ಟಿ. ಜಿ. ಶ್ರೀನಿಧಿ
ವಿವಿಧ ಕೆಲಸಗಳಿಗಾಗಿ ರಹಸ್ಯ ಸಂಕೇತಗಳ ಬಳಕೆ ಬಹು ಹಿಂದಿನಿಂದಲೂ ನಡೆದುಬಂದಿರುವ ಸಂಗತಿ. ಇವತ್ತಿನ ಪಾಸ್‌ವರ್ಡ್-ಪಿನ್‌ಗಳ ಕತೆ ಹಾಗಿರಲಿ, ಹಲವು ನೂರು ವರ್ಷಗಳ ಹಿಂದಿನ ಸನ್ನಿವೇಶಗಳನ್ನು ಕಟ್ಟಿಕೊಡುವ ತ.ರಾ.ಸು. ಕಾದಂಬರಿಗಳಲ್ಲೂ ಕೋಟೆಬಾಗಿಲು ತೆರೆದುಕೊಳ್ಳುವುದು ಗುಪ್ತಪದ ಹೇಳಿದಾಗಲೇ!
ಹಣಕಾಸು ವ್ಯವಹಾರಗಳಲ್ಲಿ, ಖಾಸಗಿ ಮಾಹಿತಿಯ ನಿರ್ವಹಣೆಯಲ್ಲಿ ವಿದ್ಯುನ್ಮಾನ ಸಾಧನಗಳ ಬಳಕೆ ಹೆಚ್ಚಿದಮೇಲಂತೂ ಪಾಸ್‌ವರ್ಡ್ ಬಳಕೆಗೆ ಎಲ್ಲಿಲ್ಲದ ಮಹತ್ವ ಬಂದಿದೆ. ಸುಲಭವಾಗಿ ಊಹಿಸಲು ಸಾಧ್ಯವಿಲ್ಲದಂತಹ ಪದಗಳನ್ನು ಆರಿಸಿಕೊಳ್ಳುವುದು, ಆರಿಸಿಕೊಂಡ ಪದಗಳ ಗೌಪ್ಯತೆ ಕಾಪಾಡಿಕೊಳ್ಳುವುದು, ಕುತಂತ್ರಾಂಶಗಳು ಅವನ್ನು ಕದಿಯದಂತೆ ನೋಡಿಕೊಳ್ಳುವುದು - ಎಲ್ಲವನ್ನೂ ಹೊರಪ್ರಪಂಚದಲ್ಲಿ ಬೆಲೆಬಾಳುವ ವಸ್ತುಗಳನ್ನು ಜೋಪಾನ ಮಾಡಿದಷ್ಟೇ ಕಾಳಜಿಯಿಂದ ಮಾಡಬೇಕಾದ ಪರಿಸ್ಥಿತಿ ಇವತ್ತಿನದು.
ಸೋಮವಾರ, ಅಕ್ಟೋಬರ್ 30, 2017
ಗುರುವಾರ, ಅಕ್ಟೋಬರ್ 26, 2017
ಹುದುಗುವಿಕೆಯಲ್ಲಿ ಹುದುಗಿದ ರಹಸ್ಯ!
ಕ್ಷಮಾ ವಿ. ಭಾನುಪ್ರಕಾಶ್
ಹಿಂದಿನ ರಾತ್ರಿ ರುಬ್ಬಿ ಇಟ್ಟಿದ್ದ ಅರ್ಧ ಡಬ್ಬಿ ದೋಸೆ ಹಿಟ್ಟು, ಬೆಳಿಗ್ಗೆ ನೋಡಿದರೆ ಡಬ್ಬಿಯಿಂದ ಉಕ್ಕಿ ಹೊರಗೆಲ್ಲ ಚೆಲ್ಲಿದೆ. ಬೆಳಿಗ್ಗೆ ಹೆಪ್ಪು ಹಾಕಿದಾಗ ಇನ್ನೂ ಹಾಲೇ ಆಗಿತ್ತು, ಸಂಜೆ ನೋಡಿದರೆ ಮೊಸರಾಗಿದೆ.
ನಮಗೆಲ್ಲ ಚೆನ್ನಾಗಿಯೇ ಪರಿಚಯವಿರುವ ಸಂಗತಿಗಳು ಇವು. ನಮ್ಮ ಅಜ್ಜಿ-ತಾತ, ಅವರ ಅಜ್ಜಿ-ತಾತನಿಗೂ ಗೊತ್ತಿದ್ದವೇ ಇರಬೇಕು. ಹೀಗೆಲ್ಲ ಆಗುವುದರ ಹಿಂದಿನ ರಹಸ್ಯ ಏನು? ನೋಡೋಣ ಬನ್ನಿ.

ಸೋಮವಾರ, ಅಕ್ಟೋಬರ್ 23, 2017
ಗೂಗಲ್‍ನಿಂದ ಹೊಸ ಫೋನು; ಅದರಲ್ಲಿ ಹೊಸದೇನು?
ಅಭಿಷೇಕ್ ಜಿ. ಎಸ್.
ಅಂತರಜಾಲ ಆಧರಿತ ಸೇವೆಗಳನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿರುವ ಗೂಗಲ್, ಈ ಕ್ಷೇತ್ರದ ಅತ್ಯಂತ ಜನಪ್ರಿಯ ಸಂಸ್ಥೆಗಳಲ್ಲೊಂದು. ೧೯೯೮ರಲ್ಲಿ ಪ್ರಾರಂಭವಾದ ಗೂಗಲ್ ಇದೀಗ ಅಂತರಜಾಲ ಬಳಕೆದಾರರಲ್ಲದವರಿಗೂ ಪರಿಚಿತವಾದ ಹೆಸರು.
ನಮಗೆಲ್ಲ ಗೂಗಲ್ ಎಂದೊಡನೆ ಮೊದಲು ನೆನಪಾಗುವುದು ಸರ್ಚ್ ಇಂಜನ್. ವಿಶ್ವವ್ಯಾಪಿ ಜಾಲದಲ್ಲಿ (ವರ್ಲ್ಡ್ ವೈಡ್ ವೆಬ್) ನಮಗೆ ಬೇಕಾದ ಮಾಹಿತಿಯನ್ನು ಹುಡುಕಿಕೊಳ್ಳುವ ಪ್ರಕ್ರಿಯೆಗೆ "ಗೂಗಲ್ ಮಾಡುವುದು" ಎಂಬ ಹೆಸರೇ ಇದೆಯಲ್ಲ! ಜಿಮೇಲ್, ಯೂಟ್ಯೂಬ್ ಮುಂತಾದವೂ ಗೂಗಲ್ ಸೇವೆಗಳೇ ಎನ್ನುವುದೂ ನಮಗೆಲ್ಲ ಗೊತ್ತು. ಆದರೆ ಗೂಗಲ್ ಉತ್ಪನ್ನಗಳಲ್ಲಿ ಸ್ಮಾರ್ಟ್‌ಫೋನ್ ಕೂಡ ಒಂದು ಎನ್ನುವ ವಿಷಯ ಬಹುತೇಕರಿಗೆ ತಿಳಿದಿಲ್ಲ.

ಬುಧವಾರ, ಅಕ್ಟೋಬರ್ 18, 2017
ವಾರದ ವಿಶೇಷ: ಬೆಳಕು ಸೂಸುವ ಡಯೋಡುಗಳ ಬಗ್ಗೆ...
ಟಿ. ಜಿ. ಶ್ರೀನಿಧಿ
ಮಕ್ಕಳ ಆಟಿಕೆ, ಸೀರಿಯಲ್ ಸೆಟ್, ಟ್ರಾಫಿಕ್ ಸಿಗ್ನಲ್, ಬಸ್ಸು - ರೈಲಿನ ಬೋರ್ಡು ಮುಂತಾದ ಕಡೆಗಳಲ್ಲಿ ಎಲ್‌ಇಡಿಗಳು ಬಳಕೆಯಾಗುವುದು ನಮಗೆ ಗೊತ್ತೇ ಇದೆ. ಬಹುತೇಕ ಟೀವಿ, ಮೊಬೈಲ್ ಫೋನುಗಳ ಪರದೆಯನ್ನು ಬೆಳಗುವುದೂ ಇದೇ ಎಲ್‌ಇಡಿಗಳು.
ಎಲ್‌ಇಡಿ ಎನ್ನುವುದು ಲೈಟ್ ಎಮಿಟಿಂಗ್ ಡಯೋಡ್ ಎನ್ನುವ ಹೆಸರಿನ ಹ್ರಸ್ವರೂಪ.

ಶುಕ್ರವಾರ, ಅಕ್ಟೋಬರ್ 13, 2017
ವೀಕೆಂಡ್ ಇಜ್ಞಾನ: ತಂತ್ರಾಂಶ ವಿಶ್ವದಲ್ಲಿ ರೋಬಾಟ್‌ಗಳ ಜಗತ್ತು
ಟಿ. ಜಿ. ಶ್ರೀನಿಧಿ
ಯಂತ್ರಮಾನವ, ಅಂದರೆ ರೋಬಾಟ್‌ಗಳ ಪರಿಕಲ್ಪನೆ ಬಹಳ ರೋಚಕವಾದದ್ದು. ಸಾಮಾನ್ಯ ಜನರಿಗೆ ರೋಬಾಟ್‌ಗಳ ಪರಿಚಯವಿರುವುದು ಹೆಚ್ಚಾಗಿ ಕತೆಗಳ-ಚಲನಚಿತ್ರಗಳ ಮೂಲಕವೇ ಇರಬಹುದು; ಆದರೆ ಈಚಿನ ವರ್ಷಗಳಲ್ಲಿ ನೈಜ ರೋಬಾಟ್‌ಗಳು ಅನೇಕ ಕ್ಷೇತ್ರಗಳಲ್ಲಿ ಬಳಕೆಯಾಗುತ್ತಿವೆ. ಕಾರ್ಖಾನೆಯಲ್ಲಿ ಕೆಲಸಮಾಡುವುದರಿಂದ ಪ್ರಾರಂಭಿಸಿ ಮನೆಯ ಕಸ ಗುಡಿಸುವವರೆಗೆ ಇಂತಹ ರೋಬಾಟ್‌ಗಳ ಕಾರ್ಯಕ್ಷೇತ್ರ ಬಹಳ ವಿಸ್ತಾರವಾಗಿ ವ್ಯಾಪಿಸಿಕೊಂಡಿದೆ.
ಇಂತಹ ಎಲ್ಲ ರೋಬಾಟ್‌ಗಳೂ ಒಂದಲ್ಲ ಒಂದು ಬಗೆಯ ಯಂತ್ರಗಳೇ. ಸಿನಿಮಾಗಳಲ್ಲಿ ಕಾಣಸಿಗುವ ಮನುಷ್ಯರೂಪದ ಯಂತ್ರವಿರಲಿ, ಅತ್ತಿತ್ತ ಓಡಾಡುತ್ತ ಮನೆಯ ಕಸಗುಡಿಸುವ ಪುಟಾಣಿ ಪೆಟ್ಟಿಗೆಯಂತ ಯಂತ್ರವೇ ಇರಲಿ ನಿರ್ದಿಷ್ಟ ಕೆಲಸಗಳನ್ನು ಸ್ವಯಂಚಾಲಿತವಾಗಿ ಮಾಡುವ ಶಕ್ತಿಯಿರುವುದು ರೋಬಾಟ್‌ಗಳ ವೈಶಿಷ್ಟ್ಯ.
ಯಂತ್ರಾಂಶದ (ಹಾರ್ಡ್‌ವೇರ್) ರೂಪದಲ್ಲಿ ಇಷ್ಟೆಲ್ಲ ಕೆಲಸಮಾಡಬಲ್ಲ ರೋಬಾಟ್‌ಗಳನ್ನು ತಂತ್ರಾಂಶಗಳ (ಸಾಫ್ಟ್‌ವೇರ್) ರೂಪದಲ್ಲಿ ಬಳಸಲು ಸಾಧ್ಯವಿಲ್ಲವೇ?

ಮಂಗಳವಾರ, ಅಕ್ಟೋಬರ್ 10, 2017
ಸೆಲ್ಫಿ ಸುತ್ತಮುತ್ತ
ಟಿ. ಜಿ. ಶ್ರೀನಿಧಿ
ಈಚಿನ ವರ್ಷಗಳಲ್ಲಿ ಮೊಬೈಲ್ ಫೋನುಗಳ ಬಳಕೆ ಎಷ್ಟು ವ್ಯಾಪಕವಾಗಿದೆಯೋ ಅಷ್ಟೇ ವ್ಯಾಪಕವಾಗಿ ಬೆಳೆದಿರುವುದು ಸೆಲ್ಫಿ ಸೆರೆಹಿಡಿಯುವ ಅಭ್ಯಾಸ. ಮೊಬೈಲ್ ಫೋನ್ ಬಳಕೆ ಹಾಗೂ ಸಮಾಜಜಾಲಗಳ (ಸೋಶಿಯಲ್ ನೆಟ್‌ವರ್ಕ್) ಜನಪ್ರಿಯತೆ ಎರಡೂ ಬೆಳೆದಂತೆ ಸೆಲ್ಫಿಗಳನ್ನು ಕ್ಲಿಕ್ಕಿಸುವುದು ಹಾಗೂ ಇತರರೊಡನೆ ಹಂಚಿಕೊಳ್ಳುವುದು ಸರ್ವೇಸಾಮಾನ್ಯವಾದ ಸಂಗತಿಯಾಗಿದೆ. ಫೇಸ್‌ಬುಕ್, ಇನ್ಸ್‌ಟಾಗ್ರಾಮ್, ಟ್ವಿಟರ್ ಮುಂತಾದ ತಾಣಗಳಲ್ಲಿ ಸೆಲ್ಫಿಗಳು ಲಕ್ಷಾಂತರ ಸಂಖ್ಯೆಯಲ್ಲಿರುತ್ತವೆ.
ಪ್ರವಾಸಿ ತಾಣಗಳಲ್ಲಂತೂ ಸೆಲ್ಫಿ ಕ್ಲಿಕ್ಕಿಸುವ ಭರಾಟೆ ಅತ್ಯುನ್ನತ ಮಟ್ಟದಲ್ಲಿರುವುದನ್ನು ನಾವು ನೋಡಬಹುದು. ಕಿರಿಕಿರಿಮಾಡುವ ಸ್ಮಾರ್ಟ್‌ಫೋನ್ ಅಭ್ಯಾಸಗಳ ಕುರಿತು ನಡೆದಿರುವ ಹಲವು ಸಮೀಕ್ಷೆಗಳಲ್ಲಿ ಪ್ರಮುಖ ಸ್ಥಾನ ಪಡೆದಿರುವ, ಹಲವು ದುರಂತಗಳಿಗೆ ಕಾರಣವಾಗಿರುವ ಕುಖ್ಯಾತಿಯೂ ಸೆಲ್ಫಿಯದೇ.

ಶುಕ್ರವಾರ, ಅಕ್ಟೋಬರ್ 6, 2017
ವೀಕೆಂಡ್ ಇಜ್ಞಾನ: ಹಾರ್ಡ್‍ಡಿಸ್ಕ್ ಮೇಲಿನ ರೋಡು, ಸೈಟು!
ಟಿ. ಜಿ. ಶ್ರೀನಿಧಿ
ಕಂಪ್ಯೂಟರಿನಲ್ಲಿ ಮಾಹಿತಿಯನ್ನು ಉಳಿಸಿಡಲು ವಿವಿಧ ಬಗೆಯ ಶೇಖರಣಾ ಸಾಧನಗಳು (ಸ್ಟೋರೇಜ್ ಡಿವೈಸಸ್) ಬಳಕೆಯಾಗುವುದು ನಮಗೆಲ್ಲ ಗೊತ್ತು. ಹಿಂದಿನ ಫ್ಲಾಪಿಡಿಸ್ಕ್‌ಗಳಿಂದ ಇಂದಿನ ಹಾರ್ಡ್ ಡಿಸ್ಕ್, ಸಿ.ಡಿ., ಡಿವಿಡಿಗಳವರೆಗೆ ಇಂತಹ ಹಲವಾರು ಶೇಖರಣಾ ಸಾಧನಗಳಲ್ಲಿ ಮಾಹಿತಿ ಸಂಗ್ರಹವಾಗುವುದು ವೃತ್ತಾಕಾರದ ತಟ್ಟೆಗಳಂತಹ (ಡಿಸ್ಕ್) ಮಾಧ್ಯಮದ ಮೇಲೆ.

ಮಂಗಳವಾರ, ಅಕ್ಟೋಬರ್ 3, 2017
ವೀಡಿಯೋ ಇಜ್ಞಾನ: ಕೀನ್ಯಾ ದೇಶದ ಹಕ್ಕಿಗಳು
ಇಜ್ಞಾನ ವಿಶೇಷ
ಆಫ್ರಿಕಾ ಖಂಡ ಎಂದಕೂಡಲೇ ನಮ್ಮ ಮನಸ್ಸಿಗೆ ಬರುವ ಸಂಗತಿಗಳಲ್ಲಿ ಅಲ್ಲಿನ ವನ್ಯಜೀವನ ಪ್ರಮುಖವಾದದ್ದು. ಅದರಲ್ಲೂ ಜೀಬ್ರಾ, ಜಿರಾಫೆ, ಘೇಂಡಾಮೃಗ, ನೀರುಕುದುರೆ (ಹಿಪ್ಪೋ) ಮುಂತಾದ ಪ್ರಾಣಿಗಳಿಗೆ ವಿಶೇಷ ಸ್ಥಾನ.
ಪ್ರಾಯಶಃ ಆಸ್ಟ್ರಿಚ್ ಒಂದರ ಹೊರತು ನಮಗೆ ಅಷ್ಟಾಗಿ ಪರಿಚಯವಿಲ್ಲದಿದ್ದರೂ ಆಫ್ರಿಕಾದ ಪಕ್ಷಿಸಂಕುಲ ಕೂಡ ಬಹಳ ವೈವಿಧ್ಯಮಯ.

ಗುರುವಾರ, ಸೆಪ್ಟೆಂಬರ್ 28, 2017
ಮಾಹಿತಿ ಸುರಕ್ಷತೆಗೆ ಕ್ರಿಪ್ಟೋಗ್ರಫಿ
ಟಿ. ಜಿ. ಶ್ರೀನಿಧಿ
ಹಲವು ಸಂದರ್ಭಗಳಲ್ಲಿ ಮಾಹಿತಿ ವಿನಿಮಯಕ್ಕೆ ನೀಡುವಷ್ಟು, ಅಥವಾ ಅದಕ್ಕಿಂತ ಕೊಂಚ ಹೆಚ್ಚೇ, ಪ್ರಾಮುಖ್ಯವನ್ನು ಆ ವಿನಿಮಯ ಸುರಕ್ಷಿತವಾಗಿರುವಂತೆ ನೋಡಿಕೊಳ್ಳುವುದಕ್ಕೆ ಕೊಡಬೇಕಾಗುತ್ತದೆ. ವ್ಯಕ್ತಿಗಳಿಗೆ ಅಥವಾ ಸಂಸ್ಥೆಗಳಿಗೆ ಸಂಬಂಧಿಸಿದ ಖಾಸಗಿ ಮಾಹಿತಿ ಮೂರನೆಯವರ ಕೈಸೇರದಂತೆ ಕಾಪಾಡಿಕೊಳ್ಳಲು ಇದು ಅತ್ಯಗತ್ಯ. ಇಂತಹ ಸಂದರ್ಭಗಳಲ್ಲಿ ಕ್ರಿಪ್ಟೋಗ್ರಫಿ ಅತ್ಯಂತ ಮಹತ್ವ ಪಡೆದುಕೊಳ್ಳುತ್ತದೆ.
ಮಾಹಿತಿಯನ್ನು ಸುರಕ್ಷಿತ ರೂಪಕ್ಕೆ ಪರಿವರ್ತಿಸುವ ಮೂಲಕ ಅದನ್ನು ಜೋಪಾನಮಾಡುವ ವಿಜ್ಞಾನವೇ ಕ್ರಿಪ್ಟೋಗ್ರಫಿ. ಮಾಹಿತಿಯನ್ನು ಹೀಗೆ ಸುರಕ್ಷಿತ ರೂಪಕ್ಕೆ ಪರಿವರ್ತಿಸಲು, ಕಿಡಿಗೇಡಿಗಳ ಕೈಗೆ ಸಿಕ್ಕದಂತೆ - ನಾವು ಯಾರಿಗೆ ಕಳುಹಿಸಿದ್ದೆವೋ ಅವರಿಗೆ ಮಾತ್ರ ತಲುಪುವಂತೆ ನೋಡಿಕೊಳ್ಳಲು ಎನ್‍ಕ್ರಿಪ್‍ಶನ್ (ಗೂಢಲಿಪೀಕರಣ) ಎಂಬ ಪ್ರಕ್ರಿಯೆಯನ್ನು ಬಳಸಲಾಗುತ್ತದೆ.

ಸೋಮವಾರ, ಸೆಪ್ಟೆಂಬರ್ 25, 2017
ಜಿಪಿಎಸ್ ಕುಂಚ ಭೂಪಟವೇ ಕ್ಯಾನ್ವಾಸ್!
ಟಿ. ಜಿ. ಶ್ರೀನಿಧಿ
ಹೊಸ ಜಾಗಗಳಿಗೆ ಪ್ರಯಾಣ ಬೆಳೆಸುವಾಗ, ಹಳೆಯ ಊರಿನಲ್ಲಿ ಟ್ಯಾಕ್ಸಿ ಕರೆಸುವಾಗಲೆಲ್ಲ ಜಿಪಿಎಸ್ ಸೇವೆ ಬಳಸುವುದು ನಮಗೆ ಚೆನ್ನಾಗಿಯೇ ಅಭ್ಯಾಸವಾಗಿಬಿಟ್ಟಿದೆ. ಸಾಗರದಿಂದ ಕೆಳದಿಗೆ ಹೋಗಲು ಈ ರಸ್ತೆಯಲ್ಲಿ ತಿರುಗಿ ಎಂದೋ ನಿಮ್ಮ ಕ್ಯಾಬ್ ಪಕ್ಕದ ರಸ್ತೆಯಲ್ಲಿ ಬಂದು ನಿಂತಿದೆಯೆಂದೋ ನಮ್ಮ ಸ್ಮಾರ್ಟ್‌ಫೋನ್ ಹೇಳುತ್ತದಲ್ಲ, ಅದನ್ನು ಸಾಧ್ಯವಾಗಿಸುವುದು ಇದೇ ಜಿಪಿಎಸ್ ತಂತ್ರಜ್ಞಾನ. ಜಿಪಿಎಸ್ ಎನ್ನುವುದು ಗ್ಲೋಬಲ್ ಪೊಸಿಶನಿಂಗ್ ಸಿಸ್ಟಂ ಎಂಬ ಹೆಸರಿನ ಹ್ರಸ್ವರೂಪ.
ನಮ್ಮ ಗಮ್ಯಸ್ಥಾನ ಮುಟ್ಟಲು ಯಾವ ಮಾರ್ಗದಲ್ಲಿ ಪ್ರಯಾಣಿಸಬೇಕು ಎನ್ನುವುದನ್ನು ಮ್ಯಾಪ್ ತಂತ್ರಾಂಶ ಭೂಪಟದ ಮೇಲೆ ಚಿತ್ರಿಸಿ ತೋರಿಸುತ್ತದೆ. ಅದೇರೀತಿ ಟ್ಯಾಕ್ಸಿಯಲ್ಲಿ ಪ್ರಯಾಣಿಸಿದಾಗ ನಾವು ಯಾವ ಮಾರ್ಗದಲ್ಲಿ ಬಂದೆವು ಎನ್ನುವುದನ್ನು ಟ್ಯಾಕ್ಸಿ ಆಪ್ ನಮ್ಮ ರಸೀತಿಯ ಜೊತೆಯಲ್ಲೇ ಕಳಿಸುತ್ತದೆ. ಆ ತಂತ್ರಾಂಶಗಳಿಗೆ ಈ ಮಾಹಿತಿ ಸಿಗುವುದು ಮೊಬೈಲಿನಲ್ಲಿ (ಅಥವಾ ಕಾರಿನ ಮಾರ್ಗದರ್ಶಕ ಸಾಧನದಲ್ಲಿ) ಅಳವಡಿಸಲಾಗಿರುವ ಜಿಪಿಎಸ್ ರಿಸೀವರಿನಿಂದ.

ಗುರುವಾರ, ಸೆಪ್ಟೆಂಬರ್ 21, 2017
ಕ್ಯಾಮೆರಾ ಇಜ್ಞಾನ: ಎಚ್‌ಡಿಆರ್ ಎಂದರೇನು?
ಟಿ. ಜಿ. ಶ್ರೀನಿಧಿ
ಡಿಜಿಟಲ್ ಕ್ಯಾಮೆರಾಗಳ ಸ್ಥಾನವನ್ನು ಮೊಬೈಲುಗಳು ಆಕ್ರಮಿಸಿಕೊಳ್ಳುತ್ತಿದ್ದಂತೆ ಕ್ಯಾಮೆರಾಗಳಲ್ಲಿದ್ದ ಸೌಲಭ್ಯಗಳು ಒಂದರ ನಂತರ ಒಂದರಂತೆ ಮೊಬೈಲಿನಲ್ಲೂ ಕಾಣಿಸಿಕೊಳ್ಳುತ್ತಿವೆ. ಇಂತಹ ಸೌಲಭ್ಯಗಳ ಪೈಕಿ ಎಚ್‍ಡಿಆರ್ ಕೂಡ ಒಂದು.
ಎಚ್‍ಡಿಆರ್ ಎಂಬ ಹೆಸರು 'ಹೈ ಡೈನಮಿಕ್ ರೇಂಜ್' ಇಮೇಜಿಂಗ್ ಎನ್ನುವ ಪರಿಕಲ್ಪನೆಯನ್ನು ಪ್ರತಿನಿಧಿಸುತ್ತದೆ. ಛಾಯಾಚಿತ್ರದಲ್ಲಿರುವ ನೆರಳು-ಬೆಳಕಿನ ಪ್ರಮಾಣಗಳ ನಡುವೆ ಸಮತೋಲನ ಮೂಡಿಸುವುದು ಹಾಗೂ ಆ ಮೂಲಕ ಚಿತ್ರದ ಗುಣಮಟ್ಟವನ್ನು ಹೆಚ್ಚಿಸುವುದು ಈ ಪರಿಕಲ್ಪನೆಯ ಉದ್ದೇಶ.

ಸೋಮವಾರ, ಸೆಪ್ಟೆಂಬರ್ 18, 2017
ಕಸ ಕಹಾನಿ: ತ್ಯಾಜ್ಯದ ಸಮರ್ಥ ವಿಲೇವಾರಿಗಾಗಿ ನಾವೇನು ಮಾಡಲು ಸಾಧ್ಯ?
'ಮೈತ್ರಿ'
ಒಂದೆರಡು ದಶಕಗಳ ಹಿಂದೆ ನಮ್ಮ ಬೆಂಗಳೂರು ಗಾರ್ಡನ್ ಸಿಟಿ ಆಗಿತ್ತು. ಆ ಹೆಸರಿನ ಸ್ಪೆಲಿಂಗು ಕೊಂಚ ಬದಲಾಗಿ ನಮ್ಮೂರು ಗಾರ್ಬೇಜ್ ಸಿಟಿ ಆಗಿದ್ದು ಈಚೆಗೆ ಕೆಲವರ್ಷಗಳ ಹಿಂದೆಯಷ್ಟೇ.
ಹಾಗೆ ನೋಡಿದರೆ ಕಸದ ಸಮಸ್ಯೆ ನಮ್ಮ ಊರೊಂದಕ್ಕೇ ಸೀಮಿತವೇನಲ್ಲ. ನಮ್ಮ ಊರಷ್ಟೇ ಏಕೆ, ಇರು ಬರೀ ನಮ್ಮ ಗ್ರಹದ ಸಮಸ್ಯೆ ಮಾತ್ರವೂ ಅಲ್ಲ.

ಶುಕ್ರವಾರ, ಸೆಪ್ಟೆಂಬರ್ 15, 2017
ಪೋರ್ಟ್ ಅಂದರೆ ಏನು?
ಟಿ. ಜಿ. ಶ್ರೀನಿಧಿ
ಪೋರ್ಟ್ ಅಂದರೆ ಬಂದರು. ದೋಣಿಗಳ, ಹಡಗುಗಳ ನಿಲ್ದಾಣ. ಏರ್‌ಪೋರ್ಟ್ ಅಂದರೆ ವಿಮಾನಗಳ ನಿಲ್ದಾಣ. ಇದು ನಮಗೆಲ್ಲ ಗೊತ್ತಿರುವ ವಿಷಯವೇ. ಈ ಲೇಖನದಲ್ಲಿ ನಾವು ಮಾತನಾಡುತ್ತಿರುವುದು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ 'ಪೋರ್ಟ್' ಏನನ್ನು ಪ್ರತಿನಿಧಿಸುತ್ತದೆ ಎನ್ನುವುದರ ಬಗ್ಗೆ.
ಸಾಮಾನ್ಯ ಬಳಕೆದಾರರ ದೃಷ್ಟಿಯಲ್ಲಿ ಯೋಚಿಸುವುದಾದರೆ ಪೋರ್ಟ್ ಎಂದಾಕ್ಷಣ ಮೊಬೈಲ್ ಸೇವೆ ಒದಗಿಸುವ ಸಂಸ್ಥೆಯನ್ನು ಬದಲಿಸುವ ಪ್ರಕ್ರಿಯೆಯೇ ನಮ್ಮ ನೆನಪಿಗೆ ಬರುತ್ತದೆ. ಆದರೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಪೋರ್ಟ್ ಎನ್ನುವುದಕ್ಕೆ ಇನ್ನೂ ಕೆಲವು ಅರ್ಥಗಳಿವೆ.

ಸೋಮವಾರ, ಸೆಪ್ಟೆಂಬರ್ 11, 2017
ಮನೆಯಲ್ಲೇ ಮಲ್ಟಿಪ್ಲೆಕ್ಸ್!
ಟಿ. ಜಿ. ಶ್ರೀನಿಧಿ
ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಟೀವಿ ಇಟ್ಟುಕೊಳ್ಳುವುದು ಸಾಮಾನ್ಯ ಅಭ್ಯಾಸ. ರಿಮೋಟ್ ಕಂಟ್ರೋಲ್‌ಗಾಗಿ ನಡೆಯುವ ಜಗಳ ಬಗೆಹರಿಸುವ ದೃಷ್ಟಿಯಿಂದ ಇದು ಅನುಕೂಲಕರ, ನಿಜ. ಆದರೆ ಇಲ್ಲಿ ಸಮಸ್ಯೆಗಳೂ ಇವೆ: ಟೀವಿಗಳನ್ನು ಬೇಕೆಂದಾಗ ಬೇಕಾದ ಕೋಣೆಗೆ ವರ್ಗಾಯಿಸಿಕೊಳ್ಳುವುದು ಕಷ್ಟ, ಹಾಗೆಂದು ಕೋಣೆಗೊಂದು ಟೀವಿ ಕೊಳ್ಳುವುದೂ ಕಷ್ಟ. ಮನೆಯಿಂದ ಹೊರಗೆಲ್ಲೋ ಹೋಗುವಾಗ ಜೊತೆಯಲ್ಲೇ ಟೀವಿಯನ್ನೂ ಕೊಂಡೊಯ್ಯಬಹುದೇ ಎನ್ನುವುದಂತೂ ತೀರಾ ಹಾಸ್ಯಾಸ್ಪದವೆನಿಸುವ ಪ್ರಶ್ನೆ.
ಇವೆಲ್ಲ ಸಮಸ್ಯೆಗಳ ಗೊಡವೆಯಿಲ್ಲದೆ ಕೋಣೆಯ ಗೋಡೆ-ಸೀಲಿಂಗುಗಳನ್ನೇ ಪರದೆಯನ್ನಾಗಿಸಿಕೊಂಡು ನಮಗೆ ಬೇಕಾದ್ದನ್ನು ವೀಕ್ಷಿಸಲು ನೆರವಾಗುವುದು ಪ್ರೊಜೆಕ್ಟರುಗಳ ಹೆಗ್ಗಳಿಕೆ.

ಶುಕ್ರವಾರ, ಸೆಪ್ಟೆಂಬರ್ 8, 2017
ವೀಕೆಂಡ್ ವಿಶೇಷ: ಮಿಂಚು ಹುಳ ಮಿಂಚುವುದೇಕೆ?
ವಿನಾಯಕ ಕಾಮತ್
ಯಾವುದೋ ಒಂದು ಸುಂದರ ರಾತ್ರಿ. ಅಕಸ್ಮಾತ್ ಕರೆಂಟ್ ಹೋಗಿ ಬಿಟ್ಟಿದೆ. ಸುಮ್ಮನೆ ಹೊರಗೆ ಬಂದು ನಿಂತರೆ, ಬಗಲಿಗೆ ಎಲ್‌ಇಡಿ ಬಲ್ಬ್ ಕಟ್ಟಿಕೊಂಡಂತೆ ಹುಳಗಳು ಹಾರುತ್ತಿವೆ!
ಮಿಂಚು ಹುಳಗಳ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ? ಕವಿಗಳಿಗಂತೂ ಅವು ಸುಲಭವಾಗಿ ಸಿಗುವ ಬೆರಗುಗಳು. ಇತ್ತೀಚಿಗೆ ನಾನು ಸಂಗೀತ ಪ್ರಧಾನವಾದ ಮರಾಠಿ ಚಲನಚಿತ್ರ ಒಂದನ್ನು ನೋಡಿದ್ದೆ. ಅದರಲ್ಲಂತೂ ಹಾಡುಗಾರ ಸಂಗೀತದ ಮೂಲಕವೇ ಮಿಂಚು ಹುಳಗಳ ದೊಂದಿ ತಯಾರಿಸಿಬಿಡುತ್ತಾನೆ. ಒಟ್ಟಿನಲ್ಲಿ ವಿಸ್ಮಯಗಳ ಮೂಟೆಯೇ ಆಗಿರುವ ನಿಸರ್ಗದ ಸುಂದರ ಸೃಷ್ಟಿ ಈ ಮಿಂಚು ಹುಳುಗಳು.
ಈ ಮಿಂಚು ಹುಳುಗಳು 'ಲ್ಯಾಂಪೆರಿಡೇ' ಎಂಬ ಕುಟುಂಬಕ್ಕೆ ಸೇರಿದ ಕೀಟಗಳು. ಹೆಚ್ಚಿನವು ನಿಶಾಚರಿಗಳು. ನಿಶಾಚರಿಗಳಾಗಿರುವುದರಿಂದಲೋ ಏನೋ, ತಮಗೆ ಬೇಕಾದ ಬೆಳಕಿನ ವ್ಯವಸ್ಥೆಯನ್ನು ತಾವೇ ಮಾಡಿಕೊಂಡು ಬಿಟ್ಟಿವೆ. ಆದರೆ ಇವು ಮಿಂಚುವುದು ಬೆಳಕಿಗಾಗಿ ಅಲ್ಲ. ಬದಲಾಗಿ ತಮ್ಮ ಆಹಾರವಾದ ಇತರೆ ಹುಳುಗಳನ್ನು ಆಕರ್ಷಿಸಲು, ಇನ್ನೂ ಮುಖ್ಯವಾಗಿ ತಮ್ಮ ಸಂಗಾತಿಗಳನ್ನು ಆಕರ್ಷಿಸಲು.

ಸೋಮವಾರ, ಸೆಪ್ಟೆಂಬರ್ 4, 2017
ಕಣ್ಣಿಗೆ ಕಾಣದ ಕಣ್ಮಣಿಗಳು: ಕೃತಕ ಉಪಗ್ರಹಗಳ ಕುರಿತು ನಿಮಗೆಷ್ಟು ಗೊತ್ತು?
ಟಿ. ಜಿ. ಶ್ರೀನಿಧಿ
ಕೃತಕ ಉಪಗ್ರಹಗಳ ಉಡಾವಣೆಯಲ್ಲಿ ಇಸ್ರೋ ಸಾಧಿಸುತ್ತಿರುವ ವಿಕ್ರಮಗಳ ಬಗ್ಗೆ ನಾವು ಕೇಳುತ್ತಲೇ ಇದ್ದೇವೆ. ಹಲವಾರು ವರ್ಷಗಳ ಹಿಂದೆ "ಇದೆಲ್ಲ ಭಾರತೀಯರಿಂದ ಆಗುವ ಕೆಲಸವಲ್ಲ" ಎನ್ನುವ ಕುಹಕ ವ್ಯಾಪಕವಾಗಿ ಕೇಳಿಬರುತ್ತಿದ್ದದ್ದೂ ಹಲವರಿಗೆ ಗೊತ್ತು.
ಉಪಗ್ರಹಗಳ ಬಗ್ಗೆ ಇಷ್ಟೆಲ್ಲ ಕೇಳಿದ್ದರೂ ಅವುಗಳ ಉಪಯೋಗವೇನು ಎನ್ನುವ ಬಗ್ಗೆ ನಮ್ಮಲ್ಲಿ ಅಷ್ಟೇನೂ ಸ್ಪಷ್ಟವಾದ ಚಿತ್ರಣ ಇಲ್ಲ. ಉಪಗ್ರಹಗಳು ಯಶಸ್ವಿಯಾಗಿ ಅಂತರಿಕ್ಷ ಸೇರಿದ ಬಗ್ಗೆ ದೊರಕುವಷ್ಟು ಮಾಹಿತಿ ಅವು ಅಲ್ಲಿ ಏನು ಮಾಡುತ್ತವೆ ಎನ್ನುವುದರ ಕುರಿತು ದೊರಕದೆ ಇರುವುದು ಇದಕ್ಕೆ ಪ್ರಮುಖ ಕಾರಣ ಇರಬಹುದೇನೋ.
ಹಾಗೆ ನೋಡಿದರೆ ನಮ್ಮ ದಿನನಿತ್ಯದ ಬದುಕಿನಲ್ಲಿ ಕೃತಕ ಉಪಗ್ರಹಗಳ ಪಾತ್ರ ಬಹಳ ದೊಡ್ಡದು. ಹಳ್ಳಿಯಿಂದ ದಿಲ್ಲಿಯವರೆಗೆ ಎಲ್ಲರ ಬದುಕನ್ನೂ ಅವು ಒಂದಲ್ಲ ಒಂದು ರೀತಿಯಲ್ಲಿ ಪ್ರಭಾವಿಸುತ್ತವೆ. ಅಂತರಿಕ್ಷದಲ್ಲಿರುವ ಉಪಗ್ರಹಗಳು ನಮ್ಮ ಕಣ್ಣಿಗೆ ಕಾಣುವುದಿಲ್ಲವಲ್ಲ, ಹಾಗೆಯೇ ಅವುಗಳ ಮಹತ್ವವೂ ನಮ್ಮ ಗಮನಕ್ಕೆ ಬಂದಿರುವುದಿಲ್ಲ ಅಷ್ಟೇ.
ಕಣ್ಣಿಗೆ ಕಾಣದ ಈ ಕಣ್ಮಣಿಗಳು ನಮ್ಮ ಬದುಕನ್ನು ಹೇಗೆಲ್ಲ ಪ್ರಭಾವಿಸುತ್ತವೆ? ಒಂದಷ್ಟು ಮಾಹಿತಿ ಇಲ್ಲಿದೆ.

ಶುಕ್ರವಾರ, ಸೆಪ್ಟೆಂಬರ್ 1, 2017
ವಿಜ್ಞಾನದ ಇಜ್ಞಾನ: ಬಣ್ಣಬಣ್ಣದ ಎಲೆ ಹಣ್ಣಾಗಿ ಉದುರುವ ಬಗೆ...
ಕ್ಷಮಾ ವಿ. ಭಾನುಪ್ರಕಾಶ್
ನವಿರಾದ ಚಿಗುರು ಎಲೆಗಳ ಬಣ್ಣ ಎಷ್ಟು ತಿಳಿ ಹಸಿರು. ಬಲಿತ ಎಲೆಗಳದ್ದು ಗಾಢ ಹಸಿರು ಬಣ್ಣವಾದರೆ ಉದುರಿಹೋಗುವ ಹಣ್ಣೆಲೆಗಳ ಬಣ್ಣ ಹಳದಿ ಅಥವಾ ಕೇಸರಿ. ಇದರ ಜೊತೆಗೆ ಕೆಂಪು, ಹಳದಿ, ಕೇಸರಿ ಬಣ್ಣದ ಎಲೆಗಳಿರೋ ಗಿಡಗಳನ್ನೂ ನಾವು ನೋಡಬಹುದು.
ಎಲೆಗಳು ಹಾಗೂ ಇಡೀ ಗಿಡದ ಬಣ್ಣವನ್ನು ನಿರ್ಧರಿಸುವುದು ಅವುಗಳಲ್ಲಿ ಅಡಗಿರುವ 'ವರ್ಣದ್ರವ್ಯ', ಅಂದರೆ 'ಪಿಗ್ಮೆಂಟ್'ಗಳು.
ಹಾಗಾದರೆ ಹಸಿರು ಎಲೆಗಳಲ್ಲಿರುವುದು ಹಸಿರು ವರ್ಣದ್ರವ್ಯ ಮಾತ್ರವೇ?

ಬುಧವಾರ, ಆಗಸ್ಟ್ 30, 2017
ಸ್ಮಾರ್ಟ್‌ಫೋನ್ ಒಳಗಿನ ಸಿಹಿ: ಆಂಡ್ರಾಯ್ಡ್
ಹೊಸ ಆವೃತ್ತಿಗೆ ಸಿಕ್ತು ಕ್ರೀಮ್ ಬಿಸ್ಕತ್ ಹೆಸರು!
ಟಿ. ಜಿ. ಶ್ರೀನಿಧಿ
ಕಂಪ್ಯೂಟರಿನಂತೆ ಕೆಲಸಮಾಡಬಲ್ಲ ಮೊಬೈಲ್ ಫೋನುಗಳನ್ನು ಸ್ಮಾರ್ಟ್‌ಫೋನ್ ಎಂದು ಕರೆಯುವುದು ವಾಡಿಕೆ. ಕಂಪ್ಯೂಟರಿನಂತೆಯೇ ಇವುಗಳಲ್ಲೂ ನಮ್ಮ ಆಯ್ಕೆಯ ತಂತ್ರಾಂಶಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳುವುದು, ಬಳಸುವುದು ಸಾಧ್ಯ.
ಸ್ಮಾರ್ಟ್‌ಫೋನೂ ಕಂಪ್ಯೂಟರಿನಂತೆಯೇ ಎಂದಮೇಲೆ ಕಂಪ್ಯೂಟರಿನಲ್ಲಿರುವಂತೆ ಅದರಲ್ಲೂ ಓಎಸ್ (ಆಪರೇಟಿಂಗ್ ಸಿಸ್ಟಂ, ಕಾರ್ಯಾಚರಣ ವ್ಯವಸ್ಥೆ) ಇರಬೇಕು - ಕಂಪ್ಯೂಟರಿನಲ್ಲಿ ವಿಂಡೋಸ್, ಲಿನಕ್ಸ್‌ಗಳೆಲ್ಲ ಇದ್ದಂತೆ. ಇತರ ತಂತ್ರಾಂಶಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳಲು, ಬಳಸಲು ಇದು ಸಹಾಯ ಮಾಡುತ್ತದೆ.
ಸ್ಮಾರ್ಟ್‍ಫೋನುಗಳಲ್ಲಿ ಬಳಕೆಯಾಗುವ ಓಎಸ್‍ಗಳ ಪೈಕಿ ಬಹಳ ಜನಪ್ರಿಯವಾಗಿರುವುದು, ನಮಗೆ ಚೆನ್ನಾಗಿ ಪರಿಚಯವಿರುವುದು ಆಂಡ್ರಾಯ್ಡ್. ಈ ಪರಿಚಯ ಎಷ್ಟರಮಟ್ಟಿನದು ಎಂದರೆ ಅನೇಕ ಮಂದಿ ಸ್ಮಾರ್ಟ್‌ಫೋನುಗಳನ್ನು ಆಂಡ್ರಾಯ್ಡ್ ಫೋನುಗಳೆಂದೇ ಗುರುತಿಸುತ್ತಾರೆ.

ಸೋಮವಾರ, ಆಗಸ್ಟ್ 28, 2017
ಮೊಬೈಲ್ ಆಪ್ ಮೂರು ವಿಧ
ಟಿ. ಜಿ. ಶ್ರೀನಿಧಿ
ಸ್ಮಾರ್ಟ್‌ಫೋನಿನಲ್ಲಿ ಆಪ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಂಡು ಬಳಸುವುದು ನಮಗೆ ಚೆನ್ನಾಗಿಯೇ ಅಭ್ಯಾಸವಾಗಿರುವ ಸಂಗತಿ. ಬೇರೆಬೇರೆ ಉದ್ದೇಶಗಳಿಗೆ ಬೇರೆಬೇರೆ ಆಪ್‌ಗಳನ್ನು ಬಳಸಬೇಕೆನ್ನುವುದೂ ನಮಗೆ ಗೊತ್ತು.
ಆಪ್‌ಗಳ ಉದ್ದೇಶ ಬೇರೆಬೇರೆಯಾಗಿರುವಂತೆ ಅವುಗಳ ಕಾರ್ಯಾಚರಣೆಯ ಸ್ವರೂಪವೂ ಬೇರೆಬೇರೆಯಾಗಿರುವುದು ಸಾಧ್ಯ. ಈ ಅಂಶವನ್ನೇ ಆಧಾರವಾಗಿಟ್ಟುಕೊಂಡು ಯಾವುದೇ ಮೊಬೈಲ್ ಆಪ್ ಅನ್ನು ನೇಟಿವ್ ಆಪ್, ವೆಬ್ ಆಪ್ ಅಥವಾ ಹೈಬ್ರಿಡ್ ಆಪ್ ಎಂದು ಪ್ರತ್ಯೇಕವಾಗಿ ಗುರುತಿಸಬಹುದು.

ಗುರುವಾರ, ಆಗಸ್ಟ್ 24, 2017
ಜಿಯೋಫೋನ್ ಪ್ರಿ-ಬುಕಿಂಗ್ ಇಂದು ಸಂಜೆ ಪ್ರಾರಂಭ
ಇಜ್ಞಾನ ವಾರ್ತೆ
ರಿಲಯನ್ಸ್ ಜಿಯೋ ಸಂಸ್ಥೆಯ ಬಹುನಿರೀಕ್ಷಿತ ಜಿಯೋಫೋನ್ ಪ್ರಿ-ಬುಕಿಂಗ್ 2017 ಆಗಸ್ಟ್ 24ರ ಸಂಜೆ 5:30ಕ್ಕೆ ಪ್ರಾರಂಭವಾಗಲಿದೆ. ಇದೇ ವರ್ಷ ಜುಲೈ 21ರಂದು ರಿಲಯನ್ಸ್ ಇಂಡಸ್ಟ್ರೀಸ್ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪರಿಚಯಿಸಲಾದ ಈ 4ಜಿ ಫೀಚರ್‌ಫೋನ್ ಗ್ರಾಹಕರಿಗೆ ಶೂನ್ಯ ವಾಸ್ತವಿಕ ಬೆಲೆಯಲ್ಲಿ, ಅಂದರೆ ಉಚಿತವಾಗಿ, ದೊರಕಲಿದೆ ಎಂದು ಸಂಸ್ಥೆಯ ಪ್ರಕಟಣೆ ಹೇಳಿದೆ.

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)