ಕೊಳ್ಳೇಗಾಲ ಶರ್ಮ
ದಾಸರು ಹೇಳಿದ್ದರಂತೆ. “ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ”. ಬಹುಶಃ ಇದು ನಮ್ಮ ನಿತ್ಯ ಜೀವನಕ್ಕೆ ಹಿಡಿದ ಕನ್ನಡಿಯಾಗಿರಬಹುದು. ಆದರೆ ಜೀವಿಗಳ ಬದುಕಿನಲ್ಲಿ ತುಂಡು ಬಟ್ಟೆ, ಹೊಟ್ಟೆಗೆ ಎಷ್ಟು ಮಹತ್ವವಿದೆಯೋ ಅಷ್ಟೇ ಮಹತ್ವ ಮರಿ ಮಾಡುವುದಕ್ಕೂ ಇದೆ ಎನ್ನುವುದು ವಿಜ್ಞಾನಿಗಳ ಅಂಬೋಣ. “ನಾವಿಬ್ಬರು, ನಮಗಿಬ್ಬರು” ಎನ್ನುವ ಧ್ಯೇಯ ವಾಕ್ಯವನ್ನೇ ಆದರ್ಶವಾಗಿಟ್ಟುಕೊಂಡಿರುವ ನಮಗೆ ಇದು ತುಸು ವಿಚಿತ್ರ ಎನ್ನಿಸಬಹುದು. ಆದರೆ ಉಂಡು, ತಿಂದು ಬದುಕುಳಿದರೆ ಸಾಲದು. ತಮ್ಮ ಸಂತತಿಯೂ ಬದುಕಿ ಉಳಿಯಬೇಕು ಎನ್ನುವುದೇ ‘ಜೀವ’ ಎನ್ನುವುದರ ಪರಮೋಚ್ಚ ಧ್ಯೇಯ ಎನ್ನುತ್ತದೆ ಡಾರ್ವಿನ್ನನ ವಿಕಾಸವಾದ. ಜೀವಿಗಳ ಎಲ್ಲ ಬಗೆಯ ಹೊಂದಾಣಿಕೆಗಳು ಹಾಗೂ ಹೋರಾಟಗಳೂ ತಾವೆಷ್ಟು ಸಂತಾನವನ್ನು ಉಳಿಸಿ ಹೋಗಬಲ್ಲೆವು ಎನ್ನುವುದಕ್ಕಾಗಿಯೇ ಆಗಿರುವುದಂತೆ.
ಶುಕ್ರವಾರ, ಜೂನ್ 30, 2017
ಬುಧವಾರ, ಜೂನ್ 28, 2017
ನಮ್ಮದೇ ನೇರಪ್ರಸಾರ
ಟಿ. ಜಿ. ಶ್ರೀನಿಧಿ
ಕ್ರಿಕೆಟ್ ಮ್ಯಾಚು, ಸಂಸತ್ ಕಲಾಪಗಳಿಂದ ಪ್ರಾರಂಭಿಸಿ ಸೆಲೆಬ್ರಿಟಿ ಮದುವೆಗಳವರೆಗೆ ಅದೆಷ್ಟೋ ಕಾರ್ಯಕ್ರಮಗಳ ನೇರ ಪ್ರಸಾರ ಟೀವಿ ವಾಹಿನಿಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತದೆ. 'ಲೈವ್' ಎಂದು ಗುರುತಿಸುವುದು ಇಂತಹ ಪ್ರಸಾರವನ್ನೇ.
ಟೀವಿ ಹಾಗೂ ರೇಡಿಯೋ ಮಾಧ್ಯಮಗಳಲ್ಲಿ ಜನಪ್ರಿಯವಾಗಿರುವ ಈ ಪರಿಕಲ್ಪನೆ ಅಂತರಜಾಲ ಲೋಕದಲ್ಲೂ ಅಸ್ತಿತ್ವದಲ್ಲಿದೆ. ಇಲ್ಲಿಯೂ ಇದರ ಹೆಸರು ಲೈವ್ ಎಂದೇ. ಜಾಲತಾಣಗಳ ಮೂಲಕ ಪಠ್ಯ, ಚಿತ್ರಗಳನ್ನೆಲ್ಲ ಹಂಚಿಕೊಂಡ ಹಾಗೆ ವಿಡಿಯೋ ದೃಶ್ಯಾವಳಿಯ ನೇರಪ್ರಸಾರವನ್ನೂ ಹಂಚಿಕೊಳ್ಳಲು ನೆರವಾಗುವುದು ಈ ಪರಿಕಲ್ಪನೆಯ ವೈಶಿಷ್ಟ್ಯ.

ಸೋಮವಾರ, ಜೂನ್ 26, 2017
ನಮ್ಮದೂ ಒಂದು ಮೊಬೈಲ್ ಆಪ್
ಟಿ. ಜಿ. ಶ್ರೀನಿಧಿ
ಸ್ಮಾರ್ಟ್‌ಫೋನುಗಳು ಸರ್ವಾಂತರ್ಯಾಮಿಗಳಾಗಿರುವ ಈ ಕಾಲದಲ್ಲಿ ಎಲ್ಲ ಕೆಲಸಕ್ಕೂ ಒಂದೊಂದು ಆಪ್ ಬಳಸುವುದು ನಮಗೆ ಅಭ್ಯಾಸವಾಗಿಹೋಗಿದೆ. ಬೇರೆಯವರು ರೂಪಿಸಿದ ಇಷ್ಟೆಲ್ಲ ವೈವಿಧ್ಯಮಯ ಆಪ್‌ಗಳನ್ನು ಬಳಸುವಾಗ ನಾವೂ ಒಂದು ಆಪ್ ರೂಪಿಸುವಂತಿದ್ದರೆ ಎನ್ನುವ ಯೋಚನೆ ಕೆಲವರಿಗಾದರೂ ಬಾರದಿರದು.
ನಮಗೆ ಪ್ರೋಗ್ರಾಮಿಂಗ್ ಗೊತ್ತಿಲ್ಲ, ಹಾಗಾಗಿ ಈ ಯೋಚನೆ ಕಾರ್ಯಗತವಾಗುವುದಿಲ್ಲ ಎಂದು ನಿರಾಶರಾಗುವ ಅಗತ್ಯವೇನೂ ಇಲ್ಲ. ಏಕೆಂದರೆ ಪ್ರೋಗ್ರಾಮಿಂಗ್ ಬಾರದವರೂ ಆಪ್ ರೂಪಿಸಿಕೊಳ್ಳಲು ನೆರವಾಗುವ ಸೌಲಭ್ಯಗಳು ಜಾಲಲೋಕದಲ್ಲಿವೆ.

ಗುರುವಾರ, ಜೂನ್ 22, 2017
ಏನಿದು ಓಟಿಪಿ?
ಟಿ. ಜಿ. ಶ್ರೀನಿಧಿ
ಕಾರ್ಡುಗಳನ್ನು, ನೆಟ್‌ಬ್ಯಾಂಕಿಂಗ್ ಸೌಲಭ್ಯವನ್ನು ಬಳಸಿ ಹಣಪಾವತಿಸುವುದು ನಮ್ಮಲ್ಲಿ ಅನೇಕರಿಗೆ ಚೆನ್ನಾಗಿಯೇ ಅಭ್ಯಾಸವಾಗಿದೆ. ಹೀಗೆ ಪಾವತಿಸುವಾಗ ಹಣ ತೆಗೆಯಬೇಕಾದ್ದು ಯಾವ ಖಾತೆಯಿಂದ ಎಂದು ಬ್ಯಾಂಕಿಗೆ ಗೊತ್ತಾಗಬೇಕಲ್ಲ, ನಾವು ಖಾತೆಯ ವಿವರಗಳನ್ನು (ಲಾಗಿನ್, ಅಕೌಂಟ್ ಸಂಖ್ಯೆ ಇತ್ಯಾದಿ) ದಾಖಲಿಸುವುದು ಇದಕ್ಕಾಗಿಯೇ. ಅದನ್ನು ದಾಖಲಿಸುತ್ತಿರುವವರು ನಾವೇ ಎಂದೂ ಗೊತ್ತಾಗಬೇಡವೇ, ಅದಕ್ಕಾಗಿ ಪಾಸ್‌ವರ್ಡನ್ನೂ ಎಂಟರ್ ಮಾಡುತ್ತೇವೆ.
ಆದರೆ ನಮ್ಮ ಪಾಸ್‌ವರ್ಡ್ ನಮಗೆ ಮಾತ್ರ ಗೊತ್ತು ಎಂದು ಏನು ಗ್ಯಾರಂಟಿ? ಅದನ್ನು ಬೇರೆ ಯಾರೋ ಕದ್ದು ತಿಳಿದುಕೊಂಡುಬಿಟ್ಟಿರಬಹುದಲ್ಲ!

ಸೋಮವಾರ, ಜೂನ್ 19, 2017
ಬಗ್ ಮತ್ತು ಡೀಬಗ್
ಟಿ. ಜಿ. ಶ್ರೀನಿಧಿ
ಕಂಪ್ಯೂಟರಿಗಾಗಲೀ ಸ್ಮಾರ್ಟ್‌ಫೋನ್‌ಗಾಗಲಿ ಸ್ವಂತ ಬುದ್ಧಿ ಇರುವುದಿಲ್ಲ. ನಿರ್ದಿಷ್ಟ ಸಂದರ್ಭಗಳಲ್ಲಿ ಹೇಗೆ ಪ್ರತಿಕ್ರಿಯೆ ನೀಡಬೇಕೆಂದು ಅದಕ್ಕೆ ನಿರ್ದೇಶನ ನೀಡಲಾಗಿರುತ್ತದೆಯೋ ಅದರ ವರ್ತನೆ ಅದೇ ರೀತಿಯಾಗಿರುತ್ತದೆ. ಹೀಗೆ ನಿರ್ದೇಶನ ನೀಡುವುದು ಸಾಫ್ಟ್‌ವೇರ್, ಅಂದರೆ ತಂತ್ರಾಂಶದ ಕೆಲಸ.

ಗುರುವಾರ, ಜೂನ್ 15, 2017
RAMಗೂ ROMಗೂ ಏನು ವ್ಯತ್ಯಾಸ?
ಟಿ. ಜಿ. ಶ್ರೀನಿಧಿ
ಕಂಪ್ಯೂಟರ್ ಅಥವಾ ಮೊಬೈಲಿನಲ್ಲಿ ಕೆಲಸಮಾಡುವಾಗ ನಾವು ಒಂದಲ್ಲ ಒಂದು ರೀತಿಯ ಮಾಹಿತಿಯೊಡನೆ ವ್ಯವಹರಿಸುತ್ತಿರುತ್ತೇವೆ. ಕಾಲೇಜಿನ ಪ್ರಾಜೆಕ್ಟ್ ರಿಪೋರ್ಟು, ಕಚೇರಿಯ ಇಮೇಲ್, ಫೋಟೋಶಾಪಿನ ಚಿತ್ರ - ಇವೆಲ್ಲ ಮಾಹಿತಿಯೇ.
ಈ ಮಾಹಿತಿ ಅಂತಿಮವಾಗಿ ಹಾರ್ಡ್ ಡಿಸ್ಕ್‌ನಲ್ಲೋ, ಪೆನ್‌ಡ್ರೈವ್‌ನಲ್ಲೋ, ಮೆಮೊರಿ ಕಾರ್ಡಿನಲ್ಲೋ ಶೇಖರವಾಗುತ್ತದೆ ಸರಿ, ಆದರೆ ನಾವು ಕೆಲಸಮಾಡುತ್ತಿರುವಷ್ಟು ಹೊತ್ತು - ಕಡತವನ್ನು ಉಳಿಸುವ ಮೊದಲು - ಇದೆಲ್ಲ ಎಲ್ಲಿರುತ್ತದೆ?

ಸೋಮವಾರ, ಜೂನ್ 12, 2017
ಟ್ರೋಜನ್ ಹಾರ್ಸ್ ಎಂಬ ಮೋಸದ ಕತೆ
ಟಿ. ಜಿ. ಶ್ರೀನಿಧಿ
ಟ್ರೋಜನ್ ಯುದ್ಧದಲ್ಲಿ ಬಸವಳಿದಿದ್ದ ಗ್ರೀಕರು ದೊಡ್ಡದೊಂದು ಮರದ ಕುದುರೆಯ ಸಹಾಯದಿಂದ ಟ್ರಾಯ್ ನಗರವನ್ನು ಗೆದ್ದರು ಎನ್ನುವುದು ಇತಿಹಾಸ. ನೋಡಲು ನಿರುಪದ್ರವಿಯಾಗಿ ಕಾಣುತ್ತಿದ್ದ ಆ ಕುದುರೆಯೊಳಗೆ ('ಟ್ರೋಜನ್ ಹಾರ್ಸ್') ಸೈನಿಕರು ಅವಿತುಕೊಂಡು ಟ್ರಾಯ್ ನಗರದವರನ್ನು ಮೋಸಗೊಳಿಸಿದ್ದರಂತೆ.
ಇದೇ ರೀತಿ ನಿರಪಾಯಕಾರಿ ತಂತ್ರಾಂಶದ ಸೋಗಿನಲ್ಲಿ ಬರುವ ಕುತಂತ್ರಾಂಶಗಳು ಕಂಪ್ಯೂಟರ್ ಪ್ರಪಂಚದಲ್ಲಿವೆ. ಹೀಗಾಗಿಯೇ ಅವನ್ನು ಟ್ರೋಜನ್ ಹಾರ್ಸ್ ಅಥವಾ 'ಟ್ರೋಜನ್'ಗಳೆಂದು ಕರೆಯುತ್ತಾರೆ. ದತ್ತಾಂಶವನ್ನು ಅಥವಾ ಕಡತಗಳನ್ನು ಹಾಳುಮಾಡುವುದು, ಇತರ ಕುತಂತ್ರಾಂಶಗಳನ್ನು ಇನ್‌ಸ್ಟಾಲ್ ಮಾಡುವುದು, ಬಳಕೆದಾರರ ಖಾಸಗಿ ಮಾಹಿತಿಯನ್ನು ಕದಿಯುವುದು - ಹೀಗೆ ಟ್ರೋಜನ್‌ಗಳಿಗೆ ಅನೇಕ ಉದ್ದೇಶಗಳಿರುವುದು ಸಾಧ್ಯ.

ಗುರುವಾರ, ಜೂನ್ 8, 2017
ರಾಧಾಕೃಷ್ಣ ಭಡ್ತಿ ಹೇಳುತ್ತಾರೆ... "ಈ ಪತ್ರಿಕೆ ಅಪ್ಪಟ ಓದುಗರಿಗಾಗಿ. ಓದಿ ಎಚ್ಚರಗೊಳ್ಳುವವರಿಗಾಗಿ."
ವಿಶ್ವ ಪರಿಸರ ದಿನದ ಸುತ್ತಮುತ್ತಲಲ್ಲೇ ಕನ್ನಡಕ್ಕೆ ಹೊಸತೊಂದು ಪರಿಸರ - ವಿಜ್ಞಾನ ಪತ್ರಿಕೆ ದೊರಕುತ್ತಿದೆ. ಜಲ ಪತ್ರಕರ್ತ ರಾಧಾಕೃಷ್ಣ ಭಡ್ತಿಯವರ ನೇತೃತ್ವದಲ್ಲಿ ಭೂಮಿಗೀತ ಮೀಡಿಯಾ ಸಂಸ್ಥೆ ಹೊರತರುತ್ತಿರುವ ಈ ಪತ್ರಿಕೆಯ ಹೆಸರೇ 'ಹಸಿರುವಾಸಿ'. ಸಮಾಜಜಾಲಗಳಲ್ಲಿ ಸಾಕಷ್ಟು ಕುತೂಹಲಮೂಡಿಸಿರುವ 'ಹಸಿರುವಾಸಿ' ಇದೇ ಜೂನ್ ೧೦ರ ಶನಿವಾರ ಸಂಜೆ ಬೆಂಗಳೂರಿನಲ್ಲಿ ಲೋಕಾರ್ಪಣೆಯಾಗುತ್ತಿದೆ. ಲೋಕಾರ್ಪಣೆಯ ಹೊಸ್ತಿಲಲ್ಲಿರುವ ಹೊಸ ಪತ್ರಿಕೆಯ ಸಂಪಾದಕರೊಡನೆ ಹೀಗೊಂದು ಲೋಕಾಭಿರಾಮ...
ಏನಿದು ಭೂಮಿಗೀತ?
ಇದೊಂದು ಮಾಧ್ಯಮ ಸಂಸ್ಥೆ. ಈವರೆಗೆ ವೈಯಕ್ತಿಕ ನೆಲೆಯಲ್ಲಿ ೧೭ ವರ್ಷಗಳಿಂದ ಮಾಡಿಕೊಂಡು ಬಂದಿದ್ದ ನೀರಿನ ಕೆಲಸವನ್ನು ಭೂಮಿಗೀತದ ಮೂಲಕ ಸಾಂಸ್ಥಿಕ ಸ್ವರೂಪದಲ್ಲಿ ರಾಜ್ಯಾದ್ಯಂತ ಕೈಗೊಳ್ಳಲು ನಿರ್ಧರಿಸಿದ್ದೇನೆ. ಜತೆಗೆ ಕೃಷಿ, ಪರಿಸರ, ಗ್ರಾಮೀಣ ಬದುಕು ಮತ್ತು ವಿಜ್ಞಾನದ ಕುರಿತಾದ ಕನ್ನಡದಲ್ಲೊಂದು ವಿನೂತನ ಪಾಕ್ಷಿಕ 'ಹಸಿರುವಾಸಿ' ಜೂನ್ ೧೦ರಂದು ಬಿಡುಗಡೆಗೊಳ್ಳಲಿದೆ.

ಸೋಮವಾರ, ಜೂನ್ 5, 2017
ವಿಶ್ವ ಪರಿಸರ ದಿನ ವಿಶೇಷ: ಈ ಜಗವೆಲ್ಲ ನನ್ನದೇ..?
ಪರಿಸರ - ವನ್ಯಜೀವನ ಕುರಿತು ಹಲವು ಬರಹಗಳನ್ನು - ಪುಸ್ತಕಗಳನ್ನು ರಚಿಸಿರುವ, 'ಕಾಡು ಕಲಿಸುವ ಪಾಠ' ಕೃತಿಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ (೨೦೧೩) ಪಡೆದಿರುವ ಲೇಖಕ ಶ್ರೀ ಟಿ. ಎಸ್. ಗೋಪಾಲ್ ಅವರ ಚಿಂತನ ಬರಹಗಳ ಸಂಕಲನ 'ಕೀರುತಿಯ ಬೆನ್ನು ಹತ್ತಿ...' ಸದ್ಯದಲ್ಲೇ ಪ್ರಕಟವಾಗಲಿದೆ. ಈ ಸಂಕಲನದಿಂದ ಆಯ್ದ ಒಂದು ಬರಹವನ್ನು ವಿಶ್ವ ಪರಿಸರ ದಿನದ ಅಂಗವಾಗಿ ಇಜ್ಞಾನ ಡಾಟ್ ಕಾಮ್ ಪ್ರಕಟಿಸುತ್ತಿದೆ.
ಟಿ. ಎಸ್. ಗೋಪಾಲ್
ಮನುಷ್ಯ ಈ ಪ್ರಪಂಚದಲ್ಲಿ ಅವತರಿಸಿ ಕೆಲವು ಸಾವಿರ ವರುಷಗಳು ಕಳೆದಿರಬಹುದೇನೋ. ಆದರೆ, ಅಮೀಬಾದಂಥ ಏಕಾಣುಜೀವಿಯಿಂದ ಹಿಡಿದು ಆನೆಯಂಥ ದೊಡ್ಡಪ್ರಾಣಿಯವರೆಗೆ ಅಸಂಖ್ಯಜೀವಿಗಳು ಅದೆಷ್ಟೋ ಸಾವಿರ, ಅಷ್ಟೇ ಏಕೆ, ಲಕ್ಷಾಂತರ ವರುಷಗಳಿಂದಲೂ ಈ ಭೂಮಿಯ ಮೇಲೆ ಜೀವಿಸಿಕೊಂಡು ಬಂದಿವೆ. ಆದರೂ ಇವೆಲ್ಲಕ್ಕಿಂತ ಈಚಿನವನಾದ ಮನುಷ್ಯನೇ ಎಲ್ಲ ಪ್ರಾಣಿಗಳಲ್ಲಿ ಅತಿ ಬುದ್ಧಿವಂತ ಎಂದು ತಾನೇ ಹೇಳಿಕೊಂಡ. ಇವನ ಈ ಅತಿಬುದ್ಧಿವಂತಿಕೆಯೇ ಉಳಿದೆಲ್ಲ ಪ್ರಾಣಿಗಳ ಅಸ್ತಿತ್ವಕ್ಕೆ ಮಾರಕವಾಗಿಬಿಟ್ಟಿದೆ ಎನ್ನುವುದೇ ವಿಪರ್ಯಾಸ.

ಗುರುವಾರ, ಜೂನ್ 1, 2017
ಒಂದಷ್ಟು ಮಾತು, 'ಫಾಂಟ್' ಕುರಿತು...
ಟಿ. ಜಿ. ಶ್ರೀನಿಧಿ
ಮಾಹಿತಿಯ ಮಹಾಪೂರವೇ ನಮ್ಮನ್ನು ಆವರಿಸಿರುವುದು ಹೊಸ ಸಂಗತಿಯೇನಲ್ಲ. ಅದರಲ್ಲಿ ಪಠ್ಯರೂಪದ ಮಾಹಿತಿಯ ಪಾಲು ಬಹಳ ದೊಡ್ಡದು. ನೀವು ಓದುತ್ತಿರುವ ಪತ್ರಿಕೆ, ಕಂಪ್ಯೂಟರಿನಲ್ಲಿ ತೆರೆದಿರುವ ವೆಬ್‌ಸೈಟು, ಮೊಬೈಲ್ ಪರದೆಯಲ್ಲಿ ಕಾಣಿಸಿಕೊಂಡಿರುವ ಹೊಸ ವಾಟ್ಸ್‌ಆಪ್ ಸಂದೇಶ - ಒಂದಲ್ಲ ಒಂದು ಬಗೆಯಲ್ಲಿ ಪಠ್ಯರೂಪದ ಮಾಹಿತಿ ನಮ್ಮೆದುರು ಕಾಣಿಸಿಕೊಳ್ಳುತ್ತಲೇ ಇರುತ್ತದೆ.
ಈ ಮಾಹಿತಿಯೆಲ್ಲ ನಮಗೆ ತಲುಪಬೇಕಾದರೆ ಅದನ್ನು ಯಾರೋ ಒಬ್ಬರು ಕಂಪ್ಯೂಟರಿನಲ್ಲಿ ಅಥವಾ ಮೊಬೈಲಿನಲ್ಲಿ ಟೈಪಿಸಬೇಕು ತಾನೆ, ಹಾಗೆ ಮಾಡಲು ಅಕ್ಷರಶೈಲಿಗಳು ಬೇಕು.

ಸೋಮವಾರ, ಮೇ 29, 2017
'ಅನ್‌ಬಾಕ್ಸ್‌ಡ್' ಮೊಬೈಲಿಗೂ 'ರೀಫರ್ಬಿಶ್‌ಡ್' ಮೊಬೈಲಿಗೂ ವ್ಯತ್ಯಾಸವೇನು?
ಟಿ. ಜಿ. ಶ್ರೀನಿಧಿ
ಹೊಸ ಮಾದರಿ ಮೊಬೈಲ್ ಫೋನುಗಳನ್ನು ಪರಿಚಯಿಸುವ ವೀಡಿಯೋಗಳನ್ನು ನೀವು ಯೂಟ್ಯೂಬ್‌ನಲ್ಲಿ ನೋಡಿರಬಹುದು. ಇಂತಹ ಬಹುತೇಕ ವೀಡಿಯೋಗಳು ಪ್ರಾರಂಭವಾಗುವುದು ಮೊಬೈಲ್ ಇಟ್ಟಿರುವ ಪೆಟ್ಟಿಗೆಯನ್ನು (ಬಾಕ್ಸ್) ತೆರೆದು ಅದರೊಳಗೆ ಏನೆಲ್ಲ ಇದೆ ಎಂದು ಹೇಳುವ ಮೂಲಕ. ಹಾಗಾಗಿಯೇ ಈ ಪರಿಚಯಗಳನ್ನು 'ಅನ್‌ಬಾಕ್ಸಿಂಗ್' ಎಂದೂ ಕರೆಯುತ್ತಾರೆ.
ಈ ಪರಿಕಲ್ಪನೆಗೆ ಇನ್ನೊಂದು ಆಯಾಮವೂ ಇದೆ. ಆನ್‌ಲೈನ್ ಅಂಗಡಿಗಳಿಂದ ಮೊಬೈಲ್ ತರಿಸುವ ನಾವು ಮನೆಯಲ್ಲೇ ಅನ್‌ಬಾಕ್ಸ್ ಮಾಡುತ್ತೇವೆ: ಪ್ಲಾಸ್ಟಿಕ್ ಹೊರಕವಚವನ್ನು ಹರಿದು, ಪೆಟ್ಟಿಗೆಯ ಮೇಲಿನ ಸೀಲ್ ಒಡೆದು ಮೊಬೈಲನ್ನು ಹೊರತೆಗೆಯುತ್ತೇವೆ.
ಇದರ ನಂತರದಲ್ಲೂ ಮೊಬೈಲನ್ನು ಅಂಗಡಿಗೆ ಮರಳಿಸುವಂತಹ ಸನ್ನಿವೇಶ ಕೆಲವೊಮ್ಮೆ ಎದುರಾಗುತ್ತದೆ.

ಗುರುವಾರ, ಮೇ 25, 2017
ಬ್ಲೂಟೂತ್: ಒಂದು ಪರಿಚಯ
ಟಿ. ಜಿ. ಶ್ರೀನಿಧಿ
ವಿಚಿತ್ರ ಹೆಸರಿನಿಂದ ಗಮನಸೆಳೆಯುವ ತಂತ್ರಜ್ಞಾನಗಳ ಪೈಕಿ 'ಬ್ಲೂಟೂತ್'ಗೆ ವಿಶೇಷ ಸ್ಥಾನವಿದೆ. ಪರಸ್ಪರ ಸಮೀಪದಲ್ಲಿರುವ ವಿದ್ಯುನ್ಮಾನ ಸಾಧನಗಳ ನಡುವೆ ನಿಸ್ತಂತು (ವೈರ್‌ಲೆಸ್) ಸಂವಹನ ಹಾಗೂ ಕಡತಗಳ ವಿನಿಮಯವನ್ನು ಸಾಧ್ಯವಾಗಿಸುವುದು ಈ ತಂತ್ರಜ್ಞಾನದ ವೈಶಿಷ್ಟ್ಯ.
ಮೊದಲಿಗೆ ಮೊಬೈಲ್ ಫೋನುಗಳ ನಡುವೆ ಮಾಹಿತಿ ವಿನಿಮಯ ಮಾಡಿಕೊಳ್ಳಲು ಬ್ಲೂಟೂತ್ ತಂತ್ರಜ್ಞಾನ ವ್ಯಾಪಕವಾಗಿ ಬಳಕೆಯಾಗುತ್ತಿತ್ತು. ಈಚೆಗೆ ವೈ-ಫೈ ತಂತ್ರಜ್ಞಾನ ಆಧರಿತ 'ಶೇರ್‌ಇಟ್'ನಂತಹ ಸೌಲಭ್ಯಗಳು ಬಂದಮೇಲೆ ಆ ಬಗೆಯ ಬಳಕೆ ಕೊಂಚ ಕಡಿಮೆಯಾಗಿದೆ.

ಸೋಮವಾರ, ಮೇ 22, 2017
ಗೂಗಲ್ ಗುರುವಿನ ಒಂದಷ್ಟು ಗುಟ್ಟುಗಳು
ಟಿ. ಜಿ. ಶ್ರೀನಿಧಿ
ವಿಶ್ವವ್ಯಾಪಿ ಜಾಲದಲ್ಲಿ ಏನು ಮಾಹಿತಿ ಬೇಕಿದ್ದರೂ ಅದನ್ನು ಗೂಗಲ್‌ನಲ್ಲಿ ಹುಡುಕಿಕೊಳ್ಳುವುದು ನಮ್ಮೆಲ್ಲರ ಅಭ್ಯಾಸ. ಹೀಗೆ ಹುಡುಕಲು ಹೊರಟಾಗ ನಾವು ಟೈಪ್ ಮಾಡುತ್ತೇವಲ್ಲ ಪದಗಳು, ಅವನ್ನು ಕೀವರ್ಡ್‌ಗಳೆಂದು (ಕನ್ನಡದಲ್ಲಿ 'ಹುಡುಕುಪದ') ಕರೆಯುತ್ತಾರೆ. ನಾವು ಹುಡುಕುತ್ತಿರುವ ವಿಷಯವನ್ನು ಆದಷ್ಟೂ ನಿಖರವಾಗಿ ಪ್ರತಿನಿಧಿಸುವ ಕೀವರ್ಡ್‌ಗಳನ್ನು ಆರಿಸಿಕೊಂಡರೆ ನಮಗೆ ಸರಿಯಾದ ಮಾಹಿತಿ ಸಿಗುವ ಸಾಧ್ಯತೆ ಜಾಸ್ತಿ. ಅಷ್ಟೇ ಅಲ್ಲ, ಪಠ್ಯ-ಚಿತ್ರ-ವೀಡಿಯೋ ಮುಂತಾದ ಹಲವು ರೂಪಗಳ ಪೈಕಿ ನಾವು ಯಾವ ಬಗೆಯ ಮಾಹಿತಿಯನ್ನು ಹುಡುಕುತ್ತಿದ್ದೇವೆ ಎನ್ನುವುದನ್ನೂ ನಾವು ಗೂಗಲ್‌ಗೆ ಹೇಳಬಹುದು.

ಗುರುವಾರ, ಮೇ 18, 2017
ಮೊಬೈಲ್ ಫೋನಿನ ವಿಧವಿಧ ರೂಪ
ಟಿ. ಜಿ. ಶ್ರೀನಿಧಿ
ಮಾರುಕಟ್ಟೆಯಲ್ಲಿ ದೊರಕುವ ಮೊಬೈಲ್ ಫೋನುಗಳಲ್ಲಿ ನೂರೆಂಟು ವಿಧ - ಬೇರೆಬೇರೆ ನಿರ್ಮಾತೃಗಳು, ಬೇರೆಬೇರೆ ಗಾತ್ರ, ಬೇರೆಬೇರೆ ಸವಲತ್ತುಗಳನ್ನು ಇಲ್ಲಿ ನಾವು ಕಾಣಬಹುದು. ವೈವಿಧ್ಯ ಕಡಿಮೆಯಿರುವುದು ಬಹುಶಃ ಮೊಬೈಲುಗಳ ಆಕಾರ ಹಾಗೂ ಸ್ವರೂಪದಲ್ಲಿ ಮಾತ್ರವೇ ಇರಬೇಕು.

ಸೋಮವಾರ, ಮೇ 15, 2017
ಜಿಯೋಫೆನ್ಸಿಂಗ್ ಎಂಬ ಡಿಜಿಟಲ್ ಬೇಲಿ
ಟಿ. ಜಿ. ಶ್ರೀನಿಧಿ
ಹೋಟಲಿನಿಂದ ಊಟ-ತಿಂಡಿ ತರಿಸಲು, ಎಲ್ಲಿಗೋ ಹೋಗಬೇಕಾದಾಗ ಆಟೋ-ಟ್ಯಾಕ್ಸಿ ಕರೆಸಲು ಮೊಬೈಲ್ ಆಪ್ ಬಳಸುವ ಅಭ್ಯಾಸ ನಗರಗಳಲ್ಲಿ ವ್ಯಾಪಕವಾಗಿದೆ. ಇಂತಹ ಆಪ್‌ಗಳನ್ನು ಬಳಸುವಾಗ ನಾವೊಂದು ಕುತೂಹಲದ ಸಂಗತಿಯನ್ನು ಗಮನಿಸಬಹುದು - ಒಂದೇ ಆಪ್‌ನಲ್ಲಿ ನಮ್ಮ ಮನೆ ವಿಳಾಸ ಹಾಕಿದಾಗ ದೊರಕುವ ಹೋಟಲುಗಳ ಪಟ್ಟಿಗೂ ಪಕ್ಕದ ಬೀದಿಗೆ ಊಟ ತಂದುಕೊಡಬಲ್ಲ ಹೋಟಲುಗಳ ಪಟ್ಟಿಗೂ ನಡುವೆ ಕೆಲವೊಮ್ಮೆ ವ್ಯತ್ಯಾಸಗಳಿರುತ್ತವೆ;

ಗುರುವಾರ, ಮೇ 11, 2017
ಹೂ ಇಸ್ WHOIS?
ಟಿ. ಜಿ. ಶ್ರೀನಿಧಿ
ವಿಶ್ವವ್ಯಾಪಿ ಜಾಲದಲ್ಲಿ (ವರ್ಲ್ಡ್‌ವೈಡ್ ವೆಬ್) ಅಪಾರ ಸಂಖ್ಯೆಯ ಜಾಲತಾಣಗಳಿವೆ. ಹೊರಪ್ರಪಂಚದ ಸೈಟುಗಳಂತೆಯೇ ವೆಬ್‌ಲೋಕದ ಈ ಸೈಟುಗಳಿಗೂ ಮಾಲೀಕರಿರುತ್ತಾರೆ. ಮನೆಕಟ್ಟಲು ಸೈಟು ಕೊಳ್ಳುವಾಗ ಮಾಡುವಂತೆ ಜಾಲತಾಣವನ್ನು ನೋಂದಾಯಿಸುವಾಗಲೂ ಅದನ್ನು ಕೊಳ್ಳುತ್ತಿರುವವರು ಯಾರು ಎನ್ನುವುದರ ಬಗ್ಗೆ ಮಾಹಿತಿ ನೀಡಬೇಕಾದ್ದು ಕಡ್ಡಾಯ.
ಜಾಲತಾಣಗಳನ್ನು ನಮ್ಮ ಹೆಸರಿಗೆ ನೋಂದಾಯಿಸಿಕೊಡುವ 'ರಿಜಿಸ್ಟ್ರಾರ್'ಗಳೆಂಬ ಸಂಸ್ಥೆಗಳು 'ದಿ ಇಂಟರ್‌ನೆಟ್ ಕಾರ್ಪೊರೇಶನ್ ಫಾರ್ ಅಸೈನ್ಡ್ ನೇಮ್ಸ್ ಆಂಡ್ ನಂಬರ್ಸ್' (ಐಕ್ಯಾನ್) ಎಂಬ ಜಾಗತಿಕ ಸಂಘಟನೆಯ ಪರವಾಗಿ ಈ ಮಾಹಿತಿಯನ್ನು ಸಂಗ್ರಹಿಸಿ ಶೇಖರಿಸಿಡುತ್ತವೆ.

ಸೋಮವಾರ, ಮೇ 8, 2017
ಇದು ಜೂಮ್ ಸಮಾಚಾರ!
ಟಿ. ಜಿ. ಶ್ರೀನಿಧಿ
ಕ್ಯಾಮೆರಾಗಳ ಬಗ್ಗೆ ಮಾತನಾಡುವಾಗ ಸಾಮಾನ್ಯವಾಗಿ ಪ್ರಸ್ತಾಪವಾಗುವ ವಿಷಯ 'ಜೂಮ್'. ಕ್ಯಾಮೆರಾ ಮುಂದಿನ ದೃಶ್ಯದ ನಿರ್ದಿಷ್ಟ ಭಾಗವನ್ನು ಹಿಗ್ಗಿಸಿ ತೋರಿಸುವ ಸೌಲಭ್ಯ ಇದು.
ಜೂಮ್‌ನಲ್ಲಿ ಎರಡು ವಿಧ - ಆಪ್ಟಿಕಲ್ ಜೂಮ್ ಹಾಗೂ ಡಿಜಿಟಲ್ ಜೂಮ್.

ಗುರುವಾರ, ಮೇ 4, 2017
ಹೆದರಿಸುವ ವ್ಯವಹಾರ
ಟಿ. ಜಿ. ಶ್ರೀನಿಧಿ
"ನಿಮ್ಮ ಕಂಪ್ಯೂಟರಿಗೆ ವೈರಸ್ ಬಂದಿದೆ", "ನಿಮ್ಮ ಫೋನಿನ ಮಾಹಿತಿ ಸುರಕ್ಷಿತವಾಗಿಲ್ಲ" ಎಂದೆಲ್ಲ ಹೆದರಿಸುವ ಜಾಹೀರಾತುಗಳು ಹಲವು ಜಾಲತಾಣಗಳಲ್ಲಿ ಕಾಣಿಸಿಕೊಳ್ಳುವುದನ್ನು ನೀವು ಗಮನಿಸಿರಬಹುದು. ನಾವು ಬಳಸುತ್ತಿರುವ ಆಂಟಿವೈರಸ್ ತಂತ್ರಾಂಶ ಇಂತಹುದೊಂದು ಸಂದೇಶ ಪ್ರದರ್ಶಿಸಿದರೆ ಓಕೆ, ಆದರೆ ಯಾವುದೋ ಜಾಲತಾಣದಲ್ಲಿ ಕಾಣಿಸಿಕೊಳ್ಳುವ ಜಾಹೀರಾತಿಗೆ ನಮ್ಮ ಕಂಪ್ಯೂಟರಿನ ಆರೋಗ್ಯ ಕೆಟ್ಟಿದ್ದು ಗೊತ್ತಾಗುವುದು ಹೇಗೆ?

ಸೋಮವಾರ, ಮೇ 1, 2017
ಕೀಬೋರ್ಡ್ ಕೆಲಸಮಾಡುವುದು ಹೇಗೆ?
ಟಿ. ಜಿ. ಶ್ರೀನಿಧಿ
ಕಂಪ್ಯೂಟರ್ ಬಳಕೆದಾರರಿಗೆಲ್ಲ ಚಿರಪರಿಚಿತ ಯಂತ್ರಾಂಶ ಕೀಬೋರ್ಡ್. ಕೀಲಿಗಳನ್ನು ಒತ್ತುವ ಮೂಲಕ ಬಳಕೆದಾರರು ಹೇಳಹೊರಟಿರುವುದನ್ನು ಕಂಪ್ಯೂಟರಿಗೆ ತಲುಪಿಸುವುದು ಈ ಸಾಧನದ ಜವಾಬ್ದಾರಿ. ನೋಡಲು ಅದೆಷ್ಟು ಸರಳವೆಂದು ತೋರಿದರೂ ಕೀಬೋರ್ಡ್ ಮಾಡುವ ಕೆಲಸ ಸಾಕಷ್ಟು ಸಂಕೀರ್ಣವಾದ್ದು.

ಗುರುವಾರ, ಏಪ್ರಿಲ್ 27, 2017
ಡಿಜಿಟಲ್ ಸಿಗ್ನೇಚರ್: ಇದು ಇ-ಲೋಕದ ಆಟೋಗ್ರಾಫ್!
ಟಿ. ಜಿ. ಶ್ರೀನಿಧಿ
ಪತ್ರಗಳು, ಕಡತಗಳು ಭೌತಿಕ ರೂಪದಲ್ಲಿದ್ದಾಗ ಅವುಗಳ ಅಧಿಕೃತತೆಯನ್ನು ಪರಿಶೀಲಿಸುವುದು ಸುಲಭವಿತ್ತು. ಪತ್ರದ ಕೊನೆಯಲ್ಲಿ ಯಾರ ಸಹಿಯಿದೆ, ಜೊತೆಗಿರುವ ಮೊಹರಿನಲ್ಲಿ ಅವರ ಹುದ್ದೆಯ ಯಾವ ವಿವರಗಳಿವೆ ಎನ್ನುವುದನ್ನು ನೋಡಿದರೆ ಪತ್ರ ಅಧಿಕೃತವೋ ಅಲ್ಲವೋ ಎನ್ನುವುದನ್ನು ನಾವು ಅಂದಾಜಿಸಬಹುದಿತ್ತು.
ಆದರೆ ಈಗ ಪತ್ರಗಳು - ದಾಖಲೆಗಳು ಭೌತಿಕ ರೂಪದಲ್ಲಿರುವುದೇ ಅಪರೂಪ. ಇಂತಹ ಕಡತಗಳು ಅಧಿಕೃತವೋ ಅಲ್ಲವೋ ಎಂದು ತಿಳಿಯುವುದು ಹೇಗೆ?

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)