ಬುಧವಾರ, ಜುಲೈ 18, 2018

ಮಾನ್ಸೂನ್ ಹಂಗಾಮ ಕೊಡುಗೆ: ರೂ. 501ಕ್ಕೆ* ಜಿಯೋಫೋನ್!

ಇಜ್ಞಾನ ವಿಶೇಷ


ರಿಲಯನ್ಸ್ ಜಿಯೋ ಸಂಸ್ಥೆ ಕಳೆದವರ್ಷ ಪರಿಚಯಿಸಿದ ಜಿಯೋಫೋನ್ ಅಪಾರ ಜನಪ್ರಿಯತೆ ಗಳಿಸಿರುವುದು ನಮಗೆಲ್ಲ ಗೊತ್ತೇ ಇದೆ. 1500 ರೂಪಾಯಿಗಳಿಗೆ ಫೋನು, ತಿಂಗಳಿಗೆ 49 ರೂಪಾಯಿಗೆ ಅಪರಿಮಿತ ಕರೆ ಸೌಲಭ್ಯ ನೀಡಿದ ಈ ಫೋನು ಇದೀಗ ರೂ. 501 ವಾಸ್ತವಿಕ ಬೆಲೆಗೆ ಗ್ರಾಹಕರಿಗೆ ದೊರಕಲಿದೆ. ಹೇಗೆ? ತಿಳಿಯಲು ಈ ಬರಹ ಓದಿ!

500 ಮಿಲಿಯನ್‌ಗೂ ಹೆಚ್ಚಿನ ಭಾರತೀಯರು ಇನ್ನೂ ಅಂತರಜಾಲ ಸಂಪರ್ಕವಿಲ್ಲದ ಫೀಚರ್ ಫೋನುಗಳನ್ನು ಬಳಸುತ್ತಿದ್ದಾರೆ. ಇವರೆಲ್ಲರನ್ನೂ ಅಂತರಜಾಲದ ವ್ಯಾಪ್ತಿಗೆ ತರಲು ನೆರವಾಗುವಂತೆ ಜಿಯೋ ಸಂಸ್ಥೆ ಇದೀಗ ಮಾನ್ಸೂನ್ ಹಂಗಾಮ ಕೊಡುಗೆಯನ್ನು ಘೋಷಿಸಿದೆ.
ಇದನ್ನೂ ಓದಿ: ಮೊಬೈಲ್ ಲೋಕದ ರೆಟ್ರೋ ಸವಾರಿ
ಜುಲೈ 20, 2018ರ ಸಂಜೆ 5:01ರಿಂದ ಪ್ರಾರಂಭಿಸಿ ಗ್ರಾಹಕರು ತಮ್ಮ ಯಾವುದೇ ಹಳೆಯ ಫೀಚರ್ ಫೋನ್‌ಗಳನ್ನು ಕೇವಲ ರೂ. 501 ವಾಸ್ತವಿಕ ವೆಚ್ಚ ಪಾವತಿಸಿ ಹೊಸ ಜಿಯೋಫೋನ್‌ನೊಡನೆ (ಸದ್ಯದ ಮಾದರಿ, 'ಜಿಯೋಫೋನ್ 2' ಮಾದರಿ ಅಲ್ಲ) ವಿನಿಮಯ ಮಾಡಿಕೊಳ್ಳಬಹುದು.

ಜಿಯೋಫೋನ್ ವಿತರಕರಲ್ಲಿ ವಿನಿಮಯದ ವ್ಯವಸ್ಥೆ ಮಾಡಲಾಗಿದ್ದು ಸೀಮಿತ ದಾಸ್ತಾನು ಮಾತ್ರವೇ ಲಭ್ಯವಿದೆ ಎನ್ನುವ ಸಂದೇಶ ಈಗಾಗಲೇ ಜಿಯೋ ವತಿಯಿಂದ ಬಂದು ತಲುಪಿದೆ. ಇರುವ ಸಂಖ್ಯೆಯನ್ನೇ ಉಳಿಸಿಕೊಂಡು ಜಿಯೋ ಸಂಪರ್ಕ ಪಡೆಯುವ (ಪೋರ್ಟ್) ಸೌಲಭ್ಯವೂ ಇದೆಯೆಂದು ತಿಳಿಸುವ ಬ್ಯಾನರುಗಳು ಈಗಾಗಲೇ ಅಲ್ಲಲ್ಲಿ ಕಾಣಿಸಿಕೊಂಡಿವೆ. *ರೂ. 501ನ್ನು "ವಾಸ್ತವಿಕ ಪ್ರಾರಂಭಿಕ ವೆಚ್ಚ (ಇಫೆಕ್ಟಿವ್ ಎಂಟ್ರಿ ಕಾಸ್ಟ್)" ಎಂದು ಕರೆಯಲಾಗಿರುವುದರಿಂದ ಜಿಯೋ ಸಂಸ್ಥೆ ಈ ಕುರಿತು ಏನೆಲ್ಲ ನಿಯಮ-ನಿಬಂಧನೆಗಳನ್ನು ವಿಧಿಸಬಹುದು ಎನ್ನುವುದನ್ನು ಮಾತ್ರ ಕಾದುನೋಡಬೇಕಿದೆ. 

ತನ್ನ ಗ್ರಾಹಕರಿಗೆ ವಿಶ್ವದ ಅತ್ಯುತ್ತಮ ಆಪ್‌ಗಳನ್ನು ಒದಗಿಸಲು ಬದ್ಧವೆಂದು ಘೋಷಿಸಿದ್ದ ಜಿಯೋ ಫೇಸ್‌ಬುಕ್, ವಾಟ್ಸ್‌ಆಪ್ ಹಾಗೂ ಯೂಟ್ಯೂಬ್‌ನಂತಹ ವಿಖ್ಯಾತ ಆಪ್‌ಗಳನ್ನು ಜಿಯೋಫೋನ್ ಗ್ರಾಹಕರಿಗೆ ನೀಡಲಿದೆ. ಈ ಆಪ್‌ಗಳು ಆಗಸ್ಟ್ 15, 2018ರಿಂದ ಪ್ರಾರಂಭಿಸಿ ಎಲ್ಲ ಜಿಯೋಫೋನ್ ಬಳಕೆದಾರರಿಗೂ ದೊರಕಲಿವೆ.
ಇದನ್ನೂ ಓದಿ: ಜಿಯೋಫೋನ್ ಜಗದಲ್ಲಿ ಹೊಸ ಸುದ್ದಿಗಳ ಸಮಯ!
4ಜಿ ಸಂಪರ್ಕ ಹಾಗೂ ಧ್ವನಿರೂಪದ ಆದೇಶ ನೀಡಬಹುದಾದ ವಿಶಿಷ್ಟ ವ್ಯವಸ್ಥೆಯ (ವಾಯ್ಸ್ ಕಮ್ಯಾಂಡ್) ಮೂಲಕ ಬಳಕೆದಾರರು ಜಿಯೋಫೋನ್ ಆಪ್ ಇಕೋಸಿಸ್ಟಮ್‌ನಲ್ಲಿರುವ ಎಲ್ಲ ಆಪ್‌ಗಳನ್ನೂ ಬಳಸಬಹುದು. ಕರೆ ಮಾಡಲು, ಸಂದೇಶ ಕಳುಹಿಸಲು, ಅಂತರಜಾಲದಲ್ಲಿ ಮಾಹಿತಿ ಹುಡುಕಲು, ಹಾಡು ಕೇಳಲು, ವೀಡಿಯೋಗಳನ್ನು ನೋಡಲು ಹಾಗೂ ಜಿಯೋಫೋನ್‌ನಲ್ಲಿರುವ ಬೇರೆಲ್ಲ ಆಪ್‌ಗಳನ್ನು ಬಳಸಲು ಗ್ರಾಹಕರಿಗೆ ವಾಯ್ಸ್ ಕಮ್ಯಾಂಡ್ ಸೌಲಭ್ಯ ನೆರವಾಗಲಿದೆ.

ಜಿಯೋ ಹಾಗೂ ಜಿಯೋಫೋನ್ ಕುರಿತ ಹೆಚ್ಚಿನ ವಿವರ ಪಡೆಯಲು ಗ್ರಾಹಕರು ಜಿಯೋ ಜಾಲತಾಣಕ್ಕೆ ಭೇಟಿನೀಡಬಹುದು.

ಕಾಮೆಂಟ್‌ಗಳಿಲ್ಲ:

badge