ಟಿ. ಜಿ. ಶ್ರೀನಿಧಿ
ಮೊಬೈಲ್ ಸಂಪರ್ಕ ಪಡೆಯಲು ಏನೆಲ್ಲ ಬೇಕು? ಮೊದಲಿಗೆ ಒಂದು ಮೊಬೈಲ್ ಫೋನ್ ಬೇಕು, ಆಮೇಲೊಂದು ಸಿಮ್ ಕಾರ್ಡ್ ಬೇಕು!
ಹೌದು, ನಿಮ್ಮ ಮೊಬೈಲ್ ಫೋನು ಯಾವುದೇ ಇರಲಿ - ಸ್ಮಾರ್ಟ್ ಆಗಿರಲಿ ಇಲ್ಲದಿರಲಿ - ಜಿಎಸ್‌ಎಂ ತಂತ್ರಜ್ಞಾನ ಬಳಸುವುದಾದರೆ ಅದರಲ್ಲೊಂದು ಸಿಮ್ ಅಂತೂ ಇರಲೇಬೇಕು. 'ಸಿಮ್' ಎಂಬ ಹೆಸರು 'ಸಬ್‌ಸ್ಕ್ರೈಬರ್ ಐಡೆಂಟಿಫಿಕೇಶನ್ ಮಾಡ್ಯೂಲ್' (ಚಂದಾದಾರರನ್ನು ಗುರುತಿಸುವ ಘಟಕ) ಎನ್ನುವುದರ ಹ್ರಸ್ವರೂಪ. ಹೆಸರೇ ಹೇಳುವಂತೆ ಚಂದಾದಾರರನ್ನು ಗುರುತಿಸಿ ಮೊಬೈಲ್ ಜಾಲದೊಡನೆ ಅವರ ಸಂಪರ್ಕ ಏರ್ಪಡಿಸುವಲ್ಲಿ ಈ ಪುಟ್ಟ ಬಿಲ್ಲೆಯದು ಮಹತ್ವದ ಪಾತ್ರ.
ಈ ವಿಶಿಷ್ಟ ಸಾಧನ ಸೃಷ್ಟಿಯಾಗಿ ಇದೀಗ ಇಪ್ಪತ್ತೈದು ವರ್ಷ. ತಂತ್ರಜ್ಞಾನ ಲೋಕದ ಮಟ್ಟಿಗೆ ಇದೊಂದು ಬಹುದೊಡ್ಡ ಅವಧಿ. ಇಷ್ಟೆಲ್ಲ ಸಮಯದವರೆಗೂ ಚಾಲ್ತಿಯಲ್ಲಿ ಉಳಿದುಕೊಂಡಿರುವುದು ಸಿಮ್‌ನ ಹಿರಿಮೆಯೇ ಸರಿ!