ಗುರುವಾರ, ಮೇ 3, 2012

ಶುಕ್ರ ಗ್ರಹದ ಸಂಕ್ರಮಣ

ಸೂರ್ಯ ಹಾಗೂ ಭೂಮಿಯ ನಡುವೆ ಚಂದ್ರ ಬಂದು ಗ್ರಹಣಕ್ಕೆ ಕಾರಣವಾಗುವ ಸಂಗತಿ ನಮಗೆಲ್ಲ ಗೊತ್ತು. ಚಂದ್ರನಷ್ಟೇ ಅಲ್ಲ, ಬುಧ ಹಾಗೂ ಶುಕ್ರಗ್ರಹಗಳೂ ಸೂರ್ಯ ಮತ್ತು ಭೂಮಿಯ ನಡುವೆ ಬರುವುದು ಸಾಧ್ಯವಿದೆ. ಈ ಘಟನೆಯನ್ನು ಸಂಕ್ರಮಣ ಎಂದು ಕರೆಯುತ್ತಾರೆ.

ಬರುವ ಜೂನ್ ೬ರಂದು ಶುಕ್ರ ಸಂಕ್ರಮಣ. ಇದರ ಹಿಂದಿನ ಸಂಕ್ರಮಣ ನಡೆದದ್ದು ೨೦೦೪ರಲ್ಲಿ. ಮುಂದಿನದಕ್ಕೆ ಕಾಯುತ್ತೇವೆ ಎನ್ನುವಂತಿಲ್ಲ. ಯಾಕೆ ಗೊತ್ತಾ?
ಮುಂದಿನ ಶುಕ್ರ ಸಂಕ್ರಮಣ ನಡೆಯುವುದೇನಿದ್ದರೂ ಇನ್ನು ೧೦೫ ವರ್ಷಗಳ ಮೇಲೆಯೇ!

ಹೀಗಿರುವಾಗ ಬರುವ ಜೂನ್ ೬ರ ಶುಕ್ರ ಸಂಕ್ರಮಣದ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕೆಂಬ ಕುತೂಹಲ ನಿಮ್ಮಲ್ಲಿ ಮೂಡಿದರೆ ಅದರಲ್ಲಿ ಆಶ್ಚರ್ಯವೇನಿಲ್ಲ. ಈ ಮಾಹಿತಿ ಕನ್ನಡದಲ್ಲೇ ಸಿಗುವಂತಿದ್ದರೆ ಇನ್ನೂ ಒಳ್ಳೆಯದು ಎಂದಿರಾ?

ಡಾ| ಬಿ. ಎಸ್. ಶೈಲಜಾರವರು ಈ ವಿಷಯದ ಕುರಿತು ಬರೆದಿರುವ 'ಶುಕ್ರ ಗ್ರಹದ ಸಂಕ್ರಮಣ' ಕೃತಿಯ ಹೊಸ ಆವೃತ್ತಿ ಈಗಷ್ಟೆ ಹೊರಬಂದಿದೆ. ೨೦೦೪ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಪಡೆದ ಈ ಕೃತಿ ಶುಕ್ರ ಸಂಕ್ರಮಣದ ಬಗೆಗೆ ಅನೇಕ ಕುತೂಹಲಕರ ಅಂಶಗಳನ್ನು ವಿವರಿಸುತ್ತದೆ.

ಅಂದಹಾಗೆ ಬೆಂಗಳೂರಿನ ತಾರಾಲಯಕ್ಕೇನಾದರೂ ಹೋಗುವ ಯೋಚನೆಯಿದ್ದರೆ ಅಲ್ಲಿನ ಸ್ಕೈ ಥಿಯೇಟರ್‌ನಲ್ಲಿ ಇದೇ ವಿಷಯ ಕುರಿತಾದ ಚಲನಚಿತ್ರವನ್ನೂ ವೀಕ್ಷಿಸಬಹುದು.
ಶುಕ್ರಗ್ರಹದ ಸಂಕ್ರಮಣ
ಲೇಖಕರು: ಡಾ|| ಬಿ. ಎಸ್. ಶೈಲಜಾ
೫೬ ಪುಟಗಳು, ಬೆಲೆ ರೂ.೪೦
ಪ್ರ: ಬೆಂಗಳೂರು ಅಸೋಸಿಯೇಷನ್ ಫಾರ್ ಸೈನ್ಸ್ ಎಜುಕೇಷನ್ ಹಾಗೂ ನವಕರ್ನಾಟಕ ಪ್ರಕಾಶನ

ಕಾಮೆಂಟ್‌ಗಳಿಲ್ಲ:

badge