ಗುರುವಾರ, ಸೆಪ್ಟೆಂಬರ್ 24, 2015

ಅನುವಾದ

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ  [ಹಿಂದಿನ ಲೇಖನ]

ವಿಶ್ವವ್ಯಾಪಿ ಜಾಲದಲ್ಲಿರುವ ಮಾಹಿತಿಯ ಮಹಾಪೂರ ಇಂಗ್ಲಿಷಿನಲ್ಲೇ ಇರಬೇಕು ಎಂದೇನೂ ಇಲ್ಲವಲ್ಲ! ಫ್ರೆಂಚ್‌ನಲ್ಲೋ ಜರ್ಮನ್‌ನಲ್ಲೋ ಇರುವ ತಾಣದಲ್ಲೂ ನಮಗೆ ಬೇಕಾದ ಮಾಹಿತಿ ಇರಬಹುದು. ಹೀಗೆ ಬೇರಾವುದೋ ಭಾಷೆಯಲ್ಲಿ ಇರುವ ಮಾಹಿತಿಯನ್ನು ನಮ್ಮ ಭಾಷೆಗೆ ಅನುವಾದಿಸಿಕೊಳ್ಳುವ ಸೌಲಭ್ಯ 'ಗೂಗಲ್ ಟ್ರಾನ್ಸ್‌ಲೇಟ್' ಮೂಲಕ ಕನ್ನಡಕ್ಕೂ ಬಂದಿದೆ.

ಈ ಸೇವೆ ಬಳಸಿ ವಿವಿಧ ಭಾಷೆಗಳಲ್ಲಿರುವ ಮಾಹಿತಿಯನ್ನು - ತಕ್ಕಮಟ್ಟಿಗಿನ ನಿಖರತೆಯೊಂದಿಗೆ - ಕನ್ನಡಕ್ಕೆ ಅನುವಾದಿಸಿಕೊಳ್ಳಬಹುದು. ಅನುವಾದ ತಪ್ಪು ಎನಿಸಿದಾಗ ನಾವೇ ಅದನ್ನು ತಿದ್ದುವುದೂ ಸಾಧ್ಯ.
ಅಷ್ಟೇ ಏಕೆ, ಸ್ಮಾರ್ಟ್‌ಫೋನು-ಟ್ಯಾಬ್ಲೆಟ್ಟುಗಳಲ್ಲಿ ಗೂಗಲ್ ಟ್ರಾನ್ಸ್‌ಲೇಟ್ ಆಪ್ ಬಳಸಿದರೆ ಪರದೆಯ ಮೇಲೆ ಬೆರಳನ್ನೋ ಸ್ಟೈಲಸ್ ಕಡ್ಡಿಯನ್ನೋ ಬಳಸಿ ಕನ್ನಡ ಪದಗಳನ್ನು ಬರೆಯುವುದು, ಹಾಗೂ ಕ್ಷಣಾರ್ಧದಲ್ಲಿ ಆ ಪದಗಳನ್ನು ಇತರ ಭಾಷೆಗಳಿಗೆ ಅನುವಾದಿಸಿಕೊಳ್ಳುವುದು ಸಾಧ್ಯವಾಗುತ್ತದೆ.

ಬಸ್ಸಿನ ಬೋರ್ಡಿನಲ್ಲೋ ಜಾಹೀರಾತು ಫಲಕದಲ್ಲೋ ಕಂಡ ಪಠ್ಯದ ಫೋಟೋ ತೆಗೆದು ಅದನ್ನು ಗುರುತಿಸುವ ಹಾಗೂ ಬೇಕಾದ ಭಾಷೆಗೆ ಅನುವಾದಿಸಿಕೊಳ್ಳುವ ಸೌಲಭ್ಯ ಕೂಡ ಇತರ ಕೆಲ ಭಾಷೆಗಳಲ್ಲಿದೆ. ಸದ್ಯ ಈ ಆಯ್ಕೆ ಕನ್ನಡ ಭಾಷೆಗೆ ಲಭ್ಯವಿಲ್ಲವಾದರೂ ಈ ಸೌಲಭ್ಯ ಬಳಸಿ ಇತರ ಭಾಷೆಗಳ ಪಠ್ಯವನ್ನು ಕನ್ನಡಕ್ಕೆ ಅನುವಾದಿಸಿಕೊಳ್ಳುವ ಪ್ರಯತ್ನ ಮಾಡಬಹುದು.

1 ಕಾಮೆಂಟ್‌:

Padma ಹೇಳಿದರು...

ಚೆನ್ನಾಗಿದೆ, ಮಿತಿಗಳ ವಿಷಯ ಸ್ವಲ್ಪ ಹೆಚ್ಚು ವಿವರಗಳು ಇರಬಹುದಿತ್ತೇನೋ

badge