ಶುಕ್ರವಾರ, ಜನವರಿ 27, 2017

ಬಾರ್ ಕೋಡ್ ಬಗ್ಗೆ ನಿಮಗೆಷ್ಟು ಗೊತ್ತು?

ಟಿ. ಜಿ. ಶ್ರೀನಿಧಿ


ಸೂಪರ್ ಮಾರ್ಕೆಟ್ ಎಂದತಕ್ಷಣ ನಮಗೆ ನೆನಪಾಗುವ ಸಂಗತಿಗಳಲ್ಲಿ ಬಿಲ್ಲುಕಟ್ಟೆಯ ಸಿಬ್ಬಂದಿ ಬಳಸುವ ಸ್ಕ್ಯಾನರ್ ಕೂಡ ಒಂದು. ನಾವು ಕೊಂಡ ವಸ್ತುವಿನ ಮೇಲಿರುವ ಕಪ್ಪು ಗೆರೆಗಳ ಸಂಕೇತವೊಂದನ್ನು ಸ್ಕ್ಯಾನ್ ಮಾಡಿದ ಕೂಡಲೆ ಅದರ ಹೆಸರು ಮತ್ತು ಬೆಲೆ ಕಂಪ್ಯೂಟರಿನಲ್ಲಿ ಪ್ರತ್ಯಕ್ಷವಾಗುವುದನ್ನು ನಾವೆಲ್ಲ ನೋಡಿದ್ದೇವೆ.

ಕಪ್ಪು ಗೆರೆಗಳ ಆ ಸಂಕೇತದ ಹೆಸರೇ ಬಾರ್‌ಕೋಡ್. ಈ ಸಂಕೇತಗಳನ್ನು ಸೂಪರ್‌ಮಾರ್ಕೆಟ್‌ಗಳಲ್ಲಷ್ಟೇ ಅಲ್ಲದೆ ಗ್ರಂಥಾಲಯ, ಅಂಚೆ ವ್ಯವಸ್ಥೆ, ಕಾರ್ಖಾನೆ ಮುಂತಾದ ಹಲವೆಡೆ ವ್ಯಾಪಕವಾಗಿ ಬಳಸಲಾಗುತ್ತದೆ.

ಯಾವ ವಸ್ತುವಿನ ಮೇಲಿದೆಯೋ ಆ ವಸ್ತುವನ್ನು ಕುರಿತ ಏನಾದರೊಂದು ಮಾಹಿತಿಯನ್ನು (ಉದಾ: ಆಹಾರ ಪದಾರ್ಥದ ಬೆಲೆ, ಪುಸ್ತಕದ ಐಎಸ್‌ಬಿಎನ್ ಸಂಖ್ಯೆ ಇತ್ಯಾದಿ) ಈ ಸಂಕೇತ ಸೂಚಿಸುತ್ತದೆ. ಈ ಮಾಹಿತಿಯನ್ನು ಹುದುಗಿಸಿಡಲು ಕಪ್ಪು ಗೆರೆಗಳ ಗಾತ್ರ ಹಾಗೂ ಅವುಗಳ ನಡುವಿನ ಅಂತರವನ್ನು ಬಳಸಿಕೊಳ್ಳಲಾಗುತ್ತದೆ. ಆ ಮಾಹಿತಿಯನ್ನು ಸ್ಕ್ಯಾನರ್ ಸಹಾಯದಿಂದ ಓದುವಾಗಲೂ ಇವೇ ಅಂಶಗಳು ಬಳಕೆಯಾಗುತ್ತವೆ.

ಅಂದಹಾಗೆ ಬಾರ್‌ಕೋಡ್‌‌ಗಳಲ್ಲಿ ಹಲವು ವಿಧಗಳಿವೆ. ಯೂನಿವರ್ಸಲ್ ಪ್ರಾಡಕ್ಟ್ ಕೋಡ್ (ಯುಪಿಸಿ), ಯುರೋಪಿಯನ್ ಆರ್ಟಿಕಲ್ ನಂಬರ್‌ಗಳೆಲ್ಲ (ಇಎಎನ್) ಇದಕ್ಕೆ ಕೆಲ ಉದಾಹರಣೆಗಳು. ಈಚೆಗೆ ಜನಪ್ರಿಯವಾಗುತ್ತಿರುವ ಕ್ಯೂಆರ್ ಕೋಡ್ ಅನ್ನು ಎರಡು ಆಯಾಮದ ಬಾರ್ ಕೋಡ್ ಎಂದೂ ಗುರುತಿಸಲಾಗುತ್ತದೆ.
ಇದನ್ನೂ ಓದಿ: ಕಪ್ಪು ಚೌಕಗಳ ಕ್ಯೂಆರ್ ಕೋಡ್
ಪಠ್ಯರೂಪದ ಬಹುತೇಕ ಯಾವುದೇ ಮಾಹಿತಿಯನ್ನು ಬಾರ್‌ಕೋಡ್ ಬಳಸಿ ಪ್ರತಿನಿಧಿಸಬಹುದು (ಉಚಿತವಾಗಿ ಬಾರ್‌ಕೋಡ್ ರೂಪಿಸಿಕೊಡುವ ಹಲವು ಆನ್‌ಲೈನ್ ಸೌಲಭ್ಯಗಳೂ ಇವೆ; barcode generator ಎಂದು ಗೂಗಲ್ ಮಾಡಿ ನೋಡಿ). ಅಲ್ಲದೆ ಬಾರ್‌ಕೋಡ್ ಸ್ಕ್ಯಾನರಿನಂತೆ ಕೆಲಸಮಾಡುವ ಅನೇಕ ಕಿರುತಂತ್ರಾಂಶಗಳು ಇಂದಿನ ಸ್ಮಾರ್ಟ್‌ಫೋನುಗಳಲ್ಲಿ ಉಚಿತವಾಗಿಯೇ ದೊರಕುತ್ತವೆ. ಹೀಗಾಗಿ ಅದೆಷ್ಟೋ ಕೆಲಸಗಳಲ್ಲಿ ಬಾರ್‌ಕೋಡ್‌‌ಗಳನ್ನು ಸುಲಭವಾಗಿ ಬಳಸುವುದು ಸಾಧ್ಯ.

ನವೆಂಬರ್ ೨೮, ೨೦೧೬ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

3 ಕಾಮೆಂಟ್‌ಗಳು:

Unknown ಹೇಳಿದರು...

Really, these articles are giving so much knowledge about some silly things which we usually neglect to know about it. Thank you so much for ur work

Unknown ಹೇಳಿದರು...

Useful information. I am very happy sir every time when i visit your site,technically get updated with useful information.

Unknown ಹೇಳಿದರು...

Useful information,technically getting updated every time when we visit your site thank you sir.

badge