ಟಿ. ಜಿ. ಶ್ರೀನಿಧಿ
ಹೊಸದನ್ನು ಪ್ರಯತ್ನಿಸುವ ಆಸಕ್ತಿಯಿಂದಲೋ ಅನಿವಾರ್ಯತೆಯಿಂದಲೋ ತಮ್ಮ ಹಣಕಾಸು ವ್ಯವಹಾರಗಳಿಗೆ ಡಿಜಿಟಲ್ ಲೋಕದತ್ತ ಹೊರಳುತ್ತಿರುವವರ ಸಂಖ್ಯೆ ಇತ್ತೀಚೆಗೆ ಜಾಸ್ತಿಯಾಗುತ್ತಿದೆ. ಹೀಗೆ ತಂತ್ರಜ್ಞಾನದ ಸವಲತ್ತುಗಳನ್ನು ಹೊಸದಾಗಿ ಪರಿಚಯಿಸಿಕೊಳ್ಳುವಾಗ ಅವುಗಳ ಬಳಕೆಯ ಬಗ್ಗೆ ತಿಳಿದುಕೊಳ್ಳಲು ನಾವು ಆಸಕ್ತಿತೋರಿಸುತ್ತೇವಲ್ಲ, ಅಲ್ಲಿ ನಮ್ಮ ಮಾಹಿತಿಯನ್ನು ಸುರಕ್ಷಿತವಾಗಿಡುವ ಬಗೆಗೂ ಅಷ್ಟೇ ಆಸಕ್ತಿವಹಿಸಬೇಕಾದ್ದು ಅನಿವಾರ್ಯ.
ಹೌದು, ಅಂತರಜಾಲ - ವಿಶ್ವವ್ಯಾಪಿ ಜಾಲಗಳ ವರ್ಚುಯಲ್ ಜಗತ್ತು ಹೊರಗಿನ ನಮ್ಮ ಪ್ರಪಂಚದಂತೆಯೇ. ಅಲ್ಲಿ ಒಳ್ಳೆಯ ಸಂಗತಿಗಳು ಎಷ್ಟಿವೆಯೋ ಕೆಟ್ಟವೂ ಅಷ್ಟೇ ಇವೆ. ಹಾಗಾಗಿ ಜಾಲಲೋಕದಲ್ಲಿರುವಾಗ ನಾವು ಯಾವಾಗಲೂ ನಮ್ಮ ಎಚ್ಚರಿಕೆಯಲ್ಲೇ ಇರಬೇಕು.
ಇಲ್ಲಿ ಜೋಪಾನಮಾಡಬೇಕಾದ ಸಂಗತಿಗಳ ಪೈಕಿ ಮೊದಲ ಸ್ಥಾನ ಪಾಸ್‌ವರ್ಡ್‌ಗಳದು.
ಕಂಪ್ಯೂಟರ್ ಪ್ರಪಂಚದಲ್ಲಿನ ನಮ್ಮ ಚಟುವಟಿಕೆಗಳನ್ನೆಲ್ಲ ಸುರಕ್ಷಿತವಾಗಿಡುವ ಒಂದು ಬೀಗ ಇದೆ ಎಂದು ಭಾವಿಸಿಕೊಂಡರೆ ಪಾಸ್‌ವರ್ಡುಗಳನ್ನು ಆ ಬೀಗದ ಕೀಲಿಕೈ ಎಂದೇ ಕರೆಯಬಹುದು. ಮನೆಯ ಕೀಲಿಕೈ ಕುರಿತು ಎಚ್ಚರವಹಿಸುವಂತೆ ಕಂಪ್ಯೂಟರಿನ ವರ್ಚುಯಲ್ ಲೋಕದಲ್ಲೂ ಪಾಸ್‌ವರ್ಡ್ ರೂಪದ ಕೀಲಿಕೈಗಳನ್ನು ಜೋಪಾನವಾಗಿ ಕಾಪಾಡಿಕೊಳ್ಳಬೇಕಾದ್ದು ಅನಿವಾರ್ಯ. ಅವು ನಮ್ಮನ್ನು ಬಿಟ್ಟು ಬೇರೆಯವರಿಗೆ ತಿಳಿಯುವುದು ಎಂದಿದ್ದರೂ ಅಪಾಯ.
ನೆಟ್‌ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್, ಮೊಬೈಲ್ ವ್ಯಾಲೆಟ್‌ನಂತಹ ಎಲ್ಲ ಸವಲತ್ತುಗಳಲ್ಲೂ ಪಾಸ್‌ವರ್ಡ್ ಬಳಕೆ ಸಾಮಾನ್ಯವಾಗಿರುವುದರಿಂದ ಈ ಪಾಸ್‌ವರ್ಡುಗಳ ಸುರಕ್ಷತೆಯ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ. ಹಾಗೆಂದು ಬೇರೆ ಪಾಸ್‌ವರ್ಡುಗಳನ್ನು ಕಡೆಗಣಿಸುವಂತಿಲ್ಲ. ಬಹುತೇಕ ಎಲ್ಲ ವ್ಯವಸ್ಥೆಗಳಲ್ಲೂ ನೀವು ಮರೆತ ಪಾಸ್‌ವರ್ಡನ್ನು ಇಮೇಲ್ ಖಾತೆಯ ಮೂಲಕ ಬದಲಿಸಿಕೊಳ್ಳುವುದು ಸಾಧ್ಯವಿರುವುದರಿಂದ ನಿಮ್ಮ ಇಮೇಲ್ ಪಾಸ್‌ವರ್ಡ್ ಬಗ್ಗೆ ಇನ್ನೂ ಹೆಚ್ಚಿನ ಕಾಳಜಿ ಅಗತ್ಯ.
ಪಾಸ್‌ವರ್ಡ್ ಗೊತ್ತಿಲ್ಲ ಎನ್ನುವವರು ಮೊಬೈಲಿನಲ್ಲಿ ಬರುವ ಓಟಿಪಿ ಬಳಸಬಹುದಲ್ಲ - ಹಾಗಾಗಿ ನಿಮ್ಮ ಮೊಬೈಲ್ ಫೋನನ್ನು ಜೋಪಾನ ಮಾಡುವುದೂ ಅನಿವಾರ್ಯ. ಮೊಬೈಲ್ ವ್ಯಾಲೆಟ್ ಬಳಸುವವರಂತೂ ಪರ್ಸನ್ನು ನೋಡಿಕೊಂಡಷ್ಟೇ ಜತನದಿಂದ ಮೊಬೈಲನ್ನೂ ಕಾಪಾಡಿಕೊಳ್ಳಬೇಕು - ಕಳ್ಳರಿಂದ ಮಾತ್ರವೇ ಅಲ್ಲ, ಕುತಂತ್ರಾಂಶಗಳಿಂದಲೂ!
ಆನ್‌ಲೈನ್ ವ್ಯವಹಾರ ಸಾಧ್ಯವಾಗಿಸುವ ಸಂಸ್ಥೆಗಳು ಸುರಕ್ಷತೆಗೆ ಅಗತ್ಯವಾದ ಹಲವು ತಾಂತ್ರಿಕ ಕ್ರಮಗಳನ್ನು ಕೈಗೊಂಡಿರುತ್ತವೆ, ಮತ್ತು ಅಗತ್ಯಬಿದ್ದಾಗಲೆಲ್ಲ ಅವುಗಳನ್ನು ಅಪ್‌ಡೇಟ್ ಕೂಡ ಮಾಡುತ್ತಿರುತ್ತವೆ. ಅದೇ ರೀತಿ ಬಳಕೆದಾರರ ಜವಾಬ್ದಾರಿಗಳನ್ನು ಅರಿತು ಸರಿಯಾಗಿ ನಿಭಾಯಿಸುವುದು ನಮ್ಮ ಜವಾಬ್ದಾರಿ.
ಸೈಬರ್ ಕೆಫೆಯಲ್ಲಿ ಅಥವಾ ಸಾರ್ವಜನಿಕ ವೈ-ಫೈ ಬಳಸಿ ಹಣಕಾಸು ವ್ಯವಹಾರಗಳನ್ನು ಮಾಡದಿರುವುದು, ಸಂಶಯಾಸ್ಪದ ಸಂದೇಶ ಹಾಗೂ ಅಟ್ಯಾಚ್‌ಮೆಂಟುಗಳನ್ನು ತೆರೆಯದಿರುವುದು, ಪಾಸ್‌ವರ್ಡ್ - ಓಟಿಪಿ ಇತ್ಯಾದಿಗಳನ್ನು ಯಾರೊಡನೆಯೂ ಹಂಚಿಕೊಳ್ಳದಿರುವುದು, ಮೊಬೈಲ್ ಆಪ್‌ಗಳನ್ನು ಪ್ಲೇ ಸ್ಟೋರಿನಿಂದ ಮಾತ್ರವೇ ಡೌನ್‌ಲೋಡ್ ಮಾಡುವುದು, ಉತ್ತಮ ಆಂಟಿವೈರಸ್ ತಂತ್ರಾಂಶ ಬಳಸುವುದು - ಈ ನಿಟ್ಟಿನಲ್ಲಿ ನಾವು ಅನುಸರಿಸಬಹುದಾದ ಕೆಲ ಕ್ರಮಗಳು.
ಪಾಸ್‌ವರ್ಡ್‌ಗಳ ಮರುಬಳಕೆ ಮಾಡದಿರುವುದೂ ಒಳ್ಳೆಯ ಕ್ರಮವೇ. ಬೇರೆಬೇರೆ ಬೀಗಗಳಿಗೆ ಬೇರೆಬೇರೆ ಕೀಲಿಕೈಗಳಿರುವಂತೆಯೇ ಬೇರೆಬೇರೆ ಅಕೌಂಟುಗಳಿಗೆ ಬೇರೆಬೇರೆ ಪಾಸ್‌ವರ್ಡುಗಳೇ ಇರಬೇಕು. ಒಂದೊಮ್ಮೆ ನಮ್ಮ ಯಾವುದೋ ಒಂದು ಖಾತೆಯ ಪಾಸ್‌ವರ್ಡ್ ಕಳುವಾದರೂ ಇತರ ಖಾತೆಗಳು ಸುರಕ್ಷಿತವಾಗಿರುವಂತೆ ನೋಡಿಕೊಳ್ಳಲು ಈ ಕ್ರಮ ಅನಿವಾರ್ಯ.
ಹಾಗೆಯೇ ತೀರಾ ಸರಳ ಪದಗಳನ್ನು (ಉದಾ: ನಿಮ್ಮ ಹೆಸರು, ಊರಿನ ಹೆಸರು, "ಪಾಸ್‌ವರ್ಡ್" ಇತ್ಯಾದಿ) ಪಾಸ್‌ವರ್ಡ್ ಆಗಿ ಆರಿಸಿಕೊಳ್ಳುವುದೂ ಒಳ್ಳೆಯ ಅಭ್ಯಾಸವಲ್ಲ. ತೀರಾ ಕಡಿಮೆ ಅಕ್ಷರಗಳ ಪಾಸ್‌ವರ್ಡ್ ಬಳಸುವುದೂ ತಪ್ಪು - ಕುತಂತ್ರಾಂಶಗಳು ಇಂತಹ ಪಾಸ್‌ವರ್ಡ್‌ಗಳನ್ನು ಸುಲಭವಾಗಿ ಊಹಿಸಬಲ್ಲವು. ಆದ್ದರಿಂದ ಅಕ್ಷರ, ಅಂಕಿ ಹಾಗೂ ವಿಶೇಷ ಚಿಹ್ನೆಗಳ ಅರ್ಥರಹಿತ ಜೋಡಣೆಯನ್ನು ಪಾಸ್‌ವರ್ಡ್ ಆಗಿ ಬಳಸುವುದು ಆದಷ್ಟೂ ಒಳ್ಳೆಯದು. ನಿರ್ದಿಷ್ಟ ಅವಧಿಗೊಮ್ಮೆ ಪಾಸ್‌ವರ್ಡ್ ಬದಲಿಸುತ್ತಿರುವುದು ಕೂಡ ಉತ್ತಮ ಅಭ್ಯಾಸ.
ನೆನಪಿರಲಿ: ಮನೆಯ ಕೀಲಿಯನ್ನು ನಾವೇ ಕಳ್ಳರ ಕೈಗೆ ಕೊಟ್ಟು ಆಮೇಲೆ ಪೋಲೀಸರನ್ನು ದೂರುವುದು ಎಷ್ಟು ಹಾಸ್ಯಾಸ್ಪದವೋ ಪಾಸ್‌ವರ್ಡ್ ಬಗ್ಗೆ ಕಾಳಜಿ ವಹಿಸದೆ ತಂತ್ರಜ್ಞಾನದ ಮೇಲೇ ತಪ್ಪು ಹೊರೆಸುವುದು ಅದಕ್ಕಿಂತ ದೊಡ್ಡ ತಮಾಷೆ!
ಏಪ್ರಿಲ್ ೨೭, ಮೇ ೧೦ ಹಾಗೂ ಡಿಸೆಂಬರ್ ೩, ೨೦೧೬ರ ವಿಜಯವಾಣಿಯಲ್ಲಿ ಪ್ರಕಟವಾದ ಬರಹಗಳ ಸಂಯುಕ್ತರೂಪ

ಇಜ್ಞಾನ ಡಾಟ್ ಕಾಮ್‌ನಲ್ಲಿ ವಿಶ್ವ ಪಾಸ್‌ವರ್ಡ್ ದಿನ ವಿಶೇಷ
Posted by ejnana.com on 5 May 2016

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ