ಟಿ. ಜಿ. ಶ್ರೀನಿಧಿ
ಈವರೆಗೆ ಕೊಟ್ಟಿರುವ ವಿವರಣೆ ಕೇಳಿ ನಿಮಗೂ ಅದೇ ಸಂಶಯ ಬಂದಿದ್ದರೆ ಅದರಲ್ಲೂ ತಪ್ಪೇನಿಲ್ಲ ಬಿಡಿ. ಇನ್ನು ನನ್ನ ಮಿತ್ರನಿಗಂತೂ ಇದೇ ಪ್ರಶ್ನೆ ಪದೇ ಪದೆ ಎದುರಾಗುತ್ತಲೇ ಇರುತ್ತದೆ. "ನೀನು ಸಾಫ್ಟ್‌ವೇರ್ ಕಂಪನೀಲಿ ಕೆಲಸ ಮಾಡ್ತೀನಿ ಅಂತೀಯ, ಆಫೀಸಿಗೆ ಹೋಗಿದ್ದನ್ನೇ ನೋಡಿಲ್ಲ ಅದೇನು ಕೆಲಸ ನಿಂದು?" ಅಂತ ಅದೆಷ್ಟೋ ಜನ ಅವನನ್ನು ಕೇಳಿದ್ದಾರೆ.
ಅವನು ಅಷ್ಟೆಲ್ಲ ಪ್ರಶ್ನೆಗಳನ್ನು ಎದುರಿಸುವಂತೆ ಮಾಡುತ್ತಿರುವುದು 'ವರ್ಕ್ ಫ್ರಮ್ ಹೋಮ್' ಎಂಬ ಪರಿಕಲ್ಪನೆ.
ಮನೆಯೇ ಆಫೀಸು!
ತಂತ್ರಜ್ಞಾನ ಬೆಳೆದಂತೆ ಬಹುತೇಕ ಕೆಲಸಗಳಿಗಿದ್ದ ಸ್ಥಳ-ಸಮಯಗಳ ನಿಬಂಧನೆ ಹೊರಟುಹೋಗಿದೆ. ಹತ್ತು ವರ್ಷಗಳ ಹಿಂದೆ ಬ್ಯಾಂಕ್ ಖಾತೆಯಿಂದ ಹಣ ಪಡೆಯಬೇಕೆಂದರೆ ಬ್ರಾಂಚಿಗೆ ಹೋಗಲೇಬೇಕಿತ್ತು; ಆದರೆ ಈಗ ಮಧ್ಯರಾತ್ರಿ ಹನ್ನೆರಡು ಗಂಟೆಗೆ ಹಣ ಬೇಕಾದರೂ ಪಕ್ಕದ ಬೀದಿಯ ಎಟಿಎಂನಲ್ಲೇ ಸಿಗುತ್ತದಲ್ಲ ಹಾಗೆ!
ಇದೇ ತರ್ಕವನ್ನು ಕಚೇರಿ ಕೆಲಸಗಳಿಗೂ ಅನ್ವಯಿಸಬಹುದು. ಗಣಕ ಆಧರಿತ ಕೆಲಸಗಳಲ್ಲಿ ತೊಡಗಿಕೊಂಡಿರುವ ಬಹುತೇಕ ಉದ್ಯೋಗಿಗಳು ತಮ್ಮ ಕೆಲಸ ನಿರ್ವಹಿಸಲು ಕಚೇರಿಗೇ ಹೋಗಬೇಕೆಂಬ ಯಾವುದೇ ಅಗತ್ಯ ಇಂದಿನ ಸನ್ನಿವೇಶದಲ್ಲಿ ಕಂಡುಬರುತ್ತಿಲ್ಲ. ಸಂಸ್ಥೆಯ ಗಣಕ ಜಾಲಕ್ಕೆ ಸುರಕ್ಷಿತ ಸಂಪರ್ಕ ಪಡೆದುಕೊಳ್ಳುವ ಸಾಧ್ಯತೆಯಿದ್ದರೆ ಸಾಕು, ಯಾವಾಗ ಎಲ್ಲಿಂದ ಬೇಕಿದ್ದರೂ ಕಚೇರಿಯ ಕೆಲಸ ಮಾಡಬಹುದು.
ವಿಶೇಷ ವ್ಯವಸ್ಥೆ
ಸಂಸ್ಥೆಗಳ ದೃಷ್ಟಿಯಿಂದ ಮಾಹಿತಿಯ ಸುರಕ್ಷತೆ ಬಹಳ ಮುಖ್ಯ; ಹೀಗಾಗಿ ಕಚೇರಿಯ ಗಣಕ ಜಾಲಕ್ಕೆ ಸಂಪರ್ಕ ಪಡೆದುಕೊಳ್ಳಲು ಬೇಕಾದ ಮೂಲಸೌಕರ್ಯವನ್ನೆಲ್ಲ ಸಂಸ್ಥೆಯ ವತಿಯಿಂದಲೇ ಸಿದ್ಧಪಡಿಸಲಾಗಿರುತ್ತದೆ. ಅಂತರಜಾಲದ ಮೂಲಕವೇ ಆದರೂ ತಮ್ಮದೇ ಖಾಸಗಿ ಜಾಲವೆಂಬ ಭಾವನೆ ಮೂಡಿಸುವ ವರ್ಚುಯಲ್ ಪ್ರೈವೇಟ್ ನೆಟ್‌ವರ್ಕ್‌ನ ಸುರಕ್ಷತೆ, ಅದನ್ನು ಸಂಪರ್ಕಿಸಲು ಕ್ಷಣಕ್ಕೊಮ್ಮೆ ಬದಲಾಗುವ ಪಾಸ್‌ವರ್ಡ್ ವ್ಯವಸ್ಥೆ - ಹೀಗೇ ಮನೆಯಿಂದ ಕೆಲಸ ಮಾಡುವವರಿಗಾಗಿ ಸಂಸ್ಥೆಗಳು ಅನೇಕ ವಿಶೇಷ ವ್ಯವಸ್ಥೆಗಳನ್ನು ಮಾಡಿರುತ್ತವೆ. ಉದ್ಯೋಗಿಗಳಿಗೆ ಕಚೇರಿಯದೇ ಲ್ಯಾಪ್‌ಟಾಪ್ ಕೊಡುವ ಅಭ್ಯಾಸವೂ ಸಾಮಾನ್ಯ.
ಒಂದು ಗಣಕ, ಅದರ ಜೊತೆಗೊಂದು ಅಂತರಜಾಲ ಸಂಪರ್ಕ - ವರ್ಕ್ ಫ್ರಮ್ ಹೋಮ್‌ಗೆ ಇಷ್ಟು ಇದ್ದರೆ ಸಾಕು! ಉದ್ಯೋಗಿ ಇದ್ದ ಸ್ಥಳದಿಂದಲೇ ಕಚೇರಿಯ ಗಣಕಜಾಲಕ್ಕೆ ಸಂಪರ್ಕ ಪಡೆದುಕೊಂಡು ಕಚೇರಿಯಲ್ಲಿ ಮಾಡುವ ಎಲ್ಲ ಕೆಲಸಗಳನ್ನೂ ಮಾಡುವುದು ಸಾಧ್ಯ. ಮಕ್ಕಳನ್ನು ನೋಡಿಕೊಳ್ಳುವುದೋ ಹಿರಿಯರ ಆರೈಕೆಯೋ ಯಾವುದೋ ಕಾರಣದಿಂದ ಮನೆಯಲ್ಲೇ ಉಳಿದುಕೊಳ್ಳಬೇಕಾದ ಉದ್ಯೋಗಿಗಳಿಗೆ ಈ ಸೌಲಭ್ಯ ಬಹಳ ಅನುಕೂಲಕರ. ಬೇರೆ ದಿನಗಳಲ್ಲಿ ಕಚೇರಿಗೆ ಹೋಗುವ ಉದ್ಯೋಗಿಗಳೂ ಅಗತ್ಯಬಿದ್ದಾಗ ವರ್ಕ್ ಫ್ರಮ್ ಹೋಮ್ ಮಾಡುವುದುಂಟು.
ಬಳಲಿಸುವ ಕೆಲಸ
ಮನೆಯಿಂದ ಕೆಲಸ ಅಂದಮಾತ್ರಕ್ಕೆ ಅದು ತುಂಬಾ ಒಳ್ಳೆಯದು ಅಂತೇನೂ ಇಲ್ಲ. ಹಾಗೆ ನೋಡಿದರೆ ಮನೆಯಿಂದ ಕೆಲಸಮಾಡುವವರಿಗೆ ಕಚೇರಿಯಿಂದ ಕೆಲಸಮಾಡುವವರಿಗಿಂತ ಹೆಚ್ಚಿನ ಕೆಲಸದ ಒತ್ತಡ ಇರುತ್ತದೆ ಎಂದು ಇತ್ತೀಚಿನ ಅಧ್ಯಯನವೊಂದು ತಿಳಿಸಿದೆ. ಅಮೆರಿಕಾದ ಟ್ರಾಯ್‌ನಲ್ಲಿರುವ ಆರ್‌ಪಿಐ ಎಂಬ ವಿದ್ಯಾಸಂಸ್ಥೆಯ ತಜ್ಞರು ನಡೆಸಿದ ಪರೀಕ್ಷೆಗಳಿಂದ ಈ ಅಂಶ ಬೆಳಕಿಗೆ ಬಂದಿದೆ. ಮನೆಯಿಂದ ಕೆಲಸ ಮಾಡುವಾಗ ಕಚೇರಿ ಕೆಲಸದ ಜೊತೆಗೆ ಮನೆಯ ಕೆಲಸವೂ ಸೇರಿಕೊಳ್ಳುವುದರಿಂದ ಎರಡನ್ನೂ ನಿಭಾಯಿಸುವುದು ಕಷ್ಟವಾಗುತ್ತದೆ; ಈ ಸಂದಿಗ್ಧದಿಂದ ಪಾರಾಗಲು ಪ್ರಯತ್ನಿಸುವ ಉದ್ಯೋಗಿ ಇದರಿಂದಾಗಿ ಬಳಲಿಕೆಗೆ ತುತ್ತಾಗುತ್ತಾನೆ ಎನ್ನುವುದು ಅವರ ಅಭಿಪ್ರಾಯ.
ಮೋಸಗಾರರ ಬಗೆಗೆ ಎಚ್ಚರವಿರಲಿ!
ವರ್ಕ್ ಫ್ರಮ್ ಹೋಮ್ ಎಂದಾಕ್ಷಣ ನಿಮಗೆ ಅಲ್ಲಲ್ಲಿ ಕಾಣಸಿಗುವ 'ಮನೆಯಿಂದಲೇ ಕೆಲಸಮಾಡಿ ಹಣಗಳಿಸಿ' ಎನ್ನುವಂತಹ ಜಾಹೀರಾತುಗಳು ನೆನಪಿಗೆ ಬರಬಹುದು. ಆದರೆ ನೆನಪಿಡಿ - ಈ ಲೇಖನದಲ್ಲಿ ಪ್ರಸ್ತಾಪಿಸಿರುವ ವಿವರಗಳು ಪೂರ್ಣಕಾಲಿಕ ಉದ್ಯೋಗದಲ್ಲಿರುವವರಿಗೆ ಮನೆಯಿಂದಲೂ ಕೆಲಸಮಾಡಲು ಸಂಸ್ಥೆಗಳು ಒದಗಿಸುವ ಸೌಲಭ್ಯದ ಕುರಿತು ಮಾತ್ರ. ಪತ್ರಿಕೆಯಲ್ಲೋ ಅಂತರಜಾಲದಲ್ಲೋ ಮನೆಯಿಂದಲೇ ಕೆಲಸಮಾಡುವ ಬಗೆಗೆ ಜಾಹೀರಾತು ಕಂಡರೆ ಆ ನಿಟ್ಟಿನಲ್ಲಿ ಮುಂದುವರೆಯುವ ಮುನ್ನ ಅದರ ಸತ್ಯಾಸತ್ಯತೆಯನ್ನು ಸಂಪೂರ್ಣವಾಗಿ ಪರಿಶೀಲಿಸಿ. ಏಕೆಂದರೆ ಮನೆಯಿಂದಲೇ ಮಾಡುವಂತಹ ಕೆಲಸ ಕೊಡುತ್ತೇವೆ ಎನ್ನುವ ಸೋಗಿನಲ್ಲಿ ಪ್ರಪಂಚದಾದ್ಯಂತ ಪ್ರತಿವರ್ಷವೂ ನೂರಾರು ಮಿಲಿಯನ್ ಡಾಲರ್ ಪ್ರಮಾಣದ ಟೋಪಿ ವ್ಯವಹಾರ ನಡೆಯುತ್ತದಂತೆ!
ನವೆಂಬರ್ ೧೫, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ
ನೆನಪಿಡಿ - ಈ ಲೇಖನದಲ್ಲಿ ಪ್ರಸ್ತಾಪಿಸಿರುವ ವಿವರಗಳು ಪೂರ್ಣಕಾಲಿಕ ಉದ್ಯೋಗದಲ್ಲಿರುವವರಿಗೆ ಮನೆಯಿಂದಲೂ ಕೆಲಸಮಾಡಲು ಸಂಸ್ಥೆಗಳು ಒದಗಿಸುವ ಸೌಲಭ್ಯದ ಕುರಿತು ಮಾತ್ರ. ಪತ್ರಿಕೆಯಲ್ಲೋ ಅಂತರಜಾಲದಲ್ಲೋ ಮನೆಯಿಂದಲೇ ಕೆಲಸಮಾಡುವ ಬಗೆಗೆ ಜಾಹೀರಾತು ಕಂಡರೆ ಆ ನಿಟ್ಟಿನಲ್ಲಿ ಮುಂದುವರೆಯುವ ಮುನ್ನ ಅದರ ಸತ್ಯಾಸತ್ಯತೆಯನ್ನು ಸಂಪೂರ್ಣವಾಗಿ ಪರಿಶೀಲಿಸಿ.ನನ್ನ ಮಿತ್ರ ಬೆಂಗಳೂರಿನ ಸಾಫ್ಟ್‌ವೇರ್ ಸಂಸ್ಥೆಯೊಂದರಲ್ಲಿ ಉದ್ಯೋಗಿ. ಶನಿವಾರ ಭಾನುವಾರದ ವೀಕೆಂಡು ಹೋಗಲಿ, ವಾರದ ಮಧ್ಯೆ ಫೋನುಮಾಡಿ ಎಲ್ಲಿದ್ದೀಯೋ ಅಂದರೆ ಹತ್ತರಲ್ಲಿ ಎಂಟು ಸಲ ಮನೆಯಲ್ಲಿದ್ದೀನಿ ಅಂತಲೋ ಮೈಸೂರಲ್ಲಿದ್ದೀನಿ ಅಂತಲೋ ಉತ್ತರ ಬರುತ್ತದೆ. ಆಫೀಸಿನಲ್ಲಿದ್ದೀನಿ ಅನ್ನುವ ಉತ್ತರ ತಿಂಗಳಿಗೋ ಎರಡು ತಿಂಗಳಿಗೋ ಒಮ್ಮೆಯಾದರೂ ಬಂದರೆ ಅದೇ ವಿಶೇಷ. ಅವನ ಮದುವೆಯ ಸಿದ್ಧತೆಯಾಗುತ್ತಿದ್ದ ಸಂದರ್ಭದಲ್ಲಿ ಅವನ ಭಾವಿ ಅತ್ತೆ-ಮಾವನಿಗೆ ಅವನು ನಿಜವಾಗಿಯೂ ಕೆಲಸದಲ್ಲಿದ್ದಾನೋ ಇಲ್ಲವೋ ಅನ್ನುವ ಸಂಶಯ ಬಂದಿತ್ತಂತೆ!
ಈವರೆಗೆ ಕೊಟ್ಟಿರುವ ವಿವರಣೆ ಕೇಳಿ ನಿಮಗೂ ಅದೇ ಸಂಶಯ ಬಂದಿದ್ದರೆ ಅದರಲ್ಲೂ ತಪ್ಪೇನಿಲ್ಲ ಬಿಡಿ. ಇನ್ನು ನನ್ನ ಮಿತ್ರನಿಗಂತೂ ಇದೇ ಪ್ರಶ್ನೆ ಪದೇ ಪದೆ ಎದುರಾಗುತ್ತಲೇ ಇರುತ್ತದೆ. "ನೀನು ಸಾಫ್ಟ್‌ವೇರ್ ಕಂಪನೀಲಿ ಕೆಲಸ ಮಾಡ್ತೀನಿ ಅಂತೀಯ, ಆಫೀಸಿಗೆ ಹೋಗಿದ್ದನ್ನೇ ನೋಡಿಲ್ಲ ಅದೇನು ಕೆಲಸ ನಿಂದು?" ಅಂತ ಅದೆಷ್ಟೋ ಜನ ಅವನನ್ನು ಕೇಳಿದ್ದಾರೆ.
ಅವನು ಅಷ್ಟೆಲ್ಲ ಪ್ರಶ್ನೆಗಳನ್ನು ಎದುರಿಸುವಂತೆ ಮಾಡುತ್ತಿರುವುದು 'ವರ್ಕ್ ಫ್ರಮ್ ಹೋಮ್' ಎಂಬ ಪರಿಕಲ್ಪನೆ.
ಮನೆಯೇ ಆಫೀಸು!
ತಂತ್ರಜ್ಞಾನ ಬೆಳೆದಂತೆ ಬಹುತೇಕ ಕೆಲಸಗಳಿಗಿದ್ದ ಸ್ಥಳ-ಸಮಯಗಳ ನಿಬಂಧನೆ ಹೊರಟುಹೋಗಿದೆ. ಹತ್ತು ವರ್ಷಗಳ ಹಿಂದೆ ಬ್ಯಾಂಕ್ ಖಾತೆಯಿಂದ ಹಣ ಪಡೆಯಬೇಕೆಂದರೆ ಬ್ರಾಂಚಿಗೆ ಹೋಗಲೇಬೇಕಿತ್ತು; ಆದರೆ ಈಗ ಮಧ್ಯರಾತ್ರಿ ಹನ್ನೆರಡು ಗಂಟೆಗೆ ಹಣ ಬೇಕಾದರೂ ಪಕ್ಕದ ಬೀದಿಯ ಎಟಿಎಂನಲ್ಲೇ ಸಿಗುತ್ತದಲ್ಲ ಹಾಗೆ!
ಇದೇ ತರ್ಕವನ್ನು ಕಚೇರಿ ಕೆಲಸಗಳಿಗೂ ಅನ್ವಯಿಸಬಹುದು. ಗಣಕ ಆಧರಿತ ಕೆಲಸಗಳಲ್ಲಿ ತೊಡಗಿಕೊಂಡಿರುವ ಬಹುತೇಕ ಉದ್ಯೋಗಿಗಳು ತಮ್ಮ ಕೆಲಸ ನಿರ್ವಹಿಸಲು ಕಚೇರಿಗೇ ಹೋಗಬೇಕೆಂಬ ಯಾವುದೇ ಅಗತ್ಯ ಇಂದಿನ ಸನ್ನಿವೇಶದಲ್ಲಿ ಕಂಡುಬರುತ್ತಿಲ್ಲ. ಸಂಸ್ಥೆಯ ಗಣಕ ಜಾಲಕ್ಕೆ ಸುರಕ್ಷಿತ ಸಂಪರ್ಕ ಪಡೆದುಕೊಳ್ಳುವ ಸಾಧ್ಯತೆಯಿದ್ದರೆ ಸಾಕು, ಯಾವಾಗ ಎಲ್ಲಿಂದ ಬೇಕಿದ್ದರೂ ಕಚೇರಿಯ ಕೆಲಸ ಮಾಡಬಹುದು.
ವಿಶೇಷ ವ್ಯವಸ್ಥೆ
ಸಂಸ್ಥೆಗಳ ದೃಷ್ಟಿಯಿಂದ ಮಾಹಿತಿಯ ಸುರಕ್ಷತೆ ಬಹಳ ಮುಖ್ಯ; ಹೀಗಾಗಿ ಕಚೇರಿಯ ಗಣಕ ಜಾಲಕ್ಕೆ ಸಂಪರ್ಕ ಪಡೆದುಕೊಳ್ಳಲು ಬೇಕಾದ ಮೂಲಸೌಕರ್ಯವನ್ನೆಲ್ಲ ಸಂಸ್ಥೆಯ ವತಿಯಿಂದಲೇ ಸಿದ್ಧಪಡಿಸಲಾಗಿರುತ್ತದೆ. ಅಂತರಜಾಲದ ಮೂಲಕವೇ ಆದರೂ ತಮ್ಮದೇ ಖಾಸಗಿ ಜಾಲವೆಂಬ ಭಾವನೆ ಮೂಡಿಸುವ ವರ್ಚುಯಲ್ ಪ್ರೈವೇಟ್ ನೆಟ್‌ವರ್ಕ್‌ನ ಸುರಕ್ಷತೆ, ಅದನ್ನು ಸಂಪರ್ಕಿಸಲು ಕ್ಷಣಕ್ಕೊಮ್ಮೆ ಬದಲಾಗುವ ಪಾಸ್‌ವರ್ಡ್ ವ್ಯವಸ್ಥೆ - ಹೀಗೇ ಮನೆಯಿಂದ ಕೆಲಸ ಮಾಡುವವರಿಗಾಗಿ ಸಂಸ್ಥೆಗಳು ಅನೇಕ ವಿಶೇಷ ವ್ಯವಸ್ಥೆಗಳನ್ನು ಮಾಡಿರುತ್ತವೆ. ಉದ್ಯೋಗಿಗಳಿಗೆ ಕಚೇರಿಯದೇ ಲ್ಯಾಪ್‌ಟಾಪ್ ಕೊಡುವ ಅಭ್ಯಾಸವೂ ಸಾಮಾನ್ಯ.
ಒಂದು ಗಣಕ, ಅದರ ಜೊತೆಗೊಂದು ಅಂತರಜಾಲ ಸಂಪರ್ಕ - ವರ್ಕ್ ಫ್ರಮ್ ಹೋಮ್‌ಗೆ ಇಷ್ಟು ಇದ್ದರೆ ಸಾಕು! ಉದ್ಯೋಗಿ ಇದ್ದ ಸ್ಥಳದಿಂದಲೇ ಕಚೇರಿಯ ಗಣಕಜಾಲಕ್ಕೆ ಸಂಪರ್ಕ ಪಡೆದುಕೊಂಡು ಕಚೇರಿಯಲ್ಲಿ ಮಾಡುವ ಎಲ್ಲ ಕೆಲಸಗಳನ್ನೂ ಮಾಡುವುದು ಸಾಧ್ಯ. ಮಕ್ಕಳನ್ನು ನೋಡಿಕೊಳ್ಳುವುದೋ ಹಿರಿಯರ ಆರೈಕೆಯೋ ಯಾವುದೋ ಕಾರಣದಿಂದ ಮನೆಯಲ್ಲೇ ಉಳಿದುಕೊಳ್ಳಬೇಕಾದ ಉದ್ಯೋಗಿಗಳಿಗೆ ಈ ಸೌಲಭ್ಯ ಬಹಳ ಅನುಕೂಲಕರ. ಬೇರೆ ದಿನಗಳಲ್ಲಿ ಕಚೇರಿಗೆ ಹೋಗುವ ಉದ್ಯೋಗಿಗಳೂ ಅಗತ್ಯಬಿದ್ದಾಗ ವರ್ಕ್ ಫ್ರಮ್ ಹೋಮ್ ಮಾಡುವುದುಂಟು.
ಬಳಲಿಸುವ ಕೆಲಸ
ಮನೆಯಿಂದ ಕೆಲಸ ಅಂದಮಾತ್ರಕ್ಕೆ ಅದು ತುಂಬಾ ಒಳ್ಳೆಯದು ಅಂತೇನೂ ಇಲ್ಲ. ಹಾಗೆ ನೋಡಿದರೆ ಮನೆಯಿಂದ ಕೆಲಸಮಾಡುವವರಿಗೆ ಕಚೇರಿಯಿಂದ ಕೆಲಸಮಾಡುವವರಿಗಿಂತ ಹೆಚ್ಚಿನ ಕೆಲಸದ ಒತ್ತಡ ಇರುತ್ತದೆ ಎಂದು ಇತ್ತೀಚಿನ ಅಧ್ಯಯನವೊಂದು ತಿಳಿಸಿದೆ. ಅಮೆರಿಕಾದ ಟ್ರಾಯ್‌ನಲ್ಲಿರುವ ಆರ್‌ಪಿಐ ಎಂಬ ವಿದ್ಯಾಸಂಸ್ಥೆಯ ತಜ್ಞರು ನಡೆಸಿದ ಪರೀಕ್ಷೆಗಳಿಂದ ಈ ಅಂಶ ಬೆಳಕಿಗೆ ಬಂದಿದೆ. ಮನೆಯಿಂದ ಕೆಲಸ ಮಾಡುವಾಗ ಕಚೇರಿ ಕೆಲಸದ ಜೊತೆಗೆ ಮನೆಯ ಕೆಲಸವೂ ಸೇರಿಕೊಳ್ಳುವುದರಿಂದ ಎರಡನ್ನೂ ನಿಭಾಯಿಸುವುದು ಕಷ್ಟವಾಗುತ್ತದೆ; ಈ ಸಂದಿಗ್ಧದಿಂದ ಪಾರಾಗಲು ಪ್ರಯತ್ನಿಸುವ ಉದ್ಯೋಗಿ ಇದರಿಂದಾಗಿ ಬಳಲಿಕೆಗೆ ತುತ್ತಾಗುತ್ತಾನೆ ಎನ್ನುವುದು ಅವರ ಅಭಿಪ್ರಾಯ.
ಮೋಸಗಾರರ ಬಗೆಗೆ ಎಚ್ಚರವಿರಲಿ!
ವರ್ಕ್ ಫ್ರಮ್ ಹೋಮ್ ಎಂದಾಕ್ಷಣ ನಿಮಗೆ ಅಲ್ಲಲ್ಲಿ ಕಾಣಸಿಗುವ 'ಮನೆಯಿಂದಲೇ ಕೆಲಸಮಾಡಿ ಹಣಗಳಿಸಿ' ಎನ್ನುವಂತಹ ಜಾಹೀರಾತುಗಳು ನೆನಪಿಗೆ ಬರಬಹುದು. ಆದರೆ ನೆನಪಿಡಿ - ಈ ಲೇಖನದಲ್ಲಿ ಪ್ರಸ್ತಾಪಿಸಿರುವ ವಿವರಗಳು ಪೂರ್ಣಕಾಲಿಕ ಉದ್ಯೋಗದಲ್ಲಿರುವವರಿಗೆ ಮನೆಯಿಂದಲೂ ಕೆಲಸಮಾಡಲು ಸಂಸ್ಥೆಗಳು ಒದಗಿಸುವ ಸೌಲಭ್ಯದ ಕುರಿತು ಮಾತ್ರ. ಪತ್ರಿಕೆಯಲ್ಲೋ ಅಂತರಜಾಲದಲ್ಲೋ ಮನೆಯಿಂದಲೇ ಕೆಲಸಮಾಡುವ ಬಗೆಗೆ ಜಾಹೀರಾತು ಕಂಡರೆ ಆ ನಿಟ್ಟಿನಲ್ಲಿ ಮುಂದುವರೆಯುವ ಮುನ್ನ ಅದರ ಸತ್ಯಾಸತ್ಯತೆಯನ್ನು ಸಂಪೂರ್ಣವಾಗಿ ಪರಿಶೀಲಿಸಿ. ಏಕೆಂದರೆ ಮನೆಯಿಂದಲೇ ಮಾಡುವಂತಹ ಕೆಲಸ ಕೊಡುತ್ತೇವೆ ಎನ್ನುವ ಸೋಗಿನಲ್ಲಿ ಪ್ರಪಂಚದಾದ್ಯಂತ ಪ್ರತಿವರ್ಷವೂ ನೂರಾರು ಮಿಲಿಯನ್ ಡಾಲರ್ ಪ್ರಮಾಣದ ಟೋಪಿ ವ್ಯವಹಾರ ನಡೆಯುತ್ತದಂತೆ!
ನವೆಂಬರ್ ೧೫, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ
3 ಕಾಮೆಂಟ್‌ಗಳು:
ಇತ್ತೀಚೆಗೆ ಮುಂಬಯಿಯ ಪತ್ರಿಕೆಯಲ್ಲೊಂದು ಜಾಹೀರಾತಿನಂತಹ ಲೇಖನ ಬಂದಿತ್ತು. ಈ ರೀತಿ ಮನೆಯಿಂದಲೇ ಕೆಲಸ ಮಾಡುವವರು ಇಚ್ಛೆ ಪಟ್ಟರೆ ಮನೆಯ ಒಂದು ಮೂಲೆಯನ್ನೋ, ಕೋಣೆಯನ್ನೋ ಕಛೇರಿಯಲ್ಲಿರುವ ಪರಿಸರದಂತೆಯೇ ಮಾರ್ಪಡಿಸಿ ಕೊಡಲು ಅನುಕೂಲಗಳು ಈ ಜಾಹೀರಾತು ಹೊರತಂದ ಕಂಪನಿಯಲ್ಲಿ ಇವೆಯಂತೆ. (ಸ್ವಂತ)ಜಾಗ , (ಸ್ವಂತ) ಹಣ, ಶೋಕಿ ಇರುವವರು ಇದರ ಉಪಯೋಗ ಪಡೆಯಬಹುದೇನೋ?
ಶ್ರೀಧರ , ನವಿಮುಂಬಯಿ.

please continue of this type of news.....
ಕಾಮೆಂಟ್ ಪೋಸ್ಟ್ ಮಾಡಿ