ಟಿ. ಜಿ. ಶ್ರೀನಿಧಿ
ಕೆಲವು ದಿನಗಳ ಹಿಂದೆ ಭಾರತ ಸರಕಾರ 'ರಾಷ್ಟ್ರೀಯ ಸೂಪರ್ಕಂಪ್ಯೂಟಿಂಗ್ ಮಿಶನ್' ಎನ್ನುವ ಕಾರ್ಯಕ್ರಮವೊಂದನ್ನು ಘೋಷಿಸಿತು. ಒಟ್ಟು ನಾಲ್ಕೂವರೆ ಸಾವಿರ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಭಾರತದಾದ್ಯಂತ ಸೂಪರ್ಕಂಪ್ಯೂಟರುಗಳ ಜಾಲವನ್ನೇ ನಿರ್ಮಿಸುವುದು ಈ ಕಾರ್ಯಕ್ರಮದ ಉದ್ದೇಶ.
ಸರಿ, ಆದರೆ ಈ ಸೂಪರ್ಕಂಪ್ಯೂಟರ್ ಎಂದರೇನು?
ಪ್ರಪಂಚದಲ್ಲಿ ಅನೇಕ ಬಗೆಯ ಕಂಪ್ಯೂಟರುಗಳಿರುವುದು ನಮಗೆಲ್ಲ ಗೊತ್ತಿರುವ ವಿಷಯವೇ. ಅವುಗಳ ಪೈಕಿ ಅತಿ ಹೆಚ್ಚು ಸಂಸ್ಕರಣಾ ಸಾಮರ್ಥ್ಯ ಇರುವ ಕಂಪ್ಯೂಟರುಗಳಿಗೆ ಸೂಪರ್ಕಂಪ್ಯೂಟರ್ಗಳೆಂದು ಹೆಸರು.
ಬಹಳ ಕ್ಲಿಷ್ಟ ಲೆಕ್ಕಾಚಾರಗಳ ಅಗತ್ಯವಿರುವ ಕ್ಷೇತ್ರಗಳಲ್ಲಿ ಇವು ಬಳಕೆಯಾಗುತ್ತವೆ. ವಿಶ್ವದ ಹುಟ್ಟಿನ ಬಗ್ಗೆ ತಿಳಿದುಕೊಳ್ಳುವುದಿರಲಿ, ಭೂಕಂಪ-ಚಂಡಮಾರುತಗಳಂತಹ ವಿದ್ಯಮಾನಗಳ ವಿಶ್ಲೇಷಣೆಯಿರಲಿ - ಉನ್ನತ ಮಟ್ಟದ ವೈಜ್ಞಾನಿಕ ಸಂಶೋಧನೆಗಳಲ್ಲಿ ಸೂಪರ್ಕಂಪ್ಯೂಟರುಗಳ ಬಳಕೆ ಸಾಮಾನ್ಯ. ಅಣ್ವಸ್ತ್ರಗಳ ಪರೀಕ್ಷೆಯಲ್ಲೂ ಸೂಪರ್ಕಂಪ್ಯೂಟರುಗಳ ಸಹಾಯ ಪಡೆದುಕೊಳ್ಳುವ ಪ್ರಯತ್ನಗಳು ನಡೆದಿವೆ. ಹವಾಗುಣ ಬದಲಾವಣೆಯಂತಹ ಪ್ರಕ್ರಿಯೆಗಳ ಅಧ್ಯಯನದಲ್ಲಿ ಕೂಡ ಸೂಪರ್ಕಂಪ್ಯೂಟರ್ ಪಾತ್ರವನ್ನು ನೋಡುವುದು ಸಾಧ್ಯ.
ವೈದ್ಯಕೀಯ ರಂಗದಲ್ಲೂ ಸೂಪರ್ಕಂಪ್ಯೂಟರುಗಳ ಬಳಕೆ ಇದೆ - ಪ್ರೋಟೀನುಗಳ ರಚನೆಯ ಬಗ್ಗೆ ತಿಳಿದುಕೊಂಡು, ಅವುಗಳಲ್ಲಾಗುವ ಬದಲಾವಣೆಗೂ ಮಾನವರಲ್ಲಿ ಕಾಣಿಸಿಕೊಳ್ಳುವ ರೋಗಗಳಿಗೂ ನಡುವಿನ ಸಂಬಂಧವನ್ನು ಅಧ್ಯಯನ ಮಾಡುತ್ತಿರುವ 'ಬ್ಲೂ ಜೀನ್' ಸೂಪರ್ಕಂಪ್ಯೂಟರ್ ಕಳೆದ ದಶಕದಲ್ಲಿ ಸಾಕಷ್ಟು ಸುದ್ದಿಮಾಡಿತ್ತು. ಮಾನವ ದೇಹದಲ್ಲಿ ರಕ್ತಸಂಚಾರದ ವಿವರವಾದ ವಿಶ್ಲೇಷಣೆಗೂ ಸೂಪರ್ಕಂಪ್ಯೂಟರುಗಳನ್ನು ಬಳಸಲಾಗುತ್ತಿದೆ.
ಹಂದಿಜ್ವರದಂತಹ ರೋಗಗಳು ಕಾಣಿಸಿಕೊಂಡಾಗ ಅವುಗಳ ಸ್ವರೂಪ ಮತ್ತು ಹರಡುತ್ತಿರುವ ವಿಧಾನವನ್ನು ಅಧ್ಯಯನ ಮಾಡಿ ಕ್ಷಿಪ್ರವಾಗಿ ಪರಿಹಾರ ಕಂಡುಕೊಳ್ಳುವಲ್ಲೂ ಸೂಪರ್ಕಂಪ್ಯೂಟರುಗಳು ನೆರವಾಗಬಲ್ಲವು.