ಶುಕ್ರವಾರ, ಫೆಬ್ರವರಿ 3, 2017

ಬೀಟಾ ವರ್ಶನ್ ಎಂದರೇನು?

ಟಿ. ಜಿ. ಶ್ರೀನಿಧಿ

ತಂತ್ರಾಂಶಗಳ ಬಗ್ಗೆ ಮಾತನಾಡುವಾಗ ಹಲವಾರು ಬಾರಿ 'ಬೀಟಾ ವರ್ಶನ್' ಎಂಬ ಹೆಸರಿನ ಪ್ರಸ್ತಾಪ ಬರುವುದನ್ನು ನೀವು ಗಮನಿಸಿರಬಹುದು. ಮೊಬೈಲ್ ಆಪ್‌ಗಳ 'ಬೀಟಾ ರಿಲೀಸ್' ಅನ್ನು ನೀವು ಬಳಸಿರಲೂಬಹುದು.

ಯಾವುದೇ ತಂತ್ರಾಂಶವನ್ನು ಅಭಿವೃದ್ಧಿಪಡಿಸುವಾಗ ಅದರ ಪ್ರಗತಿಯನ್ನು ನಿರ್ದಿಷ್ಟ ಹಂತಗಳಲ್ಲಿ ಸೂಚಿಸುವುದು ವಾಡಿಕೆ. ತಂತ್ರಾಂಶ ಅಭಿವೃದ್ಧಿ ಮುಗಿದು ಅದು ಬಿಡುಗಡೆಗೆ ಸಿದ್ಧವಾಗುತ್ತದಲ್ಲ, ಅದಕ್ಕೆ ಹಿಂದಿನ ಹಂತವೇ 'ಬೀಟಾ'.

ತಂತ್ರಾಂಶವೊಂದು ಬೀಟಾ ಹಂತದಲ್ಲಿದೆ ಎಂದರೆ ಅದರ ಅಭಿವೃದ್ಧಿ ಬಹುಪಾಲು ಪೂರ್ಣಗೊಂಡಿದೆ ಹಾಗೂ ಪ್ರಾಥಮಿಕ ಹಂತದ ಪರೀಕ್ಷೆಗಳಲ್ಲಿ (ಟೆಸ್ಟಿಂಗ್) ಅದು ಯಶಸ್ವಿಯಾಗಿದೆ ಎಂದರ್ಥ.

ಬೀಟಾ ಹಂತದಲ್ಲಿ ಹೆಚ್ಚು ಕೂಲಂಕಷವಾದ ಪರೀಕ್ಷೆಯ ಅಗತ್ಯವಿರುತ್ತದೆ. ಹಾಗಾಗಿ ತಂತ್ರಾಂಶ ನಿರ್ಮಾತೃಗಳು ಈ ಹಂತದ ತಂತ್ರಾಂಶವನ್ನು ಬಳಕೆದಾರರಿಗೆ ನೀಡಿ ಅವರಿಂದ  ಮರುಮಾಹಿತಿಯನ್ನು ನಿರೀಕ್ಷಿಸುತ್ತಾರೆ. ಈ ಮೂಲಕ ತಂತ್ರಾಂಶದ ಹೆಚ್ಚುವರಿ ಪರೀಕ್ಷೆಯೂ ಆಗುತ್ತದೆ, ಇನ್ನೂ ಬಿಡುಗಡೆಯಾಗದ ತಂತ್ರಾಂಶವನ್ನು ಎಲ್ಲರಿಗಿಂತ ಮೊದಲು ಬಳಸಿದ ಖುಷಿ ಅದನ್ನು ಪರೀಕ್ಷಿಸಿದವರಿಗೂ ಸಿಗುತ್ತದೆ (ಬೀಟಾ ಆವೃತ್ತಿಯ ಪರೀಕ್ಷೆ ಎಲ್ಲರೂ ಬಳಸುವ ತಂತ್ರಾಂಶಗಳಿಗೆ ಮಾತ್ರ ಸೀಮಿತವೇನಲ್ಲ: ಸಾಫ್ಟ್‌ವೇರ್ ಸಂಸ್ಥೆಗಳು ನಿರ್ದಿಷ್ಟ ಗ್ರಾಹಕರಿಗೆಂದು ನಿರ್ಮಿಸುವ ತಂತ್ರಾಂಶಗಳೂ ಬೀಟಾ ಪರೀಕ್ಷೆಗೆ ಒಡ್ಡಿಕೊಳ್ಳುತ್ತವೆ).

ಅಂದಹಾಗೆ 'ಬೀಟಾ' ಎನ್ನುವುದು ಗ್ರೀಕ್ ವರ್ಣಮಾಲೆಯ ಎರಡನೇ ಅಕ್ಷರ. ಮೊದಲ ಅಕ್ಷರವಾದ 'ಆಲ್ಫಾ' ತಂತ್ರಾಂಶ ಅಭಿವೃದ್ಧಿಯಲ್ಲಿ 'ಬೀಟಾ'ಗಿಂತ ಹಿಂದಿನ ಹಂತದ ಹೆಸರು!

ಆಗಸ್ಟ್ ೧೮, ೨೦೧೬ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

6 ಕಾಮೆಂಟ್‌ಗಳು:

Dr. Gavisiddappa R Angadi ಹೇಳಿದರು...

Good information. ...

Unknown ಹೇಳಿದರು...

Useful information sir,we are updating technically daily by your articles.

Unknown ಹೇಳಿದರು...

useful information,we updating technically daily by your articles.

vshri ಹೇಳಿದರು...

ಸ್ವಾಮಿ ಧನ್ಯವಾದಗಳು, ಬಹಳವೇ ಉಪಯುಕ್ತವಾದ ಮಾಹಿತಿಗಳು.

vshri ಹೇಳಿದರು...

ಸ್ವಾಮಿ ಧನ್ಯವಾದಗಳು, ಬಹಳವೇ ಉಪಯುಕ್ತವಾದ ಮಾಹಿತಿಗಳು

vshri ಹೇಳಿದರು...

ಸ್ವಾಮಿ ಧನ್ಯವಾದಗಳು, ಬಹಳವೇ ಉಪಯುಕ್ತವಾದ ಮಾಹಿತಿಗಳು

badge