ಟಿ. ಜಿ. ಶ್ರೀನಿಧಿ
ನಾವು ಬರೆಯುವ ತಂತ್ರಾಂಶದ ಉದ್ದೇಶ ಏನೇ ಇರಬಹುದು, ಆದರೆ ಅದನ್ನು ಸಿದ್ಧಪಡಿಸುವುದರ ಹಿಂದೆ ತಂತ್ರಾಂಶದ ಬಳಕೆದಾರರಿಗೆ ಒಂದಲ್ಲ ಒಂದು ರೀತಿಯಲ್ಲಿ ನೆರವಾಗುವ ಸದುದ್ದೇಶವಂತೂ ಇರುತ್ತದೆ ಎನ್ನಬಹುದು (ಇತರರಿಗೆ ತೊಂದರೆಮಾಡುವ ವೈರಸ್ನಂತಹ ಕುತಂತ್ರಾಂಶಗಳ ಮಾತು ಇಲ್ಲಿ ಬೇಡ; ಅಂತಹ ತಂತ್ರಾಂಶಗಳ ರಚನೆ ತಪ್ಪು ಮಾತ್ರವೇ ಅಲ್ಲ, ಅಪರಾಧವೂ ಹೌದು!).
ಬಳಕೆದಾರರಿಗೆ ಉಪಯುಕ್ತವಾಗುವಂತಹ ತಂತ್ರಾಂಶ ಸಿದ್ಧಪಡಿಸುವಲ್ಲಿ ಅನೇಕ ಹೆಜ್ಜೆಗಳಿವೆ: ತಂತ್ರಾಂಶದ ಅಗತ್ಯಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು, ಆ ಅಗತ್ಯಗಳಿಗೆ ತಕ್ಕಂತೆ ಕ್ರಮವಿಧಿಗಳನ್ನು (ಪ್ರೋಗ್ರಾಮ್) ರಚಿಸುವುದು, ಹಾಗೆ ರಚಿಸಿದ ಕ್ರಮವಿಧಿಗಳಲ್ಲಿ ಯಾವುದೇ ತಪ್ಪುಗಳಿಲ್ಲದಂತೆ ನೋಡಿಕೊಳ್ಳುವುದು, ತಂತ್ರಾಂಶದ ಒಟ್ಟಾರೆ ಕಾರ್ಯವಿಧಾನ ಸಮರ್ಪಕವಾಗಿದೆಯೇ ಎಂದು ಪರೀಕ್ಷಿಸುವುದು - ಹೀಗೆ.
ಈ ಎಲ್ಲ ಹೆಜ್ಜೆಗಳಷ್ಟೇ ಮಹತ್ವದ ಇನ್ನೊಂದು ಭಾಗ, ಬಳಕೆದಾರನ ಮಟ್ಟಿಗೆ ತಂತ್ರಾಂಶದ ಬಳಕೆ ಸರಾಗವಾಗಿರುವಂತೆ ನೋಡಿಕೊಳ್ಳುವುದು. ನಾವು ರೂಪಿಸಿರುವ ತಂತ್ರಾಂಶ ಎಷ್ಟೇ ಸಮರ್ಥವಾಗಿದ್ದರೂ ಬಳಕೆದಾರರ ಮಟ್ಟಿಗೆ ಉಪಯೋಗಿಸಲು ಕಷ್ಟವಾಗುವಂತಿದ್ದರೆ ಆ ತಂತ್ರಾಂಶವನ್ನು ರೂಪಿಸಿದ ಮೂಲ ಉದ್ದೇಶವೇ ವಿಫಲವಾದಂತೆ.
ಹಾಗಾಗಿ ತಂತ್ರಾಂಶದ ತಾಂತ್ರಿಕ ವಿವರಗಳಷ್ಟೇ ಅದರ ಅಂತರ ಸಂಪರ್ಕ ಸಾಧನ (ಯೂಸರ್ ಇಂಟರ್ಫೇಸ್, ಯುಐ) ಕೂಡ ಮುಖ್ಯವಾಗುತ್ತದೆ. ಈ ಅಂತರ ಸಂಪರ್ಕ ಸಾಧನದ ವಿನ್ಯಾಸ (ಯುಐ ಡಿಸೈನ್), ಹಾಗಾಗಿಯೇ, ತಂತ್ರಾಂಶ ಅಭಿವೃದ್ಧಿಯ ಪ್ರಮುಖ ಭಾಗಗಳಲ್ಲೊಂದು.

+-+Copy.png)