ಮೊಬೈಲ್ ಫೋನ್ ಬಳಕೆ ಹೆಚ್ಚಿದಂತೆ ತಯಾರಕರು ಅವುಗಳ ಕಾರ್ಯಕ್ಷಮತೆಯನ್ನು ಉತ್ತಮಪಡಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಉನ್ನತ ಬ್ಯಾಟರಿ ಸಾಮರ್ಥ್ಯದ ಫೋನುಗಳು ಮಾರುಕಟ್ಟೆಗೆ ಬರುತ್ತಿವೆ. ಇಂತಹ ಹಲವು ಫೋನುಗಳೊಡನೆ ಗಮನಸೆಳೆದಿರುವ ಏಸುಸ್ ಸಂಸ್ಥೆ ಇತ್ತೀಚೆಗೆ ಜೆನ್ಫೋನ್ ಮ್ಯಾಕ್ಸ್ ಪ್ರೋ ಎಂ೧ ಎಂಬ ಹೊಸದೊಂದು ಮಾದರಿಯನ್ನು ಪರಿಚಯಿಸಿದೆ.
ಶಕ್ತಿಶಾಲಿ ಬ್ಯಾಟರಿ,ಶುದ್ಧ ಆಂಡ್ರಾಯ್ಡ್ ಅನುಭವ ಹಾಗೂ ಸಮರ್ಥ ಹೊಸ ಪ್ರಾಸೆಸರ್ ಈ ಫೋನಿನ ಹೈಲೈಟ್. ಸದ್ಯ ಮಾರುಕಟ್ಟೆಯಲ್ಲಿರುವ, ಇದೇ ಬೆಲೆಯಲ್ಲಿ ಸಿಗುವ ಫೋನುಗಳ ಹೋಲಿಕೆಯಲ್ಲಿ ಇದು ಬಹಳ ಉತ್ತಮ ಆಯ್ಕೆಯೆಂದೇ ಹೇಳಬೇಕು.
ಗುರುವಾರ, ಮೇ 31, 2018
ಬುಧವಾರ, ಮೇ 30, 2018
ಜೂನ್ ೧೦ರಂದು ಇಜ್ಞಾನ ಕಾರ್ಯಕ್ರಮ: ಆನ್ಲೈನ್ ಲೋಕದ ಅಆಇಈ
ಇಜ್ಞಾನ ವಾರ್ತೆ
ನಮ್ಮದೇ ಆದ ಜಾಲತಾಣವನ್ನು (ವೆಬ್ಸೈಟ್) ಸುಲಭವಾಗಿ, ಕಡಿಮೆ ವೆಚ್ಚದಲ್ಲಿ ರೂಪಿಸಿ ನಿರ್ವಹಿಸುವುದರ ಕುರಿತು ಇಜ್ಞಾನ ಟ್ರಸ್ಟ್ ಒಂದು ದಿನದ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಕಾರ್ಯಕ್ರಮ ಬರುವ ಜೂನ್ ೧೦ರ ಭಾನುವಾರದಂದು ಬೆಳಿಗ್ಗೆ ೧೧ರಿಂದ ಸಂಜೆ ೪ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ.

ಮಂಗಳವಾರ, ಮೇ 29, 2018
ಇಂಧನ ಸಮಸ್ಯೆಗೆ ಪರಿಹಾರ ಸೂರ್ಯ
ಕ್ಷಮಾ ವಿ. ಭಾನುಪ್ರಕಾಶ್
ದಿನೇ ದಿನೇ ಏರುತ್ತಿರುವ ಪೆಟ್ರೋಲ್ ಡೀಸೆಲ್ ಬೆಲೆಗಳಿಗೆ ಮತ್ತು ಇವುಗಳಿಂದ ಉಂಟಾಗುತ್ತಿರುವ ಜಾಗತಿಕ ತಾಪಮಾನ ಏರಿಕೆಗೆ ಉತ್ತರವೆಂದರೆ ನವೀಕರಿಸಬಹುದಾದ ಸಂಪನ್ಮೂಲಗಳು. ಅವುಗಳಲ್ಲಿ ಬಹಳ ಸಮರ್ಥವಾಗಿ ಮತ್ತು ಸುಲಭವಾಗಿ ಬಳಕೆಯಾಗಬಲ್ಲುದು ಸೌರಶಕ್ತಿ. ಸೌರಶಕ್ತಿಯನ್ನು ಶಾಖ ಉತ್ಪಾದಿಸಲು ಮತ್ತು ವಿದ್ಯುತ್ತನ್ನು ಉತ್ಪಾದಿಸಲು ಬಳಸಬಹುದು.

ಬುಧವಾರ, ಮೇ 23, 2018
ಎಸ್ಸೆಮ್ಮೆಸ್ಗೆ ಮರುಹುಟ್ಟು
ಟಿ. ಜಿ. ಶ್ರೀನಿಧಿ
ಮೊಬೈಲ್ ಫೋನ್ ಪರಿಚಯವಾದ ಹೊಸದರಲ್ಲಿ ಅದರಲ್ಲಿ ಕೆಲವೇ ಆಯ್ಕೆಗಳು ಇರುತ್ತಿದ್ದವು. ಮಾತನಾಡಬೇಕಾದರೆ ದೂರವಾಣಿ ಕರೆ, ಸಂದೇಶ ಕಳಿಸಬೇಕಾದರೆ ಎಸ್ಸೆಮ್ಮೆಸ್ - ಆಗ ನಮಗಿರುತ್ತಿದ್ದ ಆಯ್ಕೆಯ ಸ್ವಾತಂತ್ರ್ಯ ಇಷ್ಟೇ.
ಆದರೆ ಈಗ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ಸ್ಮಾರ್ಟ್ಫೋನ್ ಹಾಗೂ ಅದರಲ್ಲಿ ಬಳಸಬಹುದಾದ ಆಪ್ಗಳಿಂದಾಗಿ ಪ್ರತಿ ಕೆಲಸಕ್ಕೂ ಹತ್ತಾರು ಆಯ್ಕೆಗಳು ನಮಗೆ ದೊರಕುತ್ತಿವೆ. ಸಂದೇಶ ಕಳಿಸುವ ಉದಾಹರಣೆಯನ್ನೇ ತೆಗೆದುಕೊಂಡರೆ ಈಗ ವಾಟ್ಸ್ಆಪ್, ಮೆಸೆಂಜರ್, ಟೆಲಿಗ್ರಾಂ ಮುಂತಾದ ಆಪ್ಗಳದೇ ರಾಜ್ಯಭಾರ. ಕೆಲ ವರ್ಷಗಳ ಹಿಂದೆ ವ್ಯಾಪಕವಾಗಿ ಬಳಕೆಯಾಗುತ್ತಿದ್ದ ಎಸ್ಸೆಮ್ಮೆಸ್ ಇದೀಗ ಹೆಚ್ಚಾಗಿ ಬಳಕೆಯಾಗುತ್ತಿರುವುದು ಓಟಿಪಿ ಪಡೆದುಕೊಳ್ಳಲು ಮಾತ್ರವೇ ಇರಬೇಕೇನೋ!

ಬುಧವಾರ, ಮೇ 16, 2018
ಬೆಳಕಿನ ದಿನ ವಿಶೇಷ: ಬೆಳಕೆಂಬ ಬೆರಗು
ಟಿ. ಜಿ. ಶ್ರೀನಿಧಿ
ಬೆಳಕಿನ ಮಹತ್ವ ಏನು ಎಂಬ ಪ್ರಶ್ನೆಗೆ ಉತ್ತರಿಸುವುದು ಬಹಳ ಸುಲಭ: ನಮ್ಮ ಸುತ್ತಮುತ್ತಲ ಪ್ರಪಂಚವನ್ನು ನೋಡಲು ಬೆಳಕು ಬೇಕು. ಸಸ್ಯಗಳು ಆಹಾರ ತಯಾರಿಸಿಕೊಳ್ಳಬೇಕಾದರೂ ಬೆಳಕು ಇರಬೇಕು. ಸೋಲಾರ್ ಹೀಟರಿನಲ್ಲಿ ನೀರು ಬಿಸಿಯಾಗುವುದೂ ಬೆಳಕಿನ ಸಹಾಯದಿಂದ. ಇದನ್ನೆಲ್ಲ ಬರೆದಿರುವ ಈ ಲೇಖನದ ಸಾಲುಗಳು ನಮಗೆ ಕಾಣುತ್ತಿರುವುದೂ ಬೆಳಕಿನ ಕಾರಣದಿಂದಲೇ!
ಇಂತಹ ಅನೇಕ ಉಪಯೋಗಗಳಿಗೆ ಒದಗಿಬರುವುದು ಸೂರ್ಯನ ಬೆಳಕು. ಸೂರ್ಯನ ಬೆಳಕು ಇಲ್ಲದಾಗ ಅಥವಾ ನಮ್ಮ ಅಗತ್ಯಕ್ಕೆ ಸಾಲದಾದಾಗ ನಾವು ಟ್ಯೂಬ್ಲೈಟ್, ಬಲ್ಬ್ ಮುಂತಾದ ಕೃತಕ ಬೆಳಕಿನ ಮೂಲಗಳನ್ನೂ ಬಳಸುತ್ತೇವೆ.
ಆದರೆ ಬೆಳಕಿನ ಮಹತ್ವ ಇಷ್ಟಕ್ಕೇ ಮುಗಿಯುವುದಿಲ್ಲ. ಸುಲಭವಾಗಿ ನಮ್ಮ ಗಮನಕ್ಕೆ ಬರದ, ಕೆಲವೊಮ್ಮೆ ನಮ್ಮ ಕಣ್ಣಿಗೂ ಕಾಣದ ಹಲವು ಬಗೆಗಳಲ್ಲಿ ಬೆಳಕು ನಮಗೆ ನೆರವಾಗುತ್ತದೆ.

ಸೋಮವಾರ, ಮೇ 14, 2018
ಮಳೆ ಬಂತು, ಮಣ್ಣಿನ ಘಮ ತಂತು!
ಕ್ಷಮಾ ವಿ. ಭಾನುಪ್ರಕಾಶ್
ಮೊದಲ ಮಳೆ ಹೊತ್ತು ತರುವ ನೆನಪು ಮತ್ತು ಪರಿಮಳ ಸಾಟಿ ಇಲ್ಲದ್ದು. ಮೊದಲ ಮಳೆ ಇಳೆಯನ್ನು ಸ್ಪರ್ಶಿಸಿದಾಗ ಹೊರಹೊಮ್ಮುವ ಘಮಕ್ಕೆ ಮುಖ್ಯ ಕಾರಣ ಮಣ್ಣಿನಲ್ಲಿರುವ ಒಂದು ಬಗೆಯ ಬ್ಯಾಕ್ಟೀರಿಯ ಎಂದರೆ ನಂಬುವುದೇ ಕಷ್ಟ.
ಮಳೆಯ ಜೊತೆ ಬರುವ ಈ ಪರಿಮಳಕ್ಕೆ ಕಾರಣವಾಗುವ ಬ್ಯಾಕ್ಟೀರಿಯಗಳ ಗುಂಪಿನ ಹೆಸರು 'ಆಕ್ಟಿನೋಮೈಸೀಟ್ಸ್'. ಇವು ಬರಿಯ ಕಣ್ಣಿಗೆ ಕಾಣದ ಬಹು ಉಪಯುಕ್ತ ಸೂಕ್ಷ್ಮ ಜೀವಿಗಳು. ಈ ಬಗೆಯ ಬ್ಯಾಕ್ಟೀರಿಯಗಳ ರಚನೆ ಉದ್ದುದ್ದ ತಂತುಗಳಂತೆ ಇರುತ್ತದೆ. ಮನುಷ್ಯರಲ್ಲಿ, ಪ್ರಾಣಿಗಳಲ್ಲಿ ಹಲವಾರು ಖಾಯಿಲೆಗಳಿಗೆ ಕಾರಣವಾಗುವ ಇವು ಹಲವಾರು ಆಂಟೀಬಯೋಟಿಕ್, ಅಂದರೆ ಪ್ರತಿಜೀವಕಗಳನ್ನೂ ಉತ್ಪಾದಿಸುತ್ತವೆ.

ಶುಕ್ರವಾರ, ಮೇ 11, 2018
ವೀಕೆಂಡ್ ಇಜ್ಞಾನ: ಇಮೇಲ್ ಕಸದ ನಾಲ್ಕು ದಶಕ
ಟಿ. ಜಿ. ಶ್ರೀನಿಧಿ
ವ್ಯವಹಾರವಿರಲಿ, ವೈಯಕ್ತಿಕ ವಿಷಯವೇ ಇರಲಿ, ಆಧುನಿಕ ಜಗತ್ತಿನ ಸಂವಹನ ಮಾಧ್ಯಮಗಳಲ್ಲಿ ಇಮೇಲ್ಗೆ ಪ್ರಮುಖ ಸ್ಥಾನವಿದೆ. ಈ ಮಾಧ್ಯಮ ಅದೆಷ್ಟು ಜನಪ್ರಿಯವೆಂದರೆ ಪ್ರಪಂಚದಲ್ಲಿ ಪ್ರತಿನಿತ್ಯ ೨೫ ಸಾವಿರ ಕೋಟಿಗೂ ಹೆಚ್ಚು ಸಂಖ್ಯೆಯ ಇಮೇಲ್ ಸಂದೇಶಗಳನ್ನು ಕಳುಹಿಸಲಾಗುತ್ತದಂತೆ.
ಇಷ್ಟೆಲ್ಲ ಸಂಖ್ಯೆಯ ಇಮೇಲ್ ಸಂದೇಶಗಳನ್ನು ಜನರು ಬಳಸುತ್ತಿದ್ದಾರಲ್ಲ ಎಂದು ಆಶ್ಚರ್ಯಪಡುವ ಮುನ್ನ ಇಲ್ಲಿ ಹೇಳಲೇಬೇಕಾದ ವಿಷಯವೊಂದಿದೆ: ವಿನಿಮಯವಾಗುವ ಒಟ್ಟು ಇಮೇಲ್ಗಳ ಪೈಕಿ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಅನಪೇಕ್ಷಿತವಾದವು!

ಬುಧವಾರ, ಮೇ 2, 2018
ಗೂಗಲ್ ಮಾಡಿ ನೋಡಿ!
ಟಿ. ಜಿ. ಶ್ರೀನಿಧಿ
ಹತ್ತಿಪ್ಪತ್ತು ವರ್ಷಗಳ ಹಿಂದೆ ನಮಗೆ ಏನಾದರೂ ಮಾಹಿತಿ ಬೇಕಾದಾಗ ಮನೆಯಲ್ಲಿದ್ದ ಪುಸ್ತಕಗಳಲ್ಲಿ ಹುಡುಕುವುದು, ಗ್ರಂಥಾಲಯಗಳಿಗೆ ಹೋಗುವುದು ಸಾಮಾನ್ಯವಾಗಿತ್ತು. ನೂರಾರು ಪುಟದ ಪುಸ್ತಕಗಳಲ್ಲಿ ನಮಗೆ ಬೇಕಾದ್ದನ್ನು ಹುಡುಕಿಕೊಳ್ಳುವ ಕೆಲಸ ಸಾಕಷ್ಟು ಕ್ಲಿಷ್ಟವೂ ಆಗಿತ್ತು. ಪಠ್ಯರೂಪದ ಮಾಹಿತಿಯನ್ನೇನೋ ಪುಸ್ತಕದಿಂದ ನಕಲಿಸಿಕೊಳ್ಳಬಹುದಿತ್ತು, ಸರಿ. ಚಿತ್ರಗಳು ಬೇಕಾದವೆಂದರೆ ಹಳೆಯ ಪತ್ರಿಕೆಗಳನ್ನು ಆಶ್ರಯಿಸುವುದು, ಅವನ್ನು ಕತ್ತರಿಸಲು ಪರದಾಡುವುದು - ಇದೇ ನಮಗಿದ್ದ ಆಯ್ಕೆ.
ಈ ಪರದಾಟವನ್ನು ಕಡಿಮೆ ಮಾಡಬಲ್ಲ ಹಿರಿಯರ ನೆರವು ಎಲ್ಲೋ ಕೆಲವರಿಗಷ್ಟೇ ದೊರಕುತ್ತಿತ್ತು. ಶಾಲೆಯ ಮೇಷ್ಟರು, ಅನುಭವಿ ಗ್ರಂಥಪಾಲಕರು ಬೇಕಾದ್ದನ್ನು ಥಟ್ಟನೆ ಹುಡುಕಿಕೊಟ್ಟರೆ ನಮಗೆ ಏನೋ ಮಹತ್ವದ್ದನ್ನು ಸಾಧಿಸಿದಷ್ಟು ಸಂತೋಷವಾಗುತ್ತಿತ್ತು!
ಈಗ ಪರಿಸ್ಥಿತಿ ಎಷ್ಟೆಲ್ಲ ಬದಲಾಗಿದೆಯೆಂದರೆ ಹಿಂದೊಮ್ಮೆ ಹೀಗೆಲ್ಲ ಇತ್ತು ಎನ್ನುವುದೂ ಇಂದಿನ ಕಿರಿಯರಿಗೆ ತಿಳಿದಿಲ್ಲ. ಹೊಯ್ಸಳ ವಾಸ್ತುಶಿಲ್ಪವಿರಲಿ, ಹರಪ್ಪಾ ನಾಗರೀಕತೆ ಇರಲಿ, ಆಫ್ರಿಕಾದ ವನ್ಯಜೀವನವೇ ಇರಲಿ - ಯಾವ ವಿಷಯದ ಬಗ್ಗೆ ಮಾಹಿತಿ ಬೇಕೆಂದರೂ ಅವರು ಹೇಳುವುದು ಒಂದೇ ಮಾತು: "ಗೂಗಲ್ ಮಾಡಿ!"

ಗುರುವಾರ, ಏಪ್ರಿಲ್ 26, 2018
ಅನಲಿಟಿಕ್ಸ್ ಅಂದರೇನು?
ಟಿ. ಜಿ. ಶ್ರೀನಿಧಿ
ಈಚಿನ ದಿನಗಳಲ್ಲಿ ಎಲ್ಲೆಲ್ಲಿ ನೋಡಿದರೂ ಡೇಟಾ, ಅಂದರೆ ದತ್ತಾಂಶದ್ದೇ ಭರಾಟೆ. ಡೇಟಾ ಎಂದರೆ ಮೊಬೈಲು - ಕಂಪ್ಯೂಟರುಗಳ ಮೂಲಕ ನಾವು ಬಳಸುತ್ತೇವಲ್ಲ, ಅದು ಮಾತ್ರವೇ ಅಲ್ಲ. ನಮ್ಮ ಬಗ್ಗೆ - ನಮ್ಮ ಸುತ್ತಮುತ್ತಲ ಆಗುಹೋಗುಗಳ ಬಗೆಗಿನ ದತ್ತಾಂಶ ಇದೀಗ ನಿರಂತರವಾಗಿ ಸೃಷ್ಟಿಯಾಗುತ್ತಿರುತ್ತದೆ, ಸಂಗ್ರಹವಾಗುತ್ತಿರುತ್ತದೆ.
ನಮ್ಮ ಬಗೆಗಿನ ದತ್ತಾಂಶ ಎಂದರೇನು? ಈಚಿನ ಘಟನೆಗಳ ಹಿನ್ನೆಲೆಯಲ್ಲಿ ಈ ಪ್ರಶ್ನೆಗೆ ಉತ್ತರಿಸುವುದು ಸುಲಭ. ಸಮಾಜ ಜಾಲಗಳಿಗೆ ನಾವು ಸೇರಿಸುವ ವಿಷಯಗಳು, ಶಾಪಿಂಗ್ ತಾಣಗಳಲ್ಲಿ ನಾವು ಹುಡುಕುವ ವಿವರಗಳು, ಜಾಲತಾಣಗಳಲ್ಲಿ ನಾವು ಓದುವ ವಿಷಯಗಳು - ಇವೆಲ್ಲ ಈ ಬಗೆಯ ದತ್ತಾಂಶಕ್ಕೆ ಉದಾಹರಣೆಗಳು. ಗ್ರಾಹಕರ ಬಗ್ಗೆ ತಿಳಿದುಕೊಳ್ಳಲು, ಆ ಅರಿವನ್ನು ಪರಸ್ಪರರ ಅನುಕೂಲಕ್ಕೆ ಬಳಸಿಕೊಳ್ಳಲು ಸಂಸ್ಥೆಗಳು ಈ ದತ್ತಾಂಶವನ್ನು ಬಳಸಿಕೊಳ್ಳುತ್ತವೆ.

ಮಂಗಳವಾರ, ಏಪ್ರಿಲ್ 24, 2018
ಕಾರಿನೊಳಗೆ ಕಂಪ್ಯೂಟರು!
ಟಿ. ಜಿ. ಶ್ರೀನಿಧಿ
ಬ್ಯಾಂಕಿನಿಂದ ಬಸ್ ನಿಲ್ದಾಣದವರೆಗೆ, ಶಾಲೆಯಿಂದ ಶಾಪಿಂಗ್ ಮಾಲ್ಗಳವರೆಗೆ ಎಲ್ಲೆಲ್ಲೂ ಕಂಪ್ಯೂಟರುಗಳ ಬಳಕೆ ಕಾಣಸಿಗುವುದು ಸಾಮಾನ್ಯ ಸಂಗತಿ. ಇದೆಲ್ಲದರ ಜೊತೆಗೆ ನಾವು ನಿತ್ಯವೂ ಬಳಸುವ ಅನೇಕ ಸಾಧನಗಳೊಳಗೂ ಕಂಪ್ಯೂಟರುಗಳು ಅಡಕವಾಗಿರುತ್ತವೆ. ಅವು ನೋಡಲು ನಮಗೆ ಪರಿಚಯವಿರುವ ಕಂಪ್ಯೂಟರುಗಳಂತಿರುವುದಿಲ್ಲ ಎನ್ನುವುದೊಂದೇ ವ್ಯತ್ಯಾಸ, ಅಷ್ಟೇ!
ಹೀಗೆ ಕಂಪ್ಯೂಟರನ್ನು ತಮ್ಮೊಳಗೆ ಸೇರಿಸಿಕೊಂಡಿರುವ ಸಾಧನಗಳಿಗೆ ಉತ್ತಮ ಉದಾಹರಣೆಯೆಂದರೆ ಕಾರುಗಳದು. ಹೌದು, ಇದೀಗ ರಸ್ತೆಗಿಳಿಯುವ ಪ್ರತಿ ಕಾರಿನಲ್ಲೂ ಕಂಪ್ಯೂಟರಿನ ಕೈವಾಡ ಬಹಳ ವ್ಯಾಪಕವಾಗಿರುತ್ತದೆ.
ಪೆಟ್ರೋಲನ್ನೋ ಡೀಸೆಲನ್ನೋ ಸುಡುತ್ತ ಬೇಕಾದ ಕಡೆಗೆ ನಮ್ಮನ್ನು ಕೊಂಡೊಯ್ಯುವ ಕಾರಿನಲ್ಲಿ ಕಂಪ್ಯೂಟರಿಗೇನು ಕೆಲಸ ಎಂದಿರಾ? ಕೆಲಸ ಬೇಕಾದಷ್ಟಿದೆ.

ಬುಧವಾರ, ಏಪ್ರಿಲ್ 18, 2018
ಸಿಮ್ ಜೋಪಾನ!
ಟಿ. ಜಿ. ಶ್ರೀನಿಧಿ
ನಿಮ್ಮ ಮೊಬೈಲ್ ಫೋನ್ ಎಷ್ಟೇ ಅತ್ಯಾಧುನಿಕವಾಗಿರಲಿ, ಅದರಲ್ಲಿ ಏನೆಲ್ಲ ವೈಶಿಷ್ಟ್ಯಗಳಿರಲಿ, ಪರಿಣಾಮಕಾರಿ ಬಳಕೆ ಸಾಧ್ಯವಾಗಬೇಕೆಂದರೆ ಅದರಲ್ಲೊಂದು ಸಿಮ್ ಇರಲೇಬೇಕು.
'ಸಿಮ್' ಎಂಬ ಹೆಸರು 'ಸಬ್ಸ್ಕ್ರೈಬರ್ ಐಡೆಂಟಿಫಿಕೇಶನ್ ಮಾಡ್ಯೂಲ್' (ಚಂದಾದಾರರನ್ನು ಗುರುತಿಸುವ ಘಟಕ) ಎನ್ನುವುದರ ಹ್ರಸ್ವರೂಪ. ಚಂದಾದಾರರ ಗುರುತನ್ನು ದೃಢೀಕರಿಸಿ ಮೊಬೈಲ್ ಜಾಲದೊಡನೆ ಅವರ ಸಂಪರ್ಕ ಏರ್ಪಡಿಸುವಲ್ಲಿ ಸಿಮ್ ಪಾತ್ರ ಮಹತ್ವದ್ದು.
ಚಂದಾದಾರರಿಗೆ ಸಂಪರ್ಕ ನೀಡುವುದೇನೋ ಸರಿ, ಅದಕ್ಕೆ ಮೊದಲು ಯಾವ ಚಂದಾದಾರರು ಯಾವ ಸಿಮ್ ಬಳಸುತ್ತಿದ್ದಾರೆ ಎನ್ನುವುದು ಮೊಬೈಲ್ ಸಂಸ್ಥೆಗೆ ಗೊತ್ತಾಗಬೇಕಲ್ಲ! ಇದಕ್ಕಾಗಿ ಇಂಟಿಗ್ರೇಟೆಡ್ ಸರ್ಕ್ಯೂಟ್ ಕಾರ್ಡ್ ಐಡೆಂಟಿಫೈಯರ್ (ಐಸಿಸಿಐಡಿ) ಎಂಬ ಸಂಖ್ಯೆ ಬಳಕೆಯಾಗುತ್ತದೆ. ಕ್ರೆಡಿಟ್ ಕಾರ್ಡ್ ಸಂಖ್ಯೆ, ಪ್ಯಾನ್, ಆಧಾರ್ ಎಲ್ಲ ಇದ್ದಹಾಗೆಯೇ ಇದು ನಮ್ಮ ಸಿಮ್ ಅನ್ನು ನಿರ್ದಿಷ್ಟವಾಗಿ ಗುರುತಿಸಬಲ್ಲ ಸಂಖ್ಯೆ.

ಬುಧವಾರ, ಏಪ್ರಿಲ್ 11, 2018
ಹಳಿಯಿಲ್ಲದ ರೈಲಲ್ಲ, ಇದು ಚಾಲಕನಿಲ್ಲದ ಬಂಡಿ!
ಟಿ. ಜಿ. ಶ್ರೀನಿಧಿ
ಕೆಲ ದಶಕಗಳ ಹಿಂದೆ ಕಲ್ಪಿಸಿಕೊಳ್ಳಲೂ ಕಷ್ಟವೆನಿಸುತ್ತಿದ್ದ ಅನೇಕ ಸಂಗತಿಗಳು ಇದೀಗ ತಂತ್ರಜ್ಞಾನದ ನೆರವಿನಿಂದ ಸಾಧ್ಯವಾಗುತ್ತಿರುವುದು ನಮಗೆಲ್ಲ ಗೊತ್ತೇ ಇದೆ. ಬೇರೆ ಕಡೆಗಳಲ್ಲೆಲ್ಲ ಆಗಿರುವಂತೆ ಸಾರಿಗೆ ಕ್ಷೇತ್ರದಲ್ಲೂ ತಂತ್ರಜ್ಞಾನ ಅನೇಕ ಬದಲಾವಣೆಗಳನ್ನು ತಂದಿದೆ. ಉತ್ತಮ ರಸ್ತೆಗಳಿರಲಿ, ಉನ್ನತ ಕಾರ್ಯಕ್ಷಮತೆಯ ವಾಹನಗಳಿರಲಿ, ಪ್ರಯಾಣದ ಅನುಭವವನ್ನು ಆರಾಮದಾಯಕವಾಗಿಸುವ ಸೌಲಭ್ಯಗಳೇ ಇರಲಿ - ಪ್ರತಿಯೊಂದರ ಹಿಂದೆಯೂ ನಾವು ತಂತ್ರಜ್ಞಾನದ ಕೈವಾಡವನ್ನು ಕಾಣಬಹುದು.
ಇಷ್ಟೆಲ್ಲದರ ನಡುವೆ ಬದಲಾಗದೆ ಉಳಿದಿರುವ ಏಕೈಕ ಅಂಶವೆಂದರೆ ಅದು ವಾಹನ ಚಲಾಯಿಸುವ ವ್ಯಕ್ತಿ ಮಾತ್ರವೇ ಇರಬೇಕು.

ಬುಧವಾರ, ಏಪ್ರಿಲ್ 4, 2018
ಮೊಬೈಲ್ ಮಾತಿಗೆ ನಲವತ್ತೈದು!
ಟಿ. ಜಿ. ಶ್ರೀನಿಧಿ
ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ನಿದ್ದೆಗೆ ಜಾರುವವರೆಗೆ ಪ್ರತಿ ಕ್ಷಣವೂ ನಮ್ಮೊಡನೆ ಇರುವ ವಸ್ತುವೆಂದರೆ ಅದು ನಮ್ಮ ಮೊಬೈಲ್ ಫೋನ್.
ಈ ವಿಶಿಷ್ಟ-ವಿಚಿತ್ರ ಸಾಧನ ನಮ್ಮ ಬದುಕನ್ನು ಪ್ರವೇಶಿಸಿದ್ದು ಯಾವಾಗ ಎಂದು ಕೇಳಿದರೆ ಆ ಪ್ರಶ್ನೆಗೆ ಒಬ್ಬೊಬ್ಬರು ಒಂದೊಂದು ರೀತಿಯ ಉತ್ತರ ಕೊಡುತ್ತಾರೆ. ಮೊಬೈಲ್ ಬಳಸಿ ಮಾತನಾಡಲು ಪ್ರತಿ ನಿಮಿಷಕ್ಕೆ ಹತ್ತಾರು ರೂಪಾಯಿ ಪಾವತಿಸಬೇಕಿದ್ದ ಕಾಲದ ನೆನಪೂ ನಮ್ಮಲ್ಲಿ ಹಲವರಿಗಿರುವುದು ಸಾಧ್ಯ.
ಆದರೆ ಈ ನೆನಪುಗಳೆಲ್ಲ ಹೆಚ್ಚೆಂದರೆ ಹದಿನೈದು-ಇಪ್ಪತ್ತು ವರ್ಷಗಳಷ್ಟೇ ಹಳೆಯವು. ಹಾಗಾದರೆ ಮೊಬೈಲ್ ಫೋನ್ ಸಾಗಿಬಂದಿರುವ ಹಾದಿ ಇಷ್ಟು ಸಣ್ಣದೇ? ಖಂಡಿತಾ ಅಲ್ಲ. ಜಾಗತಿಕ ಮಟ್ಟದಲ್ಲಿ ಮೊಬೈಲ್ ದೂರವಾಣಿಗೆ ಇನ್ನಷ್ಟು ದೀರ್ಘವಾದ ಇತಿಹಾಸವಿದೆ. ನಿಖರವಾಗಿ ಹೇಳುವುದಾದರೆ ಪ್ರಪಂಚದ ಮೊತ್ತಮೊದಲ ದೂರವಾಣಿ ಕರೆ ಮಾಡಿದ್ದು ನಲವತ್ತೈದು ವರ್ಷಗಳ ಹಿಂದೆ!

ಸೋಮವಾರ, ಏಪ್ರಿಲ್ 2, 2018
ಜಾಲಲೋಕದಲ್ಲಿ ನಾವು
ಟಿ. ಜಿ. ಶ್ರೀನಿಧಿ
ಇಂಟರ್ನೆಟ್ ಅದೆಷ್ಟು ಪ್ರಭಾವಶಾಲಿಯೆಂದರೆ ಈಗಷ್ಟೇ ರಿಟೈರ್ ಆದ ಅಜ್ಜಿಯಿಂದ ಪ್ರಾರಂಭಿಸಿ ಇನ್ನೂ ಶಾಲೆಗೇ ಹೋಗದ ಮೊಮ್ಮಗುವಿನವರೆಗೆ ಪ್ರತಿಯೊಬ್ಬರೂ ಅದರಲ್ಲಿ ಸಕ್ರಿಯರಾಗಿರುತ್ತಾರೆ. ಮನರಂಜನೆಗಾಗಿಯೋ ಜ್ಞಾನಾರ್ಜನೆಗಾಗಿಯೋ ಸಂಪರ್ಕದ ಮಾಧ್ಯಮವಾಗಿಯೋ ನಾವೆಲ್ಲ ಅಂತರಜಾಲವನ್ನು ಪ್ರತಿದಿನವೂ ಬಳಸುತ್ತಲೇ ಇರುತ್ತೇವೆ.
ಹೀಗೆ ಬಳಸುವಾಗ ನಾವು ಅಂತರಜಾಲದಿಂದ ಅಪಾರ ಪ್ರಮಾಣದ ಮಾಹಿತಿಯನ್ನು ಪಡೆದುಕೊಳ್ಳುತ್ತೇವೆ, ನಿಜ. ಇದರ ಜೊತೆಗೆ ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಅಪಾರ ಪ್ರಮಾಣದ ಮಾಹಿತಿಯನ್ನು ಅಂತರಜಾಲಕ್ಕೆ ಸೇರಿಸುತ್ತಲೂ ಇರುತ್ತೇವೆ!

ಬುಧವಾರ, ಮಾರ್ಚ್ 28, 2018
ಆಚಿನ ಲೋಕದಲ್ಲಿ ಅಂತರಜಾಲ
ಟಿ. ಜಿ. ಶ್ರೀನಿಧಿ
ಕೆಲವೇ ವರ್ಷಗಳ ಹಿಂದೆ ಬಹಳ ದುಬಾರಿಯಾಗಿದ್ದ, ಅಷ್ಟೇನೂ ಅವಶ್ಯಕವಲ್ಲದ್ದು ಎನಿಸುತ್ತಿದ್ದ ಅಂತರಜಾಲ ಸಂಪರ್ಕ ಇದೀಗ ನಮ್ಮ ಅಗತ್ಯಗಳಲ್ಲೊಂದಾಗಿ ಬೆಳೆದುನಿಂತಿದೆ. ಅಂತರಜಾಲ ಸಂಪರ್ಕ ಎಲ್ಲ ಕಡೆಗಳಲ್ಲೂ ಲಭ್ಯವಾದಂತೆ ಎಲ್ಲಿಂದ ಬೇಕಿದ್ದರೂ ವೀಡಿಯೋ ಕಾಲ್ ಮಾಡುವುದು, ಲೈವ್ ವೀಡಿಯೋ ಬಿತ್ತರಿಸುವುದು ಸಾಧ್ಯವಾಗಿದೆ.
ದೇಶವಿದೇಶಗಳಲ್ಲಿನ ಪ್ರೇಕ್ಷಣೀಯ ಸ್ಥಳಗಳಷ್ಟೇ ಏಕೆ, ಮುಂದೊಮ್ಮೆ ಪ್ರವಾಸಕ್ಕೆಂದು ಚಂದ್ರನ ಮೇಲೆಯೇ ಲ್ಯಾಂಡ್ ಆಗುವಂತೆ ಮಾಡಲು ಹಲವು ಪ್ರಯತ್ನಗಳು ನಡೆದಿವೆ. ಅಂತಹ ಪ್ರಯತ್ನಗಳು ಕೈಗೂಡುವ ಹೊತ್ತಿಗೆ, ಅಥವಾ ಅದಕ್ಕಿಂತ ಮೊದಲೇ, ಚಂದ್ರನ ಮೇಲೆ ೪ಜಿ ಮೊಬೈಲ್ ಜಾಲ ರೂಪಿಸುವ ಯೋಜನೆಯೊಂದು ಸಿದ್ಧವಾಗಿದೆ ಎನ್ನುವುದು ಇದೀಗ ಕೇಳಿಬಂದಿರುವ ಸುದ್ದಿ.

ಸೋಮವಾರ, ಮಾರ್ಚ್ 19, 2018
ಟೆಕ್ ಪ್ರೀತಿ ಶುರುವಾದ ರೀತಿ
ಟಿ. ಜಿ. ಶ್ರೀನಿಧಿ
ಇಂದು ನಮ್ಮ ಬದುಕಿನ ಮೇಲೆ ವಿದ್ಯುನ್ಮಾನ (ಇಲೆಕ್ಟ್ರಾನಿಕ್) ಸಾಧನಗಳ ಪ್ರಭಾವ ಅತ್ಯಂತ ವ್ಯಾಪಕವಾಗಿದೆ. ಲ್ಯಾಪ್ಟಾಪ್ನಿಂದ ಮೊಬೈಲ್ ಫೋನಿನವರೆಗೆ, ಕಾರಿನಿಂದ ಟೀವಿಯವರೆಗೆ ನೂರೆಂಟು ಸಾಧನಗಳು ಈಗ ಸ್ಮಾರ್ಟ್ ಆಗಿವೆ, ನಮ್ಮ ಬದುಕನ್ನು ಪ್ರಭಾವಿಸುತ್ತಿವೆ.
ಇಂದಿನ ಈ ಎಲ್ಲ ಸ್ಮಾರ್ಟ್ ಸಾಧನಗಳೂ ಒಂದಲ್ಲ ಒಂದು ರೀತಿಯ ಕಂಪ್ಯೂಟರುಗಳೇ. ಅವುಗಳ ಬಾಹ್ಯ ರೂಪ ಹೇಗೆಯೇ ಇದ್ದರೂ ಮೂಲಭೂತ ರಚನೆ ಹೆಚ್ಚೂಕಡಿಮೆ ಒಂದೇ ರೀತಿಯದು. ಆಯಾ ಸಾಧನ ಮಾಡುವ ಕೆಲಸ ಎಂಥದ್ದು ಎನ್ನುವುದರ ಮೇಲೆ ಈ ರಚನೆಯ ಸಂಕೀರ್ಣತೆ ಬದಲಾಗುತ್ತದೆ, ಅಷ್ಟೇ.
ಈಗ ಇಷ್ಟೆಲ್ಲ ಸಾಮಾನ್ಯವಾಗಿದ್ದರೂ ಕಂಪ್ಯೂಟರುಗಳ ವಿನ್ಯಾಸ ಯಾವಾಗಲೂ ಹೀಗೆಯೇ ಇರಲಿಲ್ಲ.

ಸೋಮವಾರ, ಮಾರ್ಚ್ 12, 2018
ಹಕ್ಕಿಗಳಿಗೇಕೆ ಶಾಕ್ ಹೊಡೆಯುವುದಿಲ್ಲ?
ವಿದ್ಯುತ್ ತಂತಿಗಳ ಮೇಲೆ ಕುಳಿತುಕೊಳ್ಳುವ ಹಕ್ಕಿಗಳಿಗೆ ವಿದ್ಯುದಾಘಾತವಾಗುವುದಿಲ್ಲ ಎನ್ನುವುದು ನಮಗೆ ಗೊತ್ತು. ಅಪರೂಪಕ್ಕೊಮ್ಮೆ ಅವು ಇಲೆಕ್ಟ್ರಿಕ್ ಶಾಕ್ನಿಂದಾಗಿ ಸಾಯುವುದನ್ನು ಕೂಡ ನಾವು ನೋಡಿದ್ದೇವೆ. ಈ ವಿಚಿತ್ರ ವಿದ್ಯಮಾನಗಳಿಗೆ ಕಾರಣ ಏನು? ವಿವರಣೆ ಇಲ್ಲಿದೆ.
ವಿನಾಯಕ ಕಾಮತ್
ಜಲ ವಿದ್ಯುತ್ ಸ್ಥಾವರದಲ್ಲೋ ಅಥವಾ ಅಣು ವಿದ್ಯುತ್ ಸ್ಥಾವರದಲ್ಲೋ ಉತ್ಪತ್ತಿಯಾದ ವಿದ್ಯುತ್ತನ್ನು ಬಳಕೆದಾರರಿಗೆ ತಲುಪಿಸಬೇಕಷ್ಟೇ? ಈ ಕೆಲಸವನ್ನು ಎರಡು ಹಂತಗಳಲ್ಲಿ ಮಾಡಲಾಗುತ್ತದೆ. ಮೊದಲ ಹಂತದಲ್ಲಿ ಉತ್ಪಾದನಾ ಸ್ಥಳದಿಂದ, ವಿತರಣಾ ಕೇಂದ್ರಕ್ಕೆ ದೊಡ್ಡ ಪ್ರಮಾಣದಲ್ಲಿ ವಿದ್ಯುತ್ ಪ್ರವಾಹ ಅಥವಾ ಇಲೆಕ್ಟ್ರಿಕ್ ಕರೆಂಟ್ ನ ವರ್ಗಾವಣೆ. ಇದನ್ನು ಎತ್ತರದಲ್ಲಿರುವ ದೊಡ್ಡ ಕಂಬಗಳಿಂದ ಏರ್ಪಟ್ಟಿರುವ ತಂತಿಯ ಜಾಲಗಳ ಮೂಲಕ ಮಾಡುತ್ತಾರೆ. ಎರಡನೇ ಹಂತದಲ್ಲಿ ವಿದ್ಯುತ್ ಪ್ರಸರಣದ ಉಪಕೇಂದ್ರಗಳ ಮೂಲಕ, ‘ಕರೆಂಟ್’ ಬಳಕೆದಾರರಿಗೆ ವಿತರಿಸಲ್ಪಡುತ್ತದೆ. ಈ ಎರಡನೇ ಹಂತದಲ್ಲಿ ಕೂಡ ಕಂಬಗಳ ಮೂಲಕ ಬೆಸೆದು ಕೊಂಡಿರುವ ತಂತಿಗಳ ಮೂಲಕವೇ ಕರೆಂಟ್ ಸಾಗಿಸಲ್ಪಡುತ್ತದೆ. ವಿದ್ಯುತ್ ವಿತರಣೆಯನ್ನು ಭೂಗತ ತಂತಿಗಳ ಮೂಲಕವೂ ಮಾಡಬಹುದು. ಆದರೆ, ನಮ್ಮ ದೇಶದಲ್ಲಿ ಹೆಚ್ಚಾಗಿ ವಿದ್ಯುತ್ ವಿತರಣೆಯನ್ನು, ರಸ್ತೆಯ ಅಕ್ಕ ಪಕ್ಕದಲ್ಲಿ ಹಾದು ಹೋಗುವ ಕಂಬಗಳ ಮೂಲಕವೇ ಪೂರೈಸುತ್ತಾರೆ.

ಬುಧವಾರ, ಮಾರ್ಚ್ 7, 2018
ವಿಜ್ಞಾನದ ಹಾದಿಯಲ್ಲಿ ಭಾರತ: ೪: ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಸಾಧನೆಗಳು, ಮುಂದಿನ ಹೆಜ್ಜೆಗಳು
ಉದಯ ಶಂಕರ ಪುರಾಣಿಕ
ಟಿ. ಜಿ. ಶ್ರೀನಿಧಿ
ಸ್ವಾತಂತ್ರ್ಯಾನಂತರದ ಏಳು ದಶಕಗಳ ಅವಧಿಯಲ್ಲಿ ನಮ್ಮ ದೇಶ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧಿಸಿರುವ ಪ್ರಗತಿ ಬಹುಮುಖಿಯಾದದ್ದು. ಕೃಷಿ, ಆರೋಗ್ಯ, ರಕ್ಷಣೆ, ದೂರಸಂಪರ್ಕ, ಐಟಿ, ಬಾಹ್ಯಾಕಾಶ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತದ ಪ್ರಗತಿಯ ಪ್ರಾತಿನಿಧಿಕ ಪರಿಚಯ ನೀಡುವ ಲೇಖನಸರಣಿಯನ್ನು ಇಜ್ಞಾನ ಡಾಟ್ ಕಾಮ್ ಪ್ರಕಟಿಸುತ್ತಿದೆ. ಈ ಸರಣಿಯ ನಾಲ್ಕನೆಯ ಲೇಖನ ಇಲ್ಲಿದೆ.

ಸೋಮವಾರ, ಮಾರ್ಚ್ 5, 2018
ವಿಜ್ಞಾನದ ಹಾದಿಯಲ್ಲಿ ಭಾರತ: ೩: ಬಾಹ್ಯಾಕಾಶ ಹಾಗೂ ದೂರಸಂಪರ್ಕ ತಂತ್ರಜ್ಞಾನ
ಉದಯ ಶಂಕರ ಪುರಾಣಿಕ
ಟಿ. ಜಿ. ಶ್ರೀನಿಧಿ
ಸ್ವಾತಂತ್ರ್ಯಾನಂತರದ ಏಳು ದಶಕಗಳ ಅವಧಿಯಲ್ಲಿ ನಮ್ಮ ದೇಶ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧಿಸಿರುವ ಪ್ರಗತಿ ಬಹುಮುಖಿಯಾದದ್ದು. ಕೃಷಿ, ಆರೋಗ್ಯ, ರಕ್ಷಣೆ, ದೂರಸಂಪರ್ಕ, ಐಟಿ, ಬಾಹ್ಯಾಕಾಶ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತದ ಪ್ರಗತಿಯ ಪ್ರಾತಿನಿಧಿಕ ಪರಿಚಯ ನೀಡುವ ಲೇಖನಸರಣಿಯನ್ನು ಇಜ್ಞಾನ ಡಾಟ್ ಕಾಮ್ ಪ್ರಕಟಿಸುತ್ತಿದೆ. ಈ ಸರಣಿಯ ಮೂರನೆಯ ಲೇಖನ ಇಲ್ಲಿದೆ.

ಶುಕ್ರವಾರ, ಮಾರ್ಚ್ 2, 2018
ವಿಜ್ಞಾನದ ಹಾದಿಯಲ್ಲಿ ಭಾರತ: ೨: ಮೂಲಸೌಕರ್ಯ ಹಾಗೂ ರಕ್ಷಣಾ ಕ್ಷೇತ್ರ
ಉದಯ ಶಂಕರ ಪುರಾಣಿಕ
ಟಿ. ಜಿ. ಶ್ರೀನಿಧಿ
ಸ್ವಾತಂತ್ರ್ಯಾನಂತರದ ಏಳು ದಶಕಗಳ ಅವಧಿಯಲ್ಲಿ ನಮ್ಮ ದೇಶ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧಿಸಿರುವ ಪ್ರಗತಿ ಬಹುಮುಖಿಯಾದದ್ದು. ಕೃಷಿ, ಆರೋಗ್ಯ, ರಕ್ಷಣೆ, ದೂರಸಂಪರ್ಕ, ಐಟಿ, ಬಾಹ್ಯಾಕಾಶ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತದ ಪ್ರಗತಿಯ ಪ್ರಾತಿನಿಧಿಕ ಪರಿಚಯ ನೀಡುವ ಲೇಖನಸರಣಿಯನ್ನು ಇಜ್ಞಾನ ಡಾಟ್ ಕಾಮ್ ಪ್ರಕಟಿಸುತ್ತಿದೆ. ಈ ಸರಣಿಯ ಎರಡನೆಯ ಲೇಖನ ಇಲ್ಲಿದೆ.

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)