿ ಅತಿ ಬುದ್ಧಿವಂತ ಎಂದು ತಾನೇ ಹೇಳಿಕೊಂಡ. ಇವನ ಈ ಅತಿಬುದ್ಧಿವಂತಿಕೆಯೇ ಉಳಿದೆಲ್ಲ ಪ್ರಾಣಿಗಳ ಅಸ್ತಿತ್ವಕ್ಕೆ ಮಾರಕವಾಗಿಬಿಟ್ಟಿದೆ ಎನ್ನುವುದೇ ವಿಪರ್ಯಾಸ.

ಗುರುವಾರ, ಜೂನ್ 1, 2017
ಒಂದಷ್ಟು ಮಾತು, 'ಫಾಂಟ್' ಕುರಿತು...
ಟಿ. ಜಿ. ಶ್ರೀನಿಧಿ
ಮಾಹಿತಿಯ ಮಹಾಪೂರವೇ ನಮ್ಮನ್ನು ಆವರಿಸಿರುವುದು ಹೊಸ ಸಂಗತಿಯೇನಲ್ಲ. ಅದರಲ್ಲಿ ಪಠ್ಯರೂಪದ ಮಾಹಿತಿಯ ಪಾಲು ಬಹಳ ದೊಡ್ಡದು. ನೀವು ಓದುತ್ತಿರುವ ಪತ್ರಿಕೆ, ಕಂಪ್ಯೂಟರಿನಲ್ಲಿ ತೆರೆದಿರುವ ವೆಬ್‌ಸೈಟು, ಮೊಬೈಲ್ ಪರದೆಯಲ್ಲಿ ಕಾಣಿಸಿಕೊಂಡಿರುವ ಹೊಸ ವಾಟ್ಸ್‌ಆಪ್ ಸಂದೇಶ - ಒಂದಲ್ಲ ಒಂದು ಬಗೆಯಲ್ಲಿ ಪಠ್ಯರೂಪದ ಮಾಹಿತಿ ನಮ್ಮೆದುರು ಕಾಣಿಸಿಕೊಳ್ಳುತ್ತಲೇ ಇರುತ್ತದೆ.
ಈ ಮಾಹಿತಿಯೆಲ್ಲ ನಮಗೆ ತಲುಪಬೇಕಾದರೆ ಅದನ್ನು ಯಾರೋ ಒಬ್ಬರು ಕಂಪ್ಯೂಟರಿನಲ್ಲಿ ಅಥವಾ ಮೊಬೈಲಿನಲ್ಲಿ ಟೈಪಿಸಬೇಕು ತಾನೆ, ಹಾಗೆ ಮಾಡಲು ಅಕ್ಷರಶೈಲಿಗಳು ಬೇಕು.

ಸೋಮವಾರ, ಮೇ 29, 2017
'ಅನ್‌ಬಾಕ್ಸ್‌ಡ್' ಮೊಬೈಲಿಗೂ 'ರೀಫರ್ಬಿಶ್‌ಡ್' ಮೊಬೈಲಿಗೂ ವ್ಯತ್ಯಾಸವೇನು?
ಟಿ. ಜಿ. ಶ್ರೀನಿಧಿ
ಹೊಸ ಮಾದರಿ ಮೊಬೈಲ್ ಫೋನುಗಳನ್ನು ಪರಿಚಯಿಸುವ ವೀಡಿಯೋಗಳನ್ನು ನೀವು ಯೂಟ್ಯೂಬ್‌ನಲ್ಲಿ ನೋಡಿರಬಹುದು. ಇಂತಹ ಬಹುತೇಕ ವೀಡಿಯೋಗಳು ಪ್ರಾರಂಭವಾಗುವುದು ಮೊಬೈಲ್ ಇಟ್ಟಿರುವ ಪೆಟ್ಟಿಗೆಯನ್ನು (ಬಾಕ್ಸ್) ತೆರೆದು ಅದರೊಳಗೆ ಏನೆಲ್ಲ ಇದೆ ಎಂದು ಹೇಳುವ ಮೂಲಕ. ಹಾಗಾಗಿಯೇ ಈ ಪರಿಚಯಗಳನ್ನು 'ಅನ್‌ಬಾಕ್ಸಿಂಗ್' ಎಂದೂ ಕರೆಯುತ್ತಾರೆ.
ಈ ಪರಿಕಲ್ಪನೆಗೆ ಇನ್ನೊಂದು ಆಯಾಮವೂ ಇದೆ. ಆನ್‌ಲೈನ್ ಅಂಗಡಿಗಳಿಂದ ಮೊಬೈಲ್ ತರಿಸುವ ನಾವು ಮನೆಯಲ್ಲೇ ಅನ್‌ಬಾಕ್ಸ್ ಮಾಡುತ್ತೇವೆ: ಪ್ಲಾಸ್ಟಿಕ್ ಹೊರಕವಚವನ್ನು ಹರಿದು, ಪೆಟ್ಟಿಗೆಯ ಮೇಲಿನ ಸೀಲ್ ಒಡೆದು ಮೊಬೈಲನ್ನು ಹೊರತೆಗೆಯುತ್ತೇವೆ.
ಇದರ ನಂತರದಲ್ಲೂ ಮೊಬೈಲನ್ನು ಅಂಗಡಿಗೆ ಮರಳಿಸುವಂತಹ ಸನ್ನಿವೇಶ ಕೆಲವೊಮ್ಮೆ ಎದುರಾಗುತ್ತದೆ.

ಗುರುವಾರ, ಮೇ 25, 2017
ಬ್ಲೂಟೂತ್: ಒಂದು ಪರಿಚಯ
ಟಿ. ಜಿ. ಶ್ರೀನಿಧಿ
ವಿಚಿತ್ರ ಹೆಸರಿನಿಂದ ಗಮನಸೆಳೆಯುವ ತಂತ್ರಜ್ಞಾನಗಳ ಪೈಕಿ 'ಬ್ಲೂಟೂತ್'ಗೆ ವಿಶೇಷ ಸ್ಥಾನವಿದೆ. ಪರಸ್ಪರ ಸಮೀಪದಲ್ಲಿರುವ ವಿದ್ಯುನ್ಮಾನ ಸಾಧನಗಳ ನಡುವೆ ನಿಸ್ತಂತು (ವೈರ್‌ಲೆಸ್) ಸಂವಹನ ಹಾಗೂ ಕಡತಗಳ ವಿನಿಮಯವನ್ನು ಸಾಧ್ಯವಾಗಿಸುವುದು ಈ ತಂತ್ರಜ್ಞಾನದ ವೈಶಿಷ್ಟ್ಯ.
ಮೊದಲಿಗೆ ಮೊಬೈಲ್ ಫೋನುಗಳ ನಡುವೆ ಮಾಹಿತಿ ವಿನಿಮಯ ಮಾಡಿಕೊಳ್ಳಲು ಬ್ಲೂಟೂತ್ ತಂತ್ರಜ್ಞಾನ ವ್ಯಾಪಕವಾಗಿ ಬಳಕೆಯಾಗುತ್ತಿತ್ತು. ಈಚೆಗೆ ವೈ-ಫೈ ತಂತ್ರಜ್ಞಾನ ಆಧರಿತ 'ಶೇರ್‌ಇಟ್'ನಂತಹ ಸೌಲಭ್ಯಗಳು ಬಂದಮೇಲೆ ಆ ಬಗೆಯ ಬಳಕೆ ಕೊಂಚ ಕಡಿಮೆಯಾಗಿದೆ.

ಸೋಮವಾರ, ಮೇ 22, 2017
ಗೂಗಲ್ ಗುರುವಿನ ಒಂದಷ್ಟು ಗುಟ್ಟುಗಳು
ಟಿ. ಜಿ. ಶ್ರೀನಿಧಿ
ವಿಶ್ವವ್ಯಾಪಿ ಜಾಲದಲ್ಲಿ ಏನು ಮಾಹಿತಿ ಬೇಕಿದ್ದರೂ ಅದನ್ನು ಗೂಗಲ್‌ನಲ್ಲಿ ಹುಡುಕಿಕೊಳ್ಳುವುದು ನಮ್ಮೆಲ್ಲರ ಅಭ್ಯಾಸ. ಹೀಗೆ ಹುಡುಕಲು ಹೊರಟಾಗ ನಾವು ಟೈಪ್ ಮಾಡುತ್ತೇವಲ್ಲ ಪದಗಳು, ಅವನ್ನು ಕೀವರ್ಡ್‌ಗಳೆಂದು (ಕನ್ನಡದಲ್ಲಿ 'ಹುಡುಕುಪದ') ಕರೆಯುತ್ತಾರೆ. ನಾವು ಹುಡುಕುತ್ತಿರುವ ವಿಷಯವನ್ನು ಆದಷ್ಟೂ ನಿಖರವಾಗಿ ಪ್ರತಿನಿಧಿಸುವ ಕೀವರ್ಡ್‌ಗಳನ್ನು ಆರಿಸಿಕೊಂಡರೆ ನಮಗೆ ಸರಿಯಾದ ಮಾಹಿತಿ ಸಿಗುವ ಸಾಧ್ಯತೆ ಜಾಸ್ತಿ. ಅಷ್ಟೇ ಅಲ್ಲ, ಪಠ್ಯ-ಚಿತ್ರ-ವೀಡಿಯೋ ಮುಂತಾದ ಹಲವು ರೂಪಗಳ ಪೈಕಿ ನಾವು ಯಾವ ಬಗೆಯ ಮಾಹಿತಿಯನ್ನು ಹುಡುಕುತ್ತಿದ್ದೇವೆ ಎನ್ನುವುದನ್ನೂ ನಾವು ಗೂಗಲ್‌ಗೆ ಹೇಳಬಹುದು.

ಗುರುವಾರ, ಮೇ 18, 2017
ಮೊಬೈಲ್ ಫೋನಿನ ವಿಧವಿಧ ರೂಪ
ಟಿ. ಜಿ. ಶ್ರೀನಿಧಿ
ಮಾರುಕಟ್ಟೆಯಲ್ಲಿ ದೊರಕುವ ಮೊಬೈಲ್ ಫೋನುಗಳಲ್ಲಿ ನೂರೆಂಟು ವಿಧ - ಬೇರೆಬೇರೆ ನಿರ್ಮಾತೃಗಳು, ಬೇರೆಬೇರೆ ಗಾತ್ರ, ಬೇರೆಬೇರೆ ಸವಲತ್ತುಗಳನ್ನು ಇಲ್ಲಿ ನಾವು ಕಾಣಬಹುದು. ವೈವಿಧ್ಯ ಕಡಿಮೆಯಿರುವುದು ಬಹುಶಃ ಮೊಬೈಲುಗಳ ಆಕಾರ ಹಾಗೂ ಸ್ವರೂಪದಲ್ಲಿ ಮಾತ್ರವೇ ಇರಬೇಕು.

ಸೋಮವಾರ, ಮೇ 15, 2017
ಜಿಯೋಫೆನ್ಸಿಂಗ್ ಎಂಬ ಡಿಜಿಟಲ್ ಬೇಲಿ
ಟಿ. ಜಿ. ಶ್ರೀನಿಧಿ
ಹೋಟಲಿನಿಂದ ಊಟ-ತಿಂಡಿ ತರಿಸಲು, ಎಲ್ಲಿಗೋ ಹೋಗಬೇಕಾದಾಗ ಆಟೋ-ಟ್ಯಾಕ್ಸಿ ಕರೆಸಲು ಮೊಬೈಲ್ ಆಪ್ ಬಳಸುವ ಅಭ್ಯಾಸ ನಗರಗಳಲ್ಲಿ ವ್ಯಾಪಕವಾಗಿದೆ. ಇಂತಹ ಆಪ್‌ಗಳನ್ನು ಬಳಸುವಾಗ ನಾವೊಂದು ಕುತೂಹಲದ ಸಂಗತಿಯನ್ನು ಗಮನಿಸಬಹುದು - ಒಂದೇ ಆಪ್‌ನಲ್ಲಿ ನಮ್ಮ ಮನೆ ವಿಳಾಸ ಹಾಕಿದಾಗ ದೊರಕುವ ಹೋಟಲುಗಳ ಪಟ್ಟಿಗೂ ಪಕ್ಕದ ಬೀದಿಗೆ ಊಟ ತಂದುಕೊಡಬಲ್ಲ ಹೋಟಲುಗಳ ಪಟ್ಟಿಗೂ ನಡುವೆ ಕೆಲವೊಮ್ಮೆ ವ್ಯತ್ಯಾಸಗಳಿರುತ್ತವೆ;

ಗುರುವಾರ, ಮೇ 11, 2017
ಹೂ ಇಸ್ WHOIS?
ಟಿ. ಜಿ. ಶ್ರೀನಿಧಿ
ವಿಶ್ವವ್ಯಾಪಿ ಜಾಲದಲ್ಲಿ (ವರ್ಲ್ಡ್‌ವೈಡ್ ವೆಬ್) ಅಪಾರ ಸಂಖ್ಯೆಯ ಜಾಲತಾಣಗಳಿವೆ. ಹೊರಪ್ರಪಂಚದ ಸೈಟುಗಳಂತೆಯೇ ವೆಬ್‌ಲೋಕದ ಈ ಸೈಟುಗಳಿಗೂ ಮಾಲೀಕರಿರುತ್ತಾರೆ. ಮನೆಕಟ್ಟಲು ಸೈಟು ಕೊಳ್ಳುವಾಗ ಮಾಡುವಂತೆ ಜಾಲತಾಣವನ್ನು ನೋಂದಾಯಿಸುವಾಗಲೂ ಅದನ್ನು ಕೊಳ್ಳುತ್ತಿರುವವರು ಯಾರು ಎನ್ನುವುದರ ಬಗ್ಗೆ ಮಾಹಿತಿ ನೀಡಬೇಕಾದ್ದು ಕಡ್ಡಾಯ.
ಜಾಲತಾಣಗಳನ್ನು ನಮ್ಮ ಹೆಸರಿಗೆ ನೋಂದಾಯಿಸಿಕೊಡುವ 'ರಿಜಿಸ್ಟ್ರಾರ್'ಗಳೆಂಬ ಸಂಸ್ಥೆಗಳು 'ದಿ ಇಂಟರ್‌ನೆಟ್ ಕಾರ್ಪೊರೇಶನ್ ಫಾರ್ ಅಸೈನ್ಡ್ ನೇಮ್ಸ್ ಆಂಡ್ ನಂಬರ್ಸ್' (ಐಕ್ಯಾನ್) ಎಂಬ ಜಾಗತಿಕ ಸಂಘಟನೆಯ ಪರವಾಗಿ ಈ ಮಾಹಿತಿಯನ್ನು ಸಂಗ್ರಹಿಸಿ ಶೇಖರಿಸಿಡುತ್ತವೆ.

ಸೋಮವಾರ, ಮೇ 8, 2017
ಇದು ಜೂಮ್ ಸಮಾಚಾರ!
ಟಿ. ಜಿ. ಶ್ರೀನಿಧಿ
ಕ್ಯಾಮೆರಾಗಳ ಬಗ್ಗೆ ಮಾತನಾಡುವಾಗ ಸಾಮಾನ್ಯವಾಗಿ ಪ್ರಸ್ತಾಪವಾಗುವ ವಿಷಯ 'ಜೂಮ್'. ಕ್ಯಾಮೆರಾ ಮುಂದಿನ ದೃಶ್ಯದ ನಿರ್ದಿಷ್ಟ ಭಾಗವನ್ನು ಹಿಗ್ಗಿಸಿ ತೋರಿಸುವ ಸೌಲಭ್ಯ ಇದು.
ಜೂಮ್‌ನಲ್ಲಿ ಎರಡು ವಿಧ - ಆಪ್ಟಿಕಲ್ ಜೂಮ್ ಹಾಗೂ ಡಿಜಿಟಲ್ ಜೂಮ್.

ಗುರುವಾರ, ಮೇ 4, 2017
ಹೆದರಿಸುವ ವ್ಯವಹಾರ
ಟಿ. ಜಿ. ಶ್ರೀನಿಧಿ
"ನಿಮ್ಮ ಕಂಪ್ಯೂಟರಿಗೆ ವೈರಸ್ ಬಂದಿದೆ", "ನಿಮ್ಮ ಫೋನಿನ ಮಾಹಿತಿ ಸುರಕ್ಷಿತವಾಗಿಲ್ಲ" ಎಂದೆಲ್ಲ ಹೆದರಿಸುವ ಜಾಹೀರಾತುಗಳು ಹಲವು ಜಾಲತಾಣಗಳಲ್ಲಿ ಕಾಣಿಸಿಕೊಳ್ಳುವುದನ್ನು ನೀವು ಗಮನಿಸಿರಬಹುದು. ನಾವು ಬಳಸುತ್ತಿರುವ ಆಂಟಿವೈರಸ್ ತಂತ್ರಾಂಶ ಇಂತಹುದೊಂದು ಸಂದೇಶ ಪ್ರದರ್ಶಿಸಿದರೆ ಓಕೆ, ಆದರೆ ಯಾವುದೋ ಜಾಲತಾಣದಲ್ಲಿ ಕಾಣಿಸಿಕೊಳ್ಳುವ ಜಾಹೀರಾತಿಗೆ ನಮ್ಮ ಕಂಪ್ಯೂಟರಿನ ಆರೋಗ್ಯ ಕೆಟ್ಟಿದ್ದು ಗೊತ್ತಾಗುವುದು ಹೇಗೆ?

ಸೋಮವಾರ, ಮೇ 1, 2017
ಕೀಬೋರ್ಡ್ ಕೆಲಸಮಾಡುವುದು ಹೇಗೆ?
ಟಿ. ಜಿ. ಶ್ರೀನಿಧಿ
ಕಂಪ್ಯೂಟರ್ ಬಳಕೆದಾರರಿಗೆಲ್ಲ ಚಿರಪರಿಚಿತ ಯಂತ್ರಾಂಶ ಕೀಬೋರ್ಡ್. ಕೀಲಿಗಳನ್ನು ಒತ್ತುವ ಮೂಲಕ ಬಳಕೆದಾರರು ಹೇಳಹೊರಟಿರುವುದನ್ನು ಕಂಪ್ಯೂಟರಿಗೆ ತಲುಪಿಸುವುದು ಈ ಸಾಧನದ ಜವಾಬ್ದಾರಿ. ನೋಡಲು ಅದೆಷ್ಟು ಸರಳವೆಂದು ತೋರಿದರೂ ಕೀಬೋರ್ಡ್ ಮಾಡುವ ಕೆಲಸ ಸಾಕಷ್ಟು ಸಂಕೀರ್ಣವಾದ್ದು.

ಗುರುವಾರ, ಏಪ್ರಿಲ್ 27, 2017
ಡಿಜಿಟಲ್ ಸಿಗ್ನೇಚರ್: ಇದು ಇ-ಲೋಕದ ಆಟೋಗ್ರಾಫ್!
ಟಿ. ಜಿ. ಶ್ರೀನಿಧಿ
ಪತ್ರಗಳು, ಕಡತಗಳು ಭೌತಿಕ ರೂಪದಲ್ಲಿದ್ದಾಗ ಅವುಗಳ ಅಧಿಕೃತತೆಯನ್ನು ಪರಿಶೀಲಿಸುವುದು ಸುಲಭವಿತ್ತು. ಪತ್ರದ ಕೊನೆಯಲ್ಲಿ ಯಾರ ಸಹಿಯಿದೆ, ಜೊತೆಗಿರುವ ಮೊಹರಿನಲ್ಲಿ ಅವರ ಹುದ್ದೆಯ ಯಾವ ವಿವರಗಳಿವೆ ಎನ್ನುವುದನ್ನು ನೋಡಿದರೆ ಪತ್ರ ಅಧಿಕೃತವೋ ಅಲ್ಲವೋ ಎನ್ನುವುದನ್ನು ನಾವು ಅಂದಾಜಿಸಬಹುದಿತ್ತು.
ಆದರೆ ಈಗ ಪತ್ರಗಳು - ದಾಖಲೆಗಳು ಭೌತಿಕ ರೂಪದಲ್ಲಿರುವುದೇ ಅಪರೂಪ. ಇಂತಹ ಕಡತಗಳು ಅಧಿಕೃತವೋ ಅಲ್ಲವೋ ಎಂದು ತಿಳಿಯುವುದು ಹೇಗೆ?

ಬುಧವಾರ, ಏಪ್ರಿಲ್ 26, 2017
ಇನ್ನೊಂದು ವರ್ಷ, ಇನ್ನಷ್ಟು ಕನಸು
ಇಜ್ಞಾನ ಜಾಲತಾಣ ಶುರುವಾದದ್ದು ೨೦೦೭ರ ಏಪ್ರಿಲ್ ೨೬ರಂದು. ಹತ್ತು ವರ್ಷ ಪೂರೈಸಿ ಹನ್ನೊಂದಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ನಿಮ್ಮೆಲ್ಲರ ಪ್ರೋತ್ಸಾಹಕ್ಕಾಗಿ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳು. ಮುಂಬರುವ ವರ್ಷಕ್ಕೆ ಇಜ್ಞಾನ ಅನೇಕ ಹೊಸ ಕಾರ್ಯಕ್ರಮಗಳನ್ನು ಯೋಜಿಸಿದೆ, ನಮಗೆ ನಿಮ್ಮ ಬೆಂಬಲ ಹೀಗೆಯೇ ಇರಲಿ!
ಸೋಮವಾರ, ಏಪ್ರಿಲ್ 24, 2017
ಪ್ಲಗ್-ಇನ್ ಎಂದರೇನು?
ಟಿ. ಜಿ. ಶ್ರೀನಿಧಿ
ತಂತ್ರಾಂಶಗಳು ಎಷ್ಟೆಲ್ಲ ಕೆಲಸ ಮಾಡಿದರೂ ನಮಗೆ ಅದರಲ್ಲಿ ಒಂದಲ್ಲ ಒಂದು ಕೊರತೆ ಕಾಣಸಿಗುವುದು ಸಾಮಾನ್ಯ. ಬ್ರೌಸರ್ ವಿಷಯವನ್ನೇ ತೆಗೆದುಕೊಳ್ಳಿ - ಬೇರೆಬೇರೆ ಜಾಲತಾಣಗಳ ಸೇವೆಯನ್ನು, ನಮ್ಮ ಕಂಪ್ಯೂಟರಿನಲ್ಲಿರುವ ಇತರ ತಂತ್ರಾಂಶಗಳನ್ನು ಬ್ರೌಸರ್ ಕಿಟಕಿಯಿಂದಲೇ ಬಳಸುವಂತಿದ್ದರೆ ಎಷ್ಟು ಚೆಂದ ಅಲ್ಲವೇ?

ಶುಕ್ರವಾರ, ಏಪ್ರಿಲ್ 21, 2017
ಕಂಪ್ರೆಶನ್ ಕರಾಮತ್ತು
ಟಿ. ಜಿ. ಶ್ರೀನಿಧಿ
ಡಿಜಿಟಲ್ ರೂಪದ ಪ್ರತಿ ಕಡತಕ್ಕೂ ಅದರಲ್ಲಿರುವ ಮಾಹಿತಿಯ ಪ್ರಮಾಣಕ್ಕೆ ಅನುಗುಣವಾಗಿ ಒಂದು ನಿರ್ದಿಷ್ಟ ಗಾತ್ರ ಇರುತ್ತದೆ. ಬಿಟ್-ಬೈಟ್‌ಗಳಲ್ಲಿ ಅಳೆಯುವುದು ಈ ಗಾತ್ರವನ್ನೇ. ಕಡತದ ಗಾತ್ರ ದೊಡ್ಡದಾದರೆ ಅದನ್ನು ಉಳಿಸಿಡಲು ಹೆಚ್ಚಿನ ಸ್ಥಳಾವಕಾಶ ಬೇಕು. ನಾವೇ ಉಳಿಸಿಟ್ಟುಕೊಳ್ಳುವುದಾದರೆ ಸರಿ; ಆದರೆ ಬೇರೆಯವರಿಗೆ ಕಳುಹಿಸಬೇಕೆಂದರೆ ತೀರಾ ದೊಡ್ಡ ಕಡತಗಳನ್ನು ಕಳುಹಿಸುವುದು ಕಷ್ಟ. ಇದಕ್ಕಾಗಿ ಬಳಕೆಯಾಗುವುದೇ ಕಡತದ ಗಾತ್ರವನ್ನು ಕಡಿಮೆಮಾಡುವ 'ಕಂಪ್ರೆಶನ್' ತಂತ್ರ. ಸಾಮಾನ್ಯ ಬಳಕೆಯಲ್ಲಿ "ಜಿಪ್ ಮಾಡುವುದು" ಎಂದು ಗುರುತಿಸುವುದು ಇದನ್ನೇ.

ಸೋಮವಾರ, ಏಪ್ರಿಲ್ 17, 2017
ಬಾಟ್‍ಗಳ ಲೋಕದಲ್ಲಿ...
ಟಿ. ಜಿ. ಶ್ರೀನಿಧಿ
ಹಲವು ಕೆಲಸಗಳನ್ನು ಸ್ವಯಂಚಾಲಿತವಾಗಿ ಮಾಡಬಲ್ಲ ಯಂತ್ರಗಳನ್ನು ರೋಬಾಟ್‌ಗಳೆಂದು ಕರೆಯುವುದು ನಮಗೆ ಗೊತ್ತಲ್ಲ, ಅಂತರಜಾಲದ ಲೋಕದಲ್ಲೂ ರೋಬಾಟ್‌ಗಳಿವೆ. ಕಣ್ಣಿಗೆ ಕಾಣುವ ರೋಬಾಟ್‌ಗಳು ಹಲವು ಯಂತ್ರಾಂಶಗಳ ಜೋಡಣೆಯಿಂದ ರೂಪುಗೊಂಡಿದ್ದರೆ ಜಾಲಜಗತ್ತಿನ ರೋಬಾಟ್‌ಗಳು ಬರಿಯ ತಂತ್ರಾಂಶಗಳಷ್ಟೇ!
ಇವುಗಳನ್ನು 'ಬಾಟ್'ಗಳೆಂದು ಗುರುತಿಸುವುದು ಸಾಮಾನ್ಯ ಅಭ್ಯಾಸ. ಬಾಟ್ ಎನ್ನುವುದು 'ರೋಬಾಟ್' ಎಂಬ ಹೆಸರಿನ ಹ್ರಸ್ವರೂಪ.

ಗುರುವಾರ, ಏಪ್ರಿಲ್ 13, 2017
ಅನಗತ್ಯ ಸಂದೇಶಗಳನ್ನು ತಪ್ಪಿಸೋಣ!
ಟಿ. ಜಿ. ಶ್ರೀನಿಧಿ
ಇಮೇಲ್, ಫೇಸ್‌ಬುಕ್, ವಾಟ್ಸ್‌ಆಪ್‌ಗಳೆಲ್ಲವುದರ ಮೂಲಕ ಸಂದೇಶಗಳನ್ನು ಕಳುಹಿಸುವುದು ಬಹಳ ಸುಲಭ. ಒಂದು ಸಂದೇಶವನ್ನು ಒಬ್ಬರಿಗಷ್ಟೇ ಏಕೆ, ನಮ್ಮ ಅಡ್ರೆಸ್ ಬುಕ್‌ನಲ್ಲಿರುವ ಅಷ್ಟೂ ವಿಳಾಸಗಳಿಗೆ - ಮೊಬೈಲ್ ಸಂಖ್ಯೆಗಳಿಗೆ ಥಟ್ಟನೆ ಕಳುಹಿಸಿಬಿಡಬಹುದು.
ಈ ಸೌಕರ್ಯ ಬಹು ಉಪಯುಕ್ತ, ಸರಿ. ಆದರೆ ಹಲವು ಸಂದರ್ಭಗಳಲ್ಲಿ ಅನಪೇಕ್ಷಿತ ಹಾಗೂ ನಿರುಪಯುಕ್ತ (ಕೆಲವೊಮ್ಮೆ ಅಸಂಬದ್ಧ) ಸಂದೇಶಗಳನ್ನು ಹಂಚಲು ಈ ಮಾಧ್ಯಮಗಳು ಬಳಕೆಯಾಗುತ್ತಿರುವುದನ್ನು ನಾವು ನೋಡಬಹುದು. ಇದನ್ನು ತಪ್ಪಿಸಲು ಹಲವು ಮಾರ್ಗಗಳಿವೆ.

ಸೋಮವಾರ, ಏಪ್ರಿಲ್ 10, 2017
ಕಳೆದ ಮೊಬೈಲು ಹುಡುಕೋದು ಹೇಗೆ?
ಟಿ. ಜಿ. ಶ್ರೀನಿಧಿ
ಮೊಬೈಲ್ ಫೋನುಗಳು ನಮ್ಮ ಜೀವನದ ಅವಿಭಾಜ್ಯ ಅಂಗವೇ ಆಗಿಬಿಟ್ಟಿವೆಯಲ್ಲ, ಹಾಗಾಗಿ ಅವನ್ನು ನಾವು ಹೋದಲ್ಲೆಲ್ಲ ಕೊಂಡೊಯ್ಯುವ ಅಭ್ಯಾಸವೂ ಸಾಮಾನ್ಯವಾಗಿದೆ. ಕೆಲಸದ ಗಡಿಬಿಡಿಯಲ್ಲಿ ಫೋನನ್ನು ಎಲ್ಲೋ ಮರೆತು ಪರದಾಡುವುದೂ ಅಪರೂಪವೇನಲ್ಲ. ಹೀಗೆ ಕಾಣೆಯಾದ ಫೋನನ್ನು ಹುಡುಕುವುದು ಹೇಗೆ?
ಇದಕ್ಕೆ ಹಲವು ಮಾರ್ಗಗಳಿವೆ.

ಗುರುವಾರ, ಏಪ್ರಿಲ್ 6, 2017
ಎಲ್ಲರ ಫೇವರಿಟ್ ಈ 'ಫೇವ್‌ಐಕನ್'!
ಟಿ. ಜಿ. ಶ್ರೀನಿಧಿ
ಅಂತರಜಾಲ ಸಂಪರ್ಕ ಬಳಸುವಾಗ ನಾವು ಒಂದಾದ ಮೇಲೆ ಒಂದರಂತೆ ಜಾಲತಾಣಗಳನ್ನು ತೆರೆಯುತ್ತಾ ಹೋಗುತ್ತೇವೆ. ಹಾಗೆ ತೆರೆದ ಜಾಲತಾಣಗಳು ಬೇರೆಬೇರೆ ಬ್ರೌಸರ್ ಕಿಟಕಿಗಳಲ್ಲೋ, ಒಂದೇ ಕಿಟಕಿಯ ವಿಭಿನ್ನ ಟ್ಯಾಬ್‌ಗಳಲ್ಲೋ ಕಾಣಿಸಿಕೊಳ್ಳುತ್ತವೆ ಎನ್ನುವುದೂ ನಮಗೆ ಗೊತ್ತು.
ಇಂತಹ ಪ್ರತಿಯೊಂದು ಕಿಟಕಿಯ ಮೇಲ್ಭಾಗದಲ್ಲೂ (ಬ್ರೌಸರಿನ ಟೈಟಲ್ ಬಾರ್‌ನಲ್ಲಿ) ನಾವು ತೆರೆದಿರುವ ತಾಣದ ಬಗ್ಗೆ ಕೆಲವು ಪದಗಳು ಮೂಡಿಬರುತ್ತವೆ. ಈ ಹೆಸರಿನ ಪಕ್ಕದಲ್ಲೇ ಪುಟ್ಟದೊಂದು ಚಿತ್ರವೂ ಇರುತ್ತದೆ.

ಸೋಮವಾರ, ಏಪ್ರಿಲ್ 3, 2017
ವೈ-ಫೈ ವಿಷಯ
ಟಿ. ಜಿ. ಶ್ರೀನಿಧಿ
ವೈರು - ಕೇಬಲ್ಲುಗಳನ್ನು ಜೋಡಿಸುವ ಗೊಡವೆಯಿಲ್ಲದೆ ಸರಾಗವಾಗಿ ಅಂತರಜಾಲ ಸಂಪರ್ಕ ನೀಡಿಬಿಡುವ ವೈ-ಫೈ ತಂತ್ರಜ್ಞಾನದ ಪರಿಚಯ ನಮಗೆ ಚೆನ್ನಾಗಿಯೇ ಇದೆ. ರೇಡಿಯೋ ಅಲೆಗಳ ಮೂಲಕ ತನ್ನ ಸಂಪರ್ಕದಲ್ಲಿರುವ ಸಾಧನಗಳಿಗೆ ಅಂತರಜಾಲ ಸಂಪರ್ಕ ಒದಗಿಸಿಕೊಡುವುದು ಈ ತಂತ್ರಜ್ಞಾನದ ಹೆಗ್ಗಳಿಕೆ.
ಅಂತರಜಾಲ ಸಂಪರ್ಕ ನಮ್ಮ ಮನೆಯವರೆಗೆ ಹಲವು ವಿಧಗಳಲ್ಲಿ ತಲುಪಬಹುದು. ಅದು ನಮ್ಮ ಸಾಧನಗಳಿಗೆ ಅರ್ಥವಾಗುವ ರೂಪಕ್ಕೆ ಬದಲಾಗುವುದು ಮೋಡೆಮ್ ಮೂಲಕ. ಈ ಸಂಕೇತಗಳನ್ನು ವೈ-ಫೈ ರೂಪಕ್ಕೆ ತರುವುದು ರೌಟರ್ ಎನ್ನುವ ಸಾಧನದ ಕೆಲಸ (ಬಹಳಷ್ಟು ಸನ್ನಿವೇಶಗಳಲ್ಲಿ ಮೋಡೆಮ್, ರೌಟರ್ ಎರಡೂ ಸಾಧನಗಳ ಕೆಲಸವನ್ನು ಒಂದೇ ಯಂತ್ರ ಮಾಡುತ್ತದೆ). ಈ ಸಾಧನದಿಂದ ಹೊರಹೊಮ್ಮುವ ಸಂಕೇತಗಳನ್ನು ಬಳಸಲು ಶಕ್ತವಾದ ಯಾವುದೇ ಸಾಧನ ಅಂತರಜಾಲ ಸಂಪರ್ಕವನ್ನು ಪಡೆದುಕೊಳ್ಳಬಹುದು. ಕಂಪ್ಯೂಟರ್ - ಟ್ಯಾಬ್ಲೆಟ್ - ಮೊಬೈಲ್ ಮಾತ್ರವೇ ಅಲ್ಲ, ಸ್ಮಾರ್ಟ್ ಟೀವಿ - ಸ್ಮಾರ್ಟ್ ವಾಚ್ - ಸ್ಟ್ರೀಮಿಂಗ್ ಡಿವೈಸ್‌ಗಳಂತಹ ಇನ್ನೂ ಅನೇಕ ಸಾಧನಗಳೂ ವೈ-ಫೈ ಬಳಸುತ್ತವೆ.

ಗುರುವಾರ, ಮಾರ್ಚ್ 30, 2017
ಇದೇನಿದು ಹೆಚ್‌ಟಿಟಿಪಿ?
ಟಿ. ಜಿ. ಶ್ರೀನಿಧಿ
ಬ್ರೌಸರ್ ತಂತ್ರಾಂಶ ಬಳಸಿ ಜಾಲತಾಣಗಳನ್ನು ವೀಕ್ಷಿಸುವುದು ನಮ್ಮೆಲ್ಲರಿಗೂ ಗೊತ್ತಿರುವ ವಿಷಯ. ಹಾಗೆ ಬ್ರೌಸರಿನಲ್ಲಿ ತೆರೆದುಕೊಳ್ಳುವ ಬಹುತೇಕ ಜಾಲತಾಣಗಳ ವಿಳಾಸ 'http://' ಎನ್ನುವ ಅಕ್ಷರಗಳಿಂದ ಪ್ರಾರಂಭವಾಗುತ್ತದೆ. ಇಲ್ಲಿ 'ಹೆಚ್‌ಟಿಟಿಪಿ' ಎನ್ನುವುದು 'ಹೈಪರ್‌ಟೆಕ್ಸ್ಟ್ ಟ್ರಾನ್ಸ್‌ಫರ್ ಪ್ರೋಟೋಕಾಲ್' ಎಂಬ ಹೆಸರಿನ ಹ್ರಸ್ವರೂಪ.

ಸೋಮವಾರ, ಮಾರ್ಚ್ 27, 2017
ಬ್ಲ್ಯಾಕ್‌ಲಿಸ್ಟ್ ಮತ್ತು ವೈಟ್‌ಲಿಸ್ಟ್
ಟಿ. ಜಿ. ಶ್ರೀನಿಧಿ
ಕಾಮಗಾರಿಯೊಂದರ ಗುಣಮಟ್ಟದ ಬಗ್ಗೆ ಗಲಾಟೆಯಾದಾಗ ಸಂಬಂಧಪಟ್ಟ ಗುತ್ತಿಗೆದಾರರನ್ನೋ ಕಚ್ಚಾಸಾಮಗ್ರಿ ಪೂರೈಸಿದವರನ್ನೋ ಕಪ್ಪುಪಟ್ಟಿಗೆ ಸೇರಿಸಲಾಗುವುದು ಎನ್ನುವ ಹೇಳಿಕೆ ಸಾಮಾನ್ಯವಾಗಿ ಕೇಳಸಿಗುತ್ತದೆ.
ಕಪ್ಪುಪಟ್ಟಿ ಎಂಬ ಈ ಹೆಸರಿನ ಮೂಲ ಇಂಗ್ಲಿಷಿನ 'ಬ್ಲ್ಯಾಕ್‌ಲಿಸ್ಟ್'. ಯಾವುದೇ ಉದ್ದೇಶಕ್ಕೆ ಏನನ್ನು ಬಳಸಬಾರದು ಎಂದು ಸೂಚಿಸುವುದು ಈ ಪಟ್ಟಿಯ ಕೆಲಸ. ಗುತ್ತಿಗೆದಾರರ ಉದಾಹರಣೆಯನ್ನೇ ತೆಗೆದುಕೊಂಡರೆ ಮುಂದಿನ ಕಾಮಗಾರಿಯ ಗುತ್ತಿಗೆಯನ್ನು ಕಪ್ಪುಪಟ್ಟಿಯಲ್ಲಿಲ್ಲದವರಿಗೆ ಮಾತ್ರವೇ ಕೊಡುವುದು ಸಾಧ್ಯ.

ಗುರುವಾರ, ಮಾರ್ಚ್ 23, 2017
ಟಚ್ ಗೊತ್ತು, ಇದೇನಿದು 'ಮಲ್ಟಿಟಚ್'?
ಟಿ. ಜಿ. ಶ್ರೀನಿಧಿ
ಸ್ಪರ್ಶಸಂವೇದಿ ಪರದೆ, ಅರ್ಥಾತ್ ಟಚ್‌ಸ್ಕ್ರೀನ್‌ನ ಪರಿಚಯ ನಮ್ಮೆಲ್ಲರಿಗೂ ಇದೆ. ಸ್ಮಾರ್ಟ್‌ಫೋನುಗಳಲ್ಲಿ, ಟ್ಯಾಬ್ಲೆಟ್ಟಿನಲ್ಲಿ, ಎಟಿಎಂಗಳಲ್ಲಿ ನಾವು ಇವನ್ನು ಬಳಸುತ್ತಲೇ ಇರುತ್ತೇವೆ.
ಯಾವುದೇ ಟಚ್‌ಸ್ಕ್ರೀನನ್ನು ನಿರ್ದಿಷ್ಟ ಸ್ಥಳದಲ್ಲಿ ಮುಟ್ಟಿದರೆ ಅದು ಪೂರ್ವನಿರ್ಧಾರಿತ ರೀತಿಯಲ್ಲಿ ಪ್ರತಿಕ್ರಿಯೆ ನೀಡುವುದು (ಉದಾ: ಐಕನ್ ಸ್ಪರ್ಶಿಸಿದರೆ ಆಪ್ ತೆರೆದುಕೊಳ್ಳುವುದು) ನಮಗೆ ಗೊತ್ತು.

ಸೋಮವಾರ, ಮಾರ್ಚ್ 20, 2017
ಟಚ್ ಸ್ಕ್ರೀನ್ ಕೆಲಸಮಾಡುವುದು ಹೇಗೆ?
ಟಿ. ಜಿ. ಶ್ರೀನಿಧಿ
ಮೊಬೈಲ್ ಫೋನಿನಿಂದ ಕಾರಿನ ಮ್ಯೂಸಿಕ್ ಸಿಸ್ಟಂವರೆಗೆ, ಎಟಿಎಂನಿಂದ ಏರ್‌ಪೋರ್ಟಿನ ಚೆಕಿನ್ ಯಂತ್ರದವರೆಗೆ ಈಗ ಎಲ್ಲಿ ನೋಡಿದರೂ ಟಚ್ ಸ್ಕ್ರೀನ್‌ನದೇ ಕಾರುಬಾರು. ಕೀಬೋರ್ಡ್ ಕೀಲಿಗಳನ್ನು ಕುಟ್ಟುವ ಬದಲು ಪರದೆಯ ಮೇಲಿನ ಅಕ್ಷರಗಳನ್ನು ಮುಟ್ಟಿದರೆ ಸಾಕು, ನಮ್ಮ ಕೆಲಸ ಸಲೀಸಾಗಿ ಮುಗಿಯುತ್ತದೆ.
ಬಹುತೇಕ ಮೊಬೈಲ್ ಫೋನ್ ಹಾಗೂ ಟ್ಯಾಬ್ಲೆಟ್ಟುಗಳಲ್ಲಿ ಬಳಕೆಯಾಗುವ ಸ್ಪರ್ಶಸಂವೇದಿ ಪರದೆಗಳನ್ನು 'ಕೆಪಾಸಿಟಿವ್' ಟಚ್‌ಸ್ಕ್ರೀನುಗಳೆಂದು ಕರೆಯುತ್ತಾರೆ.

ಶುಕ್ರವಾರ, ಮಾರ್ಚ್ 17, 2017
ನೆಟಿಕೆಟ್: ಇದು ಜಾಲಲೋಕದ ಶಿಷ್ಟಾಚಾರ
ಟಿ. ಜಿ. ಶ್ರೀನಿಧಿ
ಶಾಲೆ, ಕಚೇರಿ, ಸಮಾರಂಭ, ಸಾರ್ವಜನಿಕ ಸ್ಥಳ ಮುಂತಾದ ಬೇರೆಬೇರೆ ಸಂದರ್ಭ-ಸ್ಥಳಗಳಲ್ಲಿ ನಮ್ಮ ವರ್ತನೆ ಹೀಗೆಯೇ ಇರಬೇಕು ಎಂದು ಸಮಾಜ ಅಪೇಕ್ಷಿಸುತ್ತದೆ. ಈ ಅಪೇಕ್ಷೆಗಳನ್ನು ನಿರ್ದೇಶಿಸುವುದು ಶಿಷ್ಟಾಚಾರ, ಅಂದರೆ ಎಟಿಕೆಟ್‌ನ ಕೆಲಸ.
ಜಾಲಲೋಕದಲ್ಲೂ ನಾವು ಪಾಲಿಸಬೇಕಾದ ಇಂತಹುದೇ ಶಿಷ್ಟಾಚಾರ ಇದೆ. ಇಮೇಲ್ ಹಾಗೂ ಮೊಬೈಲ್ ಸಂದೇಶಗಳನ್ನು ಕಳಿಸುವಾಗ, ಸಮಾಜಜಾಲಗಳಲ್ಲಿ ಇತರರೊಡನೆ ಸಂವಹನ ನಡೆಸುವಾಗ ನಮ್ಮ ವರ್ತನೆ ಹೇಗಿರಬೇಕು ಎಂದು ತಿಳಿಸುವ ಈ ಶಿಷ್ಟಾಚಾರವನ್ನು 'ನೆಟಿಕೆಟ್' ಎಂದು ಕರೆಯುತ್ತಾರೆ. ನೆಟ್ ಹಾಗೂ ಎಟಿಕೆಟ್ ಎಂಬ ಪದಗಳ ಜೋಡಣೆಯಿಂದ ಸೃಷ್ಟಿಯಾಗಿರುವ ಹೆಸರು ಇದು.

ಬುಧವಾರ, ಮಾರ್ಚ್ 15, 2017
ಏನಿದು 'ಫ್ಲೈಟ್ ಮೋಡ್'?
ಟಿ. ಜಿ. ಶ್ರೀನಿಧಿ
ಇಂದಿನ ಬಹುತೇಕ ಮೊಬೈಲ್ ಫೋನುಗಳಲ್ಲಿ 'ಫ್ಲೈಟ್ ಮೋಡ್' ಎನ್ನುವುದೊಂದು ಸೌಲಭ್ಯವಿರುತ್ತದೆ. ವಿಮಾನದಲ್ಲಿ ಪ್ರಯಾಣಿಸುವಾಗ ನಿಮ್ಮ ಮೊಬೈಲನ್ನು ಫ್ಲೈಟ್ ಮೋಡ್‌ಗೆ ಬದಲಾಯಿಸಿ ಎಂದು ಹೇಳುವುದನ್ನೂ ನೀವು ಕೇಳಿರಬಹುದು.
ಮೊಬೈಲಿನಿಂದ ಹೊರಡುವ ಅಥವಾ ಅದನ್ನು ತಲುಪುವ ರೇಡಿಯೋ ತರಂಗಾಂತರದ (radio-frequency) ಸಂಕೇತಗಳನ್ನು ನಿರ್ಬಂಧಿಸುವುದು ಫ್ಲೈಟ್ ಮೋಡ್‌ನ ಉದ್ದೇಶ.

ಸೋಮವಾರ, ಮಾರ್ಚ್ 13, 2017
ಅಪ್‌ಲೋಡ್ ಮತ್ತು ಡೌನ್‌ಲೋಡ್
ಟಿ. ಜಿ. ಶ್ರೀನಿಧಿ
ವಿಶ್ವವ್ಯಾಪಿ ಜಾಲದಲ್ಲಿ ಓಡಾಡುವಾಗ ನಾವು ಪ್ರತಿ ಕ್ಷಣವೂ ಒಂದಲ್ಲ ಒಂದು ರೀತಿಯಲ್ಲಿ ಮಾಹಿತಿಯನ್ನು ಬಳಸುತ್ತೇವೆ. ಬಹಳಷ್ಟು ಸಾರಿ ಇತರೆಡೆಗಳಿಂದ ಮಾಹಿತಿ ಪಡೆದುಕೊಂಡರೆ ಇನ್ನು ಕೆಲವೊಮ್ಮೆ ನಾವೇ ಮಾಹಿತಿಯನ್ನು ಇನ್ನೊಂದೆಡೆಗೆ ರವಾನಿಸುತ್ತೇವೆ. ಈ ಪೈಕಿ ಇತರೆಡೆಗಳಿಂದ ಮಾಹಿತಿ ಪಡೆದುಕೊಳ್ಳುವ ಪ್ರಕ್ರಿಯೆ 'ಡೌನ್‌ಲೋಡ್' ಎಂದು ಕರೆಸಿಕೊಂಡರೆ ನಾವು ಮಾಹಿತಿ ಪಡೆದುಕೊಳ್ಳುವ ಕೆಲಸವನ್ನು 'ಅಪ್‌ಲೋಡ್' ಎಂದು ಗುರುತಿಸಲಾಗುತ್ತದೆ.
ಡೌನ್‌ಲೋಡ್ ಪ್ರಕ್ರಿಯೆಯಲ್ಲಿ ಬೇರೊಂದು ಕಡೆಯಲ್ಲಿರುವ ಮಾಹಿತಿಯ ಒಂದು ಪ್ರತಿ ನಮ್ಮ ಕಂಪ್ಯೂಟರ್, ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್ಟಿಗೆ ಬರುತ್ತದೆ. ಇದೇರೀತಿ ನಮ್ಮ ಮಾಹಿತಿಯ ಒಂದು ಪ್ರತಿಯನ್ನು ಬೇರೊಂದು ಕಂಪ್ಯೂಟರಿಗೆ ವರ್ಗಾಯಿಸುವುದು ಅಪ್‌ಲೋಡ್ ಪ್ರಕ್ರಿಯೆಯ ಕೆಲಸ.

ಶುಕ್ರವಾರ, ಮಾರ್ಚ್ 10, 2017
ಸಾಫ್ಟ್‌ವೇರ್‌ನಲ್ಲಿ ಎಷ್ಟು ವಿಧ?
ಟಿ. ಜಿ. ಶ್ರೀನಿಧಿ
ಕಂಪ್ಯೂಟರಿನಲ್ಲಿ - ಸ್ಮಾರ್ಟ್‌ಫೋನಿನಲ್ಲಿ ವಿವಿಧ ಕೆಲಸಗಳಿಗಾಗಿ ನಾವು ಹಲವು ಬಗೆಯ ತಂತ್ರಾಂಶಗಳನ್ನು ಬಳಸುತ್ತೇವೆ. ಇಂತಹ ತಂತ್ರಾಂಶಗಳನ್ನು ಹೇಗೆ ಪಡೆದುಕೊಳ್ಳಬಹುದು ಎನ್ನುವ ಆಧಾರದ ಮೇಲೆ ಅನೇಕ ವಿಧಗಳಾಗಿ ವಿಂಗಡಿಸಬಹುದು.
ತಂತ್ರಾಂಶವನ್ನು ಡೌನ್‌ಲೋಡ್ ಮಾಡಿಕೊಂಡ ಕೆಲವು ದಿನಗಳವರೆಗೆ ಉಚಿತವಾಗಿ ಬಳಸಬಹುದು, ಆನಂತರವೂ ಬಳಸುವುದಾದರೆ ಹಣ ಪಾವತಿಸಬೇಕು ಎನ್ನುವ ನಿರ್ಬಂಧವನ್ನು ಕೆಲವೆಡೆ ಕಾಣಬಹುದು. ಇಂತಹ ತಂತ್ರಾಂಶಗಳನ್ನು ಟ್ರಯಲ್ ಸಾಫ್ಟ್‌ವೇರ್ ಅಥವಾ ಶೇರ್‌ವೇರ್‌ಗಳೆಂದು ಕರೆಯುತ್ತಾರೆ. ಇಂತಹ ಕೆಲ ತಂತ್ರಾಂಶಗಳಲ್ಲಿ ಸೀಮಿತ ಸೌಲಭ್ಯಗಳಷ್ಟೇ ಇರುವುದೂ ಉಂಟು.

ಬುಧವಾರ, ಮಾರ್ಚ್ 8, 2017
ಬಸ್ ಡ್ರೈವರ್ ಅಲ್ಲ, ಇದು ಡಿವೈಸ್ ಡ್ರೈವರ್
ಟಿ. ಜಿ. ಶ್ರೀನಿಧಿ
ಕೆಲ ವರ್ಷಗಳ ಹಿಂದೆ ಕಂಪ್ಯೂಟರಿಗೆ ಸಂಬಂಧಪಟ್ಟ ಯಾವುದೇ ಸಾಧನ ಕೊಂಡುಕೊಂಡರೂ ಅದರ ಜೊತೆಗೊಂದು ಸಿ.ಡಿ. ಇರುತ್ತಿತ್ತು. ಮೊದಲು ಆ ಸಿ.ಡಿ.ಯನ್ನು ಹಾಕಿ ಅದರಲ್ಲಿನ ತಂತ್ರಾಂಶಗಳನ್ನೆಲ್ಲ ನಮ್ಮ ಕಂಪ್ಯೂಟರಿನಲ್ಲಿ ಇನ್‌ಸ್ಟಾಲ್ ಮಾಡಿದ ನಂತರವಷ್ಟೇ ಹೊಸ ಸಾಧನ ಕೆಲಸಮಾಡಲು ಶುರುಮಾಡುತ್ತಿತ್ತು.
ಆ ಸಿ.ಡಿ.ಯಲ್ಲಿರುತ್ತಿತ್ತಲ್ಲ, ಆ ತಂತ್ರಾಂಶದ ಹೆಸರೇ ಡಿವೈಸ್ ಡ್ರೈವರ್.

ಸೋಮವಾರ, ಮಾರ್ಚ್ 6, 2017
ಹೀಗೊಂದು ಪುಟ್ಟ ಪುಸ್ತಕ: 'ಕನ್ನಡ ತಂತ್ರಜ್ಞಾನ: ನೆನ್ನೆ - ಇಂದು - ನಾಳೆ'
ಇಜ್ಞಾನ ವಾರ್ತೆ
'ಕಣಜ' ಅಂತರಜಾಲ ಕನ್ನಡ ಜ್ಞಾನಕೋಶ ಹಾಗೂ ಇಜ್ಞಾನ ಡಾಟ್ ಕಾಮ್ ವತಿಯಿಂದ ಮಾರ್ಚ್ ೫ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿ 'ಇ-ಕನ್ನಡ' ಸಂವಾದ ಹಾಗೂ ಪ್ರದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು (ವಿವರ).
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡದ ಸಾಧ್ಯತೆಗಳನ್ನು ಪರಿಚಯಿಸುವ 'ಕನ್ನಡ ತಂತ್ರಜ್ಞಾನ: ನೆನ್ನೆ - ಇಂದು - ನಾಳೆ' ಎಂಬ ಕಿರುಪುಸ್ತಕವನ್ನು ಈ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಯಿತು. ತಂತ್ರಜ್ಞಾನ ಬರಹಗಾರ ಟಿ. ಜಿ. ಶ್ರೀನಿಧಿ ರಚಿಸಿರುವ, ಕಣಜ ಅಂತರಜಾಲ ಜ್ಞಾನಕೋಶ ಪ್ರಕಟಿಸಿರುವ ಈ ಕಿರುಪುಸ್ತಿಕೆಯನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಉಚಿತವಾಗಿ ವಿತರಿಸಲಾಯಿತು.

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)