ಮಂಗಳವಾರ, ಏಪ್ರಿಲ್ 14, 2009

ಮೈಕ್ರೋ ಅಲ್ಲ, ಇದು ನ್ಯಾನೋಬ್ಲಾಗಿಂಗ್!


ನೂರ ನಲವತ್ತು ಅಕ್ಷರಗಳ ಮಿತಿಯಲ್ಲಿ ಎಸ್ಸೆಮ್ಮೆಸ್ ರೀತಿಯ ಸಂದೇಶಗಳನ್ನು ಬರೆಯಲು ಅನುವುಮಾಡಿಕೊಡುವ ಟ್ವೀಟರ್‍ನಂತಹ ತಾಣಗಳನ್ನು 'ಮೈಕ್ರೋಬ್ಲಾಗು'ಗಳೆಂದು ಕರೆಯುವುದು ನಿಮಗೆ ಗೊತ್ತೇ ಇದೆ.

ನಮ್ಮ ಪಾಲಿಗೆ ಇನ್ನೂ ಹೊಸದಾಗಿಯೇ ಇರುವ ಈ ಮೈಕ್ರೋಬ್ಲಾಗುಗಳು ಈಗಾಗಲೇ ಔಟ್‍ಡೇಟ್ ಆಗಿ ನ್ಯಾನೋಬ್ಲಾಗಿಂಗ್ ಎಂಬ ಹೊಸತೊಂದು ಕಲ್ಪನೆ ಹುಟ್ಟಿಕೊಂಡಿದೆ!

ಅಡೊಕು ಎನ್ನುವುದು ಇಂಥದ್ದೊಂದು ನ್ಯಾನೋಬ್ಲಾಗು. ಟ್ವೀಟರ್‌ನಲ್ಲಿ ಒಂದು ಎಸ್ಸೆಮ್ಮೆಸ್‌ನಷ್ಟು ಉದ್ದದ ಮಾಹಿತಿ ಹಾಕುವಂತೆ ಇಲ್ಲಿ ಕೇವಲ ಒಂದು ಪದವನ್ನಷ್ಟೆ ಬರೆಯಬಹುದು.

http://adocu.com/srinidhitg - ಇದು ನನ್ನ ನ್ಯಾನೋಬ್ಲಾಗು.

"ಇದೊಳ್ಳೆತಮಾಷೆಯಾಗಿದೆಕಣ್ರೀ!", ನಿಜ್ವಾಗ್ಲೂ!

1 ಕಾಮೆಂಟ್‌:

Ravi Hegde ಹೇಳಿದರು...

ಈಗ ಮೈಕ್ರೋ ಹೋಗಿ ನ್ಯಾನೋ ಬ್ಲಾಗಿಂಗ್ ಬಂತು. ಮುಂದೆ ಏನೋ ಬ್ಲಾಂಗಿಂಗ್ ಬರುತ್ತೆ. ಆಮೇಲೆ, ನೋನೋ ಬ್ಲಾಗಿಂಗ್ ಆಗುತ್ತಾ ಅಂತ!BTW, ಟ್ವೀಟರ್ ಥರ ನ್ಯಾನೋ ಬ್ಲಾಗಿಂಗ್ ಕ್ಲಿಕ್ ಆಗಲ್ವಾ ಅಂತ ನನಗೆ ಸಂಶಯವಿದೆ.

badge