ಮೊಬೈಲ್ ಫೋನ್ಗಳ ಅತಿಬಳಕೆಯ ದುಷ್ಪರಿಣಾಮಗಳು ಏನಿರಬಹುದು? ಕೊಳ್ಳೇಗಾಲ ಶರ್ಮರ ಈ ಲೇಖನ ಓದಿ.
ಭಾನುವಾರ, ಫೆಬ್ರವರಿ 24, 2008
ಶುಕ್ರವಾರ, ಫೆಬ್ರವರಿ 22, 2008
ವಿಜ್ಞಾನ ಗಂಗೆಯ ಬಿಂದುಸಾರ
ಸುವರ್ಣ ಕರ್ನಾಟಕ ಸಂಭ್ರಮಾಚರಣೆಯ ನೆನಪಿಗಾಗಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೂರು ಕನ್ನಡ ಪುಸ್ತಕಗಳನ್ನು ಪ್ರಕಟಿಸಿದೆ. 'ಸುವರ್ಣ ಸಾಹಿತ್ಯ ಗ್ರಂಥಮಾಲೆ' ಎಂಬ ಹೆಸರಿನ ಈ ಸರಣಿಯ ಭಾಗವಾಗಿ ಹೊರಬಂದಿರುವ ವಿಜ್ಞಾನ ಬರಹಗಳ ಸಂಕಲನ 'ವಿಜ್ಞಾನ ಗಂಗೆಯ ಬಿಂದುಸಾರ'. ಕಳೆದ ಐವತ್ತು ವರ್ಷಗಳ ಸುದೀರ್ಘ ಅವಧಿಯ ಕನ್ನಡ ವಿಜ್ಞಾನ ಸಾಹಿತ್ಯವನ್ನು ಪ್ರಾತಿನಿಧಿಕವಾಗಿ ಸಂಕಲಿಸುವ ಈ ಪುಟ್ಟ ಯತ್ನದ ಅಷ್ಟೇ ಪುಟ್ಟ ಪರಿಚಯ ಇಲ್ಲಿದೆ, ಓದಿ!
ವಿಜ್ಞಾನ ಗಂಗೆಯ ಬಿಂದುಸಾರ, ಸಂಪಾದಕರು: ನಾಗೇಶ ಹೆಗಡೆ
೨೨೪ ಪುಟಗಳು, ಬೆಲೆ ಇಪ್ಪತ್ತೈದು ರೂಪಾಯಿಗಳು
ಪ್ರಕಾಶಕರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಭವನ, ಜೆ ಸಿ ರಸ್ತೆ, ಬೆಂಗಳೂರು
ಮಂಗಳವಾರ, ಫೆಬ್ರವರಿ 19, 2008
ನಿಷೇಧಿತ ಪುರಾತತ್ತ್ವ : ಏನಿದರ ಮಹತ್ವ?
ಟಿ.ಆರ್. ಅನಂತರಾಮು
ನಿಮ್ಮ ಹಳೆಯ ಮನೆಯಲ್ಲಿ ಮುತ್ತಾತನ ಒಂದು ಚಿತ್ರವಿದೆಯೆನ್ನಿ. ಅದನ್ನು ನೀವು ಬಾಲ್ಯದಿಂದಲೇ ನೋಡುತ್ತ ಬಂದಿದ್ದೀರಿ. ಅಪ್ಪನನ್ನು ಕೇಳಿ, ಅವರ ತಾತ ಬದುಕಿದ್ದ ಪರಿ, ಅವರ ಆರೋಗ್ಯ, ವರ್ತನೆ, ದೈಹಿಕ ಚಹರೆಗಳು, ಬದುಕಿದ್ದಾಗ ಅವರು ಮಾಡಿದ ಸಾಧನೆ, ಅವರ ಒಡನಾಡಿಗಳು ಇಂಥ ಹತ್ತು ಹಲವು ಕುತೂಹಲಕಾರಿ ವಿಚಾರಗಳ ಬಗ್ಗೆ ನಿಮಗೊಂದು ಕಲ್ಪನೆ ಬಂದಿರುತ್ತದೆ. ವಾಸ್ತವವಾಗಿ ನಿಮ್ಮ ಅಪ್ಪ ಕೂಡ ಅವರ ತಾತನನ್ನು ನೋಡಿರಲಿಲ್ಲ. ಅವರಪ್ಪ ಹೇಳಿದ್ದನ್ನು ಕೇಳಿಸಿಕೊಂಡು ಒಂದಷ್ಟು ಸೇರಿಸಿ ಒಂದು ಚಿತ್ರಣವನ್ನು ನಿಮ್ಮ ಮುಂದೆ ಕೊಟ್ಟಿದ್ದಾರೆ ಎಂದು ಭಾವಿಸೋಣ. ಏನೇ ಇರಲಿ, ಮುತ್ತಾತನ ಬಗ್ಗೆ ಒಂದು ಬಗೆಯ ಪ್ರೀತಿ, ಗೌರವ, ಆದರ ಎಲ್ಲವೂ ನಿಮ್ಮ ಭಾವನೆಯಲ್ಲಿ ಬೆರೆತಿರುತ್ತದೆ.
ಹೀಗೆಯೇ ಇರುವ ಮನೋಸ್ಥಿತಿಯಲ್ಲಿ ಒಂದು ದಿನ ನಿಮ್ಮ ಹಳೇ ಮನೆಯ ಮೂಲೆ ಮಡುಕು ತಡಕುತ್ತೀರಿ. ದೂಳಾಗಿರುವ ಬಾಗಿಲವಾಡವನ್ನು ಒರೆಸುತ್ತೀರಿ. ಅಲ್ಲಿ ಮೋಡಿ ಅಕ್ಷರದಲ್ಲಿ ಸುಬ್ಬಣ್ಣ ಎಂದಿರುತ್ತದೆ. ಕೆತ್ತಿದ್ದು ೧೭೯೯ರಲ್ಲಿ ಎಂದು ಬರೆದಿರುತ್ತದೆ. ಬಾಗಿಲುವಾಡದ ಮೇಲೆ ಅವರದೇ ಆದ ಶೈಲಿಯಲ್ಲಿ ಹೂವು ಅರಳುತ್ತಿರುವುದನ್ನು ಕೆತ್ತಿದ್ದಾರೆ, ಬಳ್ಳಿಗೆ ಎಲೆಗಳಿವೆ, ನೀವು ವಿಸ್ಮಯಪಡುತ್ತೀರಿ. ೧೭೯೯ ಎಂಬುದು ನಿಮ್ಮ ಮನಸ್ಸಿಗೆ ನಾಟುತ್ತದೆ. ಏಕೆಂದರೆ ಅದು ಟಿಪ್ಪು ಸುಲ್ತಾನ್ ಸತ್ತ ವರ್ಷ. ಇದರರ್ಥ? ಆ ಹೊತ್ತಿಗೆ ನಿಮ್ಮ ಮುತ್ತಾತ ಬದುಕಿದ್ದರು. ಅಂದರೆ ೧೮ನೇ ಶತಮಾನದಲ್ಲೇ ಇದ್ದರು. ಅದೇಗೆ ಸಾಧ್ಯ? ಒಂದೊಂದು ತಲೆಮಾರಿಗೂ ಸಾಧಾರಣ ೩೦ ವರ್ಷ ಎಂದು ನೀವು ನಿಮ್ಮದೇ ಆದ ಲೆಕ್ಕಾಚಾರದಿಂದ ಹಿಮ್ಮುಖವಾಗಿ ಲೆಕ್ಕ ಹಾಕುತ್ತ ಹೋಗುವಿರಿ. ಅಂದರೆ ೯೦ ವರ್ಷಗಳಷ್ಟು ಹಿಂದಕ್ಕೆ ಹೋದರೆ ನಿಮ್ಮ ಮುತ್ತಾತ ಯೌವನಾವಸ್ಥೆಯಲ್ಲಿದ್ದ ಕಾಲ ಎನ್ನೋಣ. ಆದರೆ ಏಕೋ ಈ ಲೆಕ್ಕಾಚಾರವೇ ತಾಳೆಯಾಗುತ್ತಿಲ್ಲವಲ್ಲ. ಹಿಂದಿನ ಒಂದು ನೂರು ವರ್ಷವನ್ನು ಹೇಗೆ ಭರ್ತಿ ಮಾಡುವುದು? ಮುತ್ತಾತ ಬದುಕಿದ್ದು ಸುಳ್ಳೆ? ಮತ್ತೆ ಅಲ್ಲಿ ಕೆತ್ತಿರುವುದು? ನಿಮ್ಮ ವಿಶ್ವಾಸ ಅಲ್ಲಾಡುತ್ತದೆ. ಲೆಕ್ಕಾಚಾರದಲ್ಲಿ ಏನೋ ಎಡವಟ್ಟಾಗಿದೆ ಎಂದು ಮನಸ್ಸು ಒತ್ತಿ ಒತ್ತಿ ಹೇಳುತ್ತದೆ. ಇದರಿಂದ ಕುತೂಹಲ ತಳೆದು ಇನ್ನಷ್ಟು ತಡಕಾಡುತ್ತೀರಿ. ನಿಮ್ಮ ಮುತ್ತಾತನ ಕಾಲದ ಸಾಮಾನು ಸರಂಜಾಮುಗಳಿಗಾಗಿ ಹುಡುಕುತ್ತೀರಿ. ಮುತ್ತಾತ ಬಳಸಿದ ಜರ್ಮನ್ ಲಾಟೀನೊಂದು ಸಿಗುತ್ತದೆ. ಅದರಲ್ಲೂ ೧೭೮೦ ಎಂದು ಇದೆ. ಸಂದೂಕದ ಮೇಲೆ ಯಾವುದೋ ದೇವರ ಚಿತ್ರವನ್ನು ಬಿಡಿಸಿದ್ದಾರೆ. ಕೆಳಗೆ ಅಲ್ಲೂ ಸುಬ್ಬಣ್ಣ ಎಂದಿದೆ. ಇಸವಿ ೧೭೭೫ ಎಂದಿದೆ. ಈಗ ನೀವು ಸಂಪೂರ್ಣವಾಗಿ ಗೊಂದಲಗೊಳ್ಳುತ್ತೀರಿ. ಅಪ್ಪ ಹೇಳಿದ್ದು ಸುಳ್ಳೆ? ಇಷ್ಟಾದರೂ ಅವರ ತಾತನ ಬಗ್ಗೆ ಸುಳ್ಳು ಹೇಳಿದರೆ ಏನು ಅವರಿಗೆ ಲಾಭ? ಯೋಚಿಸುತ್ತ ಹೋದಂತ ಗಲಿಬಿಲಿಯೇ ಹೆಚ್ಚಾಗುತ್ತದೆ. ಕೊನೆಗೆ ಸತ್ಯ ಶೋಧನೆಗೆಂದು ನೀವೇ ಇಳಿದು ವಂಶವೃಕ್ಷದ ಎಲ್ಲ ಹಂತಗಳನ್ನೂ ಕೂಲಂಕಷವಾಗಿ ನೋಡುತ್ತೀರಿ. ನಿಮ್ಮ ವಂಶಸ್ಥರಲ್ಲಿ ಅದೆಷ್ಟೋ ಸುಬ್ಬಣ್ಣರಿರಬಹುದೆ? ಈ ಸುಬ್ಬಣ್ಣ ಮುತ್ತಾತನ ಅಪ್ಪ ಕೂಡ ಸುಬ್ಬಣ್ಣ ಆಗಿರಬಹುದೆ. ಯಾರು ನಿಜವಾದ ಸುಬ್ಬಣ್ಣ. ಹಾಗಿದ್ದಲ್ಲಿ ಅಪ್ಪನ ತಾತ ಸುಬ್ಬಣ್ಣ ಇವರಾಗಿದ್ದರೆ ಅಪ್ಪ ಯಾಕೆ ಕನಿಷ್ಠ ಅವರು ಬದುಕಿದ್ದ ಕಾಲವನ್ನು ಗಮನಿಸದೆ ನಿರ್ಲಕ್ಷಿಸಿದ್ದಾರೆ. ತನ್ನ ವಂಶಸ್ಥರ ಬಗ್ಗೆ ಹೀಗೆ ನಿರ್ಲಕ್ಷಿಸಬಹುದೆ?
ಇಂಥ ಒಂದು ಪರಿಸ್ಥಿತಿಯನ್ನು ಕಲ್ಪಿಸಿಕೊಂಡರೆ ಮೈಕೇಲ್ ಕ್ರೆಮೋ ಮತ್ತು ರಿಚರ್ಡ್ ಥಾಮ್ಪ್‌ಸನ್ ಅವರು ಬರೆದಿರುವ ‘ಫರ್‌ಬಿಡನ್ ಆರ್ಕಿಯಾಲಜಿ’ ಕೃತಿಯ ಹೂರಣ ಮನನವಾಗುತ್ತದೆ. ೧೯೯೩ರಲ್ಲಿ ಈ ಲೇಖಕರು ಇದನ್ನು ಪ್ರಕಟಿಸಿದಾಗ ವಿಜ್ಞಾನ ವಲಯದಲ್ಲಿ ಕಾವೇರಿತ್ತು; ಒಂದು ರೀತಿಯ ಷಾಕ್ ನೀಡಿತ್ತು. ನಮ್ಮ ಗ್ರಹಿಕೆಯ ಬುಡವನ್ನೇ ಅಲ್ಲಾಡಿಸಿದೆ ಎಂದು ವೃತ್ತಿಪರರು ಹೇಳತೊಡಗಿದರು. ಅವರು ಪ್ರತಿಪಾದಿಸಿದ್ದಾದರೂ ಏನು? ಮೂಲತಃ ಮಾನವ ವಿಕಾಸದ ಕಾಲಘಟ್ಟಗಳನ್ನೇ ಅವರು ಪ್ರಶ್ನಿಸಿದ್ದರು. ಇಬ್ಬರ ಪೈಕಿ ರಿಚರ್ಡ್ ಥಾಮ್ಪ್‌ಸನ್ ಗಣಿತಜ್ಞ, ಅದರಲ್ಲೂ ಜೀವಿ ವಿಜ್ಞಾನಕ್ಕೆ ಗಣಿತ ಅನ್ವಯಿಸುವ ಪರಿಣತ. ದೂರಗ್ರಾಹಿ ತಂತ್ರ, ಭೂವಿಜ್ಞಾನ, ಭೌತವಿಜ್ಞಾನದಲ್ಲಿ ತನಗೆ ಪರಿಶ್ರಮವಿದೆಯೆಂದು ಆತ್ಮವಿಶ್ವಾಸದಿಂದ ಹೇಳುವಾತ. ಮೈಕೇಲ್ ಕ್ರೆಮೋ ಕ್ಯಾಲಿಫೋರ್ನಿಯ ವಾಸಿ. ೧೯೭೭ರಿಂದಲೂ ಲಾಸ್‌ಏಂಜಲೀಸ್‌ನ ಭಕ್ತಿವೇದಾಂತ ಬುಕ್ ಪಬ್ಲಿಷಿಂಗ್ ಟ್ರಸ್ಟ್‌ನಲ್ಲಿ ಸಂಪಾದಕ ಮತ್ತು ಲೇಖಕ. ಈ ಇಬ್ಬರು ಕೈಹಾಕಿದ್ದು ಬಲು ಕ್ಲಿಷ್ಟವಾದ, ಸಂಕೀರ್ಣವಾದ, ಗೊಂದಲ ಗೊಜಲುಗಳಿಂದ ತುಂಬಿದ್ದ, ಅರಿವಿಗೆ ಸವಾಲು ಹಾಕುವ ಮಾನವ ವಿಕಾಸಕ್ಷೇತ್ರಕ್ಕೆ. ಸಂಕ್ಷಿಪ್ತದಲ್ಲಿ ಅದು ‘ಸುಬ್ಬಣ್ಣ ಮುತ್ತಾತನ ಕಥೆ’ ಇದ್ದಂತೆ.
‘ಫರ್‌ಬಿಡನ್ ಆರ್ಕಿಯಾಲಿಜಿ’ಯಲ್ಲಿ ಇವರು ಮಂಡಿಸಿರುವ ವಿಚಾರ ಸರಣಿಗಳೇನು? ಹೊರನೋಟಕ್ಕೆ ಇವು ಬರೀ ಮೇಲುಸ್ತರದವು ಎನ್ನಿಸಬಹುದು. ಆದರೆ ಅವರು ಎತ್ತುವ ಪ್ರಶ್ನೆಗಳಿಗೆ ಸಮಾಧಾನಕರ ಉತ್ತರ ಕೊಡಲು ವಿಜ್ಞಾನಿಗಳು ತಿಣುಕಿರುವುದೂ ಉಂಟು, ತಿರುಗೇಟು ಕೊಟ್ಟಿರುವುದೂ ಉಂಟು.
‘ಫರ್‌ಬಿಡನ್ ಆರ್ಕಿಯಾಲಜಿ’ ಕೃತಿಯನ್ನು ಬಹುಮಂದಿಗೆ ತಲಪಿಸಲು, ಅದರ ಬಾಹುಳ್ಯವನ್ನು ಇನ್ನಷ್ಟು ಹ್ರಸ್ವಗೊಳಿಸಿ ಈಗ ‘ದಿ ಹಿಡನ್ ಹಿಸ್ಟರಿ ಆಫ್ ದಿ ಹ್ಯೂಮನ್ ರೇಸ್’ ಎಂಬ ಕೃತಿಯನ್ನು ಅವರೇ ತಂದಿದ್ದಾರೆ. ಮೂಲ ಆವೃತ್ತಿಯಂತೆ ಇದೂ ಕೂಡ ವಿವಾದದ ಸುಳಿಗಳನ್ನು ಎಬ್ಬಿಸಿದೆ; ಇಂದಿಗೂ ಎಬ್ಬಿಸುತ್ತಿದೆ. ಈ ಕೃತಿಯಲ್ಲಿ ಅವರು ಬೊಟ್ಟು ಮಾಡುವ ಸಂಗತಿಗಳ ಒಂದಷ್ಟು ಮಾದರಿಗಳನ್ನು ನೋಡಬಹುದು. ಕೃತಿಯ ಪ್ರವೇಶದಲ್ಲೇ ಅವರು ಕಾಣಿಸಿರುವ ವಾಕ್ಯಗಳಿವು :
‘೧೯೭೯ರಲ್ಲಿ ಪೂರ್ವ ಆಫ್ರಿಕದ ತಾಂಜೇನಿಯದ ಲೆತೊಲಿ ಎಂಬ ತಾಣದಲ್ಲಿ ಸಂಶೋಧಕರು ಮಾನವ ಹೆಜ್ಜೆ ಗುರುತುಗಳನ್ನು ಜ್ವಾಲಾಮುಖಿಯ ಬೂದಿಯಲ್ಲಿ ಪತ್ತೆಹಚ್ಚಿದರು. ವಿಶೇಷವೆಂದರೆ ಈ ಬೂದಿ ಗಟ್ಟಿಯಾಗಿದ್ದು ೩೬ ಲಕ್ಷ ವರ್ಷಗಳ ಹಿಂದೆ. ಇವಕ್ಕೂ ಆಧುನಿಕ ಮಾನವನ ಹೆಜ್ಜೆ ಗುರುತುಗಳಿಗೂ ಅಂಥ ವ್ಯತ್ಯಾಸವೇನಿಲ್ಲವೆಂದು ಮಾನವ ಶಾಸ್ತ್ರ ಪರಿಣತರು ಅಧ್ಯಯನದ ಮೂಲಕ ದೃಢಪಡಿಸಿದರು. ಅಂದರೆ? ಅದರ ಅರ್ಥ ಸುಸ್ಪಷ್ಟ. ೩೬ ಲಕ್ಷ ವರ್ಷಗಳ ಹಿಂದೆಯೇ ಈಗಿನಂತೆ ಪಾದಗಳಿದ್ದ ಮಾನವ ಆ ಜಾಗದಲ್ಲೇ ಅಡ್ಡಾಡಿದ್ದ. ಚಿಕಾಗೋ ವಿಶ್ವವಿದ್ಯಾಲಯದ ಆರ್. ಎಚ್. ಟಟಲ್ ಎಂಬಾತ ೩೬ ಲಕ್ಷ ವರ್ಷಗಳ ಹಿಂದಿನ ಅಸ್ಟ್ರಲೋಪಿತಿಕಸ್ ಎಂಬ ವಾನರನ ಕಾಲಿನ ಮೂಳೆಗಳನ್ನು ಅಧ್ಯಯನ ಮಾಡಿ ಅವು ನಿಚ್ಚಳವಾಗಿ ಏಪ್ ತರಹದ ಜೀವಿಗಳಷ್ಟೇ ಹೊರತು ಲೆತೊಲಿಯದನ್ನು ಇವಕ್ಕೆ ಹೋಲಿಸಲಾಗುವುದಿಲ್ಲ ಎಂದು ಹೇಳಿದ್ದ. ಆದರೆ ೧೯೯೦ರಲ್ಲಿ ನ್ಯಾಚುರಲ್ ಹಿಸ್ಟರಿ ಎಂಬ ಸಂಶೋಧನಾ ಪತ್ರಿಕೆಗೆ ಬರೆಯುತ್ತ ‘ಏಕೋ ಒಂದು ಬಗೆಯ ಗೊಂದಲವಾಗುತ್ತಿದೆ’ ಎಂದು ಹೇಳಿದ್ದ. ಈ ಎರಡೂ ಅಭಿಪ್ರಾಯಗಳನ್ನು ಬದಿಗಿಟ್ಟು ಇನ್ನೊಂದು ಅಭಿಪ್ರಾಯವನ್ನು ನಾವು ಪರಿಗಣಿಸಲು ಸಾಧ್ಯವಿಲ್ಲವೆ? ಪೂರ್ವ ಆಫ್ರಿಕಾದಲ್ಲಿ ೩೬ ಲಕ್ಷ ವರ್ಷಗಳ ಹಿಂದೆ ಅಂಗರಚನೆಯ ದೃಷ್ಟಿಯಿಂದ ಆಧುನಿಕ ಮಾನವನನ್ನು ಹೋಲುವ ಜೀವಿಗಳು ಏಕೆ ಇದ್ದಿರಬಾರದು? ಏಪ್ ತರಹದ ಜೀವಿಗಳೊಂದಿಗೆ ಅವು ಸಹ ಜೀವನ ನಡೆಸಿರಬಾರದೇಕೆ? ಈ ಸಾಧ್ಯತೆಯನ್ನು ಏಕೆ ಪರಿಗಣಿಸಬಾರದು? ಒಂದೇ ಒಂದು ಅಡ್ಡ ಬರುವುದೆಂದರೆ ಮಾನವ ವಿಕಾಸದ ಬಗ್ಗೆ ಈಗಿರುವ ನಮ್ಮ ಗ್ರಹಿಕೆ ಇಂಥ ಸತ್ಯವನ್ನು ನಿಷೇಧಿಸಿಬಿಡುತ್ತದೆ.
ಹಾಗಾದರೆ ಡಾರ್ವಿನ್ ಪ್ರತಿಪಾದಿಸಿದ ‘ವಿಕಾಸ ಸಿದ್ಧಾಂತ’ ಹುಸಿ ಪರಿಕಲ್ಪನೆಯೆ? ಈ ಇಬ್ಬರೂ ಹೌದು ಎನ್ನುತ್ತಾರೆ. ಅದು ವಸ್ತುನಿಷ್ಠವಲ್ಲ ಎಂದು ಹೇಳುವ ಧೈರ್ಯ ತೋರುತ್ತಾರೆ. ಅವರು ಅನೇಕ ಸಾಕ್ಷಿಗಳತ್ತ ಬೊಟ್ಟು ಮಾಡುತ್ತಾರೆ. ೧೮೮೦ರಲ್ಲಿ ಜೇಡಿ ವಿಟ್ನಿ ಎಂಬ ಕ್ಯಾಲಿಫೋರ್ನಿಯ ರಾಜ್ಯದ ಭೂವಿಜ್ಞಾನಿ ಅಲ್ಲಿನ ಚಿನ್ನದ ಗಣಿಯಿಂದ ಸಂಗ್ರಹಿಸಿದ ಪ್ರಾಚ್ಯವಸ್ತುಗಳನ್ನು ಕುರಿತು ತಪಶೀಲು ವರದಿ ತಯಾರಿಸಿ ಟಿಪ್ಪಣಿ ಬರೆದ. ಗಣಿಯ ಕೂಪದೊಳಗೆ ಕಲ್ಲು ಅರೆಯುವ ಕುಟಾಣಿ, ಒರಳು, ಭರ್ಜಿ ರೂಪದ ಶಿಲೆ ದೊರೆತಿದ್ದವು. ಅವನ್ನು ಆತ ಬಗೆದು ತೆಗೆದದ್ದು ಕೆನೆಗಟ್ಟಿದ ಲಾವಾರಸದ ಸ್ತರದಿಂದ. ಈ ಸ್ತರಗಳ ವಯೋಮಾನ ಒಂಬತ್ತು ದಶಲಕ್ಷ ವರ್ಷಗಳಿಂದ ಹಿಡಿದು ೫೫ ದಶಲಕ್ಷ ವರ್ಷಗಳವರೆಗೆ. ಸ್ಮಿತ್‌ಸೋನಿಯನ್ ಸಂಸ್ಥೆಯ ಹೋಮ್ಸ್ ಎಂಬ ತಜ್ಞ ಇದನ್ನು ಕುರಿತು ಬರೆದ ಮಾತುಗಳಿವು :
‘ನಾವು ಇಂದು ಮಾನವ ವಿಕಾಸವನ್ನು ಅರ್ಥೈಸಿಕೊಂಡಿರುವ ಬಗೆಯನ್ನೇ ವಿಟ್ನಿ ಅನುಸರಿಸಿದ್ದರೆ ಬಹುಶಃ ತಾನು ಪತ್ತೆ ಹಚ್ಚಿದ ಈ ಸಾಕ್ಷಿಗಳನ್ನು ಬಹಿರಂಗಪಡಿಸಲು ಆತ ಹಿಂಜರಿಯುತ್ತಿದ್ದ.’
ಇದರ ಅರ್ಥ ಏನು? ನಾವು ನಂಬಿರುವ ಸಾಕ್ಷಿಗಳಿಗೆ ವಾಸ್ತವ ಸಾಕ್ಷಿಗಳು ತಾಳೆಯಾಗದಿದ್ದಾಗ ಅವು ಎಷ್ಟೇ ಪ್ರಬಲ ಸಾಕ್ಷಿಗಳಾಗಿರಲಿ ಅವುಗಳನ್ನು ದೂರ ತಳ್ಳಿಬಿಡುವುದೋ, ಮರೆಮಾಚಿಬಿಡುವುದೋ ವಿಜ್ಞಾನಿಗಳ ಸ್ವಭಾವ. ಇದನ್ನೇ ಕ್ರೆಮೋ ಮತ್ತು ಥಾಮ್ಪ್‌ಸನ್ ತಮ್ಮ ಕೃತಿಯಲ್ಲಿ ‘ಜ್ಞಾನವನ್ನು ಸೋಸುವ’ ಕೈಚಳಕ ಎಂದು ಕರೆದಿದ್ದಾರೆ.
‘ಫರ್‌ಬಿಡನ್ ಆರ್ಕಿಯಾಲಜಿ’ಯ ಸಾರಸಂಗ್ರಹವಾದ ‘ದಿ ಹಿಡನ್ ಹಿಸ್ಟರಿ ಆಫ್ ದಿ ಹ್ಯೂಮನ್ ರೇಸ್’ ಹೊರತಂದಾಗಿನಿಂದ ವಿಜ್ಞಾನಿಗಳಲ್ಲೇ ಎರಡು ಬಣವಾಗಿದೆ. ಈ ಕೃತಿಯುದ್ದಕ್ಕೂ ಮಾನವ ವಿಕಾಸದ ಬಗ್ಗೆ ನಮ್ಮ ಗ್ರಹಿಕೆಯೇ ಅಪೂರ್ಣ ಎಂದು ವಾದಿಸುತ್ತ ಅದಕ್ಕೆ ಪೂರಕವಾಗಿ ಹಲವು ಸಾಕ್ಷಿಗಳನ್ನು ನೀಡುತ್ತಾರೆ. ಈ ಸಾಕ್ಷಿಗಳ ಬಗ್ಗೆಯೇ ವಿಜ್ಞಾನಿಗಳಲ್ಲಿ ಭಿನ್ನ ಮತವಿದೆ. ವಿಕಾಸ ವಾದದ ಬುಡಕ್ಕೇ ಕೈಹಾಕಿರುವ ಲೇಖಕರು ತಮ್ಮ ವಾದ ಸರಣಿಯನ್ನು ಎಷ್ಟು ಕೌಶಲವಾಗಿ ಬೆಳೆಸುತ್ತಾರೆ ಎಂದು ಅರಿಯುವ ಮೊದಲು ವಿಕಾಸವಾದ ಕುರಿತು ಪ್ರಚಲಿತವಿರುವ ನಮ್ಮ ಗ್ರಹಿಕೆಯ ಬಗ್ಗೆ ಕೆಲವು ಅಂಶಗಳನ್ನು ಸ್ಥೂಲವಾಗಿ ಪರಿಗಣಿಸಬಹುದು.
ಚಾರ್ಲ್ಸ್ ಡಾರ್ವಿನ್ ‘ಆರಿಜನ್ ಆಫ್ ದಿ ಸ್ಪೀಸೀಸ್’ (ಜೀವಿಸಂಕುಲಗಳ ಉಗಮ) ಎಂಬ ಕೃತಿಯನ್ನು ೧೮೫೯ರಲ್ಲಿ ಬರದಾಗ ಮಾನವ ವಿಕಾಸದ ಬಗ್ಗೆ ಆತ ದೀರ್ಘವಾಗಿ ಏನೂ ಚರ್ಚಿಸಿರಲಿಲ್ಲ. ೧೮೭೧ರಲ್ಲಿ ‘ಡಿಸೆಂಟ್ ಆಫ್ ಮ್ಯಾನ್’ ಎಂಬ ಕೃತಿ ಬರೆದು ಅದರಲ್ಲಿ ಮಾನವ ವಿಕಾಸವನ್ನು ಕುರಿತೇ ಹೆಚ್ಚು ಚರ್ಚಿಸಿದ್ದ. ಮನುಷ್ಯನಿಗೆ ಇಲ್ಲಿ ಅಂದರೆ ವಿಕಾಸದ ದೃಷ್ಟಿಯಿಂದ ವಿಶೇಷ ಸ್ಥಾನವನ್ನೇನೂ ಕಲ್ಪಿಸಲಾಗುವುದಿಲ್ಲ ಎಂದು ಹೇಳಿದ್ದ. ಏಪ್ ತರಹದ ಜೀವಿಯ ಮೂಲದಿಂದ ಒಂದು ಕವಲೊಡೆದು ಮಾನವ ವಿಕಾಸವಾಗಿದೆ ಎಂದು ಸ್ಪಷ್ಟವಾಗಿ ತಿಳಿಸಿದ್ದ. ಅದೇ ತಿಳಿವಿನ ಹಿನ್ನೆಲೆಯಲ್ಲಿ ಮಾನವ ವಿಕಾಸದ ಬೇರೆ ಬೇರೆ ಕಾಲಘಟ್ಟಗಳನ್ನು ಮಾನವ ಶಾಸ್ತ್ರಜ್ಞರು ಗುರುತಿಸಿದ್ದರು. ಇವರ ಅಧ್ಯಯನದ ರೀತ್ಯ ಏಪ್ ತರಹದ ಜೀವಿ ೩೮ ದಶಲಕ್ಷ ವರ್ಷಗಳ ಹಿಂದೆ ಅಂದರೆ ಭೂವಿಜ್ಞಾನದ ಕಾಲಪಟ್ಟಿಯ ರೀತ್ಯ ಆಲಿಗೋಸೀನ್ ಎಂಬ ಕಾಲದಲ್ಲಿ ಭೂಮಿಯ ಮೇಲೆ ಕಾಣಿಸಿಕೊಂಡಿತ್ತು. ಸ್ವಲ್ಪಮಟ್ಟಿಗೆ ಮನುಷ್ಯನನ್ನು ಹೋಲುವ ಏಪ್ ಕಾಣಿಸಿಕೊಂಡದ್ದು ಮಯೋಸೀನ್ ಕಾಲದಲ್ಲಿ. ಅಂದರೆ ಈಗಿನಿಂದ ಹಿಂದಕ್ಕೆ ಐದು ದಶಲಕ್ಷ ವರ್ಷಗಳಿಂದ ಪ್ರಾರಂಭಿಸಿ, ೨೫ ದಶಲಕ್ಷ ವರ್ಷಗಳವರೆಗೆ. ಇಂಥ ಜೀವಿಯನ್ನು ಮಾನವ ಶಾಸ್ತ್ರಜ್ಞರು ಡ್ರಯೋಪಿತಿಕಸ್ ಎನ್ನುತ್ತಾರೆ. ಶಿಲಾಸ್ತರಗಳಲ್ಲಿ ಹುದುಗಿರುವ ಜೀವ್ಯವಶೇಷಗಳನ್ನು ಅಧ್ಯಯನ ಮಾಡಿದ ತಜ್ಞರು ಹೇಳುವುದೆಂದರೆ ‘ಮಾನವನನ್ನು ಹೋಲುವ ಏಪ್‌ಗಳು (ಪ್ರೈಮೇಟ್ಸ್) ನೆಟ್ಟಗೆ ನಿಂತು ನಡೆದಾಡುವುದನ್ನು ಪ್ರಾರಂಭಿಸಿದ್ದು ಪ್ಲಿಯೋಸೀನ್ ಕಾಲದಲ್ಲಿ ಅಂದರೆ ಈಗ್ಗೆ ಐದು ದಶಲಕ್ಷ ವರ್ಷಗಳ ಹಿಂದೆ. ಈ ಜೀವಿಯೇ ಅಸ್ಟ್ರಲೋಪಿತಿಕಸ್. ನಾಲ್ಕರಿಂದ ಐದು ಅಡಿ ಎತ್ತರದ, ೩೦೦ ರಿಂದ ೬೦೦ ಸಿ.ಸಿ. ಕಪಾಲ ಸಾಮರ್ಥ್ಯದ, ಮಾನವನಿಗೆ ಬಹು ಸಮೀಪದ ಅಸ್ಟ್ರಲೋಪಿತಿಕಸ್‌ನ ಲಕ್ಷಣವೆಂದರೆ ಅದು ಕತ್ತಿನಿಂದ ಕೆಳಕ್ಕೆ ಮನುಷ್ಯನಂತಿತ್ತು, ಶಿರ ಮಾತ್ರ ಏಪ್ ಹೋಲುತ್ತಿತ್ತು ಎನ್ನುತ್ತಾರೆ. ಅಸ್ಟ್ರಲೋಪಿತಿಕಸ್, ವಿಕಾಸವಾಗುತ್ತಿದ್ದ ಒಂದು ಮಜಲಿನಲ್ಲಿ ಒಂದು ಕವಲು ಹೋಮೋ ಹ್ಯಾಬಿಲಿಸ್ ಎನ್ನುವ ಪ್ರಭೇದಕ್ಕೆ ಅವಕಾಶ ನೀಡಿತು - ೨೦ ಲಕ್ಷ ವರ್ಷಗಳ ಹಿಂದೆ. ಅಂದರೆ ಪ್ಲಿಯಿಸ್ಟೋಸಿನ್ ಯುಗದ ಆರಂಭದಲ್ಲಿ. ಹೋಮೋ ಹ್ಯಾಬಿಲಿಸ್ ಸ್ವಲ್ಪಮಟ್ಟಿಗೆ ಅಸ್ಟ್ರಲೋಪಿತಿಕಸ್‌ನನ್ನು ಹೋಲುತ್ತಿತ್ತು. ಆದರೆ ಕಪಾಲದ ಸಾಮರ್ಥ್ಯ ೬೦೦ರಿಂದ ೭೦೦ ಸಿ.ಸಿ. ೧೫ ಲಕ್ಷ ವರ್ಷಗಳ ಹಿಂದೆ ಹೋಮೋ ಹ್ಯಾಬಿಲಿಸ್‌ನಿಂದ ಇನ್ನೊಂದು ಪ್ರಭೇದ ಹೋಮೋ ಎರಕ್ಟಸ್ ವಿಕಾಸವಾಯಿತು. ಇದನ್ನೇ ನಾವು ಜಾವಾ ಮನುಷ್ಯ, ಪೀಕಿಂಗ್ ಮನುಷ್ಯ ಎಂದು ಕರೆಯುತ್ತೇವೆ. ಐದರಿಂದ ಆರು ಅಡಿ ಎತ್ತರದ ಜೀವಿ, ೭೦೦ರಿಂದ ೧೩೦೦ ಸಿ.ಸಿ. ಕಪಾಲ ಸಾಮರ್ಥ್ಯ. ನೆಟ್ಟಗೆ ನಿಂತು ಎರಡೂ ಕಾಲಿನ ಮೇಲೆ ನಿಲ್ಲಬಲ್ಲ ಶಕ್ತಿ ಹೋಮೋ ಎರಕ್ಟಸ್‌ಗೆ ಇತ್ತು. ಕಳೆದ ಎರಡುಲಕ್ಷ ವರ್ಷಗಳ ಹಿಂದಿನವರೆಗೆ ಇವು ಆಫ್ರಿಕ, ಏಷ್ಯ, ಯೂರೋಪಿನಲ್ಲಿ ನೆಲೆಯಾಗಿದ್ದುವು. ಪ್ರಾಗ್ ಮಾನವ ಶಾಸ್ತ್ರಜ್ಞರ ಊಹೆಯಂತೆ ಆಧುನಿಕ ಮಾನವ ಹೋಮೋಸೇಪಿಯನ್(ಮತಿವಂತ ಮಾನವ), ಹೋಮೋ ಎರಕ್ಟಸ್‌ನಿಂದ ವಿಕಾಸಗೊಂಡ ಜೀವಿ. ಅಂದಾಜು ಕಾಲ ೩,೦೦,೦೦೦ ದಿಂದ ೪,೦೦,೦೦೦ ವರ್ಷಗಳ ಹಿಂದಿನವರೆಗೆ. ಆಧುನಿಕ ಮಾನವ ನೇರವಾಗಿ ವಿಕಾಸವಾದದ್ದು ನಿಯಾಂಡ್ರತಲ್ ಮಾನವನಿಂದ ಎನ್ನುತ್ತಾರೆ. ಇವನು ಬಾಳಿದ್ದು ಪ್ಲಿಸ್ಟೋಸೀನ್ ಯುಗದ ಉತ್ತರಾರ್ಧದಲ್ಲಿ; ಕೊನೆಯ ಹಿಮಯುಗ ಪ್ರಾರಂಭವಾಗುವ ಮೊದಲು. ೫೦,೦೦೦ ವರ್ಷಗಳ ಹಿಂದೆ ಈ ಪ್ರಭೇದ ಗತವಂಶಿಯಾಯಿತು. ಇವನ ನಂತರದ ಪೀಳಿಗೆ ಕ್ರೋ ಮ್ಯಾಗ್ನಾನ್ - ಶರೀರ ರಚನೆಯಿಂದ ಇನ್ನಷ್ಟು ವಿಕಾಸವಾದ ಜೀವಿ. ೪೦,೦೦೦ ವರ್ಷಗಳ ಹಿಂದೆ ಇವನ ಬಾಳು.
ಕ್ರೆಮೋ ಮತ್ತು ಥಾಮ್ಪ್‌ಸನ್ ಹೇಳುತ್ತಾರೆ : ಅಸ್ಟ್ರಲೋಪಿತಿಕಸ್‌ನಿಂದ ಹೋಮೋ ಹ್ಯಾಬಿಲಿಸ್, ಇದರಿಂದ ಹೋಮೋ ಎರಕ್ಟಸ್, ಅದರಿಂದ ಆಧುನಿಕ ಹೋಮೋಸೇಪಿಯನ್ ಹೇಗೆ ಹಂತ ಹಂತಗಳಲ್ಲಿ ವಿಕಾಸವಾದುವು ಎಂಬುದನ್ನು ಯಾವ ಮಾನವ ಶಾಸ್ತ್ರಜ್ಞರು ನಿಚ್ಚಳವಾಗಿ ಗುರುತಿಸಿಲ್ಲ. ನಮ್ಮ ಪಳೆಯುಳಿಕೆಯ ದಾಖಲೆಯೇ ಅಪೂರ್ಣ. ಮಯೋಸೀನ್ ಯುಗದ ಏಪ್‌ಗಳನ್ನು ಪ್ಲಿಯೋಸೀನ್ ತಲೆಮಾರಿನೊಡನೆ ಕೊಂಡಿಕೂಡಿಸಲಾಗಿಲ್ಲ. ಕೇವಲ ನಾಲ್ಕರಿಂದ ಎಂಟು ದಶಲಕ್ಷ ವರ್ಷಗಳ ಅವಧಿಯ ಚರಿತ್ರೆಯನ್ನು ಪುನಾರಚಿಸಲು ತಿಣುಕಾಡುತ್ತಿದ್ದೇವೆ. ಇದು ಜೀವಿ ವಿಜ್ಞಾನದ ಮಿತಿಯೂ ಹೌದು. ವಿಕಾಸವಾದ ಸಂಪೂರ್ಣವಾಗಿ ಸತ್ಯವಲ್ಲ. ಅದು ಶಿಥಿಲ ಬುನಾದಿಯ ಮೇಲೆ ನಿಂತಿದೆ ಎನ್ನುತ್ತಾರೆ. ಮಾನವ ನಿರ್ಮಿತ ವಸ್ತುಗಳ ವಯೋನಿರ್ಧಾರಕ್ಕೆ ಬಳಸುವ ಕಾರ್ಬನ್-೧೪ ತಂತ್ರಜ್ಞಾನ ಕೂಡ ದೋಷಪೂರಿತ. ಮಾದರಿಗಳು ಕಲುಷಿತವಾಗಿರುವುದನ್ನು ಬಹುಮಂದಿ ಕಡೆಗಣಿಸುತ್ತಾರೆ. ಹೀಗಾಗಿ ಪಡೆಯುವ ಫಲಿತಾಂಶವೇ ವೈಪರೀತ್ಯದಿಂದ ಕೂಡಿರುತ್ತದೆ. ಎಂದೇ ವಯೋಮಾನದ ಅಂಕೆಅಂಶಗಳು ನಿಜಕ್ಕೂ ನಂಬುವಂತಹದಲ್ಲ. ಪ್ರಾಚೀನ ಮಾನವ ಶಾಸ್ತ್ರ ಅಧ್ಯಯನದ ಬಹುದೊಡ್ಡ ಕೊರತೆ ಎಂದರೆ ಅದು ವಸ್ತುನಿಷ್ಠವಲ್ಲ, ಬದಲು ವರದಿನಿಷ್ಠ.
ಇಂದಿನ ವಿಜ್ಞಾನದ ಪ್ರಗತಿಯನ್ನು ಬಹು ಗಂಭೀರವಾಗಿಯೇ ಪ್ರಶ್ನಿಸುವ ಕ್ರೆಮೋ ಮತ್ತು ಥಾಮ್ಪ್‌ಸನ್ ಯಾವ ಬಗೆಯ ಮಾಹಿತಿಗಳತ್ತ ಬೊಟ್ಟು ಮಾಡುತ್ತಾರೆ ಎನ್ನುವುದು ಕುತೂಹಲಕರವೇ. ಅಂಗರಚನ ಶಾಸ್ತ್ರದನ್ವಯ ಆಧುನಿಕ ಮಾನವ ಹತ್ತು ಲಕ್ಷ ವರ್ಷಗಳ ಹಿಂದೆ ಬದುಕಿದ್ದ ಎಂದು ಭಾವಿಸಿದರೂ ಅಂದರೆ ಡ್ರಯೋಪಿತಿಕಸ್ ನಿರ್ವಂಶವಾಗಿ ೪೦ ಲಕ್ಷ ವರ್ಷಗಳು ಕಳೆದ ಮೇಲೆ ಎಂದು ಒಪ್ಪಿಕೊಂಡರೂ ಇದಿಷ್ಟೇ ಸಾಕು ಮಾನವ ವಿಕಾಸದ ಬಗ್ಗೆ ಅವೆಷ್ಟು ಗೊಂದಲಗಳಿವೆ ಎಂದು ಸಾರಲು. ಡಾರ್ವಿನ್ ‘ಜೀವಿ ಸಂಕುಲಗಳ ಉಗಮ’ ಕೃತಿಯನ್ನು ಬರೆದ ಮೇಲೆ ಅನೇಕ ಹೊಸ ಸಾಕ್ಷಿಗಳು ದೊರೆಯುತ್ತಿವೆ. ಆದರೆ ವಿಜ್ಞಾನಿಗಳ ಅವಜ್ಞೆ ವಾಸ್ತವತೆಯನ್ನು ಮರೆಮಾಡುತ್ತಲೇ ಬಂದಿದೆ. ಸಿಕ್ಕ ಅಪೂರ್ವ ಸಾಕ್ಷಿಗಳು ತಮ್ಮ ಲೆಕ್ಕಾಚಾರಕ್ಕೆ ತಾಳೆಯಾಗದಿದ್ದರೆ ಅವನ್ನು ಆಚೆಗೆ ತಳ್ಳಿಬಿಡುವುದೇ ಒಂದು ವಂಚನೆ. ಬಹುಶಃ ಮನುಷ್ಯನ ಸ್ವಭಾವವೇ ಇದು ಎಂದು ಕಾಣುತ್ತದೆ. ಸರಳ ಸತ್ಯ ಜಾಹೀರು ಮಾಡಲು ಪ್ರಾಗ್ ಮಾನವ ಶಾಸ್ತ್ರಜ್ಞರು ಎಂಥೆಂಥವೋ ಜಟಿಲ ವಿಜ್ಞಾನ ಅನುಸರಿಸುತ್ತಾರೆ. ಇಷ್ಟಾದರೂ ಸಮಸ್ಯೆಗೆ ಪೂರ್ಣ ಪರಿಹಾರ ದೊರೆಯುತ್ತದೆಯೆ? ಎಂದಿಗೂ ಇಲ್ಲ, ಅದು ಮತ್ತಷ್ಟು ಜಟಿಲವಾಗುತ್ತಲೇ ಹೋಗುತ್ತದೆ. ಹಾಗಾದರೆ ಸತ್ಯಾನ್ವೇಷಣೆಗೆ ಬೇರೆ ಮಾರ್ಗವಿಲ್ಲವೆ? ಇದೆ. ಅದು ಬೇರೆ ಬೇರೆ ವರದಿಗಳನ್ನು ನಿಷ್ಪಕ್ಷಪಾತವಾಗಿ ಬಗೆಗಣ್ಣಿನಿಂದ ನೋಡಿ ತೌಲನಿಕವಾಗಿ ಅಧ್ಯಯನ ಮಾಡುವುದರಿಂದ ಸಾಧ್ಯ. ಅಲ್ಲಿನ ಸಾಕ್ಷಿಗಳ ಸಾತತ್ಯವನ್ನು ಪೂರ್ವಗ್ರಹವಿಲ್ಲದೆ ನೋಡುವುದು.
ಪ್ರಾಣಿಗಳ ಮೂಳೆಗಳನ್ನು ಕತ್ತರಿಸಿರುವ ಅನೇಕ ಮಾದರಿಗಳು ಮಾನವನ ಇರುವಿಗೆ ಸಾಕ್ಷಿಯಾಗಿವೆ. ೧೯ನೇ ಶತಮಾನದಿಂದ ಮೊದಲುಗೊಂಡು ಸತತವಾಗಿ ನಡೆಸಿದ ಸಂಶೋಧನೆ ಈ ನಿಟ್ಟಿನಲ್ಲಿ ಹೊಸ ಬೆಳಕನ್ನು ನೀಡಿತು. ಡಾರ್ವಿನ್ನನ ‘ಜೀವಿ ಸಂಕುಲಗಳ ಉಗಮ‘ ಕೃತಿ ಹೊರಬಂದ ನಂತರ ಅನೇಕ ವಿಜ್ಞಾನಿಗಳು ಇಂಥ ಹೊಸ ಪರಿಕರಗಳನ್ನು ಅರಸುತ್ತಾ ಹೊರಟರು. ಪ್ಲಿಯೋಸೀನ್, ಮಯೋಸೀನ್ ಮತ್ತು ಅದಕ್ಕೂ ಹಿಂದಿನ ಇಂಥ ಸಾಕ್ಷಿಗಳು ಏನು ಹೇಳುತ್ತವೆ - ವಿಜ್ಞಾನಿಗಳ ಬಣ ಹೇಳುವುದೇ ಬೇರೆ. ಮಾಂಸಾಹಾರಿ ಪ್ರಾಣಿಗಳು - ಷಾರ್ಕ್ ಮುಂತಾದವು ಈ ಮೂಳೆಗಳನ್ನು ಕತ್ತರಿಸಿರುವ ಸಾಧ್ಯತೆ ಇದೆ. ಭೂಮಿಯಲ್ಲಾಗುವ ಅನೇಕ ಬಗೆಯ ಚಲನೆಗಳು ಮೂಳೆಗಳ ಮೇಲೆ ಸಾಕಷ್ಟು ಪರಿಣಾಮ ಬೀರಿ ಎಂಥೆಂಥವೋ ಗುರುತುಗಳನ್ನು ಮೂಡಿಸುತ್ತವೆ ಎನ್ನುತ್ತಾರೆ ವಿಜ್ಞಾನಿಗಳು. ಆದರೆ ನಿಜಸ್ಥಿತಿ ಏನು? ಇಂಥ ಕತ್ತರಿಸಿದ ಮೂಳೆಗಳು ಸಿಕ್ಕಿರುವೆಡೆ ನಿಸ್ಸಂಶಯವಾದ ಕಲ್ಲಿನ ಆಯುಧಗಳೂ ಸಿಕ್ಕಿವೆ. ಸೂಕ್ಷ್ಮದರ್ಶಕದಲ್ಲಿ ನೋಡಿದಾಗ ಇವು ಮಾನವಕೃತವೆಂದು ದೃಢಪಟ್ಟಿವೆ. ಹಾಗಿದ್ದಲ್ಲಿ ಮಾನವ ೨೫ ದಶಲಕ್ಷ ವರ್ಷಗಳ ಹಿಂದೆ ಮುಂದುವರಿದಿದ್ದ ಎನ್ನುವ ಈ ಸಾಕ್ಷಿಗಳನ್ನು ವಿಜ್ಞಾನಿಗಳು ಏಕೆ ಕಡೆಗಣಿಸುತ್ತಾರೆ. ಫ್ರಾನ್ಸಿನ ಸೇಂಟ್ ಪ್ರಸ್ಟ್, ಕೆನಡದ ಓಲ್ಡ್ ಕ್ರೋ ನದಿ, ಕ್ಯಾಲಿಫೋರ್ನಿಯದ ಅಂಝ - ಬೊರೆಗೋ ಮರುಭೂಮಿ, ಇಟಲಿಯ ಅರ್ನೋ ನದಿದಡ, ಗ್ರೀಸ್‌ನ ಪಿಕೆರ್ಮಿ, ಟರ್ಕಿಯ ಡಾರ್ಡನೆಲಿಸ್ - ಈ ಎಲ್ಲ ಕಡೆಯೂ ಈ ಬಗೆಯ ಸಾಕ್ಷಿಗಳೇ ದೊರೆತಿವೆ ಎಂದರೆ ವಿಜ್ಞಾನಿಗಳ ನಿರ್ಲಕ್ಷ್ಯ ಎದ್ದುಕಾಣುತ್ತವೆ. ಏಕೆಂದರೆ ಮಧ್ಯ ಪ್ಲಿಯೋಸೀನ್ ಕಾಲದಲ್ಲಿ ಮನುಷ್ಯ ಇರಲಿಲ್ಲವೆಂದೇ ಪೂರ್ವಗ್ರಹವಾಗಿ ತೀರ್ಮಾನಿಸಿದರೆ ಸಾಕ್ಷಿಗಳ ಹುಡುಕಾಟವೆಲ್ಲಿರುತ್ತದೆ? ದಿವ್ಯ ನಿರ್ಲಕ್ಷ್ಯ ಹೇಗೆ ಒಂದು ಜ್ಞಾನ ಸಂಪತ್ತನ್ನೇ ಕಡೆಗಣಿಸಿಬಿಡುತ್ತದೆ!
ಕ್ರೆಮೋ ಮತ್ತು ಥಾಮ್ಪ್‌ಸನ್ ಉಲ್ಲೇಖಿಸಿರುವ ಮತ್ತೊಂದು ಪ್ರಸಂಗ ನಮ್ಮ ಗ್ರಹಿಕೆಯನ್ನೇ ಗೇಲಿಮಾಡುತ್ತದೆ. ಅಷ್ಟೇ ಅಲ್ಲ, ಗಾಬರಿ ಹುಟ್ಟಿಸುತ್ತದೆ. ಇಲ್ಲಿ ಉಲ್ಲೇಖಿಸುವ ಪ್ರಸಂಗದ ಸತ್ಯಾಸತ್ಯತೆಯನ್ನು ಅನೇಕ ಮಂದಿ ವಿಜ್ಞಾನಿಗಳು ಪ್ರಶ್ನಿಸಿದ್ದಾರೆ. ಅದು ಹೀಗಿದೆ : ಇಲಿನಾಯ್ಸ್‌ನ ಮಾರಿಜನ್‌ವಿಲೇ ಎನ್ನುವ ಬಳಿ ಕಾರ್ಬಾನಿಫೆರಸ್ ಯುಗದ ಅಂದರೆ ೩೬೦ ದಶಲಕ್ಷ ವರ್ಷ ಹಿಂದಿನ ಕಲ್ಲಿದ್ದಲಿನಲ್ಲಿ ಚಿನ್ನದ ಸರ ದೊರೆತ ಪ್ರಸಂಗ.
೧೮೯೧ರ ಜುಲೈ ೧೧, ಮಾರಿಜನ್‌ವಿಲೇ ಟೈಮ್ಸ್ ಪತ್ರಿಕೆ ಪ್ರಕಟಿಸಿದ ವರದಿ : ಶ್ರೀಮತಿ ಕಲ್ ಎಂಬಾಕೆ ವಿಸ್ಮಯಕಾರಿ ವಸ್ತುವೊಂದನ್ನು ಬೆಳಕಿಗೆ ತಂದಿದ್ದಳು. ಒಲೆಗೆ ಕೆಂಡ ಮಾಡಲು ಒಂದು ತುಂಡು ಕಲ್ಲಿದ್ದಲನ್ನು ಹಾಕಬೇಕೆಂದು ಒಡೆದಾಗ ಅದು ಕೈ ಜಾರಿ ಬಿದ್ದುಹೋಯಿತು. ಅತ್ಯಂತ ಕುಸುರಿ ಕೆಲಸ ಮಾಡಿದ, ಹತ್ತು ಅಂಗುಲ ಉದ್ದದ ಚಿನ್ನದ ಸರವೊಂದು ಧೊಪ್ಪನೆ ಅದರೊಳಗಿಂದ ಬಿತ್ತು. ಬಹುಶಃ ಕಲ್ಲಿದ್ದಲು ಗಣಿ ಕಾರ್ಮಿಕರ ಅಚಾತುರ್ಯದಿಂದ ಇದನ್ನು ಬೀಳೀಸಕೊಂಡಿರಬಹುದೆ? ಆಕೆ ಮೊದಲು ಯೋಚನೆ ಮಾಡಿದ್ದು ಹೀಗೆ. ಆದರೆ ಸರ ಇದ್ದ ಭಾಗದಲ್ಲಷ್ಟೇ ಕಲ್ಲಿದ್ದಲು ಸೀಳಿಕೊಂಡಿತ್ತು. ಅದರ ಅರ್ಥ ಬೇಕೆಂದೇ ಯಾರೂ ಅದರಲ್ಲಿ ಹಾಕಿರಲಿಲ್ಲ. ಮಧ್ಯದ ಭಾಗ ಮಾತ್ರ ಕಿತ್ತುಬಂದಿತ್ತು. ಸರದ ಎರಡೂ ಕೊನೆಗಳು ಕಲ್ಲಿದ್ದಲಿಗೇ ಅಂಟಿಕೊಂಡಿದ್ದವು. ಇಲಿನಾಯ್ಸ್ ಸ್ಟೇಟ್ ಜಿಯಾಲಜಿಕಲ್ ಸರ್ವೆ ಈ ಕಲ್ಲಿದ್ದಲು ೨೬೦ - ೩೨೦ ಮಿಲಿನಯ್ ವರ್ಷ ಹಳೆಯದೆಂದು ದೃಢಪಡಿಸಿತು. ಸಾಂಸ್ಕೃತಿಕವಾಗಿ ಲೋಹಜ್ಞಾನವುಳ್ಳ ಮುಂದುವರಿದ ಜನಾಂಗ ಉತ್ತರ ಅಮೆರಿಕದಲ್ಲಿ ಆ ಹೊತ್ತಿಗೆ ಇದ್ದಿತು ಎನ್ನಲು ಇದಕ್ಕಿಂತ ಸಾಕ್ಷಿ ಬೇಕೆ ಎನ್ನುತ್ತಾರೆ ಈ ಲೇಖಕರು.
ನಿವೇಡಾದ ಶಿಲೆಯಲಿ ಬೂಟಿನ ಪಾದದ ಗುರುತು
೧೯೨೨ರ ಅಕ್ಟೋಬರ್ ೮, ನ್ಯೂಯಾರ್ಕ್ ಸಂಡೇ ಸಾಪ್ತಾಹಿಕ ವಿಭಾಗದ ಅಮೆರಿಕನ್ ವೀಕ್ಲಿ ಎಂಬುದರಲ್ಲಿ ಒಂದು ಪ್ರಸಂಗ ವರದಿಯಾಗಿತ್ತು. ಅದರ ಶೀರ್ಷಿಕೆ ‘೫೦ ಲಕ್ಷ ವರ್ಷಗಳ ಹಿಂದಿನ ಶಿಲೆಯಲ್ಲಿ ಬೂಟಿನ ಪಾದದ ಗುರುತು’.
ಕೆಲವು ದಿನಗಳ ಹಿಂದೆ ನಿವೇಡದಲ್ಲಿ ಜೀವ್ಯವಶೇಷ ಸಂಗ್ರಹಮಾಡುತ್ತಿದ್ದ ಟೀ. ರೀಡ್ ಎಂಬ ಖ್ಯಾತ ಭೂವಿಜ್ಞಾನಿಯ ಕಾಲಬಳಿ ವಿಚಿತ್ರವಾದ ಗುರುತುಳ್ಳ ಕಲ್ಲು ಕಾಣಿಸಿತು. ಶಿಲೆಯ ಮುಕ್ಕಾಲು ಭಾಗ ಮಾನವ ಪಾದದ ಗುರುತು; ಅಚ್ಚುಹೊತ್ತಿದಂತೆ. ಕಣ್ಣಲ್ಲಿ ಕಣ್ಣಿಟ್ಟು ನೋಡಿದಾಗಲೂ ಅದು ಸ್ಪಷ್ಟವಾಯಿತು. ಪಾದದ ಗುರುತಿನಲ್ಲಿ ಹಿಮ್ಮಡಿಯ ಭಾಗವಿತ್ತು. ಬೆರಳು ಕಡೆಯ ಭಾಗ ಗೈರಾಗಿತ್ತು. ಅಷ್ಟೇ ಅಲ್ಲ, ಗುರುತಿನ ಅಂಚಿನಲ್ಲಿ ಭದ್ರವಾಗಿ ಹೆಣೆದಿದ್ದ ದಾರದ ಗುರುತೂ ಇತ್ತು. ಆ ಶಿಲೆಯ ವಯಸ್ಸು ೫೦ ಕ್ಷ ವರ್ಷ. ರೀಡ್ ಇಡೀ ಮಾದರಿಯನ್ನೇ ನ್ಯೂಯಾರ್ಕಿಗೆ ಎತ್ತುಕೊಂಡು ಬಂದ. ಕೊಲಂಬಿಯ ವಿಶ್ವವಿದ್ಯಾಲಯದ ಭೂವಿಜ್ಞಾನದ ಅಧ್ಯಾಪಕರಿಗೆ ತೋರಿಸಿದ. ಜೊತೆಗೆ ಅಮೆರಿಕನ್ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿ ಪರಿಣತರು ಕೂಲಂಕಷವಾಗಿ ಪರೀಕ್ಷಿಸಿದರು. ಅದರಲ್ಲೊಬ್ಬ ಪರಿಣತ ‘ನಿಸರ್ಗ ಎಷ್ಟರಮಟ್ಟಿಗೆ ಅನುಕರಣೆ ತೋರಿಸುತ್ತದೆ ಎಂಬುದಕ್ಕೆ ಭವ್ಯ ಸಾಕ್ಷಿ ಇದು. ಇದು ಮನುಷ್ಯಕೃತ ಅಲ್ಲ’ ಎಂದು ಹೇಳಿದ. ರೀಡ್ ಹಠವಾದಿಯಂತೆ ಮತ್ತಷ್ಟು ಶೋಧಕ್ಕೆ ಹೊರಟ. ಸೂಕ್ಷ್ಮ ಛಾಯಾಚಿತ್ರ ತೆಗಿಸಿದ. ವಿಶ್ಲೇಷಣೆ ಮಾಡಿಸಿದ. ಅದು ಮನುಷ್ಯಕೃತವೆಂದು ಖಚಿತಪಡಿಸಿದ. ಇಂಥ ಸಾಕ್ಷಿಗಳನ್ನೇಕೆ ವಿಜ್ಞಾನಿಗಳು ಅಲ್ಲಗಳೆಯುತ್ತಾರೆ. ಹೀಗೆ ಕ್ರೆಮೋ ಮತ್ತು ಥಾಮ್ಪ್‌ಸನ್ ತಮ್ಮ ವಾದವನ್ನು ಮಂಡಿಸಲು ನೂರಾರು ಪ್ರಸಂಗಗಳನ್ನು ಉಲ್ಲೇಖಿಸಿದ್ದಾರೆ. ಎಲ್ಲಿ ತಾರತಮ್ಯ ಇದೆ ಎನ್ನಿಸುತ್ತದೆಯೋ ಅಂಥವುಗಳ ಬಗ್ಗೆ ಮತ್ತಷ್ಟು ವಿವರಗಳನ್ನು ನೀಡುತ್ತಾರೆ. ಪಿಲ್ಟ್ ಡೌನ್ ಮಾನವ ಎಂದೇ ಕುಖ್ಯಾತವಾದ ಮೋಸದ ಪ್ರಸಂಗವನ್ನೂ ತಮ್ಮ ವಾದಕ್ಕೆ ಬಳಸಿಕೊಳ್ಳುತ್ತಾರೆ. ಮನುಷ್ಯನ ತಲೆಬುರುಡೆ ಆದರೆ ಏಪ್‌ಗಿರುವಂತೆ ದವಡೆ; ಹಿಂದಿನ ಏಪ್ ತರಹದ ಜೀವಿಗೂ ಆಧುನಿಕ ಹೋಮೋಸೇಪಿಯನ್‌ಗೂ ನಡುವಿನ ಕೊಂಡಿಯೆಂದೇ ಇದನ್ನು ಕೊಂಡಾಡಲಾಗಿತ್ತು. ೧೯೦೮-೧೧ರ ನಡುವೆ ಚಾರ್ಲ್ಸ್ ಡಾವ್‌ಸನ್ ಎಂಬಾತ ಬೇಕೆಂದೇ ಕೈಚಳಕದಿಂದ ಇಂಥ ಒಂದು ಮಾದರಿಯನ್ನು ಬಚ್ಚಿಟ್ಟು ಅದನ್ನು ಬಗೆದು ನಂಬಿಸಿದ ಪರಿ ಮುಂದೆ ದೊಡ್ಡ ಹಗರಣವೆಂದೇ ಖ್ಯಾತವಾಯಿತು. ಆ ಹಗರಣದ ವಿವರಗಳ ಎಳೆಗಳನ್ನು ಚಾಚೂ ಬಿಡದ ಹಾಗೆ ದಾಖಲಿಸಿರುವ ಈ ಲೇಖಕರು ಹೇಳುತ್ತಾರೆ ‘ಇಡೀ ಆ ಮೋಸದಾಟವನ್ನು ಬದಿಗಿಟ್ಟು ಒಂದು ಅಂಶವನ್ನು ನಾವು ಸ್ಪಷ್ಟವಾಗಿ ಮನಗಾಣಬೇಕಾಗಿದೆ. ಯಾವ ಜಾಗದಲ್ಲಿ ಪಿಲ್ಟ್ ಡೌನ್ ಮಾನವನ ಬುರುಡೆಯನ್ನು ಉತ್ಖನನ ಮಾಡಲಾಯಿತೋ ಅಲ್ಲೇ ನಿಜವಾದ ಮಾನವ ಬುರುಡೆಯೂ ಸಿಕ್ಕಿದೆ. ಅದು ಮಧ್ಯ ಪ್ಲಿಯೋಸೀನ್ ಕಾಲದ ಶಿಲೆಯಲ್ಲಿ - ೨೦ ಲಕ್ಷ ವರ್ಷಗಳ ಹಿಂದಿನ ತಲೆ ಬುರುಡೆ ಅದು’. ಈ ಬಗೆಯ ಸಾಕ್ಷಿಗಳನ್ನು ವೈಜ್ಞಾನಿಕವಾಗಿ ಕ್ರೋಡೀಕರಿಸಿ ಮಾನವ ವಿಕಾಸದ ಇತಿಹಾಸವನ್ನು ಮತ್ತಷ್ಟು ಹಿಂದಕ್ಕೆ ಒಯ್ಯಲು ಏಕೆ ಮಾನವ ಶಾಸ್ತ್ರಜ್ಞರಿಗೆ ಹಿಂಜರಿಕೆ?
‘ದಿ ಹಿಡನ್ ಹಿಸ್ಟರಿ ಆಫ್ ದಿ ಹ್ಯೂಮೆನ್ ರೇಸ್’ ಕೃತಿಯಲ್ಲಿ ಕಂಡುಬರುವ ಮಾಹಿತಿಗಳ ಮಹಾಪೂರ ಹೆಸರಿಸಲೇ ಬೇಕಾದ್ದು. ಈಗಿನ ಸಿದ್ಧಾಂತಗಳನ್ನು ಅಲ್ಲಗಳೆಯುವ ನೂರಾರು ಪ್ರಸಂಗಗಳನ್ನು ಒಂದೆಡೆ ರಾಶಿ ಮಾಡಿರುವುದೇ ಈ ಕೃತಿಯ ಸೊಬಗು. ಇಂಥ ಸಾಕ್ಷಿಗಳನ್ನೆಲ್ಲ ಲೇಖಕರು ವೈಪರೀತ್ಯಗಳು ಎಂದು ವರ್ಗೀಕರಿಸುತ್ತಾರೆ. ಕೃತಿಯ ಕೊನೆಯಲ್ಲಿ ನೀಡಿರುವ ೨೦ ಪುಟಗಳಷ್ಟು ಸಾಕ್ಷಿಗಳನ್ನು ಗಮನಿಸಿದರೆ ಈ ವೈಪರೀತ್ಯದ ಪರಿಮಾಣ ಅರ್ಥವಾದೀತು. ೨೮೦೦ ಮಿಲಿಯನ್ ವರ್ಷಗಳ ಹಿಂದಿನ ಶಿಲೆಯಲ್ಲಿ ದಕ್ಷಿಣ ಆಫ್ರಿಕದಲ್ಲಿ ೧೯೮೨ರಲ್ಲಿ ಪತ್ತೆಹಚ್ಚಿತು ಎನ್ನಲಾದ ಲೋಹದಿಂದ ತಯಾರಿಸಿದ ಭರ್ಜಿಯ ಉಲ್ಲೇಖವಿದೆ. ೧೮೫೨ರಲ್ಲಿ ಸೈಂಟಿಫಿಕ್ ಅಮೆರಿಕನ್ ಪತ್ರಿಕೆಯಲ್ಲಿ ೬೦೦ ಮಿಲಿಯನ್ ವರ್ಷಗಳ ಹಿಂದಿನ ಶಿಲೆಯಲ್ಲಿ ಲೋಹದ ಹೂದಾನಿ ಪತ್ತೆಯಾದುದರ ಉಲ್ಲೇಖವಿದೆ. ಈ ಜಗತ್ತಿನಲ್ಲಿ ಮತ್ಸ್ಯ ಸಾಮ್ರಾಜ್ಯವೆನ್ನಿಸಿದ ೩೬೦ - ೪೦೮ ದಶಲಕ್ಷ ವರ್ಷಗಳ ಹಿಂದಿನ ಡಿವೋನಿಯನ್ ಕಾಲದ ಕಲ್ಲುಗಣಿಯೊಂದರಿಂದ ಕಬ್ಬಿಣದ ಮೊಳೆಯನ್ನು ೧೮೪೪ರಲ್ಲೇ ಸಂಗ್ರಹಿಸಿದ ಬಗ್ಗೆ ಮತ್ತೊಂದು ಉಲ್ಲೇಖವಿದೆ. ೨೮೦ ರಿಂದ ೩೨೦ ದಶಲಕ್ಷ ವರ್ಷಗಳ ಶಿಲೆಯಲ್ಲಿ ಅಕ್ಲಾಹೋಮ್‌ನಲ್ಲಿ ಪತ್ತೆಹಚ್ಚಿದ ಬೆಳ್ಳಿವಸ್ತುವಿನ ಬಗ್ಗೆ ಉಲ್ಲೇಖವಿದೆ. ಪೆಡಂಭೂತಗಳ ಸುವರ್ಣಕಾಲ ಎನ್ನಲಾದ ೫೫ ದಶಲಕ್ಷ ವರ್ಷಗಳ ಹಿಂದಿನ ಶಿಲೆಗಳಲ್ಲಿ ಕಂಡುಬಂದ ಶಿಲಾಯುಧಗಳ ಬಗ್ಗೆ ವರದಿ ಇದೆ. ಹೀಗೆ ಇಡೀ ಕೃತಿಯಲ್ಲಿ ಬೇರೆ ಬೇರೆ ಮೂಲದಿಂದ ದೊರೆತ ಮಾಹಿತಿಗಳನ್ನು ಅತ್ಯಂತ ಕ್ರಮಬದ್ಧವಾಗಿ ದಾಖಲೆ ಮಾಡಲಾಗಿದೆ. ಶುದ್ಧ ವೈಜ್ಞಾನಿಕ ತಿಳಿವಿನ ಹಿನ್ನೆಲೆ ಇರುವವರಿಗೆ ಈ ಮಾಹಿತಿ ಗೊಂದಲ ಉಂಟುಮಾಡುವುದಂತೂ ನಿಜ. ಲಾಲ್‌ಬಾಗ್ ಕಲ್ಲನ್ನು ಪರೀಕ್ಷೆ ಮಾಡುತ್ತಿರುವಾಗ ದಿಢೀರ್ ಎಂದು ಹುಲಿಯ ಮೂಳೆಗಳು ಅದರಲ್ಲಿ ಅಂಟಿಕೊಂಡು ಸಿಕ್ಕಿದರೆ ಪಡುವ ಗಾಬರಿಯಂತೆ ಈ ಸಾಕ್ಷಿಗಳು.
ಕ್ರೆಮೋ ಮತ್ತು ಥಾಮ್ಪ್‌ಸನ್ ಅವರ ಇರಾದೆಯಾದರೂ ಏನು? ಎನನ್ನೂ ಒತ್ತಿಹೇಳಲು ಅವರು ಬಯಸಿದ್ದಾರೆ ತಮ್ಮ ಈ ವಿವಾದಿತ ಪುಸ್ತಕದಲ್ಲಿ? ಅವರ ಮಾತಿನಲ್ಲೇ : ‘ಬಹು ಪ್ರಾಚೀನ ಕಾಲದಲ್ಲಷ್ಟೇ ಅಲ್ಲ, ಈಗಲೂ ನಮ್ಮ ಎದುರಿಗೇ ಇರುವ ಸತ್ಯವೊಂದನ್ನು ಮನಗಾಣಬಹುದು. ಆದಿಮ ಮಾನವರೂಪಿ ಜೀವಿ(ಹೋಮಿನಿಡ್) ಹಾಗೂ ಅಂಗರಚನೆಯ ದೃಷ್ಟಿಯಿಂದ ಈಗಿನ ಆಧುನಿಕ ಮಾನವ ಸಹಬಾಳ್ವೆ ಮಾಡಿದ್ದರು ಎಂಬುದಕ್ಕೆ ಇಲ್ಲಿನ ಸಾಕ್ಷಿಗಳೇ ಸಾಕು. ಜೈಂಗಾಟೋಪಿತಿಕಸ್, ಅಸ್ಟ್ರಲೋಪಿತಿಕಸ್, ಹೋಮೋಎರಕ್ಟಸ್ ಮತ್ತು ನಿಯಾಂಡ್ರತಲ್ ಮಾನವ ಈಗಲೂ ದಟ್ಟ ಅರಣ್ಯಗಳಲ್ಲಿ ಭೂಮಿಯ ಬೇರೆ ಬೇರೆ ಭಾಗದಲ್ಲಿ ಬಾಳಿದ್ದಾರೆ. ಉತ್ತರ ಅಮೆರಿಕದಲ್ಲಿ ಈ ಬಗೆಯ ಪ್ರಾಣಿಗಳನ್ನು ಸ್ಯಾಸ್ಕ್ವಾಚ್ ಎಂದರೆ ಮಧ್ಯ ಏಷ್ಯದಲ್ಲಿ ಅವನ್ನು ಅಲ್ಮಾಸ್ ಎನ್ನುತ್ತಾರೆ. ಆಫ್ರಿಕ, ಚೀನ, ಆಗ್ನೇಯ ಏಷ್ಯ, ಮಧ್ಯ ಅಮೆರಿಕ, ದಕ್ಷಿಣ ಅಮೆರಿಕ ಇಲ್ಲೂ ಈ ಬಗೆಯ ಜೀವಿಗಳಿಗೆ ಬೇರೆ ಬೇರೆ ಹೆಸರಿದೆ. ಕಾಡು ಮನುಷ್ಯ ಎಂಬ ಹೆಸರಿನಿಂದ ಇವನ್ನೆಲ್ಲ ಕೆಲವು ತಜ್ಞರು ಗುರುತಿಸುತ್ತಾರೆ. ಈಗಿನ ವಿಜ್ಞಾನ ಹೇಳುವಂತೆ ಮನುಷ್ಯನ ಅವತಾರ ಭೂ ಇತಿಹಾಸದಲ್ಲಿ ತೀರ ಇತ್ತೀಚಿನ ವಿದ್ಯಮಾನವಲ್ಲ; ಬಹು ಪುರಾತನವಾದ್ದು. ಭಾರತದ ಪುರಾಣಗಳು ಹೇಳುವಂತೆ ಏಪ್ ತರಹದ ಅಥವಾ ಮನುಷ್ಯ ಚಹರೆಯ ಕಪಿಗಳು ಮನುಷ್ಯರೊಡನೆ ಸಹಬಾಳ್ವೆ ಮಾಡಿರುವುದೂ ಉಂಟು. ಇವಕ್ಕೆ ವೈಜ್ಞಾನಿಕ ಆಧಾರ ಒದಗಿಸುವುದು ನಮ್ಮ ಈ ಪ್ರಯತ್ನದ ಗುರಿ.’
ಬೌದ್ಧಿಕ ಜಗತ್ತು ಇವರ ಈ ಪ್ರಯತ್ನವನ್ನು ಹೇಗೆ ಸ್ವೀಕರಿಸಿದೆ. ಈ ಹಂತದಲ್ಲಿ ಅದನ್ನು ಕಾಣಿಸುವುದೂ ಇಲ್ಲಿ ಅತ್ಯವಶ್ಯ.
ಬಹುಮಂದಿ ವಿದ್ವಾಂಸರು ಈ ಕೃತಿಯನ್ನು ಕಣ್ಣು ತೆರೆಸುವ ಕೃತಿ ಎಂದಿದ್ದಾರೆ. ವಿಕಾಸವಾದದ ವಿರುದ್ಧ ಅವೆಷ್ಟೋ ಬಗೆಯ ಪುಸ್ತಕಗಳು ಬಂದಿವೆ. ವಿಕಾಸವಾದಕ್ಕೆ ತಿರುಗಿಬಿದ್ದ ಸೃಷ್ಟಿವಾದಿಗಳ ವಿಚಾರಸರಣಿಯೇ ಬೇರೆ. ಇಲ್ಲಿನ ಪ್ರತಿಪಾದನೆಯಾಗಲಿ, ಶೈಲಿಯಾಗಲಿ, ಲೇಖಕರು ಮಾಹಿತಿಯನ್ನು ಕಲೆಹಾಕಿ ಅದನ್ನು ಒಪ್ಪಿಸಿರುವ ರೀತಿಯಾಗಲಿ ಅನನ್ಯ. ಮೂಲವಿಜ್ಞಾನ, ಪುರಾತತ್ತ್ವ ಮಾಹಿತಿಗಳನ್ನು ವಿಶ್ಲೇಷಿಸುತ್ತಲೇ ತಮ್ಮ ವಾದ ಸರಣಿಯನ್ನು ಮಂಡಿಸುತ್ತಾರೆ. ವಿವಾದಿತ ಅಂಶವನ್ನು ಇಷ್ಟೊಂದು ಪರಿಪಕ್ವವಾಗಿ ನಿಭಾಯಿಸಿರುವುದು ವಿಸ್ಮಯವೇ ಸರಿ. ಯಾವುದಕ್ಕಾದರೂ ಈ ಬಗೆಯ ಮಾಹಿತಿಗಳನ್ನು ಬಳಸಿಕೊಳ್ಳಬಹುದು. ಇಲ್ಲಿ ಎತ್ತಿರುವ ಮೂಲ ಪ್ರಶ್ನೆಗಳು ಮತ್ತು ಸಾಕ್ಷಿಗಳ ವಿಚಾರ ಬಂದಾಗ ಇನ್ನಾದರೂ ಅಂಥವನ್ನು ಕಡೆಗಣಿಸುವುದು ಬೇಡ ಎಂದು ಬರೆದಿದ್ದಾನೆ ಸ್ಕಾಟ್‌ಲೆಂಡಿನ ರಾಯಲ್ ಮ್ಯೂಸಿಯಂನ ನೈಸರ್ಗಿಕ ಚರಿತ್ರೆಯ ಪರಿಣತ.
ಮಾನವ ಚರಿತ್ರೆಯನ್ನು ಒಂದು ಬೃಹತ್ ಮ್ಯೂಸಿಯಂ ಎಂದು ಭಾವಿಸುವುದಾದರೆ ಇಡೀ ಕಟ್ಟಡವೇ ಜ್ಞಾನದಿಂದ ತುಂಬಿದೆ ಎನ್ನುವುದಾದರೆ ಈಗಿನ ಸ್ಥಿತಿ ಹೇಗಿದೆಯೆಂದರೆ ಇಂಥ ಮ್ಯೂಸಿಯಂನ ಕೊಠಡಿಗಳ ಬಾಗಿಲಿಗೆ ಬೀಗ ಜಡಿದಿದ್ದಾರೆ. ವಿಜ್ಞಾನಿಗಳು ಸ್ವಯಂಪ್ರೇರಿತರಾಗಿ ಆ ಸಾಕ್ಷಿಗಳನ್ನು ತೆರೆದಿಡಬೇಕಾಗಿತ್ತು. ಬದಲು ಬೀಗ ಹಾಕುವುದರಲ್ಲೇ ಕೃತಕೃತ್ಯರಾಗಿರುವುದು ಇಂದಿನ ದುರಂತ. ತಾವು ನಂಬಿದ ಸಾಮಾನ್ಯ ನಂಬಿಕೆಗಳ ವಿರುದ್ಧ ಯಾರು ದನಿ ಎತ್ತಿದರೂ ಅವರಿಗಾಗದು. ಕ್ರೆಮೋ ಮತ್ತು ಥಾಮ್ಪ್‌ಸನ್ ಜ್ಞಾನಭಂಡಾರದ ಕೊಠಡಿಗಳಿಗೆ ಹಾಕಿದ್ದ ಬೀಗಗಳನ್ನು ಒಡೆಯುವ ಧೈರ್ಯ ತೋರಿದ್ದಾರೆ. ಇದರ ಲಾಭವೆಂದರೆ ವಿಜ್ಞಾನಿಗಳಿಗಷ್ಟೇ ಅಲ್ಲ, ಈಗ ಶ್ರೀಸಾಮಾನ್ಯನಿಗೂ ಜ್ಞಾನದ ಕೊಠಡಿಗೆ ಪ್ರವೇಶ ದೊರೆತಂತಾಗಿದೆ. ‘ದಿ ಹಿಡನ್ ಹಿಸ್ಟರಿ ಆಫ್ ದಿ ಹ್ಯೂಮರ್ ರೇಸ್’ ಕೃತಿ ವಿಜ್ಞಾನಕ್ಕೆ ಆಹ್ವಾನವನ್ನು ನೀಡಿ ಹೊಸ ದಿಗಂತವನ್ನು ಪ್ರವೇಶಿಸಿ ಎಂದು ಬೊಟ್ಟುಮಾಡಿ ತೋರಿಸುತ್ತಿದೆ. ಮನುಷ್ಯನ ಉಗಮದ ಬಗ್ಗೆ ಪೂರ್ವಗ್ರಹವನ್ನು ತಿದ್ದಿಕೊಳ್ಳಿ ಎನ್ನುತ್ತದೆ ಆಫ್ರಿಕದ ‘ಪ ದ ಮ್ಯಾಗಜೈನ್’. ಇಂಥ ಅಭಿಪ್ರಾಯಗಳು ನೂರಾರಿವೆ. ಇದು ವಿಜ್ಞಾನಿಗಳನ್ನು ವಿಶೇಷವಾಗಿ ಮಾನವ ಶಾಸ್ತ್ರಜ್ಞರನ್ನು ಕೆಣಕಿದೆ, ಕೆರಳಿಸಿದೆ ಕೂಡ. ಆ ಕ್ಷೇತ್ರದಿಂದ ಟೀಕೆಗಳ ಮಹಾಪೂರವೇ ಹರಿದು ಬಂದದ್ದೂ ಉಂಟು. ಅದಕ್ಕೆ ಉತ್ತರವಾಗಿ ಇದೇ ಲೇಖಕರು ‘ಫರ್‌ಬಿಡನ್ ಆರ್ಕಿಯಾಲಜೀಸ್ ಇಂಪ್ಯಾಕ್ಟ್’ ಎನ್ನುವ ಇನ್ನೊಂದು ಹೊತ್ತಿಗೆಯನ್ನೇ ಹೊರತಂದಿದ್ದಾರೆ. ವಿಜ್ಞಾನಿಗಳ ಬಣ ಇಲ್ಲಿ ಎತ್ತಿರುವ ಪ್ರಶ್ನೆಗಳನ್ನೆಲ್ಲ ಸಾರಾಸಗಟಾಗಿ ತಿರಸ್ಕರಿಸದಿದ್ದರೂ ಮಾನವನ ಉಗಮವನ್ನು ಕ್ರೆಮೋ ಮತ್ತು ಥಾಮ್ಪ್‌ಸನ್ ೨೮೦೦ ದಶಲಕ್ಷ ವರ್ಷ ಹಿಂದಕ್ಕೆ ಒಯ್ಯುವುದನ್ನು ಸರ್ವಥಾ ಒಪ್ಪುವುದಿಲ್ಲ. ಭೂಮಿಯಲ್ಲಿ ಜೀವಿಯ ಉಗಮದ ಬಗ್ಗೆ ಪೃಥ್ವಿ ಪ್ರಾಥಮಿಕ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದ ಪ್ರಿಕೇಂಬ್ರಿಯನ್ ಕಲ್ಪದಲ್ಲಿ ಮೊದಲು ಕಾಣಿಸಿಕೊಂಡಿದ್ದು ಬ್ಯಾಕ್ಟರೀಯ ಮತ್ತು ಪಾಚಿಯಂತಹ ಕೆಳವರ್ಗದ ಜೀವಿಗಳೇ. ನಿಜವಾದ ಅರ್ಥದಲ್ಲಿ ಇವೇ ಜೀವದ ಉಗಮದ ಪ್ರಾರಂಭಿಕ ಪ್ರತಿನಿಧಿಗಳು. ಮನುಷ್ಯರಂತಿರಲಿ, ಕೆಳವರ್ಗದ ಜೀವಿಗಳು ಹುಟ್ಟುವ ಸುಳಿವೂ ಇರಲಿಲ್ಲ. ಆದ್ದರಿಂದ ಮನುಷ್ಯನ ಪ್ರಾಚೀನತೆಯನ್ನು ಆ ಕಾಲಕ್ಕೆ ಒಯ್ಯುವುದು ಅಪರಿಪಕ್ವತೆಯ ಸಂಕೇತ. ವಿಜ್ಞಾನಿಗಳು ಹೇಳುತ್ತಾರೆ ಈ ಕೃತಿಯನ್ನು ಓದುವುದು ಒಂದು ವಿಶಿಷ್ಟ ಅನುಭವವಾಗಬೇಕಾಗಿತ್ತು ಬದಲು ಪುಟಪುಟದಲ್ಲೂ ನಿರಾಶೆ ಎದುರಾಗುತ್ತದೆ. ವೇದಶಾಸ್ತ್ರದ ಹಿನ್ನೆಲೆ ಪಡೆದು ಪುರಾತತ್ತ್ವ, ಪ್ರಾಗ್ ಮಾನವ ಶಾಸ್ತ್ರ ಕ್ಷೇತ್ರಗಳಿಂದ ಅಸಂಗತ ಸಾಕ್ಷಿಗಳನ್ನು ಉಲ್ಲೇಖಿಸುತ್ತ ವಿಕಾಸವನ್ನು ವಿವರಿಸುವ ಪರಿ ಬಾಲಿಶವಾಗಿ ಕಾಣುತ್ತದೆ. ವಿಚಿತ್ರವೆಂದರೆ ಅತ್ಯಂತ ಕೌಶಲದಿಂದ ವಿಜ್ಞಾನಿಗಳ ಸಂಶೋಧನೆಗಳನ್ನು ಧಾರಾಳವಾಗಿ ಅಲ್ಲಲ್ಲಿ ಉಲ್ಲೇಖಿಸುತ್ತಾರೆ. ವಾಸ್ತವವಾಗಿ ವಿಜ್ಞಾನಿಗಳ ಮೂಲ ಆಶಯವನ್ನು ಇವರೇ ಬೇರೆಡೆಗೆ ತಿರುಗಿಸಿದ್ದಾರೆ. ಸಾಕ್ಷಿಗಳನ್ನು ಒದಗಿಸುವ ಅಮಿತೋತ್ಸಾಹದಲ್ಲಿ ಈ ಲೇಖಕರು ಎಲ್ಲೆಲ್ಲಿ ಮಾನವ ವಿಕಾಸದಲ್ಲಿ ವೈಪರೀತ್ಯ ಎಂಬ ನಿಲವು ತಳೆಯುತ್ತಾರೋ, ಅಂಥ ಸಂದರ್ಭಗಳಲ್ಲಿ ಇದು ಹೀಗಿರಬೇಕಿತ್ತು ಎಂದು ಪರ್ಯಾಯ ಸೂಚಿಸದೆ ತೇಲಿಸಿಬಿಡುತ್ತಾರೆ. ಇದೊಂದು ಅನುಕೂಲಸಿಂಧು ಸಾಹಿತ್ಯ. ನಿಜವಾಗಿ ಪುರಾತತ್ತ್ವ ಕ್ಷೇತ್ರಕ್ಕೆ ಹೊಸ ಕೊಡುಗೆ ಕೊಟ್ಟಿದೆಯೇ ಎಂದು ಒಳಹೊಕ್ಕು ನೋಡಿದರೆ ಈ ಲೇಖಕದ್ವಯರಿಗೆ ಪುರಾತತ್ತ್ವದ ಬಗ್ಗೆಯಾಗಲಿ, ಮಾನವ ಶಾಸ್ತ್ರದ ಬಗ್ಗೆಯಾಗಲಿ ಪ್ರಾಥಮಿಕ ತಿಳಿವಳಿಕೆಯೇ ಇಲ್ಲ.
೧೭೮೬-೮೮ರ ನಡುವೆ ಫ್ರಾನ್ಸಿನ ಸುಣ್ಣಶಿಲೆಯ ಗಣಿಯೊಂದರಲ್ಲಿ ಸುತ್ತಿಗೆ, ನಾಣ್ಯ ಹಾಗೂ ಇತರ ಮಾನವಕೃತ ವಸ್ತುಗಳು ದೊರೆತುವೆಂದು ೧೮೨೦ರ ‘ಅಮೆರಿಕನ್ ಜರ್ನಲ್ ಆಫ್ ಸೈನ್ಸ್’ ನಲ್ಲಿ ಪ್ರಕಟಿಸಲಾಗಿದೆ ಎಂದು ಇಲ್ಲಿ ಉಲ್ಲೇಖಿಸುತ್ತಾರೆ. ಅದಷ್ಟು ಮಾತ್ರಕ್ಕೆ ಮಹತ್ವ ಬರುತ್ತದೆಯೆ? ಇಂದು ಅಂಥ ಸಂಗತಿಗಳನ್ನು ಯಾವ ವಿಜ್ಞಾನ ಪತ್ರಿಕೆಗಳು ಪ್ರಕಟಿಸುತ್ತಿವೆ? ೧೮೦೦ರ ಸುಮಾರಿನಲ್ಲಿ ಇನ್ನೂ ಎಂಥೆಂಥ ಸುದ್ದಿಗಳೋ ವಿಜ್ಞಾನ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದವು. ಸಾಗರಕನ್ಯೆ, ಸಮುದ್ರಸರ್ಪ, ನೀರು ಪತ್ತೆ ಮಾಡಲು ಬಳಸುತ್ತಿದ್ದ ಕವೆಕಡ್ಡಿ, ಇಂಥ ಸಂಗತಿಗಳಿಗೆಲ್ಲ ಪುಟ ಕೊಡುತ್ತಿದ್ದುದೂ ಉಂಟು. ಈಗ ಸಾಧ್ಯವೆ? ಜೀವಂತ ಏಪ್ ಮಾನವ ಎಂಬುದಕ್ಕೆ ಕೃತಿಯಲ್ಲಿ ಇಡೀ ಅಧ್ಯಾಯವನ್ನೇ ಮೀಸಲಾಗಿಟ್ಟಿದ್ದಾರೆ. ಬೃಹತ್‌ಪಾದಿ ಇರುವುದಾಗಿ ಈ ಲೇಖಕರು ಮತ್ತೆ ಮತ್ತೆ ವಾದಿಸುತ್ತಾರೆ. ಒಂದುವೇಳೆ ಇದ್ದರೂ ಮನುಷ್ಯನ ವಿಕಾಸ ಕುರಿತು ಅವು ಹೊಸ ಅಂಶವನ್ನು ಸಾರುತ್ತವೆಯೆ? ಇನ್ನು ೨೦೦ ಮಿಲಿಯನ್ ವರ್ಷಗಳ ಹಳೆಯ ಶಿಲೆಯಲ್ಲಿ ಬೂಟಿನ ತಳದ ಗುರುತು ಸಿಕ್ಕಿದೆ ಎಂದು ಬೊಟ್ಟುಮಾಡುವ ಈ ಲೇಖಕರಿಗೆ ಭೂವಿಜ್ಞಾನ ಅರ್ಥವಾಗಿಲ್ಲ. ಶಿಲೆಗಳು ಶಿಥಿಲಗೊಂಡರೆ ಎಂಥೆಂಥವೋ ಆಕೃತಿಗಳು ಮೈದಳೆಯುತ್ತವೆ. ಯಾವುದೋ ಕಲ್ಲು ಆನೆಯ ತರಹ ಕಾಣಿಸಬಹುದು, ತಿಮಿಂಗಿಲದ ತರಹ ಕಾಣಬಹುದು, ಮನುಷ್ಯ, ಬೆಕ್ಕಿನ ರೂಪದಲ್ಲೂ ಕಾಣಬಹುದು. ನಾವು ಚೋದ್ಯ ಪಡಬೇಕಾದುದು ನಿಸರ್ಗದ ಶಿಲ್ಪಕಲೆಗೆ. ಅವನ್ನು ತಪ್ಪಾಗಿ ಅರ್ಥೈಸಿದರೆ ಇಂಥ ಅಧ್ವಾನದ ವಿವರಣೆಯಲ್ಲಿ ಪರ್ಯಾವಸಾನವಾಗುತ್ತದೆ. ಈ ದಾಟಿಯಲ್ಲಿ ವಿಜ್ಞಾನಿಗಳ ಒಂದು ಬಣ ವಾದಿಸುತ್ತಿದೆ.
ಹಾಗಿದ್ದಲ್ಲಿ ಒಬ್ಬ ಸಾಮಾನ್ಯ ಓದುಗನಿಗೆ ಏನಿದೆ ಆಯ್ಕೆ? ಬಹುಶಃ ಹೀಗೆ ಕೇಳುವುದೇ ಅಬದ್ಧ ಎನ್ನಿಸುತ್ತದೆ. ಏಕೆಂದರೆ ಆಯ್ಕೆಗಳು ನೂರಾರಿವೆ. ಭಗವದ್ಗೀತೆಯನ್ನು ಓದಬಹುದು, ಬೈಬಲ್ಲನ್ನು ಓದಬಹುದು, ಕುರ್ ಆನ್ ಅನ್ನೂ ಓದಬಹುದು. ಡಾರ್ವಿನ್ನನ ವಿಕಾಸವಾದವನ್ನು ಓದಿ ತಲೆದೂಗಬಹುದು, ಸೃಷ್ಟಿವಾದಿಗಳ ವಾದಸರಣಿಯನ್ನು ಮೆಚ್ಚಬಹುದು. ಯಾವ ವಿಚಾರವನ್ನು ತರ್ಕಬದ್ಧವಾಗಿ ಮನಸ್ಸಿಗೊಪ್ಪುವಂತೆ ಪ್ರತಿಪಾದಿಸಲಾಗುತ್ತದೆಯೋ ಅಂಥವು ಬೇಗ ಮನದಾಳದಲ್ಲಿ ನೆಲೆಯಾಗಿಬಿಡುತ್ತವೆ. ಈ ಹಿನ್ನೆಲೆಯಲ್ಲಿ ‘ದಿ ಹಿಡನ್ ಹಿಸ್ಟರಿ ಆಫ್ ದಿ ಹ್ಯೂಮನ್ ರೇಸ್’ ಓದಬಹುದು. ಇಲ್ಲಿ ವೈಜ್ಞಾನಿಕ ಸಂಶೋಧನೆಗಳ ಉಲ್ಲೇಖವಿದೆ, ಚರಿತ್ರೆ ಇದೆ, ಮಾನವ ಶಾಸ್ತ್ರವಿದೆ, ಪುರಾತತ್ತ್ವವಿದೆ, ಭೂವಿಜ್ಞಾನವಿದೆ. ಆದರೆ ಇವು ಸ್ಪಂದಿಸುವ ಮಜಲುಗಳು ಮಾತ್ರ ಬೇರೆಯದೇ ಆಗಿದೆ. ‘ನೂರಾರು ಮತವಿಹುದು ಲೋಕದುಗ್ರಾಣದಲಿ, ಆರಿಸಿಕೋ ನಿನ್ನ ರುಚಿಗೊಪ್ಪುವುದನದರೊಳ್’ ಡಿ.ವಿ.ಜಿ. ಅವರ ಈ ಸಾಲುಗಳೇ ನಿಮ್ಮ ಓದಿನ ಆಯ್ಕೆಗೂ ಅನ್ವಯಿಸುತ್ತದೆ.

ಸೋಮವಾರ, ಫೆಬ್ರವರಿ 18, 2008
ಯಾಕಾಗತ್ತೆ "ಏನೋ ಒಂಥರಾ"?
ಪರೀಕ್ಷೆ, ಸಂದರ್ಶನಗಳಿಗೆ ಹೋಗುವ ಮುನ್ನ ಹೊಟ್ಟೆಯೊಳಗೆ ವಿಚಿತ್ರವಾದ ತಳಮಳವಾಗುವುದು ಅಥವ "ಏನೋ ಒಂಥರಾ ಆಗುವುದು" ನಮ್ಮಲ್ಲಿ ಅನೇಕರ ಅನುಭವಕ್ಕೆ ಬಂದಿರುವ ವಿಷಯ. ನಮ್ಮ ಹೊಟ್ಟೆಯೊಳಗಿರುವ ನರಗಳ ದಟ್ಟವಾದ ಜಾಲ ಹೊರಡಿಸುವ ಸಂಕೇತಗಳು ಈ ತಳಮಳಕ್ಕೆ ಕಾರಣವಾಗುತ್ತವೆ. ಎಂಟೆರಿಕ್ ನರಮಂಡಲ ಎಂಬ ಹೆಸರಿನ ಈ ಜಾಲ ಹೆಚ್ಚೂಕಡಿಮೆ ನಮ್ಮ ಮಿದುಳಿನಂತೆಯೇ ಕೆಲಸಮಾಡುತ್ತದಂತೆ. ಆತಂಕದ ಸಂದರ್ಭಗಳಲ್ಲಿ ಮಿದುಳಿನಂತೆಯೇ ಗಾಬರಿಗೊಳ್ಳುವ ಈ ನರಮಂಡಲ ಕೆಲವು ರಾಸಾಯನಿಕಗಳನ್ನು ಹೊರಸೂಸಿ ನಮ್ಮ ಹೊಟ್ಟೆಯಲ್ಲಾಗುವ ವಿಚಿತ್ರ ಅನುಭವಕ್ಕೆ ಕಾರಣವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.
ಭಾನುವಾರ, ಫೆಬ್ರವರಿ 17, 2008
ನಮ್ಮ ನದಿಗಳು ಮತ್ತು ಜೀವವೈವಿಧ್ಯ
ಡಾ. ವಿ. ಎನ್. ನಾಯಕ
ಕರಾವಳಿ ತೀರದ ರಾಜ್ಯಗಳಲ್ಲ್ಲೊಂದಾದ ಕರ್ನಾಟಕದ, ನೆರೆಯ ಗೋವಾ ಗಡಿಗೆ ಹೊಂದಿರುವ, ಉತ್ತರ ಕನ್ನಡ ಜಿಲ್ಲೆ ಜೀವವೈವಿಧ್ಯದ ಆಗರವೆಂದರೆ ಅಚ್ಚರಿಯೇನಿಲ್ಲ. ಸುಮಾರು ೧೪೪ ಕಿಮೀ ಉದ್ದನೆಯ ಕರಾವಳಿ ತೀರ, ಅಷ್ಟೇ ಉದ್ದನೆಯ ಹಸಿರು ಹೊನ್ನಿನಂತಿರುವ ಪಶ್ಚಿಮ ಘಟ್ಟದ ಶ್ರೇಣಿಗಳ ನಡುವೆ ಸಂಪರ್ಕ ಕಲ್ಪಿಸಲೋ ಎನ್ನುವಂತೆ ಜುಳು ಜುಳು ಹರಿಯುವ ಕಿರು ನದಿ ಮತ್ತು ಹಳ್ಳಗಳ ಸಾಲು, ಹೀಗೆ ಸೃಷ್ಟಿಕರ್ತನ ಕುಂಚದಿಂದ ಹೊರಬಂದ ಅತ್ಯುತ್ತಮ ಕಲಾಕೃತಿ ನಮ್ಮೀ ನಾಡೆನ್ನಬಹುದು.ಉತ್ತರ ಕನ್ನಡ ಜಿಲ್ಲೆಯನ್ನು ೧೧ ತಾಲೂಕುಗಳಾಗಿ ವಿಂಗಡಿಸಲಾಗಿದ್ದು ಅವುಗಳಲ್ಲಿ ೫ ಕರಾವಳಿಯನ್ನು ಅಲಂಕರಿಸಿದ್ದರೆ, ಇನ್ನುಳಿದ ೬ ಪಶ್ಚಿಮ ಘಟ್ಟದ ಸಾಲಿನಲ್ಲಿವೆ. ಘಟ್ಟದ ಸದಾ ಹಸಿರು ಎತ್ತರೆತ್ತರ ಬೆಳೆದ ಮರಗಳ ಸಾಲು ತಡೆದ ಮೋಡಗಳುದುರಿಸುವ ಮಳೆಯ ನೀರಿನ ಹೆಚ್ಚಿನ ಪಾಲನ್ನು ಪಶ್ಚಿಮ ದಿಕ್ಕಿಗೆ ಹರಿಯುತ್ತಿರುವ ಚಿಕ್ಕ ನದಿಗಳು ಹೊತ್ತೊಯ್ಯುತ್ತವೆ. ಈ ನದಿಗಳು ಹರಿಯುವಾಗ ಜೊತೆಗೆ ದಾರಿಯಲ್ಲಿ ಸಿಕ್ಕ ಪೋಷಕಾಂಶಗಳನ್ನು ಹೊತ್ತೊಯ್ದು ನದಿಗಳ ಇಕ್ಕೆಲಗಳನ್ನು ಫಲವತ್ತಾಗಿಸಿವೆ ಹಾಗೂ ಸಾಗರಕ್ಕೂ ಫಲವತ್ತತೆಯನ್ನು ನೀಡಿವೆ. ಈ ನದಿ ಮತ್ತು ಹಳ್ಳಗಳಿಂದಾಗಿಯೇ ನದಿಯ ಇಕ್ಕೆಲಗಳಲ್ಲಿನ ಕೃಷಿ ಹಾಗೂ ಕರಾವಳಿ ತೀರದ ಮೀನುಗಾರಿಕೆ ಉತ್ತಮವಾಗಿದ್ದು ಇವ ಕೃಷಿಕರ ಮತ್ತು ಮೀನುಗಾರರ ಸ್ಥಿತಿಗತಿ ಸುಧಾರಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆಯೆನ್ನಬಹುದು.ಉತ್ತರದಿಂದ ದಕ್ಷಿಣಕ್ಕೆ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಮತ್ತು ಭಟ್ಕಳ ಹೀಗೆ ಐದು ತಾಲೂಕುಗಳಲ್ಲಿ ಅನುಕ್ರಮವಾಗಿ ಕಾಳಿ, ಗಂಗಾವಳಿ, ಅಘನಾಶಿನಿ, ಶರಾವತಿ ಮತ್ತು ವೆಂಕ್ಟಾಪುರ ನದಿಗಳು ಹರಿದಿವೆ. ಇವಲ್ಲದೆ ೧೩ ಕಿರು ಹಳ್ಳಗಳು ಘಟ್ಟಗಳನ್ನು ಸಾಗರಕ್ಕೆ ಕೂಡಿಸಿವೆ. ಭರತಿಯ ಸಮಯದಲ್ಲಿ ಉಕ್ಕುವ ಸಾಗರವು ನದಿಯ ಹರಿವಿನ ವೇಗ ತಡೆದು ನದಿಯೊಳಗೆ ಮುನ್ನುಗ್ಗಿ ಉಪ್ಪುನೀರಿನ ಪ್ರದೇಶವನ್ನು ನಿರ್ಮಿಸಿದೆ. ಇದನ್ನು ಅಳಿವೆ ಪ್ರದೇಶ ಎಂದೆನ್ನುವರು. ಅಳಿವೆಯ ಸುತ್ತಲಿನ ತಗ್ಗು ಪ್ರದೇಶದಲ್ಲಿ ಹುಣ್ಣಿವೆ ಮತ್ತು ಅಮವಾಸ್ಯೆಯ ವೇಳೆಯಲ್ಲಿ ಹೆಚ್ಚಿದ ಭರತಿಯ ಸಮಯದಲ್ಲಿ ಉಕ್ಕುವ ಸಾಗರದ ನೀರು ಆಕ್ರಮಿಸಿ ವಿಶಾಲ ಹಿನ್ನೀರಿನ ಪ್ರದೇಶಗಳನ್ನು ನಿರ್ಮಿಸಿವೆ. ಇಂಥ ವಿಶಾಲ ಜವುಗು ಪ್ರದೇಶ ಅಪಾರ ಜೀವಿಗಳಿಗೆ ಆಶ್ರಯ ನೀಡುತ್ತದೆ. ಕಾಳಿ ಮತ್ತು ಅಘನಾಶಿನಿ ನದಿಗಳ ಹಿನ್ನೀರು ಪ್ರದೇಶಗಳು ವಿಫುಲ ಕಾಂಡ್ಲಾ ಗಿಡಗಳಿಂದ ಆವೃತವಾಗಿದ್ದು ಜೀವವೈವಿಧ್ಯಕ್ಕೆ ವಿಶೇಷ ನೆಲೆಗಳಾಗಿವೆ. ಇವಲ್ಲದೆ ಉಳಿದೆಲ್ಲ ಅಳಿವೆಗಳಲ್ಲೂ ಅಲ್ಪ ಪ್ರಮಾಣದಲ್ಲಿ ಕಾಂಡ್ಲಾ ಕಾಡನ್ನು ನಾವು ಕಾಣಬಹುದು.ಜಲೀಯ ಪರಿಸರ ವ್ಯವಸ್ಥೆಯನ್ನು ಹರಿಯುವ ಮತ್ತು ಸ್ಥಿರ ವ್ಯವಸ್ಥೆಗಳೆಂದು ವಿಂಗಡಿಸುತ್ತಾರೆ. ಸ್ಥಿರ ವ್ಯವಸ್ಥೆಗಳಲ್ಲಿ ಹೊಂಡ, ಕೆರೆ, ಸರೋವರ ಮತ್ತು ಮಾನವ ನಿರ್ಮಿತ ಜಲಾಶಯಗಳನ್ನು ಸೇರಿಸಿದರೆ ಹರಿಯುವ ವ್ಯವಸ್ಥೆಗಳಲ್ಲಿ ಝರಿ, ಕಿರು ಹಳ್ಳ, ಹಳ್ಳ, ನದಿ, ಮತ್ತು ಅಳಿವೆ ಪ್ರದೇಶಗಳನ್ನು ಸೇರಿಸಬಹುದು. ಪ್ರತಿ ನದಿಯ ಕೆಲ ಭಾಗ ಹರಿಯುವಾಗ ಈ ರೀತಿಯ ಪರಿಸರ ವ್ಯವಸ್ಥೆಗಳನ್ನು ನಿರ್ಮಿಸಿ ಜೀವಿಗಳಿಗೆ ಆವಾಸ ಕಲ್ಪಿಸುತ್ತವೆ. ಈ ಎಲ್ಲ ಆವಾಸಗಳಲ್ಲೂ ವೈವ್ಯಧ್ಯಮಯ ಜೀವಿಗಳನ್ನು ನಾವು ಕಾಣಬಹುದು. ಅಂತೆಯೇ ಒಂದು ನದಿಯಲ್ಲಿ ಇಂಥ ಹಲವು ಆವಾಸ ಮತ್ತು ಆವಾಸಕ್ಕೆ ತಕ್ಕಂತೆ ಸಸ್ಯ ಮತ್ತು ಪ್ರಾಣಿ ಸಂಕುಲಗಳನ್ನು ಹೊಂದಿ ಆ ಪ್ರದೇಶವನ್ನು ಶ್ರೀಮಂತವನ್ನಾಗಿಸಿವೆ.ಇಲ್ಲಿನ ಹಳ್ಳ ಮತ್ತು ನದಿಗಳು ಕ್ರ್ರಮಿಸುವ ಪ್ರದೇಶ ತುಂಬಾ ಕಿರಿದಾಗಿದ್ದು ಸಿಹಿ ನೀರಿನ ವ್ಯಾಪ್ತಿ ಘಟ್ಟದ ಪ್ರದೇಶಕ್ಕೆ ಸೀಮಿತವಾಗಿದೆ. ಅರಣ್ಯ ಪ್ರದೇಶದಲ್ಲಿ ಉದುರವ ಎಲೆಗಳು, ಪ್ರಾಣಿಗಳ ತ್ಯಾಜ್ಯ ಮತ್ತು ಸತ್ತು ಕೊಳೆಯವ ಗಿಡಗಂಟಿ ಹಾಗೂ ಪ್ರಾಣಿಗಳು ಇಲ್ಲಿನ ಫಲವತ್ತತೆಯನ್ನು ಹೆಚ್ಚಿಸುತ್ತವೆ. ಅಂತೆಯೇ ಇಲ್ಲಿ ವಿಶಿಷ್ಟ ರೀತಿಯ ಜೀವಿಗಳನ್ನು ನಾವು ಕಾಣಬಹುದು. ಅಲ್ಲದೆ ಇಲ್ಲಿ ಭೂಪ್ರದೇಶದ ಜೀವಿಗಳು ಮತ್ತು ಜಲೀಯ ಜೀವಿಗಳ ನಡುವಿನ ಸಂಭಂಧ ಅತಿ ನಿಕಟವಾಗಿರುತ್ತದೆ. ವನ್ಯ ಜೀವಿಗಳ ಅಳಿವು ಮತ್ತು ಉಳಿವು ಈ ನೀರಿನ ಸೆಲೆಗಳನ್ನವಲಂಬಿಸಿವೆ. ಇಂದು ವಿಶ್ವದ ವಿಶಾಲ ಜೀವವೈವಿಧ್ಯ ಹೊಂದಿರುವ ೧೨ ರಾಷ್ಟ್ರಗಳಲ್ಲಿ ಭಾರತವೂ ಒಂದು ಎನ್ನುವದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಆದರೆ ಇದಕ್ಕೆ ಪ್ರಮುಖ ಕಾರಣವೆಂದರೆ ಕಾಡಿನುದ್ದಕ್ಕೂ ಜೀವಿಗಳಿಗೆ ನೀರನ್ನೀಯುವ ಈ ತೊರೆ ಮತ್ತು ಕಿರು ಹಳ್ಳಗಳೆನ್ನುವದನ್ನು ನಾವು ಮರೆಯಬಾರದು. ಕಾಡಿನ ನಾಶ, ನದಿಗಳಿಗೆ ಮಾನವ ನಿರ್ಮಿತ ತಡೆಗೋಡೆಗಳು, ಕಾಡು ಪ್ರಾಣಿಗಳನ್ನು ಸ್ವಾರ್ಥಕ್ಕೋಸ್ಕರ ಕೊಲ್ಲುವದು ಹೀಗೆ ಮಾನವ ನಿರ್ಮಿತ ಹಲವಾರು ಕಾರಣಗಳಿಂದ ಇಲ್ಲಿನ ಪರಿಸರ ವ್ಯವಸ್ಥೆಗಳು ಅಪಾಯದಂಚಿಗೆ ಸಾಗುತ್ತಿವೆ. ಇದರ ಪರಿಣಾಮವಾಗಿಯೇ ನಮ್ಮ ಪಶ್ಚಿಮ ಘಟ್ಟದ ಜೀವ ವೈವಿಧ್ಯದ ಪ್ರಮಾಣ ದಿನೇ ದಿನೇ ಕಡಿಮೆಯಾಗುತ್ತಿದೆ. ಇದನ್ನರಿತ ವಿಶ್ವ ಸಮುದಾಯ ವಿಶ್ವದ ವಿಶಾಲ ಜೀವವೈವಿಧ್ಯ ಹೊಂದಿರುವ ಮತ್ತು ಅವುಗಳಿಗಾಗುತ್ತಿರುವ ಅಪಾಯಗಳನ್ನು ಗುರುತಿಸಿ ಅವನ್ನು ರಕ್ಷಿಸಲೋಸುಗ ವಿಶ್ವದಾದ್ಯಂತ ಇರುವ ಜೀವ ವೈವಿಧ್ಯದ ಸೂಕ್ಷ್ಮ ತಾಣಗಳನ್ನು ಗುರುತಿಸಿವೆ. ಅವುಗಳಲ್ಲೆರಡು ನಮ್ಮ ದೇಶದಲ್ಲಿದ್ದು ಮೊದಲನೆಯದು ಪಶ್ಚಿಮ ಘಟ್ಟ ಹಾಗೂ ಇನ್ನೊಂದು ಪೋರ್ವೋತ್ತರ ಪ್ರದೇಶ ಎನ್ನುವದು ನಮ್ಮ ಮೇಲಿನ ಜವಾಬ್ದಾರಿಯನ್ನು ಇನ್ನೂ ಹೆಚ್ಚಿಸಿದೆ.ಅಳಿವೆ ಪ್ರದೇಶವನ್ನು ಮೀನಗಳ ಬಾಲವಾಡಿ ಎಂದು ಗುರುತಿಸಲಾಗುತ್ತದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಹರಿಯುವ ನದಿ ತನ್ನ ಹರಿವಿನ ಪ್ರದೇಶದಿಂದ ಹೊತ್ತು ತರುವ ಪೋಷಕಾಂಶಗಳು. ಘಟ್ಟದಿಂದ ದುಮುಕುವ ನದಿ ನೀರು ಕರಾವಳಿ ಪ್ರದೇಶದಲ್ಲಿ ಹರಿಯುವಾಗ ಭರತಿಯ ಪರಿಣಾಮವಾಗಿ ಹಾಗೂ ಸಮಪಾತಳಿಯಿಂದಾಗಿ ನಿಧಾನವಾಗಿ ಹರಿಯಲಾರಂಭಿಸುತ್ತದೆ. ಇದರಿಂದಾಗಿ ನದಿಯಲ್ಲಿ ರಾಡಿ ತಳದಲ್ಲಿ ಕೂತು ಕೊಳೆತು ಉತ್ತಮ ಗೊಬ್ಬರವಾಗುತ್ತದೆ. ಭರತಿ ಮತ್ತು ಇಳಿತಗಳ ಪರಿಣಾಮವಾಗಿ ದಿನನಿತ್ಯ ಕದಡಿ ಅಲ್ಲಿ ಸೂಕ್ಷ್ಮ ಜೀವಿಗಳ ಬೆಳವಣಿಗೆಗೆ ಕಾರಣವಾಗುತ್ತವೆ. ಇದರಿಂದಾಗಿ ಮೀನಿನ ಮರಿಗಳು ವಿಫುಲವಾಗಿ ಬೆಳೆಯುತ್ತವೆ. ಇದರಿಂದಲೆ ಸಿಹಿ ನೀರಿನ ಮತ್ತು ಸಾಗರದ ಮೀನಗಳು ತಮ್ಮ ಮೊಟ್ಟೆ ಇಡಲು ಈ ಸವಳು (ಉಪ್ಪು ಮಿಶ್ರಿತ) ನೀರಿನ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳುತ್ತವೆ. ಸೂಕ್ತ ಬೆಳವಣಿಗೆಯ ನಂತರ ಅವು ತಮ್ಮ ಮೂಲ ಪ್ರದೇಶಕ್ಕೆ ಸಾಗುತ್ತವೆ. ಸಾಗರ ಶಿಗಡಿ ಇಂಥದೊಂದು ಉದಾಹರಣೆ. ಇದಲ್ಲದೆ ಚಿಪ್ಪಿನ ಮೀನಗಳಾದ ಬಳಚು, ಕಲ್ಲಗ, ಏಡಿ, ಹೊಳೆ ಮೀನಗಳಾದ ನಗಲಿ, ಶೇವಟಿ, ಹೀಗೆ ಹತ್ತು ಹಲವು ಮೀನಗಳಿಗೆ ಇದು ಶಾಶ್ವತ ನೆಲೆ. ಈ ಮೀನಗಳನ್ನು ಒಮ್ಮೆ ಸೇವಿಸಿದವರು ಮತ್ತೆ ಮತ್ತೆ ಇವನ್ನು ಹುಡುಕಿ ಬರುತ್ತಾರೆ.ಅಳಿವೆಯ ಈ ರಾಡಿ ಅಲ್ಪ ಪ್ರಮಾಣದಲ್ಲಿ ಸಾಗರ ಸೇರಿ ಅಲ್ಲಿನ ಫಲವತ್ತತೆ ಹೆಚ್ಚಿಸಿ ಅಲ್ಲಿ ಸೂಕ್ಷ್ಮ ಜೀವಿಗಳ ಬೆಳವಣಿಗೆಗೆ ಕಾರಣವಾಗುತ್ತವೆ. ಇವನ್ನು ಹುಡುಕಿ ವಿವಿಧ ಮೀನಗಳು ವಿಶೇಷವಾಗಿ ಬಂಗುಡೆ, ತಾರ್ಲಿ ಇತ್ಯಾದಿ ಸಾಗರ ತೀರ ಪ್ರವೇಶಿಸುತ್ತವೆ. ಇದರಿಂದಾಗಿ ಕರಾವಳಿ ತೀರದ ಮೀನುಗಾರಿಕೆ ಉತ್ತಮವಾಗಿರುತ್ತದೆ. ಇದನ್ನರಿತ ನಮ್ಮ ಪೂರ್ವಜರು ಮೀನಿಗಾಗಿ ರಂಪಣಿ ಬಲೆ ಹಿಡಿದು ಕಾಯುತ್ತಿದ್ದರು. ಹೆಚ್ಚಿನ ಮಳೆಯೆಂದರೆ ಉತ್ತಮ ಮೀನುಗಾರಿಕೆ ಎನ್ನುವದು ಮೀನುಗಾರರ ಅನುಭವ. ಇದಕ್ಕೆ ಕಾರಣ ಹರಿಯುವ ನದಿಗಳೆನ್ನುವದು ವಿeನಿಗಳ ಅನಿಸಿಕೆ.ಇತ್ತೀಚಿನ ಸುನಾಮಿ, ಚಂಡಮಾರುತ ಮತ್ತು ಬಿರುಗಾಳಿಗಳು ಕರಾವಳಿ ತೀರದ ಜನತೆಯ ನಿದ್ದೆಗೆಡಿಸಿವೆ. ಆದರೆ ಇವಕ್ಕೆ ಸೂಕ್ತ ಪರಿಹಾರ ನದಿಮುಖಜ ಪ್ರದೇಶದಲ್ಲಿನ ಉಪ್ಪುನೀರಿನಲ್ಲಿ ಅರಣ್ಯ ರೂಪದಲ್ಲಿ ಬೆಳೆಯುವ ಸಸ್ಯಸಂಕುಲ, ಕಾಂಡ್ಲಾ ಅರಣ್ಯ ಎನ್ನುವದು ಹೆಚ್ಚಿನ ಜನಕ್ಕೆ ತಿಳಿದಿಲ್ಲ. ನಮ್ಮ ದೇಶದಲ್ಲಿ ಈಗ ಕಾಂಡ್ಲಾ ಅಭಿವೃದ್ಧಿಗಾಗಿ ಅಪಾರ ಪ್ರಮಾಣದಲ್ಲಿ ಹಣ ವೆಚ್ಛ ಮಾಡಲಾಗುತ್ತಿದೆ. ನಮ್ಮ ಕರಾವಳಿಯ ಕಾಳಿ ಮತ್ತು ಅಘನಾಶಿನಿ ನದಿಗಳು ವೈವಿಧ್ಯಮಯ ಕಾಂಡ್ಲಾ ಸಸ್ಯಗಳನ್ನು ಹೊಂದಿವೆ. ಈಗಾಗಲೆ ಕಾಳಿ ನದಿಯಲ್ಲಿ ೧೬ ಕಾಂಡ್ಲಾ ಮತ್ತು ಸುಮಾರು ೧೧೦ ಸಹಯೋಗಿ ಸಸ್ಯಗಳನ್ನು ಗುರುತಿಸಲಾಗಿದೆ. ಇವು ಕೇವಲ ರಕ್ಷಣೆಗಷ್ಟೇ ಅಲ್ಲ, ಇನ್ನುಳಿದಂತೆ ಹಲವು ಜೀವಿಗಳಿಗೆ ಆಸರೆ ನೀಡುತ್ತವೆ. ವಿವಿಧ ದೇಶದ ಕನಿಷ್ಟ ೪೦ ಪಕ್ಷಿಗಳು ಇಲ್ಲಿ ಸಂತಾನೋತ್ಪತ್ತಿಗೆ ಬರುತ್ತವೆನ್ನುವದು ಪಕ್ಷಿ ವೀಕ್ಷಕರ ಅಭಿಪ್ರಾಯ. ಕಾಡು ಪ್ರಾಣಿಗಳು ಸಹಿತ ಆಹಾರ ಅರಸಿ ಇಲ್ಲಿ ನೆಲೆಸುತ್ತವೆ. ಈ ಕಾಂಡ್ಲಾ ಅರಣ್ಯ ಭೂಕೊರೆತ ತಡೆಯುವದಲ್ಲದೆ ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕ ಹೀರಿ ಭೂತಾಪಮಾನ ಕಡಿಮೆ ಮಾಡುವಲ್ಲಿ ಗಣನೀಯ ಪಾತ್ರ ವಹಿಸಬಲ್ಲುದೆನ್ನುವದನ್ನು ವಿeನಿಗಳು ಈಗ ಕಂಡುಹಿಡಿದಿದ್ದಾರೆ. ಆದರೆ ಕಳೆದ ಎರಡು ದಶಕಗಳಿಂದ ಕಾಂಡ್ಲಾ ನಾಶ ನಿರಂತರ ನಡೆದಿದೆ. ನದಿ ಮುಖಜ ಪ್ರದೇಶದಲ್ಲಿನ ಜೀವವೈವಿಧ್ಯತೆಯ ಆಗರವಾದ ಕಾಂಡ್ಲಾ ಉಳಿಸಿಕೊಳ್ಳುವದು ನಮ್ಮೆಲ್ಲರ ಕರ್ತವ್ಯವಾಗಿದೆ.ನದಿಗಳು ಅರಣ್ಯ, ಕೃಷಿ, ಅಳಿವೆ, ಕಾಂಡ್ಲಾ ಹಾಗೂ ಕರಾವಳಿ ತೀರದ ಜೀವವೈವಿಧ್ಯ ನಿರ್ವಹಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಈ ನದಿಗಳಿಗೆ ಆಣೆಕಟ್ಟು ಇಲ್ಲವೆ ತಡೆ ಗೋಡೆ ಕಟ್ಟುವದು, ನದಿಯ ದಿಶೆ ಬದಲಾಯಿಸುವದು ಇಲ್ಲವೆ ನದಿಯ ದಡದ ಮೇಲೆ ಮಾಲಿನ್ಯ ಉಂಟುಮಾಡುವ ಉದ್ದಿಮೆ ಆರಂಭಿಸುವದು ಎಂದರೆ ಈ ಎಲ್ಲ ಪರಿಸರ ವ್ಯವಸ್ಥೆಗಳಿಗೆ ಅಪಾಯ ಖಂಡಿತ. ಈಗಾಗಲೆ ಕಾಳಿ ಮತ್ತು ಶರಾವತಿ ನದಿಗಳು ತಮ್ಮ ಜೀವವೈವಿಧ್ಯದ ಹೆಚ್ಚಿನ ಪಾಲನ್ನು ಕಳೆದುಕೊಂಡಿವೆ. ಉಳಿದಂತೆ ಅತ್ಯಂತ ಶ್ರೀಮಂತ ಜೀವವೈವಿಧ್ಯ ಹೊಂದಿರುವ ಅಘನಾಶಿನಿಯ ಜೊತೆಗೆ ಗಂಗಾವಳಿ ಮತ್ತು ವೆಂಕ್ಟಾಪುರ ನದಿಗಳನ್ನು ಕಾಪಾಡಿ ಪಶ್ಚಿಮ ಘಟ್ಟ ಹಾಗೂ ಕರಾವಳಿ ತೀರದ ಜೀವಿಗಳನ್ನು ರಕ್ಷಿಸುವ ಹೊಣೆ ನಮ್ಮ ಮೇಲಿದೆ.

ಗುರುವಾರ, ಫೆಬ್ರವರಿ 14, 2008
ಸೂರು ಬಿತ್ತು ಸೂರು!
ಬುಧವಾರ, ಜನವರಿ 23, 2008
ಗಣಕ ವಿಜ್ಞಾನದಲ್ಲೊಂದು ಸಮೂಹ ಕ್ರಾಂತಿ
ಟಿ ಜಿ ಶ್ರೀನಿಧಿ
ಏಳೆಂಟು ವರ್ಷಗಳ ಹಿಂದೆ ನಮ್ಮ ಮನೆಯಲ್ಲಿದ್ದ ಗಣಕದ ಪ್ರಾಸೆಸರ್ ಮುನ್ನೂರು ಮೆಗಾಹರ್ಟ್ಸ್ ವೇಗದಲ್ಲಿ ಕೆಲಸಮಾಡುತ್ತಿತ್ತು, ಅರುವತ್ತನಾಲ್ಕು ಮೆಗಾಬೈಟ್ RAM ಹೊಂದಿತ್ತು. ಆದರೆ ಹೋದ ತಿಂಗಳು ನಾವು ಕೊಂಡ ಗಣಕದ ಪ್ರಾಸೆಸರ್ ಮೂರು ಗಿಗಾಹರ್ಟ್ಸ್‌ನದು, ಅದರಲ್ಲಿರುವ RAM ಸಾಮರ್ಥ್ಯ ಬರೋಬ್ಬರಿ ಒಂದು ಗಿಗಾಬೈಟ್. ಒಟ್ಟಿನಲ್ಲಿ ಆ ಹಳೆಯ ಗಣಕಕ್ಕಿಂತ ಹತ್ತು ಪಟ್ಟು ವೇಗವಾಗಿ ಕೆಲಸಮಾಡುವ ಸಾಮರ್ಥ್ಯ ಈ ಗಣಕಕ್ಕಿದೆ. ಮುಂದೆ ಓದಿ

ಶುಕ್ರವಾರ, ಜನವರಿ 18, 2008
ಬೌ... ಬೌಬೌಬೌಬೌಬೌ!
ಟಿ ಜಿ ಶ್ರೀನಿಧಿ ಹೀಗೇ ಸುಮ್ಮನೆ ಕುಳಿತು ನನ್ನ ಇಷ್ಟದ ತಾಣಗಳನ್ನು ಬ್ರೌಸ್ ಮಾಡುತ್ತಿದ್ದಾಗ ಒಂದೆಡೆ ಕಂಡ ಸುದ್ದಿ ನಾನು ಹಿಂದೆಂದೋ ಓದಿದ್ದ ಡೊನಾಲ್ಡ್ ಡಕ್ ಕಾಮಿಕ್ ಅನ್ನು ನೆನಪಿಸಿತು. ಡೊನಾಲ್ಡ್ ಅದೆಂಥದೋ ಮಾತ್ರೆಗಳನ್ನು ನುಂಗಿ ನಾಯಿಯ ಬೌಬೌ ಭಾಷೆ ಮಾತನಾಡಲು ಕಲಿಯುವ ಕತೆ ಅದು. ಹೀಗೆ ಮಾತಾಡುವಾಗ ಸ್ವಲ್ಪ ಎಡವಟ್ಟಾಗಿ ನಾಯಿ ಕೋಪದಲ್ಲಿ ಡೊನಾಲ್ಡ್ ಅನ್ನು ಅಟ್ಟಿಸಿಕೊಂಡು ಹೋಗುವ ಚಿತ್ರ ನನಗಿನ್ನೂ ಚೆನ್ನಾಗಿ ನೆನಪಿದೆ.
ಆ ಕತೆಯನ್ನು ನೆನಪಿಸಿದ ಸುದ್ದಿ ಬಂದದ್ದು ಹಂಗರಿ ದೇಶದಿಂದ. ಅಲ್ಲಿನ ವಿಜ್ಞಾನಿಗಳು ನಾಯಿಯ ಬೊಗಳುವಿಕೆಯನ್ನು ಅರ್ಥೈಸುವ ತಂತ್ರಾಂಶವನ್ನು ರೂಪಿಸಿದ್ದಾರಂತೆ. ಈ ಸಾಧನೆ ನಡೆದಿರುವುದು ಬುಡಾಪೆಸ್ಟ್ ನಗರದ ವಿಶ್ವವಿದ್ಯಾನಿಲಯವೊಂದರಲ್ಲಿ.
ಈ ತಂತ್ರಾಂಶ ಈವರೆಗೆ ಒಟ್ಟು ಆರುಸಾವಿರ ಬಗೆಯ ಬೊಗಳುವಿಕೆಗಳನ್ನು ಕೇಳಿಸಿಕೊಂಡಿದೆಯಂತೆ.ಇಷ್ಟು ಬೊಗಳಿಸಿಕೊಂದ ಮೇಲೆ ಅದು ಈಗ ಯಾವುದೇ ಬೊಗಳುವಿಕೆ ಕೇಳಿದರೂ ಬೊಗಳಿದ ನಾಯಿ ಏನು ಹೇಳುತ್ತಿದೆ ಎಂದು ನಮಗೆ ತಿಳಿಸುತ್ತದೆ ಎನ್ನುವುದು ತಂತ್ರಾಂಶ ನಿರ್ಮಾತೃಗಳ ಹೇಳಿಕೆ. ನಾಯಿ ಬೌಬೌ ಅಂದಾಗ ಅದು ಸಿಟ್ಟಿನಲ್ಲಿ ಬೊಗಳಿದ್ದೋ, ಆಟವಾಡುತ್ತ ಬೊಗಳಿದ್ದೋ, ಅಪರಿಚಿತನನ್ನು ನೋಡಿ ಬೊಗಳಿದ್ದೋ ಅಥವಾ ಹಸಿವಾಗಿದೆ ಎಂದು ಬೊಗಳಿದ್ದೋ ಎಂಬುದು ಈ ತಂತ್ರಾಂಶದಿಂದ ಗೊತ್ತಾಗಲಿದೆಯಂತೆ. ಇನ್ನುಮುಂದೆ ನಾಯಿಮರೀ ನಾಯಿಮರೀ ತಿಂಡಿಬೇಕೇ ಎಂದು ಕೇಳುವ ಬದಲಿಗೆ ನಿಮ್ಮ ನಾಯಿಯ ಬೊಗಳುವಿಕೆಯನ್ನು ನಮ್ಮ ತಂತ್ರಾಂಶಕ್ಕೆ ಕೇಳಿಸಿ ಸಾಕು ಅಂತಾರೆ ಅವರು.
ಸದ್ಯಕ್ಕೆ ಈ ತಂತ್ರಾಂಶ ಶೇಕಡಾ ೪೩ರಷ್ಟು ನಿಖರವಾಗಿ ನಾಯಿಯ ಬೊಗಳುವಿಕೆಯನ್ನು ಅರ್ಥೈಸಬಲ್ಲದಂತೆ. ಮನುಷ್ಯರು ಶೇ.೪೦ರಷ್ಟು ಸಂದರ್ಭಗಳಲ್ಲಿ ನಾಯಿಯ ಬೊಗಳುವಿಕೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳುತ್ತಾರೆ ಎಂದು ಈ ತಜ್ಞರ ಅಧ್ಯಯನಗಳಿಂದ ತಿಳಿದುಬಂದಿದೆಯಂತೆ. ಹೀಗಾಗಿ ಈ ತಂತ್ರಾಂಶದ ಬುದ್ಧಿವಂತಿಕೆ ಸಧ್ಯಕ್ಕೆ ಮನುಷ್ಯರಿಗಿಂತ ಒಂದು ಕೈ ಮೇಲೆಯೇ ಎಂದು ಹೇಳಬಹುದು.

ಸದ್ಯಕ್ಕೆ ಈ ತಂತ್ರಾಂಶ ಹಂಗರಿಯ ಮೂಡಿ ಎಂಬ ತಳಿಯ ನಾಯಿಗಳ ಬೊಗಳುವಿಕೆಯನ್ನು ಮಾತ್ರ ಅರ್ಥಮಾಡಿಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಇದು ಬೇರೆಬೇರೆ ತಳಿಯ ನಾಯಿಗಳು ಏನು ಬೊಗಳುತ್ತಿವೆ ಎಂದೂ ತಿಳಿದುಕೊಳ್ಳಲಿದೆಯಂತೆ. ಈ ತಂತ್ರಾಂಶ ಅಭಿವೃದ್ಧಿಹೊಂದಿದ ಹಾಗೆ ಅದನ್ನು ಇನ್ನೂ ಹಲವಾರು ಬಗೆಯ ಶಬ್ದಗಳನ್ನು ಅರ್ಥೈಸಲು ಬಳಸುವ ಉದ್ದೇಶ ಅದರ ನಿರ್ಮಾತೃಗಳಿಗಿದೆ. ನಾಯಿ ಹಾಗೂ ನಾಯಿಯ ಮಾಲಿಕನ ನಡುವೆ ಸಂವಹನ ಸಾಧ್ಯವಾಗಿಸಬಲ್ಲ ಉಪಕರಣವೊಂದನ್ನು ತಯಾರಿಸುವ ಐಡಿಯಾ ಕೂಡ ಅವರ ತಲೆಗೆ ಬಂದಿದೆ. ಎಲ್ಲಾ ಅವರು ಅಂದುಕೊಂಡ ಹಾಗೆ ನಡೆದರೆ ನಾವೂ ನಮ್ಮ ನಾಯಿಗಳ ಜೊತೆಗೆ ಮಾತನಾಡಬಹುದು, ಅಲ್ಲಲ್ಲ, ಬೊಗಳಬಹುದು - ಡೊನಾಲ್ಡ್ ಡಕ್ ಥರಾ!
________________________
________________________
(ಇಂಥದ್ದೇ ಒಂದು ವಿಚಿತ್ರ ಸಾಧನೆ ಕೆಲವರ್ಷಗಳ ಹಿಂದೆ ಕೂಡ ನಡೆದಿತ್ತು. ಆಗ ಜಪಾನಿನ ಸಂಸ್ಥೆಯೊಂದು ನಾಯಿ ಬೆಕ್ಕುಗಳ ಭಾಷೆಯನ್ನು ಅರ್ಥೈಸುವ ಯಂತ್ರವನ್ನು ತಯಾರಿಸಿ ಮಾರುಕಟ್ಟೆಗೆ ಬಿಟ್ಟಿತ್ತು. ಮಿಯಾವ್‍ಲಿಂಗ್ವಲ್ ಹಾಗೂ ಬೌಲಿಂಗ್ವಲ್ ಎಂಬ ಹೆಸರಿನ ಈ ಯಂತ್ರಗಳು ತಕ್ಕಮಟ್ಟಿಗೆ ಮಾರಾಟವೂ ಆಗಿದ್ದವು ಎಂದು ಓದಿದ ನೆನಪು.)
ಬುಧವಾರ, ಜನವರಿ 16, 2008
ಎಲ್ಲೆಲ್ಲೂ ಎಲ್‌ಇಡಿ!
ಟಿ ಜಿ ಶ್ರೀನಿಧಿ
ಎಲ್‌ಇಡಿ ಎಂದೇ ಪ್ರಸಿದ್ಧವಾಗಿರುವ ಲೈಟ್ ಎಮಿಟಿಂಗ್ ಡಯೋಡ್ ಪುಟಾಣಿಗಾತ್ರದ ಆಕರ್ಷಕ ದೀಪ, ನಮ್ಮ ಮನೆಗಳಲ್ಲಿ ಎತ್ತ ನೋಡಿದರೂ ಕನಿಷ್ಟ ಒಂದಾದರೂ ಕಣ್ಣಿಗೆ ಬೀಳುವಷ್ಟು ಸರ್ವೇಸಾಮಾನ್ಯ. ಮಕ್ಕಳ ಆಟಿಕೆಗಳು, ಅಲಂಕಾರಿಕ ಸಾಮಗ್ರಿಗಳಿಂದ ಹಿಡಿದು ಟೀವಿ, ಟೇಪ್ ರೆಕಾರ್ಡರ್, ದೂರವಾಣಿ, ಗಣಕಗಳವರೆಗೆ ಎಲ್ಲ ಉಪಕರಣಗಳಲ್ಲೂ ಎಲ್‌ಇಡಿಯ ಬಳಕೆ ಇದ್ದದ್ದೇ.
ಡಯೋಡ್ ಎಂಬ ಅರೆವಾಹಕ ಸಾಧನದ ಮೂಲಕ ವಿದ್ಯುತ್ ಹರಿಸಿದಾಗ ಬೆಳಕು ಹೊರಹೊಮ್ಮುತ್ತದೆ. ಎಲ್‌ಇಡಿಗಳು ಕೆಲಸಮಾಡುವುದು ಇದೇ ತತ್ವವನ್ನು ಆಧರಿಸಿ... ಮುಂದೆ ಓದಿ

ಭಾನುವಾರ, ಡಿಸೆಂಬರ್ 30, 2007
ಕನ್ನಡಪ್ರಭದಲ್ಲಿ ಇ-ಜ್ಞಾನ
ಇಂದಿನ ಕನ್ನಡಪ್ರಭ 'ಸಾಪ್ತಾಹಿಕ ಪ್ರಭ'ದ ಬ್ಲಾಗ್ ಬುಟ್ಟಿ ಅಂಕಣದ ಕಣ್ಣಿಗೆ ಇ-ಜ್ಞಾನ ಬಿದ್ದಿದೆ! ಅದರಲ್ಲಿ ಪ್ರಕಟವಾಗಿರುವ ಬರಹ ಇಲ್ಲಿದೆ ನೋಡಿ:
ಬುಧವಾರ, ಡಿಸೆಂಬರ್ 5, 2007
ಡಿಜಿಟಲ್ ಯುಗದ ಪ್ರವರ್ತಕ...
ಟಿ ಜಿ ಶ್ರೀನಿಧಿ
ಅವು ನಿಮ್ಮ ಮನೆಗಳಲ್ಲಿ ಕನಿಷ್ಟವೆಂದರೂ ಐದರಿಂದ ಹತ್ತು ಕೋಟಿಯಷ್ಟಿರುತ್ತವೆ.
"ಏನು? ಇರುವೆ-ಜಿರಲೆಗಳಾ? ಅಕ್ಕಿ ಮೂಟೆಯಲ್ಲಿರುವ ಕಾಳುಗಳಾ?" ಎಂದು ನೀವು ಕೇಳುವ ಮೊದಲೇ ಹೇಳಿಬಿಡುತ್ತೇನೆ ಕೇಳಿ - ಅವು... ಮುಂದೆ ಓದಿ

ಮಂಗಳವಾರ, ಡಿಸೆಂಬರ್ 4, 2007
ಅಯ್ಯೋ! ಈ ಮನುಷ್ಯರಿಗಿಂತಾ ನಾವೇ ವಾಸಿ!!
ಈ ಸಂಶೋಧನೆಯನ್ನು ಕುರಿತ ಹೆಚ್ಚಿನ ವಿವರಗಳು ಕರೆಂಟ್ ಬಯಾಲಜಿ ಪತ್ರಿಕೆಯಲ್ಲಿ ಪ್ರಕಟವಾಗಿವೆ.
ಭಾನುವಾರ, ಜುಲೈ 29, 2007
ಯಾರು ಹಿತವರು ನಿಮಗೆ?
ಟಿ ಜಿ ಶ್ರೀನಿಧಿ
ಐದಾರು ವರ್ಷಗಳ ಹಿಂದಿನ ಮಾತು. ದೂರವಾಣಿ ಸಂಪರ್ಕ ಹೊಂದಲು ಯಾರಾದರೂ ಆಸೆಪಟ್ಟರೆ ಆಗ ಅವರಿಗಿದ್ದದ್ದು ಒಂದೇ ಒಂದು ಆಯ್ಕೆ. ದೂರವಾಣಿ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿ ವರ್ಷಾನುಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಬೇರೆ. ಭಾರತ ಸರ್ಕಾರದ ದೂರಸಂಪರ್ಕ ಇಲಾಖೆ 'ನಾನು ಅಂದರೆ ಫೋನು - ಫೋನು ಅಂದರೆ ನಾನು' ಎಂದು ಮೆರೆಯುತ್ತಿದ್ದ ಕಾಲ ಅದು.
ಆದರೆ ಈಗ, ದೂರಸಂಪರ್ಕ ಕ್ಷೇತ್ರದ ತುಂಬಾ ಸ್ಪರ್ಧೆಯೇ ತುಂಬಿಕೊಂಡಿದೆ. ಸಾರ್ವಜನಿಕ ಕ್ಷೇತ್ರದ ಬಿಎಸ್‌ಎನ್‌ಎಲ್ ಜೊತೆಗೆ ಇನ್ನೂ ಹಲವಾರು ಖಾಸಗೀ ಸಂಸ್ಥೆಗಳು ಮೊಬೈಲ್, ಸ್ಥಿರ ದೂರವಾಣಿ ಹಾಗೂ ಅಂತರ್ಜಾಲ ಸಂಪರ್ಕ ಸೇವೆಗಳನ್ನು ನೀಡುತ್ತಿವೆ. ಈ ಸಂಸ್ಥೆಗಳು ಒದಗಿಸುವ ನೂರೆಂಟು ಬಗೆಯ ಸೇವೆಗಳು ಗ್ರಾಹಕರಿಗೆ ಅಪಾರ ಪ್ರಮಾಣದ ಆಯ್ಕೆಯ ಸ್ವಾತಂತ್ರ್ಯವನ್ನು ನೀಡಿವೆ.
ಆದರೆ ಹೊಸ ದೂರವಾಣಿ ಸಂಪರ್ಕಕ್ಕಾಗಿ ಹುಡುಕಾಟ ನಡೆಸುವಾಗ ನಮಗೆ ಒಂದು ಸಂಸ್ಥೆಯ ಸ್ಥಳೀಯ ದರಗಳು ಇಷ್ಟವಾದರೆ ಮೊಬೈಲ್ ಕರೆಗಳಿಗಾಗಿ ಮತ್ತೊಂದು ಸಂಸ್ಥೆಯ ದರಗಳು ಪ್ರಿಯವಾಗುತ್ತವೆ. ಎಸ್‌ಟಿಡಿ ಹಾಗೂ ಐಎಸ್‌ಡಿ ಕರೆಗಳಿಗಾಗಿ ಮೂರನೆಯ ಸಂಸ್ಥೆಯೊಂದು ಪ್ರಕಟಿಸಿರುವ ದರಪಟ್ಟಿ ಬಹಳ ಆಕರ್ಷಕವಾಗಿದೆ ಎಂದೂ ಅನ್ನಿಸಲು ಪ್ರಾರಂಭವಾಗುತ್ತದೆ.
ಸಮಸ್ಯೆಯಿರುವುದೇ ಇಲ್ಲಿ. ಯಾವುದೇ ಒಂದು ಸಂಸ್ಥೆಯ ದೂರವಾಣಿ ಸಂಪರ್ಕವನ್ನು ಆಯ್ದುಕೊಂಡಮೇಲೆ ನಿಮಗೆ ಇಷ್ಟವಿದೆಯೋ ಇಲ್ಲವೋ ಅದು ಒದಗಿಸುವ ಸೇವೆಗಳನ್ನು ಬಳಸುವುದು ಅನಿವಾರ್ಯವಾಗುತ್ತದೆ. ಬೇರಾವುದೋ ಸಂಸ್ಥೆ ಇದಕ್ಕಿಂತ ಹೆಚ್ಚು ಸ್ಪರ್ಧಾತ್ಮಕ ದರಗಳಲ್ಲಿ ತನ್ನ ಸೇವೆ ಒದಗಿಸಲು ಪ್ರಾರಂಭಿಸಿದರೆ ಅದನ್ನು ನೋಡಿ ಹೊಟ್ಟೆಯುರಿ ಅನುಭವಿಸುವುದು ಮಾತ್ರ ನಮ್ಮ ಕೈಲಾಗುವ ಕೆಲಸ!
ಆದರೆ ಇನ್ನುಮುಂದೆ ಹೀಗಾಗಬೇಕಿಲ್ಲ ಎನ್ನುತ್ತಿವೆ ದೂರಸಂಪರ್ಕ ವಲಯದಲ್ಲಿ ಕೇಳಿಬರುತ್ತಿರುವ ಸುದ್ದಿಗಳು. ನಾವು ಯಾವುದೇ ಸಂಸ್ಥೆಯ ದೂರವಾಣಿ ಸಂಪರ್ಕ ಹೊಂದಿದ್ದರೂ ಪರವಾಗಿಲ್ಲ, ಅದೇ ದೂರವಾಣಿಯ ಮುಖಾಂತರ ಬೇರೆಬೇರೆ ಸಂಸ್ಥೆಗಳು ಒದಗಿಸುವ ಸೇವೆಗಳನ್ನೂ ಬಳಸಿಕೊಳ್ಳುವುದು ಸಾಧ್ಯ ಎನ್ನುತ್ತಿವೆ ಈ ಸುದ್ದಿಗಳು.
"ಸ್ಥಳೀಯ ಕರೆಗಳಿಗೆ ಈ ಸಂಸ್ಥೆ ಸಾಕು, ಆದರೆ ಎಸ್‌ಟಿಡಿ-ಐಎಸ್‌ಡಿಗೆ ಬೇರೆ ಸಂಸ್ಥೆಯೇ ಬೇಕು" ಎನ್ನುವಂತಹ ಸ್ವಾತಂತ್ರ್ಯವನ್ನು ಗ್ರಾಹಕರಿಗೆ ಒದಗಿಸಲಿರುವ ಈ ಸೌಲಭ್ಯದ ಹೆಸರೇ ಕ್ಯಾರಿಯರ್ ಪ್ರೀ-ಸೆಲೆಕ್ಷನ್ ಅಥವಾ ಸಿಪಿಎಸ್.
ಈ ಸೌಲಭ್ಯ ಬಳಸುವ ಯಾವುದೇ ಸಂಸ್ಥೆಯ ದೂರವಾಣಿ ಗ್ರಾಹಕರು ತಮಗೆ ಬೇರೆಬೇರೆ ಸೇವೆಗಳನ್ನು ಒದಗಿಸಲು ಬೇರೆಬೇರೆ ಸಂಸ್ಥೆಗಳನ್ನು ಆಯ್ದುಕೊಳ್ಳಬಹುದು. ಉದಾಹರಣೆಗೆ ನೀವು 'ಅ' ಎಂಬ ಸಂಸ್ಥೆಯ ಸ್ಥಿರದೂರವಾಣಿ ಸಂಪರ್ಕವನ್ನು ಬಳಸುತ್ತಿದ್ದೀರಿ ಎಂದುಕೊಳ್ಳೋಣ. ಈ ಸಂಸ್ಥೆ ಪ್ರತಿಯೊಂದು ಸ್ಥಳೀಯ ಕರೆಗಾಗಿ ಒಂದು ರೂಪಾಯಿಯ ದರವನ್ನು ಹಾಗೂ ಎಸ್‌ಟಿಡಿ ಕರೆಗಳಿಗಾಗಿ ಪ್ರತಿ ನಿಮಿಷಕ್ಕೆ ಎರಡು ರೂಪಾಯಿಗಳನ್ನು ನಿಗದಿಪಡಿಸಿದೆ. ಆದರೆ ಕೆಲದಿನಗಳ ನಂತರ ಸ್ಥಳೀಯ ಕರೆ ಹಾಗೂ ಎಸ್‌ಟಿಡಿ ಕರೆ ಎರಡಕ್ಕೂ ಒಂದೂವರೆ ರೂಪಾಯಿ ಮಾತ್ರ ಎಂದು 'ಬ' ಸಂಸ್ಥೆ ಪ್ರಕಟಿಸುತ್ತದೆ. ಈಗ ನೀವೇನು ಮಾಡಬಹುದು? ಕ್ಯಾರಿಯರ್ ಪ್ರೀ-ಸೆಲೆಕ್ಷನ್‌ನ ನೆರವಿನಿಂದ ನಿಮ್ಮ ಸ್ಥಳೀಯ ಕರೆಗಳಿಗಾಗಿ 'ಅ' ಸಂಸ್ಥೆಯ ಸೇವೆಯನ್ನೇ ಮುಂದುವರೆಸಿ ಎಸ್‌ಟಿಡಿಗಾಗಿ ಮಾತ್ರ 'ಬ' ಸಂಸ್ಥೆಯನ್ನು ಬಳಸಿಕೊಳ್ಳಬಹುದು. ತಿಂಗಳ ಕೊನೆಗೆ ನಿಮ್ಮ ದೂರವಾಣಿಯ ಬಾಡಿಗೆ ಹಾಗೂ ಸ್ಥಳೀಯ ಕರೆಗಳ ವೆಚ್ಚವನ್ನು 'ಅ' ಸಂಸ್ಥೆಗೆ ನೀಡಿ ನೀವು ಮಾಡಿದ ಎಸ್‌ಟಿಡಿ ಕರೆಗಳ ವೆಚ್ಚವನ್ನು ಮಾತ್ರ 'ಬ' ಸಂಸ್ಥೆಗೆ ನೀಡಿದರೆ ಆಯಿತು!
ಈ ಸೌಲಭ್ಯ ಈಗಾಗಲೇ ಯೂರೋಪ್ ಹಾಗೂ ಆಸ್ಟ್ರೇಲಿಯಾಗಳಲ್ಲಿ ಬಳಕೆಗೆ ಬರುತ್ತಿದೆ. ಅಮೆರಿಕಾದಲ್ಲಿ ಇದೇ ಸೌಲಭ್ಯವನ್ನು 'ಡಯಲಿಂಗ್ ಪ್ಯಾರಿಟಿ' ಎಂಬ ಹೆಸರಿನಿಂದ ಕರೆದರೆ ಜಪಾನ್ ಹಾಗೂ ಕೊರಿಯಾಗಳಲ್ಲಿ 'ಪ್ರಯಾರಿಟಿ ಆಕ್ಸೆಸ್' ಎಂದು ಗುರುತಿಸುತ್ತಾರೆ.
ಹ್ಞಾಂ, ನಮ್ಮ ದೇಶದಲ್ಲೂ ಈ ಸೇವೆಯನ್ನು ಆದಷ್ಟು ಬೇಗ ಜಾರಿಗೆ ತರುವ ನಿಟ್ಟಿನಲ್ಲಿ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಪ್ರಯತ್ನಗಳನ್ನು ನಡೆಸಿದೆ. ಭಾರತದಲ್ಲಿ ದೂರಸಂಪರ್ಕ ಸೇವೆ ಒದಗಿಸುತ್ತಿರುವ ಕೆಲವು ಪ್ರಮುಖ ಸಂಸ್ಥೆಗಳು ಈ ಸೌಲಭ್ಯವನ್ನು ಅಳವಡಿಸಲು ತಮ್ಮ ಕಾರ್ಯಾಚರಣ ವ್ಯವಸ್ಥೆಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡಬೇಕಿದ್ದು ಈ ಬದಲಾವಣೆಗಳು ಕಾರ್ಯಗತವಾದ ಕೂಡಲೆ ಭಾರತದಲ್ಲಿ ಕ್ಯಾರಿಯರ್ ಪ್ರೀ-ಸೆಲೆಕ್ಷನ್ ಲಭ್ಯವಾಗುವ ನಿರೀಕ್ಷೆಯಿದೆ.

ಬುಧವಾರ, ಜೂನ್ 6, 2007
ಕರೀಬಿಲವನ್ನು ತೂಗುವ ವಿಧಾನ!
ಕೊಳ್ಳೇಗಾಲ ಶರ್ಮ
ತರಕಾರಿ ತರಲು ಹೋದಾಗಲೆಲ್ಲ, ಮಾರುವವ ಸರಿಯಾಗಿ ತೂಗುತ್ತಿದ್ದಾನೆಯೋ ಇಲ್ಲವೋ ಎನ್ನುವ ಅನುಮಾನ ಇದ್ದೇ ಇರುತ್ತದಲ್ಲ! ನನ್ನ ಗೆಳೆಯರೊಬ್ಬರು ತರಕಾರಿ ಮಾರುಕಟ್ಟೆಗೆ ಹೋಗುವಾಗ ಒಂದು ತೂಕದ ಕಲ್ಲನ್ನೂ ಹೊತ್ತು ಹೋಗುತ್ತಿದ್ದರು. ಅದನ್ನೇ ಇಟ್ಟು ತೂಗು ಎನ್ನುತ್ತಿದ್ದರು. ಕಣ್ಮುಂದೆ ನಡೆಯುವ ಮಾಪನವನ್ನೇ ನಂಬಲಾಗದ ನಮಗೆ ಇನ್ನು ಕೋಟ್ಯಂತರ ಕಿಲೋಮೀಟರು ದೂರವಿರುವ ತಾರೆಯರನ್ನು ತೂಗಬಹುದು ಎಂದರೆ ನಂಬಿಕೆ ಬರುವುದಾದರೂ ಹೇಗೆ?
ಇದು ಸತ್ಯವಾದರೂ ನಿಜ. ಸಹಸ್ರಾರು ಜ್ಯೋತಿರ್ವರ್ಷಗಳಷ್ಟು ದೂರ ಇರುವ ತಾರೆಗಳು, ಕರೀಬಿಲಗಳ ತೂಕವನ್ನು ಕಂಡು ಹಿಡಿಯುವ ಹೊಸದೊಂದು ತಂತ್ರವನ್ನು ಅಮೆರಿಕೆಯ ನಾಸಾದ ಭೌತವಿಜ್ಞಾನಿಗಳು ರೂಪಿಸಿದ್ದಾರಂತೆ. >> ಮುಂದೆ ಓದಿ
ಸಬ್‍ಮರೀನ್ ಎಂಬ ನೀರಿನಡಿಯ ಯಾತ್ರಿಕ
ಟಿ ಜಿ ಶ್ರೀನಿಧಿ
ಸಬ್‌ಮರೀನ್ - ಎಂತಹ ರೋಚಕ ಕಲ್ಪನೆ! ಮೀನಿನಂತೆ ನೀರಿನೊಳಗೆ ಓಡಾಡಿಕೊಂಡಿದ್ದು ವೈಜ್ಞಾನಿಕ ಸಂಶೋಧನೆಯಿಂದ ವೈರಿಗಳ ಮೇಲೆ ದಾಳಿಯವರೆಗೆ ಅನೇಕ ಬಗೆಯ ಕೆಲಸಗಳನ್ನು ಕೈಗೊಳ್ಳುವ ಈ ವಿಶಿಷ್ಟ ವಾಹನ ನಮ್ಮಲ್ಲಿ ಉಂಟುಮಾಡುವ ಕುತೂಹಲಕ್ಕೆ ಕೊನೆಯೇ ಇಲ್ಲ ಎಂದರೂ ತಪ್ಪಾಗಲಾರದೇನೋ.
ನೀರಿನೊಳಗೆ ಚಲಿಸಬಲ್ಲ ವಾಹನಗಳನ್ನು ರಚಿಸುವ ಹಂಬಲ ಮಾನವನಲ್ಲಿ ಬಹಳ ಹಿಂದಿನಿಂದಲೇ ಇತ್ತು. ಈ ನಿಟ್ಟಿನಲ್ಲಿ ೧೫೦೦ನೇ ಇಸವಿಯ ಸುಮಾರಿನಿಂದಲೇ ಪ್ರಯತ್ನಗಳೂ ನಡೆಯುತ್ತಿದ್ದವು. ಹದಿನಾರು-ಹದಿನೇಳನೇ ಶತಮಾನಗಳಲ್ಲೇ ಹಲವಾರು ಸಣ್ಣಪುಟ್ಟ ಸಬ್‌ಮರೀನ್‌ಗಳೂ ತಯಾರಾಗಿದ್ದವು. ಯುದ್ಧಗಳ ಸಂದರ್ಭದಲ್ಲಿ ಸಬ್‌ಮರೀನ್‌ಗಳ ಬಳಕೆ ೧೮೬೪ರಷ್ಟು ಹಿಂದೆಯೇ ನಡೆದಿತ್ತಂತೆ!
ಸಬ್‌ಮರೀನ್‌ಗಳು ಸದಾ ನೀರಿನೊಳಗೇ ಸಂಚರಿಸಬೇಕಾಗಿರುವುದರಿಂದ ಅವುಗಳ ರಚನೆ ಬಹಳ ಗಟ್ಟಿಮುಟ್ಟಾಗಿ, ’ಏರ್‌ಟೈಟ್’ ಆಗಿರಬೇಕಾಗುತ್ತದೆ. ಸಮುದ್ರದಾಳದಲ್ಲಿರುವ ಅಪಾರ ಒತ್ತಡವನ್ನು ಸಹಿಸಿಕೊಳ್ಳಲು ಇಂತಹ ಸದೃಢ ರಚನೆ ಅನಿವಾರ್ಯವೂ ಕೂಡ. ಅದಲ್ಲದೆ ಸಮುದ್ರದಾಳದಲ್ಲೇ ಕೆಲಸಮಾಡುವ ಈ ಸಬ್‌ಮರೀನ್‌ಗಳಿಗೆ ಹೆಚ್ಚಿನ ಗಾಳಿಯನ್ನು ಬಳಸದ ಇಂಜನ್‌ಗಳೂ ಬೇಕು! ಹೀಗಾಗಿಯೇ ಹೆಚ್ಚಿನ ಸಬ್‌ಮರೀನ್‌ಗಳು ಬ್ಯಾಟರಿ ಅಥವಾ ಅಣುಶಕ್ತಿಚಾಲಿತವಾಗಿರುತ್ತವೆ.
ಸಬ್‌ಮರೀನ್‌ಗಳಲ್ಲಿ ಉಪಯೋಗವಾಗುವ ಉಪಕರಣಗಳು ಕೂಡ ಸಬ್‌ಮರೀನ್‌ನಷ್ಟೇ ಕುತೂಹಲ ಮೂಡಿಸುವಂಥವು: ಸದಾ ನೀರಿನಡಿಯಲ್ಲೇ ಇರುವ ಸಬ್‌ಮರೀನ್ ಚಾಲಕವರ್ಗದವರು ತಮ್ಮ ಸುತ್ತಮುತ್ತ ನೀರಿನ ಮೇಲೆ ಏನಾಗುತ್ತಿದೆ ಎಂಬುದನ್ನು ಅರಿತುಕೊಳ್ಳಲು ಪೆರಿಸ್ಕೋಪ್ ಎಂಬ ಉಪಕರಣವನ್ನು ಬಳಸುತ್ತಾರೆ. ಇದು ಸಬ್‌ಮರೀನ್‌ನ ’ಕಣ್ಣು’ ಎನ್ನುವುದಾದರೆ ಸೋನಾರ್ ಎಂಬ ಉಪಕರಣ ಸಬ್‌ಮರೀನ್‌ನ ’ಕಿವಿ’ (ಸೋನಾರ್ ಎಂಬ ಸಂಕೇತದ ಪೂರ್ಣರೂಪ ಸೌಂಡ್ ನ್ಯಾವಿಗೇಷನ್ ಆಂಡ್ ರೇಂಜಿಂಗ್ ಎಂದು). ಈ ಉಪಕರಣ ಶಬ್ದದ ಅಲೆಗಳ ಸಹಾಯದಿಂದ ಸಬ್‌ಮರೀನ್‌ನ ಸುತ್ತಮುತ್ತ ಏನೇನಿದೆ ಎಂಬುದನ್ನು ಪತ್ತೆಹಚ್ಚುತ್ತದೆ.
ಈಗಾಗಲೇ ಹೇಳಿದಂತೆ ಸಬ್‌ಮರೀನ್‌ಗಳ ಬಳಕೆ ಕೇವಲ ಮಿಲಿಟರಿ ಉಪಯೋಗಕ್ಕಷ್ಟೆ ಸೀಮಿತವಲ್ಲ. ವೈಜ್ಞಾನಿಕ ಸಂಶೋಧನೆ ಹಾಗೂ ಸಮುದ್ರದಾಳದಲ್ಲಿ ನಡೆಯುವ ಶೋಧನಾ ಕಾರ್ಯಗಳಲ್ಲೂ ಸಬ್‌ಮರೀನ್‌ಗಳು ವ್ಯಾಪಕವಾಗಿ ಬಳಕೆಯಾಗುತ್ತವೆ - ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ನಿಕ್ಷೇಪಗಳ ಪತ್ತೆ, ಮುಳುಗಿಹೋದ ಹಡಗುಗಳ ಅನ್ವೇಷಣೆ ಹೀಗೆ. ಆದರೆ ಇಲ್ಲಿ ಉಪಯೋಗಿಸುವ ಸಬ್‌ಮರೀನ್‌ಗಳ ಗಾತ್ರ ಕೊಂಚ ಚಿಕ್ಕದಾಗಿರುತ್ತದೆ, ಅಷ್ಟೆ! ಹೀಗಾಗಿ ಈ ವಾಹನಗಳನ್ನು ’ಸಬ್‌ಮರ್ಸಿಬಲ್’ಗಳೆಂದು ಕರೆಯುತ್ತಾರೆ. ೧೯೧೨ರಲ್ಲಿ ಅಪಘಾತಕ್ಕೀಡಾಗಿ ಮುಳುಗಿಹೋದ ಟೈಟಾನಿಕ್ ಮತ್ತೆ ಪತ್ತೆಯಾದದ್ದು ಇಂತಹುದೊಂದು ಸಬ್‌ಮರ್ಸಿಬಲ್‌ನ ನೆರವಿನಿಂದಲೇ.
ದೊಡ್ಡದೊಂದು ಕೇಬಲ್‌ನ ಸಹಾಯದಿಂದ ಹಡಗಿಗೆ ಅಂಟಿಕೊಂಡು ದೂರನಿಯಂತ್ರಿತವಾಗಿ ಕೆಲಸಮಾಡುವ ಸಬ್‌ಮರೀನ್‌ಗಳೂ ಇವೆ. ಇವುಗಳನ್ನು ’ರಿಮೋಟ್‌ಲಿ ಆಪರೇಟೆಡ್ ವೆಹಿಕಲ್’ ಅಥವಾ ’ಆರ್‌ಒವಿ’ಗಳೆಂದು ಕರೆಯುತ್ತಾರೆ.

ಬುಧವಾರ, ಮೇ 9, 2007
ಐಟಿ ಸರ್ವಿಸ್ ಮ್ಯಾನೇಜ್‍ಮೆಂಟ್ (ITSM) ಮತ್ತು ಐಟಿ ಇನ್‍ಫ್ರಾಸ್ಟ್ರಕ್ಚರ್ ಲೈಬ್ರರಿ (ITIL)
ಟಿ ಜಿ ಶ್ರೀನಿಧಿ
ಮಾಹಿತಿ ತಂತ್ರಜ್ಞಾನ ಕ್ಷೇತ್ರದ ವಹಿವಾಟು ಹೆಚ್ಚುತ್ತಿದ್ದಂತೆ ಈ ಕ್ಷೇತ್ರದಲ್ಲಿ ಒದಗಿಸಲಾಗುತ್ತಿರುವ ಸೇವೆಯ ಗುಣಮಟ್ಟದ ಬಗೆಗೆ ನೀಡಲಾಗುತ್ತಿರುವ ಮಹತ್ವ ವ್ಯಾಪಕವಾಗಿ ಹೆಚ್ಚುತ್ತಿದೆ. ಇದರಿಂದಾಗಿ ಐಟಿ ಸೇವೆ ಒದಗಿಸುವ ಸಂಸ್ಥೆಗಳು ತಮ್ಮ ಸೇವೆಗಳನ್ನು ಹೇಗೆ ವ್ಯವಸ್ಥಿತವಾಗಿ ನಿಭಾಯಿಸಬೇಕು ಎನ್ನುವುದೇ ಇದೀಗ ಒಂದು ಪ್ರತ್ಯೇಕ ಕ್ಷೇತ್ರವಾಗಿ ಬೆಳೆದು ನಿಂತಿದೆ. ಈ ಕ್ಷೇತ್ರವೇ ಐಟಿ ಸರ್ವಿಸ್ ಮ್ಯಾನೇಜ್‌ಮೆಂಟ್ ಅಥವಾ ’ಐಟಿಎಸ್‌ಎಂ’.
ಐಟಿ ಸೇವೆಗಳನ್ನು ನಿಭಾಯಿಸುವಲ್ಲಿ ವಿಶ್ವದಾದ್ಯಂತ ಪ್ರಯೋಗಿಸಿ ಯಶಸ್ವಿಯಾಗಿರುವ ಉತ್ತಮ ಅಭ್ಯಾಸಗಳು (ಬೆಸ್ಟ್ ಪ್ರಾಕ್ಟೀಸ್) ಹಾಗೂ ಪ್ರಾಸೆಸ್ ಮ್ಯಾನೇಜ್‌ಮೆಂಟ್‌ನಂತಹ ತಂತ್ರಗಳನ್ನು ಉತ್ತಮ ಗುಣಮಟ್ಟದ ಸೇವೆ ನೀಡುವಲ್ಲಿ ಬಳಸಿಕೊಳ್ಳುವುದೇ ಐಟಿ ಸರ್ವಿಸ್ ಮ್ಯಾನೇಜ್‌ಮೆಂಟ್‌ನ ಧ್ಯೇಯ. ಈ ಮೂಲಕ ಸೇವಾಮಟ್ಟ ಒಪ್ಪಂದದ (ಸರ್ವಿಸ್ ಲೆವೆಲ್ ಅಗ್ರಿಮೆಂಟ್) ನಿಬಂಧನೆಗಳಿಗೆ ಒಳಪಟ್ಟಂತೆ ಗ್ರಾಹಕರ ಅಗತ್ಯಗಳಿಗೆ ತಕ್ಕ ಸೇವೆಯನ್ನು ನೀಡಲು ಐಟಿ ಸಂಸ್ಥೆಗಳಿಗೆ ಐಟಿಎಸ್‌ಎಂ ನೆರವಾಗುತ್ತದೆ.
ಐಟಿಎಸ್‌ಎಂ ಕ್ಷೇತ್ರದಲ್ಲಿ ಇತ್ತೀಚೆಗೆ ಕೇಳಿಬರುತ್ತಿರುವ ಹೊಸ ಹೆಸರು ಐಟಿಐಎಲ್ ಅಥವಾ ಐಟಿ ಇನ್‌ಫ್ರಾಸ್ಟ್ರಕ್ಚರ್ ಲೈಬ್ರರಿಯದು. ಐಟಿ ಸೇವಾ ಕ್ಷೇತ್ರದಲ್ಲಿ ಸಾಮಾನ್ಯವಾಗಿ ಕೇಳಿಬರುವ ತೊಂದರೆಗಳು (ಇನ್‌ಸಿಡೆಂಟ್ ಅಥವಾ ಪ್ರಾಬ್ಲಂ), ಬದಲಾವಣೆಗಳು (ಚೇಂಜ್), ಹೊಸ ಬಿಡುಗಡೆಗಳು (ರಿಲೀಸ್) ಮೊದಲಾದವುಗಳನ್ನು ವ್ಯವಸ್ಥಿತವಾಗಿ ನಿಭಾಯಿಸುವಲ್ಲಿ ಐಟಿಐಎಲ್ ನೆರವಾಗುತ್ತದೆ.
ಮಾಹಿತಿ ತಂತ್ರಜ್ಞಾನ ಸೇವೆಗಳನ್ನು ನಿಭಾಯಿಸುವಲ್ಲಿ ವಿಶ್ವದಾದ್ಯಂತ ವ್ಯಾಪಕವಾಗಿ ಬಳಕೆಯಾಗುತ್ತಿರುವ ಕಾರ್ಯತಂತ್ರಗಳಲ್ಲಿ ಐಟಿಐಎಲ್ ಅಗ್ರಗಣ್ಯವಾಗಿ ಬೆಳೆದುನಿಂತಿದೆ. ಇನ್‌ಸಿಡೆಂಟ್ ಮ್ಯಾನೇಜ್‌ಮೆಂಟ್, ಪ್ರಾಬ್ಲಂ ಮ್ಯಾನೇಜ್‌ಮೆಂಟ್, ಚೇಂಜ್ ಮ್ಯಾನೇಜ್‌ಮೆಂಟ್, ರಿಲೀಸ್ ಮ್ಯಾನೇಜ್‌ಮೆಂಟ್ ಹಾಗೂ ಸರ್ವಿಸ್ ಡೆಸ್ಕ್ ಸೇವೆಗಳಿಗೆ ಸಂಬಂಧಿಸಿದಂತೆ ಬಳಸಬಹುದಾದ ಅತ್ಯುತ್ತಮ ಅಭ್ಯಾಸಗಳ ಬಗೆಗೆ (ಬೆಸ್ಟ್ ಪ್ರಾಕ್ಟೀಸ್) ಐಟಿಐಎಲ್ ನಿರ್ದೇಶನಗಳನ್ನು ಒದಗಿಸುತ್ತದೆ.
ಇದೀಗ ವಿಶ್ವವಿಖ್ಯಾತವಾಗಿ ಬೆಳೆದಿರುವ ಐಟಿಐಎಲ್ ಅನ್ನು ಮೊತ್ತಮೊದಲ ಬಾರಿಗೆ ಬಳಕೆಗೆ ತಂದದ್ದು ಬ್ರಿಟಿಷ್ ಸರ್ಕಾರದ ಆಫೀಸ್ ಆಫ್ ಗವರ್ನಮೆಂಟ್ ಕಾಮರ್ಸ್. ಆದರೆ ಈಗ ಐಟಿಐಎಲ್ ವಿಶ್ವದೆಲ್ಲೆಡೆಯ ಐಟಿ ಸೇವಾ ಸಂಸ್ಥೆಗಳ ಪಾಲಿಗೆ ಆದರ್ಶವಾಗಿದೆ.

ಮಂಗಳವಾರ, ಮೇ 8, 2007
ಅಂಗಡಿ ಸಾಮಾನಿಗೆ ಜೀವತುಂಬುವ ’ಆರ್‌ಎಫ್‌ಐಡಿ’
ಟಿ ಜಿ ಶ್ರೀನಿಧಿ
ಮಹಾನಗರಗಳಲ್ಲಿ ಮೊದಲು ಪ್ರಾರಂಭವಾದ ಸೂಪರ್ ಮಾರ್ಕೆಟ್ ಸಂಸ್ಕೃತಿ ಈಗ ಸಣ್ಣಪುಟ್ಟ ಊರುಗಳಲ್ಲೂ ಕಾಣಿಸಿಕೊಳ್ಳಲು ಶುರುವಾಗಿದೆ. ದೊಡ್ಡದೊಡ್ಡ ಅಂಗಡಿಗಳಲ್ಲಿ ನಮಗೆ ಬೇಕಾದ ವಸ್ತುಗಳನ್ನು ಹೊರಗಡೆಗಿಂತ ಕಡಿಮೆ ಬೆಲೆಯಲ್ಲಿ ಖರೀದಿಸುವ ಅವಕಾಶ ಕೊಡುವ ಈ ಸೂಪರ್‌ಮಾರ್ಕೆಟ್‌ಗಳು ಬಹುತೇಕ ಎಲ್ಲರಿಗೂ ಅಚ್ಚುಮೆಚ್ಚು. ಆದರೆ ಈ ಜನಪ್ರಿಯತೆಯ ಜೊತೆಗೇ ಒಂದು ಸಮಸ್ಯೆ ಕೂಡ ಹುಟ್ಟಿಕೊಂಡಿದೆ. ಅನೇಕ ಸಂದರ್ಭಗಳಲ್ಲಿ ಸೂಪರ್‌ಮಾರ್ಕೆಟ್‌ಗಳಲ್ಲಿ ಅದೆಷ್ಟು ಜನಸಂದಣಿ ಇರುತ್ತದೆಂದರೆ ಸಾಮಾನು ಕೊಳ್ಳುವುದಕ್ಕಿಂತ ಹೆಚ್ಚಿನ ಸಮಯ ಅದಕ್ಕಾಗಿ ಹಣ ಪಾವತಿಸಲು ಬೇಕಾಗುತ್ತದೆ.
ಆದರೆ ಸಾಮಾನುಗಳನ್ನು ಆಯ್ದುಕೊಂಡ ಮೇಲೆ ಬಿಲ್ ಮಾಡಿಸಿ ಹಣ ಪಾವತಿಸಲು ಕಾಯುವ ಬದಲು ಸಾಮಾನುಗಳನ್ನೆಲ್ಲ ತೆಗೆದುಕೊಂಡು ಸೀದಾ ಮನೆಗೆ ಬಂದುಬಿಡುವ ಹಾಗಿದ್ದರೆ?
ಇದೇನು ವಿಚಿತ್ರಾನಪ್ಪಾ ಎಂದು ನೀವು ಕೇಳುವ ಮೊದಲೇ ಹೇಳಿಬಿಡುತ್ತೇನೆ, ಕೇಳಿ: ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್ ಅಥವಾ ಆರ್‌ಎಫ್‌ಐಡಿ ಎಂಬ ತಂತ್ರಜ್ಞಾನದ ಸಹಾಯದಿಂದ ಈ ಕನಸನ್ನು ನನಸು ಮಾಡುವುದು ಸಾಧ್ಯ!
ಈಗ ಚಾಲ್ತಿಯಲ್ಲಿರುವ ಯೂನಿವರ್ಸಲ್ ಪ್ರಾಡಕ್ಟ್ ಕೋಡ್ (ಯುಪಿಸಿ) ’ಬಾರ್ ಕೋಡ್’ ನಿಮಗೆ ಪರಿಚಯವಿರಬೇಕು: ಈ ಬಾರ್ ಕೋಡ್‌ಗಳಲ್ಲಿ ದಪ್ಪ-ಸಣ್ಣ ಗೆರೆಗಳ ಸಂಯೋಜನೆಯಿಂದ ಯಾವುದೇ ವಸ್ತುವಿನ ಬೆಲೆಯನ್ನು ಪ್ರತಿನಿಧಿಸಲಾಗುತ್ತದೆ. ಸೂಪರ್‌ಮಾರ್ಕೆಟ್‌ಗಳಲ್ಲಿ ಬಳಕೆಯಾಗುವ ಪುಟ್ಟ ಸ್ಕ್ಯಾನರ್‌ಗಳು ಈ ಗೆರೆಗಳನ್ನು ಅರ್ಥೈಸಿಕೊಂಡು ನೀವು ಕೊಂಡ ಸಾಮಾನುಗಳ ಬಿಲ್ ತಯಾರಿಸುತ್ತವೆ.
ಇಂತಹ ಬಾರ್ ಕೋಡ್‌ಗಳ ಬದಲು ಅತ್ಯಾಧುನಿಕ ತಂತ್ರಜ್ಞಾನದ ಆರ್‌ಎಫ್‌ಐಡಿ ಟ್ಯಾಗ್‌ಗಳು ಅತಿ ಶೀಘ್ರದಲ್ಲೇ ಬಳಕೆಗೆ ಬರಲಿವೆಯಂತೆ. ಈ ಟ್ಯಾಗ್‌ಗಳ ಬಳಕೆಯಿಂದ ನಮ್ಮ ಶಾಪಿಂಗ್ ಅನುಭವ ಬಹಳ ರೋಚಕವಾಗಿ ಪರವರ್ತನೆಗೊಳ್ಳಲಿದೆ ಎನ್ನುವುದು ತಜ್ಞರ ಹೇಳಿಕೆ.
ಈ ಆರ್‌ಎಫ್‌ಐಡಿ ಟ್ಯಾಗ್‌ಗಳು ಒಂದು ನಿರ್ದಿಷ್ಟ ಪ್ರಮಾಣದ ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಳ್ಳುವ ಹಾಗೂ ಆ ಮಾಹಿತಿಯನ್ನು ರೇಡಿಯೋ ಸಂಕೇತಗಳ ಮೂಲಕ ಬಿತ್ತರಿಸುವ ಶಕ್ತಿಯನ್ನು ಹೊಂದಿರುತ್ತವೆ. ಇಂತಹ ಟ್ಯಾಗ್‌ಗಳು ಹಾಗೂ ಅವು ಬಿತ್ತರಿಸುವ ಸಂಕೇತಗಳನ್ನು ಅರ್ಥಮಾಡಿಕೊಳ್ಳಬಲ್ಲ ಗ್ರಾಹಕ(ರೀಡರ್)ಗಳ ನೆರವಿನಿಂದ ಅಪೂರ್ವವಾದ ವ್ಯವಸ್ಥೆಯೊಂದನ್ನು ರೂಪಿಸಬಹುದು.
ನಾವೆಲ್ಲರೂ ನಮ್ಮ ಮನೆಗಳಿಗೆ ಹಾಲಿನ ಪೊಟ್ಟಣಗಳನ್ನು ತರಿಸಿಕೊಳ್ಳುವುದು ಸಾಮಾನ್ಯ ತಾನೆ? ಇಂತಹ ಹಾಲಿನ ಪೊಟ್ಟಣಗಳನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ.
ಡೈರಿಯಲ್ಲಿ ಹಾಲಿನ ಪ್ಯಾಕಿಂಗ್ ನಡೆಯುವಾಗ ಆ ಪೊಟ್ಟಣಗಳಲ್ಲಿ ಒಂದೊಂದು ಆರ್‌ಎಫ್‌ಐಡಿ ಟ್ಯಾಗ್‌ಗಳನ್ನು ಅಳವಡಿಸುತ್ತಾರೆ ಎಂದಿಟ್ಟುಕೊಳ್ಳೋಣ. ಪ್ಯಾಕ್ ಮಾಡಿದ ದಿನಾಂಕ, ಹಾಲಿನ ಪ್ರಮಾಣ, ಆ ಹಾಲನ್ನು ಎಷ್ಟು ದಿನಗಳ ಒಳಗೆ ಉಪಯೋಗಿಸಬೇಕು ಎಂಬಂತಹ ಮಾಹಿತಿಯನ್ನೆಲ್ಲ ಈ ಟ್ಯಾಗ್‌ಗಳಲ್ಲಿ ಶೇಖರಿಸಲಾಗುತ್ತದೆ. ಡೈರಿಯಿಂದ ಹೊರಟ ಈ ಪೊಟ್ಟಣಗಳು ಒಂದು ಸೂಪರ್‌ಮಾರ್ಕೆಟ್‌ಗೆ ಬರುತ್ತವೆ. ಈ ಟ್ಯಾಗ್‌ಗಳಿಂದ ಪ್ರಸಾರವಾಗುವ ಮಾಹಿತಿಯನ್ನು ಅಲ್ಲಿರುವ ರೀಡರ್‌ಗಳು ತಕ್ಷಣವೇ ಗ್ರಹಿಸಿ ಈಗ ಸೂಪರ್‌ಮಾರ್ಕೆಟ್‌ನಲ್ಲಿ ಎಷ್ಟು ಹಾಲಿನ ಪೊಟ್ಟಣಗಳು ದಾಸ್ತಾನಾಗಿವೆ ಎಂಬುದನ್ನು ದಾಖಲಿಸುತ್ತವೆ.
ನಂತರ ನೀವು ಸೂಪರ್‌ಮಾರ್ಕೆಟ್‌ಗೆ ಬಂದು ಹಾಲು ಖರೀದಿಸುತ್ತೀರಿ ಎಂದುಕೊಳ್ಳೋಣ. ಇಲ್ಲಿ ’ಖರೀದಿಸುವುದು’ ಎಂದರೆ ಬಹಳ ಸುಲಭ - ಹಾಲಿನ ಪೊಟ್ಟಣ ಕೈಗೆತ್ತಿಕೊಂಡು ಸೀದಾ ಆಚೆಗೆ ಬರುವುದು ಅಷ್ಟೆ! ನೀವು ಹಾಲಿನ ಪೊಟ್ಟಣದೊಡನೆ ಅಂಗಡಿಯಿಂದ ಹೊರಟ ತಕ್ಷಣ ಕಾರ್ಯಪ್ರವೃತ್ತವಾಗುವ ರೀಡರ್‌ಗಳು ಆ ಹಾಲಿನ ಪೊಟ್ಟಣದ ಬೆಲೆಯನ್ನು ನಿಮ್ಮ ಬ್ಯಾಂಕಿನ ಖಾತೆಯಿಂದ ವರ್ಗಾಯಿಸಿಕೊಳ್ಳುತ್ತವೆ. ದಾಸ್ತಾನಿನಲ್ಲಿದ್ದ ಪೊಟ್ಟಣಗಳ ಪೈಕಿ ಒಂದು ಖರ್ಚಾಯಿತು ಎಂಬುದನ್ನೂ ದಾಖಲಿಸಿಕೊಳ್ಳುತ್ತವೆ.
ನೀವು ಮನೆಗೆ ಬಂದು ಆ ಪೊಟ್ಟಣವನ್ನು ಫ್ರಿಜ್‌ನಲ್ಲಿ ಇಟ್ಟ ತಕ್ಷಣವೇ ಅಲ್ಲಿರುವ ರೀಡರ್ ಹಾಲಿನ ಪ್ರಮಾಣ, ಅದನ್ನು ಯಾವತ್ತಿನ ಮುಂಚೆ ಉಪಯೋಗಿಸಬೇಕು ಮುಂತಾದ ವಿವರಗಳನ್ನೆಲ್ಲ ಗ್ರಹಿಸಿಕೊಳ್ಳುತ್ತದೆ. ಇಲ್ಲಿಂದ ಮುಂದಕ್ಕೆ ಹಾಲು ಹಳೆಯದಾಗಿದೆ, ಅಥವಾ ಮುಗಿದುಹೋಗಿದೆ ಮುಂತಾದ ವಿವರಗಳನ್ನೆಲ್ಲ ನಿಮ್ಮ ಫ್ರಿಜ್ ನಿಮಗೆ ಹೇಳುತ್ತದೆ!
ಮುಂಬರುವ ದಿನಗಳಲ್ಲಿ ಆರ್‌ಎಫ್‌ಐಡಿ ಟ್ಯಾಗ್‌ಗಳ ಈ ರೋಚಕ ಜಗತ್ತು ಇನ್ನೂ ಹೆಚ್ಚಿನ ಬದಲಾವಣೆಗಳನ್ನು ಕಾಣಲಿದೆ ಎಂಬುದು ವಿಜ್ಞಾನಿಗಳ ಹೇಳಿಕೆ. ಇಂಥ ಉಪಕರಣಗಳ ಬಳಕೆ ಹಾಗೂ ಉತ್ಪಾದನೆ ಇದೇ ಪ್ರಮಾಣದಲ್ಲಿ ಹೆಚ್ಚುತ್ತಾ ಹೋದಾಗ ಅವುಗಳ ಉತ್ಪಾದನಾ ವೆಚ್ಚ ಗಣನೀಯವಾಗಿ ಕಡಿಮೆಯಾಗಲಿದೆ; ಆಗ ಪಕ್ಕದ ಬೀದಿಯ ತರಕಾರಿ ಅಂಗಡಿಯವನೂ ಇವನ್ನು ಉಪಯೋಗಿಸಲು ಶುರುಮಾಡುತ್ತಾನೆ!

ಕಂಪ್ಯೂಟರ್ ಫೊರೆನ್ಸಿಕ್ಸ್
ಟಿ ಜಿ ಶ್ರೀನಿಧಿ
ಫೊರೆನ್ಸಿಕ್ಸ್ ಅಥವಾ ಅಪರಾಧಪತ್ತೆ ಶಾಸ್ತ್ರ - ಅಪರಾಧಗಳು ನಡೆದ ಸಂದರ್ಭದಲ್ಲಿ ಅಲ್ಲಿ ಲಭ್ಯವಿರಬಹುದಾದ ಕುರುಹುಗಳನ್ನು ಪತ್ತೆಮಾಡಿ, ಅಧ್ಯಯನ ನಡೆಸಿ ಅಪರಾಧಿಗಳನ್ನು ಪತ್ತೆಹಚ್ಚಲು ನೆರವು ನೀಡುವ ವಿಜ್ಞಾನದ ಒಂದು ಶಾಖೆ. ಸಮಾಜದ ದುಷ್ಟಶಕ್ತಿಗಳನ್ನು ಹಿಡಿತದಲ್ಲಿಟ್ಟು ಸಾಮಾಜಿಕ ಆರೋಗ್ಯ ಕಾಪಾಡುವಲ್ಲಿ ಫೊರೆನ್ಸಿಕ್ಸ್ ವಹಿಸುವ ಪಾತ್ರ ಬಲು ಮಹತ್ವದ್ದು.
ಆದರೆ ತಂತ್ರಜ್ಞಾನ ಬೆಳೆದಂತೆ ಅಪರಾಧಗಳ ಸ್ವರೂಪವೇ ಬದಲಾಗುತ್ತಿದೆ. ಗಣಕಗಳು ಹಾಗೂ ವಿಶ್ವವ್ಯಾಪಿ ಜಾಲದ ನೆರವಿನಿಂದ ನಡೆಯುತ್ತಿರುವ ಅದೆಷ್ಟೋ ಬಗೆಯ ಹೈಟೆಕ್ ಅಪರಾಧಗಳು ನಾಗರಿಕ ಸಮಾಜದ ನೆಮ್ಮದಿಯನ್ನೇ ಹಾಳುಮಾಡಲು ಹೊರಟಿವೆ.
ಇಂಥ ಅಪರಾಧಗಳನ್ನು ಪತ್ತೆಮಾಡುವ ಉದ್ದೇಶದಿಂದ ರೂಪಗೊಂಡಿರುವ ಹೊಸ ಕ್ಷೇತ್ರವೇ ಕಂಪ್ಯೂಟರ್ ಫೊರೆನ್ಸಿಕ್ಸ್. ಡಿಜಿಟಲ್ ಫೊರೆನ್ಸಿಕ್ಸ್ ಎಂದೂ ಪರಿಚಿತವಾಗಿರುವ ಈ ಕ್ಷೇತ್ರ ಗಣಕಗಳಲ್ಲಿ ಶೇಖರವಾಗಿರುವ ಮಾಹಿತಿಯ ಅಧ್ಯಯನನಡೆಸಿ ಸೈಬರ್ ಅಪರಾಧಗಳನ್ನು ಪತ್ತೆಮಾಡುವ ಉದ್ದೇಶ ಹೊಂದಿದೆ. ಕ್ರೆಡಿಟ್ ಕಾರ್ಡ್ ವಂಚನೆ, ಹ್ಯಾಕಿಂಗ್, ಡಿನಯಲ್ ಆಫ್ ಸರ್ವಿಸ್ ಮೊದಲಾದ ಅಪರಾಧಗಳು ಅಥವಾ ಗಣಕದ ನೆರವು ಪಡೆದು ಭಯೋತ್ಪಾದನೆಯಂತಹ ಕೃತ್ಯಗಳು ನಡೆದ ಸಂದರ್ಭದಲ್ಲಿ ಕಂಪ್ಯೂಟರ್ ಫೊರೆನ್ಸಿಕ್ಸ್ ವಹಿಸುವ ಪಾತ್ರ ಬಲು ಮಹತ್ವದ್ದು.

ಪೆಟ್ರೋಲ್ ಬರೋದು ಎಲ್ಲಿಂದ?
ಟಿ ಜಿ ಶ್ರೀನಿಧಿ
ಪೆಟ್ರೋಲ್, ಡೀಸೆಲ್, ಸೀಮೆ ಎಣ್ಣೆ - ಹೀಗೆ ಅನೇಕ ಬಗೆಯ ಇಂಧನಗಳನ್ನು ನಾವು ಪ್ರತಿದಿನವೂ ಒಂದಲ್ಲ ಒಂದು ಬಗೆಯಲ್ಲಿ ಬಳಸುತ್ತಿರುತ್ತೇವೆ. ಆದರೆ ಇವೆಲ್ಲ ಎಲ್ಲಿಂದ ಹೇಗೆ ಬರುತ್ತವೆ ಎನ್ನುವುದು ನಿಮಗೆ ಗೊತ್ತೆ?
ಈ ತೈಲಗಳಿಗೆಲ್ಲ ಮೂಲ ಕಚ್ಚಾ ತೈಲ ಅಥವಾ ಕ್ರೂಡ್ ಆಯಿಲ್, ಭೂಮಿಯೊಳಗೆ ಅದೆಷ್ಟೋ ಆಳದಲ್ಲಿ ಅವಿತಿರುವ ಅತ್ಯಮೂಲ್ಯ ಸಂಪನ್ಮೂಲ.
ಈ ತೈಲವನ್ನು ಹೊರತೆಗೆಯಲೆಂದೇ ಬಹು ದೊಡ್ಡ ತೈಲಬಾವಿಗಳನ್ನು ಕೊರೆಯಲಾಗಿರುತ್ತದೆ. ಭೂಮಿಯ ಆಳದಿಂದ ಕಚ್ಚಾತೈಲವನ್ನು ಹೊರತೆಗೆದು ದೊಡ್ಡದೊಡ್ಡ ಕೊಳವೆಮಾರ್ಗಗಳಿಗೆ ಪೂರೈಸುವುದು ಈ ತೈಲಬಾವಿಗಳ ಕೆಲಸ. ಇದಕ್ಕಾಗಿ ಅತ್ಯಾಧುನಿಕ ಇಂಜಿನಿಯರಿಂಗ್ ತಂತ್ರಜ್ಞಾನ ಬಳಕೆಯಾಗುತ್ತದೆ.
ಸಮುದ್ರದ್ದೋ ಮರುಭೂಮಿಯದೋ ಮಧ್ಯದಲ್ಲಿರುವ ತೈಲಬಾವಿಗಳಿಂದ ಹೊರಬಂದ ಈ ಕಚ್ಚಾತೈಲ ತಮ್ಮ ಮುಂದಿನ ಗುರಿ ಸೇರಲು ಕೊಳವೆಮಾರ್ಗಗಳ ಮೂಲಕ ಪ್ರಯಾಣ ಸಾಗಿಸುತ್ತವೆ. ಸಾವಿರಾರು ಕಿಲೋಮೀಟರ್ ಉದ್ದದ ಈ ಕೊಳವೆಮಾರ್ಗಗಳ ಮೂಲಕ ಕಚ್ಚಾತೈಲ ಸಾಗಲು ಬೇಕಾದ ಒತ್ತಡ ಒದಗಿಸಲು ಕೊಳವೆಮಾರ್ಗದ ಉದ್ದಕ್ಕೂ ಅಲ್ಲಲ್ಲಿ ಪಂಪಿಂಗ್ ಕೇಂದ್ರಗಳಿರುತ್ತವೆ. ಹಿಂದಿನ ಕೇಂದ್ರದಿಂದ ಬಂದ ಕಚ್ಚಾತೈಲವನ್ನು ಮುಂದಿನ ಕೇಂದ್ರದವರೆಗೂ ’ನೂಕುವುದು’ ಈ ಕೇಂದ್ರಗಳ ಕೆಲಸ.
ಹೀಗೆ ಕೊಳವೆಮಾರ್ಗದ ಕೊನೆಯ ತನಕ ಪ್ರಯಾಣಿಸುವ ಕಚ್ಚಾತೈಲ ತನ್ನ ಪ್ರಯಾಣದ ಕೊನೆಯಲ್ಲಿ ದೊಡ್ಡದೊಡ್ಡ ತೊಟ್ಟಿಗಳಲ್ಲಿ ಶೇಖರವಾಗುತ್ತದೆ. ಇಲ್ಲಿಂದ ಮುಂದಕ್ಕೆ ಕಚ್ಚಾತೈಲದ ಸಂಸ್ಕರಣೆ ಪ್ರಾರಂಭವಾಗುತ್ತದೆ.
ಕಚ್ಚಾತೈಲದ ಸಂಸ್ಕರಣೆ ನಡೆಯುವುದು ರಿಫೈನರಿ ಎಂಬ ಹೆಸರಿನ ಸಂಸ್ಕರಣಾ ಕೇಂದ್ರಗಳಲ್ಲಿ. ಇಲ್ಲಿ ಕಚ್ಚಾತೈಲವನ್ನು ಹೆಚ್ಚಿನ ತಾಪಮಾನಗಳಲ್ಲಿ ಬಿಸಿಮಾಡಲಾಗುತ್ತದೆ. ಹೀಗೆ ಬಿಸಿಮಾಡಿದಾಗ ಕಚ್ಚಾತೈಲ ವಿವಿಧ ವಸ್ತುಗಳಾಗಿ ವಿಭಜನೆಹೊಂದುತ್ತದೆ. ಹೆಚ್ಚಿನ ಭಾರದಿಂದಾಗಿ ತಳದಲ್ಲಿ ಶೇಖರವಾಗುವ ವಸ್ತು ನಮ್ಮ ರಸ್ತೆಗಳ ಡಾಂಬರೀಕರಣಕ್ಕಾಗಿ ಬಳಕೆಯಾಗುತ್ತದೆ. ಕೀಲೆಣ್ಣೆ, ಮಷೀನ್ ಆಯಿಲ್, ಮೇಣ ಮುಂತಾದವುಗಳು ದೊರೆತ ನಂತರ ಪೆಟ್ರೋಲ್ ಸಿಗುತ್ತದೆ. ಅಲ್ಲಿಂದ ಮುಂದಕ್ಕೆ ಅಡುಗೆ ಅನಿಲ (ಎಲ್‍ಪಿಜಿ) ಕೂಡ ದೊರಕುತ್ತದೆ.
ಇಲ್ಲಿಂದ ಮುಂದೆ ಕೊಳವೆಮಾರ್ಗಗಳು, ರೈಲುಗಳು ಹಾಗೂ ಲಾರಿಗಳ ಮೂಲಕ ಪಯಣಿಸುವ ಪೆಟ್ರೋಲು ನಿಮ್ಮ ಊರಿನ ಪೆಟ್ರೋಲ್ ಬಂಕ್ ತಲುಪುತ್ತದೆ, ನಿಮ್ಮ ವಾಹನಕ್ಕೆ ಆಹಾರ ಒದಗಿಸುತ್ತದೆ!
_____________________
ಈ ಲೇಖನದಲ್ಲಿದ್ದ ಮಾಹಿತಿ ದೋಷವನ್ನು ಸರಿಪಡಿಸಲು ನೆರವಾದ ’ಬಾನಾಡಿ’ಗೆ ಧನ್ಯವಾದಗಳು!

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)