ಎಲ್ಲರ ಮನೆ ದೋಸೆಯೂ ತೂತು ಎನ್ನುವ ಮಾತೊಂದಿದೆ. ಅದರಂತೆ ಬಹುಪಾಲು ಮನೆಗಳ ದೊಡ್ಡ ಸಮಸ್ಯೆಯೆಂದರೆ ಮನೆಯ ಎಲ್ಲ ಸದಸ್ಯರನ್ನೂ ಒಟ್ಟಿಗೆ ಊಟಕ್ಕೆ ಸೇರಿಸುವುದು. ಬೇರೆ ಸಮಯದಲ್ಲಿ ಅಲ್ಲಲ್ಲೇ ಇರುವ ಮನೆಯ ಸದಸ್ಯರು ಊಟದ ಹೊತ್ತಿಗೆ ಸರಿಯಾಗಿ ಅವರವರ ಕೆಲಸದಲ್ಲಿ ಕಳೆದುಹೋಗಿರುತ್ತಾರೆ. ಒಬ್ಬರು ಟಿವಿ ಮುಂದಿದ್ದರೆ ಇನ್ನೊಬ್ಬರು ರೂಮಿನಲ್ಲಿ ಮೊಬೈಲಿನಲ್ಲಿ ಮಗ್ನ. ಇನ್ನೊಬ್ಬರಿಗೆ ಹೋಮ್‌ವರ್ಕ್ ಮಾಡಲು ಅದೇ ಮಹೂರ್ತ.
ಇಂತಹ ಪರಿಸ್ಥಿತಿಯ ಬದಲು ಊಟದ ಸಮಯಕ್ಕೆ ಸರಿಯಾಗಿ ಗೋಡೆಯ ಮೇಲಿನ ದೀಪವೇ ಸೂಚನೆ ಕೊಡುವಂತಿದ್ದರೆ? ನಿದ್ರಿಸುವ ವೇಳೆಗೆ ಸರಿಯಾಗಿ ದೀಪಗಳು ತಾವೇ ಆರಿಹೋಗುವಂತಿದ್ದರೆ? ಇಂತಹ ಅನೇಕ ಸಾಧ್ಯತೆಗಳನ್ನು ಇಂದಿನ ತಂತ್ರಜ್ಞಾನ ತೆರೆದಿಟ್ಟಿದೆ.
ಇದೇ ತಂತ್ರಜ್ಞಾನವನ್ನು ಬಳಸಿ ಇಂತಹ ಅನುಕೂಲಗಳಿರುವ 'ಸ್ಮಾರ್ಟ್ ಗ್ಲೋ' ಹಾಗೂ 'ಸ್ಮಾರ್ಟ್ ಶೈನ್' ಬಲ್ಬುಗಳನ್ನು ಲೂಮಿನಸ್ ಸಂಸ್ಥೆ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಈ ಎಲ್‌ಇಡಿ ಬಲ್ಬುಗಳು ಸ್ಮಾರ್ಟ್ ಆಗಿದ್ದು ಅವನ್ನು ಬ್ಲೂಟೂತ್ ಬಳಸಿ ನಮ್ಮ ಮೊಬೈಲ್ ಮೂಲಕವೇ ನಿಯಂತ್ರಿಸಬಹುದು. ಬೆಳಕಿನ ಬಣ್ಣ, ತೀವ್ರತೆ ಮುಂತಾದುವನ್ನು ನಮಗೆ ಬೇಕಾದಂತೆ ಹೊಂದಿಸಿಕೊಳ್ಳುವುದು ಕೂಡ ಸಾಧ್ಯ. ಇದನ್ನೆಲ್ಲ ನಿರ್ವಹಿಸಲು ಅಗತ್ಯವಾದ 'ಲೂಮಿನಸ್ ಸ್ಮಾರ್ಟ್‌ಗ್ಲೋ' ಮೊಬೈಲ್ ಆಪ್ ಅನ್ನೂ ಲೂಮಿನಸ್ ಸಂಸ್ಥೆ ಸಿದ್ಧಪಡಿಸಿದೆ.
ಇದನ್ನೂ ಓದಿ: ಸ್ಮಾರ್ಟ್ ದೀಪಗಳ ಸುತ್ತಮುತ್ತ
1 ಕಾಮೆಂಟ್:
ಇದಕ್ಕೂ ಮುಂಚೆ ನಮ್ಮದೇ ದೇಶದ ಕಂಪನಿಯ ಈ ತರಹದೆ ಬಲ್ಬ ಆನ್ಲೈನ್ ಮಾರುಕಟ್ಟೆಯಲ್ಲಿವೆ.
Mansaa smart shine ಎಂಬುದು ಕಂಪನಿಯ ಹೆಸರು.
ಕಾಮೆಂಟ್ ಪೋಸ್ಟ್ ಮಾಡಿ