ಗುರುವಾರ, ಅಕ್ಟೋಬರ್ 22, 2015

ಆಟಗಳಲ್ಲಿ ಕನ್ನಡದ ಸೊಗಡು

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ  [ಹಿಂದಿನ ಲೇಖನ]

ಕಂಪ್ಯೂಟರ್ ತಂತ್ರಾಂಶಗಳ ಪೈಕಿ ಆಟಗಳಿಗೆ ತಮ್ಮದೇ ಆದ ವಿಶಿಷ್ಟ ಸ್ಥಾನವಿದೆ. ಯಾವ ಭೇದವೂ ಇಲ್ಲದೆ ಎಲ್ಲರೂ ಬಳಸುವ ಸಾರ್ವತ್ರಿಕ ತಂತ್ರಾಂಶಗಳಲ್ಲವೆ ಅವು? ಇನ್ನು ಮೊಬೈಲಿನಲ್ಲಂತೂ ಕೇಳುವುದೇ ಬೇಡ, ಯಾವ ಆಪ್ ಅಂಗಡಿಯನ್ನೇ ನೋಡಿದರೂ ನಮಗೆ ಸಾವಿರಾರು ಸಂಖ್ಯೆಯ ಆಟಗಳು ಕಾಣಸಿಗುತ್ತವೆ.

ಇಷ್ಟೆಲ್ಲ ಜನಪ್ರಿಯವಾಗಿರುವ ಗೇಮ್ಸ್ ಲೋಕದಲ್ಲಿ ಕೊಂಚಮಟ್ಟಿಗೆ ಕನ್ನಡವೂ ಇದೆ.

ಬೌದ್ಧಿಕ ಕಸರತ್ತಿನ ಆಟಗಳ ಪೈಕಿ ಬಹುಕಾಲದಿಂದ ಜನಪ್ರಿಯವಾಗಿರುವ ಪದಬಂಧವನ್ನು 'ಇಂಡಿಕ್ರಾಸ್' ತಾಣದ ಮೂಲಕ ಆನ್‌ಲೈನ್‌ನಲ್ಲೂ ತುಂಬಿಸಬಹುದು.
ಆಂಡ್ರಾಯ್ಡ್ ಮೊಬೈಲ್ ಹಾಗೂ ಟ್ಯಾಬ್ಲೆಟ್ ಬಳಕೆದಾರರಿಗೆಂದು ಪದಬಂಧದ ಆಪ್ ಕೂಡ ಇದೆ (ಈ ಪೈಕಿ Kannada Crossword Padabandha ಉಚಿತವಾದರೆ Kannada Padabandha Plus ಅನ್ನು ಹಣಕೊಟ್ಟು ಕೊಳ್ಳಬೇಕು). ಅಂಕಿಗಳ ಸುಡೊಕು ಬೇಸರವಾಗಿದ್ದರೆ 'ಕನ್ನಡ ಅಕ್ಷರ  ಸುಡೊಕು' ಆಡುವುದೂ ಸಾಧ್ಯ.

ಅಕ್ಷರಗಳ ಗೋಜಲಿನಲ್ಲಿ ಪದಗಳನ್ನು ಹುಡುಕುವ 'ಪದಹುಡುಕು', ಮರದಿಂದ ಮಾವಿನ ಹಣ್ಣು ಉದುರಿಸುವ 'ಮ್ಯಾಂಗೋ ಹಂಟ್' - ಇವು ಆಂಡ್ರಾಯ್ಡ್ ಬಳಕೆದಾರರಿಗಾಗಿ ಲಭ್ಯವಿರುವ ಆಟಗಳಿಗೆ ಇನ್ನೆರಡು ಉದಾಹರಣೆಗಳು. ಆಟದ ಮೆನುಗಳು ಕನ್ನಡದಲ್ಲಿಲ್ಲದಿದ್ದರೂ 'ಆಟೋರಿಕ್ಷಾ ರ್‍ಯಾಶ್' ಹಾಗೂ ಆಡು-ಹುಲಿಯಾಟದ ಆಪ್‌ಗಳು ಕನ್ನಡ ಬಳಕೆದಾರರಿಗೆ ಆಪ್ತವೆನಿಸಬಲ್ಲವು.

ಕನ್ನಡ ಗಣಕ ಪರಿಷತ್ತಿನ 'ಅಕ್ಷರಕಲಿ', 'ಅಂಕಿವಿನೋದ' ಹಾಗೂ 'ಪದವಿಹಾರ' ಕಂಪ್ಯೂಟರ್ ಬಳಕೆದಾರರಿಗೆ ಲಭ್ಯವಿರುವ ಕೆಲ ಸರಳ ಆಟಗಳು. ವಿಶ್ವಕನ್ನಡ ತಾಣದಲ್ಲಿ ಲಭ್ಯವಿರುವ 'ಕನ್ನಡ ಕಲಿ' ಕೂಡ ಇಂತಹುದೇ ಇನ್ನೊಂದು ತಂತ್ರಾಂಶ. ಹೊಸದಾಗಿ ಕನ್ನಡ ಕಲಿಯುತ್ತಿರುವವರಿಗೆ ಈ ತಂತ್ರಾಂಶಗಳನ್ನು ಉಪಯುಕ್ತವಾಗಬಲ್ಲವು.

ಕಾಮೆಂಟ್‌ಗಳಿಲ್ಲ:

badge