ಬುಧವಾರ, ಮೇ 30, 2018

ಜೂನ್ ೧೦ರಂದು ಇಜ್ಞಾನ ಕಾರ್ಯಕ್ರಮ: ಆನ್‌ಲೈನ್ ಲೋಕದ ಅಆಇಈ

ಇಜ್ಞಾನ ವಾರ್ತೆ

ನಮ್ಮದೇ ಆದ ಜಾಲತಾಣವನ್ನು (ವೆಬ್‌ಸೈಟ್) ಸುಲಭವಾಗಿ, ಕಡಿಮೆ ವೆಚ್ಚದಲ್ಲಿ ರೂಪಿಸಿ ನಿರ್ವಹಿಸುವುದರ ಕುರಿತು ಇಜ್ಞಾನ ಟ್ರಸ್ಟ್ ಒಂದು ದಿನದ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಕಾರ್ಯಕ್ರಮ ಬರುವ ಜೂನ್ ೧೦ರ ಭಾನುವಾರದಂದು ಬೆಳಿಗ್ಗೆ ೧೧ರಿಂದ ಸಂಜೆ ೪ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ.

ಈ ಕಾರ್ಯಕ್ರಮವನ್ನು ಪ್ರಾರಂಭಿಕ ಬಳಕೆದಾರರಿಗಾಗಿ (beginners) ರೂಪಿಸಲಾಗಿದೆ. ಇದರಲ್ಲಿ ಪಾಲ್ಗೊಳ್ಳಲು ಪ್ರೋಗ್ರಾಮಿಂಗ್ ಗೊತ್ತಿರಬೇಕಾಗಿಲ್ಲ. ಅಂದು ಚರ್ಚಿಸಲಾಗುವ ವಿಷಯಗಳ ವಿವರ ಹೀಗಿದೆ:
  • ವೆಬ್‌ಸೈಟ್ ಕಾರ್ಯಾಚರಣೆಯ ಪರಿಚಯ
  • ನಮ್ಮದೇ ವೆಬ್‌ಸೈಟ್ (www.mysite.com ರೀತಿಯದು) ರೂಪಿಸಿಕೊಳ್ಳುವ, ಅದರಲ್ಲಿ ವಿವಿಧ ಸವಲತ್ತುಗಳನ್ನು ಬಳಸುವ ಕುರಿತು ಪ್ರಾತ್ಯಕ್ಷಿಕೆ
  • ವೆಬ್‌ಸೈಟ್ ಪ್ರಚಾರಕ್ಕೆ ಸಮಾಜ ಜಾಲಗಳ ಬಳಕೆ ಕುರಿತ ವಿಚಾರ ವಿನಿಮಯ

ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವ ಆಸಕ್ತರು tinyurl.com/EjnanaWorkshop ವಿಳಾಸದಲ್ಲಿ ನೋಂದಾಯಿಸಿಕೊಳ್ಳಬಹುದು. ಕಾರ್ಯಕ್ರಮ ನಡೆಯುವ ಸಭಾಂಗಣದ ವಿಳಾಸ ಸೇರಿದಂತೆ ಎಲ್ಲ ವಿವರಗಳೂ ಈ ತಾಣದಲ್ಲಿವೆ.

ಆಯೋಜನೆಯ ಖರ್ಚುವೆಚ್ಚಗಳನ್ನು ಸರಿದೂಗಿಸಲು ಇಜ್ಞಾನ ಟ್ರಸ್ಟ್ ನಿಮ್ಮಿಂದ ಕನಿಷ್ಟ ರೂ. 1000 ದೇಣಿಗೆಯನ್ನು ನಿರೀಕ್ಷಿಸುತ್ತದೆ. ಹೆಚ್ಚಿನ ದೇಣಿಗೆ ನೀಡುವ ಉದ್ದೇಶವಿದ್ದರೆ ಅದನ್ನು ಕೃತಜ್ಞತಾಪೂರ್ವಕ ಸ್ವೀಕರಿಸಿ ಇಜ್ಞಾನ ಟ್ರಸ್ಟ್‌ನ ಇತರ ಶೈಕ್ಷಣಿಕ ಚಟುವಟಿಕೆಗಳಿಗೆ ಬಳಸಲಾಗುವುದು.

ನೋಂದಣಿ ನಮೂನೆಯಲ್ಲಿ ನೀಡಿರುವ ಬ್ಯಾಂಕ್ ಖಾತೆಗೆ ನಿಮ್ಮ ದೇಣಿಗೆ ಕಳುಹಿಸಿ ಅದರ ವಿವರಗಳನ್ನು ನಮ್ಮ ಇಮೇಲ್ ವಿಳಾಸಕ್ಕೆ (ejnana.trust@gmail.com) ಕಳುಹಿಸಿಕೊಡಿ. ಶುಲ್ಕ ತಲುಪಿದ ನಂತರ ನಿಮ್ಮ ನೋಂದಣಿಯನ್ನು ಖಚಿತಪಡಿಸಲಾಗುವುದು. ಕಾರ್ಯಕ್ರಮದಲ್ಲಿ ಸೀಮಿತ ಸ್ಥಳಾವಕಾಶ ಇರುವುದರಿಂದ ಮೊದಲು ಶುಲ್ಕ ಪಾವತಿಸಿದವರಿಗೆ ಆದ್ಯತೆ.

ಕಾರ್ಯಕ್ರಮದಲ್ಲಿ ಭಾಗವಹಿಸುವವರು ಲ್ಯಾಪ್‌ಟಾಪ್ ಅಥವಾ ಟ್ಯಾಬ್ಲೆಟ್ ತರುವುದು ಕಡ್ಡಾಯ. ಅಂತರಜಾಲ ಸಂಪರ್ಕ (ವೈ-ಫೈ) ಒದಗಿಸಲಾಗುವುದು. ಕಾಫಿ/ಟೀ ಹಾಗೂ ಊಟದ ವ್ಯವಸ್ಥೆಯೂ ಇದೆ. ಗಮನಿಸಿ: ನಿಮ್ಮ ಜಾಲತಾಣದ ವಿಳಾಸವನ್ನು (ಡೊಮೈನ್ ನೇಮ್) ನೋಂದಾಯಿಸಲು ಪಾವತಿಸಬೇಕಾದ ಹಣ ಈ ಶುಲ್ಕದಲ್ಲಿ ಸೇರಿರುವುದಿಲ್ಲ.

ಇದು ಪ್ರಾರಂಭಿಕ ಹಂತದ ಬಳಕೆದಾರರಿಗಾಗಿ ರೂಪಿಸಿರುವ ಕಾರ್ಯಕ್ರಮ ಆದ್ದರಿಂದ ಹೆಚ್ಚು ಪರಿಣತಿ ಬೇಡುವ ವಿಷಯಗಳನ್ನು ಇದರಲ್ಲಿ ಚರ್ಚಿಸಲಾಗುವುದಿಲ್ಲ. ಅಂತಹ ಅಂಶಗಳನ್ನು ಚರ್ಚಿಸಲು ಮುಂದೆ ಪ್ರತ್ಯೇಕ ಕಾರ್ಯಕ್ರಮ ಆಯೋಜಿಸಲಾಗುವುದು.

ಕಾಮೆಂಟ್‌ಗಳಿಲ್ಲ:

badge