ಸೋಮವಾರ, ಜೂನ್ 17, 2019

ಇಜ್ಞಾನದ ಹಾದಿಯಲ್ಲಿ ಇನ್ನೊಂದು ಹೆಜ್ಜೆ: ಇಜ್ಞಾನ ಈಗ ವೀಡಿಯೋ ರೂಪದಲ್ಲೂ!

ಇಜ್ಞಾನ ವಿಶೇಷ



ವಿಜ್ಞಾನ ತಂತ್ರಜ್ಞಾನ ವಿಷಯಗಳಿಗೆ ಮೀಸಲಾದ ಕನ್ನಡ ಜಾಲತಾಣ ಇಜ್ಞಾನ ಡಾಟ್ ಕಾಮ್, ವೈವಿಧ್ಯಮಯ ಮಾಹಿತಿಯನ್ನು ೨೦೦೭ರಿಂದ ಸತತವಾಗಿ ನಿಮಗೆ ತಲುಪಿಸುತ್ತಿದೆ. ಈ ಹಾದಿಯಲ್ಲಿ ನಾವು ಅನೇಕ ಹೊಸ ಪ್ರಯೋಗಗಳನ್ನು ಮಾಡಿರುವುದು ನಿಮಗೆ ಗೊತ್ತೇ ಇದೆ. ಇಂಥದ್ದೇ ಇನ್ನೊಂದು ಪ್ರಯೋಗವಾಗಿ ಇದೀಗ ಇಜ್ಞಾನದ ಮಾಹಿತಿಯನ್ನು ವೀಡಿಯೋ ರೂಪದಲ್ಲಿ ನಿಮ್ಮತ್ತ ತರುವ ಪ್ರಯತ್ನವೊಂದನ್ನು ಪ್ರಾರಂಭಿಸುತ್ತಿದ್ದೇವೆ. ಹೊಸದಾಗಿ ಪ್ರಾರಂಭವಾಗುತ್ತಿರುವ ನ್ಯೂಸ್ ಫಸ್ಟ್ ಕನ್ನಡ ವಾಹಿನಿಯ ಸಹಯೋಗದಲ್ಲಿ ಈ ಪ್ರಯೋಗ ನಡೆಯಲಿದ್ದು, ಇದರ ಮೊದಲ ಫಲಿತಾಂಶವನ್ನು ನಿಮ್ಮ ಮುಂದೆ ತರಲು ನಮಗೆ ಖುಷಿಯಾಗುತ್ತಿದೆ.

ನಮ್ಮ ಪ್ರಯೋಗದ ಮೊದಲ ಕಂತಿನಲ್ಲಿ ಪ್ರಸ್ತಾಪವಾಗುತ್ತಿರುವ ವಿಷಯ - ವಿದ್ಯುನ್ಮಾನ ಪುಸ್ತಕ, ಅರ್ಥಾತ್ ಇ-ಬುಕ್. ಈ ಪುಸ್ತಕಗಳ ಪರಿಚಯ, ಅವುಗಳ ಅನುಕೂಲತೆ, ಅವನ್ನು ಪಡೆಯುವ-ಬಳಸುವ ವಿಧಾನಗಳ ಕುರಿತು ಸುಮಾರು ಹತ್ತು ನಿಮಿಷಗಳ ಹರಟೆ ಇಲ್ಲಿದೆ. ದಯಮಾಡಿ ವೀಕ್ಷಿಸಿ, ನಿಮ್ಮ ಅನಿಸಿಕೆ ತಿಳಿಸಿ. ಈ ಸರಣಿಯಲ್ಲಿ ಯಾವ ವಿಷಯಗಳ ಬಗ್ಗೆ ಮಾಹಿತಿ ನೀಡಬಹುದು, ಇದರ ಸ್ವರೂಪದಲ್ಲಿ ಏನೆಲ್ಲ ಬದಲಾವಣೆ ಮಾಡಿಕೊಳ್ಳಬಹುದು ಎನ್ನುವುದರ ಕುರಿತು ನಿಮ್ಮ ಅಭಿಪ್ರಾಯಗಳಿಗೂ ಸ್ವಾಗತವಿದೆ.

ಇ-ಪುಸ್ತಕಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಜ್ಞಾನದಲ್ಲಿ ಈ ಹಿಂದೆ ಪ್ರಕಟವಾದ ಲೇಖನಗಳನ್ನೂ ಓದಿ:

ಕಾಮೆಂಟ್‌ಗಳಿಲ್ಲ:

badge