ಗುರುವಾರ, ಆಗಸ್ಟ್ 9, 2018

ಸೈಬರ್ ಅಪರಾಧ ಜಗತ್ತಿನಲ್ಲಿ

ಉದಯ ಶಂಕರ ಪುರಾಣಿಕ

ಒಂದು ದಿನಕ್ಕೆ ಎಷ್ಟು ಹೊಸ ಸೈಬರ್ ದಾಳಿಗಳು ನಡೆಯುತ್ತವೆ ಊಹಿಸಬಲ್ಲಿರಾ ಎನ್ನುವ ಪ್ರಶ್ನೆಯೊಂದಿಗೆ ಈ ಸರಣಿಯ ಮೊದಲ ಲೇಖನ ಮುಕ್ತಾಯವಾಗಿತ್ತು.

೨೦೧೭ರಲ್ಲಿ ವಿಶ್ವ ಸೈಬರ್‍ ಅಪರಾಧಗಳ ಕುರಿತು ನಡೆದಿರುವ ವಾರ್ಷಿಕ ಸಮೀಕ್ಷೆಯ ಪ್ರಕಾರ ವಿಶ್ವಾದ್ಯಂತ ದಿನಕ್ಕೆ ಸರಾಸರಿ ೨೩ ಲಕ್ಷ ಹೊಸ ಸೈಬರ್‍ ದಾಳಿಗಳು ನಡೆಯುತ್ತವೆ. ಅಂದರೆ ಗಂಟೆಗೆ ಸರಾಸರಿ ಒಂದು ಲಕ್ಷ ಹೊಸ ಸೈಬರ್‍ ದಾಳಿಗಳು ನಡೆಯುತ್ತವೆ!

ಇಷ್ಟು ದೊಡ್ಡ ಪ್ರಮಾಣದಲ್ಲಿ ಸೈಬರ್‍ ದಾಳಿಗಳು ನಡೆದಿರುವಂತೆ, ವಿಶ್ವದ ಕುಖ್ಯಾತ ಸೈಬರ್‍ ಅಪರಾಧಿಗಳನ್ನು ಬಂಧಿಸಿ  ಜೈಲಿಗಟ್ಟುವ ಕೆಲಸ ಕೂಡಾ ನಡೆಯುತ್ತಿದೆ. ಕಳೆದ ವರ್ಷ, ಅಂದರೆ ೨೦೧೭ರಲ್ಲಿ ಹೀಗೆ ಬಂಧಿಸಲಾದ ಮೂರು ಪ್ರಮುಖ ಅಪರಾಧಿಗಳ, ಅವರ ಕುಕೃತ್ಯಗಳ ಕುರಿತು ಕೆಲ ವಿವರಗಳು ಹೀಗಿವೆ.

ಅಪರಾಧಿಯ ಹೆಸರು : Mark Vartanyan ಅಲಿಯಾಸ್‍ "Kolypto"
ಅಪರಾಧ : ಆಗಸ್ಟ್ ೨೦೧೨ - ಜನವರಿ ೨೦೧೩ ಮತ್ತು ಏಪ್ರಿಲ್‍ ೨೦೧೪ - ಜೂನ್‍ ೨೦೧೪ ಅವಧಿಯಲ್ಲಿ "ಸಿಟೇಡೆಲ್‍" ಹೆಸರಿನ ಕುತಂತ್ರಾಂಶ (ಮಾಲ್‍ವೇರ್‍) ಬಳಸಿ ವಿಶ್ವಾದ್ಯಂತ ೧ ಕೋಟಿ ೧೦ ಲಕ್ಷ ಕಂಪ್ಯೂಟರುಗಳ ಮೇಲೆ ದಾಳಿ ನಡೆಸಿದ್ದು, ಬ್ಯಾಂಕ್‍ ಖಾತೆಯ ಮಾಹಿತಿ ಹಾಗೂ ವೈಯಕ್ತಿಕ ವಿವರಗಳನ್ನು ಕದ್ದು ದುರುಪಯೋಗ ಮಾಡಿಕೊಂಡಿದ್ದು.
ಆರ್ಥಿಕ ನಷ್ಟ: ಸುಮಾರು ೫೦೦ ಮಿಲಿಯನ್‍ ಡಾಲರುಗಳಿಗಿಂತ ಹೆಚ್ಚು
ಶಿಕ್ಷೆ: ತಾನು ಮಾಡಿದ ತಪ್ಪು ಒಪ್ಪಿಕೊಂಡಿದ್ದರಿಂದ ೫ ವರ್ಷ ಜೈಲು ಶಿಕ್ಷೆ; ೧೯ ಜುಲೈ ೨೦೧೭ರಂದು ಪ್ರಕಟ

ಅಪರಾಧಿಯ ಹೆಸರು: Evaldas Rimasauskas
ಅಪರಾಧ: ಅಸಲಿ ಸಂಸ್ಥೆಗಳನ್ನು ಹೋಲುವ ಹೆಸರಿನ ನಕಲಿ ಸಂಸ್ಥೆಗಳ ಪ್ರಾರಂಭ; ಆ ಸಂಸ್ಥೆಗಳ ಹೆಸರಿನಲ್ಲಿ ಬ್ಯಾಂಕ್‍ ಖಾತೆಗಳ ಸೃಷ್ಟಿ ಹಾಗೂ ಗ್ರಾಹಕರನ್ನು ವಂಚಿಸಿ ಹಣಪಡೆದುಕೊಂಡದ್ದು.
ಆರ್ಥಿಕ ನಷ್ಟ : ಸುಮಾರು ೧೦೦ ಮಿಲಿಯನ್‍ ಡಾಲರ್‌ಗಳು
ಶಿಕ್ಷೆ : ಮಾರ್ಚ್ ೨೦೧೭ರಲ್ಲಿ ಬಂಧನ; ೨೦ ವರ್ಷಗಳಿಗೂ ಹೆಚ್ಚು ಅವಧಿಯ ಜೈಲು ಶಿಕ್ಷೆಯಾಗುವ ಸಾಧ್ಯತೆ

ಅಪರಾಧಿಯ ಹೆಸರು: Kamyar Jahanrakhshan
ಅಪರಾಧ: ಬೆದರಿಕೆಗೆ ಬಗ್ಗದ ಜಾಲತಾಣ ವಿರುದ್ಧ ದಾಳಿ ನಡೆಸುವ ಬೆದರಿಕೆ ಹಾಕಿದ್ದು, ಕುಖ್ಯಾತ ಸೈಬರ್‍ ಅಪರಾಧಿಗಳ ಸಹಾಯದಿಂದ ಜಾಲತಾಣ ಕೆಲಸ ಮಾಡದಂತೆ ನಿಷ್ಕ್ರಿಯಗೊಳಿಸುವ ಡಿಡಿಓಎಸ್‍ ಸೈಬರ್‍ ದಾಳಿ ನಡೆಸಿದ್ದು.
ಶಿಕ್ಷೆ: ಆಗಸ್ಟ್ ೨೦೧೭ರಲ್ಲಿ ಬಂಧನ; ೨.೫ ಲಕ್ಷ ಡಾಲರ್ ದಂಡದ ಜೊತೆ ೧೦ ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆ

ಕಾಮೆಂಟ್‌ಗಳಿಲ್ಲ:

badge