ಸೋಮವಾರ, ಡಿಸೆಂಬರ್ 26, 2011

ಕನ್ನಡದಲ್ಲಿ ವಿಜ್ಞಾನ ಸಂವಹನೆ

ವಿಜ್ಞಾನ-ತಂತ್ರಜ್ಞಾನಗಳ ಅರಿವು ಎಷ್ಟು ಮುಖ್ಯವೋ ನಮಗೆ ಅರ್ಥವಾಗುವ ಭಾಷೆಯಲ್ಲಿ ಅದರ ಸಂವಹನ ಆಗಬೇಕಾದ್ದೂ ಅಷ್ಟೇ ಮುಖ್ಯ. ಈ ಕುರಿತ ಅಪರೂಪದ ಪುಸ್ತಕವೊಂದು ಕಳೆದ ವಾರಾಂತ್ಯ ಬಿಡುಗಡೆಯಾಗಿದೆ. ಉದಯಭಾನು ಉನ್ನತ ಅಧ್ಯಯನ ಕೇಂದ್ರ ಪ್ರಕಟಿಸಿರುವ 'ಕನ್ನಡದಲ್ಲಿ ವಿಜ್ಞಾನ ಸಂವಹನೆ' ಎಂಬ ಈ ಕೃತಿಯ ಸಂಪಾದಕರು ಪ್ರೊ. ಎಚ್ ಆರ್ ರಾಮಕೃಷ್ಣರಾವ್ ಹಾಗೂ ಶ್ರೀ ಟಿ ಆರ್ ಅನಂತರಾಮುರವರು.

ಅವರ ಮಾತುಗಳಲ್ಲೇ ಹೇಳುವುದಾದರೆ "ಪ್ರಸ್ತುತ ಬದುಕಿನ ಎಲ್ಲ ರಂಗವನ್ನೂ ಪ್ರಭಾವಿಸುತ್ತಿರುವ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಸರಿಯಾದ ತಿಳಿವು ಸಮಾಜದ ಎಲ್ಲ ವರ್ಗದವರಿಗೂ ಅನಿವಾರ್ಯವಾಗಿದೆ. ಇದರ ಸಂವಹನೆಗೆ ವಿವಿಧ ವಿಜ್ಞಾನ ಕ್ಷೇತ್ರಗಳಲ್ಲಿ ಅನುಭವ ಪಡೆದಿರುವ ಸಮರ್ಥರು ಬೇಕಾಗುತ್ತದೆ. ಅಂತಹ ಸಂವಹನಕಾರರಿಂದ ರಚಿತವಾಗಿರುವ ಈ ಪ್ರಬಂಧ ಸಂಗ್ರಹ ಮುಂದೆ ವಿಜ್ಞಾನ ಸಾಹಿತ್ಯ ಸಂವಹನಕಾರರಿಗೆ ಈ ಜ್ಞಾನ ಶಾಖೆಯನ್ನು ಯಾವ ದಿಶೆಯಲ್ಲಿ ವಿಸ್ತರಿಸಬೇಕೆಂಬ ರೂಪುರೇಖೆಯನ್ನು ಪ್ರತಿಬಿಂಬಿಸುತ್ತದೆ".


೨೫೨ ಪುಟಗಳ ೧/೮ ಡೆಮಿ ಗಾತ್ರದ ಈ ಕೃತಿಯಲ್ಲಿ ಒಟ್ಟು ಹದಿನೈದು ಪ್ರಬಂಧಗಳಿವೆ. ಪ್ರೊ. ಎಚ್. ಆರ್. ರಾಮಕೃಷ್ಣರಾವ್, ಡಾ. ಬಿ. ಎಸ್. ಸೋಮಶೇಖರ್, ಪ್ರೊ. ಎಂ. ಆರ್. ನಾಗರಾಜು, ಡಾ. ಪಿ. ಎಸ್. ಶಂಕರ್, ಡಾ. ಎಚ್. ಎಸ್. ನಿರಂಜನ ಆರಾಧ್ಯ, ಶ್ರೀ ಜಿ. ಎನ್. ನರಸಿಂಹಮೂರ್ತಿ, ಶ್ರೀ ಕೊಳ್ಳೇಗಾಲ ಶರ್ಮ, ಶ್ರೀಮತಿ ಸುಮಂಗಲಾ ಮುಮ್ಮಿಗಟ್ಟಿ, ಶ್ರೀ ಅಬ್ದುಲ್ ರೆಹಮಾನ್ ಪಾಷ, ಡಾ. ನಾ. ಸೋಮೇಶ್ವರ, ಶ್ರೀ ಸುಧೀಂದ್ರ ಹಾಲ್ದೊಡ್ಡೇರಿ, ಡಾ. ಕೆ. ಎನ್. ಗಣೇಶಯ್ಯ ಹಾಗೂ ಟಿ. ಜಿ. ಶ್ರೀನಿಧಿ ಈ ಪ್ರಬಂಧಗಳನ್ನು ಬರೆದಿದ್ದಾರೆ. ಕನ್ನಡ ವಿಜ್ಞಾನ ಸಾಹಿತ್ಯದ ಆದ್ಯ ಪ್ರವರ್ತಕರಾದ ಶ್ರೀ ಬೆಳ್ಳಾವೆ ವೆಂಕಟನಾರಣಪ್ಪನವರಿಗೆ ಈ ಕೃತಿಯನ್ನು ಸಮರ್ಪಿಸಿರುವುದು ಅತ್ಯಂತ ಸಮಂಜಸವಾಗಿದೆ.
ಕನ್ನಡದಲ್ಲಿ ವಿಜ್ಞಾನ ಸಂವಹನೆ
ಸಂಪಾದಕರು: ಪ್ರೊ. ಎಚ್ ಆರ್ ರಾಮಕೃಷ್ಣರಾವ್, ಶ್ರೀ ಟಿ ಆರ್ ಅನಂತರಾಮು
ಮೊದಲ ಆವೃತ್ತಿ: ೨೦೧೧, ೧/೮ ಡೆಮಿ ಗಾತ್ರದ ೨೫೨ ಪುಟಗಳು
ಬೆಲೆ: ರೂ. ೧೫೦
ಪ್ರಕಾಶಕರು: ಉದಯಭಾನು ಕಲಾಸಂಘದ ಉದಯಭಾನು ಉನ್ನತ ಅಧ್ಯಯನ ಕೇಂದ್ರ, ಕೆಂಪೇಗೌಡನಗರ, ಬೆಂಗಳೂರು

2 ಕಾಮೆಂಟ್‌ಗಳು:

Holalkere rangarao laxmivenkatesh ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
Holalkere rangarao laxmivenkatesh ಹೇಳಿದರು...

ಶ್ರೀನಿಧಿಯವರ ಕನ್ನಡ ಸೈಟ್ ನಿಜಕ್ಕೂ ಅತಿ ಸುಂದರವಾಗಿ ಮೂಡಿಬಂದಿದೆ. ಅದನ್ನೇ ನೋಡುತ್ತಿರೋಣವೇ ಅನ್ನಿಸಿದರೆ ಆಶ್ಚರ್ಯವೇನಿಲ್ಲ.

ಏಕೆಂದರೆ ಈ ಯುವ ಪ್ರತಿಭೆಯ ಅನಿಸಿಕೆಗಳು ಏನನ್ನಾದರೂ ಕನ್ನಡ ವಿಜ್ಞಾನ ಕ್ಷೇತ್ರಕ್ಕೆ ಕೊಡಬೇಕೆನ್ನುವ ತುಡಿತ, ಅದಕ್ಕೆ ಪೂರಕವಾದ ಆಳವಾದ ಕಂಪ್ಯೂಟರ್ ವಿಜ್ಞಾನದ ಅರಿವು, ಇವೆಲ್ಲವುಗಳು ಶ್ರೀನಿಧಿಯವರನ್ನು ಒಬ್ಬ ಸಮರ್ಥ ಪ್ರಬುದ್ಧ ಲೇಖಕರ ಪಟ್ಟಿಗೆ ಏಳೆದು ಕೂಡಿಸುತ್ತವೆ.

ಹೊಸವರ್ಷ ನಿಮಗೆ ಒಳ್ಳೆಯ ಅವಕಾಶಗಳನ್ನು ಒದಗಿಸಲಿ. ನೀವು ಮಾಡಬೇಕೆಂದಿದ್ದನ್ನು ಅಚ್ಚುಕಟ್ಟಾಗಿ ಮಾಡುವ ಸುಸಂಧಿಗಳು ಒದಗಲಿ !

ಇದಲ್ಲದೇ ನಾವೇನು ಹೇಳುವುದು ಮಾರಾಯ್ರೇ. ಅಲ್ಲ. ಎಂತ ಮಾಡುವುದು ?!

-ಹೊರಂಲವೆಂ.
ಮುಂಬೈ

badge