ಸೋಮವಾರ, ಮಾರ್ಚ್ 6, 2017

ಹೀಗೊಂದು ಪುಟ್ಟ ಪುಸ್ತಕ: 'ಕನ್ನಡ ತಂತ್ರಜ್ಞಾನ: ನೆನ್ನೆ - ಇಂದು - ನಾಳೆ'

ಇಜ್ಞಾನ ವಾರ್ತೆ


'ಕಣಜ' ಅಂತರಜಾಲ ಕನ್ನಡ ಜ್ಞಾನಕೋಶ ಹಾಗೂ ಇಜ್ಞಾನ ಡಾಟ್ ಕಾಮ್ ವತಿಯಿಂದ ಮಾರ್ಚ್ ೫ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿ 'ಇ-ಕನ್ನಡ' ಸಂವಾದ ಹಾಗೂ ಪ್ರದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು (ವಿವರ).

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡದ ಸಾಧ್ಯತೆಗಳನ್ನು ಪರಿಚಯಿಸುವ 'ಕನ್ನಡ ತಂತ್ರಜ್ಞಾನ: ನೆನ್ನೆ - ಇಂದು - ನಾಳೆ' ಎಂಬ ಕಿರುಪುಸ್ತಕವನ್ನು ಈ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಯಿತು. ತಂತ್ರಜ್ಞಾನ ಬರಹಗಾರ ಟಿ. ಜಿ. ಶ್ರೀನಿಧಿ ರಚಿಸಿರುವ, ಕಣಜ ಅಂತರಜಾಲ ಜ್ಞಾನಕೋಶ ಪ್ರಕಟಿಸಿರುವ ಈ ಕಿರುಪುಸ್ತಿಕೆಯನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಉಚಿತವಾಗಿ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದವರಿಗೂ ತಲುಪಿಸುವ ಉದ್ದೇಶದಿಂದ ಈ ಪುಸ್ತಕವನ್ನು ಕಣಜ ಜ್ಞಾನಕೋಶದ 'e-ಪುಸ್ತಕ' ಡಿಜಿಟಲ್ ಲೈಬ್ರರಿಗೆ ಸೇರಿಸಲಾಗಿದೆ. ಪಿಡಿಎಫ್ ಅಥವಾ ಪಠ್ಯದ ರೂಪದಲ್ಲಿ ಆಸಕ್ತರು ಇದನ್ನು ಕಣಜ ಜ್ಞಾನಕೋಶದ 'ಇ-ಪುಸ್ತಕ' ತಾಣದಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.

ದಯವಿಟ್ಟು ಗಮನಿಸಿ: ಸಾಮಾನ್ಯ ಬಳಕೆದಾರರಲ್ಲಿ ಆಸಕ್ತಿ ಮೂಡಿಸಬಲ್ಲ ತಂತ್ರಜ್ಞಾನದ ಕೆಲ ಸಾಧ್ಯತೆಗಳನ್ನು - ಪ್ರಾತಿನಿಧಿಕವಾಗಿ - ಪರಿಚಯಿಸುವ ಪ್ರಯತ್ನ ಈ ಪುಟ್ಟ ಪುಸ್ತಕ. ಇಲ್ಲಿ ನೀವು ನೋಡುವುದು ಉದಾಹರಣೆಗಳನ್ನಷ್ಟೇ ಹೊರತು ಕನ್ನಡ ತಂತ್ರಾಂಶ ಸವಲತ್ತುಗಳ ಸಮೀಕ್ಷೆಯನ್ನಾಗಲೀ ಪರಿಪೂರ್ಣ ಪಟ್ಟಿಯನ್ನಾಗಲೀ ಅಲ್ಲ ಎಂದು ದಯಮಾಡಿ ಗಮನಿಸಿ. ಈ ಪುಸ್ತಕಕ್ಕೆ ಸೇರಬಹುದಾದ ಯಾವುದೇ ಪ್ರಯತ್ನಗಳು ನಿಮ್ಮ ಗಮನಕ್ಕೆ ಬಂದರೆ ಅದನ್ನು ದಯಮಾಡಿ ನಮಗೆ ತಿಳಿಸಿ, ಮುಂದಿನ ಆವೃತ್ತಿಗಳಲ್ಲಿ ಆ ಮಾಹಿತಿಯನ್ನೂ ಸೇರಿಸಿಕೊಳ್ಳಲು ನಾವು ಖಂಡಿತಾ ಪ್ರಯತ್ನಿಸುತ್ತೇವೆ.

ಅಂದಹಾಗೆ ಈ ಪುಸ್ತಕದಲ್ಲಿ ಪರಿಚಯಿಸಲಾಗಿರುವ ಜಾಲತಾಣಗಳನ್ನು ತೆರೆಯಲು, ತಂತ್ರಾಂಶಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ನೀವು ಭೇಟಿನೀಡಬಹುದಾದ ವಿಳಾಸಗಳ ಪಟ್ಟಿ ಇಲ್ಲಿದೆ: http://links.ejnana.com

2 ಕಾಮೆಂಟ್‌ಗಳು:

Unknown ಹೇಳಿದರು...

ಮಾಹಿತಿ ತಂತ್ರಜ್ನಾನದ ಹೆಚ್ಚು ಕಡಿಮೆ ಏಲ್ಲ ವಿಷಯಗಳನ್ನೂ ಅತ್ಯಂತ ಸರಳವಾಗಿ ನಿರೂಪಿಸಿ ಅವನ್ನು ಜನಸಾಮಾನ್ಯರೆಲ್ಲರಿಗೂ ತಲುಪಿಸುವ ನಿಮ್ಮ ಪ್ರಯತ್ನ ಶ್ಲಾಘನೀಯ.ಹೃತ್ಪೂರ್ವಕ ಅಭಿನಂದನೆಗಳು

ಶರಣಬಸವೇಶ್ವರ ಅಂಗಡಿ

Unknown ಹೇಳಿದರು...

ಮಾಹಿತಿ ತಂತ್ರಜ್ನಾನದ ಹೆಚ್ಚು ಕಡಿಮೆ ಏಲ್ಲ ವಿಷಯಗಳನ್ನೂ ಅತ್ಯಂತ ಸರಳವಾಗಿ ನಿರೂಪಿಸಿ ಅವನ್ನು ಜನಸಾಮಾನ್ಯರೆಲ್ಲರಿಗೂ ತಲುಪಿಸುವ ನಿಮ್ಮ ಪ್ರಯತ್ನ ಶ್ಲಾಘನೀಯ.ಹೃತ್ಪೂರ್ವಕ ಅಭಿನಂದನೆಗಳು

ಶರಣಬಸವೇಶ್ವರ ಅಂಗಡಿ

badge