ಭಾನುವಾರ, ಸೆಪ್ಟೆಂಬರ್ 20, 2015

ಕನ್ನಡದ ಬ್ರೌಸರ್‌ಗಳು

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ  [ಹಿಂದಿನ ಲೇಖನ]

ವಿಶ್ವವ್ಯಾಪಿ ಜಾಲದ (ವರ್ಲ್ಡ್‌ವೈಡ್ ವೆಬ್) ಬಳಕೆದಾರರೆಲ್ಲರೂ ಕಡ್ಡಾಯವಾಗಿ ಬಳಸುವ ತಂತ್ರಾಂಶವೆಂದರೆ ಬ್ರೌಸರ್. ವಿಶ್ವವ್ಯಾಪಿ ಜಾಲದಲ್ಲಿರುವ ತಾಣಗಳನ್ನು ತಮ್ಮ ಕಂಪ್ಯೂಟರಿನಲ್ಲಿ ವೀಕ್ಷಿಸಲು ಬಳಕೆದಾರರಿಗೆ ನೆರವಾಗುವುದು ಈ ತಂತ್ರಾಂಶದ ಕೆಲಸ. ಗೂಗಲ್ ಕ್ರೋಮ್, ಮೊಜಿಲ್ಲಾ ಫೈರ್‌ಫಾಕ್ಸ್, ಇಂಟರ್‌ನೆಟ್ ಎಕ್ಸ್‌ಪ್ಲೋರರ್ ಸೇರಿದಂತೆ ಹಲವಾರು ಪ್ರಮುಖ ಬ್ರೌಸರುಗಳ ಕನ್ನಡ ಆವೃತ್ತಿ ಇದೀಗ ಲಭ್ಯವಿದೆ. ಇದರಿಂದಾಗಿ ಆ ಬ್ರೌಸರುಗಳಲ್ಲಿರುವ ಆಯ್ಕೆಗಳನ್ನೆಲ್ಲ ನಾವು ಕನ್ನಡದಲ್ಲಿ ನೋಡಬಹುದು, ಬಳಸಬಹುದು.


ಮೊಜಿಲ್ಲಾ ಫೈರ್‌ಫಾಕ್ಸ್ ಬಳಸುವವರು ಅದನ್ನು ಡೌನ್‌ಲೋಡ್ ಮಾಡುವಾಗಲೇ ಕನ್ನಡ ಆವೃತ್ತಿಯನ್ನು ಆರಿಸಿಕೊಳ್ಳಬೇಕಾಗುತ್ತದೆ. ಆದರೆ ಗೂಗಲ್ ಕ್ರೋಮ್ ಬಳಕೆದಾರರು ತಮ್ಮ ಇಷ್ಟದ ಭಾಷೆ ಆರಿಸಿಕೊಳ್ಳಲು ಸೆಟಿಂಗ್ಸ್ ಮೆನುಗೆ ಹೋದರೆ ಸಾಕು. ಅಲ್ಲಿರುವ ಅಡ್ವಾನ್ಸ್‌ಡ್ ಆಯ್ಕೆಗಳನ್ನು ಬಳಸಿಕೊಂಡು ನಾವು ಕ್ರೋಮ್ ತಂತ್ರಾಂಶವನ್ನು ಯಾವ ಭಾಷೆಯಲ್ಲಿ ನೋಡಲು ಇಷ್ಟಪಡುತ್ತೇವೆ ಎನ್ನುವುದನ್ನು ಸೂಚಿಸಬಹುದು.

4 ಕಾಮೆಂಟ್‌ಗಳು:

Arvind ಹೇಳಿದರು...

I can't view Kannada letters properly in android Tablet. Can you give solution for this please?

Srinidhi ಹೇಳಿದರು...

Depends on your device. Can you please let me know which tablet you are using, and the version of Android that it runs on?

ವೀರೇಂದ್ರ ಕುಮಾರ್ . ಎ. ಎಸ್ ಹೇಳಿದರು...

Sir, I'm not able to read things which are typed in Nudi software in my Android mobile.. what can I do? my mobile is ASUS Zen phone 5, ver. Kit Kat 4.4

Srinidhi ಹೇಳಿದರು...

ಸದ್ಯ ಯುನಿಕೋಡ್ ಪಠ್ಯವನ್ನಷ್ಟೆ ಮೊಬೈಲ್/ಟ್ಯಾಬ್ಲೆಟ್ಟುಗಳಲ್ಲಿ ನೋಡಲು ಸಾಧ್ಯ. ನುಡಿ, ಬರಹ ಇತ್ಯಾದಿಗಳಲ್ಲಿ ಟೈಪಿಸಿದ, ಯುನಿಕೋಡ್‌ನಲ್ಲಿಲ್ಲದ, ಪಠ್ಯ ಸದ್ಯಕ್ಕಂತೂ ಮೊಬೈಲುಗಳಲ್ಲಿ ಮೂಡುವುದಿಲ್ಲ.

badge