ಟಿ. ಜಿ. ಶ್ರೀನಿಧಿ
ಇವತ್ತು ನಮ್ಮ ಮೇಲೆ ಇಂಟರ್‌ನೆಟ್ ಪ್ರಭಾವ ಎಷ್ಟರಮಟ್ಟಿಗಿದೆ ಎನ್ನುವುದನ್ನು ತಿಳಿದುಕೊಳ್ಳಬೇಕೆಂದರೆ ಒಮ್ಮೆ ನಮ್ಮ ದೈನಂದಿನ ಕೆಲಸಗಳನ್ನು ನೆನಪಿಸಿಕೊಂಡರೆ ಸಾಕು. ಹೊಸ ಫ್ಯಾಶನ್ನಿನ ಬಟ್ಟೆಯಿಂದ ಸಾರಿಗೆ ಹಾಕುವ ಹುಣಸೇಹಣ್ಣಿನವರೆಗೆ ನಾವು ಪ್ರತಿಯೊಂದನ್ನೂ ಇದೀಗ ಆನ್‌ಲೈನ್ ಜಗತ್ತಿನಲ್ಲಿ ಕೊಳ್ಳುವುದು ಸಾಧ್ಯವಾಗಿದೆ. ಬಸ್ ಟಿಕೇಟು ಕಾದಿರಿಸುವುದರಿಂದ ಬಸ್ ಸ್ಟಾಂಡಿಗೆ ಹೋಗಲು ಆಟೋ ಕರೆಸುವವರೆಗೆ ಅದೆಷ್ಟೋ ಕೆಲಸಗಳನ್ನು ಮಾಡುವ ಶಕ್ತಿ ನಮ್ಮ ಅಂಗೈಲಿರುವ ಮೊಬೈಲ್ ದೂರವಾಣಿಗೆ ಬಂದುಬಿಟ್ಟಿದೆ.
ಅಂತರಜಾಲ ಬಳಸಿ ಇಷ್ಟೆಲ್ಲ ಕೆಲಸಗಳನ್ನು ಸುಲಭವಾಗಿ ಮಾಡಿಕೊಳ್ಳಬಹುದು ಎನ್ನುವುದೇನೋ ಸರಿ. ಆದರೆ ಅದೆಲ್ಲ ಕೆಲಸಗಳಿಗಾಗಿ ಹಣ ಪಾವತಿಸುವುದು ಹೇಗೆ?
ಮೊದಮೊದಲು ಆನ್‌ಲೈನ್ ವ್ಯವಸ್ಥೆಗಳೆಲ್ಲ ಪರಿಚಯವಾದಾಗ ಅಲ್ಲಿನ ವ್ಯವಹಾರಗಳಿಗಾಗಿ ಹಣ ಪಾವತಿಸುವುದು ಬಹಳ ಕಷ್ಟದ ಕೆಲಸವಾಗಿತ್ತು. ಕ್ರೆಡಿಟ್ ಕಾರ್ಡ್ ಡೆಬಿಟ್ ಕಾರ್ಡ್ ನೆಟ್‌ಬ್ಯಾಂಕಿಂಗುಗಳೆಲ್ಲ ಅಂದು ಇಂದಿನಷ್ಟು ವ್ಯಾಪಕ ಬಳಕೆಯಲ್ಲಿರಲಿಲ್ಲವಲ್ಲ!
ಇದೀಗ ಪರಿಸ್ಥಿತಿ ಸಾಕಷ್ಟು ಬದಲಾಗಿದೆಯಾದರೂ ಆನ್‌ಲೈನ್ ಪಾವತಿಯ ಆಯ್ಕೆ ಎಲ್ಲರಲ್ಲೂ ಇದೆ ಎನ್ನುವಂತಿಲ್ಲ.
ಹಾಗೊಮ್ಮೆ ಇದ್ದರೂ ಅವುಗಳ ಸುರಕ್ಷತೆಯ ಬಗ್ಗೆ ಎಲ್ಲರಿಗೂ ಸಂಪೂರ್ಣ ವಿಶ್ವಾಸವಿಲ್ಲ. ಮೊಬೈಲಿನಲ್ಲಿ ಹಣ ಪಾವತಿ ಮಾಡಲು ಕ್ರೆಡಿಟ್ ಕಾರ್ಡ್ ವಿವರವನ್ನೆಲ್ಲ ಪದೇಪದೇ ಟೈಪಿಸುವುದು ಕಿರಿಕಿರಿಯ ಸಂಗತಿ ಎನ್ನುವವರೂ ಇದ್ದಾರೆ. ಇನ್ನು ಕ್ಯಾಶ್ ಆನ್ ಡೆಲಿವರಿಯಂತಹ ಆಯ್ಕೆಗಳನ್ನು ಬಳಸೋಣವೆಂದರೆ ಬಹಳಷ್ಟು ಸಾರಿ ಅದಕ್ಕೆ ಹೆಚ್ಚಿನ ಶುಲ್ಕ ನೀಡಬೇಕಾಗುತ್ತದೆ, ಅಲ್ಲದೆ ಬಿಲ್ ಪಾವತಿಯಂತಹ ಸಂದರ್ಭಗಳಲ್ಲಿ ಅದು ಸಾಧ್ಯವೂ ಇಲ್ಲ.
[ಜಾಹೀರಾತು] ನಿಮ್ಮ ಆನ್‌ಲೈನ್ ಪಾವತಿಗಳಿಗೆ PayUMoney ಆಯ್ಕೆ ಬಳಸಿ, ಪ್ರತಿ ಪಾವತಿಯ ಮೇಲೂ ಆಕರ್ಷಕ ರಿಯಾಯಿತಿ ಪಡೆಯಿರಿ!
ಇದಕ್ಕೆಲ್ಲ ಉತ್ತರವಾಗಿ ಹೊಸ ವ್ಯವಸ್ಥೆಗಳನ್ನು ರೂಪಿಸುವ ಪ್ರಯತ್ನಗಳು ನಡೆಯುತ್ತಲೇ ಇರುತ್ತವಲ್ಲ, ಅದರ ಪರಿಣಾಮವಾಗಿ ಹಣ ಪಾವತಿಯ ಹಲವು ಪರ್ಯಾಯ ಮಾರ್ಗಗಳು ರೂಪುಗೊಂಡಿವೆ.
ಅಂತಹ ಮಾರ್ಗಗಳಲ್ಲೊಂದರ ಹೆಸರೇ ವ್ಯಾಲೆಟ್. ಜೇಬಿನಲ್ಲೋ ಬ್ಯಾಗಿನಲ್ಲೋ ಇಟ್ಟುಕೊಳ್ಳುವ ಪರ್ಸನ್ನು ವ್ಯಾಲೆಟ್ ಎಂದು ಕರೆಯುತ್ತೇವಲ್ಲ, ಇದೂ ಅಂತಹುದೇ ಪರ್ಸು. ಕಣ್ಣಿಗೆ ಕಾಣದ ವರ್ಚುಯಲ್ ಲೋಕದಲ್ಲಿರುತ್ತದೆ ಎನ್ನುವುದೊಂದೇ ವ್ಯತ್ಯಾಸ.
ಸೇವೆ ಒದಗಿಸುವ ಸಂಸ್ಥೆಗೆ ಮೊದಲೇ ಹಣ ಪಾವತಿಸಿ ಅವರ ಸೇವೆಯನ್ನು ಬಳಸಿದಾಗ ಆ ಹಣವನ್ನೇ ಉಪಯೋಗಿಸಿಕೊಳ್ಳಲು ಅನುವುಮಾಡಿಕೊಡುವುದು ಈ ವ್ಯವಸ್ಥೆಯ ವೈಶಿಷ್ಟ್ಯ. ಹಾಲಿನವನಿಗೆ ಮುಂಚಿತವಾಗಿ ದುಡ್ಡುಕೊಟ್ಟು ಬೇಕಾದಷ್ಟು ಹಾಲಿಗೆ ದಿನವೂ ಕೂಪನ್ನುಗಳನ್ನು ವಿನಿಮಯಮಾಡಿಕೊಳ್ಳುವಂತೆಯೇ ಇದೂ. ಕೂಪನ್ ಪುಸ್ತಕದ ಬದಲಿಗೆ ಇಲ್ಲಿ ಜಾಲತಾಣಗಳು ಹಾಗೂ ಮೊಬೈಲ್ ಆಪ್‌ಗಳು ಇರುತ್ತವೆ, ಕೂಪನ್ ಹರಿದು ಬುಟ್ಟಿಯಲ್ಲಿಡುವ ಬದಲಿಗೆ ಕೀಬೋರ್ಡಿನಲ್ಲಿ ಪಾಸ್‌ವರ್ಡ್ ಕುಟ್ಟಬೇಕಿರುತ್ತದೆ ಅಷ್ಟೆ.
ಇಂತಹ ವ್ಯಾಲೆಟ್‌ಗಳಲ್ಲಿ ಮುಚ್ಚಿದ (ಕ್ಲೋಸ್ಡ್), ಅರೆಮುಚ್ಚಿದ (ಸೆಮಿ-ಕ್ಲೋಸ್ಡ್) ಹಾಗೂ ತೆರೆದ (ಓಪನ್) ವ್ಯಾಲೆಟ್ಟುಗಳೆಂದು ಮೂರು ವಿಧ.
"ನಮಗೆ ಮುಂಚಿತವಾಗಿಯೇ ಹಣ ಕೊಟ್ಟಿರಿ, ಚಿಲ್ಲರೆ ಹೊಂದಿಸುವ ಗೋಜಿಲ್ಲದೆ ನಮ್ಮ ಸೇವೆಯನ್ನು ಖುಷಿಯಿಂದ ಬಳಸಿ" ಎಂದು ಟ್ಯಾಕ್ಸಿ ಸಂಸ್ಥೆಯೊಂದು ಹೇಳುತ್ತದೆ ಎಂದುಕೊಳ್ಳೋಣ. ಅಂತಹ ವ್ಯಾಲೆಟ್‌ಗೆ ಸೇರಿಸಿದ ಹಣವನ್ನು ನಾವು ಆ ಸಂಸ್ಥೆಯ ಟ್ಯಾಕ್ಸಿಯಲ್ಲಿ ಪ್ರಯಾಣಿಸಲು ಮಾತ್ರ ಬಳಸಬಹುದು. ಬಹಳಷ್ಟು ಶಾಪಿಂಗ್ ತಾಣಗಳಲ್ಲಿ, ಮೊಬೈಲ್ ರೀಚಾರ್ಜ್ ಮಾಡಿಕೊಡುವ ಕೆಲ ತಾಣಗಳಲ್ಲಿ ಇರುವ ವ್ಯಾಲೆಟ್ ಕತೆಯೂ ಇದೇ.
ಒಂದು ಸಂಸ್ಥೆಯ ಮಟ್ಟಿಗಷ್ಟೆ ಚಾಲನೆಯಲ್ಲಿರುವುದರಿಂದ ಇವು ಮುಚ್ಚಿದ (ಕ್ಲೋಸ್ಡ್) ವ್ಯಾಲೆಟ್ಟುಗಳು. ಒಂದು ಸಂಸ್ಥೆಗೆ ಸೇರಿದ ಇಂತಹ ವ್ಯಾಲೆಟ್ಟಿಗೆ ಸೇರಿಸಿದ ಹಣವನ್ನು ಅದೇ ಸಂಸ್ಥೆಯ ಸೇವೆ ಪಡೆಯಲು ಬಳಸಬೇಕಲ್ಲದೆ ಅದನ್ನು ಬೇರೆಡೆ ಬಳಸುವುದಾಗಲಿ ಹಾಕಿದ ಹಣ ವಾಪಸ್ ಪಡೆಯುವುದಾಗಲಿ ಸಾಧ್ಯವಿಲ್ಲ.
[ಜಾಹೀರಾತು] ಬೆಂಗಳೂರಿನಲ್ಲಿ ನಿಮ್ಮ ಓಡಾಟಕ್ಕೆ ಉಬರ್ ಟ್ಯಾಕ್ಸಿ ಬಳಸಿ, ರೂ. ೬೦೦ ಮೌಲ್ಯದ ಪ್ರಯಾಣ ಉಚಿತ!
ಅದೂ ಒಂದು ಸಮಸ್ಯೆಯೇ. ಎರಡು ಟ್ಯಾಕ್ಸಿ ಸಂಸ್ಥೆಗಳಲ್ಲಿ, ಬಟ್ಟೆ ಕೊಳ್ಳುವ ತಾಣದಲ್ಲಿ, ಬಸ್ಸು-ವಿಮಾನದ ಟಿಕೆಟ್ ಕೊಳ್ಳುವಲ್ಲಿ, ರೀಚಾರ್ಜ್ ಸೇವೆಯಲ್ಲಿ ಎಂದೆಲ್ಲ ದುಡ್ಡು ಇಡುತ್ತ ಹೋದರೆ ಅಷ್ಟೆಲ್ಲ ವ್ಯಾಲೆಟ್ಟುಗಳನ್ನು ನಿಭಾಯಿಸುವುದು ಹೇಗೆ? ಆ ಸಂಸ್ಥೆ ಒದಗಿಸುವ ಸೇವೆ ನಮಗೆ ಇಷ್ಟವಾಗಲಿಲ್ಲ ಎಂದರೆ ನಾವು ವ್ಯಾಲೆಟ್ಟಿನಲ್ಲಿಟ್ಟ ಹಣದ ಕತೆ??
ಇಂತಹ ಸಮಸ್ಯೆಗಳನ್ನು ಕೊಂಚಮಟ್ಟಿಗಾದರೂ ನಿವಾರಿಸಲು ಅರೆಮುಚ್ಚಿದ (ಸೆಮಿ-ಕ್ಲೋಸ್ಡ್) ವ್ಯಾಲೆಟ್ಟುಗಳು ಪ್ರಯತ್ನಿಸುತ್ತವೆ. ಇಂತಹ ವ್ಯಾಲೆಟ್ಟುಗಳಲ್ಲಿ ಸೇರಿಸುವ ಹಣವನ್ನು ಆ ಸಂಸ್ಥೆಯೊಡನೆ ಒಪ್ಪಂದ ಮಾಡಿಕೊಂಡಿರುವ ಎಲ್ಲ ಸೇವೆಗಳಲ್ಲೂ ಬಳಸುವುದು ಸಾಧ್ಯ. ಅಂದರೆ ಇಂತಹ ವ್ಯಾಲೆಟ್ಟಿಗೆ ಸೇರಿಸಿದ ಐದುನೂರು ರೂಪಾಯಿಯಲ್ಲಿ ಮುನ್ನೂರನ್ನು ಟ್ಯಾಕ್ಸಿ ಪ್ರಯಾಣಕ್ಕೆ ಬಳಸಿ, ನೂರೈವತ್ತಕ್ಕೆ ಮಗುವಿನ ಡಯಾಪರ್ ಖರೀದಿಸಿ ಮಿಕ್ಕ ಐವತ್ತನ್ನು ಮೊಬೈಲ್ ರೀಚಾರ್ಜಿಗೆ ಬಳಸುವುದು ಸಾಧ್ಯ. ಚೀನಾ ದೇಶದ ಆಲಿಬಾಬ ಸಂಸ್ಥೆಯಿಂದ ಮಿಲಿಯನ್‌ಗಟ್ಟಲೆ ಡಾಲರುಗಳ ಹೂಡಿಕೆ ಆಕರ್ಷಿಸಿ ಸುದ್ದಿಮಾಡಿತಲ್ಲ ಪೇಟಿಎಂ (PayTM) ಎನ್ನುವ ಭಾರತೀಯ ಸಂಸ್ಥೆ, ಅದು ಒದಗಿಸುವ ವ್ಯಾಲೆಟ್ ಸೇವೆ ಈ ಬಗೆಯದ್ದೇ. ಮೊಬೈಲ್ ಸೇವೆ ಒದಗಿಸುವ ಪ್ರಮುಖ ಸಂಸ್ಥೆಗಳು ವ್ಯಾಲೆಟ್ಟುಗಳನ್ನು ಪರಿಚಯಿಸಿವೆಯಲ್ಲ, ಅವೂ ಈ ಬಗೆಯ ವ್ಯವಸ್ಥೆಗಳೇ.
ಇಂತಹ ವ್ಯಾಲೆಟ್ಟುಗಳು ಒದಗಿಸುವವರು ಹೆಚ್ಚಿದಂತೆ ನಮ್ಮ ದೇಶದಲ್ಲಿ ಅವುಗಳ ಬಳಕೆಯೂ ಹೆಚ್ಚುತ್ತಿದೆ. ಒಂದು ಅಂದಾಜಿನ ಪ್ರಕಾರ ಭಾರತದಲ್ಲಿರುವ ವ್ಯಾಲೆಟ್ ಬಳಕೆದಾರರ ಒಟ್ಟು ಸಂಖ್ಯೆ ಕ್ರೆಡಿಟ್ ಕಾರ್ಡ್ ಬಳಕೆದಾರರ ಸಂಖ್ಯೆಯನ್ನು ಈಗಾಗಲೇ ಮೀರಿಸಿಬಿಟ್ಟಿದೆಯಂತೆ!
ವ್ಯಾಲೆಟ್ ಬಳಕೆದಾರರಿಗೆ ವಿಶೇಷವಾಗಿ ನೀಡಲಾಗುವ ರಿಯಾಯಿತಿಗಳು ಹಾಗೂ ಕೊಡುಗೆಗಳೂ ಅವುಗಳ ಜನಪ್ರಿಯತೆ ಹೆಚ್ಚಲು ಕಾರಣವಾಗುತ್ತಿವೆ. ಅಂಗಡಿಗೆ ಹೋಗಿ ಮೊಬೈಲ್ ರೀಚಾರ್ಜ್ ಮಾಡಿಸಿದಂತೆ ಹಣ ಕೊಟ್ಟು ವ್ಯಾಲೆಟ್ ರೀಚಾರ್ಜ್ ಮಾಡಿಸುವ ಅಭ್ಯಾಸವೂ ಬೆಳೆಯುತ್ತಿದೆ ಎಂದು ಕೆಲ ಪತ್ರಿಕಾವರದಿಗಳು ಹೇಳಿದ್ದೂ ಇದೆ.
ಅರೆಮುಚ್ಚಿದ ವ್ಯಾಲೆಟ್ಟುಗಳು ನೀಡುವ ಸೇವೆಯ ಜೊತೆಗೆ ಹಣ ಹಿಂದಕ್ಕೆ ಪಡೆಯುವ ಆಯ್ಕೆಯೂ ಸೇರಿದರೆ ಅದನ್ನು ತೆರೆದ (ಓಪನ್) ವ್ಯಾಲೆಟ್ ಎಂದು ಕರೆಯಬಹುದು. ಸದ್ಯದ ನಿಯಮಗಳ ಪ್ರಕಾರ ಇಂತಹ ಸೇವೆಯನ್ನು ಬ್ಯಾಂಕುಗಳು ಮಾತ್ರವೇ ನೀಡಲು ಸಾಧ್ಯ.
ಹಲವು ಅರೆಮುಚ್ಚಿದ ವ್ಯಾಲೆಟ್ಟುಗಳು ಮುಂದಿನ ದಿನಗಳಲ್ಲಿ ತಮ್ಮ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿಕೊಂಡು ಓಪನ್ ವ್ಯಾಲೆಟ್‌ಗಳಾಗಿ ಬದಲಾಗುವ ಆಸಕ್ತಿಯನ್ನು ಈಗಾಗಲೇ ವ್ಯಕ್ತಪಡಿಸಿವೆ; ಕೆಲ ಸಂಸ್ಥೆಗಳು ಈಗಾಗಲೇ ಇರುವ ಬ್ಯಾಂಕುಗಳೊಡನೆ ಹೊಂದಾಣಿಕೆಯ ಪ್ರಯತ್ನದಲ್ಲಿದ್ದರೆ ಇನ್ನು ಕೆಲವು ಹೊಸದಾಗಿ ಸೇವೆ ಪ್ರಾರಂಭಿಸಲು ರಿಸರ್ವ್ ಬ್ಯಾಂಕ್ ಅನುಮತಿ ಎದುರುನೋಡುತ್ತಿವೆ. ಈ ಬದಲಾವಣೆ ಹಣಕಾಸಿನ ಲೋಕದಲ್ಲಿ ನಾವು ವ್ಯವಹರಿಸುವ ರೀತಿಯನ್ನೇ ಗಮನಾರ್ಹವಾಗಿ ಬದಲಿಸಲಿದೆ ಎನ್ನುವ ನಿರೀಕ್ಷೆ ತಂತ್ರಜ್ಞಾನ ಲೋಕದ್ದು.
ವ್ಯಾಲೆಟ್ ಎಂದರೇನು?
ಗ್ರಾಹಕರಿಂದ ಮುಂಚಿತವಾಗಿಯೇ ಹಣ ಪಡೆದು ಅದು ಮುಗಿಯುವವರೆಗೂ ನಿರ್ದಿಷ್ಟ ಸೇವೆಗಳನ್ನು ಒದಗಿಸುವ ವ್ಯವಸ್ಥೆಯೇ ವ್ಯಾಲೆಟ್. ಜೇಬಿನಲ್ಲೋ ಬ್ಯಾಗಿನಲ್ಲೋ ಇಟ್ಟುಕೊಳ್ಳುವ ಪರ್ಸನ್ನು ವ್ಯಾಲೆಟ್ ಎಂದು ಕರೆಯುತ್ತೇವಲ್ಲ, ಇದೂ ಅಂತಹುದೇ ಪರ್ಸು; ಕಣ್ಣಿಗೆ ಕಾಣುವುದಿಲ್ಲ ಅಷ್ಟೆ!
ಇದರ ಅನುಕೂಲತೆ ಏನು?
ಮುಂಚಿತವಾಗಿ ಒಂದಷ್ಟು ಹಣವನ್ನು ವ್ಯಾಲೆಟ್‌ಗೆ ಸೇರಿಸಿಟ್ಟಿದ್ದರೆ ಮೊಬೈಲ್ ರೀಚಾರ್ಜ್ ಮೊತ್ತವನ್ನೋ ಶಾಪಿಂಗ್ ಬಿಲ್ಲನ್ನೋ ಅತ್ಯಂತ ಸುಲಭವಾಗಿ ಪಾವತಿಸಿಬಿಡುವುದು ಸಾಧ್ಯ. ಟ್ಯಾಕ್ಸಿಯಲ್ಲಿ ಹೋದಾಗ ಚಿಲ್ಲರೆ ಹುಡುಕುವ ಅಗತ್ಯವೂ ಇಲ್ಲ. ಕ್ರೆಡಿಟ್ ಕಾರ್ಡ್ ಅಥವಾ ಬ್ಯಾಂಕ್ ಖಾತೆಯ ವಿವರಗಳನ್ನು ಪದೇ ಪದೇ ಬಳಸುವ ಹಾಗೂ ಅದರ ಸುರಕ್ಷತೆಯ ಬಗ್ಗೆ ತಲೆಕೆಡಿಸಿಕೊಳ್ಳುವುದು ಕೊಂಚಮಟ್ಟಿಗೆ ಕಡಿಮೆಯಾಗುತ್ತದೆ. ಕೆಲವೊಮ್ಮೆ ವ್ಯಾಲೆಟ್ ಬಳಸಿದ್ದಕ್ಕಾಗಿ ವಿಶೇಷ ಕೊಡುಗೆಗಳು ಸಿಗುವುದೂ ಉಂಟು.
ವ್ಯಾಲೆಟ್ ಸೇವೆ ಒದಗಿಸುವುದರಿಂದ ಸಂಸ್ಥೆಗೇನು ಲಾಭ?
ಗ್ರಾಹಕರಿಂದ ಮುಂಚಿತವಾಗಿಯೇ ಹಣಪಡೆಯುವ ಮೂಲಕ ಸಂಸ್ಥೆಗಳು ಅಷ್ಟು ಮೊತ್ತದ ವ್ಯವಹಾರವನ್ನು ಖಾತ್ರಿಪಡಿಸಿಕೊಳ್ಳುತ್ತವೆ. ವ್ಯಾಲೆಟ್‌ನಲ್ಲಿ ದುಡ್ಡು ಹಾಕಿರುವ ಗ್ರಾಹಕ ಪ್ರತಿಸ್ಪರ್ಧಿ ಸಂಸ್ಥೆಯತ್ತ ಹೋಗುವ ಸಾಧ್ಯತೆ ಕಡಿಮೆ ಎನ್ನುವ ಸಮಾಧಾನವೂ ಇರುತ್ತದೆ. ಕೆಲವು ಬಗೆಯ ವ್ಯಾಲೆಟ್‌ಗಳಲ್ಲಿರುವ ಹಣದ ಠೇವಣಿಗೆ ದೊರಕುವ ಬಡ್ಡಿಯೂ ಆ ಸಂಸ್ಥೆಗೆ ಸೇರುತ್ತದೆ.
ಜನವರಿ ೧೯, ೨೦೧೫ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

3 ಕಾಮೆಂಟ್‌ಗಳು:
ಒಳ್ಳೆಯ ಬರಹ. ಸರಳವಾಗಿ ಚೆನ್ನಾಗಿದೆ ವ್ಯಾಲೆಟ್ ಮಾಹಿತಿ. ಧನ್ಯವಾದಗಳು.
Really it is a good artical about wallet.thank you sir
Good info, Thanks
ಕಾಮೆಂಟ್ ಪೋಸ್ಟ್ ಮಾಡಿ