ಟಿ. ಜಿ. ಶ್ರೀನಿಧಿ
ಹಿಂದಾನೊಂದು ಕಾಲದಲ್ಲಿ ಮೊಬೈಲ್ ಫೋನುಗಳ ಗಾತ್ರ ಬಹಳ ಸಣ್ಣದಾಗಿರುತ್ತಿತ್ತು. ಅದರಲ್ಲೂ ಅರ್ಧಕ್ಕಿಂತ ಹೆಚ್ಚಿನ ಭಾಗವನ್ನು ಕೀಪ್ಯಾಡ್ ಆಕ್ರಮಿಸಿಕೊಳ್ಳುತ್ತಿದ್ದುದರಿಂದ ಪರದೆಯ ಗಾತ್ರ ಒಂದೆರಡು ಇಂಚುಗಳಷ್ಟಿದ್ದರೆ ಅದೇ ಹೆಚ್ಚು. ಮೊಬೈಲ್ ಫೋನಿನ ಬಳಕೆ ದೂರವಾಣಿ ಕರೆ, ಎಸ್ಸೆಮ್ಮೆಸ್ ಹಾಗೂ ಸರಳವಾದ ಆಟಗಳನ್ನು ಆಡುವುದಕ್ಕಷ್ಟೇ ಸೀಮಿತವಾಗಿದ್ದ ಕಾಲದಲ್ಲಿ ಇದೊಂದು ಕೊರತೆ ಎಂದೇನೂ ಎನಿಸುತ್ತಿರಲಿಲ್ಲ.
ಈ ಪರಿಸ್ಥಿತಿ ಬದಲಾದದ್ದು ಸ್ಮಾರ್ಟ್ ಫೋನುಗಳು ಮಾರುಕಟ್ಟೆಗೆ ಬಂದಾಗ. ಕಂಪ್ಯೂಟರಿನಲ್ಲಿ ಮಾಡುವ ಹೆಚ್ಚೂಕಡಿಮೆ ಎಲ್ಲ ಕೆಲಸಗಳನ್ನೂ ಮೊಬೈಲಿನಲ್ಲಿ ಮಾಡಬಹುದು ಎಂದಾಗ ನಮಗೆ ಮೊಬೈಲಿನ ಪರದೆಯ ಗಾತ್ರ ದೊಡ್ಡದಿರಬೇಕು ಎನಿಸಲು ಶುರುವಾಗಿರಬೇಕು. ಆವರೆಗೂ ಒಂದೆರಡು ಇಂಚಿನಷ್ಟೇ ಇದ್ದ ಮೊಬೈಲ್ ಪರದೆ ಮೂರು-ನಾಲ್ಕು ಇಂಚಿಗೆ ಬಡ್ತಿ ಪಡೆದದ್ದು ಆಗಲೇ.
ಸ್ಮಾರ್ಟ್ ಫೋನ್ ಬಳಕೆ ಹೆಚ್ಚಿದಂತೆ ಅವುಗಳನ್ನು ವಿವಿಧ ಉದ್ದೇಶಗಳಿಗಾಗಿ ಬಳಸುವುದು ಶುರುವಾಯಿತು. ಇಮೇಲ್ ಕಳುಹಿಸಲು, ಮೆಸೇಜ್ ಮಾಡಲು, ವೀಡಿಯೋ ನೋಡಲು, ಜಾಲತಾಣಗಳನ್ನು ಬ್ರೌಸ್ ಮಾಡಲು, ಇ-ಪುಸ್ತಕ ಓದಲಿಕ್ಕೆಲ್ಲ ಮೊಬೈಲ್ ಫೋನ್ ಬಳಸಬಹುದು ಎನ್ನುವಾಗ ನಾಲ್ಕಲ್ಲ, ನಾಲ್ಕೂವರೆ-ಐದು ಇಂಚಿನ ಪರದೆಯೂ ಸಾಲದಾಯಿತು.
ಅಷ್ಟರಲ್ಲಿ ಪ್ರಚಲಿತಕ್ಕೆ ಬಂದಿದ್ದ ಟ್ಯಾಬ್ಲೆಟ್‌ಗಳು ಈ ಸಮಸ್ಯೆಯನ್ನು ತಕ್ಕಮಟ್ಟಿಗೆ ಬಗೆಹರಿಸಿದವು. ದೂರವಾಣಿ ಕರೆ ಮಾಡುವುದರ ಜೊತೆಗೆ ಇಮೇಲ್-ಮೆಸೇಜ್ ಇತ್ಯಾದಿ ಕಳುಹಿಸಲಿಕ್ಕೆ, ಚೂರುಪಾರು ಬ್ರೌಸಿಂಗ್ ಮಾಡಲಿಕ್ಕಷ್ಟೆ ಮೊಬೈಲ್ ಬಳಸಿ; ವೀಡಿಯೋ ನೋಡುವುದಕ್ಕೆ ಪುಸ್ತಕ ಓದುವುದಕ್ಕೆ ಆಟ ಆಡುವುದಕ್ಕೆಲ್ಲ ಟ್ಯಾಬ್ಲೆಟ್ ಬಳಸಿದರಾಯಿತು ಎನ್ನುವ ಅಭಿಪ್ರಾಯವೂ ಮೂಡಿತು. ನಾಲ್ಕಿಂಚಿನ ಫೋನಿನೊಡನೆ ಹೋಲಿಸಿದಾಗ ಟ್ಯಾಬ್ಲೆಟ್ಟಿನ ಏಳು-ಎಂಟು ಇಂಚಿನ ಪರದೆ ಬಹಳ ಅನುಕೂಲಕರ ಎನಿಸಿದ್ದರಲ್ಲಿ ತಪ್ಪೂ ಇಲ್ಲ ಬಿಡಿ.
ಆದರೆ ಇಲ್ಲೊಂದು ಸಮಸ್ಯೆಯಿತ್ತು.