ಟಿ. ಜಿ. ಶ್ರೀನಿಧಿ
ಈಚಿನ ದಿನಗಳಲ್ಲಿ ನಮ್ಮ ದೇಶದ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುವೇ ಇಲ್ಲ. ಹಲವು ಮೊಬೈಲ್ ನಿರ್ಮಾತೃಗಳ ಹತ್ತಾರು ಮಾದರಿಯ ಹೊಸ ಫೋನುಗಳು ಸದಾಕಾಲ ಸುದ್ದಿಮಾಡುತ್ತಲೇ ಇರುತ್ತವೆ.
ಈ ಬಿಡುವಿಲ್ಲದ ಚಟುವಟಿಕೆಯಿಂದಾಗಿ ಮೊಬೈಲ್ ಗ್ರಾಹಕರಿಗೆ ಲಭ್ಯವಿರುವ ಆಯ್ಕೆಗಳು ದಿನೇದಿನೇ ಹೆಚ್ಚುತ್ತಿವೆ. ಅಷ್ಟೇ ಅಲ್ಲ, ಮೊಬೈಲಿನಲ್ಲಿ ದೊರಕುವ ಸೌಲಭ್ಯಗಳೂ ಹೆಚ್ಚುತ್ತಿವೆ. ಮೊದಲಿಗೆ ದುಬಾರಿ ಫೋನುಗಳಲ್ಲಷ್ಟೆ ಕಾಣಿಸಿಕೊಂಡ ಅದೆಷ್ಟೋ ಅನುಕೂಲಗಳು ಅವುಗಳ ಹೋಲಿಕೆಯಲ್ಲಿ ಸಾಕಷ್ಟು ಕಡಿಮೆ ಬೆಲೆಯ ಮಾದರಿಗಳಲ್ಲೂ ಸಿಗುತ್ತಿವೆ. ಹಾಗಾಗಿಯೇ ಏನೋ, ಹತ್ತು ಸಾವಿರ ರೂಪಾಯಿಯ ಆಸುಪಾಸಿನಲ್ಲಿ ಸಾಕಷ್ಟು ಉತ್ತಮವಾದ ಫೋನ್ ಕೊಳ್ಳುವುದು ಇದೀಗ ಸಾಧ್ಯವಾಗಿದೆ.
ಹಾಗೆಂದು ಎಲ್ಲಾದರೂ ಸುಮ್ಮನಿರುವುದು ಸಾಧ್ಯವೇ, ಉತ್ತಮ ಮೊಬೈಲ್ ಫೋನುಗಳನ್ನು ಅದಕ್ಕಿಂತ ಕಡಿಮೆ ಬೆಲೆಯಲ್ಲಿ ನೀಡುವ ಪ್ರಯತ್ನಗಳೂ ಸಾಗಿವೆ. ಕಳೆದ ವರ್ಷ ಮಾರುಕಟ್ಟೆಗೆ ಬಂದು ಭಾರೀ ಜನಪ್ರಿಯತೆ ಗಳಿಸಿಕೊಂಡಿದ್ದ ಲೆನೋವೋ A6000 ಹಾಗೂ A6000 ಪ್ಲಸ್ ಇಂತಹ ಫೋನುಗಳಿಗೆ ಉತ್ತಮ ಉದಾಹರಣೆಗಳು.
ಈ ಪ್ರಯತ್ನದ ಮುಂದುವರೆದ ಅಂಗವಾಗಿ ಲೆನೋವೋ ಸಂಸ್ಥೆ ತನ್ನ 'ವೈಬ್ K5' ಮಾದರಿಯನ್ನು ಈ ತಿಂಗಳು (ಜೂನ್ ೨೦೧೬) ಭಾರತೀಯ ಮಾರುಕಟ್ಟೆಗೆ ಬಿಡುಗಡೆಮಾಡುವ ನಿರೀಕ್ಷೆಯಿದೆ.
ಅಪ್‌ಡೇಟ್: ಲೆನೋವೋ ವೈಬ್ K5 ರೂ. ೬,೯೯೯ರ ಮುಖಬೆಲೆಯೊಡನೆ ಬಿಡುಗಡೆಯಾಗಿದೆ.