ನವಕರ್ನಾಟಕ ಪ್ರಕಾಶನದ 'ಪುಟ್ಟ-ಕಿಟ್ಟ ವಿಜ್ಞಾನ ಸಂವಾದ' ಮಾಲಿಕೆಯ ಎಂಟು ಕೃತಿಗಳು ಇಂದು (ಜುಲೈ ೧, ೨೦೧೭) ಬೆಂಗಳೂರಿನಲ್ಲಿ ಬಿಡುಗಡೆಯಾಗಲಿವೆ. ಭೌತ ವಿಜ್ಞಾನದ ವಿಶ್ರಾಂತ ಪ್ರಾಧ್ಯಾಪಕ ಡಾ. ಎ. ಓ. ಆವಲಮೂರ್ತಿ ಈ ಪುಸ್ತಕಗಳನ್ನು ಬರೆದಿದ್ದಾರೆ.
ವಿದ್ಯಾರ್ಥಿಗಳಲ್ಲಿ ಮೂಲ ವಿಜ್ಞಾನ ಕುರಿತು ಆಸಕ್ತಿಯನ್ನುಂಟುಮಾಡುವುದು 'ಪುಟ್ಟ-ಕಿಟ್ಟ ವಿಜ್ಞಾನ ಸಂವಾದ' ಮಾಲಿಕೆಯ ಉದ್ದೇಶ. ಈ ಸರಣಿಯ ಪುಸ್ತಕಗಳಲ್ಲಿ ನಿತ್ಯ ಜೀವನದಲ್ಲಿ ಅನುಭವಕ್ಕೆ ಬರುವ, ಆದರೆ 'ಅದು ಹೀಗೇಕೆ?' ಎಂದು ಅರ್ಥವಾಗಿರದ ಹಲವಾರು ಪ್ರಶ್ನೆಗಳಿಗೆ ಸಂವಾದದ ರೂಪದಲ್ಲಿ ವಿವರಣೆ ನೀಡಲಾಗಿದೆ.
ಈ ಸರಣಿಯ ಪುಸ್ತಕಗಳ ಪಟ್ಟಿ ಇಲ್ಲಿದೆ. ಈ ಕೃತಿಗಳನ್ನು ನವಕರ್ನಾಟಕ ಪ್ರಕಾಶನದ ಜಾಲತಾಣದಲ್ಲಿ ಕೊಳ್ಳಲು ಇಲ್ಲಿ ಕ್ಲಿಕ್ ಮಾಡಬಹುದು.
- ತಂಪು ಪಾತ್ರೆ, ಜೋಕೆ!
- ನೀರೊಳಗಿನ ಕಲ್ಲೇಕೆ ಹಗುರ?
- ಕಚಗುಳಿ ಇಟ್ಟಾಗ ನಗುವೇಕೆ?
- ಈರುಳ್ಳಿ ಹಚ್ಚಿದರೆ ಕಣ್ಣೀರೇಕೆ?
- ಗುಡುಗೇಕೆ ಗುಡುಗುಡು ಸದ್ದು ಮಾಡುತ್ತದೆ?
- ಭೂಮಿಯ ದ್ರವ್ಯರಾಶಿ ಎಷ್ಟು?
- ಅಲೆಗಳೇಳುವುದೇಕೆ?
- ನಾವು ಸೀನುವುದೇಕೆ?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ