ಟಿ. ಜಿ. ಶ್ರೀನಿಧಿ
ಹೌದು, ಇಮೇಲ್ ತಂತ್ರಜ್ಞಾನವನ್ನು ಯಾರೋ ಒಬ್ಬ ವಿಜ್ಞಾನಿ ಯಾವುದೋ ಒಂದು ದಿನ ಇದ್ದಕ್ಕಿದ್ದಂತೆ ಕಂಡುಹಿಡಿಯಲಿಲ್ಲ; ಕಂಪ್ಯೂಟರ್ ಲೋಕದ ಅದೆಷ್ಟೋ ಆವಿಷ್ಕಾರಗಳಂತೆ ಸಾಕಷ್ಟು ದೀರ್ಘವಾದ ಅವಧಿಯಲ್ಲಿ ಅನೇಕ ತಂತ್ರಜ್ಞರ ಶ್ರಮದಿಂದ ವಿಕಾಸವಾದ ತಂತ್ರಜ್ಞಾನ ಅದು.
ಆದರೆ ಇಮೇಲ್ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದ ಅನೇಕ ಸಂಗತಿಗಳಿವೆ - ಇಮೇಲ್ ವಿಳಾಸಗಳಲ್ಲಿ @ ಚಿಹ್ನೆಯ ಬಳಕೆ ಪ್ರಾರಂಭವಾದದ್ದು ಇಂತಹ ಮೈಲಿಗಲ್ಲುಗಳಲ್ಲಿ ಅತ್ಯಂತ ಮಹತ್ವಪೂರ್ಣವಾದದ್ದು.
ಖ್ಯಾತ ಕಂಪ್ಯೂಟರ್ ತಜ್ಞ ರೇ ಟಾಮ್ಲಿನ್‌ಸನ್ ನಿಧನರಾಗಿದ್ದಾರೆ. ವಿವಿಧ ಮಾಧ್ಯಮಗಳಲ್ಲಿ ಕೇಳಿಬರುತ್ತಿರುವ ಅವರ ನಿಧನವಾರ್ತೆಯಲ್ಲಿ ಅವರನ್ನು "ಇಮೇಲ್ ಸೃಷ್ಟಿಕರ್ತ" ಎಂದು ಗುರುತಿಸುತ್ತಿರುವುದನ್ನೂ ನಾವು ನೋಡುತ್ತಿದ್ದೇವೆ.ಇಮೇಲ್ ಕಂಡುಹಿಡಿದದ್ದು ಯಾರು? ಕಂಪ್ಯೂಟರ್ ಪ್ರಪಂಚದಲ್ಲಿ ಕೇಳಸಿಗುವ ಅನೇಕ ಉತ್ತರವಿಲ್ಲದ ಪ್ರಶ್ನೆಗಳಲ್ಲಿ ಇದೂ ಒಂದು.
ಇಮೇಲ್ ತಂತ್ರಜ್ಞಾನದ ವಿಕಾಸದಲ್ಲಿ ಬಹು ಮಹತ್ವದ ಪಾತ್ರ ವಹಿಸಿದ್ದವರು ಟಾಮ್ಲಿನ್‌ಸನ್. ಆದರೆ ಅವರು ಇಮೇಲ್ ಸೃಷ್ಟಿಕರ್ತರೇನೂ ಆಗಿರಲಿಲ್ಲ. ಹಾಗಾದರೆ ಇಮೇಲ್ ತಂತ್ರಜ್ಞಾನಕ್ಕೆ ಹೊಸ ತಿರುವು ಕೊಟ್ಟ ಅವರ ಸಾಧನೆ ಏನು? ಅಗಲಿದ ಹಿರಿಯರಿಗೆ ಈ ಲೇಖನದ ಮೂಲಕ ನಮ್ಮ ಶ್ರದ್ಧಾಂಜಲಿ...