ಟಿ. ಜಿ. ಶ್ರೀನಿಧಿ
ಪದೇಪದೇ ಬೇಕಾಗುವ ವಸ್ತುಗಳನ್ನು ಸುಲಭಕ್ಕೆ ಕೈಗೆ ಸಿಗುವಂತೆ ಇಟ್ಟುಕೊಳ್ಳುವುದು ನಮ್ಮೆಲ್ಲರ ಸಾಮಾನ್ಯ ಅಭ್ಯಾಸ ತಾನೇ? ಕಂಪ್ಯೂಟರು - ಮೊಬೈಲ್ ಫೋನುಗಳಿಗೂ ಈ ಅಭ್ಯಾಸ ಇದೆ. ತಮ್ಮ ಕಾರ್ಯನಿರ್ವಹಣೆಯಲ್ಲಿ ಆಗಾಗ್ಗೆ ಬಳಸುವ ನಿರ್ದೇಶನಗಳನ್ನು, ದತ್ತಾಂಶವನ್ನು ಸುಲಭಕ್ಕೆ ಸಿಗುವಂತೆ ಉಳಿಸಿಟ್ಟುಕೊಳ್ಳಲು ಅವು 'ಕ್ಯಾಶ್' ಎನ್ನುವ ಪರಿಕಲ್ಪನೆಯನ್ನು ಬಳಸುತ್ತವೆ. ಇಲ್ಲಿ ಕ್ಯಾಶ್ ಎಂದರೆ ಹಣ (cash) ಅಲ್ಲ. Cache ಎನ್ನುವುದು ಈ ಕ್ಯಾಶ್‌ನ ಸ್ಪೆಲ್ಲಿಂಗು.
ಕಾರ್ಯಾಚರಣ ವ್ಯವಸ್ಥೆ (ಆಪರೇಟಿಂಗ್ ಸಿಸ್ಟಂ) ಪದೇಪದೇ ಬಳಸುವ ನಿರ್ದೇಶನಗಳನ್ನು, ದತ್ತಾಂಶವನ್ನು ಮೆಮೊರಿಯಲ್ಲಿ ಪ್ರತ್ಯೇಕವಾಗಿ ಉಳಿಸಿಟ್ಟುಕೊಳ್ಳುವ ಮೂಲಕ ಅವನ್ನು ಥಟ್ಟನೆ ಪಡೆದುಕೊಳ್ಳುವುದನ್ನು ಸಾಧ್ಯವಾಗಿಸುವುದು ಕ್ಯಾಶ್‌ನ ಉದ್ದೇಶ. ಈ ಮೂಲಕ ಒಂದೇ ವಿಷಯವನ್ನು ಪದೇಪದೇ ಮೂಲದಿಂದ ಹೆಕ್ಕಿತರುವ ಅಗತ್ಯ ಇರುವುದಿಲ್ಲ; ಅಲ್ಲದೆ ಇದರಿಂದ ಸಂಪನ್ಮೂಲದ ಉಳಿತಾಯವೂ ಸಾಧ್ಯವಾಗುತ್ತದೆ.
ಶುಕ್ರವಾರ, ಮಾರ್ಚ್ 3, 2017
ಬುಧವಾರ, ಮಾರ್ಚ್ 1, 2017
ವಿಪಿಎನ್: ಒಂದು ಪರಿಚಯ
ಟಿ. ಜಿ. ಶ್ರೀನಿಧಿ
ಅಂತರಜಾಲದ ಲೋಕ ದೊಡ್ಡದೊಂದು ಜಾತ್ರೆಯಂತೆ. ಜಾತ್ರೆ ನೋಡಲು ಬಂದ ಸಾಮಾನ್ಯ ಜನರ ಜೊತೆಗೆ ಜೇಬುಗಳ್ಳರೂ ಬರುವಂತೆ ಕಳ್ಳರು-ಸುಳ್ಳರು ಇಲ್ಲೂ ಇರುತ್ತಾರೆ. ಜಾತ್ರೆಯಲ್ಲಿ ನಮ್ಮ ಜೇಬನ್ನು-ಬ್ಯಾಗನ್ನು ಕಾಪಾಡಿಕೊಳ್ಳುವಂತೆ ಇಲ್ಲಿ ನಮ್ಮ ಮಾಹಿತಿಯನ್ನು ಜೋಪಾನಮಾಡುವುದು ಅನಿವಾರ್ಯ. ನಮ್ಮ ನಿಮ್ಮ ವೈಯಕ್ತಿಕ ಮಾಹಿತಿಯಷ್ಟೇ ಅಲ್ಲ, ಸಂಸ್ಥೆಗಳು ತಮ್ಮ ವ್ಯವಹಾರಕ್ಕೆ ಸಂಬಂಧಿಸಿದ ಮಾಹಿತಿಯನ್ನೂ ಬಹಳ ಎಚ್ಚರಿಕೆಯಿಂದ ಕಾಪಾಡಿಕೊಳ್ಳಬೇಕು.
ಯಾವುದೋ ಸಂಸ್ಥೆ ಒಂದೇ ಕಟ್ಟಡದಲ್ಲಿ ಕೆಲಸಮಾಡುತ್ತಿದ್ದರೆ ಅದರದೇ ಒಂದು ಜಾಲವನ್ನು (ನೆಟ್‌ವರ್ಕ್) ರೂಪಿಸಿಕೊಳ್ಳಬಹುದು, ಸರಿ. ಆದರೆ ಆ ಸಂಸ್ಥೆಯ ಶಾಖೆಗಳು ದೇಶದ ಬೇರೆಬೇರೆ ರಾಜ್ಯಗಳಲ್ಲಿ - ಪ್ರಪಂಚದ ವಿವಿಧ ದೇಶಗಳಲ್ಲಿ ಇದ್ದರೆ?

ಸೋಮವಾರ, ಫೆಬ್ರವರಿ 27, 2017
ಸಿವಿವಿ ಎಂದರೇನು ಗೊತ್ತೇ?
ಟಿ. ಜಿ. ಶ್ರೀನಿಧಿ
ಆನ್‌ಲೈನ್ ಜಗತ್ತಿನಲ್ಲಿ ಕ್ರೆಡಿಟ್ ಕಾರ್ಡ್-ಡೆಬಿಟ್ ಕಾರ್ಡುಗಳನ್ನು ಬಳಸುವಾಗ ಒಂದಷ್ಟು ಮಾಹಿತಿಯನ್ನು ತಪ್ಪದೇ ದಾಖಲಿಸಬೇಕು: ಕಾರ್ಡ್ ಸಂಖ್ಯೆ, ಕೊನೆಗೊಳ್ಳುವ ದಿನಾಂಕ, ಕೆಲವೊಮ್ಮೆ ಕಾರ್ಡುದಾರರ ಹೆಸರು.
ಇಷ್ಟು ಮಾಹಿತಿಯ ಜೊತೆಗೆ ನಾವು ದಾಖಲಿಸಬೇಕಾದ ಇನ್ನೊಂದು ಸಂಖ್ಯೆಯ ಹೆಸರೇ ಸಿವಿವಿ, ಅರ್ಥಾತ್ 'ಕಾರ್ಡ್ ವೆರಿಫಿಕೇಶನ್ ವ್ಯಾಲ್ಯೂ'.

ಶುಕ್ರವಾರ, ಫೆಬ್ರವರಿ 24, 2017
ಆರ್‌ಜಿಬಿ ಮತ್ತು ಸಿಎಂವೈಕೆ
ಟಿ. ಜಿ. ಶ್ರೀನಿಧಿ
ಪ್ರಾಥಮಿಕ ಬಣ್ಣಗಳನ್ನು (ಪ್ರೈಮರಿ ಕಲರ್ಸ್) ಸೇರಿಸಿ ಹೊಸ ಬಣ್ಣಗಳನ್ನು ರೂಪಿಸಿಕೊಳ್ಳುವುದು ಹೊಸ ಸಂಗತಿಯೇನಲ್ಲ. ಯಾವ ಬಣ್ಣಕ್ಕೆ ಯಾವ ಬಣ್ಣ ಸೇರಿಸಿದರೆ ಯಾವ ಬಣ್ಣ ಸೃಷ್ಟಿಯಾಗುತ್ತದೆ ಎನ್ನುವುದನ್ನು ಮಕ್ಕಳು ಶಾಲೆಯ ದಿನಗಳಲ್ಲೇ ಆಸಕ್ತಿಯಿಂದ ಕಲಿಯುತ್ತಾರೆ.
ಭೌತಿಕ ಜಗತ್ತಿನಲ್ಲಿರುವಂತೆ ಡಿಜಿಟಲ್ ಜಗತ್ತಿನಲ್ಲೂ ಅಸಂಖ್ಯ ಬಣ್ಣಗಳು ನಮ್ಮ ಮುಂದೆ ಕಾಣಸಿಗುತ್ತವಲ್ಲ, ಅಲ್ಲಿಯೂ ಇಂತಹುದೇ ತಂತ್ರ ಬಳಕೆಯಾಗುತ್ತದೆ. ಕಂಪ್ಯೂಟರ್, ಸ್ಮಾರ್ಟ್‌ಫೋನ್ ಇತ್ಯಾದಿಗಳಲ್ಲಿ ನಮಗೆ ಕಾಣಿಸುವ ಎಲ್ಲ ಬಣ್ಣಗಳೂ ಕೆಂಪು, ಹಸಿರು ಹಾಗೂ ನೀಲಿ ಬಣ್ಣದ ಬೆಳಕಿನ ಸಂಯೋಜನೆಯಿಂದ ರೂಪುಗೊಂಡಿರುತ್ತವೆ.

ಬುಧವಾರ, ಫೆಬ್ರವರಿ 22, 2017
ಎಚ್ಚರ, ಇದು ರಾನ್ಸಮ್‌ವೇರ್!
ಟಿ. ಜಿ. ಶ್ರೀನಿಧಿ
ಜನರನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡು ಹಣಕ್ಕಾಗಿ ಪೀಡಿಸುವ ದುರುಳರ ಬಗ್ಗೆ ನಾವು ಕೇಳಿದ್ದೇವಲ್ಲ, ಅಂತಹ ದುಷ್ಕರ್ಮಿಗಳು ಸೈಬರ್ ಲೋಕದಲ್ಲೂ ಇದ್ದಾರೆ. ಅವರು ಒತ್ತೆಯಾಳುಗಳಾಗಿ ಇರಿಸಿಕೊಳ್ಳುವುದು ಜನರನ್ನಲ್ಲ, ಕಂಪ್ಯೂಟರ್ ಹಾಗೂ ಸ್ಮಾರ್ಟ್‌ಫೋನುಗಳನ್ನು!
ಈ ಕೆಟ್ಟ ಉದ್ದೇಶಕ್ಕಾಗಿ ಬಳಕೆಯಾಗುವ ತಂತ್ರಾಂಶಗಳನ್ನು 'ರಾನ್ಸಮ್‌ವೇರ್' (Ransomware) ಎಂದು ಗುರುತಿಸಲಾಗುತ್ತದೆ ('ರಾನ್ಸಮ್' ಎಂದರೆ ಸುಲಿಗೆಯ ಹಣ). ಸೈಬರ್ ಲೋಕವನ್ನು ಕಾಡುವ ಹಲವು ಬಗೆಯ ಕುತಂತ್ರಾಂಶಗಳಲ್ಲಿ ಇದೂ ಒಂದು.

ಸೋಮವಾರ, ಫೆಬ್ರವರಿ 20, 2017
ಮೂರ್ ನಿಯಮ ಕುರಿತು ನಾಲ್ಕು ಮಾತು...
ಟಿ. ಜಿ. ಶ್ರೀನಿಧಿ
ಕಂಪ್ಯೂಟರ್ ಅಷ್ಟೇ ಅಲ್ಲ, ಯಾವ ವಿದ್ಯುನ್ಮಾನ ಉಪಕರಣವನ್ನೇ ತೆಗೆದುಕೊಂಡರೂ ಅದರ ಮೆದುಳು-ಹೃದಯದ ಕೆಲಸವನ್ನೆಲ್ಲ ಮಾಡಲು ಕನಿಷ್ಠ ಒಂದಾದರೂ ಇಂಟಿಗ್ರೇಟೆಡ್ ಸರ್ಕ್ಯೂಟ್ (ಐಸಿ) ಇರುತ್ತದೆ; ಕಂಪ್ಯೂಟರಿನಲ್ಲಿ ಪ್ರಾಸೆಸರ್ ಇರುತ್ತದಲ್ಲ, ಹಾಗೆ. ಈ ಐಸಿಗಳಲ್ಲಿ ಬೇಕಾದಷ್ಟು ಟ್ರಾನ್ಸಿಸ್ಟರುಗಳಿರುತ್ತವೆ. ಸಾವಿರಗಳಷ್ಟೆ ಏಕೆ, ಲಕ್ಷಗಟ್ಟಲೆ ಟ್ರಾನ್ಸಿಸ್ಟರುಗಳು ಇಂತಹ ಐಸಿಗಳೊಳಗೆ ಅಡಕವಾಗಿರುತ್ತವೆ.

ಶುಕ್ರವಾರ, ಫೆಬ್ರವರಿ 17, 2017
ಕಂಪ್ಯೂಟರ್ ಬಳಕೆ: ಒಂದಷ್ಟು ಶಿಸ್ತಿರಲಿ!
ಟಿ. ಜಿ. ಶ್ರೀನಿಧಿ
ನಮ್ಮಲ್ಲಿ ಹಲವರು ಒಂದಲ್ಲ ಒಂದು ಉದ್ದೇಶಕ್ಕಾಗಿ ಕಂಪ್ಯೂಟರುಗಳನ್ನು ಬಳಸುತ್ತೇವೆ. ಹೀಗೆ ಬಳಸುವಾಗ ಅಪಾರ ಪ್ರಮಾಣದ ಮಾಹಿತಿ ನಮ್ಮ ಸಂಪರ್ಕಕ್ಕೆ ಬರುತ್ತದೆ, ಕಂಪ್ಯೂಟರಿನಲ್ಲಿ ಸಂಗ್ರಹವೂ ಆಗುತ್ತದೆ. ಈ ಮಾಹಿತಿಯನ್ನೆಲ್ಲ ಸೂಕ್ತವಾಗಿ ವಿಂಗಡಿಸಿಕೊಳ್ಳುವುದು, ಸರಿಯಾಗಿ ಶೇಖರಿಸಿಟ್ಟುಕೊಳ್ಳುವುದು ನಿಜಕ್ಕೂ ಉಪಯುಕ್ತ.
ಈಗಾಗಲೇ ಇರುವ ಮಾಹಿತಿಯಲ್ಲಿ ಅನಗತ್ಯವಾದುದನ್ನು ನಿವಾರಿಸುವುದು ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ.

ಗುರುವಾರ, ಫೆಬ್ರವರಿ 16, 2017
ಮೊಬೈಲ್ ಒಳಗಿನ ಮಾಯಾಲೋಕ
ಟಿ. ಜಿ. ಶ್ರೀನಿಧಿ
ಮೊಬೈಲ್ ಫೋನುಗಳ ಜನಪ್ರಿಯತೆ ಎಷ್ಟರಮಟ್ಟಿನದು ಎಂದರೆ ಬಹುಶಃ ಅವುಗಳ ಪರಿಚಯವಿಲ್ಲದವರು, ಅವನ್ನು ಬಳಸದವರು ಸಿಗುವುದೇ ಇಲ್ಲವೇನೋ. ಬಳಸುವುದು ಹಾಗಿರಲಿ, ಸದಾಕಾಲವೂ ಮೊಬೈಲಿಗೆ ಅಂಟಿಕೊಂಡೇ ಇರುವವರರೂ ಅನೇಕರಿದ್ದಾರೆ. ಸ್ಮಾರ್ಟ್‌ಫೋನ್ ಬಳಸಿ ಏನೆಲ್ಲ ಮಾಡಬಹುದು ಎನ್ನುವುದೂ ನಮಗೆಲ್ಲ ಚೆನ್ನಾಗಿ ಗೊತ್ತು.
ಸ್ಮಾರ್ಟ್‌ಫೋನ್ ಸೌಲಭ್ಯಗಳ ಬಗ್ಗೆ, ಅವುಗಳನ್ನು ಬಳಸುವ ಬಗ್ಗೆ ನಮಗೆ ತಿಳಿದಿದ್ದರೂ ಅದನ್ನೆಲ್ಲ ನಿಜಕ್ಕೂ ಸಾಧ್ಯವಾಗಿಸುವ ಭೌತಿಕ ಭಾಗಗಳ ಪರಿಚಯ ಇರುವುದಿಲ್ಲ.

ಮ್ಯಾಕ್ಸ್ ಸರಣಿಗೆ ಹೊಸ ಸೇರ್ಪಡೆ: ಏಸಸ್ ಜೆನ್‍ಫೋನ್ ೩ಎಸ್ ಮ್ಯಾಕ್ಸ್
ಟಿ. ಜಿ. ಶ್ರೀನಿಧಿ
ಹತ್ತಾರು ಮಾದರಿಯ ಫೋನುಗಳೊಡನೆ ಗ್ರಾಹಕರ ಗಮನಸೆಳೆದಿರುವ ಏಸಸ್ ಜೆನ್‍ಫೋನ್ ಸ್ಮಾರ್ಟ್‍ಫೋನುಗಳ ಪೈಕಿ ಮ್ಯಾಕ್ಸ್ ಸರಣಿ ಕಳೆದ ವರ್ಷ ಭಾರೀ ಜನಪ್ರಿಯತೆ ಗಳಿಸಿಕೊಂಡಿತ್ತು. ಹತ್ತು ಸಾವಿರ ರೂಪಾಯಿಯೊಳಗಿನ ಬೆಲೆಯಲ್ಲಿ (ರೂ. ೮೯೯೯ ಹಾಗೂ ರೂ. ೯೯೯೯) ಬಂದ ಮೊದಲೆರಡು ಮಾದರಿಗಳ ನಂತರ ಜೆನ್‍ಫೋನ್ ೩ ಸರಣಿಯಲ್ಲೂ ಮ್ಯಾಕ್ಸ್ ಪರಿಚಯವಾದದ್ದು ನಮಗೆ ಈಗಾಗಲೇ ಗೊತ್ತಿದೆ [ಓದಿ: ಜೆನ್‍ಫೋನ್ ಮ್ಯಾಕ್ಸ್‌ನ ಮೂರನೇ ಆವೃತ್ತಿ].
ಇದೀಗ ಈ ಸರಣಿಗೆ ಹೊಸದಾಗಿ ಸೇರ್ಪಡೆಯಾಗಿರುವುದೇ ಜೆನ್‍ಫೋನ್ ೩ಎಸ್ ಮ್ಯಾಕ್ಸ್.

ಬುಧವಾರ, ಫೆಬ್ರವರಿ 15, 2017
ಡಿಪಿಐ ಮತ್ತು ಪಿಪಿಐ
ಟಿ. ಜಿ. ಶ್ರೀನಿಧಿ
ಡಿಜಿಟಲ್ ಚಿತ್ರಗಳ ಗುಣಮಟ್ಟದ ಬಗ್ಗೆ ಮಾತನಾಡುವಾಗ 'ಡಿಪಿಐ' ಪ್ರಸ್ತಾಪ ಬರುತ್ತದಲ್ಲ, ಅದು 'ಡಾಟ್ಸ್ ಪರ್ ಇಂಚ್' ಎನ್ನುವುದರ ಹ್ರಸ್ವರೂಪ.
ಇಂಕ್‌ಜೆಟ್ ಪ್ರಿಂಟರಿನಲ್ಲಿ ಮುದ್ರಿತವಾದ ಚಿತ್ರವನ್ನು ನೋಡಿದರೆ ಅದು ಬೇರೆಬೇರೆ ಬಣ್ಣದ ಅಸಂಖ್ಯ ಚುಕ್ಕೆಗಳ ಜೋಡಣೆಯಿಂದ ರೂಪುಗೊಂಡಿರುವುದನ್ನು ಗಮನಿಸಬಹುದು. ಒಂದು ಇಂಚು ಜಾಗದಲ್ಲಿ ಅಂತಹ ಎಷ್ಟು ಚುಕ್ಕೆಗಳನ್ನು ಮುದ್ರಿಸಲಾಗಿದೆ ಎಂಬುದನ್ನು ಸೂಚಿಸುವ ಮಾನಕವೇ ಈ ಡಿಪಿಐ. ಬೇರೆಬೇರೆ ಬಗೆಯ ಪ್ರಿಂಟರುಗಳಲ್ಲಿ ಬೇರೆಬೇರೆ ಡಿಪಿಐ ಸಾಮರ್ಥ್ಯ ಇರುತ್ತದೆ. ಡಿಪಿಐ ಜಾಸ್ತಿಯಿದ್ದಷ್ಟೂ ಮುದ್ರಣ ಉತ್ತಮವಾಗಿರುತ್ತದೆ ಎನ್ನುವುದು ಒಂದು ಹಂತದವರೆಗೆ ಮಾತ್ರ ಸರಿ. ಏಕೆಂದರೆ ಡಿಪಿಐ ಲೆಕ್ಕದ ಜೊತೆಗೆ ಮೂಲ ಚಿತ್ರದ ಸ್ಪಷ್ಟತೆ, ಮುದ್ರಿಸುತ್ತಿರುವ ಗಾತ್ರ ಮುಂತಾದ ಹಲವು ಅಂಶಗಳು ಚಿತ್ರದ ಒಟ್ಟು ಗುಣಮಟ್ಟವನ್ನು ತೀರ್ಮಾನಿಸುತ್ತವೆ.

ಸೋಮವಾರ, ಫೆಬ್ರವರಿ 13, 2017
ನಿಮಗೆ '೪೦೪ ಎರರ್' ಗೊತ್ತೇ?
ಟಿ. ಜಿ. ಶ್ರೀನಿಧಿ
ಕಂಪ್ಯೂಟರನ್ನು, ಮೊಬೈಲ್ ಫೋನನ್ನು ಬಳಸುವಾಗ ನಾವು ಆಗಿಂದಾಗ್ಗೆ ಹಲವು ದೋಷಗಳನ್ನು (ಎರರ್) ಎದುರಿಸಬೇಕಾಗಿ ಬರುವುದುಂಟು. ತಂತ್ರಾಂಶ - ಯಂತ್ರಾಂಶಗಳಲ್ಲಿನ ಯಾವುದೇ ವೈಫಲ್ಯ ಅಥವಾ ಅವನ್ನು ಬಳಸುವಲ್ಲಿ ನಮ್ಮದೇ ತಪ್ಪು ಇಂತಹ ದೋಷಗಳಿಗೆ ಕಾರಣವಾಗಬಹುದು.
ಕೆಲ ಬಾರಿ ದೋಷಗಳ ಪರಿಣಾಮವಷ್ಟೇ (ಕಂಪ್ಯೂಟರ್ ಕೆಲಸಮಾಡದಿರುವುದು, ಆಪ್ ತೆರೆದುಕೊಳ್ಳಲು ಹೆಚ್ಚಿನ ಸಮಯ ತೆಗೆದುಕೊಳ್ಳುವುದು, ಹೀಗೆ) ನಮ್ಮ ಗಮನಕ್ಕೆ ಬರುತ್ತದೆ, ನಿಜ. ಆದರೆ ಬಹಳಷ್ಟು ಸಂದರ್ಭಗಳಲ್ಲಿ ಅವು ಸಂದೇಶದ ರೂಪದಲ್ಲಿ ನಮ್ಮೆದುರು ಕಾಣಿಸಿಕೊಳ್ಳುತ್ತವೆ. ವಿಶ್ವವ್ಯಾಪಿ ಜಾಲದಲ್ಲಿ ಓಡಾಡುವಾಗ ಕಾಣಸಿಗುವ '೪೦೪', ಇಂತಹ ದೋಷಗಳಲ್ಲೊಂದು.

ಶುಕ್ರವಾರ, ಫೆಬ್ರವರಿ 3, 2017
ಬೀಟಾ ವರ್ಶನ್ ಎಂದರೇನು?
ಟಿ. ಜಿ. ಶ್ರೀನಿಧಿ
ತಂತ್ರಾಂಶಗಳ ಬಗ್ಗೆ ಮಾತನಾಡುವಾಗ ಹಲವಾರು ಬಾರಿ 'ಬೀಟಾ ವರ್ಶನ್' ಎಂಬ ಹೆಸರಿನ ಪ್ರಸ್ತಾಪ ಬರುವುದನ್ನು ನೀವು ಗಮನಿಸಿರಬಹುದು. ಮೊಬೈಲ್ ಆಪ್‌ಗಳ 'ಬೀಟಾ ರಿಲೀಸ್' ಅನ್ನು ನೀವು ಬಳಸಿರಲೂಬಹುದು.
ಯಾವುದೇ ತಂತ್ರಾಂಶವನ್ನು ಅಭಿವೃದ್ಧಿಪಡಿಸುವಾಗ ಅದರ ಪ್ರಗತಿಯನ್ನು ನಿರ್ದಿಷ್ಟ ಹಂತಗಳಲ್ಲಿ ಸೂಚಿಸುವುದು ವಾಡಿಕೆ. ತಂತ್ರಾಂಶ ಅಭಿವೃದ್ಧಿ ಮುಗಿದು ಅದು ಬಿಡುಗಡೆಗೆ ಸಿದ್ಧವಾಗುತ್ತದಲ್ಲ, ಅದಕ್ಕೆ ಹಿಂದಿನ ಹಂತವೇ 'ಬೀಟಾ'.
ತಂತ್ರಾಂಶವೊಂದು ಬೀಟಾ ಹಂತದಲ್ಲಿದೆ ಎಂದರೆ ಅದರ ಅಭಿವೃದ್ಧಿ ಬಹುಪಾಲು ಪೂರ್ಣಗೊಂಡಿದೆ ಹಾಗೂ ಪ್ರಾಥಮಿಕ ಹಂತದ ಪರೀಕ್ಷೆಗಳಲ್ಲಿ (ಟೆಸ್ಟಿಂಗ್) ಅದು ಯಶಸ್ವಿಯಾಗಿದೆ ಎಂದರ್ಥ.

ಬುಧವಾರ, ಫೆಬ್ರವರಿ 1, 2017
ಮೊಬೈಲ್ ಸಿಗ್ನಲ್ ಸಿಗ್ತಿಲ್ವಾ?
ಟಿ. ಜಿ. ಶ್ರೀನಿಧಿ
"ಮೊಬೈಲಿನಲ್ಲಿ ಸಿಗ್ನಲ್ ಇಲ್ಲ" - ಇದು ಈಚಿನ ದಿನಗಳಲ್ಲಿ ನಮಗೆ ವ್ಯಾಪಕವಾಗಿ ಕೇಳಿಬರುತ್ತಿರುವ ದೂರು. ಮೊಬೈಲ್ ಪರದೆಯ ಬಲಭಾಗದ ಮೇಲ್ತುದಿಯಲ್ಲಿ ಕಾಣಿಸುವ ಸಣ್ಣ ಗೆರೆಗಳು ಮೊಬೈಲ್ ಸಂಕೇತದ ಶಕ್ತಿ ಎಷ್ಟಿದೆಯೆಂದು ತಿಳಿಸುತ್ತವೆ ಎನ್ನುವುದು ನಮಗೆ ಗೊತ್ತು. ಅಲ್ಲಿ ಹೆಚ್ಚು ಗೆರೆಗಳಿದ್ದರೆ ನಮ್ಮ ಮೊಬೈಲಿಗೆ ಸಿಗುತ್ತಿರುವ ಸಂಕೇತದ ಶಕ್ತಿ (ಸಿಗ್ನಲ್ ಸ್ಟ್ರೆಂಥ್) ತೃಪ್ತಿಕರವಾಗಿದೆ ಎಂದು ಅರ್ಥ. ಹಾಗಿದ್ದಾಗ ಮೊಬೈಲ್ ಕರೆ ಮಾಡುವುದು, ಇಂಟರ್‌ನೆಟ್ ಬಳಸುವುದೆಲ್ಲ ಸರಾಗ. ಕಾಣಿಸುವ ಗೆರೆಗಳ ಸಂಖ್ಯೆ ಕಡಿಮೆಯಾದಷ್ಟೂ ಸಂಕೇತದ ಶಕ್ತಿ ಕಡಿಮೆಯಾಗಿದೆ ಎಂದು ತಿಳಿದುಕೊಳ್ಳಬಹುದು.
ಮೊಬೈಲ್ ಸಂಕೇತದ ಶಕ್ತಿಯನ್ನು ಡಿಬಿಎಂ (dBm) ಎಂಬ ಏಕಮಾನದಲ್ಲಿ ಅಳೆಯಲಾಗುತ್ತದೆ. ಡಿಬಿಎಂ ಎನ್ನುವುದು ಡೆಸಿಬಲ್-ಮಿಲಿವ್ಯಾಟ್ಸ್ ಎಂಬ ಹೆಸರಿನ ಹ್ರಸ್ವರೂಪ. ಮೊಬೈಲಿನ ಸೆಟಿಂಗ್ಸ್‌ಗೆ ಹೋದರೆ ಸದ್ಯ ನಮಗೆ ದೊರಕುತ್ತಿರುವ ಸಿಗ್ನಲ್ ಸ್ಟ್ರೆಂಥ್ ಎಷ್ಟು ಎಂದು ತಿಳಿದುಕೊಳ್ಳಬಹುದು (ಆಂಡ್ರಾಯ್ಡ್‌ನಲ್ಲಿ ಅಬೌಟ್ > ಸ್ಟೇಟಸ್ > ಸಿಮ್ ಸ್ಟೇಟಸ್).

ಸೋಮವಾರ, ಜನವರಿ 30, 2017
ಮೊಬೈಲ್ ಫೋನ್‍ಗೂ 'ಸೆಲ್'ಗೂ ಏನು ಸಂಬಂಧ?
ಟಿ. ಜಿ. ಶ್ರೀನಿಧಿ
ಮೊಬೈಲ್ ಫೋನನ್ನು ಹಲವಾರು ಮಂದಿ ಸೆಲ್ ಫೋನ್ ಎಂದು ಕರೆಯುತ್ತಾರೆ. ಇನ್ನು ಕೆಲವರು ಈ ಹೆಸರನ್ನು ಇನ್ನೂ ಹ್ರಸ್ವಗೊಳಿಸಿ 'ಸೆಲ್' ಎಂದಷ್ಟೇ ಕರೆಯುವುದೂ ಉಂಟು.
ಈ ಅಭ್ಯಾಸಕ್ಕೆ ಕಾರಣ ಮೊಬೈಲ್ ನೆಟ್‌ವರ್ಕುಗಳ ವಿನ್ಯಾಸ. ಊರಿನ ತುಂಬ ಹರಡಿರುವ ಮೊಬೈಲ್ ಟವರ್‌ಗಳು ತಮ್ಮ ಸುತ್ತಲಿನ ಒಂದು ಸೀಮಿತ ಪ್ರದೇಶಕ್ಕೆ ಮೊಬೈಲ್ ಸೇವೆ ಒದಗಿಸುತ್ತವೆ. ಈ ಪ್ರದೇಶ ಬಹುತೇಕ ಆರು ಮೂಲೆಯ (ಹೆಕ್ಸಾಗನ್) ಆಕೃತಿಯಲ್ಲಿರುತ್ತದೆ; ಅಂದರೆ, ಮೊಬೈಲ್ ಜಾಲದ ಚಿತ್ರವನ್ನೇನಾದರೂ ಬರೆದರೆ ಅದು ಜೇನುಗೂಡಿನ ಒಂದು ಹಲ್ಲೆಯಂತೆ ಕಾಣುತ್ತದೆ!

ಶುಕ್ರವಾರ, ಜನವರಿ 27, 2017
ಬಾರ್ ಕೋಡ್ ಬಗ್ಗೆ ನಿಮಗೆಷ್ಟು ಗೊತ್ತು?
ಟಿ. ಜಿ. ಶ್ರೀನಿಧಿ
ಸೂಪರ್ ಮಾರ್ಕೆಟ್ ಎಂದತಕ್ಷಣ ನಮಗೆ ನೆನಪಾಗುವ ಸಂಗತಿಗಳಲ್ಲಿ ಬಿಲ್ಲುಕಟ್ಟೆಯ ಸಿಬ್ಬಂದಿ ಬಳಸುವ ಸ್ಕ್ಯಾನರ್ ಕೂಡ ಒಂದು. ನಾವು ಕೊಂಡ ವಸ್ತುವಿನ ಮೇಲಿರುವ ಕಪ್ಪು ಗೆರೆಗಳ ಸಂಕೇತವೊಂದನ್ನು ಸ್ಕ್ಯಾನ್ ಮಾಡಿದ ಕೂಡಲೆ ಅದರ ಹೆಸರು ಮತ್ತು ಬೆಲೆ ಕಂಪ್ಯೂಟರಿನಲ್ಲಿ ಪ್ರತ್ಯಕ್ಷವಾಗುವುದನ್ನು ನಾವೆಲ್ಲ ನೋಡಿದ್ದೇವೆ.
ಕಪ್ಪು ಗೆರೆಗಳ ಆ ಸಂಕೇತದ ಹೆಸರೇ ಬಾರ್‌ಕೋಡ್. ಈ ಸಂಕೇತಗಳನ್ನು ಸೂಪರ್‌ಮಾರ್ಕೆಟ್‌ಗಳಲ್ಲಷ್ಟೇ ಅಲ್ಲದೆ ಗ್ರಂಥಾಲಯ, ಅಂಚೆ ವ್ಯವಸ್ಥೆ, ಕಾರ್ಖಾನೆ ಮುಂತಾದ ಹಲವೆಡೆ ವ್ಯಾಪಕವಾಗಿ ಬಳಸಲಾಗುತ್ತದೆ.

ಬುಧವಾರ, ಜನವರಿ 25, 2017
ಮೆಮೊರಿ ಕಾರ್ಡ್ ಸಮಾಚಾರ
ಟಿ. ಜಿ. ಶ್ರೀನಿಧಿ
ಡಿಜಿಟಲ್ ಕ್ಯಾಮೆರಾ ಹಾಗೂ ಮೊಬೈಲ್ ಫೋನ್ ಬಳಸುವವರಿಗೆಲ್ಲ ಮೆಮೊರಿ ಕಾರ್ಡುಗಳ ಪರಿಚಯ ಚೆನ್ನಾಗಿಯೇ ಇರುತ್ತದೆ. ಕ್ಯಾಮೆರಾದಲ್ಲಿ ಸೆರೆಹಿಡಿದ ಚಿತ್ರಗಳನ್ನು ಉಳಿಸಿಡಲು, ಮೊಬೈಲಿನ ಶೇಖರಣಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ನಾವು ಇವನ್ನು ಬಳಸುತ್ತೇವೆ. ಟ್ಯಾಬ್ಲೆಟ್ ಕಂಪ್ಯೂಟರುಗಳಲ್ಲಿ, ಎಂಪಿತ್ರೀ ಪ್ಲೇಯರಿನಲ್ಲಿ, ಕಾರ್ ಸ್ಟೀರಿಯೋ - ನ್ಯಾವಿಗೇಶನ್ ವ್ಯವಸ್ಥೆಗಳಲ್ಲೂ ಮೆಮೊರಿ ಕಾರ್ಡುಗಳು ಬಳಕೆಯಾಗುತ್ತವೆ.
ಮೆಮೊರಿ ಕಾರ್ಡುಗಳಲ್ಲಿ ಹಲವು ಬಗೆ. ಬೇರೆಬೇರೆ ರೀತಿಯ ಕಾರ್ಡುಗಳ ಗಾತ್ರ-ಆಕಾರಗಳೂ ವಿಭಿನ್ನವಾಗಿರುತ್ತವೆ. ಮೆಮೊರಿ ಸ್ಟಿಕ್, ಕಾಂಪ್ಯಾಕ್ಟ್‌ಫ್ಲಾಶ್, ಸೆಕ್ಯೂರ್ ಡಿಜಿಟಲ್ (ಎಸ್‌ಡಿ) ಇತ್ಯಾದಿಗಳೆಲ್ಲ ಮೆಮೊರಿ ಕಾರ್ಡ್‌ನ ವಿವಿಧ ಅವತಾರಗಳ ಹೆಸರುಗಳು.

ಸೋಮವಾರ, ಜನವರಿ 23, 2017
ಎಕ್ಸಿಫ್ ಎಂದರೇನು?
ಟಿ. ಜಿ. ಶ್ರೀನಿಧಿ
ಫೇಸ್‌ಬುಕ್‌ನಲ್ಲಿ ಚೆಂದದ ಛಾಯಾಚಿತ್ರವೊಂದನ್ನು ಸೇರಿಸಿದಾಗ ಅದನ್ನು ಹಂಚಿಕೊಂಡವರು ಅಥವಾ ಚಿತ್ರವನ್ನು ಮೆಚ್ಚಿದವರು ಚಿತ್ರದ ಎಕ್ಸಿಫ್ (EXIF) ಡೇಟಾದ ಬಗ್ಗೆ ಮಾತನಾಡುವುದನ್ನು ನೀವು ಗಮನಿಸಿರಬಹುದು.
ಎಕ್ಸಿಫ್ ಎನ್ನುವುದು 'ಎಕ್ಸ್‌ಚೇಂಜಬಲ್ ಇಮೇಜ್ ಫೈಲ್ ಫಾರ್ಮ್ಯಾಟ್' ಎಂಬ ಹೆಸರಿನ ಹ್ರಸ್ವರೂಪ. ಡಿಜಿಟಲ್ ಕ್ಯಾಮೆರಾ ಬಳಸಿ ಕ್ಲಿಕ್ಕಿಸಿದಾಗ ಅದರ ಮೆಮೊರಿಯಲ್ಲಿ ಚಿತ್ರ ಉಳಿದುಕೊಳ್ಳುತ್ತದಲ್ಲ, ಆ ಚಿತ್ರದ ಜೊತೆಗೆ ಉಳಿಸಲಾಗುವ ಹೆಚ್ಚುವರಿ ಮಾಹಿತಿಯೇ ಎಕ್ಸಿಫ್.

ಶುಕ್ರವಾರ, ಜನವರಿ 20, 2017
ಹ್ಯಾಶ್‌ಟ್ಯಾಗ್ ಬಳಸುವ ಮುನ್ನ
ಟಿ. ಜಿ. ಶ್ರೀನಿಧಿ
ಸಮಾಜಜಾಲಗಳಲ್ಲಿ ಕಾಣಸಿಗುವ ಹಲವು ಸಂದೇಶಗಳಲ್ಲಿ ಹ್ಯಾಶ್ (#) ಚಿಹ್ನೆಯಿಂದ ಪ್ರಾರಂಭವಾಗುವ ಪದಗಳನ್ನು ನಾವು ನೋಡುತ್ತೇವೆ. ಇಂತಹ ಪದಗಳಿಗೆ 'ಹ್ಯಾಶ್‌ಟ್ಯಾಗ್'ಗಳೆಂದು ಹೆಸರು.
ಸಂದೇಶ ಬರೆಯುವವರ ಭಾವನೆಯನ್ನು ಪ್ರತಿನಿಧಿಸುವುದರಿಂದ ಪ್ರಾರಂಭಿಸಿ ಸಂಸ್ಥೆಗಳ ಹೆಸರನ್ನೋ ಭಾಷೆಯ ವಿಷಯವನ್ನೋ ನಿರ್ದಿಷ್ಟ ಘಟನೆಯನ್ನೋ ನಿರ್ದೇಶಿಸುವವರೆಗೆ ಹ್ಯಾಶ್‌ಟ್ಯಾಗ್‌ಗಳು ಅನೇಕ ಉದ್ದೇಶಗಳಿಗಾಗಿ ಬಳಕೆಯಾಗುತ್ತವೆ. ಬೆಂಗಳೂರಿಗೆ ಸಂಬಂಧಪಟ್ಟ ವಿಷಯವೆಂದು ಹೇಳಲು #Bengaluru, ಕನ್ನಡದ ಮಾಹಿತಿ ಎನ್ನುವುದಕ್ಕೆ #Kannada - ಹೀಗೆ ಯಾವುದೇ ಬಗೆಯ ಹ್ಯಾಶ್‌ಟ್ಯಾಗ್‌ಗಳನ್ನು ನಾವೇ ಸ್ವತಃ ರೂಪಿಸಿಕೊಳ್ಳಬಹುದು, ಅಥವಾ ಈಗಾಗಲೇ ಇರುವ ಟ್ಯಾಗ್‌ಗಳನ್ನು ನಮ್ಮ ಸಂದೇಶಗಳಲ್ಲಿ ಬಳಸಲೂಬಹುದು.

ಬುಧವಾರ, ಜನವರಿ 18, 2017
ಹಾರ್ಡ್ ಡಿಸ್ಕ್ ಡ್ರೈವ್ ಮತ್ತು ಸಾಲಿಡ್ ಸ್ಟೇಟ್ ಡ್ರೈವ್
ಟಿ. ಜಿ. ಶ್ರೀನಿಧಿ
ಕಂಪ್ಯೂಟರಿನ ಭಾಗಗಳ ಬಗ್ಗೆ ಕೇಳಿದಾಗ ನಮಗೆ ಥಟ್ಟನೆ ನೆನಪಾಗುವ ಹೆಸರುಗಳ ಪೈಕಿ ಹಾರ್ಡ್ ಡಿಸ್ಕ್ ಕೂಡ ಒಂದು. ಮತ್ತೊಮ್ಮೆ ಬಳಸಲು ಬೇಕಾದ ಮಾಹಿತಿಯನ್ನು ಉಳಿಸಿಡಲು ನಾವು ಈ ಸಾಧನವನ್ನು ಬಳಸುತ್ತೇವೆ.
ಹಾರ್ಡ್ ಡಿಸ್ಕ್ ಎನ್ನುವ ಹೆಸರಿಗೆ ಕಾರಣ ಅದರಲ್ಲಿ ಬಳಕೆಯಾಗುವ ಲೋಹದ ತಟ್ಟೆಗಳು. ಅಯಸ್ಕಾಂತೀಯ ಲೇಪನವಿರುವ ಈ ತಟ್ಟೆಗಳ ಮೇಲೆ ಓಡಾಡುವ ಒಂದು ಪುಟ್ಟ ಕಡ್ಡಿಯಂತಹ ಸಾಧನ ನಮ್ಮ ಮಾಹಿತಿಯನ್ನು ಅಲ್ಲಿ ಬರೆದಿಡುತ್ತದೆ, ಬರೆದಿಟ್ಟ ಮಾಹಿತಿಯನ್ನು ಮತ್ತೆ ಓದಲೂ ನೆರವಾಗುತ್ತದೆ. ಈ ತಟ್ಟೆಗಳು, ಓದು-ಬರಹದ ಕಡ್ಡಿ, ಅದು ಓಡಾಡಲು ಬೇಕಾದ ವ್ಯವಸ್ಥೆಯೆಲ್ಲ ಸೇರಿದ್ದೇ ಹಾರ್ಡ್ ಡಿಸ್ಕ್ ಡ್ರೈವ್ (ಎಚ್‌ಡಿಡಿ). ಇದನ್ನು ನಾವು ಸರಳವಾಗಿ ಹಾರ್ಡ್ ಡಿಸ್ಕ್ ಎಂದು ಕರೆಯುತ್ತೇವೆ ಅಷ್ಟೆ: ಕಂಪ್ಯೂಟರಿನ ಒಳಗೆ ಅಡಕವಾಗಿರುವುದು ಇಂಟರ್ನಲ್ ಹಾರ್ಡ್ ಡಿಸ್ಕ್, ಪ್ರತ್ಯೇಕವಾಗಿ ಹೊರಗಿನಿಂದ ಜೋಡಿಸಬಹುದಾದದ್ದು ಎಕ್ಸ್‌ಟರ್ನಲ್ ಹಾರ್ಡ್‌ಡಿಸ್ಕ್.

ಸೋಮವಾರ, ಜನವರಿ 16, 2017
ಡಿಜಿಟಲ್ ಕ್ಯಾಮೆರಾ: ಮೆಗಾಪಿಕ್ಸೆಲ್ ಎಷ್ಟು ಮುಖ್ಯ?
ಟಿ. ಜಿ. ಶ್ರೀನಿಧಿ
ಡಿಜಿಟಲ್ ಕ್ಯಾಮೆರಾ ಕೊಳ್ಳಬೇಕು ಎಂದತಕ್ಷಣ ಕೇಳಸಿಗುವ ಪ್ರಮುಖ ಪ್ರಶ್ನೆ - ಎಷ್ಟು ಮೆಗಾಪಿಕ್ಸೆಲ್ ಇದ್ದರೆ ಒಳ್ಳೆಯದು?
ಈ ಪ್ರಶ್ನೆಗೆ ಉತ್ತರ ಹುಡುಕಲು ಹೊರಡುವ ಮೊದಲು ಪಿಕ್ಸೆಲ್ ಎಂದರೇನು ಎಂದು ತಿಳಿದುಕೊಳ್ಳುವುದು ಅಗತ್ಯ. ಡಿಜಿಟಲ್ ಕ್ಯಾಮೆರಾ ಬಳಸಿ ಕ್ಲಿಕ್ಕಿಸುತ್ತೇವಲ್ಲ, ಅಂತಹ ಪ್ರತಿಯೊಂದು ಚಿತ್ರದಲ್ಲೂ ಅಪಾರ ಸಂಖ್ಯೆಯ ಪುಟ್ಟಪುಟ್ಟ ಚೌಕಗಳಿರುತ್ತವೆ. ಮನೆಯ ನೆಲದಲ್ಲಿ ಟೈಲ್ಸ್ ಇರುತ್ತವಲ್ಲ, ಹಾಗೆ. ಬೇರೆಬೇರೆ ಬಣ್ಣಗಳ ಇಷ್ಟೆಲ್ಲ ಚೌಕಗಳು ಒಟ್ಟಾಗಿ ನಮ್ಮ ಕಣ್ಣಮುಂದೆ ಚಿತ್ರವನ್ನು ಕಟ್ಟಿಕೊಡುತ್ತವೆ.
ಇಂತಹ ಚೌಕಗಳನ್ನು ಪಿಕ್ಸೆಲ್‌ಗಳೆಂದು ಕರೆಯುತ್ತಾರೆ. ಪಿಕ್ಸೆಲ್ ಎಂಬ ಹೆಸರು 'ಪಿಕ್ಚರ್ ಎಲಿಮೆಂಟ್' ಎನ್ನುವುದರ ಹ್ರಸ್ವರೂಪ. ಚಿತ್ರದಲ್ಲಿ ಇರುವ ಪಿಕ್ಸೆಲ್‌ಗಳ ಸಂಖ್ಯೆ ಜಾಸ್ತಿಯಾದಷ್ಟೂ ಅದರ ಸ್ಪಷ್ಟತೆ ಹೆಚ್ಚು. ಅಂದರೆ, ಚಿತ್ರದಲ್ಲಿ ಹೆಚ್ಚು ಸಂಖ್ಯೆಯ ಪಿಕ್ಸೆಲ್‌ಗಳಿದ್ದಷ್ಟೂ ಅದನ್ನು ಹೆಚ್ಚುಹೆಚ್ಚು ದೊಡ್ಡದಾಗಿ ಮುದ್ರಿಸಿಕೊಳ್ಳಬಹುದು.
ಹೆಚ್ಚು ಎಂದರೆ ಎಷ್ಟು ಎಂದು ಹೇಳಬೇಕಲ್ಲ, ಅದಕ್ಕೆ ಬಳಕೆಯಾಗುವುದೇ ಮೆಗಾಪಿಕ್ಸೆಲ್.
ಒಂದು ಮೆಗಾಪಿಕ್ಸೆಲ್ ಎನ್ನುವುದು ಹತ್ತು ಲಕ್ಷ ಪಿಕ್ಸೆಲ್‌ಗಳಿಗೆ ಸಮಾನ.

ಭಾನುವಾರ, ಜನವರಿ 15, 2017
ಜೆನ್‍ಫೋನ್ ಮ್ಯಾಕ್ಸ್‌ನ ಮೂರನೇ ಆವೃತ್ತಿ [ವೀಡಿಯೋ ಕೂಡ ಇದೆ!]
ಇಜ್ಞಾನ ವಿಶೇಷ
ತೈವಾನ್ ಮೂಲದ ತಂತ್ರಜ್ಞಾನ ಸಂಸ್ಥೆ ಏಸಸ್ ರೂಪಿಸುತ್ತಿರುವ ಜೆನ್‌ಫೋನ್ ಸರಣಿಯ ಸ್ಮಾರ್ಟ್‌ಫೋನುಗಳು ಕಳೆದ ಕೆಲವರ್ಷಗಳಿಂದ ನಮ್ಮ ದೇಶದಲ್ಲಿ ಅಪಾರ ಜನಪ್ರಿಯತೆ ಗಳಿಸಿಕೊಂಡಿವೆ. ವಿವಿಧ ಬೆಲೆಗಳಲ್ಲಿ ವಿವಿಧ ವೈಶಿಷ್ಟ್ಯಗಳೊಡನೆ ದೊರಕುವ ಈ ಸರಣಿಯ ಫೋನುಗಳ ಪೈಕಿ ಜೆನ್‌ಫೋನ್ ಮ್ಯಾಕ್ಸ್‌ನದು ವಿಶೇಷ ಸ್ಥಾನ. ಹೆಚ್ಚಿನ ಬ್ಯಾಟರಿ ಸಾಮರ್ಥ್ಯದಿಂದಲೇ ಗುರುತಿಸಿಕೊಂಡಿರುವ ಈ ಸ್ಮಾರ್ಟ್‌ಫೋನ್ ಬೇರೆ ಮೊಬೈಲುಗಳನ್ನು ಚಾರ್ಜ್ ಮಾಡುವ ತನ್ನ ವೈಶಿಷ್ಟ್ಯದಿಂದಲೂ ಸಾಕಷ್ಟು ಹೆಸರುಮಾಡಿದೆ.
ಸುಮಾರು ಹತ್ತುಸಾವಿರ ರೂಪಾಯಿಗಳ ಆಸುಪಾಸಿನ ದರದಲ್ಲಿ ಮಾರುಕಟ್ಟೆಗೆ ಬಂದಿದ್ದ ಜೆನ್‌ಫೋನ್ ಮ್ಯಾಕ್ಸ್‌ನ ಮೊದಲೆರಡು ಆವೃತ್ತಿಗಳನ್ನು ಈ ಹಿಂದೆ ಇಜ್ಞಾನದಲ್ಲಿ ಪರಿಚಯಿಸಲಾಗಿತ್ತು [ಓದಿ: ಜೆನ್‌ಫೋನ್ ಮ್ಯಾಕ್ಸ್ ಇದೀಗ ಇನ್ನಷ್ಟು ಶಕ್ತಿಶಾಲಿ!]. ಪ್ರಸ್ತುತ ಲೇಖನದ ವಸ್ತು ಇದೇ ಸರಣಿಯ ಹೊಸ ಪರಿಚಯವಾದ ಜೆನ್‍ಫೋನ್ ೩ ಮ್ಯಾಕ್ಸ್.

ಶುಕ್ರವಾರ, ಜನವರಿ 13, 2017
ವೈರಸ್ ತಡೆಗೆ ಆಂಟಿವೈರಸ್
ಟಿ. ಜಿ. ಶ್ರೀನಿಧಿ
ಕಂಪ್ಯೂಟರಿನ, ಸ್ಮಾರ್ಟ್‌ಫೋನಿನ ಸಾಫ್ಟ್‌ವೇರ್‌ನಿಂದ (ತಂತ್ರಾಂಶ) ಎಷ್ಟು ಉಪಯೋಗವಿದೆಯೋ ಅಷ್ಟೇ ಪ್ರಮಾಣದ ತೊಂದರೆಯೂ ಆಗಬಲ್ಲದು. ಒಳ್ಳೆಯ ಉದ್ದೇಶಕ್ಕೆ ತಂತ್ರಾಂಶಗಳಿರುವಂತೆ ಕೆಟ್ಟ ಕೆಲಸಗಳಿಗಾಗಿಯೂ ತಂತ್ರಾಂಶಗಳು (ಮಾಲ್‌ವೇರ್ - ಕುತಂತ್ರಾಂಶ) ರೂಪುಗೊಂಡಿರುವುದು ಇದಕ್ಕೆ ಕಾರಣ.
ಕಂಪ್ಯೂಟರ್ ಕಾರ್ಯಾಚರಣೆಗೆ ತೊಂದರೆಮಾಡುವುದು, ಶೇಖರಿಸಿಟ್ಟ ಮಾಹಿತಿಯನ್ನು ಹಾಳುಮಾಡುವುದು, ಖಾಸಗಿ ಮಾಹಿತಿಯನ್ನು ಕದ್ದು ದುರ್ಬಳಕೆ ಮಾಡಿಕೊಳ್ಳುವುದು - ಹೀಗೆ ಕುತಂತ್ರಾಂಶಗಳು ಬೇಕಾದಷ್ಟು ಬಗೆಯಲ್ಲಿ ತೊಂದರೆಕೊಡುತ್ತವೆ. ವೈರಸ್, ಟ್ರೋಜನ್, ಸ್ಪೈವೇರ್, ಆಡ್‌ವೇರ್ ಇವೆಲ್ಲ ಕುತಂತ್ರಾಂಶಗಳಿಗೆ ಉದಾಹರಣೆಗಳು.
ರೋಗ ಬಾರದಂತಿರಲು, ಹಾಗೂ ಬಂದಾಗ ಅದನ್ನು ವಾಸಿಮಾಡಿಕೊಳ್ಳಲು ನಾವು ಔಷಧಿ ತೆಗೆದುಕೊಳ್ಳುತ್ತೇವಲ್ಲ, ಕಂಪ್ಯೂಟರ್ ಹಾಗೂ ಸ್ಮಾರ್ಟ್‌ಫೋನುಗಳ ಪಾಲಿಗೆ ಅಂತಹ ಔಷಧಿಯೆಂದರೆ ಆಂಟಿವೈರಸ್ ತಂತ್ರಾಂಶ. ಕುತಂತ್ರಾಂಶಗಳನ್ನು ಗುರುತಿಸಿ ಅವು ತೊಂದರೆಮಾಡದಂತೆ ತಡೆಯುವುದು ಈ ತಂತ್ರಾಂಶದ ಕೆಲಸ.

ಬುಧವಾರ, ಜನವರಿ 11, 2017
ಫಾಸ್ಟ್ ಚಾರ್ಜಿಂಗ್ ಎಂದರೇನು?
ಟಿ. ಜಿ. ಶ್ರೀನಿಧಿ
ಈಚಿನ ದಿನಗಳಲ್ಲಿ ಮೊಬೈಲ್ ಫೋನುಗಳೇನೋ ಸ್ಮಾರ್ಟ್ ಆಗುತ್ತಿವೆ, ಸರಿ. ಆದರೆ ಅವುಗಳ ಬ್ಯಾಟರಿಯಲ್ಲಿ ಮಾತ್ರ ಹೆಚ್ಚಿನ ಬದಲಾವಣೆ ಕಂಡುಬಂದಿಲ್ಲ; ಪದೇಪದೇ ಚಾರ್ಜ್ ಮಾಡಬೇಕಾದ ಪರಿಸ್ಥಿತಿಯಿಂದ - ಪ್ರತಿಬಾರಿ ಚಾರ್ಜ್ ಮಾಡಲು ಗಂಟೆಗಟ್ಟಲೆ ಕಾಯಬೇಕಾದ ಫಜೀತಿಯಿಂದ ಇನ್ನೂ ಬಿಡುಗಡೆ ಸಿಕ್ಕಿಲ್ಲ.
ಫೋನ್ ಚಾರ್ಜ್ ಆಗಲು ಹೀಗೆ ಗಂಟೆಗಟ್ಟಲೆ ಕಾಯುವ ಬದಲಿಗೆ ಕೆಲವೇ ಸೆಕೆಂಡುಗಳಲ್ಲಿ ಪೂರ್ತಿ ಚಾರ್ಜ್ ಆಗುವ ಬ್ಯಾಟರಿ ಸಿಕ್ಕರೆ ಹೇಗೆ? ಈ ಪ್ರಶ್ನೆಗೆ ಉತ್ತರ ಹುಡುಕಲು ಹಲವು ಪ್ರಯತ್ನಗಳು ನಡೆದಿವೆ.
ಈಚೆಗೆ ಜನಪ್ರಿಯತೆ ಗಳಿಸಿಕೊಳ್ಳುತ್ತಿರುವ 'ಫಾಸ್ಟ್ ಚಾರ್ಜಿಂಗ್' ತಂತ್ರಜ್ಞಾನ ಇಂತಹ ಪ್ರಯತ್ನಗಳಲ್ಲೊಂದು.

ಸೋಮವಾರ, ಜನವರಿ 9, 2017
ಫೈಲ್ ರಿಕವರಿ ಮಾಡುವುದು ಹೀಗೆ...
ಟಿ. ಜಿ. ಶ್ರೀನಿಧಿ
ಪೆನ್‌ಡ್ರೈವ್, ಮೆಮೊರಿ ಕಾರ್ಡ್ ಇತ್ಯಾದಿಗಳನ್ನೆಲ್ಲ ಮತ್ತೆ ಮತ್ತೆ ಬಳಸುತ್ತಿರುವುದು ಸುಲಭ, ನಿಜ. ಆದರೆ ಮಾಹಿತಿ ತುಂಬುವ - ಅಳಿಸುವ - ಮತ್ತೆ ತುಂಬುವ ಈ ಪ್ರಕ್ರಿಯೆ ಒಂದಷ್ಟು ಸಾರಿ ಪುನರಾವರ್ತನೆ ಆಗುತ್ತಿದ್ದಂತೆ ಆ ಸಾಧನದ ವಿಶ್ವಾಸಾರ್ಹತೆ ಕಡಿಮೆಯಾಗುತ್ತ ಬರುತ್ತದೆ. ಇದ್ದಕ್ಕಿದ್ದಂತೆ ಒಂದು ದಿನ ಅದರಲ್ಲಿರುವ ಮಾಹಿತಿಯನ್ನು ಓದುವುದೇ ಸಾಧ್ಯವಾಗುವುದಿಲ್ಲ!
ಹೀಗಾಗಲು ಹಲವು ಕಾರಣಗಳಿರಬಹುದು. ಬಹಳಷ್ಟು ಸಾರಿ ಬಳಸಿ ಹಳೆಯದಾಗಿರುವುದರಿಂದ ಅದು ಹಾಳಾಗಿರಬಹುದು, ಅಥವಾ ಬ್ಯಾಡ್ ಸೆಕ್ಟರ್ ಸಮಸ್ಯೆ ಸೃಷ್ಟಿಯಾಗಿರಬಹುದು. ಅಷ್ಟೇ ಏಕೆ, ವೈರಸ್ ಬಂದಿರುವ ಅಥವಾ ಕಂಪ್ಯೂಟರಿನಲ್ಲೇ ಸಮಸ್ಯೆಯಿರುವ ಸಾಧ್ಯತೆಯೂ ಇರುತ್ತದೆ.

ಶುಕ್ರವಾರ, ಜನವರಿ 6, 2017
ಇದು 'ವೈರಲ್' ವಿಷಯ
ಟಿ. ಜಿ. ಶ್ರೀನಿಧಿ
ವೈರಸ್ಸುಗಳಿವೆಯಲ್ಲ, ಜೀವಜಗತ್ತಿನವು, ಒಂದೆಡೆಯಿಂದ ಇನ್ನೊಂದೆಡೆಗೆ ಕ್ಷಿಪ್ರವಾಗಿ ಸಾಗುವಲ್ಲಿ ಅವನ್ನು ಬಿಟ್ಟರಿಲ್ಲ. ಸೊಳ್ಳೆಗಳ ಮೂಲಕವೋ ನೀರು-ಗಾಳಿಯ ಮೂಲಕವೋ ಅವು ಹರಡುತ್ತಲೇ ಹೋಗುತ್ತವೆ, ಅದೆಷ್ಟೋ ಜನರಿಗೆ ರೋಗಗಳನ್ನು ಅಂಟಿಸುತ್ತವೆ.
ಡಿಜಿಟಲ್ ಜಗತ್ತಿನ ವೈರಸ್ಸುಗಳೂ ಜೀವಜಗತ್ತಿನ ವೈರಸ್ಸುಗಳಂತೆಯೇ. ಒಂದೆಡೆಯಿಂದ ಇನ್ನೊಂದೆಡೆಗೆ ಸಾಗುತ್ತ ಸಿಕ್ಕ ಕಂಪ್ಯೂಟರು - ಸ್ಮಾರ್ಟ್‌ಫೋನುಗಳಿಗೆಲ್ಲ ತೊಂದರೆಕೊಡುವುದೇ ಅವುಗಳ ಕೆಲಸ.
ಈ ವೈರಸ್ಸುಗಳು ಹರಡುವ ರೀತಿಯಿದೆಯಲ್ಲ, ಅದನ್ನೇ ಅನುಕರಿಸುವ ಇನ್ನೊಂದು ವಿದ್ಯಮಾನವೂ ಈಚೆಗೆ ಹೆಸರುಮಾಡುತ್ತಿದೆ. ಅಂತರಜಾಲದ ಮಾಧ್ಯಮ ಬಳಸಿ - ಜಾಹೀರಾತಿನ ದುಬಾರಿ ವೆಚ್ಚವಿಲ್ಲದೆಯೇ - ಅಪಾರ ಪ್ರಚಾರ ಗಿಟ್ಟಿಸಿಕೊಳ್ಳುವ ಸಂಗತಿಗಳು ಬಳಸುವ ತಂತ್ರದ ಹೆಸರೂ 'ವೈರಲ್' ಎಂದೇ.

ಬುಧವಾರ, ಜನವರಿ 4, 2017
ಪ್ರಾಸೆಸರ್ ಪರಿಚಯ ಇಲ್ಲಿದೆ ನೋಡಿ!
ಟಿ. ಜಿ. ಶ್ರೀನಿಧಿ
ಕಂಪ್ಯೂಟರ್ ವಿಜ್ಞಾನದ ಪ್ರಾಥಮಿಕ ಪಾಠಗಳನ್ನು ಓದಿದವರೆಲ್ಲರಿಗೂ ಕೇಂದ್ರೀಯ ಸಂಸ್ಕರಣ ಘಟಕ ಅಥವಾ ಸೆಂಟ್ರಲ್ ಪ್ರಾಸೆಸಿಂಗ್ ಯುನಿಟ್ (ಸಿಪಿಯು) ಎಂಬ ಹೆಸರಿನ ಪರಿಚಯ ಇರುತ್ತದೆ. ಕಂಪ್ಯೂಟರ್, ಮೊಬೈಲ್, ಟ್ಯಾಬ್ಲೆಟ್ ಮುಂತಾದ ಸಾಧನಗಳಲ್ಲಿ ಸಿಪಿಯುನಂತೆ ಕೆಲಸಮಾಡುವುದು ಅವುಗಳ ಪ್ರಾಸೆಸರ್. ಈ ಸಾಧನಗಳ ಚಟುವಟಿಕೆಯ ಪ್ರತಿ ಹೆಜ್ಜೆಯಲ್ಲೂ ನಡೆಯುವ ಅಸಂಖ್ಯ ಲೆಕ್ಕಾಚಾರಗಳನ್ನೆಲ್ಲ ನಿಭಾಯಿಸುವುದು ಪ್ರಾಸೆಸರ್‌ನ ಜವಾಬ್ದಾರಿ.
ಪ್ರಾಸೆಸರ್ ಸಾಮರ್ಥ್ಯವನ್ನು ಅದರ ವೇಗದ (ಕ್ಲಾಕ್ ಸ್ಪೀಡ್) ಮೂಲಕ ಪ್ರತಿನಿಧಿಸುವುದು ಸಂಪ್ರದಾಯ. ಈ ಪ್ರಾಸೆಸರ್ ೧.೫ ಗಿಗಾಹರ್ಟ್ಸ್‌ನದು ಎಂದೋ ೩ ಗಿಗಾಹರ್ಟ್ಸ್‌ನದು ಎಂದು ಹೇಳುತ್ತಾರಲ್ಲ, ಆ ಸಂಖ್ಯೆ ಸೂಚಿಸುವುದು ಇದೇ ಕ್ಲಾಕ್ ಸ್ಪೀಡ್ ಅನ್ನು. ಹರ್ಟ್ಸ್ ಎನ್ನುವುದು ಇದರ ಏಕಮಾನ.

ಸೋಮವಾರ, ಜನವರಿ 2, 2017
ಇಮೇಲ್ ಇಜ್ಞಾನ: 'ಸಿಸಿ'ಗೂ 'ಬಿಸಿಸಿ'ಗೂ ಏನು ವ್ಯತ್ಯಾಸ?
ಟಿ. ಜಿ. ಶ್ರೀನಿಧಿ
ಇಮೇಲ್ ಕಳುಹಿಸುವಾಗ ಸಂದೇಶ ತಲುಪಬೇಕಾದವರ ವಿಳಾಸ ದಾಖಲಿಸಲು ಮೂರು ಆಯ್ಕೆಗಳಿರುವುದನ್ನು ನೋಡಿರಬಹುದು: ಟು, ಸಿಸಿ ಹಾಗೂ ಬಿಸಿಸಿ. ನಮ್ಮ ಸಂದೇಶ ಯಾರಿಗೆ ತಲುಪಬೇಕೋ ಅವರ ಇಮೇಲ್ ವಿಳಾಸವನ್ನು 'ಟು' ವಿಭಾಗದಲ್ಲಿ ದಾಖಲಿಸುತ್ತೇವೆ.
ಕಳುಹಿಸುತ್ತಿರುವ ಸಂದೇಶದ ಬಗೆಗೆ ಬೇರೆ ಯಾರಿಗಾದರೂ ಮಾಹಿತಿ ನೀಡಬೇಕು ಎನ್ನುವುದಾದಲ್ಲಿ ಅವರ ವಿಳಾಸವನ್ನು 'ಸಿಸಿ' (ಕಾರ್ಬನ್ ಕಾಪಿ) ವಿಭಾಗದಲ್ಲಿ ಬರೆಯಬಹುದು. 'ಸಿಸಿ' ವಿಭಾಗದಲ್ಲಿ ನೀವು ಯಾರ ಇಮೇಲ್ ವಿಳಾಸವನ್ನು ದಾಖಲಿಸುತ್ತೀರೋ ಅವರಿಗೆ ಆ ಸಂದೇಶದ ಒಂದು ಪ್ರತಿ ತಲುಪುತ್ತದೆ. ಇಮೇಲ್ ಸಂದೇಶ ಯಾರಿಗೆಲ್ಲ ಹೋಗಿದೆ ಎನ್ನುವ ವಿಷಯ 'ಟು' ಹಾಗೂ 'ಸಿಸಿ' ವಿಭಾಗದಲ್ಲಿರುವ ಎಲ್ಲರಿಗೂ ತಿಳಿಯುತ್ತದೆ.

ಶುಕ್ರವಾರ, ಡಿಸೆಂಬರ್ 30, 2016
ಎಂಬಿಪಿಎಸ್ ಎಂದರೇನು?
ಟಿ. ಜಿ. ಶ್ರೀನಿಧಿ
ಒಂದಲ್ಲ ಒಂದು ಸಾಧನದ ಮೂಲಕ ನಾವು ಸದಾಕಾಲ ಅಂತರಜಾಲ ಸಂಪರ್ಕವನ್ನು ಬಳಸುತ್ತಲೇ ಇರುತ್ತೇವಲ್ಲ, ಹಾಗೆ ಬಳಸುವಾಗ ಸಂಪರ್ಕದ ವೇಗದ ಬಗೆಗೂ ಕೇಳಿರುತ್ತೇವೆ: ೮ ಎಂಬಿಪಿಎಸ್, ೧೬ ಎಂಬಿಪಿಎಸ್, ೫೦ ಎಂಬಿಪಿಎಸ್... ಹೀಗೆ.
ಎಂಬಿ ಅಂದರೆ ಮೆಗಾಬೈಟ್ ಸರಿ, ಆದರೆ ಇದೇನಿದು ಎಂಬಿಪಿಎಸ್ (Mbps)?
ಯಾವುದೇ ದೂರಸಂಪರ್ಕ ವ್ಯವಸ್ಥೆಯ ಮೂಲಕ ಒಂದು ನಿರ್ದಿಷ್ಟ ಅವಧಿಯಲ್ಲಿ ಹಾದುಹೋಗುವ ದತ್ತಾಂಶದ (ಡೇಟಾ) ಸರಾಸರಿ ಪ್ರಮಾಣವನ್ನು ಡೇಟಾ ರೇಟ್ ಎಂದು ಕರೆಯುತ್ತಾರೆ. ಒಂದಷ್ಟು ದತ್ತಾಂಶವನ್ನು ತೆಗೆದುಕೊಂಡರೆ ಅದು ಒಂದು ಸ್ಥಳದಿಂದ ಮತ್ತೊಂದಕ್ಕೆ ಎಷ್ಟು ವೇಗವಾಗಿ ತಲುಪಬಲ್ಲದು ಎನ್ನುವುದನ್ನು ಈ ಡೇಟಾ ರೇಟ್ ಸೂಚಿಸುತ್ತದೆ.

ಬುಧವಾರ, ಡಿಸೆಂಬರ್ 28, 2016
ನಮ್ಮ ಕೈಬರಹ ಕಂಪ್ಯೂಟರಿಗೂ ಅರ್ಥ ಆಗುತ್ತಾ?
ಟಿ. ಜಿ. ಶ್ರೀನಿಧಿ
ಮುದ್ರಿತ ಅಕ್ಷರಗಳನ್ನು ಗುರುತಿಸಿ ಡಿಜಿಟಲ್ ರೂಪಕ್ಕೆ ಪರಿವರ್ತಿಸುವ ಓಸಿಆರ್ ತಂತ್ರಜ್ಞಾನದ ಬಗ್ಗೆ ನಾವು ಕೇಳಿದ್ದೇವೆ [ಓದಿ: ಓಸಿಆರ್ ಎಂಬ ಅಕ್ಷರ ಜಾಣ]. ಇದೇ ರೀತಿ ಹಸ್ತಾಕ್ಷರವನ್ನು ಗುರುತಿಸುವ 'ಹ್ಯಾಂಡ್‌ರೈಟಿಂಗ್ ರೆಕಗ್ನಿಶನ್' ತಂತ್ರಜ್ಞಾನವೂ ಇದೆ.
ಕೈಬರಹದ ಕಡತದ ಚಿತ್ರ - ಟಚ್‌ಸ್ಕ್ರೀನ್ ಮೇಲೆ ಬರೆದ ಪಠ್ಯವನ್ನೆಲ್ಲ ಪರಿಶೀಲಿಸಿ ಅದರಲ್ಲಿರುವ ಅಕ್ಷರಗಳನ್ನು ಗುರುತಿಸುವುದು, ಹಾಗೆ ಗುರುತಿಸಿದ್ದನ್ನು ಕಂಪ್ಯೂಟರಿಗೆ ಅರ್ಥವಾಗುವ ಭಾಷೆಗೆ ಬದಲಿಸುವುದು ಈ ತಂತ್ರಜ್ಞಾನದ ಕೆಲಸ.
ಹಸ್ತಾಕ್ಷರ ಗುರುತಿಸಲು ಎರಡು ಮಾರ್ಗಗಳನ್ನು ಅನುಸರಿಸುವುದು ಸಾಧ್ಯ.

ಸೋಮವಾರ, ಡಿಸೆಂಬರ್ 26, 2016
ಡಿಜಿಟಲ್ ಲೋಕದಲ್ಲಿ ಸುರಕ್ಷತೆ: ನೆನಪಿಡಬೇಕಾದ ಕೆಲ ಅಂಶಗಳು
ಟಿ. ಜಿ. ಶ್ರೀನಿಧಿ
ಹೊಸದನ್ನು ಪ್ರಯತ್ನಿಸುವ ಆಸಕ್ತಿಯಿಂದಲೋ ಅನಿವಾರ್ಯತೆಯಿಂದಲೋ ತಮ್ಮ ಹಣಕಾಸು ವ್ಯವಹಾರಗಳಿಗೆ ಡಿಜಿಟಲ್ ಲೋಕದತ್ತ ಹೊರಳುತ್ತಿರುವವರ ಸಂಖ್ಯೆ ಇತ್ತೀಚೆಗೆ ಜಾಸ್ತಿಯಾಗುತ್ತಿದೆ. ಹೀಗೆ ತಂತ್ರಜ್ಞಾನದ ಸವಲತ್ತುಗಳನ್ನು ಹೊಸದಾಗಿ ಪರಿಚಯಿಸಿಕೊಳ್ಳುವಾಗ ಅವುಗಳ ಬಳಕೆಯ ಬಗ್ಗೆ ತಿಳಿದುಕೊಳ್ಳಲು ನಾವು ಆಸಕ್ತಿತೋರಿಸುತ್ತೇವಲ್ಲ, ಅಲ್ಲಿ ನಮ್ಮ ಮಾಹಿತಿಯನ್ನು ಸುರಕ್ಷಿತವಾಗಿಡುವ ಬಗೆಗೂ ಅಷ್ಟೇ ಆಸಕ್ತಿವಹಿಸಬೇಕಾದ್ದು ಅನಿವಾರ್ಯ.
ಹೌದು, ಅಂತರಜಾಲ - ವಿಶ್ವವ್ಯಾಪಿ ಜಾಲಗಳ ವರ್ಚುಯಲ್ ಜಗತ್ತು ಹೊರಗಿನ ನಮ್ಮ ಪ್ರಪಂಚದಂತೆಯೇ. ಅಲ್ಲಿ ಒಳ್ಳೆಯ ಸಂಗತಿಗಳು ಎಷ್ಟಿವೆಯೋ ಕೆಟ್ಟವೂ ಅಷ್ಟೇ ಇವೆ. ಹಾಗಾಗಿ ಜಾಲಲೋಕದಲ್ಲಿರುವಾಗ ನಾವು ಯಾವಾಗಲೂ ನಮ್ಮ ಎಚ್ಚರಿಕೆಯಲ್ಲೇ ಇರಬೇಕು.
ಇಲ್ಲಿ ಜೋಪಾನಮಾಡಬೇಕಾದ ಸಂಗತಿಗಳ ಪೈಕಿ ಮೊದಲ ಸ್ಥಾನ ಪಾಸ್‌ವರ್ಡ್‌ಗಳದು.

ಶುಕ್ರವಾರ, ಡಿಸೆಂಬರ್ 23, 2016
ನಮ್ಮ ಲೊಕೇಶನ್ ಕಳುಹಿಸುವುದು ಹೇಗೆ ಗೊತ್ತೇ?
ಟಿ. ಜಿ. ಶ್ರೀನಿಧಿ
ಎಲ್ಲಿಗಾದರೂ ಹೊರಟಾಗ ನಾವು ಹೋಗಬೇಕಾದ ಸ್ಥಳದ ಬಗೆಗೆ ಗೂಗಲ್ ಸರ್ಚ್ ಮಾಡಿದರೆ ಆ ಕುರಿತ ಮಾಹಿತಿಯ ಜೊತೆಗೆ ಅದು ಎಲ್ಲಿದೆ ಎನ್ನುವುದನ್ನೂ ಮ್ಯಾಪಿನಲ್ಲಿ ನೋಡುವುದು ಸಾಧ್ಯ. ಗ್ಲೋಬಲ್ ಪೊಸಿಶನಿಂಗ್ ಸಿಸ್ಟಂ (ಜಿಪಿಎಸ್) ಆಧರಿಸಿ ಕೆಲಸಮಾಡುವ ಗೂಗಲ್ ಮ್ಯಾಪ್ಸ್‌ನಂತಹ ಸೌಲಭ್ಯಗಳನ್ನು ಬಳಸಿಕೊಂಡು ನಾವು ಅಲ್ಲಿಗೆ ತಲುಪುವುದು ಹೇಗೆ ಎಂದು ತಿಳಿದುಕೊಳ್ಳಬಹುದು.
ಆದರೆ ನಾವು ಇರುವ ಸ್ಥಳಕ್ಕೆ ಬೇರೆಯವರನ್ನು ಕರೆಯಬೇಕು ಎಂದಾಗ ಅವರಿಗೆ ಆ ವಿವರ ತಲುಪಿಸುವುದು ಹೇಗೆ?

ಬುಧವಾರ, ಡಿಸೆಂಬರ್ 21, 2016
ಯುಪಿಐ: ಹಣ ವರ್ಗಾವಣೆ ಇದೀಗ ಇಮೇಲ್ ಕಳಿಸುವಷ್ಟೇ ಸುಲಭ!
ಟಿ. ಜಿ. ಶ್ರೀನಿಧಿ
ಒಂದು ಕಾಲವಿತ್ತು, ಆಗ ಯಾರಿಗಾದರೂ ಸಂದೇಶ ಕಳುಹಿಸಬೇಕಾದರೆ ಅದನ್ನೊಂದು ಪತ್ರದಲ್ಲಿ ಬರೆದು, ವಿಳಾಸ ಬರೆದ ಲಕೋಟೆಯೊಳಗಿಟ್ಟು, ಸ್ಟಾಂಪು ಹಚ್ಚಿ ಅಂಚೆಡಬ್ಬಕ್ಕೆ ಹಾಕಿಬರಬೇಕಿತ್ತು. ವಿಳಾಸದಾರರಿಗೆ ಅದು ತಲುಪುತ್ತಿದ್ದದ್ದು ಅಂಚೆಯವರು ತಲುಪಿಸಿದಾಗಲಷ್ಟೇ. ಇಮೇಲ್ ಬಂದ ತಕ್ಷಣ ಈ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಯಿತು, ಕೇವಲ ಒಂದು ಸಾಲಿನ ವಿಳಾಸವನ್ನಷ್ಟೇ ಬರೆದು ಸಂದೇಶಗಳನ್ನು ಯಾವಾಗ ಬೇಕಾದರೂ ಕಳುಹಿಸುವುದು ಸಾಧ್ಯವಾಯಿತು.
ನಮ್ಮ ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸುವ ಕೆಲಸ ತೀರಾ ಇತ್ತೀಚಿನವರೆಗೂ ಪತ್ರ ಬರೆದು ಪೋಸ್ಟಿಗೆ ಹಾಕುವ ಕೆಲಸದಷ್ಟೇ ಕ್ಲಿಷ್ಟವಾಗಿತ್ತು. ಎನ್‌ಇಎಫ್‌ಟಿಯಂತಹ "ಹೈಟೆಕ್" ವ್ಯವಸ್ಥೆಗಳಲ್ಲೂ ಐಎಫ್‌ಎಸ್‌ಸಿ ಸಂಖ್ಯೆ, ಅಕೌಂಟ್ ಸಂಖ್ಯೆ ಎಂದು ಬೇರೆಬೇರೆ ಮಾಹಿತಿಯನ್ನೆಲ್ಲ ಸರಿಯಾಗಿ ನಿಭಾಯಿಸಬೇಕಾದ್ದು - ಹಣ ವರ್ಗಾವಣೆಯಾಗಲು ಕಾಯಬೇಕಾದ್ದು ಅನಿವಾರ್ಯವಾಗಿತ್ತು.
ಅಂಚೆ ವ್ಯವಸ್ಥೆಯಲ್ಲಿ ಇಮೇಲ್ ತಂದಂತಹುದೇ ಬದಲಾವಣೆಯನ್ನು ಈ ಕೆಲಸದಲ್ಲಿ ತರಲು ಹೊರಟಿರುವುದು ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಎಂಬ ವ್ಯವಸ್ಥೆ.

ಮಂಗಳವಾರ, ಡಿಸೆಂಬರ್ 20, 2016
ಸಾಮಾನ್ಯರಲ್ಲಿ ಅಸಾಮಾನ್ಯ: ಎಕೆಬಿ
ಕೊಳ್ಳೇಗಾಲ ಶರ್ಮ
“ಅಡ್ಯನಡ್ಕರು ಇನ್ನಿಲ್ಲ.” ಹೀಗೊಂದು ಮೆಸೇಜು ಹಿರಿಯ ಮಿತ್ರ ಅನಂತರಾಮುರವರಿಂದ ಬಂದಾಗ ಏನು ಉತ್ತರಿಸಬೇಕೋ ತೋಚಲೇ ಇಲ್ಲ. “ಸೋ ಸ್ಯಾಡ್” ಎಂದು ಮೆಸೇಜಿಸಿಬಿಟ್ಟೆ.
ಆದರೆ ಆ ಎರಡು ಪದಗಳಲ್ಲಿ ಇಲ್ಲದ ನೋವು, ಭಾವಗಳು ಅನಂತರ ಇಡೀ ರಾತ್ರಿ ಕಾಡಿದುವೆಂದರೆ ತಪ್ಪಲ್ಲ. ಪ್ರೊಫೆಸರ್ ಅಡ್ಯನಡ್ಕ ಕೃಷ್ಣಭಟ್ಟರು ನನಗೂ ಶ್ರೀನಿಧಿಗೂ ಎಕೆಬಿ ಸರ್. ಅವರು ವೃತ್ತಿಬಾಂಧವರಷ್ಟೆ ಆಗಿರಲಿಲ್ಲ. ಅದಕ್ಕಿಂತಲೂ ಹೆಚ್ಚಿನದೇನನ್ನೋ ಕಳೆದುಕೊಂಡೆವು ಎಂದು ನಮಗಿಬ್ಬರಿಗೂ ಅನಿಸಿದ್ದು ಸಹಜವೇ.
ಎಕೆಬಿ ಹಾಗೂ ನನ್ನ ಬಾಂಧವ್ಯ ಮೂವತ್ತು ವರ್ಷಗಳನ್ನೂ ಮೀರಿದ್ದು. ನಾನಾಗ ಅವರ ವಯಸ್ಸಿನಲ್ಲಿ ಅರ್ಧ ವಯಸ್ಸಿನವನು ಅಷ್ಟೆ. ಮಣಿಪಾಲದಲ್ಲಿದ್ದ ನನಗೆ ಉಡುಪಿಗೆ ಜನವಿಜ್ಞಾನ ಜಾಥಾ ಬರುತ್ತಿದೆ ಎಂದು ತಿಳಿಯಿತು, “ಭಾಗವಹಿಸಲು ಇಚ್ಛೆಯಿರುವವರು ಪ್ರೊಫೆಸರ್ ಅಡ್ಯನಡ್ಕ ಕೃಷ್ಣಭಟ್ಟರು, ಫಿಸಿಕ್ಸ್ ಪ್ರೊಫೆಸರ್, ವಿಜಯ ಕಾಲೇಜು, ಮುಲ್ಕಿ ಇವರನ್ನು ಸಂಪರ್ಕಿಸಿ,” ಎಂದು ಸುದ್ದಿ ಓದಿದೆ. ಕೃಷ್ಣಭಟ್ಟರಿಗೆ ಒಂದು ಪತ್ರ ಬರೆದೆ. ಮಾರೋಲೆ ತಡವಾಗದೆಯೇ ತಲುಪಿತು. ಆದರೆ ನಾನು ಜಾಥಾದಲ್ಲಿ ಭಾಗವಹಿಸಲು ಹೋಗಲಿಲ್ಲವೆನ್ನಿ.

ಸೋಮವಾರ, ಡಿಸೆಂಬರ್ 19, 2016
E, H, H+ ಇದೆಲ್ಲ ಏನು?
ಟಿ. ಜಿ. ಶ್ರೀನಿಧಿ
ಮೊಬೈಲ್ ಫೋನ್ ಪರದೆಯ ಮೇಲ್ತುದಿಯಲ್ಲಿ ಹಲವು ಸಂಕೇತಗಳು ಕಾಣಸಿಗುವುದು ನಮಗೆಲ್ಲ ಗೊತ್ತು. ಈಗ ಸಮಯ ಎಷ್ಟು, ಬ್ಯಾಟರಿಯಲ್ಲಿ ಎಷ್ಟು ಶಕ್ತಿಯಿದೆ, ಮೊಬೈಲ್ ಸಿಗ್ನಲ್ ಹೇಗಿದೆ, ಬ್ಲೂಟೂತ್ ಚಾಲೂ ಆಗಿದೆಯೇ ಎನ್ನುವುದನ್ನೆಲ್ಲ ಈ ಸಂಕೇತಗಳು ನಮಗೆ ತಿಳಿಸುತ್ತವೆ.
ಈ ಪೈಕಿ ಇಂಟರ್‌ನೆಟ್ ಸಂಪರ್ಕವನ್ನು ಸೂಚಿಸುವ ಇನ್ನೊಂದು ಸಂಕೇತವೂ ಇರುತ್ತದೆ. ವೈ-ಫೈ ಸಂಪರ್ಕ ಬಳಸುವಾಗ ಇಲ್ಲಿ ಒಂದೇ ರೀತಿಯ ಚಿಹ್ನೆ ಇದ್ದರೆ ಮೊಬೈಲ್ ಇಂಟರ್‌ನೆಟ್ ಬಳಸುವಾಗ ಮಾತ್ರ E, H, H+ ಮುಂತಾದ ಬೇರೆಬೇರೆ ಚಿಹ್ನೆಗಳು ಕಾಣಿಸಿಕೊಳ್ಳುತ್ತವೆ.

ಶುಕ್ರವಾರ, ಡಿಸೆಂಬರ್ 16, 2016
ಮೊಬೈಲಿಗೊಂದು ಕೀಬೋರ್ಡು!
ಟಿ. ಜಿ. ಶ್ರೀನಿಧಿ
ಮೊಬೈಲಿನಲ್ಲಿ, ಟ್ಯಾಬ್ಲೆಟ್ಟಿನಲ್ಲಿ ಟಚ್ ಸ್ಕ್ರೀನ್ ಬಳಸಿ ಟೈಪಿಸುವುದು ನಮಗೆಲ್ಲ ಚೆನ್ನಾಗಿಯೇ ಅಭ್ಯಾಸವಾಗಿಬಿಟ್ಟಿದೆ. ಆದರೂ ಕೆಲವೊಮ್ಮೆ ದೊಡ್ಡ ಸಂದೇಶಗಳನ್ನು ಟೈಪಿಸುವಾಗ, ಮೊಬೈಲಿನಲ್ಲೇ ಕಡತಗಳನ್ನು ರೂಪಿಸುವ ಅನಿವಾರ್ಯ ಎದುರಾದಾಗ ಭೌತಿಕ ಕೀಲಿಮಣೆ (ಕೀಬೋರ್ಡ್) ಇದ್ದಿದ್ದರೆ ಎಷ್ಟು ಚೆನ್ನಾಗಿತ್ತಲ್ಲ ಎನ್ನಿಸುವುದು ಸಹಜ.
ಹೈಬ್ರಿಡ್ ಅಥವಾ ಟೂ-ಇನ್-ಒನ್ ಕಂಪ್ಯೂಟರುಗಳು ಈ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಬಲ್ಲವು.

ಮಂಗಳವಾರ, ಡಿಸೆಂಬರ್ 13, 2016
ಚಂಡಮಾರುತಕ್ಕೂ ಇಂಟರ್‌ನೆಟ್ ಸಂಪರ್ಕಕ್ಕೂ ಏನು ಸಂಬಂಧ? ಈ ಲೇಖನ ಓದಿ!
ಟಿ. ಜಿ. ಶ್ರೀನಿಧಿ
ನಾವು ಮೊಬೈಲಿನಲ್ಲಿ ಮಾತನಾಡುತ್ತೇವೆ, ಅಂತರಜಾಲ ಸಂಪರ್ಕ ಬಳಸುತ್ತೇವೆ. ಇದೆಲ್ಲ ಹೇಗೆ ಸಾಧ್ಯವಾಗುತ್ತದೆ ಎಂದು ಕೇಳಿದರೆ ಕಿಟಕಿಯಿಂದಾಚೆ ಕಾಣುವ ಮೊಬೈಲ್ ಟವರ್ ಅನ್ನು ತೋರಿಸುತ್ತೇವೆ. ಆದರೆ ಅಲ್ಲಿಂದ ಮುಂದಿನ ಸಂಪರ್ಕ ಸಾಧ್ಯವಾಗುವುದು, ನಮ್ಮ ಕರೆ ಬೇರೆಲ್ಲೋ ಇರುವ ಇನ್ನೊಬ್ಬರನ್ನು ತಲುಪುವುದು ಹೇಗೆ?
ಉತ್ತರ ಗೊತ್ತಿಲ್ಲದಿದ್ದರೆ ಆಕಾಶ ನೋಡಬೇಕಿಲ್ಲ, ಕಾಲ ಕೆಳಗಿನ ನೆಲವನ್ನಷ್ಟೇ ನೋಡಿದರೆ ಸಾಕು. ಏಕೆಂದರೆ ಮೊಬೈಲ್ ಟವರ್‌ಗಳ ನಂತರದ ಹಂತದ ಸಂವಹನದಲ್ಲಿ ಪ್ರಮುಖ ಪಾತ್ರ ವಹಿಸುವುದು ನೆಲದಡಿಯ ಕೇಬಲ್ಲುಗಳು.
ಈ ಕೇಬಲ್ಲುಗಳಲ್ಲಿ ಬಳಕೆಯಾಗುವುದೇ ಆಪ್ಟಿಕಲ್ ಫೈಬರ್ ಕೇಬಲ್ ಅಥವಾ ಓಎಫ್‌ಸಿ.

ಸೋಮವಾರ, ಡಿಸೆಂಬರ್ 12, 2016
ಪನೋರಮಾ ಮತ್ತು ಫೋಟೋಸ್ಫಿಯರ್ - ಛಾಯಾಗ್ರಹಣದಲ್ಲಿ ಹೀಗೂ ಉಂಟು!
ಟಿ. ಜಿ. ಶ್ರೀನಿಧಿ
ಮಾನವ ದೃಷ್ಟಿಯ ವ್ಯಾಪ್ತಿಗೆ ಹೋಲಿಸಿದಾಗ ಕ್ಯಾಮೆರಾದ ವ್ಯಾಪ್ತಿ ಸಾಮಾನ್ಯವಾಗಿ ತೀರಾ ಕಡಿಮೆಯಿರುತ್ತದೆ. ಕ್ಯಾಮೆರಾ ಬಳಸಿ ಚಿತ್ರಗಳನ್ನು ಕ್ಲಿಕ್ ಮಾಡುವಾಗ ನಮ್ಮ ಕಣ್ಣೆದುರು ಕಾಣುವುದರ ಒಂದು ಭಾಗವಷ್ಟೇ ಅದರಲ್ಲಿ ಸೆರೆಯಾಗುವುದಕ್ಕೆ ಇದೇ ಕಾರಣ.
ಈ ಕೊರತೆಯನ್ನು ನಿವಾರಿಸುವ ನಿಟ್ಟಿನಲ್ಲಿ ರೂಪುಗೊಂಡಿರುವುದೇ ಪನೋರಮಾ ಛಾಯಾಚಿತ್ರಗಳ ಪರಿಕಲ್ಪನೆ. ಯಾವುದೇ ದೃಶ್ಯದ ಸಮಗ್ರ ಚಿತ್ರಣವನ್ನು ಕೊಡುವುದು ಇಂತಹ ಚಿತ್ರಗಳ ವೈಶಿಷ್ಟ್ಯ.
ಪನೋರಮಾ ಚಿತ್ರಗಳ ವ್ಯಾಪ್ತಿ ಮಾನವ ದೃಷ್ಟಿಯ ವ್ಯಾಪ್ತಿಯ ಆಸುಪಾಸಿನಲ್ಲೇ ಇರುವುದು ವಿಶೇಷ. ಇಂತಹ ಚಿತ್ರಗಳು ಎಷ್ಟು ಉದ್ದವಿರುತ್ತವೋ ಅದರ ಎರಡರಷ್ಟಾದರೂ ಅಗಲವಾಗಿರುತ್ತವೆ.
ಪನೋರಮಾ ಚಿತ್ರಗಳನ್ನು ಸೆರೆಹಿಡಿಯಲು ಬಳಕೆಯಾಗುವ ವಿಧಾನಗಳು ಹಲವು. ಇಂತಹ ಚಿತ್ರಗಳನ್ನು ತೆಗೆಯಲು ಪ್ರತ್ಯೇಕ ಲೆನ್ಸುಗಳಷ್ಟೇ ಅಲ್ಲ, ವಿಶೇಷ ಕ್ಯಾಮೆರಾಗಳೂ ಬಳಕೆಯಾಗುತ್ತವೆ. ಹಾಗೆಂದಮಾತ್ರಕ್ಕೆ ಮಾಮೂಲಿ ಕ್ಯಾಮೆರಾ ಬಳಸಿ ಪನೋರಮಾ ಚಿತ್ರಗಳನ್ನು ತೆಗೆಯಲು ಸಾಧ್ಯವಿಲ್ಲ ಎಂದೇನೂ ಇಲ್ಲ. ಪನೋರಮಾ ಚಿತ್ರಗಳನ್ನು ತೆಗೆಯುವ ಸೌಲಭ್ಯ ಹಲವು ಸಾಮಾನ್ಯ ಕ್ಯಾಮೆರಾಗಳಲ್ಲಿ, ಮೊಬೈಲುಗಳಲ್ಲೂ ಇದೆ. ಒಂದು ದೃಶ್ಯದ ನಾಲ್ಕಾರು ಚಿತ್ರಗಳನ್ನು ತೆಗೆದು (ಅಡ್ಡವಾಗಿ ಅಥವಾ ಲಂಬವಾಗಿ) ಅವನ್ನೆಲ್ಲ ಜೋಡಿಸುವ ಮೂಲಕ ಇಲ್ಲಿ ಪನೋರಮಾ ಚಿತ್ರ ರೂಪಿಸಲಾಗುತ್ತದೆ.

ಶುಕ್ರವಾರ, ಡಿಸೆಂಬರ್ 9, 2016
ನೆಟ್ ಇಲ್ಲದೆ ಮೊಬೈಲ್ ಬ್ಯಾಂಕಿಂಗ್ - ಇಲ್ಲಿದೆ *99# ಸೇವೆಯ ವಿವರ!
ಟಿ. ಜಿ. ಶ್ರೀನಿಧಿ
ಹಣಕಾಸಿನ ವ್ಯವಹಾರಗಳಿಗೆ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಬಗೆಗೆ, ಅದನ್ನು ಸಾಧ್ಯವಾಗಿಸುವ ವಿವಿಧ ಸೌಲಭ್ಯಗಳ ಬಗೆಗೆ ಈಚೆಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಇಂತಹ ಸೌಲಭ್ಯಗಳ ಪೈಕಿ ಅಂತರಜಾಲ ಸಂಪರ್ಕದ ಅಗತ್ಯವಿಲ್ಲದೆ ಸಾಮಾನ್ಯ ಮೊಬೈಲುಗಳಲ್ಲೂ ಬಳಸಬಹುದಾದ ಒಂದು ವ್ಯವಸ್ಥೆಯೂ ಇದೆ ಎನ್ನುವುದು ವಿಶೇಷ. ಭಾರತ ಸರಕಾರದ ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ (ಎನ್‌ಪಿಸಿಐ) ರೂಪಿಸಿರುವ 'ನ್ಯಾಶನಲ್ ಯೂನಿಫೈಡ್ ಯುಎಸ್‍ಎಸ್‌ಡಿ ಪ್ಲಾಟ್‌ಫಾರ್ಮ್ (ಎನ್‌ಯುಯುಪಿ)' ಎಂಬ ಈ ವ್ಯವಸ್ಥೆಯನ್ನು ಹಲವಾರು ಪ್ರಮುಖ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಒದಗಿಸುತ್ತಿವೆ.
ಪ್ರೀಪೇಯ್ಡ್ ಮೊಬೈಲಿನ ಬ್ಯಾಲೆನ್ಸ್ ತಿಳಿದುಕೊಳ್ಳಲು ನಾವು *123# ನಂತಹ ವಿಶೇಷ ಸಂಖ್ಯೆಗಳನ್ನು ಬಳಸುತ್ತೇವಲ್ಲ, ಅಲ್ಲಿ ಬಳಕೆಯಾಗುವ ವ್ಯವಸ್ಥೆಯೇ ಅನ್‌ಸ್ಟ್ರಕ್ಚರ್ಡ್ ಸಪ್ಲಿಮೆಂಟರಿ ಸರ್ವಿಸ್ ಡೇಟಾ, ಅರ್ಥಾತ್ ಯುಎಸ್‌ಎಸ್‌ಡಿ. ಮೊಬೈಲ್ ಸೇವೆ ಒದಗಿಸುವ ಸಂಸ್ಥೆ ಹಾಗೂ ಗ್ರಾಹಕರ ನಡುವೆ ಮಾಹಿತಿ ಸಂವಹನಕ್ಕೆಂದು ಬಳಕೆಯಾಗುವ ಶಿಷ್ಟಾಚಾರಕ್ಕೆ (ಪ್ರೋಟೋಕಾಲ್) ಇದೊಂದು ಉದಾಹರಣೆ.
ಎನ್‌ಯುಯುಪಿ ಮೂಲಕ ಮೊಬೈಲ್ ಬ್ಯಾಂಕಿಂಗ್ ಸೇವೆ ಒದಗಿಸಲೂ ಇದೇ ವ್ಯವಸ್ಥೆಯನ್ನು ಬಳಸಲಾಗುತ್ತಿದೆ.

ಗುರುವಾರ, ಡಿಸೆಂಬರ್ 8, 2016
'ಮೋಟೋ ಇ೩ ಪವರ್' ಹೇಗಿದೆ ಗೊತ್ತೇ?
ಕಡಿಮೆ ಬೆಲೆಯ ಹೊಸ ಮೋಟರೋಲಾ ಫೋನು 'ಮೋಟೋ ಇ೩ ಪವರ್' ಹೇಗಿದೆ? ಪರಿಣತ ಟೆಕ್ ಬ್ಲಾಗರ್, ಇಜ್ಞಾನದ ಅತಿಥಿ ಅಂಕಣಕಾರ ಅನಿರುದ್ಧ ಕಾರ್ತಿಕ್ ಅಭಿಪ್ರಾಯ ಇಲ್ಲಿದೆ!
ಅನಿರುದ್ಧ ಕಾರ್ತಿಕ್
ಎರಡು ವರ್ಷಗಳ ಹಿಂದೆ ಮೋಟರೋಲಾ ಸಂಸ್ಥೆ ಮೊದಲ ಮೋಟೋ ಇ ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಿದಾಗ ಅದು ಅಗ್ಗದ ಮೊಬೈಲುಗಳ ಮಾನದಂಡವನ್ನೇ ಬದಲಿಸಿತ್ತು. ಅಂದಿನ ಕಾಲಕ್ಕೆ ಸಾಕಷ್ಟು ಉತ್ತಮ ಗುಣಮಟ್ಟದ ಫೋನ್ ಎಂದು ಕರೆಸಿಕೊಂಡಿದ್ದ ಮೋಟೋ ಇ ಮೂಲಕ ಅನೇಕ ಬಳಕೆದಾರರು ಸ್ಮಾರ್ಟ್‌ಫೋನ್ ಜಗತ್ತನ್ನು ಪ್ರವೇಶಿಸಿದರು. ನಂತರದ ದಿನಗಳಲ್ಲಿ ಶಿಯೋಮಿ, ಲೆನೊವೊ, ಏಸಸ್ ಮುಂತಾದ ಹಲವಾರು ಸಂಸ್ಥೆಗಳು ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಫೋನುಗಳನ್ನು ಪರಿಚಯಿಸಲು, ದರಸಮರ ಪ್ರಾರಂಭಿಸಲು ಮೋಟೋ ಇ ಕೂಡ ಕಾರಣವಾಗಿತ್ತು ಎಂದರೆ ತಪ್ಪಾಗಲಿಕ್ಕಿಲ್ಲ.
ಹೀಗೆ ಸ್ಮಾರ್ಟ್‌ಫೋನ್ ಮಾರುಕಟ್ಟೆಯ ಸ್ವರೂಪವನ್ನೇ ಬದಲಿಸಿದ ಮೋಟೋ ಇ ಸ್ಮಾರ್ಟ್ ಫೋನಿನ ಇತ್ತೀಚಿನ ಆವೃತ್ತಿಯೇ ರೂ. ೭೯೯೯ ಮುಖಬೆಲೆಯ 'ಮೋಟೋ ಇ೩ ಪವರ್'.
ಬುಧವಾರ, ಡಿಸೆಂಬರ್ 7, 2016
ಅಂಗೈಯಲ್ಲೇ ಗ್ರಂಥಾಲಯ, ಇದು ಡಿಜಿಟಲ್ ಲೈಬ್ರರಿ!
ಟಿ. ಜಿ. ಶ್ರೀನಿಧಿ
ತಂತ್ರಜ್ಞಾನ ಲೋಕದಲ್ಲಿ ಕೆಲವು ಘಟನೆಗಳಿಗೆ ಎಲ್ಲಿಲ್ಲದ ಮಹತ್ವ, ಜಗತ್ತನ್ನೇ ಬದಲಿಸಿದ ಶ್ರೇಯ.
ಈ ಘಟನೆಗಳಲ್ಲಿ ಹೊಸ ಸಂಗತಿಗಳ ಆವಿಷ್ಕಾರವೇ ಆಗಿರಬೇಕು ಎಂದೇನೂ ಇಲ್ಲ. ಆಗಲೇ ಅಸ್ತಿತ್ವದಲ್ಲಿರುವ ಪರಿಕಲ್ಪನೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮೂಲಕವೂ ಇಂತಹ ಮೈಲಿಗಲ್ಲುಗಳು ಸೃಷ್ಟಿಯಾಗುವುದುಂಟು.
ಇಂತಹುದೊಂದು ಘಟನೆಯ ಹಿಂದೆ ಇದ್ದ ವ್ಯಕ್ತಿ ಜರ್ಮನಿಯ ಯೊಹಾನೆಸ್ ಗುಟನ್‌ಬರ್ಗ್. ಏಷಿಯಾದ ಹಲವೆಡೆ ಹಂತಹಂತಗಳಲ್ಲಿ ರೂಪುಗೊಂಡಿದ್ದ ಮುದ್ರಣ ತಂತ್ರಜ್ಞಾನವನ್ನು ಕೊಂಚ ಸುಧಾರಿಸಿ, ಪ್ರಾಯೋಗಿಕವಾಗಿ ಅಳವಡಿಸಿದ ಆತನ ಸಾಧನೆ ಮುದ್ರಣ ತಂತ್ರಜ್ಞಾನದ ಉಗಮಕ್ಕೆ ಕಾರಣವಾಯಿತು. ಆ ಮೂಲಕ ಜ್ಞಾನಪ್ರಸಾರಕ್ಕೆ ಹೊಸ ವೇಗ ದೊರಕಿತು; ಮಾಹಿತಿಯನ್ನು ಯಾರು ಯಾವಾಗ ಬೇಕಿದ್ದರೂ ಪಡೆದುಕೊಳ್ಳಬಹುದೆಂಬ ಸಾಧ್ಯತೆ ಜಗತ್ತಿಗೆ ಗೋಚರಿಸಿತು.
ಮುಂದೆ ಕೆಲ ಶತಮಾನಗಳ ನಂತರ ಜ್ಞಾನಪ್ರಸಾರಕ್ಕೆ ಇಷ್ಟೇ ಮಹತ್ವದ ಕೊಡುಗೆ ನೀಡಿದ ಸಾಧನೆಗಳ ಸಾಲಿನಲ್ಲಿ ಅಂತರಜಾಲಕ್ಕೆ (ಇಂಟರ್‌ನೆಟ್) ಪ್ರಮುಖ ಸ್ಥಾನವಿರುವುದು ನಮಗೆಲ್ಲ ಗೊತ್ತೇ ಇದೆ. ಇದೇ ಅಂತರಜಾಲದ ಮೂಲಕ ಜ್ಞಾನಪ್ರಸಾರದ ವಿನೂತನ ಮಾರ್ಗವೊಂದನ್ನು ತೋರಿಸಿಕೊಟ್ಟ ಸಾಧನೆಯ ಜೊತೆಯಲ್ಲೂ ಗುಟನ್‌ಬರ್ಗ್ ಹೆಸರೇ ಇರುವುದು ವಿಶೇಷ.

ಸೋಮವಾರ, ಡಿಸೆಂಬರ್ 5, 2016
ವಾಟ್ಸ್‌ಆಪ್ - ಫೇಸ್‌ಬುಕ್ ನೆಮ್ಮದಿಗೆ ಐದು ಸೂತ್ರಗಳು
ಟಿ. ಜಿ. ಶ್ರೀನಿಧಿ
ಸೋಶಿಯಲ್ ನೆಟ್‌ವರ್ಕ್‌ಗಳಿಂದ ಅನುಕೂಲಗಳೆಷ್ಟಿವೆಯೋ ಅಷ್ಟೇ ಕಿರಿಕಿರಿಗಳೂ ಇವೆ. ವಿಪರೀತ ಸಂಖ್ಯೆಯ, ಕೆಲವೊಮ್ಮೆ ಸಭ್ಯತೆಯ ಗಡಿ ಮೀರಿದ ಪೋಸ್ಟು-ಮೆಸೇಜುಗಳು ಈ ಕಿರಿಕಿರಿಯ ಒಂದು ಮುಖವಾದರೆ ನಿರ್ದಿಷ್ಟ ವಿಚಾರಧಾರೆಯ ಪೋಸ್ಟುಗಳ ಪ್ರವಾಹ ಇದರ ಇನ್ನೊಂದು ಮುಖ. ವಾಟ್ಸ್‌ಆಪ್ - ಫೇಸ್‌ಬುಕ್‌ಗಳಲ್ಲಿ ಸಾಮಾನ್ಯವಾಗಿಬಿಟ್ಟಿರುವ ಈ ಕಿರಿಕಿರಿಗಳಿಂದ ಪಾರಾಗಲು ಬಳಸಬಹುದಾದ ಐದು ಸರಳ ಸೂತ್ರಗಳು ಇಲ್ಲಿವೆ.

ಶುಕ್ರವಾರ, ಡಿಸೆಂಬರ್ 2, 2016
ಬೇರೆ ನೆಟ್‌ವರ್ಕಿನ ಮೊಬೈಲಿಗೆ ಕರೆ - ಸಾಧ್ಯವಾಗುವುದು ಹೇಗೆ ಗೊತ್ತೇ?
ಟಿ. ಜಿ. ಶ್ರೀನಿಧಿ
ಈಗ ಎಲ್ಲೆಲ್ಲೂ ಮೊಬೈಲ್‌ನದೇ ಭರಾಟೆ. ಮಾತನಾಡುವುದು, ಸಂದೇಶ ಕಳುಹಿಸುವುದು ಅಷ್ಟೇ ಅಲ್ಲ, ಇನ್ನಿತರ ಅನೇಕ ಕೆಲಸಗಳಿಗೂ ನಾವು ಮೊಬೈಲ್ ಫೋನನ್ನೇ ಅವಲಂಬಿಸಿದ್ದೇವೆ. ಇಷ್ಟೆಲ್ಲ ಬಳಕೆದಾರರು ಇದ್ದಮೇಲೆ ಅವರಿಗೆಲ್ಲ ಸಂಪರ್ಕ ಒದಗಿಸುವ ಹಲವಾರು ಸಂಸ್ಥೆಗಳೂ ಇವೆ.
ಬೇರೆಬೇರೆ ಬಳಕೆದಾರರು ಬೇರೆಬೇರೆ ಸಂಸ್ಥೆಗಳಿಂದ ಪಡೆದ ದೂರವಾಣಿ ಸಂಪರ್ಕವನ್ನು ಬಳಸುವುದು ತೀರಾ ಸಾಮಾನ್ಯ ಸಂಗತಿ. ಈ ಸಂಪರ್ಕ ಬಳಸಿಕೊಂಡು ನಮ್ಮ ಗೆಳೆಯರನ್ನು - ಅವರು ಯಾವುದೇ ಸಂಸ್ಥೆಯ ಚಂದಾದಾರರಾಗಿರಲಿ - ಸುಲಭವಾಗಿ ಸಂಪರ್ಕಿಸಬಹುದೆನ್ನುವುದೂ ನಮಗೆ ಗೊತ್ತು.
ಮೊಬೈಲ್ ಆಗಿರಲಿ ಲ್ಯಾಂಡ್‌ಲೈನ್ ಆಗಿರಲಿ, ದೂರವಾಣಿ ಸೇವೆ ಒದಗಿಸುವ ಪ್ರತಿಯೊಂದು ಸಂಸ್ಥೆಯೂ ತನ್ನ ಚಂದಾದಾರರ ಅಗತ್ಯಗಳನ್ನು ಪೂರೈಸಲು ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಂಡಿರುತ್ತದೆ. ಜಾಲದ (ನೆಟ್‌ವರ್ಕ್) ಗುಣಮಟ್ಟ ಉತ್ತಮವಾಗಿಟ್ಟುಕೊಳ್ಳುವುದು, ಹೊಸಹೊಸ ಸೌಲಭ್ಯಗಳನ್ನು ಪರಿಚಯಿಸುವುದೆಲ್ಲ ಈ ವ್ಯವಸ್ಥೆಗಳ ಅಂಗವಾಗಿಯೇ.
ಆದರೆ ಆ ಸಂಸ್ಥೆಗಳು ಬರಿಯ ತಮ್ಮ ಜಾಲದ ಬಗೆಗೆ ತಲೆಕೆಡಿಸಿಕೊಂಡರೆ ಸಾಲುವುದಿಲ್ಲ.

ಬುಧವಾರ, ನವೆಂಬರ್ 30, 2016
ನಿಮಗೆ 'ರುಪೇ' ಗೊತ್ತೇ?
ಟಿ. ಜಿ. ಶ್ರೀನಿಧಿ
ಪ್ರಪಂಚದಲ್ಲಿ ಕ್ರೆಡಿಟ್ ಕಾರ್ಡ್ - ಡೆಬಿಟ್ ಕಾರ್ಡ್ ನೀಡುವ ಸಾವಿರಾರು ಬ್ಯಾಂಕುಗಳಿವೆ, ಲಕ್ಷಗಟ್ಟಲೆ ವ್ಯಾಪಾರಸ್ಥರಿದ್ದಾರೆ, ಕೋಟ್ಯಂತರ ಸಂಖ್ಯೆಯ ಗ್ರಾಹಕರಿದ್ದಾರೆ. ಕಾರ್ಡ್ ನೀಡುವ ಪ್ರತಿ ಬ್ಯಾಂಕಿನ ಸಂಪರ್ಕ ಪ್ರತಿಯೊಬ್ಬ ವ್ಯಾಪಾರಸ್ಥನಿಗೂ ಇರಬೇಕು ಎಂದರೆ ಅದು ಅಸಾಧ್ಯವೇ ಸರಿ. ಇಂತಹ ಪರಿಸ್ಥಿತಿಯಲ್ಲಿ ಗ್ರಾಹಕ, ವ್ಯಾಪಾರಸ್ಥ ಹಾಗೂ ಬ್ಯಾಂಕುಗಳ ನಡುವಿನ ಸಂಪರ್ಕ ಸೇತುವಿನಂತೆ ವೀಸಾ ಹಾಗೂ ಮಾಸ್ಟರ್‌ಕಾರ್ಡ್‌ನಂತಹ ಸಂಸ್ಥೆಗಳು ಕೆಲಸಮಾಡುತ್ತವೆ.
ಯಾವುದೇ ವ್ಯಾಪಾರಸ್ಥನೊಡನೆ ವ್ಯವಹರಿಸುವಾಗ ಗ್ರಾಹಕ ತನ್ನ ಕಾರ್ಡ್ ಬಳಸುತ್ತಾನೆ ಎಂದುಕೊಳ್ಳೋಣ. ಆತನ ಬ್ಯಾಂಕ್ ಖಾತೆ ಪರಿಶೀಲಿಸಿ ಅದರಲ್ಲಿ ಸಾಕಷ್ಟು ಹಣವಿದ್ದರೆ ಅದನ್ನು ಆತನ ಬ್ಯಾಂಕಿನಿಂದ ವ್ಯಾಪಾರಸ್ಥನ ಬ್ಯಾಂಕಿಗೆ-ಖಾತೆಗೆ ವರ್ಗಾಯಿಸಲು ನೆರವಾಗುವುದು ಈ ಸಂಸ್ಥೆಗಳ ಕೆಲಸ. ಇದಕ್ಕಾಗಿ ಅವು ಬ್ಯಾಂಕುಗಳಿಂದ ಶುಲ್ಕ ವಸೂಲಿ ಮಾಡುತ್ತವೆ.

ಸೋಮವಾರ, ನವೆಂಬರ್ 28, 2016
ಪವರ್‌ಸ್ಟೋರಿ: ಇದು ಬ್ಯಾಟರಿ ಸಮಾಚಾರ!
ಟಿ. ಜಿ. ಶ್ರೀನಿಧಿ
ಬಾಲ್ಯದ ದಿನಗಳ ವಿಷಯ. ಪಶ್ಚಿಮಘಟ್ಟದ ತಪ್ಪಲಿನ ನಮ್ಮ ಊರಿನಲ್ಲಿ ಹಗಲಿನಲ್ಲೇ ಕರೆಂಟು ಇರುತ್ತಿರಲಿಲ್ಲ, ಇನ್ನು ರಾತ್ರಿ ಸ್ಟ್ರೀಟ್ ಲೈಟಿರುತ್ತದೆಯೇ? ಮನೆಯೊಳಗೆ ಬೆಳಕಿಗಾಗಿ ಸೀಮೆಎಣ್ಣೆ ದೀಪ ಉರಿಸಿದಂತೆ ಹೊರಗಡೆಯ ಸಂಚಾರಕ್ಕೆ ಟಾರ್ಚು ನಮ್ಮ ಅಚ್ಚುಮೆಚ್ಚಿನ ಸಂಗಾತಿಯಾಗಿತ್ತು.
ಟಾರ್ಚನ್ನೇ ಬ್ಯಾಟರಿಯೆಂದು ಕರೆಯುವ ಅಭ್ಯಾಸ ಹಲವರಿಗಿದೆ; ಆದರೆ ನಮಗೆ ಪರಿಚಯವಿದ್ದ ಬ್ಯಾಟರಿ ಟಾರ್ಚಿನೊಳಗಿರುತ್ತದಲ್ಲ, ಅದು (ಕೆಲವರು ಅದನ್ನು ಸೆಲ್ಲು ಅಂತಲೂ ಕರೆಯುತ್ತಾರೆ). ಯಾವತ್ತೋ ಒಂದು ದಿನ ಸಂಜೆಯ ವಾಕಿಂಗ್ ಮುಗಿಸುವ ವೇಳೆಗೆ ಟಾರ್ಚಿನ ಬೆಳಕು ಮಂಕಾಯಿತು ಅನ್ನಿಸಿದರೆ ಹೊಸ ಬ್ಯಾಟರಿ ಕೊಂಡುತರುವ ಕೆಲಸ ನಾಳೆಯ ಕೆಲಸಗಳ ಪಟ್ಟಿಗೆ ಸೇರಿಬಿಡುವುದು.
ನಿಶ್ಶಕ್ತವಾಗಿ ನಿವೃತ್ತಿ ಪಡೆಯುವ ಬ್ಯಾಟರಿಗೆ ವಿದಾಯ ಹೇಳುವ ಕ್ರಮವೂ ನಮ್ಮೂರಿನಲ್ಲಿತ್ತು. ನೆಲಕ್ಕೆ ಸಗಣಿ ನೀರು ಹಾಕಿ ಸಾರಿಸುವವರು ಬಣ್ಣ ಗಾಢವಾಗಿ ಬರಲಿ ಎಂದು ಬ್ಯಾಟರಿಯೊಳಗಿನ ಕಪ್ಪು ಪುಡಿಯನ್ನು ಸಗಣಿ ನೀರಿಗೆ ಬೆರೆಸುತ್ತಿದ್ದರು.
ನಿಶ್ಶಕ್ತ ಬ್ಯಾಟರಿ ಹಾಗಿರಲಿ, ಅಂಗಡಿಗೆ ಹೋಗಿ ಬ್ಯಾಟರಿ ಕೊಳ್ಳುವ ಅಭ್ಯಾಸಕ್ಕೇ ವಿದಾಯ ಹೇಳಬೇಕಾದ ಪರಿಸ್ಥಿತಿ ಮುಂದಿನ ವರ್ಷಗಳಲ್ಲಿ ಬಂತು.

ಬುಧವಾರ, ನವೆಂಬರ್ 23, 2016
ಮನರಂಜನೆ, ಈಗ ನಮ್ಮ ಅಂಗೈಯಲ್ಲಿ!
ಟಿ. ಜಿ. ಶ್ರೀನಿಧಿ
ನಮ್ಮ ಮನೆಗಳಿಗೆ ಟಿವಿ ಬಂದು ಒಂದೆರಡು ದಶಕಗಳಾಗಿವೆ. ಟಿವಿ ಪರಿಚಯವಾದ ಹೊಸತರಲ್ಲಿ ನಮಗೆ ದೊರಕುತ್ತಿದ್ದದ್ದು ಸೀಮಿತ ಆಯ್ಕೆಗಳಷ್ಟೇ. ಚಿತ್ರಗೀತೆ ಕೇಳಲು ಶುಕ್ರವಾರ ರಾತ್ರಿ, ಸಿನಿಮಾ ನೋಡಲು ಭಾನುವಾರ ಸಂಜೆಗಳಿಗೆ ಕಾಯಬೇಕಿದ್ದ ಸಮಯ ಅದು.
ಆನಂತರ ದೊಡ್ಡ ಊರುಗಳಿಗೆ ಕೇಬಲ್ ಬಂತು, ಕೊಂಚ ಸಮಯದ ನಂತರ ಹಳ್ಳಿಗಳಲ್ಲೂ ಡಿಶ್ ಆಂಟೆನಾಗಳು ಕಾಣಿಸಿಕೊಂಡವು. ಒಂದೇ ಚಾನೆಲ್ ನೋಡಬೇಕಿದ್ದ ಅನಿವಾರ್ಯತೆ ಹೋಗಿ ಹತ್ತಾರು ಚಾನಲ್ಲುಗಳ ಪೈಕಿ ಇಷ್ಟವಾದುದನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯ ನಮಗೆ ಸಿಕ್ಕಿತು. ಈಗಂತೂ ಟಿವಿಯ ಸೆಟ್‌ಟಾಪ್ ಬಾಕ್ಸು ನೂರಾರು ಚಾನಲ್ಲುಗಳ ಲೋಕಕ್ಕೆ ನಮ್ಮನ್ನು ನೇರವಾಗಿ ಕರೆದೊಯ್ಯುತ್ತದೆ.
ಇಷ್ಟೆಲ್ಲ ಬದಲಾವಣೆಯಾದರೂ ನಾವು ಟೀವಿ ಕಾರ್ಯಕ್ರಮಗಳನ್ನು ನೋಡುವ ರೀತಿ ಮಾತ್ರ ತೀರಾ ಈಚಿನವರೆಗೂ ಹೆಚ್ಚೇನೂ ಬದಲಾಗಿರಲಿಲ್ಲ. ನೋಡಲು ಇಷ್ಟವಾಗುವಂತಹ ಕಾರ್ಯಕ್ರಮ ಸಿಗುವವರೆಗೂ ಚಾನಲ್ಲುಗಳನ್ನು ಬದಲಿಸುತ್ತಾ ಹೋಗುವುದು ಈಗಲೂ ನಮ್ಮಲ್ಲಿ ಅನೇಕರ ಅಭ್ಯಾಸ.
ಈ ಪರಿಸ್ಥಿತಿ ಬದಲಿಸಿ, ನಮ್ಮ ಆಯ್ಕೆಯ ಕಾರ್ಯಕ್ರಮವನ್ನು ನಮಗೆ ಬೇಕಾದಾಗ ನೋಡಲು ಅನುವುಮಾಡಿಕೊಟ್ಟಿರುವುದು ವೀಡಿಯೋ ಆನ್ ಡಿಮ್ಯಾಂಡ್ ಎಂಬ ಪರಿಕಲ್ಪನೆ.

ಭಾನುವಾರ, ನವೆಂಬರ್ 20, 2016
ತಂತ್ರಜ್ಞಾನ: ನಾಳೆಗಳ ನಿರ್ಮಾಣ
ಆಳ್ವಾಸ್ ನುಡಿಸಿರಿ - ೨೦೧೬ರಲ್ಲಿ ಮಾಡಿದ ಭಾಷಣದ ಪೂರ್ಣರೂಪ
ಟಿ. ಜಿ. ಶ್ರೀನಿಧಿ
ನಾಳೆಗಳನ್ನು ನಿರ್ಮಿಸುವಲ್ಲಿ ವಿದ್ಯಾಸಂಸ್ಥೆಗಳ ಪಾತ್ರ ಬಹಳ ಮಹತ್ವದ್ದು. ಅಂತಹ ಮಹತ್ವದ ಜವಾಬ್ದಾರಿ ನಿರ್ವಹಿಸುತ್ತಿರುವ ಸಂಸ್ಥೆಯೊಂದು ನಾಳೆಗಳ ನಿರ್ಮಾಣದ ಕುರಿತಾಗಿಯೇ ಈ ಸಮ್ಮೇಳನವನ್ನು ಆಯೋಜಿಸಿರುವುದು ಅತ್ಯಂತ ಸಮಂಜಸವಾಗಿದೆ. ಕಳೆದೆರಡು ದಿನಗಳಿಂದ ವಿವಿಧ ಕ್ಷೇತ್ರದ ನಾಳೆಗಳ ಕುರಿತ ಅನೇಕ ಸಂಗತಿಗಳನ್ನು, ಅನಿಸಿಕೆ-ಅಭಿಪ್ರಾಯಗಳನ್ನು ನಾವೆಲ್ಲ ತಿಳಿದುಕೊಂಡಿದ್ದೇವೆ. ಇದೀಗ ತಂತ್ರಜ್ಞಾನ ಕ್ಷೇತ್ರದ ನಾಳೆಗಳ ಕುರಿತು ಮಾತನಾಡುವ ಸಮಯ.
೨೦೦೦ನೇ ಸಾಲಿನಲ್ಲಿ ಜಾವೆದ್ ಅಖ್ತರ್ ಅವರಿಗೆ ಅತ್ಯುತ್ತಮ ಗೀತರಚನೆಗೆಂದು ಚಲನಚಿತ್ರ ಕ್ಷೇತ್ರದ ರಾಷ್ಟ್ರಪುರಸ್ಕಾರ ಲಭಿಸಿತ್ತು. "ಹಾರುವ ಹಕ್ಕಿಗೆ ಬೀಸುವ ಗಾಳಿಗೆ ಸೀಮೆಯ ಹಂಗಿಲ್ಲ, ಮನುಜ ಮನುಜನ ನಡುವಲಿ ಮಾತ್ರ ಗಡಿಗಳಿಗೆಣೆಯಿಲ್ಲ" - ಇದು ಆ ಗೀತೆಯ ಮೊದಲ ಕೆಲ ಸಾಲುಗಳ ಭಾವಾರ್ಥ.
ನಿಜ, ಬಹುತೇಕ ಸರಹದ್ದುಗಳೆಲ್ಲ ಮನುಷ್ಯರದೇ ಸೃಷ್ಟಿ. ರಾಷ್ಟ್ರಗಳ, ರಾಜ್ಯಗಳ, ಭಾಷೆಗಳ, ಧರ್ಮಗಳ ಹೆಸರಿನಲ್ಲಿ ಅದೆಷ್ಟೋ ಸರಹದ್ದುಗಳನ್ನು ನಮ್ಮ ಸುತ್ತಲೂ ನಾವೇ ನಿರ್ಮಿಸಿಕೊಂಡುಬಿಟ್ಟಿದ್ದೇವೆ.
ಇಂತಹ ಸರಹದ್ದುಗಳ ಕಾಟ ಯಾವ ಕ್ಷೇತ್ರವನ್ನೂ ಬಿಟ್ಟಿಲ್ಲ. ಇವುಗಳ ಕೈವಾಡ ತಂತ್ರಜ್ಞಾನ ಕ್ಷೇತ್ರದಲ್ಲೂ ಇದೆ.

ಗುರುವಾರ, ಅಕ್ಟೋಬರ್ 20, 2016
ನಮ್ಮ ಮೊಬೈಲು, ನಮ್ಮದೇ ಭಾಷೆ!
ಟಿ. ಜಿ. ಶ್ರೀನಿಧಿ
ದಿನನಿತ್ಯದ ವ್ಯವಹಾರದಲ್ಲಿ ನಾವು ಮಾತನಾಡುವುದು ನಮ್ಮದೇ ಭಾಷೆಯಲ್ಲಿ. ಸ್ಪಷ್ಟ ಚಿಂತನೆ ಹಾಗೂ ಸಂವಹನ ಸಾಧ್ಯವಾಗುವುದು ಎಷ್ಟಾದರೂ ನಮ್ಮ ಪರಿಸರದ ಭಾಷೆಯಲ್ಲೇ ತಾನೇ?
ಆದರೆ ಸ್ಮಾರ್ಟ್ ಫೋನ್ ಬಳಸುವಾಗ ಮಾತ್ರ ನಮ್ಮದಲ್ಲದ ಭಾಷೆಯನ್ನು ಬಳಸುವ ಅನಿವಾರ್ಯತೆಗೆ ನಾವು ಸಿಲುಕುತ್ತೇವೆ. ಸಂದೇಶ ಕಳುಹಿಸುವುದು ಕನ್ನಡದಲ್ಲೇ ಆದರೂ ಇಂಗ್ಲಿಷ್ ಲಿಪಿಯನ್ನು ಬಳಸುತ್ತೇವೆ, ಕನ್ನಡ ಲಿಪಿ ಮೂಡಿಸುವುದೇ ಆದರೂ ಅದಕ್ಕಾಗಿ ಒಂದಲ್ಲ ಒಂದು ರೂಪದಲ್ಲಿ ಮತ್ತೆ ಇಂಗ್ಲಿಷಿನ ಮೊರೆಹೋಗುತ್ತೇವೆ.
ಇದನ್ನು ತಪ್ಪಿಸಿ ನಮ್ಮ ಫೋನನ್ನು ನಮ್ಮದೇ ಭಾಷೆಯಲ್ಲಿ ಬಳಸುವುದು ಸಾಧ್ಯವಿಲ್ಲವೇ? ಖಂಡಿತಾ ಸಾಧ್ಯವಿದೆ. ಅಷ್ಟೇ ಅಲ್ಲ, ಈ ನಿಟ್ಟಿನಲ್ಲಿ ಹಲವು ಪ್ರಯತ್ನಗಳೂ ನಡೆಯುತ್ತಿವೆ.

ಮಂಗಳವಾರ, ಅಕ್ಟೋಬರ್ 18, 2016
ಮೋಟರೋಲಾದಿಂದ ಹೊಸ ಮಾಡ್ಯುಲರ್ ಫೋನು!
ಟಿ. ಜಿ. ಶ್ರೀನಿಧಿ
ಇಂದಿನ ಸ್ಮಾರ್ಟ್‌ಫೋನುಗಳು ಎಷ್ಟೆಲ್ಲ ಕೆಲಸಮಾಡುತ್ತವೆ: ಸಿನಿಮಾ ನೋಡುವ ಪರದೆಯಾಗಿ, ಛಾಯಾಚಿತ್ರ ಸೆರೆಹಿಡಿವ ಕ್ಯಾಮೆರಾ ಆಗಿ, ಆಟವಾಡುವ ಸಾಧನವಾಗಿ - ಅವು ಬಳಕೆಯಾಗುವ ಉದ್ದೇಶಗಳ ದೊಡ್ಡದೊಂದು ಪಟ್ಟಿಯೇ ಇದೆ.
ಇಷ್ಟೆಲ್ಲ ಕೆಲಸಗಳಿಗೆ ಬಳಸುವುದರಿಂದಲೋ ಏನೋ, ನಮಗೆ ನಮ್ಮ ಫೋನ್ ಕುರಿತು ಬಹುಬೇಗ ಅಸಮಾಧಾನವೂ ಆಗುತ್ತದೆ. ಕೊಂಡು ಮೂರು ತಿಂಗಳಾಗುವಷ್ಟರಲ್ಲಿ ಅತ್ಯುತ್ತಮ ಕ್ಯಾಮೆರಾ ಇದೆಯೆಂದು ಕೊಂಡಿದ್ದ ಫೋನ್ ಅಷ್ಟೇನೂ ಚೆಂದದ ಫೋಟೋ ತೆಗೆಯುತ್ತಿಲ್ಲ ಎನಿಸುತ್ತದೆ, ಇನ್ನು ಕೆಲದಿನಗಳಲ್ಲಿ ರ್‍ಯಾಮ್ ಸಾಲದು ಎನಿಸುತ್ತದೆ, ಆರು ತಿಂಗಳಲ್ಲಿ ಅದರ ಬ್ಯಾಟರಿ ಸಾಮರ್ಥ್ಯ ಏನೇನೂ ಇಲ್ಲವಲ್ಲ ಎಂಬ ಭಾವನೆ ಮೂಡುತ್ತದೆ.
ಇಂತಹ ಸಂದರ್ಭಗಳಲ್ಲೆಲ್ಲ ಅನ್ನಿಸುವುದಿಷ್ಟು: ಈ ಹಿಂದೆ ಕಂಪ್ಯೂಟರುಗಳಲ್ಲಿ ಮಾಡುತ್ತಿದ್ದಂತೆ ಮೊಬೈಲುಗಳನ್ನೂ ಅಪ್‌ಗ್ರೇಡ್ ಮಾಡುವಂತಿದ್ದರೆ ಎಷ್ಟು ಚೆನ್ನಾಗಿತ್ತು! ರ್‍ಯಾಮ್ ಸಾಲದೆಬಂದಾಗ ಒಂದೆರಡು ಜಿಬಿ ಹೆಚ್ಚುವರಿ ರ್‍ಯಾಮ್ ಸೇರಿಸುವಂತಿದ್ದರೆ, ಕ್ಯಾಮೆರಾ ಚೆನ್ನಾಗಿಲ್ಲ ಎನ್ನಿಸಿದಾಗ ಹೊಸ ಕ್ಯಾಮೆರಾ ಅಳವಡಿಸಿಕೊಳ್ಳುವಂತಿದ್ದರೆ, ಇಲ್ಲದ ಸೌಲಭ್ಯ ಬೇಕೆನಿಸಿದಾಗ ಹೊಸ ಫೋನ್ ಕೊಳ್ಳುವ ಬದಲು ಆ ಸೌಲಭ್ಯಕ್ಕಷ್ಟೇ ದುಡ್ಡು ಕೊಟ್ಟು ಕೊಳ್ಳುವಂತಿದ್ದರೆ?

ಸೋಮವಾರ, ಅಕ್ಟೋಬರ್ 17, 2016
ಐಟಿಗೆ ಹೊಸ ತಿರುವು ಕೊಟ್ಟ ೧೯೬೮ರ ಆ ದಿನ
ಟಿ. ಜಿ. ಶ್ರೀನಿಧಿ
ಮಾಹಿತಿ ತಂತ್ರಜ್ಞಾನ ಜಗತ್ತಿನ ಬಹುತೇಕ ಸಾಧನೆಗಳ ಹಿಂದೆ ಅನೇಕ ವ್ಯಕ್ತಿಗಳ ಪರಿಶ್ರಮವಿರುತ್ತದೆ, ಸುದೀರ್ಘ ಅವಧಿಯಲ್ಲಿ ನಡೆದ ಹಲವು ಘಟನೆಗಳ ಛಾಯೆಯೂ ಕಾಣಸಿಗುತ್ತದೆ. ಹೀಗಾಗಿಯೇ ಏನೋ ಇಂತಹ ತಂತ್ರಜ್ಞಾನವನ್ನು ರೂಪಿಸಿದವರು ಇಂತಹವರೇ ಎಂದು ನಿಖರವಾಗಿ ಗುರುತಿಸುವುದು ಅದೆಷ್ಟೋ ಸಂದರ್ಭಗಳಲ್ಲಿ ಸಾಧ್ಯವಾಗುವುದೇ ಇಲ್ಲ.
ಹಾಗೆಂದಮಾತ್ರಕ್ಕೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲುಗಳೇ ಇಲ್ಲವೆಂದೇನೂ ಹೇಳುವಂತಿಲ್ಲ. ಒಂದು ಸಂದರ್ಭದಲ್ಲಿ ಒಂದು ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಮಹತ್ವದ ಘಟನೆಗಳು ನಡೆದಿರುವುದು ಹಾಗಿರಲಿ, ಒಂದೇ ಘಟನೆ ಇಡಿಯ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೇ ಹೊಸ ತಿರುವನ್ನು ತಂದುಕೊಟ್ಟ ಉದಾಹರಣೆಗಳೂ ಇವೆ.
ಅಂತಹುದೊಂದು ಘಟನೆ ೧೯೬೮ರ ಡಿಸೆಂಬರ್ ೯ರಂದು ನಡೆದಿತ್ತು.

ಶುಕ್ರವಾರ, ಅಕ್ಟೋಬರ್ 14, 2016
ಸಿ ಸೃಷ್ಟಿಕರ್ತನ ನೆನಪಿನಲ್ಲಿ
'ಸಿ' ಪ್ರೋಗ್ರಾಮಿಂಗ್ ಭಾಷೆಯನ್ನು ರೂಪಿಸಿದ ಡಾ. ಡೆನ್ನಿಸ್ ರಿಚಿ ನಿಧನರಾಗಿ ಇದೀಗ (ಅಕ್ಟೋಬರ್ ೨೦೧೬) ಐದು ವರ್ಷ. ಈ ಸಂದರ್ಭದಲ್ಲಿ ಅವರ ನೆನಪಿನಲ್ಲೊಂದು ಬರಹ...ಟಿ. ಜಿ. ಶ್ರೀನಿಧಿ
ಡಾ. ಡೆನ್ನಿಸ್ ರಿಚಿ - ವಿಶ್ವದೆಲ್ಲೆಡೆಯ ಕಂಪ್ಯೂಟರ್ ವಿಜ್ಞಾನ ವಿದ್ಯಾರ್ಥಿಗಳಿಗೆಲ್ಲ ಇದು ಚಿರಪರಿಚಿತ ಹೆಸರು. ಬಹುತೇಕ ವಿದ್ಯಾರ್ಥಿಗಳೆಲ್ಲ ಮೊದಲಿಗೆ ಕಲಿಯುವ 'ಸಿ' ಪ್ರೋಗ್ರಾಮಿಂಗ್ ಭಾಷೆಯನ್ನು ರೂಪಿಸುವುದರಲ್ಲಿ ಅವರ ಕೊಡುಗೆ ಅಪಾರವಾದದ್ದು. ಸಿ ಬಗ್ಗೆ ಅವರು ಬರೆದ ಪುಸ್ತಕವಂತೂ ಎಲ್ಲ ವಿದ್ಯಾರ್ಥಿಗಳ ಕೈಯಲ್ಲೂ ಕಾಣಸಿಗುತ್ತದೆ! ಅಷ್ಟೇ ಅಲ್ಲ, ಅತ್ಯಂತ ಜನಪ್ರಿಯ ಕಾರ್ಯಾಚರಣ ವ್ಯವಸ್ಥೆ 'ಯುನಿಕ್ಸ್' ಸೃಷ್ಟಿಸಿದ ತಂಡದಲ್ಲೂ ಡೆನ್ನಿಸ್ ಮಹತ್ವದ ಪಾತ್ರ ವಹಿಸಿದ್ದರು.
ಸಿ ಹಾಗೂ ಯುನಿಕ್ಸ್ ಕುರಿತು ೧೯೬೦-೭೦ರ ದಶಕಗಳಲ್ಲಿ ಡೆನ್ನಿಸ್ ಮತ್ತವರ ಸಹೋದ್ಯೋಗಿಗಳು ಬೆಲ್ ಲ್ಯಾಬ್ಸ್‌ನಲ್ಲಿ ಮಾಡಿದ ಕೆಲಸವೇ ಇಂದಿನ ಹಲವಾರು ಕ್ರಾಂತಿಕಾರಕ ತಂತ್ರಜ್ಞಾನಗಳಿಗೆ ಆಧಾರ ಎಂದರೆ ಡೆನ್ನಿಸ್ ಸಾಧನೆಯ ಮಹತ್ವದ ಅರಿವಾಗುತ್ತದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)