ಟಿ. ಜಿ. ಶ್ರೀನಿಧಿ
ಹಲವು ವರ್ಷಗಳ ಹಿಂದೆ ವಾಹನಗಳ ನಂಬರ್ ಪ್ಲೇಟು ಕಪ್ಪು ಬಣ್ಣದಲ್ಲಿರುತ್ತಿತ್ತು. ಅದರ ಮೇಲೆ ಬಿಳಿಯ ಅಕ್ಷರ ಬರೆಯುವ ಪರಿಪಾಠವನ್ನು ಬದಲಿಸಿ ಆಮೇಲೆ ಯಾವಾಗಲೋ ಬಿಳಿಯ ನಂಬರ್ ಪ್ಲೇಟನ್ನೂ ಕರಿಯ ಅಕ್ಷರಗಳನ್ನೂ ಪರಿಚಯಿಸಲಾಯಿತು.
ಈ ಘಟನೆಯನ್ನು ನೆನಪಿಸುವ ಸಂಗತಿಯೊಂದು ಇದೀಗ ಮೊಬೈಲ್ ಫೋನ್ ಜಗತ್ತಿನಲ್ಲೂ ನಡೆಯುತ್ತಿದೆ. ಬಿಳಿ ಹಿನ್ನೆಲೆಯ ಪರದೆಯ ಮೇಲೆ ಕಪ್ಪು ಅಕ್ಷರಗಳು ಮೂಡುವುದು ಅಲ್ಲಿ ಸಾಮಾನ್ಯ ತಾನೇ? ಈ ಹಳೆಯ ಅಭ್ಯಾಸವನ್ನು ಬದಲಿಸಿಕೊಳ್ಳುತ್ತಿರುವ ಹಲವಾರು ಬಳಕೆದಾರರು ಇದೀಗ ಕಪ್ಪು ಹಿನ್ನೆಲೆಯನ್ನು ಇಷ್ಟಪಡುತ್ತಿದ್ದಾರೆ. ಬೇರೆ ಕಾರಣಗಳೇನೇ ಇರಲಿ, ಇದು ಟೆಕ್ ಲೋಕದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿರುವುದಂತೂ ನಿಜ.
ಬುಧವಾರ, ಸೆಪ್ಟೆಂಬರ್ 4, 2019
ಬುಧವಾರ, ಆಗಸ್ಟ್ 28, 2019
ನಿಮ್ಮ ಡಿಜಿಟಲ್ ಆರೋಗ್ಯ ಹೇಗಿದೆ?
ಟಿ. ಜಿ. ಶ್ರೀನಿಧಿ
ತಂತ್ರಜ್ಞಾನದ ಹೆಚ್ಚುತ್ತಿರುವ ಬಳಕೆ ನಮ್ಮನ್ನೆಲ್ಲ ಸೋಮಾರಿಗಳನ್ನಾಗಿಸುತ್ತಿದೆ ಎನ್ನುವುದು ಈಗಾಗಲೇ ಹಳೆಯದಾಗಿರುವ ಆರೋಪ. ಸೋಮಾರಿ ಪೆಟ್ಟಿಗೆಯೆಂದೇ ಹೆಸರಾಗಿರುವ ಟೀವಿಗೆ ರಿಮೋಟ್ ಸೌಲಭ್ಯ ಬಂದಾಗಲೂ ಈ ಆರೋಪ ಇತ್ತು, ಮೊಬೈಲಿನ ಪರದೆಯನ್ನು ಮುಟ್ಟಿ ಊಟವನ್ನು ಮನೆಗೇ ತರಿಸಿಕೊಳ್ಳುವ ಈ ಕಾಲದಲ್ಲೂ ಅದೇ ಆರೋಪ ಉಳಿದುಕೊಂಡಿದೆ.
ಈ ಆರೋಪ ಸುಳ್ಳೇನೂ ಅಲ್ಲ. ಹೋಟಲಿಗೆ ಹೋಗಿಬರುವುದು, ದಿನಸಿ ಖರೀದಿಗೆ ಅಂಗಡಿಗೆ ಹೋಗುವುದೆಲ್ಲ ದೈಹಿಕ ಶ್ರಮ ಎಂದು ನಮಗೆ ಅನ್ನಿಸಲು ಶುರುವಾಗಿರುವುದು ತಂತ್ರಜ್ಞಾನದ ಕಾರಣದಿಂದಲೇ. ಇನ್ನು ತಂತ್ರಜ್ಞಾನದ ಲೋಕ ನಮ್ಮ ನೆನಪಿನಶಕ್ತಿಯ ವಿಸ್ತರಣೆಯಂತೆಯೇ ಆಗಿಬಿಟ್ಟಿರುವುದು ಕೂಡ ವಾಸ್ತವ ಸಂಗತಿ. ಮೊಬೈಲಿನ ಅಡ್ರೆಸ್ ಬುಕ್ ಇಲ್ಲದೆ ಫೋನ್ ನಂಬರುಗಳನ್ನೂ, ಫೇಸ್‌ಬುಕ್ ಸಹಾಯವಿಲ್ಲದೆ ಜನ್ಮದಿನಗಳನ್ನೂ ನೆನಪಿಟ್ಟುಕೊಳ್ಳುವುದನ್ನು ಬಿಟ್ಟು ಯಾವುದೋ ಕಾಲವಾಗಿದೆಯಲ್ಲ!

ಗುರುವಾರ, ಆಗಸ್ಟ್ 22, 2019
ಅಂಡ್ರಾಯ್ಡ್ ಹೊಸ ಆವೃತ್ತಿಯ ಹೆಸರಲ್ಲಿ ಸಿಹಿತಿಂಡಿಯ ರುಚಿಯಿಲ್ಲ!
ಇಜ್ಞಾನ ವಿಶೇಷ
ಸ್ಮಾರ್ಟ್‍ಫೋನುಗಳಲ್ಲಿ ಬಳಕೆಯಾಗುವ ಕಾರ್ಯಾಚರಣ ವ್ಯವಸ್ಥೆಗಳ (ಆಪರೇಟಿಂಗ್ ಸಿಸ್ಟಂ, ಓಎಸ್) ಪೈಕಿ ಬಹಳ ಜನಪ್ರಿಯವಾಗಿರುವುದು, ನಮಗೆ ಚೆನ್ನಾಗಿ ಪರಿಚಯವಿರುವುದು ಆಂಡ್ರಾಯ್ಡ್. ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಸಂಸ್ಥೆ ಗೂಗಲ್‍ನ ಉತ್ಪನ್ನ ಆಂಡ್ರಾಯ್ಡ್‌ನ ಹೊಸ ಆವೃತ್ತಿಯನ್ನು ಇದೀಗ ಅಧಿಕೃತವಾಗಿ ಘೋಷಿಸಲಾಗಿದೆ.
ಆಂಡ್ರಾಯ್ಡ್‌ನ ಹೊಸ ಆವೃತ್ತಿ ಬಿಡುಗಡೆಯಾಗುವುದು ಅಪರೂಪದ ಸಂಗತಿಯೇನಲ್ಲ. ಈ ಕಾರ್ಯಾಚರಣ ವ್ಯವಸ್ಥೆಯ ಹೊಸ ಆವೃತ್ತಿಗಳನ್ನು ನಿಯಮಿತವಾಗಿ ಹೊರತರುವ ಗೂಗಲ್ ಆ ಆವೃತ್ತಿಗಳನ್ನು ಸಿಹಿತಿಂಡಿಗಳ ಹೆಸರಿನಿಂದ ಗುರುತಿಸುತ್ತದೆ, ಮತ್ತು ಈ ಹೆಸರಿನ ಸರಣಿ ಇಂಗ್ಲಿಷಿನ ಅಕಾರಾದಿ ಕ್ರಮವನ್ನು ಅನುಸರಿಸುವಂತೆ ನೋಡಿಕೊಳ್ಳುತ್ತದೆ. ಹೀಗಾಗಿಯೇ ಪ್ರತಿಬಾರಿಯೂ ಹೊಸ ಆವೃತ್ತಿಯ ಹೆಸರು ಏನಿರಬಹುದು ಎನ್ನುವ ಅಂಶ ಸಾಕಷ್ಟು ಕುತೂಹಲಕ್ಕೆ ಕಾರಣವಾಗುತ್ತದೆ.
ಈ ಬಾರಿಯ ಕುತೂಹಲ ಈಗಷ್ಟೇ ಅಂತ್ಯವಾಗಿದ್ದು ಸದ್ಯ ಹೊರಬರಲಿರುವ ಆಂಡ್ರಾಯ್ಡ್‌ನ ಹತ್ತನೇ ಆವೃತ್ತಿಗೆ ಸಿಹಿತಿಂಡಿಯ ಹೆಸರು ಇರುವುದಿಲ್ಲ ಎಂದು ಗೂಗಲ್ ಸ್ಪಷ್ಟಪಡಿಸಿದೆ. ಅಕ್ಷರಗಳ ಸರಣಿಯಲ್ಲಿ 'ಕ್ಯೂ' ಅಕ್ಷರವನ್ನು ಬಳಸಬೇಕಿದ್ದ ಈ ಆವೃತ್ತಿಯನ್ನು 'ಆಂಡ್ರಾಯ್ಡ್ ೧೦' ಎಂದಷ್ಟೇ ಕರೆಯಲು ಅದು ತೀರ್ಮಾನಿಸಿದೆ.

ಬುಧವಾರ, ಆಗಸ್ಟ್ 14, 2019
ಕಂಪ್ಯೂಟರ್ ಜಗತ್ತಿನ ಫೋರ್ಡ್ ಕಾರು
ಟಿ. ಜಿ. ಶ್ರೀನಿಧಿ
ಜಾಗತಿಕ ಆಟೋಮೊಬೈಲ್ ಇತಿಹಾಸದಲ್ಲಿ ಫೋರ್ಡ್ ಸಂಸ್ಥೆಯ 'ಮಾಡೆಲ್ ಟಿ' ಕಾರಿಗೆ ಬಹಳ ಮಹತ್ವದ ಸ್ಥಾನವಿದೆ. ಕಾರುಗಳೇನಿದ್ದರೂ ಶ್ರೀಮಂತರಿಗೆ ಮಾತ್ರ ಎನ್ನುವ ಅನಿಸಿಕೆಯನ್ನು ಮೊತ್ತಮೊದಲ ಬಾರಿಗೆ ಹೋಗಲಾಡಿಸಿದ್ದು, ಕೈಗೆಟುಕುವ ಬೆಲೆ ನಿಗದಿಪಡಿಸುವ ಮೂಲಕ ಮಧ್ಯಮವರ್ಗದ ಜನರೂ ಕಾರು ಕೊಳ್ಳುವುದನ್ನು ಸಾಧ್ಯವಾಗಿಸಿದ್ದು ಈ ಕಾರಿನ ಹೆಗ್ಗಳಿಕೆ. ಈ ಮಾದರಿಯ ಕಾರುಗಳ ಪೈಕಿ ಮೊದಲನೆಯದು ಸಿದ್ಧವಾದದ್ದು ನೂರಾ ಹನ್ನೊಂದು ವರ್ಷಗಳ ಹಿಂದೆ, ಇದೇ ಆಗಸ್ಟ್ ತಿಂಗಳಿನಲ್ಲಿ.
ಕ್ರಾಂತಿಕಾರಕ ಬದಲಾವಣೆ ತಂದ ಇಂತಹ ಘಟನೆಗಳನ್ನು ನಾವು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲೂ ನೋಡಬಹುದು. 'ಕಮಡೋರ್ ೬೪' ಎಂಬ ಕಂಪ್ಯೂಟರಿನ ಸೃಷ್ಟಿಯನ್ನು ಇಂತಹ ಘಟನೆಗಳ ಸಾಲಿನಲ್ಲಿ ಪ್ರಮುಖವಾಗಿ ಉದಾಹರಿಸಬಹುದು.

ಸೋಮವಾರ, ಆಗಸ್ಟ್ 12, 2019
ಸೆಪ್ಟೆಂಬರ್ 5ಕ್ಕೆ ಜಿಯೋಫೈಬರ್ ಶುರು!
ಇಜ್ಞಾನ ವಾರ್ತೆ
ಬರುವ ಸೆಪ್ಟೆಂಬರ್ 5ರಂದು ರಿಲಯನ್ಸ್ ಜಿಯೋ ತನ್ನ ಕಾರ್ಯಾಚರಣೆಯ ಮೂರು ವರ್ಷಗಳನ್ನು ಪೂರೈಸಲಿದ್ದು ಅದೇ ಸಂದರ್ಭದಲ್ಲಿ ಬಹುನಿರೀಕ್ಷಿತ ಜಿಯೋಫೈಬರ್ ಸೇವೆಯನ್ನು ವಾಣಿಜ್ಯ ಆಧಾರದ ಮೇಲೆ ಪ್ರಾರಂಭಿಸಲಾಗುವುದು ಎಂದು ಮುಖೇಶ್ ಅಂಬಾನಿ ತಿಳಿಸಿದ್ದಾರೆ. ಇಂದು ಮುಂಬಯಿಯಲ್ಲಿ ನಡೆದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ 42ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರು ಈ ಘೋಷಣೆ ಮಾಡಿದರು.

ಗುರುವಾರ, ಆಗಸ್ಟ್ 8, 2019
ಅಂಟಾರ್ಕ್‌ಟಿಕಾದಲ್ಲಿ ಅಂತರಜಾಲ, ಅಂತರಿಕ್ಷದಲ್ಲೂ ಅಂತರಜಾಲ!
ಟಿ. ಜಿ. ಶ್ರೀನಿಧಿ
ಮೊಬೈಲ್ ಫೋನನ್ನು ಸ್ವಲ್ಪಹೊತ್ತು ಬಿಟ್ಟಿರುವುದೂ ಕಷ್ಟ ಎನ್ನುವ ಮಟ್ಟಕ್ಕೆ ನಮಗೆಲ್ಲ ಅದರ ಬಳಕೆ ಅಭ್ಯಾಸವಾಗಿಹೋಗಿದೆ. ಮೊಬೈಲ್ ಬ್ಯಾಟರಿ ಮುಗಿದುಹೋಗುತ್ತಿದೆ ಎಂದರೆ ಸಾಕು, ನಮಗೆ ಚಡಪಡಿಕೆಯೇ ಶುರುವಾಗಿಬಿಡುತ್ತದೆ.
ಮೊಬೈಲಿಗೆ ಅಂತರಜಾಲ ಸಂಪರ್ಕ ಸಿಗದೇ ಹೋದಾಗಲೂ ಅಷ್ಟೇ, ನಾವು ಇಂಥದ್ದೇ ಚಡಪಡಿಕೆಯನ್ನು ಅನುಭವಿಸುತ್ತೇವೆ. ಬಸ್ಸಿನಲ್ಲೋ ಕಾರಿನಲ್ಲೋ ಪ್ರಯಾಣಿಸುವಾಗ ಮಾರ್ಗಮಧ್ಯೆ ಅಂತರಜಾಲ ಸಂಪರ್ಕದ ಗುಣಮಟ್ಟ ಸರಿಯಿಲ್ಲದಿದ್ದರೆ ನಮಗೆ ಅದೇನೋ ಕಿರಿಕಿರಿ.
ಈಚಿನ ದಿನಗಳಲ್ಲಿ ಉತ್ತಮ ಗುಣಮಟ್ಟದ ಅಂತರಜಾಲ ಸಂಪರ್ಕ ನಮಗೆ ಬಹುತೇಕ ಎಲ್ಲಕಡೆಗಳಲ್ಲೂ ಸಿಗುತ್ತಿದೆ, ಬೇರೆಬೇರೆ ಕೆಲಸಗಳಿಗಾಗಿ ಅದನ್ನು ಉಪಯೋಗಿಸಿಕೊಳ್ಳುವುದು ಚೆನ್ನಾಗಿ ಅಭ್ಯಾಸವಾಗಿದೆ. ಹಾಗಾಗಿಯೇ ನಾವು ಹೋದ ಜಾಗದಲ್ಲಿ ಅಂತರಜಾಲ ಸಂಪರ್ಕ ಇಲ್ಲದಿದ್ದರೆ ಅದು ನಮಗೆ ಇಷ್ಟವಾಗುವುದಿಲ್ಲ. ಇನ್ನು ನಮ್ಮ ಮನೆಯಲ್ಲೇ ಅಂತರಜಾಲ ಸಂಪರ್ಕ ಸರಿಯಿಲ್ಲ ಎಂದರಂತೂ ಏನಾದರೂ ಒಂದು ಉಪಾಯ ಹುಡುಕಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ತನಕ ನಮಗೆ ನೆಮ್ಮದಿಯೇ ಇರುವುದಿಲ್ಲ.
ಭೂಮಿಯ ಮೇಲೆ - ದೂರವಾಣಿ ಜಾಲದ ವ್ಯಾಪ್ತಿಯೊಳಗೆ ಇರುವ ನಮಗೇನೋ ಅಂತರಜಾಲ ಸಂಪರ್ಕ ಸುಲಭವಾಗಿ ಸಿಗುತ್ತಿದೆ. ಆದರೆ ದೂರವಾಣಿ ಜಾಲಗಳಿಂದ ದೂರವಿರುವ ಜನರೂ ವಿಶ್ವದ ವಿವಿಧೆಡೆಗಳಲ್ಲಿ ಇರುತ್ತಾರಲ್ಲ, ಅವರಿಗೆಲ್ಲ ಅಂತರಜಾಲ ಸಂಪರ್ಕ ಸಿಗುವುದು ಹೇಗೆ?

ಶುಕ್ರವಾರ, ಆಗಸ್ಟ್ 2, 2019
ವಾರಾಂತ್ಯ ವಿಶೇಷ: ರೋಬಾಟ್ ಜಗತ್ತಿನಲ್ಲಿ ಒಂದು ಸುತ್ತು
ಟಿ. ಜಿ. ಶ್ರೀನಿಧಿ
ಯಂತ್ರಮಾನವ, ಅಂದರೆ ರೋಬಾಟ್‌ಗಳ ಕುರಿತು ನಮಗೆ ಎಲ್ಲಿಲ್ಲದ ಕುತೂಹಲ. ಮೊದಲಿಗೆ ವೈಜ್ಞಾನಿಕ ಕತೆ ಹಾಗೂ ಚಲನಚಿತ್ರಗಳ ಮೂಲಕ ನಮಗೆ ಪರಿಚಯವಾದ ಈ ಪರಿಕಲ್ಪನೆ ಇಂದು ಹಲವು ಕ್ಷೇತ್ರಗಳಲ್ಲಿ ತನ್ನ ಪ್ರಭಾವ ತೋರಿಸುತ್ತಿದೆ. ಕಾರ್ಖಾನೆಯಲ್ಲಿ ಕೆಲಸಮಾಡುವುದರಿಂದ ಪ್ರಾರಂಭಿಸಿ ಮನೆಯ ಕಸ ಗುಡಿಸುವವರೆಗೆ ರೋಬಾಟ್‌ಗಳ ಕಾರ್ಯಕ್ಷೇತ್ರ ಇದೀಗ ಬಹಳ ವಿಸ್ತಾರವಾಗಿ ಬೆಳೆದಿದೆ.
ಈ ಯಂತ್ರಮಾನವರ ಬಗ್ಗೆ ಕುತೂಹಲ ಇರುವಂತೆಯೇ ಅವುಗಳನ್ನು ಕುರಿತ ಭೀತಿಯೂ ನಮ್ಮಲ್ಲಿದೆ. ಮನುಷ್ಯರನ್ನು ಅವು ಆಳಬಹುದು ಎನ್ನುವುದಕ್ಕಿಂತ ನಮ್ಮ ಕೆಲಸಗಳನ್ನು ರೋಬಾಟ್‌ಗಳು ಕಿತ್ತುಕೊಳ್ಳಬಹುದು ಎನ್ನುವುದು ಈ ಭೀತಿಗೆ ಪ್ರಮುಖ ಕಾರಣ. ಈ ಭೀತಿ ಇರಬೇಕೇ ಬೇಡವೇ ಎಂದು ತೀರ್ಮಾನಿಸುವ ಮೊದಲು ರೋಬಾಟ್‌ಗಳ ಬಗ್ಗೆ, ಅವುಗಳ ಕೆಲಸದ ಬಗ್ಗೆ ಕೊಂಚ ತಿಳಿದುಕೊಳ್ಳುವುದು ಒಳ್ಳೆಯದು.

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)