ಟಿ. ಜಿ. ಶ್ರೀನಿಧಿ
ಹಲವು ದಶಕಗಳ ಹಿಂದೆ ಫೋನುಗಳೇ ಅಪರೂಪವಾಗಿದ್ದವು. ಆಮೇಲೆ, ಮೊಬೈಲ್ ಬಂದ ಹೊಸತರಲ್ಲೂ ಅಷ್ಟೇ. ಅಪರೂಪದ ಜೊತೆಗೆ ದುಬಾರಿಯೂ ಆಗಿದ್ದ ಅವನ್ನು ನಾವು ಹೆಚ್ಚಾಗಿ ಬಳಸುತ್ತಿರಲಿಲ್ಲ.
ತಂತ್ರಜ್ಞಾನ ಬೆಳೆದಂತೆ ಮೊಬೈಲುಗಳಲ್ಲಿ ಹೆಚ್ಚಿನ ಸೌಲಭ್ಯಗಳು ಬಂದವು, ಅವುಗಳ ಜನಪ್ರಿಯತೆಯೂ ಹೆಚ್ಚಾಯಿತು. ಅಷ್ಟೇ ಅಲ್ಲದೆ ಅವುಗಳನ್ನು ಬಳಸಲು ಮಾಡಬೇಕಾದ ವೆಚ್ಚ ಕೂಡ ಗಮನಾರ್ಹವಾಗಿ ಕಡಿಮೆಯಾಯಿತು.
ಇದರ ಪರಿಣಾಮ? ದಿನನಿತ್ಯ ನಾವೆಲ್ಲ ಮೊಬೈಲ್ ಬಳಸುವ ಅವಧಿಯಲ್ಲಿ ತೀವ್ರ ಹೆಚ್ಚಳ ಕಂಡುಬಂದಿದೆ. ಬೆಳಿಗ್ಗೆ ಎದ್ದ ಕ್ಷಣದಿಂದ ರಾತ್ರಿ ಮಲಗುವತನಕ ನಾವು ಪದೇಪದೇ ನಮ್ಮ ಮೊಬೈಲನ್ನು ನೋಡುತ್ತಿರುತ್ತೇವೆ. ನಿದ್ರೆಯ ನಡುವೆ ಎಚ್ಚರವಾದಾಗ ಕೂಡ ಒಮ್ಮೆ ಮೊಬೈಲಿನ ಪರದೆಯೊಳಗೆ ಇಣುಕಿನೋಡುವ ಜನರೂ ಇದ್ದಾರೆ.
ಮೊಬೈಲಿನ ಬಳಕೆ ಒಂದು ಚಟವಾಗಿ ಪರಿಣಮಿಸಿರುವುದಕ್ಕೆ ಕಾರಣವಾಗಿರುವುದು ಈ ಬೆಳವಣಿಗೆಗಳೇ.
ಗುರುವಾರ, ಫೆಬ್ರವರಿ 28, 2019
ಗುರುವಾರ, ಫೆಬ್ರವರಿ 21, 2019
ತಾಯ್ನುಡಿ ದಿನ ವಿಶೇಷ: ನಮ್ಮ ಭಾಷೆ ಮತ್ತು ತಂತ್ರಜ್ಞಾನ
ಟಿ. ಜಿ. ಶ್ರೀನಿಧಿ
ತಂತ್ರಜ್ಞಾನ, ಅದರಲ್ಲೂ ಮಾಹಿತಿ ತಂತ್ರಜ್ಞಾನ ಎಂದಕೂಡಲೇ ಕೇಳಸಿಗುವ ಆರೋಪ: ಅದರಿಂದ ನಮ್ಮ ಭಾಷೆಗೆ ತೊಂದರೆಯಾಗಿದೆ ಅಥವಾ ಆಗುತ್ತಿದೆ ಎನ್ನುವುದು. ಇದು ಕೊಂಚಮಟ್ಟಿಗೆ ನಿಜವೂ ಹೌದು. ಪ್ರಪಂಚದಲ್ಲಿರುವ ಸಾವಿರಾರು ಭಾಷೆಗಳ ಪೈಕಿ ಶೇ. ೯೬ರಷ್ಟನ್ನು ಬಳಸುವವರು ನಮ್ಮ ಜನಸಂಖ್ಯೆಯ ಶೇ. ೪ರಷ್ಟು ಮಂದಿ ಮಾತ್ರ ಎಂದು ವಿಶ್ವಸಂಸ್ಥೆಯ ಜಾಲತಾಣವೇ ಹೇಳುತ್ತದೆ. ಇಂತಹ ಭಾಷೆಗಳಿಗೆ ಶಿಕ್ಷಣ ವ್ಯವಸ್ಥೆಯಲ್ಲೂ ಮಾಹಿತಿ ತಂತ್ರಜ್ಞಾನದ ಜಗತ್ತಿನಲ್ಲೂ ಪ್ರಾಮುಖ್ಯ ದೊರಕದಿದ್ದರೆ ಅವುಗಳ ಬಳಕೆ ಇನ್ನಷ್ಟು ಕಡಿಮೆಯಾಗುವುದು, ಬೆಳವಣಿಗೆ ಕುಂಠಿತವಾಗುವುದು ಸಹಜವೇ.
ಹೌದು, ಇಂದಿನ ಬದುಕಿನಲ್ಲಿ ಮಾಹಿತಿ ತಂತ್ರಜ್ಞಾನದ ಪಾತ್ರ ಮಹತ್ವದ್ದು. ಬೆಳಗಿನಿಂದ ರಾತ್ರಿಯವರೆಗೆ ಒಂದಲ್ಲ ಒಂದು ರೂಪದಲ್ಲಿ ಮಾಹಿತಿ ತಂತ್ರಜ್ಞಾನದ ಸವಲತ್ತುಗಳನ್ನು ನಾವೆಲ್ಲ ಬಳಸುತ್ತಲೇ ಇರುತ್ತೇವೆ. ಈ ವ್ಯವಹಾರವನ್ನೆಲ್ಲ ನಮ್ಮ ಭಾಷೆಯಲ್ಲೇ ನಡೆಸುವಂತಾದರೆ ಭಾಷೆ-ತಂತ್ರಜ್ಞಾನಗಳೆರಡರ ವ್ಯಾಪ್ತಿಯೂ ಹೆಚ್ಚುತ್ತದೆ, ಎರಡೂ ಪರಸ್ಪರ ಪೂರಕವಾಗಿ ಬೆಳೆಯುತ್ತವೆ.

ಬುಧವಾರ, ಫೆಬ್ರವರಿ 20, 2019
ಸ್ಯಾಟೆಲೈಟ್ ಫೋನ್ ಸಮಾಚಾರ
ಬೆಂಗಳೂರಿನಲ್ಲಿ ಇಂದು ಪ್ರಾರಂಭವಾಗುತ್ತಿರುವ ಏರೋ ಇಂಡಿಯಾ ಪ್ರದರ್ಶನದ ಆಯೋಜಕರು ಸ್ಯಾಟೆಲೈಟ್ ಫೋನುಗಳನ್ನು ಬಳಸಲಿದ್ದಾರಂತೆ. ಈ ಫೋನಿನ ವೈಶಿಷ್ಟ್ಯವೇನು? ನಮ್ಮ ಮೊಬೈಲಿಗೂ ಈ ಫೋನಿಗೂ ಏನು ವ್ಯತ್ಯಾಸ?
ಟಿ. ಜಿ. ಶ್ರೀನಿಧಿ
ಮೊಬೈಲ್ ಫೋನುಗಳ ಬಗ್ಗೆ ನಮಗೆಲ್ಲ ಬಹಳ ಪ್ರೀತಿ. ಬೆಳಗಿನಿಂದ ರಾತ್ರಿವರೆಗೆ ನಮ್ಮ ಜೊತೆಯಲ್ಲೇ ಇರುವ ಸಂಗತಿಗಳ ಸಾಲಿನಲ್ಲೂ ಅದಕ್ಕೆ ವಿಶೇಷ ಸ್ಥಾನ. ಹೀಗಾಗಿಯೇ ಮೊಬೈಲ್ ತಯಾರಕರಿಗೂ ನಮ್ಮ ಮಾರುಕಟ್ಟೆಯ ಕುರಿತು ವಿಶೇಷ ಅಕ್ಕರೆ. ದಿನ ಬೆಳಗಾದರೆ ನಮ್ಮ ಮಾರುಕಟ್ಟೆಯಲ್ಲಿ ಹೊಸ ಮಾದರಿಗಳ ಮೆರವಣಿಗೆ.
ಮೊಬೈಲ್ ಫೋನನ್ನು ಇಷ್ಟೆಲ್ಲ ವ್ಯಾಪಕವಾಗಿ ಬಳಸುವ ನಮ್ಮ ದೇಶದಲ್ಲಿ ಅಂಥದ್ದೇ ಇನ್ನೊಂದು ಬಗೆಯ ದೂರವಾಣಿಯನ್ನು ಬಳಸುವುದಿರಲಿ, ಅನುಮತಿಯಿಲ್ಲದೆ ನಮ್ಮೊಡನೆ ಇಟ್ಟುಕೊಳ್ಳುವುದೂ ಅಪರಾಧ ಎನ್ನುವುದು ವಿಚಿತ್ರವೆನಿಸಿದರೂ ಸತ್ಯ!
ಈ ವಿಶಿಷ್ಟ ದೂರವಾಣಿಯ ಹೆಸರೇ ಸ್ಯಾಟೆಲೈಟ್ ಫೋನ್.

ಗುರುವಾರ, ಫೆಬ್ರವರಿ 14, 2019
ಹಿಂದಿನ ಇಜ್ಞಾನ: ಟೆಕ್ ಪ್ರೀತಿ ಶುರುವಾದ ರೀತಿ
ಟಿ. ಜಿ. ಶ್ರೀನಿಧಿ
ಇಂದು ನಮ್ಮ ಬದುಕಿನ ಮೇಲೆ ವಿದ್ಯುನ್ಮಾನ (ಇಲೆಕ್ಟ್ರಾನಿಕ್) ಸಾಧನಗಳ ಪ್ರಭಾವ ಅತ್ಯಂತ ವ್ಯಾಪಕವಾಗಿದೆ. ಲ್ಯಾಪ್‌ಟಾಪ್‌ನಿಂದ ಮೊಬೈಲ್ ಫೋನಿನವರೆಗೆ, ಕಾರಿನಿಂದ ಟೀವಿಯವರೆಗೆ ನೂರೆಂಟು ಸಾಧನಗಳು ಈಗ ಸ್ಮಾರ್ಟ್ ಆಗಿವೆ, ನಮ್ಮ ಬದುಕನ್ನು ಪ್ರಭಾವಿಸುತ್ತಿವೆ.
ಇಂದಿನ ಈ ಎಲ್ಲ ಸ್ಮಾರ್ಟ್ ಸಾಧನಗಳೂ ಒಂದಲ್ಲ ಒಂದು ರೀತಿಯ ಕಂಪ್ಯೂಟರುಗಳೇ. ಅವುಗಳ ಬಾಹ್ಯ ರೂಪ ಹೇಗೆಯೇ ಇದ್ದರೂ ಮೂಲಭೂತ ರಚನೆ ಹೆಚ್ಚೂಕಡಿಮೆ ಒಂದೇ ರೀತಿಯದು. ಆಯಾ ಸಾಧನ ಮಾಡುವ ಕೆಲಸ ಎಂಥದ್ದು ಎನ್ನುವುದರ ಮೇಲೆ ಈ ರಚನೆಯ ಸಂಕೀರ್ಣತೆ ಬದಲಾಗುತ್ತದೆ, ಅಷ್ಟೇ.
ಈಗ ಇಷ್ಟೆಲ್ಲ ಸಾಮಾನ್ಯವಾಗಿದ್ದರೂ ಕಂಪ್ಯೂಟರುಗಳ ವಿನ್ಯಾಸ ಯಾವಾಗಲೂ ಹೀಗೆಯೇ ಇರಲಿಲ್ಲ.

ಗುರುವಾರ, ಜನವರಿ 17, 2019
ನಿಮ್ಮ ದಿನದಲ್ಲಿ ಸ್ಕ್ರೀನ್ ಟೈಮ್ ಎಷ್ಟು?
ಟಿ. ಜಿ. ಶ್ರೀನಿಧಿ
ಒಂದು ಕಾಲವಿತ್ತು, ಸ್ಕ್ರೀನ್ ಎಂದರೆ ಆಗ ನೆನಪಿಗೆ ಬರುತ್ತಿದ್ದದ್ದು ಎರಡೇ - ಒಂದು ಹಿರಿತೆರೆ (ಸಿನಿಮಾ), ಇನ್ನೊಂದು ಕಿರಿತೆರೆ (ಟೀವಿ). ದಿನಕ್ಕೆ ಒಂದೆರಡು ಗಂಟೆ ಟೀವಿ, ಥಿಯೇಟರಿನಲ್ಲಿ ಅಪರೂಪಕ್ಕೊಂದು ಸಿನಿಮಾ ನೋಡಿದರೆ ಸ್ಕ್ರೀನ್ ಸಹವಾಸ ಬಹುಪಾಲು ಮುಗಿದುಹೋಗುತ್ತಿತ್ತು.
ಆದರೆ ಈಗ ಹಾಗಿಲ್ಲ. ಹಿರಿಯ ಕಿರಿಯ ತೆರೆಗಳ ಜೊತೆಗೆ ಕಂಪ್ಯೂಟರು, ಟ್ಯಾಬ್ಲೆಟ್ಟು, ಮೊಬೈಲು, ಸ್ಮಾರ್ಟ್ ವಾಚು ಮುಂತಾದ ಇನ್ನೂ ಹಲವು ಕಿರಿಕಿರಿಯ ತೆರೆಗಳು ಸೇರಿಕೊಂಡುಬಿಟ್ಟಿವೆ. ಸುಮ್ಮನೆ ಸೇರಿಕೊಂಡಿರುವುದಷ್ಟೇ ಅಲ್ಲ, ನಮ್ಮ ದಿನದ ಬಹುಪಾಲನ್ನು ಅವು ಕಬಳಿಸುತ್ತಲೂ ಇವೆ.

ಶನಿವಾರ, ಜನವರಿ 12, 2019
ವಾರಾಂತ್ಯ ವಿಶೇಷ: ಡಿಜಿಟಲ್ ಜೋಡಿ - ಏನಿದರ ಮೋಡಿ?
ಟಿ. ಜಿ. ಶ್ರೀನಿಧಿ
ಹೊಸ ಉತ್ಪನ್ನಗಳನ್ನು ತಯಾರಿಸಲು ಹೊರಟಾಗ ಅವುಗಳ ವಿನ್ಯಾಸ, ಮೊದಲ ಮಾದರಿಯ ತಯಾರಿ ಮೊದಲಾದ ಕೆಲಸಗಳಲ್ಲಿ ತಂತ್ರಾಂಶಗಳನ್ನು (ಸಾಫ್ಟ್‌ವೇರ್) ಬಳಸುವುದು ಸಾಮಾನ್ಯ. ಆನಂತರ ಉತ್ಪಾದನೆಯ ಕೆಲಸ ಶುರುವಾದಮೇಲೆ ಅಲ್ಲೂ ಕಂಪ್ಯೂಟರಿನ ಬಳಕೆ ಇರುತ್ತದೆ. ಇಷ್ಟೆಲ್ಲ ಆದನಂತರ ತಯಾರಾಗುತ್ತದಲ್ಲ ಉತ್ಪನ್ನ, ಅದೂ ಕಂಪ್ಯೂಟರಿನೊಳಗೇ ಇರುವಂತಿದ್ದರೆ?
ವಿಚಿತ್ರವೆಂದು ತೋರುವ ಈ ಯೋಚನೆಯನ್ನು ಪ್ರಾಯೋಗಿಕವಾಗಿ ಸಾಧ್ಯವಾಗಿಸುವುದು 'ಡಿಜಿಟಲ್ ಟ್ವಿನ್' ಎಂಬ ಪರಿಕಲ್ಪನೆ.

ಮಂಗಳವಾರ, ಜನವರಿ 1, 2019
ನಿಮ್ಮ ಫೋನಿಗೆ ಎಷ್ಟು ಅಂಕ?
ಟಿ. ಜಿ. ಶ್ರೀನಿಧಿ
ಮೊಬೈಲ್ ಫೋನ್ ಮಾರುಕಟ್ಟೆಗೆ ಒಂದರ ಹಿಂದೆ ಒಂದರಂತೆ ಹೊಸ ಮಾದರಿಗಳು ಬರುತ್ತಲೇ ಇರುತ್ತವೆ. ಈ ಪೈಕಿ ನಮ್ಮ ಅಗತ್ಯಗಳಿಗೆ ಸರಿಹೊಂದುವ ಫೋನನ್ನು ಆರಿಸಿಕೊಳ್ಳುವುದು ನಿಜಕ್ಕೂ ಗೊಂದಲ ಮೂಡಿಸುವ ಕೆಲಸ. ತಾಂತ್ರಿಕ ವಿವರಗಳೆಲ್ಲ ಹಾಗಿರಲಿ, ನಿರ್ದಿಷ್ಟ ಬೆಲೆಯ ಫೋನನ್ನು ಕೊಳ್ಳುತ್ತೇವೆ ಎಂದುಕೊಂಡರೂ ಆ ಬೆಲೆಯ ಆಸುಪಾಸಿನಲ್ಲೇ ಲಭ್ಯವಿರುವ ಹತ್ತಾರು ಮಾದರಿಗಳು ನಮ್ಮ ಗೊಂದಲವನ್ನು ಇನ್ನಷ್ಟು ಹೆಚ್ಚಿಸುತ್ತವೆ.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರತಿಯೊಂದು ಉತ್ತರಕ್ಕೂ ಇಂತಿಷ್ಟು ಅಂಕವೆಂದು ನಿಗದಿಪಡಿಸಿ, ಗಳಿಸಿದ ಒಟ್ಟು ಅಂಕಗಳ ಮೇಲೆ ಬೇರೆಬೇರೆ ಶ್ರೇಣಿಗಳನ್ನೆಲ್ಲ ಘೋಷಿಸುತ್ತಾರಲ್ಲ. ಮೊಬೈಲುಗಳಿಗೂ ಹಾಗೊಂದು ಪರೀಕ್ಷೆ ಇದ್ದಿದ್ದರೆ? ಫಸ್ಟ್ ಕ್ಲಾಸ್ ಬಂದ ಫೋನನ್ನೇ ಕೊಳ್ಳಬಹುದಾಗಿತ್ತು ಅಲ್ಲವೇ?

ಗುರುವಾರ, ಡಿಸೆಂಬರ್ 27, 2018
ನಿಮ್ಮ ಫೋನಿನಲ್ಲಿ ಈ ಆಪ್ ಇದೆಯೇ?
ಇಜ್ಞಾನ ವಿಶೇಷ
ಸ್ಮಾರ್ಟ್‌ಫೋನ್ ಜಗತ್ತಿನಲ್ಲಿ ಆಪ್‌ಗಳಿಗೆ ವಿಶೇಷ ಸ್ಥಾನ. ನಮ್ಮ ಗಮನಸೆಳೆಯಲು ಸ್ಪರ್ಧಿಸುವ ಅಸಂಖ್ಯ ಆಪ್‌ಗಳ ಪೈಕಿ ಕೆಲವೊಂದನ್ನು ಆಗೊಮ್ಮೆ ಈಗೊಮ್ಮೆ ಪರಿಚಯಿಸುವುದು ಇಜ್ಞಾನದ ಪ್ರಯತ್ನ. ನಮ್ಮ ಪ್ರಯತ್ನ ನಿಮಗೆ ಇಷ್ಟವಾಯಿತೇ? ಕಮೆಂಟ್ ಮಾಡಿ ತಿಳಿಸಿ.

ಬುಧವಾರ, ಡಿಸೆಂಬರ್ 19, 2018
ಕಂಪ್ಯೂಟರ್ ಮೌಸ್‌ಗೆ ಐವತ್ತು ವರ್ಷ!
ಟಿ. ಜಿ. ಶ್ರೀನಿಧಿ
ಮಾಹಿತಿ ತಂತ್ರಜ್ಞಾನ ಲೋಕದಲ್ಲಿ ಬದಲಾವಣೆಯದ್ದೇ ಭರಾಟೆ. ಇಲ್ಲಿ ಹೊಸ ಆವಿಷ್ಕಾರಗಳು ದಿನಕ್ಕೊಂದರಂತೆ ಸುದ್ದಿಯಾಗುತ್ತಿರುತ್ತವೆ, ಹಳೆಯವು ಸದ್ದಿಲ್ಲದೆ ಮೂಲೆಗುಂಪಾಗುತ್ತಿರುತ್ತವೆ. ಈ ಭರಾಟೆಯ ನಡುವೆ ಎಲ್ಲೋ ಕೆಲವು ಆವಿಷ್ಕಾರಗಳು ಮಾತ್ರ ಸುದೀರ್ಘಕಾಲ ಉಳಿದುಕೊಳ್ಳುತ್ತವೆ, ನಮ್ಮ ಬದುಕಿನ ಮೇಲೆ ಪ್ರಭಾವ ಬೀರುವುದನ್ನು ಮುಂದುವರೆಸುತ್ತವೆ.
ಇಂತಹ ಆವಿಷ್ಕಾರಗಳಲ್ಲಿ ಕಂಪ್ಯೂಟರ್ ಮೌಸ್ ಕೂಡ ಒಂದು. ಕಂಪ್ಯೂಟರುಗಳ ಜೊತೆಯಲ್ಲೇ ಬೆಳೆದು-ಉಳಿದು ಬಂದಿರುವ ಈ ಸಾಧನದ ಮೊದಲ ಸಾರ್ವಜನಿಕ ಪ್ರದರ್ಶನ ನಡೆದು ಇದೀಗ ಐವತ್ತು ವರ್ಷ ಪೂರ್ತಿಯಾಗಿದೆ.

ಬುಧವಾರ, ಡಿಸೆಂಬರ್ 12, 2018
ಎಲ್ಲ ಸಹಾಯಕ್ಕೂ ಒಂದೇ ಸಂಖ್ಯೆ - ೧೧೨
ಇಜ್ಞಾನ ವಿಶೇಷ
ತುರ್ತು ಪರಿಸ್ಥಿತಿಯಲ್ಲಿ ಸಹಾಯವಾಣಿಗೆ ಥಟ್ಟನೆ ಕರೆಮಾಡುವ ಸೌಲಭ್ಯ ಬಹುತೇಕ ಮೊಬೈಲ್ ಫೋನುಗಳಲ್ಲಿರುತ್ತದೆ. ಫೋನು ಲಾಕ್ ಆಗಿದ್ದಾಗ, ಕರೆನ್ಸಿ ಇಲ್ಲದಿದ್ದಾಗ, ಕಡೆಗೆ ಸಿಮ್ ಇಲ್ಲದಿದ್ದಾಗಲೂ ಇಂತಹ ಕರೆಗಳನ್ನು ಮಾಡಬಹುದು ಎನ್ನುವುದು ವಿಶೇಷ. ಈ ಸೌಲಭ್ಯವಿರುವ ಬಹುತೇಕ ಫೋನುಗಳು ಕರೆಮಾಡುವ ಸಂಖ್ಯೆಯೇ ೧೧೨. ಮೊಬೈಲ್ ಜಾಲಗಳನ್ನು ನಿರ್ದೇಶಿಸುವ ಜಿಎಸ್‌ಎಂ ಮಾನಕ ಈ ಸಂಖ್ಯೆಯನ್ನು ಆಪತ್ಕಾಲೀನ ದೂರವಾಣಿ ಸಂಖ್ಯೆಯೆಂದು ಗುರುತಿಸುತ್ತದೆ.
ಪೋಲೀಸರನ್ನು, ಅಗ್ನಿಶಾಮಕ ದಳವನ್ನು, ಆಂಬುಲೆನ್ಸ್ ಸೇವೆಯನ್ನು ಸಂಪರ್ಕಿಸಲು ಸದ್ಯ ನಮ್ಮ ದೇಶದಲ್ಲಿ ಬೇರೆಬೇರೆ ಸಂಖ್ಯೆಗಳನ್ನು ಬಳಸುತ್ತಿದ್ದೇವೆ. ಈ ಎಲ್ಲ ಸಂಖ್ಯೆಗಳಿಗೆ ಒಂದೇ ಪರ್ಯಾಯವಾಗಿ ನಮ್ಮಲ್ಲೂ ೧೧೨ ಬಳಸುವ ಪ್ರಕ್ರಿಯೆ ಇದೀಗ ಪ್ರಾರಂಭವಾಗಿದೆ. ಮೊಬೈಲ್ ಫೋನ್ ಮೂಲಕ ಮಾತ್ರವೇ ಅಲ್ಲದೆ ಸ್ಥಿರ ದೂರವಾಣಿ, ಎಸ್ಸೆಮ್ಮೆಸ್, ಇಮೇಲ್ ಹಾಗೂ ಮೊಬೈಲ್ ಆಪ್ ಮೂಲಕವೂ ದೇಶದ ಎಲ್ಲೆಡೆ ಈ ಸಂಖ್ಯೆಯನ್ನು ಸಂಪರ್ಕಿಸುವುದು, ಸಹಾಯ ಪಡೆಯುವುದು ಮುಂದಿನ ದಿನಗಳಲ್ಲಿ ಸಾಧ್ಯವಾಗುವ ನಿರೀಕ್ಷೆಯಿದೆ.

ಭಾನುವಾರ, ಡಿಸೆಂಬರ್ 9, 2018
ಮದರ್ ಆಫ್ ಆಲ್ ಡೆಮೋಸ್: ಅದ್ಭುತ ಪ್ರಾತ್ಯಕ್ಷಿಕೆಗೆ ಐವತ್ತು!
ಟಿ. ಜಿ. ಶ್ರೀನಿಧಿ
ಮಾಹಿತಿ ತಂತ್ರಜ್ಞಾನ ಜಗತ್ತಿನ ಬಹುತೇಕ ಸಾಧನೆಗಳ ಹಿಂದೆ ಅನೇಕ ವ್ಯಕ್ತಿಗಳ ಪರಿಶ್ರಮವಿರುತ್ತದೆ, ಸುದೀರ್ಘ ಅವಧಿಯಲ್ಲಿ ನಡೆದ ಹಲವು ಘಟನೆಗಳ ಛಾಯೆಯೂ ಕಾಣಸಿಗುತ್ತದೆ. ಹೀಗಾಗಿಯೇ ಏನೋ ಇಂತಹ ತಂತ್ರಜ್ಞಾನವನ್ನು ರೂಪಿಸಿದವರು ಇಂತಹವರೇ ಎಂದು ನಿಖರವಾಗಿ ಗುರುತಿಸುವುದು ಅದೆಷ್ಟೋ ಸಂದರ್ಭಗಳಲ್ಲಿ ಸಾಧ್ಯವಾಗುವುದೇ ಇಲ್ಲ.
ಹಾಗೆಂದಮಾತ್ರಕ್ಕೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲುಗಳೇ ಇಲ್ಲವೆಂದೇನೂ ಹೇಳುವಂತಿಲ್ಲ. ಒಂದು ಸಂದರ್ಭದಲ್ಲಿ ಒಂದು ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಮಹತ್ವದ ಘಟನೆಗಳು ನಡೆದಿರುವುದು ಹಾಗಿರಲಿ, ಒಂದೇ ಘಟನೆ ಇಡಿಯ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೇ ಹೊಸ ತಿರುವನ್ನು ತಂದುಕೊಟ್ಟ ಉದಾಹರಣೆಗಳೂ ಇವೆ.
ಅಂತಹುದೊಂದು ಘಟನೆ ೧೯೬೮ರ ಡಿಸೆಂಬರ್ ೯ರಂದು ನಡೆದಿತ್ತು.

ಶುಕ್ರವಾರ, ಡಿಸೆಂಬರ್ 7, 2018
ದೂರವನ್ನು ದೂರಮಾಡುವ ದೂರನಿಯಂತ್ರಕ: ಇದು ರಿಮೋಟ್ ಕಂಟ್ರೋಲ್ ಕಥಾನಕ!
ಟಿ. ಜಿ. ಶ್ರೀನಿಧಿ
ನಮ್ಮ ಮನೆಗಳಲ್ಲಿ ನೂರೆಂಟು ವಸ್ತುಗಳಿರುತ್ತವೆ. ಈ ಪೈಕಿ ಕೆಲವು ದಿವಾನಖಾನೆಯ ಮೇಜಿನಂತೆ ದೊಡ್ಡವು, ಇನ್ನು ಕೆಲವು ಆ ಮೇಜಿನ ಮೇಲಿನ ಧೂಳಿನಂತೆ ಸಣ್ಣವು. ಕಣ್ಣಿಗೆ ಕಾಣುವ ಈ ಸಂಗತಿಗಳ ಜೊತೆಗೆ ಕಣ್ಣಿಗೆ ಕಾಣದ ಹಲವು ವಿದ್ಯಮಾನಗಳೂ ಘಟಿಸುತ್ತಿರುತ್ತವೆ: ವಾಟ್ಸಾಪ್ ಸಂದೇಶ ಮೊಬೈಲನ್ನು ತಲುಪುವುದು, ಕಂಪ್ಯೂಟರಿಗೆ ವೈಫೈ ಸಂಪರ್ಕ ಸಿಗುವುದು, ಮೈಕ್ರೋವೇವ್ ಓವನ್ನಿನಲ್ಲಿಟ್ಟ ಆಹಾರ ಬಿಸಿಯಾಗುವುದು - ಹೀಗೆ.
ಇಂತಹ ಇನ್ನೊಂದು ಉದಾಹರಣೆ ದೂರನಿಯಂತ್ರಕ, ಅರ್ಥಾತ್ ರಿಮೋಟ್ ಕಂಟ್ರೋಲಿನದು. ಆಗಿಂದಾಗ್ಗೆ ಕಾಣೆಯಾಗುತ್ತಿರುವ ವಸ್ತುವಾದರೂ ಸ್ವತಃ ರಿಮೋಟ್ ಕಂಟ್ರೋಲ್ ಅದೃಶ್ಯವೇನಲ್ಲ. ಇಲ್ಲಿ ಹೇಳಹೊರಟಿರುವ 'ಕಣ್ಣಿಗೆ ಕಾಣದ' ಸಂಗತಿ ಅದರ ಕಾರ್ಯಾಚರಣೆಯನ್ನು ಕುರಿತಾದದ್ದು.
ಅದೃಶ್ಯವಾಗಿ, ನಮ್ಮ ಗಮನಕ್ಕೆ ಬಾರದಂತೆ ನಡೆಯುವ ಈ ಕಾರ್ಯಾಚರಣೆ ನಮ್ಮ ದೈನಂದಿನ ಬದುಕಿನ ಹಲವು ಕೆಲಸಗಳನ್ನು ಸುಲಭಗೊಳಿಸುತ್ತದೆ. ಜಾಹೀರಾತು ಬಂದಾಗ ಟೀವಿಯ ಚಾನೆಲ್ ಬದಲಿಸುವುದು ಇಂತಹ ಕೆಲಸಗಳಲ್ಲೊಂದು.

ಶುಕ್ರವಾರ, ನವೆಂಬರ್ 30, 2018
ವೀಕೆಂಡ್ ಇಜ್ಞಾನ: ಏನಿದು ಬೊಕೆ ಎಫೆಕ್ಟ್?
ಟಿ. ಜಿ. ಶ್ರೀನಿಧಿ
ಸಾಂಪ್ರದಾಯಿಕ ಕ್ಯಾಮೆರಾಗಳ ಸ್ಥಾನದಲ್ಲಿ ಮೊಬೈಲ್ ಫೋನ್ ಬಂದು ಕುಳಿತಿರುವುದು ಇದೀಗ ಹಳೆಯ ವಿಷಯ. ಆಪ್ತರೊಡನೆ ಸೆಲ್ಫಿ ತೆಗೆದುಕೊಳ್ಳುವುದಷ್ಟೇ ಅಲ್ಲ, ಪ್ರವಾಸ-ಸಭೆ-ಸಮಾರಂಭಗಳ ನೆನಪುಗಳನ್ನು ಸೆರೆಹಿಡಿಯುವುದೂ ಇದೀಗ ಮೊಬೈಲಿನದೇ ಕೆಲಸ.
ಹೀಗಿರುವಾಗ, ಸಾಂಪ್ರದಾಯಿಕ ಕ್ಯಾಮೆರಾಗಳಲ್ಲಿರುವ ಸವಲತ್ತುಗಳು ಮೊಬೈಲಿನಲ್ಲೂ ಸಿಗಬೇಕು ಎನ್ನಿಸುವುದು ಸಹಜವೇ. ಮೊಬೈಲ್ ಕ್ಯಾಮೆರಾಗಳಲ್ಲಿ ಇಂತಹ ಸವಲತ್ತುಗಳನ್ನು ನೀಡಲು ಮೊಬೈಲ್ ತಯಾರಕರೂ ಸತತವಾಗಿ ಪ್ರಯತ್ನಿಸುತ್ತಿರುತ್ತಾರೆ.
ಹೊಸ ಮೊಬೈಲುಗಳ ಜಾಹೀರಾತಿನಲ್ಲಿ ಕ್ಯಾಮೆರಾ ವೈಶಿಷ್ಟ್ಯಗಳ ವರ್ಣನೆ ಹೆಚ್ಚುಹೆಚ್ಚಾಗಿ ಕಾಣಿಸುತ್ತಿರುವುದರ ಕಾರಣವೂ ಇದೇ. ಹೆಚ್ಚು ಸುದ್ದಿಯಲ್ಲಿರುವ ಇಂತಹ ವೈಶಿಷ್ಟ್ಯಗಳ ಪೈಕಿ ಚಿತ್ರಗಳಲ್ಲಿ 'ಬೊಕೆ ಎಫೆಕ್ಟ್' ಮೂಡಿಸುವ ಸಾಮರ್ಥ್ಯವೂ ಒಂದು.

ಬುಧವಾರ, ನವೆಂಬರ್ 21, 2018
ವಿಶ್ವ ಟೀವಿ ದಿನ ವಿಶೇಷ: ಟೀವಿ ಠೀವಿ
ಟಿ. ಜಿ. ಶ್ರೀನಿಧಿ
ತನ್ನಲ್ಲಿರುವ ಮಾಹಿತಿಯನ್ನು ಒಂದೇಬಾರಿಗೆ ಅನೇಕರಿಗೆ ತಲುಪಿಸಬೇಕೆನ್ನುವ ಮಾನವನ ಅಪೇಕ್ಷೆ ಬಹಳ ಹಿಂದಿನದು. ಹಿಂದಿನಕಾಲದಲ್ಲಿ ಸಂದೇಶಗಳನ್ನು ಡಂಗುರ ಸಾರಿಸುತ್ತಿದ್ದರಂತಲ್ಲ, ಅದರ ಹಿನ್ನೆಲೆಯಲ್ಲಿದ್ದದ್ದು ಇದೇ ಅಪೇಕ್ಷೆ. ಇಂದಿನ ವೆಬ್‌ಸೈಟು-ಸೋಶಿಯಲ್ ಮೀಡಿಯಾಗಳ ಉದ್ದೇಶವೂ ಬಹಳ ಭಿನ್ನವೇನಲ್ಲ.
ಹೀಗೆ ಮಾಹಿತಿ ಪ್ರಸರಣ ಬೆಳೆದುಬಂದ ಹಾದಿಯಲ್ಲಿ ಕೆಲವು ಮಹತ್ವದ ಮೈಲಿಗಲ್ಲುಗಳನ್ನು ನಾವು ನೋಡಬಹುದು. ಪ್ರಸರಣದ ವ್ಯಾಪ್ತಿಯನ್ನು ಗಮನಾರ್ಹವಾಗಿ ವಿಸ್ತರಿಸಿದ, ದೊಡ್ಡ ಸಮುದಾಯಗಳನ್ನು ತಲುಪಲು ಸಾಧ್ಯವಾಗಿಸಿದ ರೇಡಿಯೋ ಜಾಲದ ಬೆಳವಣಿಗೆ ಇಂತಹ ಮೈಲಿಗಲ್ಲುಗಳಿಗೊಂದು ಉದಾಹರಣೆ.
ಇಂಥದ್ದೇ ಇನ್ನೊಂದು ಮೈಲಿಗಲ್ಲು ಟೀವಿ ಜಾಲಗಳ ಹುಟ್ಟು.

ಸೋಮವಾರ, ನವೆಂಬರ್ 12, 2018
'ವಿಜ್ಞಾನ'ವೆಂಬ ವಿಶಿಷ್ಟ ಪ್ರಯತ್ನ
ಟಿ. ಜಿ. ಶ್ರೀನಿಧಿ
"ಆಂಗ್ಲಭಾಷಾಭ್ಯಾಸವು ನಮ್ಮ ದೇಶದಲ್ಲಿ ದಿನೇದಿನೇ ಅಭಿವೃದ್ಧಿಯಾಗುತ್ತಿದ್ದರೂ ವಿಜ್ಞಾನದ ವಿಷಯವಾಗಿ ಮಾತ್ರ ವಿಶೇಷ ಶ್ರದ್ಧೆಯು ತೋರಿಬಂದಿಲ್ಲ. ಆ ಭಾಗದಲ್ಲಿ ಈಗೀಗ ಕಣ್ಣುಬಿಡುತ್ತಿದ್ದೇವೆ. ಜನಸಾಮಾನ್ಯದಲ್ಲೆಲ್ಲಾ ಈ ವಿಜ್ಞಾನವನ್ನು ಹರಡಿದ ಹೊರತು ದೇಶವು ಅಭಿವೃದ್ಧಿಸ್ಥಿತಿಗೆ ಬರಲಾರದು..." ಇಂದಿನ ಪರಿಸ್ಥಿತಿಯನ್ನೇ ಕುರಿತು ಹೇಳಿದಂತೆ ತೋರುವ ಈ ಮಾತುಗಳು ಪ್ರಕಟವಾದದ್ದು ಇಂದಿಗೆ ನೂರು ವರ್ಷಗಳ ಹಿಂದೆ, ೧೯೧೮ನೇ ಇಸವಿಯಲ್ಲಿ.
ಈ ಮಾತುಗಳನ್ನು ಪ್ರಕಟಿಸಿದ್ದು 'ವಿಜ್ಞಾನ'ವೆಂಬ ಪತ್ರಿಕೆ. ನಮ್ಮ ಭಾಷೆಯಲ್ಲಿ ಪ್ರಕಟವಾದ ಈ ರೀತಿಯ ಮೊತ್ತಮೊದಲ ಪತ್ರಿಕೆ ಎಂಬ ಹೆಗ್ಗಳಿಕೆ ಈ ಪತ್ರಿಕೆಯದ್ದು.

ಗುರುವಾರ, ನವೆಂಬರ್ 8, 2018
ಮೊಬೈಲ್ ಫೋನ್: ಪರದೆ ಸುತ್ತಲಿನ ಪರದಾಟ
ಟಿ. ಜಿ. ಶ್ರೀನಿಧಿ
ಮೊಬೈಲ್ ಫೋನುಗಳು ಮಾರುಕಟ್ಟೆಗೆ ಬಂದ ಹೊಸತರಲ್ಲಿ ಅವುಗಳ ಪರದೆ ಬಹಳ ಚಿಕ್ಕದಾಗಿರುತ್ತಿತ್ತು. ಅನೇಕ ಮೊಬೈಲುಗಳ ಪರದೆ ಅವುಗಳಲ್ಲಿದ್ದ ಕೀಲಿಮಣೆಗಿಂತ ಚಿಕ್ಕದಾಗಿರುತ್ತಿದ್ದದ್ದೂ ಉಂಟು.
ಮೊಬೈಲ್ ಫೋನಿನ ಸವಲತ್ತುಗಳು ಹೆಚ್ಚಿದಂತೆ ಅವುಗಳ ಪರದೆಯ ಗಾತ್ರವೂ ಹೆಚ್ಚುತ್ತ ಬಂತು. ಸ್ಪರ್ಶಸಂವೇದಿ ಪರದೆಗಳು (ಟಚ್ ಸ್ಕ್ರೀನ್) ಬಳಕೆಗೆ ಬಂದಮೇಲಂತೂ ಇದು ಇನ್ನಷ್ಟು ಜಾಸ್ತಿಯಾಯಿತು. ಸ್ಮಾರ್ಟ್‌ಫೋನುಗಳು ಜನಪ್ರಿಯವಾದಂತೆ ಮೊಬೈಲಿನ ಬಹುಭಾಗವನ್ನು ಪರದೆಗಳೇ ಆವರಿಸಿರುವುದು ಕೂಡ ಸಾಮಾನ್ಯವಾಯಿತು.
ಯಾವುದೇ ಸ್ಮಾರ್ಟ್‌ಫೋನ್ ನೋಡಿದರೂ ಅದರ ಪರದೆಯ ಸುತ್ತ ಚೌಕಟ್ಟಿನಂತಹ ಅಂಚುಗಳಿರುವುದನ್ನು ನಾವು ನೋಡಬಹುದು. ತಾಂತ್ರಿಕ ಪರಿಭಾಷೆಯಲ್ಲಿ 'ಬೆಜ಼ೆಲ್' ಎಂದು ಕರೆಯುವುದು ಈ ಚೌಕಟ್ಟನ್ನೇ.

ಮಂಗಳವಾರ, ನವೆಂಬರ್ 6, 2018
ಕನ್ನಡದ ಮೊದಲ ವಿಜ್ಞಾನ ಪತ್ರಿಕೆಗೆ ನೂರು ವರ್ಷ: ನವೆಂಬರ್ ೧೧ರಂದು 'ಕನ್ನಡ ಪತ್ರಿಕೆಗಳಲ್ಲಿ ವಿಜ್ಞಾನ' ಸಂವಾದ ಕಾರ್ಯಕ್ರಮ
ಇಜ್ಞಾನ ವಾರ್ತೆ
ಕನ್ನಡದ ಮೊದಲ ವಿಜ್ಞಾನ ಪತ್ರಿಕೆ 'ವಿಜ್ಞಾನ' ಪ್ರಕಟವಾಗಿ ಇದೀಗ ನೂರು ವರ್ಷ ಸಂದಿದ್ದು, ಈ ಸಂದರ್ಭದಲ್ಲಿ ಬೆಂಗಳೂರಿನ ಬಿ. ವಿ. ಜಗದೀಶ್ ವಿಜ್ಞಾನ ಕೇಂದ್ರವು ಇಜ್ಞಾನ ಟ್ರಸ್ಟ್ ಹಾಗೂ ಉದಯಭಾನು ಕಲಾಸಂಘದ ಸಹಯೋಗದೊಡನೆ ಸಂವಾದ ಕಾರ್ಯಕ್ರಮವೊಂದನ್ನು ಏರ್ಪಡಿಸಿದೆ.
ಈ ಕಾರ್ಯಕ್ರಮ ಬರುವ ನವೆಂಬರ್ ೧೧ರಂದು ಬೆಳಿಗ್ಗೆ ೧೦ ಗಂಟೆಯಿಂದ ಜಯನಗರದ ನ್ಯಾಶನಲ್ ಕಾಲೇಜು ಆವರಣದಲ್ಲಿರುವ ಬಿ. ವಿ. ಜಗದೀಶ್ ವಿಜ್ಞಾನ ಕೇಂದ್ರದಲ್ಲಿ ನಡೆಯಲಿದೆ. ಕನ್ನಡದ ಮುದ್ರಣ ಮಾಧ್ಯಮ, ಟೀವಿ, ರೇಡಿಯೋ ಹಾಗೂ ಜಾಲತಾಣಗಳಲ್ಲಿ ವಿಜ್ಞಾನ ಸಂವಹನದ ಸ್ಥಿತಿ-ಗತಿಗಳನ್ನು ಕುರಿತು ಆಯಾ ಕ್ಷೇತ್ರದ ಪರಿಣತರೊಡನೆ ಈ ಸಂದರ್ಭದಲ್ಲಿ ಚರ್ಚೆಗೆ ಅವಕಾಶ ಇರಲಿದೆ.
ದಿವಂಗತ ಬೆಳ್ಳಾವೆ ವೆಂಕಟನಾರಣಪ್ಪ ಹಾಗೂ ನಂಗಪುರಂ ವೆಂಕಟೇಶ ಅಯ್ಯಂಗಾರರು ೧೯೧೮ರಲ್ಲಿ ಪ್ರಾರಂಭಿಸಿದ್ದ 'ವಿಜ್ಞಾನ' ಪತ್ರಿಕೆ ಕನ್ನಡ ಪತ್ರಿಕೋದ್ಯಮದಲ್ಲೊಂದು ಮಹತ್ವದ ಮೈಲಿಗಲ್ಲು. ವಿಜ್ಞಾನ ಬರಹಗಳನ್ನು ಸಾಮಾನ್ಯ ಓದುಗರಿಗೂ ಪರಿಚಯಿಸಿದ ಈ ಅಪರೂಪದ ಪ್ರಯತ್ನದ ಕುರಿತು ಇದೇ ಸಂದರ್ಭದಲ್ಲಿ ಪ್ರೊ. ಎಚ್. ಆರ್. ರಾಮಕೃಷ್ಣರಾವ್ ಉಪನ್ಯಾಸ ನೀಡಲಿದ್ದಾರೆ.

ಗುರುವಾರ, ನವೆಂಬರ್ 1, 2018
ಟೆಕ್ ಲೋಕದಲ್ಲಿ ಕನ್ನಡ
ಟಿ. ಜಿ. ಶ್ರೀನಿಧಿ
ತಂತ್ರಜ್ಞಾನದಲ್ಲಿ ಕನ್ನಡವೆಂದರೆ ಕಂಪ್ಯೂಟರಿನಲ್ಲೋ ಮೊಬೈಲಿನಲ್ಲೋ ಕನ್ನಡ ಅಕ್ಷರಗಳನ್ನು ಮೂಡಿಸುವುದು ಎಂಬ ಅಭಿಪ್ರಾಯ ಒಂದು ಕಾಲದಲ್ಲಿತ್ತು. ಈ ಪರಿಸ್ಥಿತಿ ಬದಲಾಗಿ ಬಹಳ ದಿನಗಳೇ ಆಗಿವೆ. ತಂತ್ರಜ್ಞಾನದ ಭಾಷೆಯೆಂದೇ ಹೆಸರಾದ ಇಂಗ್ಲಿಷಿನಲ್ಲಿ ಏನೇನು ಸಾಧ್ಯವೋ ಅದೆಲ್ಲ ಕನ್ನಡದಲ್ಲೂ ಸಾಧ್ಯವಾಗಬೇಕು ಎನ್ನುವುದು ಇಂದಿನ ಸ್ಥಿತಿ. ಈ ನಿಟ್ಟಿನಲ್ಲಿ ಸಾಕಷ್ಟು ಕೆಲಸವೂ ಆಗಿದೆ.

ಬುಧವಾರ, ಅಕ್ಟೋಬರ್ 24, 2018
ಕೈಗೆಟುಕುವ ಬೆಲೆಯಲ್ಲಿ ಎರಡು ಹೊಸ ಜೆನ್‌ಫೋನ್
ಇಜ್ಞಾನ ವಿಶೇಷ
ತನ್ನ ಜೆನ್‌ಫೋನ್ ಸರಣಿಯ ಸ್ಮಾರ್ಟ್‌ಫೋನುಗಳ ಮೂಲಕ ಏಸುಸ್ ಸಂಸ್ಥೆ ಸಾಕಷ್ಟು ಜನಪ್ರಿಯವಾಗಿರುವುದು ನಮಗೆಲ್ಲ ಗೊತ್ತೇ ಇದೆ. ಈವರೆಗೆ ಮಧ್ಯಮ ಹಾಗೂ ಹೆಚ್ಚು ಬೆಲೆಯ ಹಲವಾರು ಜೆನ್‌ಫೋನ್ ಮಾದರಿಗಳು ಲಭ್ಯವಿದ್ದರೂ ಪ್ರಾರಂಭಿಕ ಹಂತದಲ್ಲಿ ಜೆನ್‌ಫೋನ್ ಕೊಳ್ಳಬಯಸುವ ಗ್ರಾಹಕರೆದುರು ಹೆಚ್ಚಿನ ಆಯ್ಕೆಗಳು ಇರಲಿಲ್ಲ. ಈ ಕೊರತೆಯನ್ನು ದೂರಮಾಡುವ ನಿಟ್ಟಿನಲ್ಲಿ ಏಸುಸ್ ಸಂಸ್ಥೆ ಇದೀಗ ಎರಡು ಹೊಸ ಮಾದರಿಗಳನ್ನು ಪರಿಚಯಿಸಿದೆ. ಅಕ್ಟೋಬರ್ 24, 2018ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟಕ್ಕೆ ಲಭ್ಯವಿರುವ ಈ ಮಾದರಿಗಳ ಪರಿಚಯ ಇಲ್ಲಿದೆ.

ಬುಧವಾರ, ಅಕ್ಟೋಬರ್ 17, 2018
ಬದಲಾವಣೆಯ ಹಾದಿಯಲ್ಲಿ ಟೀವಿಯ ಪಯಣ
ಟಿ. ಜಿ. ಶ್ರೀನಿಧಿ
ತಂತ್ರಜ್ಞಾನ ಎಂದಾಗ ಮೊಬೈಲ್ ಹಾಗೂ ಕಂಪ್ಯೂಟರು ನೆನಪಾಗುವಷ್ಟು ಬೇಗ ಟೀವಿ ನೆನಪಾಗುವುದಿಲ್ಲ, ನಿಜ. ಆದರೂ ನಮಗೆ ವಿಶೇಷ ಅನುಬಂಧವಿರುವ ತಂತ್ರಜ್ಞಾನದ ಸವಲತ್ತುಗಳ ಪೈಕಿ ಅದಕ್ಕೆ ಮಹತ್ವದ ಸ್ಥಾನವಿದೆ. ಸೋಮಾರಿಪೆಟ್ಟಿಗೆ ಎಂದು ಹೆಸರಿಟ್ಟರೂ, ಚಾನಲ್ಲುಗಳನ್ನು-ಕಾರ್ಯಕ್ರಮಗಳನ್ನು ಬೇಕಾದಷ್ಟು ಟೀಕಿಸಿದರೂ ನಾವು ಟೀವಿ ನೋಡುವುದನ್ನೇನೂ ಬಿಟ್ಟಿಲ್ಲ.
ಹಿಂದಿನ ಕಾಲದ ಟೀವಿಗಳಲ್ಲಿ ಬಳಕೆಯಾಗುತ್ತಿದ್ದ ತಂತ್ರಜ್ಞಾನ ಬಹಳ ಸರಳವಾಗಿತ್ತು. ದಿವಾನಖಾನೆಯಲ್ಲೊಂದು ಟೀವಿ ಇಟ್ಟು ಅದಕ್ಕೆ ಆಂಟೆನಾ ಸಂಪರ್ಕವನ್ನು ಕಲ್ಪಿಸಿಕೊಟ್ಟರೆ, ಅಂದು ಅಸ್ತಿತ್ವದಲ್ಲಿದ್ದ ಏಕೈಕ ಚಾನೆಲ್ಲಿನ ಕಾರ್ಯಕ್ರಮಗಳನ್ನು ನೋಡುವುದು ಸಾಧ್ಯವಾಗುತ್ತಿತ್ತು.

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)