ಟಿ. ಜಿ. ಶ್ರೀನಿಧಿ
ಮಾನವ ದೃಷ್ಟಿಯ ವ್ಯಾಪ್ತಿಗೆ ಹೋಲಿಸಿದಾಗ ಕ್ಯಾಮೆರಾದ ವ್ಯಾಪ್ತಿ ಸಾಮಾನ್ಯವಾಗಿ ತೀರಾ ಕಡಿಮೆಯಿರುತ್ತದೆ. ಕ್ಯಾಮೆರಾ ಬಳಸಿ ಚಿತ್ರಗಳನ್ನು ಕ್ಲಿಕ್ ಮಾಡುವಾಗ ನಮ್ಮ ಕಣ್ಣೆದುರು ಕಾಣುವುದರ ಒಂದು ಭಾಗವಷ್ಟೇ ಅದರಲ್ಲಿ ಸೆರೆಯಾಗುವುದಕ್ಕೆ ಇದೇ ಕಾರಣ.
ಈ ಕೊರತೆಯನ್ನು ನಿವಾರಿಸುವ ನಿಟ್ಟಿನಲ್ಲಿ ರೂಪುಗೊಂಡಿರುವುದೇ ಪನೋರಮಾ ಛಾಯಾಚಿತ್ರಗಳ ಪರಿಕಲ್ಪನೆ. ಯಾವುದೇ ದೃಶ್ಯದ ಸಮಗ್ರ ಚಿತ್ರಣವನ್ನು ಕೊಡುವುದು ಇಂತಹ ಚಿತ್ರಗಳ ವೈಶಿಷ್ಟ್ಯ.
ಪನೋರಮಾ ಚಿತ್ರಗಳ ವ್ಯಾಪ್ತಿ ಮಾನವ ದೃಷ್ಟಿಯ ವ್ಯಾಪ್ತಿಯ ಆಸುಪಾಸಿನಲ್ಲೇ ಇರುವುದು ವಿಶೇಷ. ಇಂತಹ ಚಿತ್ರಗಳು ಎಷ್ಟು ಉದ್ದವಿರುತ್ತವೋ ಅದರ ಎರಡರಷ್ಟಾದರೂ ಅಗಲವಾಗಿರುತ್ತವೆ.
ಪನೋರಮಾ ಚಿತ್ರಗಳನ್ನು ಸೆರೆಹಿಡಿಯಲು ಬಳಕೆಯಾಗುವ ವಿಧಾನಗಳು ಹಲವು. ಇಂತಹ ಚಿತ್ರಗಳನ್ನು ತೆಗೆಯಲು ಪ್ರತ್ಯೇಕ ಲೆನ್ಸುಗಳಷ್ಟೇ ಅಲ್ಲ, ವಿಶೇಷ ಕ್ಯಾಮೆರಾಗಳೂ ಬಳಕೆಯಾಗುತ್ತವೆ. ಹಾಗೆಂದಮಾತ್ರಕ್ಕೆ ಮಾಮೂಲಿ ಕ್ಯಾಮೆರಾ ಬಳಸಿ ಪನೋರಮಾ ಚಿತ್ರಗಳನ್ನು ತೆಗೆಯಲು ಸಾಧ್ಯವಿಲ್ಲ ಎಂದೇನೂ ಇಲ್ಲ. ಪನೋರಮಾ ಚಿತ್ರಗಳನ್ನು ತೆಗೆಯುವ ಸೌಲಭ್ಯ ಹಲವು ಸಾಮಾನ್ಯ ಕ್ಯಾಮೆರಾಗಳಲ್ಲಿ, ಮೊಬೈಲುಗಳಲ್ಲೂ ಇದೆ. ಒಂದು ದೃಶ್ಯದ ನಾಲ್ಕಾರು ಚಿತ್ರಗಳನ್ನು ತೆಗೆದು (ಅಡ್ಡವಾಗಿ ಅಥವಾ ಲಂಬವಾಗಿ) ಅವನ್ನೆಲ್ಲ ಜೋಡಿಸುವ ಮೂಲಕ ಇಲ್ಲಿ ಪನೋರಮಾ ಚಿತ್ರ ರೂಪಿಸಲಾಗುತ್ತದೆ.
ಕ್ಯಾಮೆರಾದಲ್ಲಿ ಪ್ರತ್ಯೇಕ ಸೌಲಭ್ಯವಿಲ್ಲದಿದ್ದರೂ ಪನೋರಮಾ ಚಿತ್ರಗಳನ್ನು ರೂಪಿಸಿಕೊಳ್ಳಬಹುದು. ಒಂದೇ ಸರಣಿಯಲ್ಲಿ ನಾಲ್ಕಾರು ಚಿತ್ರಗಳನ್ನು ತೆಗೆದು, ತಂತ್ರಾಂಶದ ಸಹಾಯದಿಂದ ಅವನ್ನೆಲ್ಲ ಜೋಡಿಸಿ ಪನೋರಮಾ ಚಿತ್ರಗಳನ್ನು ರೂಪಿಸುವ ಈ ವಿಧಾನಕ್ಕೆ ಫೋಟೋ ಸ್ಟಿಚಿಂಗ್ ಎಂದು ಹೆಸರು.
ಸಾಮಾನ್ಯ ಚಿತ್ರಗಳಿಗಿಂತ ಪನೋರಮಾದಲ್ಲಿ ನಮ್ಮ ಸುತ್ತಲ ದೃಶ್ಯದ ಕೊಂಚ ಹೆಚ್ಚು ಭಾಗ ಸೆರೆಯಾಗುತ್ತದೇನೋ ನಿಜ, ಇದರ ಬದಲು ನಮ್ಮ ಸುತ್ತ ಕಾಣುವ ಎಲ್ಲವನ್ನೂ ಚಿತ್ರದಲ್ಲಿ ಸೆರೆಹಿಡಿಯುವಂತಿದ್ದರೆ?
360-ಡಿಗ್ರಿ ಛಾಯಾಚಿತ್ರಗಳು ಇದನ್ನು ಸಾಧ್ಯವಾಗಿಸುತ್ತವೆ. ಎದುರು, ಹಿಂದೆ, ಮೇಲೆ, ಕೆಳಗೆ - ಎಲ್ಲೆಡೆಯೂ ಕಾಣುವ ದೃಶ್ಯಗಳನ್ನು ಸೆರೆಹಿಡಿದು ಜೋಡಿಸಿ ಚಿತ್ರವನ್ನು ರೂಪಿಸುವುದು ಇವುಗಳ ವೈಶಿಷ್ಟ್ಯ. ಇವುಗಳ ಹೆಸರಿನಲ್ಲಿ 360 ಡಿಗ್ರಿಯ ಪ್ರಸ್ತಾಪವಿರುವುದೂ ಇದೇ ಕಾರಣಕ್ಕಾಗಿ.
ಸಾಮಾನ್ಯ ಕ್ಯಾಮೆರಾಗಳಲ್ಲಿ ಇಂತಹ ಚಿತ್ರಗಳನ್ನು ಕ್ಲಿಕ್ಕಿಸುವುದು ಅಷ್ಟೇನೂ ಸುಲಭವಲ್ಲ. ಅದರೆ ಮೊಬೈಲಿನಲ್ಲಿ ಇಂತಹ ಚಿತ್ರಗಳನ್ನು ಸೆರೆಹಿಡಿಯಲು ನೆರವಾಗುವ ಅನೇಕ ಸೌಲಭ್ಯಗಳು ನಮಗೆ ದೊರಕುತ್ತವೆ. ಕ್ಯಾಮೆರಾ ತಂತ್ರಾಂಶದಲ್ಲಿ ಈ ಸೌಲಭ್ಯ ಇದೆಯೇ ಎಂದು ಪರಿಶೀಲಿಸಬಹುದು (ಉದಾ: ಸ್ಟಾಕ್ ಆಂಡ್ರಾಯ್ಡ್‌ನಲ್ಲಿ ಫೋಟೋಸ್ಫಿಯರ್, ಏಸಸ್ ಫೋನುಗಳಲ್ಲಿ ಪ್ಯಾನೋಸ್ಫಿಯರ್ ಇತ್ಯಾದಿ).
ಪನೋರಮ ಚಿತ್ರಗಳಂತೆ ಇಲ್ಲಿಯೂ ಹಲವು ಚಿತ್ರಗಳನ್ನು ಕ್ಲಿಕ್ ಮಾಡಬೇಕಾಗುತ್ತದೆ (ಸುತ್ತಲ ಅಷ್ಟೂ ಚಿತ್ರಗಳನ್ನು ಒಂದೇ ಸ್ಥಳದಲ್ಲಿ ನಿಂತು ಕ್ಲಿಕ್ಕಿಸಲು ಸಾಕಷ್ಟು ಪ್ರಯತ್ನ ಬೇಕಾಗಬಹುದು). ಕ್ಯಾಮೆರಾ ತಂತ್ರಾಂಶ ಅವನ್ನೆಲ್ಲ ಜೊತೆಸೇರಿಸಿ 360-ಡಿಗ್ರಿ ಚಿತ್ರವನ್ನು ರೂಪಿಸುತ್ತದೆ. ಅಂದಹಾಗೆ ಇಂತಹ ಚಿತ್ರಗಳನ್ನು ಪ್ರದರ್ಶಿಸಬಲ್ಲ ತಂತ್ರಾಂಶಗಳಲ್ಲಿ ಅಥವಾ ಜಾಲತಾಣಗಳಲ್ಲಿ (ಉದಾ: ಫೋಟೋಸ್ಫಿಯರ್ ವ್ಯೂವರ್) ಮಾತ್ರವೇ ಇವನ್ನು ವೀಕ್ಷಿಸುವುದು ಸಾಧ್ಯ.
ಜುಲೈ ೧೨ ಹಾಗೂ ನವೆಂಬರ್ ೧೪, ೨೦೧೬ರ ವಿಜಯವಾಣಿಯಲ್ಲಿ ಪ್ರಕಟವಾದ ಬಿಡಿಲೇಖನಗಳ ಸಂಯುಕ್ತರೂಪ; ಚಿತ್ರಗಳು: ವಿಕಿಮೀಡಿಯಾ ಕಾಮನ್ಸ್ ಕೃಪೆ

ಇದನ್ನೂ ಓದಿ: ಚಿತ್ರಬಿಡಿಸಲಾ ಇಲ್ಲ ಕ್ಲಿಕ್ ಮಾಡಲಾ?

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ