ಬುಧವಾರ, ನವೆಂಬರ್ 1, 2017

ರಾಜ್ಯೋತ್ಸವದ ದಿನ ಖುಷಿಯದೊಂದು ಸುದ್ದಿ

ಇಜ್ಞಾನ ವಿಶೇಷ

ಕರ್ನಾಟಕ ರಾಜ್ಯೋತ್ಸವದ ದಿನ ಈ ವಿಷಯ ಹಂಚಿಕೊಳ್ಳಲು ಖುಷಿಯಾಗುತ್ತಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೆರವಿನೊಡನೆ ಇಜ್ಞಾನ ಟ್ರಸ್ಟ್ ರೂಪಿಸಿರುವ 'ಕಂಪ್ಯೂಟರ್-ತಂತ್ರಜ್ಞಾನ ಪದವಿವರಣ ಕೋಶ' ಕೃತಿ ಬಿಡುಗಡೆಯಾಗಿದೆ. ನಿನ್ನೆ (ಅಕ್ಟೋಬರ್ ೩೧) ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಈ ಕೃತಿಯ ಲೋಕಾರ್ಪಣೆ ನೆರವೇರಿಸಿದರು.

ಕಂಪ್ಯೂಟರ್ ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದ ೩೦೦ಕ್ಕೂ ಹೆಚ್ಚು ಪರಿಕಲ್ಪನೆಗಳನ್ನು ಕನ್ನಡದಲ್ಲಿ ಸರಳವಾಗಿ ವಿವರಿಸುವ ಈ ಕೃತಿಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪ್ರಕಟಿಸಿದೆ. ಇಂಗ್ಲಿಷ್ ಪದದ ಕನ್ನಡ ಉಚ್ಚಾರಣೆ, ಅರ್ಥ ಹಾಗೂ ಸಂಕ್ಷಿಪ್ತ ವಿವರಣೆಯನ್ನು ನೀಡುವುದು ಈ ಪುಸ್ತಕದ ವೈಶಿಷ್ಟ್ಯ. ಈ ಪುಸ್ತಕವನ್ನು ಕ್ರಿಯೇಟಿವ್ ಕಾಮನ್ಸ್ ಪರವಾನಗಿಯಡಿ (CC BY-NC-ND 4.0) ಪ್ರಕಟಿಸಲಾಗಿದ್ದು ವಾಣಿಜ್ಯೇತರ ಉದ್ದೇಶಗಳಿಗೆ ಇದನ್ನು ಮುಕ್ತವಾಗಿ ಬಳಸಿಕೊಳ್ಳಬಹುದಾಗಿದೆ. ಈ ಕೋಶದ ಆನ್‌ಲೈನ್ ಆವೃತ್ತಿ ಕೂಡ epada.in ತಾಣದಲ್ಲಿ ಲಭ್ಯವಿದೆ. ಅಲ್ಲಿ ಈ ಪುಸ್ತಕದ ಪಿಡಿಎಫ್ ರೂಪವನ್ನೂ ಡೌನ್‍ಲೋಡ್ ಮಾಡಿಕೊಳ್ಳಬಹುದು.

ಇಜ್ಞಾನ ಸಂಪಾದಕ ಟಿ. ಜಿ. ಶ್ರೀನಿಧಿ ಈ ಪುಸ್ತಕದ ಲೇಖಕರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ. ಎಸ್. ಜಿ. ಸಿದ್ಧರಾಮಯ್ಯ, ಕಾರ್ಯದರ್ಶಿ ಡಾ. ಮುರಳಿಧರ ಅವರೊಡನೆ ಹಿರಿಯ ಬರಹಗಾರರಾದ ಶ್ರೀ ನಾಗೇಶ ಹೆಗಡೆ, ಶ್ರೀ ಜಗನ್ನಾಥ ಪ್ರಕಾಶ್, ಶ್ರೀ ಟಿ. ಎಸ್. ಗೋಪಾಲ್ ಹಾಗೂ ಶ್ರೀ ಉದಯ ಶಂಕರ ಪುರಾಣಿಕ ಈ ಕೃತಿಯ ಸಂಪಾದಕ ಮಂಡಲಿಯಲ್ಲಿದ್ದು ಮಾರ್ಗದರ್ಶನ ನೀಡಿದ್ದಾರೆ. ಈ ಯೋಜನೆಯನ್ನು ರೂಪಿಸಿ ಕಾರ್ಯಗತಗೊಳಿಸುವಲ್ಲಿ ಅಧ್ಯಕ್ಷರ ಆಪ್ತಕಾರ್ಯದರ್ಶಿಗಳಾಗಿದ್ದ ಡಾ. ಕೆ. ಪುಟ್ಟಸ್ವಾಮಿ, ಇಜ್ಞಾನ ಟ್ರಸ್ಟೀಗಳಾದ ಡಾ. ಎಚ್. ಆರ್. ಅಪ್ಪಣ್ಣಯ್ಯ, ಶ್ರೀ ಬಿ. ಎಸ್. ವಿಶ್ವನಾಥ ಹಾಗೂ ಶ್ರೀ ಎನ್. ಜಿ. ಚೇತನ್ ಅವರ ಬೆಂಬಲವೂ ಮಹತ್ವದ ಪಾತ್ರ ವಹಿಸಿದೆ. 

೩೫೨ ಪುಟಗಳ ಈ ಕೃತಿಯ ಮುಖಬೆಲೆ ರೂ. ೧೦೦. ಪ್ರತಿಗಳು ಸದ್ಯ ಕನ್ನಡ ಅಭಿವೃದ್ಧಿ ಪ್ರಾಧಿಕಾರದಲ್ಲಿ (ವಿಧಾನಸೌಧ, ಬೆಂಗಳೂರು) ಲಭ್ಯವಿದ್ದು ಇತರೆಡೆಗಳಲ್ಲೂ ದೊರಕುವಂತೆ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾದಂತೆ ಅದನ್ನು ಇಜ್ಞಾನದ ಸೋಶಿಯಲ್ ಮೀಡಿಯಾ ಖಾತೆಗಳ ಮೂಲಕ ಹಂಚಿಕೊಳ್ಳಲಾಗುವುದು.


ನಿಮ್ಮೆಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

3 ಕಾಮೆಂಟ್‌ಗಳು:

ಮೋಹನ್ ತಲಕಾಲುಕೊಪ್ಪ ಹೇಳಿದರು...

ಶ್ರೀನಿಧಿಯವರೆ, ನಿಮ್ಮ ಪುಸ್ತಕದ ಮೇಲೆ ಕಣ್ಣಾಡಿಸಿದೆ. ಅತ್ಯುತ್ತಮ ಪ್ರಯತ್ನ. ನನ್ನ ಗಣಕಕ್ಕೆ ಇಳಿಸಿಟ್ಟುಕೊಂಡಿದ್ದೇನೆ. ಬಿಡುವಾದಾಗ ನೋಡುತ್ತೇನೆ. ನಿಮ್ಮ ಉತ್ಸಾಹ ಹಾಗೂ ಶ್ರಮ ಶ್ಲ್ಯ್ಲಾಘನೀಯ. ಗಣಕಲೋಕದ ವಿಸ್ಮಯಗಳನ್ನು ಹೀಗೆ ನಮಗೆ ಪರಿಚಯಿಸುತ್ತಿರಿ. ಧನ್ಯವಾದ.

ಮೋಹನ್ ತಲಕಾಲುಕೊಪ್ಪ ಹೇಳಿದರು...

ಶ್ರೀನಿಧಿಯವರೆ, ನಿಮ್ಮ ಪುಸ್ತಕದ ಮೇಲೆ ಕಣ್ಣಾಡಿಸಿದೆ. ಅತ್ಯುತ್ತಮ ಪ್ರಯತ್ನ. ಗಣಕಕ್ಕೆ ಇಳಿಸಿಟ್ಟುಕೊಂಡಿದ್ದೇನೆ. ಬಿಡುವಾದಾಗ ವಿಶದವಾಗಿ ನೋಡುತ್ತೇನೆ. ನಿಮ್ಮ ಉತ್ಸಾಹ ಮತ್ತು ಶ್ರಮ ಶ್ಲ್ಯಾಘನೀಯ. ಗಣಕಲೋಕದ ವಿಸ್ಮಯಗಳನ್ನು ನಮ್ಮ ಮುಂದೆ ತೆರೆದಿಡುವ ನಿಮ್ಮ ಪ್ರಯತ್ನ ನಿರಂತರವಾಗಿ ಮುಂದುವರೆಯಲಿ. ಧನ್ಯವಾದ.

Chinnamma baradhi ಹೇಳಿದರು...

ನಿಜಕ್ಕೂ ಇದು 2017ರ ರಾಜ್ಯೋತ್ಸವದ ಖುಷಿಯ ಸುದ್ದಿ"ಇಜ್ಞಾನ ಟ್ರಸ್ಟ್ ರೂಪಿಸಿರುವ 'ಕಂಪ್ಯೂಟರ್-ತಂತ್ರಜ್ಞಾನ ಪದವಿವರಣ ಕೋಶ',ಈ ಕೃತಿ ನಮ್ಮ ದಿನ ನಿತ್ಯದ ವ್ಯವಹಾರಗಳಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ.ಈ ಪುಸ್ತಕದ ಲೇಖಕರು ಇಜ್ಞಾನ ಸಂಪಾದಕರಾದ ಟಿ. ಜಿ. ಶ್ರೀನಿಧಿಯವರಿಗೆ ಅನ೦ತ ವ೦ದನೆಗಳು ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ. ಎಸ್. ಜಿ. ಸಿದ್ಧರಾಮಯ್ಯ, ಕಾರ್ಯದರ್ಶಿ ಡಾ. ಮುರಳಿಧರ ಅವರೊಡನೆ ಹಿರಿಯ ಬರಹಗಾರರಾದ ಶ್ರೀ ನಾಗೇಶ ಹೆಗಡೆ, ಶ್ರೀ ಜಗನ್ನಾಥ ಪ್ರಕಾಶ್, ಶ್ರೀ ಟಿ. ಎಸ್. ಗೋಪಾಲ್ ಹಾಗೂ ಶ್ರೀ ಉದಯ ಶಂಕರ ಪುರಾಣಿಕ ಡಾ. ಕೆ. ಪುಟ್ಟಸ್ವಾಮಿ, ಇಜ್ಞಾನ ಟ್ರಸ್ಟೀಗಳಾದ ಡಾ. ಎಚ್. ಆರ್. ಅಪ್ಪಣ್ಣಯ್ಯ, ಶ್ರೀ ಬಿ. ಎಸ್. ವಿಶ್ವನಾಥ ಹಾಗೂ ಶ್ರೀ ಎನ್. ಜಿ. ಚೇತನ್ ಇವರೆಲ್ಲರಿಗೂ ನಮ್ಮ ಅನ೦ತಾನ೦ತ ವ೦ದನೆಗಳು.

badge