ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ [ಹಿಂದಿನ ಲೇಖನ]
ಓದುವ ಪುಸ್ತಕಗಳ ಜೊತೆಗೆ ಕನ್ನಡದ ಕೇಳು ಪುಸ್ತಕಗಳೂ ಇವೆ. ಹೆಸರಾಂತ ಲೇಖಕರ ಕತೆ - ಕಾದಂಬರಿಗಳ ಧ್ವನಿಮುದ್ರಣವನ್ನು ಇದೀಗ ವಿವಿಧ ಜಾಲತಾಣಗಳಲ್ಲಿ ಕೊಳ್ಳಬಹುದು; ಸಿಡಿ ರೂಪದಲ್ಲಿ ಅಥವಾ ಡೌನ್‌ಲೋಡ್ ಮಾಡಿಕೊಂಡು ಕೇಳಬಹುದು. ಮಾಸ್ತಿಯವರ 'ಸುಬ್ಬಣ್ಣ', ಭೈರಪ್ಪನವರ 'ಧರ್ಮಶ್ರೀ', ಬೀಚಿಯವರ 'ಮಾತನಾಡುವ ದೇವರುಗಳು', ವಸುಧೇಂದ್ರರ 'ನಮ್ಮಮ್ಮ ಅಂದ್ರೆ ನಂಗಿಷ್ಟ' ಸೇರಿದಂತೆ ಹಲವು ಕೃತಿಗಳು ಧ್ವನಿಮುದ್ರಿತ ರೂಪದಲ್ಲಿ ಪ್ರಕಟವಾಗಿವೆ. 'ಕೇಳಿ ಕಥೆಯ' ಎನ್ನುವ ಕೇಳುಪುಸ್ತಕದಲ್ಲಂತೂ ಕತೆಗಳ ಗೊಂಚಲೇ ಇದೆ!
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಮಗ್ರ ವಚನಸಾಹಿತ್ಯ ಹಾಗೂ ಸಮಗ್ರ ದಾಸಸಾಹಿತ್ಯ ತಾಣಗಳಲ್ಲಿ ವಚನಗಳು ಹಾಗೂ ದಾಸಸಾಹಿತ್ಯದ ಧ್ವನಿಮುದ್ರಣ ಲಭ್ಯವಿದೆ.
ಅದೇ ರೀತಿ ಪ್ರಸಿದ್ಧ ಕವಿಗಳು ತಮ್ಮದೇ ಕವನಗಳನ್ನು ಓದಿರುವುದನ್ನು ನಾವು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಜಾಲತಾಣದಲ್ಲಿ ಕೇಳಬಹುದು, ನೋಡಬಹುದು.
ಕತೆ ಕವಿತೆಗಳಷ್ಟೇ ಅಲ್ಲ, ಸಂದರ್ಶನಗಳ ಧ್ವನಿಮುದ್ರಣವೂ ಇದೆ. ಕನ್ನಡದ ಹನ್ನೆರಡು ಜನ ಖ್ಯಾತನಾಮರ ಸಂದರ್ಶನಗಳನ್ನು 'ಸಂಪದ ಶ್ರಾವ್ಯ' ಆಪ್ ಮೂಲಕ ಕೇಳುವುದು ಸಾಧ್ಯ. ಇದೇ ರೀತಿ ಸಾಹಿತ್ಯ ತಾಣ 'ಚುಕ್ಕುಬುಕ್ಕು'ವಿನಲ್ಲಿ ಕವಿತೆ-ಕತೆ-ಸಂದರ್ಶನಗಳ ಜೊತೆಗೆ ಉಪನ್ಯಾಸಗಳನ್ನೂ ಕೇಳಿಸುವ 'ಕಿವಿ ಸಮಯ'ವೆಂಬ ವಿಭಾಗ ಇದೆ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ