ಟಿ. ಜಿ. ಶ್ರೀನಿಧಿ
ಎಲ್ಲಿಗಾದರೂ ಹೊರಟಾಗ ನಾವು ಹೋಗಬೇಕಾದ ಸ್ಥಳದ ಬಗೆಗೆ ಗೂಗಲ್ ಸರ್ಚ್ ಮಾಡಿದರೆ ಆ ಕುರಿತ ಮಾಹಿತಿಯ ಜೊತೆಗೆ ಅದು ಎಲ್ಲಿದೆ ಎನ್ನುವುದನ್ನೂ ಮ್ಯಾಪಿನಲ್ಲಿ ನೋಡುವುದು ಸಾಧ್ಯ. ಗ್ಲೋಬಲ್ ಪೊಸಿಶನಿಂಗ್ ಸಿಸ್ಟಂ (ಜಿಪಿಎಸ್) ಆಧರಿಸಿ ಕೆಲಸಮಾಡುವ ಗೂಗಲ್ ಮ್ಯಾಪ್ಸ್‌ನಂತಹ ಸೌಲಭ್ಯಗಳನ್ನು ಬಳಸಿಕೊಂಡು ನಾವು ಅಲ್ಲಿಗೆ ತಲುಪುವುದು ಹೇಗೆ ಎಂದು ತಿಳಿದುಕೊಳ್ಳಬಹುದು.
ಆದರೆ ನಾವು ಇರುವ ಸ್ಥಳಕ್ಕೆ ಬೇರೆಯವರನ್ನು ಕರೆಯಬೇಕು ಎಂದಾಗ ಅವರಿಗೆ ಆ ವಿವರ ತಲುಪಿಸುವುದು ಹೇಗೆ?
ಟ್ಯಾಕ್ಸಿ ಆಪ್‌ಗಳಲ್ಲೇನೋ ಇದು ಸುಲಭ. ನಾವು ಎಲ್ಲಿದ್ದೇವೆಂದು ಗುರುತಿಸಿಕೊಳ್ಳುವ ಆಪ್ ಆ ಮಾಹಿತಿಯನ್ನು ಚಾಲಕರಿಗೆ ನೀಡುತ್ತದೆ, ಅವರು ಮ್ಯಾಪ್ ಸಹಾಯದಿಂದ ನಮ್ಮಲ್ಲಿಗೆ ಬರುತ್ತಾರೆ. ಬಸ್ ಸ್ಟಾಂಡಿನಲ್ಲಿ ಇಳಿದು ನಮ್ಮ ಮನೆಯ ದಾರಿ ಹುಡುಕುತ್ತಿರುವ ಸ್ನೇಹಿತರಿಗೆ, ನಮ್ಮನ್ನು ಹೋಟಲಿನಲ್ಲಿ ಭೇಟಿಯಾಗಲು ಹೊರಟು ದಾರಿ ತಿಳಿಯದೆ ಪರದಾಡುತ್ತಿರುವ ಗೆಳೆಯರಿಗೆ ಕೂಡ ಇದೇ ರೀತಿಯಲ್ಲಿ ಮಾಹಿತಿ ನೀಡುವುದನ್ನು ಸಾಧ್ಯವಾಗಿಸುವ ಹಲವು ಸೌಲಭ್ಯಗಳಿವೆ.
ಗೂಗಲ್ ಮ್ಯಾಪ್ಸ್ ತೆರೆದಾಗ ಅದು ನಾವೆಲ್ಲಿದ್ದೇವೆ ಎಂದು ಭೂಪಟದಲ್ಲಿ ಗುರುತುಮಾಡಿ ತೋರಿಸುತ್ತದಲ್ಲ, ಆ ಗುರುತನ್ನು ಒತ್ತಿ ಹಿಡಿದುಕೊಂಡರೆ ತೆರೆದುಕೊಳ್ಳುವ ಪರದೆಯಲ್ಲಿ ಆ ವಿಳಾಸದ ವಿವರಗಳನ್ನು ಬೇರೆಯವರಿಗೆ ಕಳುಹಿಸುವ ಸೌಲಭ್ಯವಿರುತ್ತದೆ. ಎಸ್ಸೆಮ್ಮೆಸ್, ಇಮೇಲ್, ವಾಟ್ಸ್‌ಆಪ್ ಸೇರಿದಂತೆ ಹಲವು ಮಾಧ್ಯಮಗಳ ಮೂಲಕ ಈ ಮಾಹಿತಿಯನ್ನು ಹಂಚಿಕೊಳ್ಳಬಹುದು.
ನಾವು ಎಲ್ಲಿದ್ದೇವೆ ಎನ್ನುವ ಮಾಹಿತಿಯನ್ನು ವಾಟ್ಸ್‌ಆಪ್‌ನಿಂದಲೇ ನೇರವಾಗಿ ಕಳುಹಿಸುವುದೂ ಸಾಧ್ಯ: ಅಟ್ಯಾಚ್‌ಮೆಂಟ್ ಆಯ್ಕೆಯನ್ನು (ಪೇಪರ್‌ಕ್ಲಿಪ್ ಚಿತ್ರ) ತೆರೆದು, 'ಲೊಕೇಶನ್' ಆಯ್ಕೆಯಡಿ 'ಸೆಂಡ್ ಯುವರ್ ಕರೆಂಟ್ ಲೊಕೇಶನ್' ಎಂದು ಆರಿಸಿಕೊಂಡರೆ ಆಯಿತು! ಇಂತಹುದೇ ಸೌಲಭ್ಯ ಫೇಸ್‌ಬುಕ್ ಮೆಸೆಂಜರಿನಲ್ಲೂ ಇದೆ. ನಾವು ಇರುವ ಸ್ಥಳದ ಮಾಹಿತಿಯಷ್ಟೇ ಅಲ್ಲ, ಬೇರೆ ಯಾವುದೇ ಜಾಗದ ವಿವರವನ್ನು ಇಂತಹ ಸೌಲಭ್ಯಗಳ ಮೂಲಕ ಕಳುಹಿಸುವುದು ಸಾಧ್ಯ.
ಡಿಸೆಂಬರ್ ೧೨, ೨೦೧೬ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ