ಬುಧವಾರ, ಆಗಸ್ಟ್ 16, 2017

ಸೆ.೧೫-೧೭ : ಬೆಂಗಳೂರಿನಲ್ಲಿ ಕನ್ನಡ ವಿಜ್ಞಾನ ಸಮ್ಮೇಳನ

ಇಜ್ಞಾನ ವಾರ್ತೆ



ಸ್ವದೇಶಿ ವಿಜ್ಞಾನ ಆಂದೋಳನ-ಕರ್ನಾಟಕದ ಆಶ್ರಯದಲ್ಲಿ ಬರುವ ಸೆಪ್ಟೆಂಬರ್ ೧೫ ರಿಂದ ೧೭ರವರೆಗೆ 'ಕನ್ನಡ ವಿಜ್ಞಾನ ಸಮ್ಮೇಳನ'ವನ್ನು (ಕರ್ನಾಟಕ ಸೈನ್ಸ್ ಕಾಂಗ್ರೆಸ್) ಆಯೋಜಿಸಲಾಗಿದೆ. ಈ ವರ್ಷದ ಕಾರ್ಯಕ್ರಮ ಬೆಂಗಳೂರಿನ ಎಂ. ಎಸ್. ರಾಮಯ್ಯ ಅನ್ವಯಿಕ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ನಡೆಯಲಿದೆ.

ವಿಜ್ಞಾನ-ತಂತ್ರಜ್ಞಾನಗಳ ಎಲ್ಲ ಆಯಾಮಗಳ ಕುರಿತಾಗಿ ಕನ್ನಡದಲ್ಲೇ ಪ್ರಬಂಧಗಳನ್ನು ಮಂಡಿಸುವುದು ಈ ಸಮ್ಮೇಳನದ ವೈಶಿಷ್ಟ್ಯ. ಭೌತವಿಜ್ಞಾನದಿಂದ ಭಾಷಾವಿಜ್ಞಾನದವರೆಗೆ, ಆಹಾರ ತಂತ್ರಜ್ಞಾನದಿಂದ ಮಾಹಿತಿ ತಂತ್ರಜ್ಞಾನದವರೆಗೆ  ವಿಜ್ಞಾನ-ತಂತ್ರಜ್ಞಾನಗಳ ವಿವಿಧ ಶಾಖೆಗಳನ್ನು ಒಟ್ಟು ಹದಿಮೂರು ವಿಭಾಗಗಳಾಗಿ ವಿಂಗಡಿಸಲಾಗಿದ್ದು ಈ ಎಲ್ಲ ವಿಭಾಗಗಳ ಕುರಿತ ವಿಚಾರವಿನಿಮಯಕ್ಕೂ ಸಮ್ಮೇಳನದಲ್ಲಿ ಸ್ವಾಗತವಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ನೋಂದಾಯಿಸಿದ ಪ್ರತಿನಿಧಿಗಳಿಗೆ ಮಾತ್ರ ಸಮ್ಮೇಳನದಲ್ಲಿ ಭಾಗವಹಿಸುವ ಅವಕಾಶ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ (೦೮೦ ೨೩೨೫೮೭೭೭) ಅಥವಾ ಇಮೇಲ್ (svak@svakarnataka.com) ಮೂಲಕ ಸಂಘಟಕರನ್ನು ಸಂಪರ್ಕಿಸಬಹುದು.

ಕಾಮೆಂಟ್‌ಗಳಿಲ್ಲ:

badge