ಬುಧವಾರ, ಏಪ್ರಿಲ್ 8, 2009

ರದ್ದಿ ಸಂದೇಶಗಳಿಗೆ ಜೈ!

ಅಂತರಜಾಲದ ಮೂಲಕ ರವಾನೆಯಾಗುವ ಇಮೇಲ್ ಸಂದೇಶಗಳಲ್ಲಿ ಶೇ.೯೭ಕ್ಕೂ ಹೆಚ್ಚು ಭಾಗ ರದ್ದಿ ಸಂದೇಶಗಳಾಗಿರುತ್ತವೆ (ಸ್ಪಾಮ್) ಎಂದು ಮೈಕ್ರೋಸಾಫ್ಟ್ ವರದಿ ತಿಳಿಸಿದೆ. ಬಯಸದ ಮಾಹಿತಿಯನ್ನು ಬಲವಂತವಾಗಿ ಹೊತ್ತು ತರುವ ಸಂದೇಶಗಳಲ್ಲಿ ಅತ್ಯಂತ ಹೆಚ್ಚಿನ ಭಾಗ ಕಾನೂನು ಬಾಹಿರವಾಗಿ ಔಷಧಮಾರಾಟ ಮಾಡುವವರ ಜಾಹೀರಾತುಗಳಾಗಿರುತ್ತವಂತೆ.

ವೈರಸ್, ವರ್ಮ್, ಸ್ಪೈವೇರ್ ಮುಂತಾದ ಕುತಂತ್ರಾಂಶಗಳನ್ನು (ಮಾಲ್ ವೇರ್) ಹರಡುವಲ್ಲೂ ಸ್ಪಾಮ್ ಸಂದೇಶಗಳ ಪಾತ್ರಬಹಳ ದೊಡ್ಡದು ಎಂದು ವರದಿ ತಿಳಿಸಿದೆ. ಪ್ರಪಂಚದಲ್ಲಿರುವ ಪ್ರತಿ ೧೦೦೦ ಗಣಕಗಳಲ್ಲಿ ಹೆಚ್ಚುಕಡಿಮೆ ಗಣಕಗಳನ್ನು ಇಂತಹ ಕುತಂತ್ರಾಂಶಗಳು ಬಾಧಿಸುತ್ತವಂತೆ.

ಗಣಕ ಜಗತ್ತನ್ನು ಕಾಡುವ ಬಹಳಷ್ಟು ತೊಂದರೆಗಳಿಗೆ ಮೂಲ ಕಾರಣವಾದ ಸ್ಪಾಮ್ ಕಾಟದಿಂದ ಪಾರಾಗಲು ಬಳಕೆದಾರರ ವಿವೇಚನೆಯೇ ಸೂಕ್ತ ಮಾರ್ಗ ಎಂದು ತಜ್ಞರು ಹೇಳುತ್ತಾರೆ. ತಮ್ಮ ಇಮೇಲ್ ವಿಳಾಸಗಳು, ಮೊಬೈಲ್ ದೂರವಾಣಿ ಸಂಖ್ಯೆಗಳು, ಇನ್ಸ್‌ಟೆಂಟ್ ಮೆಸೇಜಿಂಗ್ ಬಳಕೆದಾರ ಹೆಸರು ಮುಂತಾದ ಸಂಪರ್ಕ ವಿವರಗಳು ಅಪಾತ್ರರ ಕೈಗೆ ಸಿಲುಕದಂತೆ ನೋಡಿಕೊಳ್ಳುವುದು ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಎಂದು ಅಭಿಪ್ರಾಯಪಡುವ ಅವರು ಸಂದೇಹಾಸ್ಪದ ಅಂತರಜಾಲ ತಾಣಗಳಲ್ಲಿ ಎಂದಿಗೂ ನಿಮ್ಮ ಇಮೇಲ್ ವಿಳಾಸವನ್ನು ದಾಖಲಿಸಬೇಡಿ, ಹಾಗೂ ಅಪರಿಚಿತರಿಂದ ಬರುವ ಸಂದೇಶಗಳನ್ನು ತೆರೆಯಲುಹೋಗಬೇಡಿ ಎನ್ನುತ್ತಾರೆ.

ಸ್ಪಾಮ್ ತೊಂದರೆ ಬಗ್ಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ 'ವಿಜ್ಞಾನ ಲೋಕ' ಪತ್ರಿಕೆಯಲ್ಲಿ ಪ್ರಕಟವಾಗಿದ್ದ ನನ್ನ ಲೇಖನ ಇಲ್ಲಿದೆ.

2 ಕಾಮೆಂಟ್‌ಗಳು:

Keshav.Kulkarni ಹೇಳಿದರು...

scam mailಗೆ ರದ್ದಿಸಂದೇಶ ಎನ್ನುವ ಅನುವಾದ ಇಷ್ಟವಾಯಿತು. ರದ್ದಿಪತ್ರ ಅನ್ನಬಹುದಲ್ಲವೇ?

- ಕೇಶವ

Srinidhi ಹೇಳಿದರು...

ಸುದ್ದಿಪತ್ರದ ಥರಾ ರದ್ದಿಪತ್ರ... :-) ಒಳ್ಳೆಯ ಅನುವಾದ, ಧನ್ಯವಾದಗಳು ಕುಲಕರ್ಣಿಯವರೆ!

badge