ಟಿ. ಜಿ. ಶ್ರೀನಿಧಿ
ನಿಮ್ಮ ಮೊಬೈಲ್ ಫೋನ್ ಎಷ್ಟೇ ಅತ್ಯಾಧುನಿಕವಾಗಿರಲಿ, ಅದರಲ್ಲಿ ಏನೆಲ್ಲ ವೈಶಿಷ್ಟ್ಯಗಳಿರಲಿ, ಪರಿಣಾಮಕಾರಿ ಬಳಕೆ ಸಾಧ್ಯವಾಗಬೇಕೆಂದರೆ ಅದರಲ್ಲೊಂದು ಸಿಮ್ ಇರಲೇಬೇಕು.
'ಸಿಮ್' ಎಂಬ ಹೆಸರು 'ಸಬ್‌ಸ್ಕ್ರೈಬರ್ ಐಡೆಂಟಿಫಿಕೇಶನ್ ಮಾಡ್ಯೂಲ್' (ಚಂದಾದಾರರನ್ನು ಗುರುತಿಸುವ ಘಟಕ) ಎನ್ನುವುದರ ಹ್ರಸ್ವರೂಪ. ಚಂದಾದಾರರ ಗುರುತನ್ನು ದೃಢೀಕರಿಸಿ ಮೊಬೈಲ್ ಜಾಲದೊಡನೆ ಅವರ ಸಂಪರ್ಕ ಏರ್ಪಡಿಸುವಲ್ಲಿ ಸಿಮ್ ಪಾತ್ರ ಮಹತ್ವದ್ದು.
ಚಂದಾದಾರರಿಗೆ ಸಂಪರ್ಕ ನೀಡುವುದೇನೋ ಸರಿ, ಅದಕ್ಕೆ ಮೊದಲು ಯಾವ ಚಂದಾದಾರರು ಯಾವ ಸಿಮ್ ಬಳಸುತ್ತಿದ್ದಾರೆ ಎನ್ನುವುದು ಮೊಬೈಲ್ ಸಂಸ್ಥೆಗೆ ಗೊತ್ತಾಗಬೇಕಲ್ಲ! ಇದಕ್ಕಾಗಿ ಇಂಟಿಗ್ರೇಟೆಡ್ ಸರ್ಕ್ಯೂಟ್ ಕಾರ್ಡ್ ಐಡೆಂಟಿಫೈಯರ್ (ಐಸಿಸಿಐಡಿ) ಎಂಬ ಸಂಖ್ಯೆ ಬಳಕೆಯಾಗುತ್ತದೆ. ಕ್ರೆಡಿಟ್ ಕಾರ್ಡ್ ಸಂಖ್ಯೆ, ಪ್ಯಾನ್, ಆಧಾರ್ ಎಲ್ಲ ಇದ್ದಹಾಗೆಯೇ ಇದು ನಮ್ಮ ಸಿಮ್ ಅನ್ನು ನಿರ್ದಿಷ್ಟವಾಗಿ ಗುರುತಿಸಬಲ್ಲ ಸಂಖ್ಯೆ.
ಬುಧವಾರ, ಏಪ್ರಿಲ್ 18, 2018
ಬುಧವಾರ, ಏಪ್ರಿಲ್ 11, 2018
ಹಳಿಯಿಲ್ಲದ ರೈಲಲ್ಲ, ಇದು ಚಾಲಕನಿಲ್ಲದ ಬಂಡಿ!
ಟಿ. ಜಿ. ಶ್ರೀನಿಧಿ
ಕೆಲ ದಶಕಗಳ ಹಿಂದೆ ಕಲ್ಪಿಸಿಕೊಳ್ಳಲೂ ಕಷ್ಟವೆನಿಸುತ್ತಿದ್ದ ಅನೇಕ ಸಂಗತಿಗಳು ಇದೀಗ ತಂತ್ರಜ್ಞಾನದ ನೆರವಿನಿಂದ ಸಾಧ್ಯವಾಗುತ್ತಿರುವುದು ನಮಗೆಲ್ಲ ಗೊತ್ತೇ ಇದೆ. ಬೇರೆ ಕಡೆಗಳಲ್ಲೆಲ್ಲ ಆಗಿರುವಂತೆ ಸಾರಿಗೆ ಕ್ಷೇತ್ರದಲ್ಲೂ ತಂತ್ರಜ್ಞಾನ ಅನೇಕ ಬದಲಾವಣೆಗಳನ್ನು ತಂದಿದೆ. ಉತ್ತಮ ರಸ್ತೆಗಳಿರಲಿ, ಉನ್ನತ ಕಾರ್ಯಕ್ಷಮತೆಯ ವಾಹನಗಳಿರಲಿ, ಪ್ರಯಾಣದ ಅನುಭವವನ್ನು ಆರಾಮದಾಯಕವಾಗಿಸುವ ಸೌಲಭ್ಯಗಳೇ ಇರಲಿ - ಪ್ರತಿಯೊಂದರ ಹಿಂದೆಯೂ ನಾವು ತಂತ್ರಜ್ಞಾನದ ಕೈವಾಡವನ್ನು ಕಾಣಬಹುದು.
ಇಷ್ಟೆಲ್ಲದರ ನಡುವೆ ಬದಲಾಗದೆ ಉಳಿದಿರುವ ಏಕೈಕ ಅಂಶವೆಂದರೆ ಅದು ವಾಹನ ಚಲಾಯಿಸುವ ವ್ಯಕ್ತಿ ಮಾತ್ರವೇ ಇರಬೇಕು.

ಬುಧವಾರ, ಏಪ್ರಿಲ್ 4, 2018
ಮೊಬೈಲ್ ಮಾತಿಗೆ ನಲವತ್ತೈದು!
ಟಿ. ಜಿ. ಶ್ರೀನಿಧಿ
ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ನಿದ್ದೆಗೆ ಜಾರುವವರೆಗೆ ಪ್ರತಿ ಕ್ಷಣವೂ ನಮ್ಮೊಡನೆ ಇರುವ ವಸ್ತುವೆಂದರೆ ಅದು ನಮ್ಮ ಮೊಬೈಲ್ ಫೋನ್.
ಈ ವಿಶಿಷ್ಟ-ವಿಚಿತ್ರ ಸಾಧನ ನಮ್ಮ ಬದುಕನ್ನು ಪ್ರವೇಶಿಸಿದ್ದು ಯಾವಾಗ ಎಂದು ಕೇಳಿದರೆ ಆ ಪ್ರಶ್ನೆಗೆ ಒಬ್ಬೊಬ್ಬರು ಒಂದೊಂದು ರೀತಿಯ ಉತ್ತರ ಕೊಡುತ್ತಾರೆ. ಮೊಬೈಲ್ ಬಳಸಿ ಮಾತನಾಡಲು ಪ್ರತಿ ನಿಮಿಷಕ್ಕೆ ಹತ್ತಾರು ರೂಪಾಯಿ ಪಾವತಿಸಬೇಕಿದ್ದ ಕಾಲದ ನೆನಪೂ ನಮ್ಮಲ್ಲಿ ಹಲವರಿಗಿರುವುದು ಸಾಧ್ಯ.
ಆದರೆ ಈ ನೆನಪುಗಳೆಲ್ಲ ಹೆಚ್ಚೆಂದರೆ ಹದಿನೈದು-ಇಪ್ಪತ್ತು ವರ್ಷಗಳಷ್ಟೇ ಹಳೆಯವು. ಹಾಗಾದರೆ ಮೊಬೈಲ್ ಫೋನ್ ಸಾಗಿಬಂದಿರುವ ಹಾದಿ ಇಷ್ಟು ಸಣ್ಣದೇ? ಖಂಡಿತಾ ಅಲ್ಲ. ಜಾಗತಿಕ ಮಟ್ಟದಲ್ಲಿ ಮೊಬೈಲ್ ದೂರವಾಣಿಗೆ ಇನ್ನಷ್ಟು ದೀರ್ಘವಾದ ಇತಿಹಾಸವಿದೆ. ನಿಖರವಾಗಿ ಹೇಳುವುದಾದರೆ ಪ್ರಪಂಚದ ಮೊತ್ತಮೊದಲ ದೂರವಾಣಿ ಕರೆ ಮಾಡಿದ್ದು ನಲವತ್ತೈದು ವರ್ಷಗಳ ಹಿಂದೆ!

ಸೋಮವಾರ, ಏಪ್ರಿಲ್ 2, 2018
ಜಾಲಲೋಕದಲ್ಲಿ ನಾವು
ಟಿ. ಜಿ. ಶ್ರೀನಿಧಿ
ಇಂಟರ್‌ನೆಟ್ ಅದೆಷ್ಟು ಪ್ರಭಾವಶಾಲಿಯೆಂದರೆ ಈಗಷ್ಟೇ ರಿಟೈರ್ ಆದ ಅಜ್ಜಿಯಿಂದ ಪ್ರಾರಂಭಿಸಿ ಇನ್ನೂ ಶಾಲೆಗೇ ಹೋಗದ ಮೊಮ್ಮಗುವಿನವರೆಗೆ ಪ್ರತಿಯೊಬ್ಬರೂ ಅದರಲ್ಲಿ ಸಕ್ರಿಯರಾಗಿರುತ್ತಾರೆ. ಮನರಂಜನೆಗಾಗಿಯೋ ಜ್ಞಾನಾರ್ಜನೆಗಾಗಿಯೋ ಸಂಪರ್ಕದ ಮಾಧ್ಯಮವಾಗಿಯೋ ನಾವೆಲ್ಲ ಅಂತರಜಾಲವನ್ನು ಪ್ರತಿದಿನವೂ ಬಳಸುತ್ತಲೇ ಇರುತ್ತೇವೆ.
ಹೀಗೆ ಬಳಸುವಾಗ ನಾವು ಅಂತರಜಾಲದಿಂದ ಅಪಾರ ಪ್ರಮಾಣದ ಮಾಹಿತಿಯನ್ನು ಪಡೆದುಕೊಳ್ಳುತ್ತೇವೆ, ನಿಜ. ಇದರ ಜೊತೆಗೆ ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಅಪಾರ ಪ್ರಮಾಣದ ಮಾಹಿತಿಯನ್ನು ಅಂತರಜಾಲಕ್ಕೆ ಸೇರಿಸುತ್ತಲೂ ಇರುತ್ತೇವೆ!

ಬುಧವಾರ, ಮಾರ್ಚ್ 28, 2018
ಆಚಿನ ಲೋಕದಲ್ಲಿ ಅಂತರಜಾಲ
ಟಿ. ಜಿ. ಶ್ರೀನಿಧಿ
ಕೆಲವೇ ವರ್ಷಗಳ ಹಿಂದೆ ಬಹಳ ದುಬಾರಿಯಾಗಿದ್ದ, ಅಷ್ಟೇನೂ ಅವಶ್ಯಕವಲ್ಲದ್ದು ಎನಿಸುತ್ತಿದ್ದ ಅಂತರಜಾಲ ಸಂಪರ್ಕ ಇದೀಗ ನಮ್ಮ ಅಗತ್ಯಗಳಲ್ಲೊಂದಾಗಿ ಬೆಳೆದುನಿಂತಿದೆ. ಅಂತರಜಾಲ ಸಂಪರ್ಕ ಎಲ್ಲ ಕಡೆಗಳಲ್ಲೂ ಲಭ್ಯವಾದಂತೆ ಎಲ್ಲಿಂದ ಬೇಕಿದ್ದರೂ ವೀಡಿಯೋ ಕಾಲ್ ಮಾಡುವುದು, ಲೈವ್ ವೀಡಿಯೋ ಬಿತ್ತರಿಸುವುದು ಸಾಧ್ಯವಾಗಿದೆ.
ದೇಶವಿದೇಶಗಳಲ್ಲಿನ ಪ್ರೇಕ್ಷಣೀಯ ಸ್ಥಳಗಳಷ್ಟೇ ಏಕೆ, ಮುಂದೊಮ್ಮೆ ಪ್ರವಾಸಕ್ಕೆಂದು ಚಂದ್ರನ ಮೇಲೆಯೇ ಲ್ಯಾಂಡ್ ಆಗುವಂತೆ ಮಾಡಲು ಹಲವು ಪ್ರಯತ್ನಗಳು ನಡೆದಿವೆ. ಅಂತಹ ಪ್ರಯತ್ನಗಳು ಕೈಗೂಡುವ ಹೊತ್ತಿಗೆ, ಅಥವಾ ಅದಕ್ಕಿಂತ ಮೊದಲೇ, ಚಂದ್ರನ ಮೇಲೆ ೪ಜಿ ಮೊಬೈಲ್ ಜಾಲ ರೂಪಿಸುವ ಯೋಜನೆಯೊಂದು ಸಿದ್ಧವಾಗಿದೆ ಎನ್ನುವುದು ಇದೀಗ ಕೇಳಿಬಂದಿರುವ ಸುದ್ದಿ.

ಸೋಮವಾರ, ಮಾರ್ಚ್ 19, 2018
ಟೆಕ್ ಪ್ರೀತಿ ಶುರುವಾದ ರೀತಿ
ಟಿ. ಜಿ. ಶ್ರೀನಿಧಿ
ಇಂದು ನಮ್ಮ ಬದುಕಿನ ಮೇಲೆ ವಿದ್ಯುನ್ಮಾನ (ಇಲೆಕ್ಟ್ರಾನಿಕ್) ಸಾಧನಗಳ ಪ್ರಭಾವ ಅತ್ಯಂತ ವ್ಯಾಪಕವಾಗಿದೆ. ಲ್ಯಾಪ್‌ಟಾಪ್‌ನಿಂದ ಮೊಬೈಲ್ ಫೋನಿನವರೆಗೆ, ಕಾರಿನಿಂದ ಟೀವಿಯವರೆಗೆ ನೂರೆಂಟು ಸಾಧನಗಳು ಈಗ ಸ್ಮಾರ್ಟ್ ಆಗಿವೆ, ನಮ್ಮ ಬದುಕನ್ನು ಪ್ರಭಾವಿಸುತ್ತಿವೆ.
ಇಂದಿನ ಈ ಎಲ್ಲ ಸ್ಮಾರ್ಟ್ ಸಾಧನಗಳೂ ಒಂದಲ್ಲ ಒಂದು ರೀತಿಯ ಕಂಪ್ಯೂಟರುಗಳೇ. ಅವುಗಳ ಬಾಹ್ಯ ರೂಪ ಹೇಗೆಯೇ ಇದ್ದರೂ ಮೂಲಭೂತ ರಚನೆ ಹೆಚ್ಚೂಕಡಿಮೆ ಒಂದೇ ರೀತಿಯದು. ಆಯಾ ಸಾಧನ ಮಾಡುವ ಕೆಲಸ ಎಂಥದ್ದು ಎನ್ನುವುದರ ಮೇಲೆ ಈ ರಚನೆಯ ಸಂಕೀರ್ಣತೆ ಬದಲಾಗುತ್ತದೆ, ಅಷ್ಟೇ.
ಈಗ ಇಷ್ಟೆಲ್ಲ ಸಾಮಾನ್ಯವಾಗಿದ್ದರೂ ಕಂಪ್ಯೂಟರುಗಳ ವಿನ್ಯಾಸ ಯಾವಾಗಲೂ ಹೀಗೆಯೇ ಇರಲಿಲ್ಲ.

ಸೋಮವಾರ, ಮಾರ್ಚ್ 12, 2018
ಹಕ್ಕಿಗಳಿಗೇಕೆ ಶಾಕ್ ಹೊಡೆಯುವುದಿಲ್ಲ?
ವಿದ್ಯುತ್ ತಂತಿಗಳ ಮೇಲೆ ಕುಳಿತುಕೊಳ್ಳುವ ಹಕ್ಕಿಗಳಿಗೆ ವಿದ್ಯುದಾಘಾತವಾಗುವುದಿಲ್ಲ ಎನ್ನುವುದು ನಮಗೆ ಗೊತ್ತು. ಅಪರೂಪಕ್ಕೊಮ್ಮೆ ಅವು ಇಲೆಕ್ಟ್ರಿಕ್ ಶಾಕ್‌ನಿಂದಾಗಿ ಸಾಯುವುದನ್ನು ಕೂಡ ನಾವು ನೋಡಿದ್ದೇವೆ. ಈ ವಿಚಿತ್ರ ವಿದ್ಯಮಾನಗಳಿಗೆ ಕಾರಣ ಏನು? ವಿವರಣೆ ಇಲ್ಲಿದೆ.
ವಿನಾಯಕ ಕಾಮತ್
ಜಲ ವಿದ್ಯುತ್ ಸ್ಥಾವರದಲ್ಲೋ ಅಥವಾ ಅಣು ವಿದ್ಯುತ್ ಸ್ಥಾವರದಲ್ಲೋ ಉತ್ಪತ್ತಿಯಾದ ವಿದ್ಯುತ್ತನ್ನು ಬಳಕೆದಾರರಿಗೆ ತಲುಪಿಸಬೇಕಷ್ಟೇ? ಈ ಕೆಲಸವನ್ನು ಎರಡು ಹಂತಗಳಲ್ಲಿ ಮಾಡಲಾಗುತ್ತದೆ. ಮೊದಲ ಹಂತದಲ್ಲಿ ಉತ್ಪಾದನಾ ಸ್ಥಳದಿಂದ, ವಿತರಣಾ ಕೇಂದ್ರಕ್ಕೆ ದೊಡ್ಡ ಪ್ರಮಾಣದಲ್ಲಿ ವಿದ್ಯುತ್ ಪ್ರವಾಹ ಅಥವಾ ಇಲೆಕ್ಟ್ರಿಕ್ ಕರೆಂಟ್ ನ ವರ್ಗಾವಣೆ. ಇದನ್ನು ಎತ್ತರದಲ್ಲಿರುವ ದೊಡ್ಡ ಕಂಬಗಳಿಂದ ಏರ್ಪಟ್ಟಿರುವ ತಂತಿಯ ಜಾಲಗಳ ಮೂಲಕ ಮಾಡುತ್ತಾರೆ. ಎರಡನೇ ಹಂತದಲ್ಲಿ ವಿದ್ಯುತ್ ಪ್ರಸರಣದ ಉಪಕೇಂದ್ರಗಳ ಮೂಲಕ, ‘ಕರೆಂಟ್’ ಬಳಕೆದಾರರಿಗೆ ವಿತರಿಸಲ್ಪಡುತ್ತದೆ. ಈ ಎರಡನೇ ಹಂತದಲ್ಲಿ ಕೂಡ ಕಂಬಗಳ ಮೂಲಕ ಬೆಸೆದು ಕೊಂಡಿರುವ ತಂತಿಗಳ ಮೂಲಕವೇ ಕರೆಂಟ್ ಸಾಗಿಸಲ್ಪಡುತ್ತದೆ. ವಿದ್ಯುತ್ ವಿತರಣೆಯನ್ನು ಭೂಗತ ತಂತಿಗಳ ಮೂಲಕವೂ ಮಾಡಬಹುದು. ಆದರೆ, ನಮ್ಮ ದೇಶದಲ್ಲಿ ಹೆಚ್ಚಾಗಿ ವಿದ್ಯುತ್ ವಿತರಣೆಯನ್ನು, ರಸ್ತೆಯ ಅಕ್ಕ ಪಕ್ಕದಲ್ಲಿ ಹಾದು ಹೋಗುವ ಕಂಬಗಳ ಮೂಲಕವೇ ಪೂರೈಸುತ್ತಾರೆ.

ಬುಧವಾರ, ಮಾರ್ಚ್ 7, 2018
ವಿಜ್ಞಾನದ ಹಾದಿಯಲ್ಲಿ ಭಾರತ: ೪: ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಸಾಧನೆಗಳು, ಮುಂದಿನ ಹೆಜ್ಜೆಗಳು
ಉದಯ ಶಂಕರ ಪುರಾಣಿಕ
ಟಿ. ಜಿ. ಶ್ರೀನಿಧಿ
ಸ್ವಾತಂತ್ರ್ಯಾನಂತರದ ಏಳು ದಶಕಗಳ ಅವಧಿಯಲ್ಲಿ ನಮ್ಮ ದೇಶ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧಿಸಿರುವ ಪ್ರಗತಿ ಬಹುಮುಖಿಯಾದದ್ದು. ಕೃಷಿ, ಆರೋಗ್ಯ, ರಕ್ಷಣೆ, ದೂರಸಂಪರ್ಕ, ಐಟಿ, ಬಾಹ್ಯಾಕಾಶ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತದ ಪ್ರಗತಿಯ ಪ್ರಾತಿನಿಧಿಕ ಪರಿಚಯ ನೀಡುವ ಲೇಖನಸರಣಿಯನ್ನು ಇಜ್ಞಾನ ಡಾಟ್ ಕಾಮ್ ಪ್ರಕಟಿಸುತ್ತಿದೆ. ಈ ಸರಣಿಯ ನಾಲ್ಕನೆಯ ಲೇಖನ ಇಲ್ಲಿದೆ.

ಸೋಮವಾರ, ಮಾರ್ಚ್ 5, 2018
ವಿಜ್ಞಾನದ ಹಾದಿಯಲ್ಲಿ ಭಾರತ: ೩: ಬಾಹ್ಯಾಕಾಶ ಹಾಗೂ ದೂರಸಂಪರ್ಕ ತಂತ್ರಜ್ಞಾನ
ಉದಯ ಶಂಕರ ಪುರಾಣಿಕ
ಟಿ. ಜಿ. ಶ್ರೀನಿಧಿ
ಸ್ವಾತಂತ್ರ್ಯಾನಂತರದ ಏಳು ದಶಕಗಳ ಅವಧಿಯಲ್ಲಿ ನಮ್ಮ ದೇಶ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧಿಸಿರುವ ಪ್ರಗತಿ ಬಹುಮುಖಿಯಾದದ್ದು. ಕೃಷಿ, ಆರೋಗ್ಯ, ರಕ್ಷಣೆ, ದೂರಸಂಪರ್ಕ, ಐಟಿ, ಬಾಹ್ಯಾಕಾಶ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತದ ಪ್ರಗತಿಯ ಪ್ರಾತಿನಿಧಿಕ ಪರಿಚಯ ನೀಡುವ ಲೇಖನಸರಣಿಯನ್ನು ಇಜ್ಞಾನ ಡಾಟ್ ಕಾಮ್ ಪ್ರಕಟಿಸುತ್ತಿದೆ. ಈ ಸರಣಿಯ ಮೂರನೆಯ ಲೇಖನ ಇಲ್ಲಿದೆ.

ಶುಕ್ರವಾರ, ಮಾರ್ಚ್ 2, 2018
ವಿಜ್ಞಾನದ ಹಾದಿಯಲ್ಲಿ ಭಾರತ: ೨: ಮೂಲಸೌಕರ್ಯ ಹಾಗೂ ರಕ್ಷಣಾ ಕ್ಷೇತ್ರ
ಉದಯ ಶಂಕರ ಪುರಾಣಿಕ
ಟಿ. ಜಿ. ಶ್ರೀನಿಧಿ
ಸ್ವಾತಂತ್ರ್ಯಾನಂತರದ ಏಳು ದಶಕಗಳ ಅವಧಿಯಲ್ಲಿ ನಮ್ಮ ದೇಶ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧಿಸಿರುವ ಪ್ರಗತಿ ಬಹುಮುಖಿಯಾದದ್ದು. ಕೃಷಿ, ಆರೋಗ್ಯ, ರಕ್ಷಣೆ, ದೂರಸಂಪರ್ಕ, ಐಟಿ, ಬಾಹ್ಯಾಕಾಶ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತದ ಪ್ರಗತಿಯ ಪ್ರಾತಿನಿಧಿಕ ಪರಿಚಯ ನೀಡುವ ಲೇಖನಸರಣಿಯನ್ನು ಇಜ್ಞಾನ ಡಾಟ್ ಕಾಮ್ ಪ್ರಕಟಿಸುತ್ತಿದೆ. ಈ ಸರಣಿಯ ಎರಡನೆಯ ಲೇಖನ ಇಲ್ಲಿದೆ.

ಬುಧವಾರ, ಫೆಬ್ರವರಿ 28, 2018
ರಾಷ್ಟ್ರೀಯ ವಿಜ್ಞಾನ ದಿನ ವಿಶೇಷ: ವಿಜ್ಞಾನದ ಹಾದಿಯಲ್ಲಿ ಭಾರತದ ಹೆಜ್ಜೆಗುರುತುಗಳು
ಉದಯ ಶಂಕರ ಪುರಾಣಿಕ
ಟಿ. ಜಿ. ಶ್ರೀನಿಧಿ
ವಿಜ್ಞಾನ - ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆಗಳೇನು ಎನ್ನುವುದು ಪದೇಪದೇ ಕೇಳಸಿಗುವ ಪ್ರಶ್ನೆ. ಈ ಪ್ರಶ್ನೆಗೆ ದೊರಕುವ ಉತ್ತರ ಸನ್ನಿವೇಶಕ್ಕೆ ತಕ್ಕಂತೆ ಬದಲಾಗುತ್ತಿರುತ್ತದೆ. "ಪಾಶ್ಚಿಮಾತ್ಯ ದೇಶಗಳ ಸಾಧನೆಗಳೆಲ್ಲ ಸಾಧ್ಯವಾಗಿರುವುದು ಭಾರತದಿಂದಾಗಿಯೇ" ಎನ್ನುವಂತಹ ವಾದಗಳಿಂದ ಪ್ರಾರಂಭಿಸಿ "ವಿಜ್ಞಾನ-ತಂತ್ರಜ್ಞಾನದ ಸಾಧನೆಗಳಷ್ಟೂ ಹೊರದೇಶಗಳಲ್ಲೇ ಆಗಿರುವುದು" ಎನ್ನುವುದರವರೆಗೆ ಈ ಉತ್ತರ ಹಲವು ಬಗೆಯದಾಗಿರುವುದು ಸಾಧ್ಯ.
ಈ ಕ್ಷೇತ್ರದಲ್ಲಿ ಭಾರತದ - ಭಾರತೀಯರ ಸಾಧನೆಗಳಿಗೆ ಉದಾಹರಣೆ ಕೊಡಿ ಎಂದು ಕೇಳಿದರೆ ಉದಾಹರಣೆಗಳ ಪಟ್ಟಿ ಚರಕ - ಸುಶ್ರುತ, ಆರ್ಯಭಟ - ಭಾಸ್ಕರರಿಂದ ಪ್ರಾರಂಭವಾಗಿ ಜಗದೀಶಚಂದ್ರ ಬೋಸ್ - ಸಿ ವಿ ರಾಮನ್‌ರ ಹೆಸರುಗಳೊಡನೆ ನಿಂತುಹೋಗುವುದೂ ಉಂಟು.
ಹೀಗೆಲ್ಲ ಇದೆ ಎಂದಮಾತ್ರಕ್ಕೆ ವಿಜ್ಞಾನ - ತಂತ್ರಜ್ಞಾನಗಳಲ್ಲಿ ಭಾರತದ ಸಾಧನೆ ಕಡಿಮೆಯೆಂದಾಗಲೀ ಕಳಪೆಯೆಂದಾಗಲೀ ಖಂಡಿತಾ ಅರ್ಥವಲ್ಲ. ಯಾರು ಏನೆನ್ನುತ್ತಾರೆ ಎನ್ನುವ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ನಮ್ಮ ದೇಶ ಈ ಕ್ಷೇತ್ರಗಳಲ್ಲಿ ಕೆಲಸಮಾಡುತ್ತಲೇ ಇದೆ. ಈ ಕೆಲಸದ ಪರಿಣಾಮವಾಗಿಯೇ ಅನೇಕ ಸಾಧನೆಗಳನ್ನು ಮಾಡಿದೆ, ತಲೆಕೆಡಿಸಿಕೊಳ್ಳದ ಕಾರಣದಿಂದ ಇನ್ನಷ್ಟು ಸಾಧನೆಗಳನ್ನು ಮಾಡದೆಯೂ ಉಳಿದಿದೆ.

ಗುರುವಾರ, ಫೆಬ್ರವರಿ 22, 2018
ನಮ್ಮ ಭಾಷೆ ಮತ್ತು ತಂತ್ರಜ್ಞಾನ
ಟಿ. ಜಿ. ಶ್ರೀನಿಧಿ
ತಂತ್ರಜ್ಞಾನ, ಅದರಲ್ಲೂ ಮಾಹಿತಿ ತಂತ್ರಜ್ಞಾನ ಎಂದಕೂಡಲೇ ಕೇಳಸಿಗುವ ಆರೋಪ: ಅದರಿಂದ ನಮ್ಮ ಭಾಷೆಗೆ ತೊಂದರೆಯಾಗಿದೆ ಅಥವಾ ಆಗುತ್ತಿದೆ ಎನ್ನುವುದು. ಇದು ಕೊಂಚಮಟ್ಟಿಗೆ ನಿಜವೂ ಹೌದು. ಪ್ರಪಂಚದಲ್ಲಿರುವ ಸಾವಿರಾರು ಭಾಷೆಗಳ ಪೈಕಿ ಶೇ. ೯೬ರಷ್ಟನ್ನು ಬಳಸುವವರು ನಮ್ಮ ಜನಸಂಖ್ಯೆಯ ಶೇ. ೪ರಷ್ಟು ಮಂದಿ ಮಾತ್ರ ಎಂದು ವಿಶ್ವಸಂಸ್ಥೆಯ ಜಾಲತಾಣವೇ ಹೇಳುತ್ತದೆ. ಇಂತಹ ಭಾಷೆಗಳಿಗೆ ಶಿಕ್ಷಣ ವ್ಯವಸ್ಥೆಯಲ್ಲೂ ಮಾಹಿತಿ ತಂತ್ರಜ್ಞಾನದ ಜಗತ್ತಿನಲ್ಲೂ ಪ್ರಾಮುಖ್ಯ ದೊರಕದಿದ್ದರೆ ಅವುಗಳ ಬಳಕೆ ಇನ್ನಷ್ಟು ಕಡಿಮೆಯಾಗುವುದು, ಬೆಳವಣಿಗೆ ಕುಂಠಿತವಾಗುವುದು ಸಹಜವೇ.
ಹೌದು, ಇಂದಿನ ಬದುಕಿನಲ್ಲಿ ಮಾಹಿತಿ ತಂತ್ರಜ್ಞಾನದ ಪಾತ್ರ ಮಹತ್ವದ್ದು. ಬೆಳಗಿನಿಂದ ರಾತ್ರಿಯವರೆಗೆ ಒಂದಲ್ಲ ಒಂದು ರೂಪದಲ್ಲಿ ಮಾಹಿತಿ ತಂತ್ರಜ್ಞಾನದ ಸವಲತ್ತುಗಳನ್ನು ನಾವೆಲ್ಲ ಬಳಸುತ್ತಲೇ ಇರುತ್ತೇವೆ. ಈ ವ್ಯವಹಾರವನ್ನೆಲ್ಲ ನಮ್ಮ ಭಾಷೆಯಲ್ಲೇ ನಡೆಸುವಂತಾದರೆ ಭಾಷೆ-ತಂತ್ರಜ್ಞಾನಗಳೆರಡರ ವ್ಯಾಪ್ತಿಯೂ ಹೆಚ್ಚುತ್ತದೆ, ಎರಡೂ ಪರಸ್ಪರ ಪೂರಕವಾಗಿ ಬೆಳೆಯುತ್ತವೆ.

ಮಂಗಳವಾರ, ಫೆಬ್ರವರಿ 20, 2018
ಮೊಬೈಲ್ ಲೋಕದ ರೆಟ್ರೋ ಸವಾರಿ
ಟಿ. ಜಿ. ಶ್ರೀನಿಧಿ
ಮೊಬೈಲ್ ಫೋನ್ ಎಂದ ತಕ್ಷಣ ನಮ್ಮ ಗಮನ ಹೋಗುವುದು ಸ್ಮಾರ್ಟ್‌ಫೋನುಗಳ ಕಡೆಗೆ. "ಈಗೇನು ಎಲ್ಲ ಫೋನುಗಳೂ ಸ್ಮಾರ್ಟ್ ತಾನೇ?" ಎಂದು ಕೇಳುವವರೂ ಬೇಕಾದಷ್ಟು ಜನ ಇದ್ದಾರೆ.
ಪ್ರತಿವಾರವೂ ಮಾರುಕಟ್ಟೆಗೆ ಬರುವ ಹೊಸ ಸ್ಮಾರ್ಟ್‌ಫೋನುಗಳನ್ನೂ ಅವುಗಳಲ್ಲಿರುವ ನೂರೆಂಟು ವೈಶಿಷ್ಟ್ಯಗಳನ್ನೂ ನೋಡಿದವರಲ್ಲಿ ಫೋನ್ ಅಂದರೆ ಸ್ಮಾರ್ಟ್‌ಫೋನೇ ಎನ್ನುವ ಅಭಿಪ್ರಾಯ ಮೂಡುವುದು ಸಹಜವೇ. ಆದರೆ ಅಂಕಿ ಅಂಶಗಳ ಪ್ರಕಾರ ಭಾರತದ ಮೊಬೈಲ್ ಬಳಕೆದಾರರ ಪೈಕಿ ಅರ್ಧಕ್ಕಿಂತ ಹೆಚ್ಚುಮಂದಿ ಇಂದಿಗೂ ಸ್ಮಾರ್ಟ್ ಫೋನ್ ಬಳಕೆದಾರರಲ್ಲ!
ಇಷ್ಟೆಲ್ಲ ದೊಡ್ಡ ಸಂಖ್ಯೆಯ ಗ್ರಾಹಕರು ಬಳಸುವುದು, ಸ್ಮಾರ್ಟ್‌ಫೋನ್ ಬಳಕೆದಾರರ ಪಾಲಿಗೆ ಔಟ್‌ಡೇಟೆಡ್ ಎನ್ನಿಸುವ ಹಳೆಯಕಾಲದ ಫೋನುಗಳನ್ನು.

ಗುರುವಾರ, ಫೆಬ್ರವರಿ 15, 2018
ವಿಮಾನದಲ್ಲಿ ವೈ-ಫೈ
ಟಿ. ಜಿ. ಶ್ರೀನಿಧಿ
ಪ್ರವಾಸಕ್ಕೆಂದೋ ಕಚೇರಿ ಕೆಲಸಕ್ಕೆಂದೋ ವಿಮಾನಯಾನ ಕೈಗೊಳ್ಳುವವರ ಸಂಖ್ಯೆ ಈಚಿನ ಕೆಲವರ್ಷಗಳಲ್ಲಿ ಗಮನಾರ್ಹವಾಗಿ ಹೆಚ್ಚಿದೆ. ಅಂತಾರಾಷ್ಟ್ರೀಯ ವೈಮಾನಿಕ ಸಾರಿಗೆ ಒಕ್ಕೂಟ (ಐಎಟಿಎ), ಸಿಎಪಿಎ - ಸೆಂಟರ್ ಫಾರ್ ಏವಿಯೇಶನ್ ಮುಂತಾದ ಸಂಸ್ಥೆಗಳು ಪ್ರಕಟಿಸಿರುವ ಅಂಕಿ ಅಂಶಗಳಷ್ಟೇ ಅಲ್ಲ; ಭಾರತದ ನಗರಗಳನ್ನು ಪರಸ್ಪರ ಸಂಪರ್ಕಿಸುತ್ತಿರುವ ವಿಮಾನಗಳ ಸಂಖ್ಯೆ, ವಿಮಾನ ನಿಲ್ದಾಣಗಳಲ್ಲಿ ಕಾಣಸಿಗುವ ಪ್ರಯಾಣಿಕರ ದಟ್ಟಣೆ, ಕಡೆಗೆ ನಮ್ಮ ಫೇಸ್‌ಬುಕ್ ಪುಟದಲ್ಲಿ ಕಾಣಸಿಗುವ ಏರ್‌ಪೋರ್ಟ್ ಚೆಕ್-ಇನ್‌ಗಳ ಪ್ರಮಾಣ ಕೂಡ ಈ ಹೇಳಿಕೆಗೆ ಪುಷ್ಟಿಕೊಡುತ್ತಿವೆ!
ಬೆಂಗಳೂರು ವಿಮಾನ ನಿಲ್ದಾಣದಲ್ಲಿದ್ದೇನೆ ಎಂದು ಫೇಸ್ ಬುಕ್ ನಲ್ಲಿ ಹಾಕಿರುತ್ತಾರಲ್ಲ, ಅವರು ಮತ್ತೆ ಪೋಸ್ಟ್ ಮಾಡುವುದು ಮುಂದಿನ ವಿಮಾನ ನಿಲ್ದಾಣ ತಲುಪಿದ ಮೇಲೆಯೇ. ಇದೇಕೆ ಹೀಗೆ? ಏರ್‌ಪೋರ್ಟಿನಲ್ಲಿ ಸೆಲ್ಫಿ ತೆಗೆದು ಪೋಸ್ಟ್ ಮಾಡಿದವರು ವಿಮಾನದಲ್ಲಿ ತಿಂದ ತಿಂಡಿಯ ಫೋಟೋ ಏಕೆ ಹಾಕುವುದಿಲ್ಲ?

ಶನಿವಾರ, ಫೆಬ್ರವರಿ 10, 2018
ವಾರಾಂತ್ಯ ವಿಶೇಷ: ಸ್ಮಾರ್ಟ್ ಸಹಾಯಕರ ಸುತ್ತಮುತ್ತ
ಟಿ. ಜಿ. ಶ್ರೀನಿಧಿ
ಒಬ್ಬರು ಹೇಳಿದ ಕೆಲಸವನ್ನು ಇನ್ನೊಬ್ಬರು ಮಾಡುವುದಿಲ್ಲ ಎನ್ನುವುದು ಬಹುತೇಕ ಮನೆಗಳಲ್ಲಿ ವಾಗ್ವಾದಕ್ಕೆ, ಜಗಳಕ್ಕೆ ಕಾರಣವಾಗುವ ವಿಷಯ. ಕುಡಿಯಲು ನೀರು ಬೇಕು, ಬುಟ್ಟಿಯಲ್ಲಿ ಹಾಲಿನ ಕೂಪನ್ ಇಡಬೇಕು, ದಿನಸಿ ತರಿಸಬೇಕು, ಬೆಳಿಗ್ಗೆ ಏಳಲು ಅಲಾರಂ ಇಡಬೇಕು... ಹೀಗೆ ಇಂತಹ ಕೆಲಸಗಳಲ್ಲಿ ಹಲವಾರು ವಿಧಗಳಿರುವುದು ಸಾಧ್ಯ. ಈ ಪೈಕಿ ಕೆಲವು ಕೆಲಸಗಳಿಗೆ ಓಡಾಟ ಬೇಕು, ಇನ್ನು ಕೆಲವನ್ನು ಕಂಪ್ಯೂಟರಿನಲ್ಲೋ ಮೊಬೈಲಿನಲ್ಲೋ ಮಾಡಿಕೊಳ್ಳಬಹುದು.
ಓಡಾಡಿ ಮಾಡಬೇಕಿರುವ ಕೆಲಸಗಳು ಹಾಗಿರಲಿ, ಮೊಬೈಲಿನಲ್ಲೋ ಕಂಪ್ಯೂಟರಿನಲ್ಲೋ ಮಾಡಬೇಕಾದ ಕೆಲಸಗಳನ್ನಾದರೂ ಯಾರಾದರೂ ಮಾಡಿಕೊಡುವಂತಿದ್ದರೆ? ಜೀವನ ಸ್ವಲ್ಪವಾದರೂ ಸರಳವಾಗುತ್ತದೆ - ಮನೆಯ ಜಗಳ ಕೊಂಚಮಟ್ಟಿಗೆ ಕಡಿಮೆಯಾಗುತ್ತದೆ ಅಲ್ಲವೇ? 'ಸ್ಮಾರ್ಟ್ ಸಹಾಯಕ'ರ ಸೃಷ್ಟಿಯ ಹಿಂದಿರುವುದು ಇದೇ ಆಲೋಚನೆ.
ಇಷ್ಟಕ್ಕೂ ಸ್ಮಾರ್ಟ್ ಸಹಾಯಕರೆಂದರೆ ಯಾರು? ಬುದ್ಧಿವಂತ ಮನೆಕೆಲಸದವರೇ?

ಶುಕ್ರವಾರ, ಫೆಬ್ರವರಿ 2, 2018
ತಂತ್ರಾಂಶ ರಚನೆಗೆ ಇಂಗ್ಲಿಷ್ ಭಾಷೆಯೇ ಬೇಕೇ?
ಟಿ. ಜಿ. ಶ್ರೀನಿಧಿ
ಗೃಹೋಪಯೋಗಿ ಸಾಮಗ್ರಿಗಳಿಂದ ಪ್ರಾರಂಭಿಸಿ ಅಂತರ್-ಗ್ರಹ ವಾಹನಗಳವರೆಗೆ ಎಲ್ಲೆಡೆಯೂ ತಂತ್ರಾಂಶಗಳ ಕೈವಾಡವನ್ನು ನಾವು ಕಾಣಬಹುದು. ಇಂತಹ ಪ್ರತಿಯೊಂದು ಉದಾಹರಣೆಯಲ್ಲೂ ಆಯಾ ಯಂತ್ರಕ್ಕೆ ಹೀಗೆ ಮಾಡೆಂದು ನಿರ್ದೇಶಿಸುವುದು ತಂತ್ರಾಂಶಗಳೇ.
ಯಾವುದೇ ತಂತ್ರಾಂಶವನ್ನು (ಸಾಫ್ಟ್‌ವೇರ್) ತೆಗೆದುಕೊಂಡರೂ ಅದರಲ್ಲಿ ಒಂದು ಅಥವಾ ಹೆಚ್ಚಿನ ಸಂಖ್ಯೆಯ ಕ್ರಮವಿಧಿಗಳು (ಪ್ರೋಗ್ರಾಮ್) ಇರುತ್ತವೆ. ಎರಡು ಅಂಕಿಗಳನ್ನು ಕೂಡಿಸುವ ಸರಳ ಕೆಲಸವಿರಲಿ, ಯಾರಿಗೂ ಡಿಕ್ಕಿಹೊಡೆಯದಂತೆ ವಾಹನವನ್ನು ಮುನ್ನಡೆಸುವ ಕ್ಲಿಷ್ಟ ಸವಾಲೇ ಇರಲಿ - ಇಂತಿಂತಹ ಕೆಲಸಗಳನ್ನು ಇಂಥದ್ದೇ ರೀತಿಯಲ್ಲಿ ಮಾಡು ಎಂದು ಹೇಳುವುದು ಈ ಕ್ರಮವಿಧಿಗಳ ಕೆಲಸ.
ಹೀಗೆ ಯಾವಾಗ ಏನನ್ನು ಯಾವ ಕ್ರಮದಲ್ಲಿ ಮಾಡಬೇಕೆಂದು ಕಂಪ್ಯೂಟರಿನಲ್ಲಿ ಬರೆದಿಡುವ ಕೆಲಸವಿದೆಯಲ್ಲ, ಅದಕ್ಕೆ ಪ್ರೋಗ್ರಾಮಿಂಗ್ ಎಂದು ಹೆಸರು. ಈ ಕೆಲಸ ಮಾಡುವವರು ಪ್ರೋಗ್ರಾಮರ್‌ಗಳು.

ಬುಧವಾರ, ಜನವರಿ 31, 2018
ಮೊಬೈಲ್ ಸಿಗ್ನಲ್ ಸುತ್ತಮುತ್ತ
ಟಿ. ಜಿ. ಶ್ರೀನಿಧಿ
ಮೊಬೈಲ್ ಫೋನ್ ಯಾರಿಗೆ ತಾನೇ ಗೊತ್ತಿಲ್ಲ? ಹಿರಿಯ-ಕಿರಿಯ, ಬಡವ-ಶ್ರೀಮಂತರೆಂಬ ಯಾವುದೇ ಭೇದಭಾವವಿಲ್ಲದೆ ಎಲ್ಲರೂ ಯಾವಾಗಲೂ ಬಳಸುವ ಸಾಧನ ಅದು. ಇಂತಹ ಸರ್ವಾಂತರ್ಯಾಮಿ ಮೊಬೈಲನ್ನು ಹಲವಾರು ಮಂದಿ ಸೆಲ್ ಫೋನ್ ಎಂದು ಕರೆಯುತ್ತಾರೆ. ಕೆಲವರಂತೂ ಈ ಹೆಸರನ್ನು ಇನ್ನೂ ಹ್ರಸ್ವಗೊಳಿಸಿ 'ಸೆಲ್' ಎಂದಷ್ಟೇ ಕರೆಯುವುದೂ ಉಂಟು.
ಈ ಅಭ್ಯಾಸಕ್ಕೆ ಕಾರಣ ಮೊಬೈಲ್ ಜಾಲಗಳ (ನೆಟ್‌ವರ್ಕ್) ವಿನ್ಯಾಸ.

ಸೋಮವಾರ, ಜನವರಿ 29, 2018
ಟೆಕ್ ಸಂತೆಯಲ್ಲಿ ಬ್ಯಾಟರಿಯದೇ ಚಿಂತೆ!
ಟಿ. ಜಿ. ಶ್ರೀನಿಧಿ
ದಸರಾ ಸಂದರ್ಭದಲ್ಲಿ ಮೈಸೂರಿನಲ್ಲಿ ವಸ್ತುಪ್ರದರ್ಶನ ನಡೆಯುತ್ತದಲ್ಲ, ಅದೇ ರೀತಿ ಅಮೆರಿಕಾದ ಲಾಸ್ ವೇಗಾಸ್ ನಗರದಲ್ಲೂ ವರ್ಷಕ್ಕೊಂದು ಬಾರಿ ವಿಶೇಷ ಪ್ರದರ್ಶನವೊಂದನ್ನು ಏರ್ಪಡಿಸಲಾಗುತ್ತದೆ. ಟೆಕ್ ಲೋಕದಲ್ಲಿ ಬಹಳ ಜನಪ್ರಿಯವಾದ ಈ ಸಂತೆಯ ಹೆಸರು 'ಕನ್ಸ್ಯೂಮರ್ ಇಲೆಕ್ಟ್ರಾನಿಕ್ಸ್ ಶೋ', ಸಂಕ್ಷಿಪ್ತವಾಗಿ ಸಿಇಎಸ್.
ಮೊಬೈಲ್ ಫೋನ್, ಕಂಪ್ಯೂಟರ್, ಕ್ಯಾಮೆರಾ, ರೋಬಾಟ್, ಡ್ರೋನ್ - ಹೀಗೆ ನೂರೆಂಟು ಬಗೆಯ ವಿದ್ಯುನ್ಮಾನ ಸಾಧನಗಳಿಗೆ ಸಂಬಂಧಪಟ್ಟಂತೆ ಕಳೆದೊಂದು ವರ್ಷದಲ್ಲಿ ಏನೆಲ್ಲ ಹೊಸತು ಘಟಿಸಿದೆ ಎನ್ನುವುದನ್ನು ಜಗತ್ತಿಗೆ ಪರಿಚಯಿಸುವುದು ಸಿಇಎಸ್‌ನ ಉದ್ದೇಶ. ಜನವರಿ ೭ರಿಂದ ೧೨ರವರೆಗೆ ನಡೆದ ಈ ವರ್ಷದ ಸಿಇಎಸ್‌ನಲ್ಲೂ ಇಂತಹ ಹಲವಾರು ಹೊಸ ಬೆಳವಣಿಗೆಗಳು ಬೆಳಕಿಗೆ ಬಂದವು, ವಿಶ್ವದೆಲ್ಲೆಡೆ ಸುದ್ದಿಯಾದವು.
ಬೆಳಕಿಗೆ ಬಂದ ಸುದ್ದಿಗಳ ಜೊತೆಗೆ ಪ್ರದರ್ಶನದ ಸಭಾಂಗಣವೊಂದರಲ್ಲಿ ಬೆಳಕಿಲ್ಲದಂತಾಗಿದ್ದೂ ಸುದ್ದಿಯಾಗಿದ್ದು ಈ ವರ್ಷದ ವಿಶೇಷ. ವಿದ್ಯುನ್ಮಾನ ಸಾಧನಗಳ ಪ್ರದರ್ಶನದಲ್ಲಿ ಅವುಗಳ ಜೀವಾಳವಾದ ವಿದ್ಯುತ್ ಸಂಪರ್ಕ ಕೈಕೊಟ್ಟ ಈ ಘಟನೆ, ಸಹಜವಾಗಿಯೇ, ಸಾಕಷ್ಟು ಚರ್ಚೆಗೆ ಕಾರಣವಾಯಿತು.

ಮಂಗಳವಾರ, ಜನವರಿ 23, 2018
'ಮೆಲ್ಟ್‌ಡೌನ್' ಮತ್ತು 'ಸ್ಪೆಕ್ಟರ್': ಲೇಟೆಸ್ಟ್ ಸುದ್ದಿ ಏನು?
ವಿದ್ಯುನ್ಮಾನ ಸಾಧನಗಳ ಸೆಂಟ್ರಲ್ ಪ್ರಾಸೆಸಿಂಗ್ ಯುನಿಟ್ (ಸಿಪಿಯು) ವಿನ್ಯಾಸದಲ್ಲಿ ಪತ್ತೆಯಾಗಿರುವ ಎರಡು ದೋಷಗಳು - 'ಮೆಲ್ಟ್‌ಡೌನ್' ಮತ್ತು 'ಸ್ಪೆಕ್ಟರ್' - ಟೆಕ್ ಲೋಕದಲ್ಲಿ ಸಂಚಲನವನ್ನೇ ಸೃಷ್ಟಿಸಿವೆ. ಈ ಸಮಸ್ಯೆಯನ್ನು ಪರಿಚಯಿಸುವ ವಿಶೇಷ ಲೇಖನ ಇಜ್ಞಾನ ಡಾಟ್ ಕಾಮ್‌ನಲ್ಲಿ ಕಳೆದ ವಾರ ಪ್ರಕಟವಾಗಿತ್ತು. 'ಮೆಲ್ಟ್‌ಡೌನ್' ಮತ್ತು 'ಸ್ಪೆಕ್ಟರ್' ಸುತ್ತಲಿನ ಸದ್ಯದ ಪರಿಸ್ಥಿತಿ ಏನು? ಈ ಕುರಿತು ಟೆಕ್ ಲೋಕದಲ್ಲಿ ಏನೆಲ್ಲ ನಡೆದಿದೆ? ವಿವರಗಳು ಇಲ್ಲಿವೆ.
ಉದಯ ಶಂಕರ ಪುರಾಣಿಕ
ಸ್ಪೆಕ್ಟರ್ ಮತ್ತು ಮೆಲ್ಟ್‌ಡೌನ್ ಲೋಪಗಳನ್ನು ಸರಿಪಡಿಸಲು ಅಗತ್ಯವಾದ ತಂತ್ರಾಂಶ ಪ್ಯಾಚುಗಳನ್ನು ಅಭಿವೃದ್ಧಿಪಡಿಸಿ, ಗ್ರಾಹಕರಿಗೆ ಬಿಡುಗಡೆ ಮಾಡಲು ಹಲವಾರು ಸಂಸ್ಥೆಗಳು ಕೆಲಸ ಮಾಡುತ್ತಿವೆ. ಆದರೆ ಇದು ಅಂದುಕೊಂಡಷ್ಟು ಸುಲಲಿತವಾಗಿ ನೆಡೆಯದಿರುವುದು ವಿವಿಧ ಸಂಸ್ಥೆಗಳ ನಡುವೆ ಆರೋಪ - ಪ್ರತ್ಯಾರೋಪಗಳಿಗೆ ಎಡೆ ಮಾಡಿಕೊಡುತ್ತಿದೆ. ಈ ನಡುವೆ ಸೈಬರ್ ಅಪರಾಧಿಗಳು, ನಕಲಿ ಪ್ಯಾಚ್ ಬಿಡುಗಡೆ ಮಾಡಿ, ಮಾಲ್‌ವೇರ್‌ಗಳನ್ನು ಬಳಸಲು ಮುಂದಾಗಿರುವುದು ಆತಂಕ ಸೃಷ್ಟಿಸಿದೆ.
ಬುಧವಾರ, ಜನವರಿ 17, 2018
ಪಾಠ ಹೇಳುವ ಯಂತ್ರ, ಪಾಠ ಕಲಿಯುವ ಯಂತ್ರ
ಟಿ. ಜಿ. ಶ್ರೀನಿಧಿ
ಮಾಹಿತಿ ತಂತ್ರಜ್ಞಾನದ ಸವಲತ್ತುಗಳ ಮಾತು ಬಂದಾಗಲೆಲ್ಲ ಶಿಕ್ಷಣ ಕ್ಷೇತ್ರದಲ್ಲಿ ಅವುಗಳ ಉಪಯುಕ್ತತೆ ಕುರಿತು ಚರ್ಚೆಯಾಗುವುದು ಸಾಮಾನ್ಯ. ಐಟಿ ಬಳಕೆಯಿಂದ ಶಿಕ್ಷಣದ ಗುಣಮಟ್ಟವನ್ನು ಬದಲಿಸಬಹುದು ಎಂಬ ಹೇಳಿಕೆಗಳು, ಅಂತಹ ಹೇಳಿಕೆಗಳಿಗೆ ಬೆಂಬಲವಾಗಿ ನಿಲ್ಲುವ ನೈಜ ಉದಾಹರಣೆಗಳು ನಮ್ಮ ಗಮನಕ್ಕೆ ಬರುವುದೂ ಅಪರೂಪವೇನಲ್ಲ. "ಕಂಪ್ಯೂಟರು - ಮೊಬೈಲು ಬಂದು ವಿದ್ಯಾರ್ಥಿಗಳೆಲ್ಲ ಹಾಳಾಗಿ ಹೋದ್ರು" ಎಂದು ಬೈಯುವವರೂ ಅವುಗಳ ಪರಿಣಾಮಕಾರಿ ಬಳಕೆ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರಬಲ್ಲದು ಎಂದು ಒಪ್ಪುವಂತಹ ಪರಿಸ್ಥಿತಿ ಇದೀಗ ನಿರ್ಮಾಣವಾಗುತ್ತಿದೆ.
ಇಂತಹ ಉದಾಹರಣೆಗಳು ವಿದ್ಯಾರ್ಥಿಗಳ ಬುದ್ಧಿಮತ್ತೆಯನ್ನು ಪೋಷಿಸುವ ಅನೇಕ ಹೊಸ ಮಾರ್ಗಗಳನ್ನು ತೋರಿಸುತ್ತವೆ, ನಿಜ. ಆದರೆ ಬುದ್ಧಿಮತ್ತೆಯೆನ್ನುವುದೇನು ಬರೀ ಮನುಷ್ಯರ ಸ್ವತ್ತೇ? ಜೀವವೇ ಇಲ್ಲದ ಯಂತ್ರಗಳಲ್ಲೂ ಬುದ್ಧಿಮತ್ತೆಯನ್ನು ವಿಕಾಸಗೊಳಿಸಲು ಇದೇ ಮಾಹಿತಿ ತಂತ್ರಜ್ಞಾನದ ಸವಲತ್ತುಗಳನ್ನು ಬಳಸಲಾಗುತ್ತಿದೆ.

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)