ಆಳ್ವಾಸ್ ನುಡಿಸಿರಿ - ೨೦೧೬ರಲ್ಲಿ ಮಾಡಿದ ಭಾಷಣದ ಪೂರ್ಣರೂಪ
ಟಿ. ಜಿ. ಶ್ರೀನಿಧಿ
ನಾಳೆಗಳನ್ನು ನಿರ್ಮಿಸುವಲ್ಲಿ ವಿದ್ಯಾಸಂಸ್ಥೆಗಳ ಪಾತ್ರ ಬಹಳ ಮಹತ್ವದ್ದು. ಅಂತಹ ಮಹತ್ವದ ಜವಾಬ್ದಾರಿ ನಿರ್ವಹಿಸುತ್ತಿರುವ ಸಂಸ್ಥೆಯೊಂದು ನಾಳೆಗಳ ನಿರ್ಮಾಣದ ಕುರಿತಾಗಿಯೇ ಈ ಸಮ್ಮೇಳನವನ್ನು ಆಯೋಜಿಸಿರುವುದು ಅತ್ಯಂತ ಸಮಂಜಸವಾಗಿದೆ. ಕಳೆದೆರಡು ದಿನಗಳಿಂದ ವಿವಿಧ ಕ್ಷೇತ್ರದ ನಾಳೆಗಳ ಕುರಿತ ಅನೇಕ ಸಂಗತಿಗಳನ್ನು, ಅನಿಸಿಕೆ-ಅಭಿಪ್ರಾಯಗಳನ್ನು ನಾವೆಲ್ಲ ತಿಳಿದುಕೊಂಡಿದ್ದೇವೆ. ಇದೀಗ ತಂತ್ರಜ್ಞಾನ ಕ್ಷೇತ್ರದ ನಾಳೆಗಳ ಕುರಿತು ಮಾತನಾಡುವ ಸಮಯ.
೨೦೦೦ನೇ ಸಾಲಿನಲ್ಲಿ ಜಾವೆದ್ ಅಖ್ತರ್ ಅವರಿಗೆ ಅತ್ಯುತ್ತಮ ಗೀತರಚನೆಗೆಂದು ಚಲನಚಿತ್ರ ಕ್ಷೇತ್ರದ ರಾಷ್ಟ್ರಪುರಸ್ಕಾರ ಲಭಿಸಿತ್ತು. "ಹಾರುವ ಹಕ್ಕಿಗೆ ಬೀಸುವ ಗಾಳಿಗೆ ಸೀಮೆಯ ಹಂಗಿಲ್ಲ, ಮನುಜ ಮನುಜನ ನಡುವಲಿ ಮಾತ್ರ ಗಡಿಗಳಿಗೆಣೆಯಿಲ್ಲ" - ಇದು ಆ ಗೀತೆಯ ಮೊದಲ ಕೆಲ ಸಾಲುಗಳ ಭಾವಾರ್ಥ.
ನಿಜ, ಬಹುತೇಕ ಸರಹದ್ದುಗಳೆಲ್ಲ ಮನುಷ್ಯರದೇ ಸೃಷ್ಟಿ. ರಾಷ್ಟ್ರಗಳ, ರಾಜ್ಯಗಳ, ಭಾಷೆಗಳ, ಧರ್ಮಗಳ ಹೆಸರಿನಲ್ಲಿ ಅದೆಷ್ಟೋ ಸರಹದ್ದುಗಳನ್ನು ನಮ್ಮ ಸುತ್ತಲೂ ನಾವೇ ನಿರ್ಮಿಸಿಕೊಂಡುಬಿಟ್ಟಿದ್ದೇವೆ.
ಇಂತಹ ಸರಹದ್ದುಗಳ ಕಾಟ ಯಾವ ಕ್ಷೇತ್ರವನ್ನೂ ಬಿಟ್ಟಿಲ್ಲ. ಇವುಗಳ ಕೈವಾಡ ತಂತ್ರಜ್ಞಾನ ಕ್ಷೇತ್ರದಲ್ಲೂ ಇದೆ.