ಟಿ. ಜಿ. ಶ್ರೀನಿಧಿ
ಸಿನಿಮಾಗೆ ಹೋದದ್ದು ಗೆಳೆಯರಿಗೆಲ್ಲ ಗೊತ್ತಾಗಲಿ ಎಂದು ಫೇಸ್‌ಬುಕ್‌ನಲ್ಲಿ 'ಚೆಕ್ ಇನ್' ಮಾಡಲು ಹೋದರೆ ನಾವು ಯಾವ ಮಲ್ಟಿಪ್ಲೆಕ್ಸಿನಲ್ಲಿದ್ದೇವೆ ಎಂದು ಅದೇ ತೋರಿಸಿಬಿಡುತ್ತದೆ. ಸಿನಿಮಾ ಮುಗಿದ ಮೇಲೆ ಊಟಕ್ಕೆಂದು ಹೋಟಲಿಗೆ ಹೋಗಬೇಕೆ? ಅದಕ್ಕೆ ಟ್ಯಾಕ್ಸಿ ಸಂಸ್ಥೆಯ ಮೊಬೈಲ್ ಆಪ್ ಬಳಸಿದರೆ ಸಾಕು - ಹತ್ತಿರದಲ್ಲಿ ಯಾವುದಾದರೂ ಟ್ಯಾಕ್ಸಿ ಇದೆಯೇ ಎನ್ನುವುದು ನಮಗೆ ಗೊತ್ತಾಗುತ್ತದೆ, ನಮ್ಮ ಸಾರಥಿಯಾಗಲಿರುವ ಟ್ಯಾಕ್ಸಿ ಚಾಲಕನಿಗೆ ನಾವೆಲ್ಲಿದ್ದೇವೆ ಎನ್ನುವುದೂ ತಿಳಿದುಬಿಡುತ್ತದೆ. ಇನ್ನು ಟ್ಯಾಕ್ಸಿ ಹತ್ತಿ ಹೊರಟಮೇಲೂ ಅಷ್ಟೆ, ಚಾಲಕನ ಮುಂದಿರುವ ಪರದೆಯಲ್ಲಿ ಟ್ಯಾಕ್ಸಿ ಸಾಗುತ್ತಿರುವ ದಾರಿಯ ಮ್ಯಾಪು ಸ್ಪಷ್ಟವಾಗಿ ಮೂಡಿಬರುತ್ತದೆ. ಆತನಿಗೆ ಸರಿಯಾದ ದಾರಿ ಗೊತ್ತಿಲ್ಲದಿದ್ದರೂ ಚಿಂತೆಯಿಲ್ಲ, ಏಕೆಂದರೆ ಮ್ಯಾಪ್ ತೋರಿಸುತ್ತಿರುವ ತಂತ್ರಾಂಶ ಆ ಹೋಟಲಿಗೆ ತಲುಪುವುದು ಹೇಗೆ ಎನ್ನುವುದನ್ನೂ ಹೇಳಿಕೊಡುತ್ತದೆ!
ಹೊಸ ಊರಿಗೆ ಪ್ರವಾಸ ಹೋದಾಗ, ಹಳೆಯ ಊರಿನಲ್ಲಿ ಅಡ್ರೆಸ್ ಸಿಗದೆ ಪರದಾಡುವಾಗಲೆಲ್ಲ ನಾವು ಈ ಹಿಂದೆಯೂ ಮೊಬೈಲ್ ಬಳಸುತ್ತಿದ್ದದ್ದುಂಟು. ಆದರೆ ಅದು ಆ ಪ್ರದೇಶದ ಪರಿಚಯವಿರುವವರಿಂದ ಸಹಾಯ ಕೇಳಲು ಮಾತ್ರವೇ ಆಗಿರುತ್ತಿತ್ತು. ಈಗಿನ ಪರಿಸ್ಥಿತಿ ಹಾಗಿಲ್ಲ, ಯಾವ ಹೋಟಲಿನಲ್ಲಿದ್ದೇವೆ ಎಂದು ಫೇಸ್‌ಬುಕ್ ಅಪ್‌ಡೇಟ್ ಹಾಕುವುದರಿಂದ ಹಿಡಿದು ನಾವು ತಲುಪಬೇಕಿರುವ ವಿಳಾಸಕ್ಕೆ ಹೋಗಬೇಕಾದ ಮಾರ್ಗ ತಿಳಿದುಕೊಳ್ಳುವವರೆಗೆ ಅದೆಷ್ಟೋ ಸಂದರ್ಭಗಳಲ್ಲಿ ಮೊಬೈಲ್ ಫೋನ್ ನಮ್ಮ ನೆರವಿಗೆ ಬರುತ್ತದೆ. ಅಷ್ಟೇ ಅಲ್ಲ, ಆ ಎಲ್ಲ ಸಂದರ್ಭಗಳಲ್ಲೂ ನಾವು ಇರುವ ಸ್ಥಳವನ್ನು ಅದು ಬಹುತೇಕ ಸರಿಯಾಗಿಯೇ ಗುರುತಿಸಿರುತ್ತದೆ.
ಮೊಬೈಲ್ ಫೋನ್ ಇರುವ ಜಾಗವನ್ನು ಗುರುತಿಸಿ ಅದರ ಆಧಾರದ ಮೇಲೆ ಇಷ್ಟೆಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳಲು ನೆರವಾಗುವ ತಂತ್ರಜ್ಞಾನವೇ ಜಿಪಿಎಸ್, ಅಂದರೆ ಗ್ಲೋಬಲ್ ಪೊಸಿಶನಿಂಗ್ ಸಿಸ್ಟಂ.
ಮೊಬೈಲ್ ಫೋನುಗಳಲ್ಲಷ್ಟೇ ಅಲ್ಲ, ವಾಹನ ಚಲಾಯಿಸುವಾಗ ನಮಗೆ ಮಾರ್ಗದರ್ಶನ ನೀಡುವ ಯಂತ್ರಗಳಲ್ಲಿ (ನ್ಯಾವಿಗೇಶನ್ ಡಿವೈಸ್), ಯಾವ ಸಮಯದಲ್ಲಿ ಯಾವ ವಾಹನ ಎಲ್ಲಿದೆ ಎಂದು ನಿಗಾವಹಿಸುವ ಟ್ರಾಕಿಂಗ್ ವ್ಯವಸ್ಥೆಗಳಲ್ಲೆಲ್ಲ ಬಳಕೆಯಾಗುವುದೂ ಇದೇ ತಂತ್ರಜ್ಞಾನ.
[ಜಾಹೀರಾತು] ನಿಮ್ಮ ಮೊಬೈಲಿನಲ್ಲಿ ಈ ಕೊಂಡಿ ತೆರೆಯಿರಿ, ಫ್ಲಿಪ್‌ಕಾರ್ಟ್ ಆಪ್ ಡೌನ್‌ಲೋಡ್ ಮಾಡಿಕೊಂಡು ವಿಶೇಷ ರಿಯಾಯಿತಿ ಪಡೆಯಿರಿ!
ಸೇನೆಯ ಚಲನೆಯನ್ನು ಗಮನಿಸಿಕೊಳ್ಳುವುದರಿಂದ ಪ್ರಾರಂಭಿಸಿ ಕ್ಷಿಪಣಿಯದೋ ಬಾಂಬಿನದೋ ಗುರಿಯನ್ನು ನಿಗದಿಪಡಿಸುವವರೆಗೆ ಅನೇಕ ಕೆಲಸಗಳಿಗಾಗಿ ಮಿಲಿಟರಿ ಕ್ಷೇತ್ರದಲ್ಲೂ ಜಿಪಿಎಸ್ ಬಳಕೆಯಾಗುತ್ತದೆ. ಬಸ್ಸು-ರೈಲು-ವಿಮಾನಗಳಷ್ಟೇ ಅಲ್ಲ, ಅಂತರಿಕ್ಷ ಯಾನಗಳ ನಿಯಂತ್ರಣದಲ್ಲೂ ಜಿಪಿಎಸ್ ಬಳಕೆ ಉಂಟು. ಕೃಷಿ, ಪರಿಸರ ಸಂರಕ್ಷಣೆ ಮುಂತಾದೆಡೆಗಳಲ್ಲೂ ಜಿಪಿಎಸ್ ತಂತ್ರಜ್ಞಾನ ಬಳಸುವ ಸಾಧ್ಯತೆಗಳನ್ನು ಅನ್ವೇಷಿಸಲಾಗುತ್ತಿದೆ.
ಅಂದಹಾಗೆ ಈ ತಂತ್ರಜ್ಞಾನಕ್ಕೆ ಇಷ್ಟೆಲ್ಲ ಕೆಲಸ ಮಾಡಲು ಸಾಧ್ಯವಾಗುವುದು ಹೇಗೆ?
ಈ ಕೆಲಸಕ್ಕಾಗಿ ಉಪಗ್ರಹಗಳ ಒಂದು ಜಾಲವೇ ಬಳಕೆಯಾಗುತ್ತದೆ. ಈ ಜಾಲದಲ್ಲಿರುವ ಎರಡು ಡಜನ್ನಿಗೂ ಹೆಚ್ಚು ಸಂಖ್ಯೆಯ ಉಪಗ್ರಹಗಳು ಭೂಮಿಯಿಂದ ಸುಮಾರು ಇಪ್ಪತ್ತು ಸಾವಿರ ಕಿಲೋಮೀಟರುಗಳಷ್ಟು ಎತ್ತರದಲ್ಲಿ ಪರಿಭ್ರಮಿಸುತ್ತಿರುತ್ತವೆ; ನಿರ್ದಿಷ್ಟ ಪಥಗಳನ್ನು ಅನುಸರಿಸುತ್ತ ಇಡೀ ಪ್ರಪಂಚದ ಮೇಲೆ ತಮ್ಮ ಕಣ್ಣಿರುವಂತೆ ನೋಡಿಕೊಳ್ಳುತ್ತವೆ. ಈ ಉಪಗ್ರಹಗಳು ಹಳೆಯದಾದಾಗ, ಇಲ್ಲವೇ ನಿಷ್ಕ್ರಿಯವಾದಾಗ ಅವುಗಳ ಬದಲಿಗೆ ಬೇರೆ ಉಪಗ್ರಹಗಳನ್ನು ಉಡಾಯಿಸುವ ಕೆಲಸ ಕೂಡ ನಡೆಯುತ್ತಲೇ ಇರುತ್ತದೆ. ಅನಿರೀಕ್ಷಿತ ಸಂದರ್ಭಗಳಲ್ಲಿ ನೆರವಾಗಲು ಯಾವುದೇ ಸಮಯದಲ್ಲಿ ಹೆಚ್ಚುವರಿ ಉಪಗ್ರಹಗಳು ಅಂತರಿಕ್ಷದಲ್ಲಿರುವಂತೆಯೂ ನೋಡಿಕೊಳ್ಳಲಾಗುತ್ತದೆ.
ಮೊಬೈಲ್ ಫೋನಿನಲ್ಲೋ ಪ್ರತ್ಯೇಕ ಉಪಕರಣದಲ್ಲೋ ಜಿಪಿಎಸ್ ರಿಸೀವರ್ ಇರುವ ಯಾರು ಬೇಕಿದ್ದರೂ ಈ ಉಪಗ್ರಹಗಳಿಂದ ಸಂಕೇತ ಪಡೆದುಕೊಂಡು ತಮ್ಮ ಸ್ಥಾನವನ್ನು ತಿಳಿದುಕೊಳ್ಳುವುದು ಸಾಧ್ಯ.
ಜಿಪಿಎಸ್ ಜಾಲದಲ್ಲಿರುವ ಉಪಗ್ರಹಗಳು ಯಾವುದೇ ಸಮಯದಲ್ಲಿ ತಮ್ಮ ನಿರ್ದಿಷ್ಟ ಸ್ಥಾನದ ಕುರಿತು ರೇಡಿಯೋ ಸಂಕೇತಗಳನ್ನು ಬಿತ್ತರಿಸುತ್ತಿರುತ್ತವೆ. ಯಾವುದೇ ಜಿಪಿಎಸ್ ರಿಸೀವರ್ ಈ ಸಂಕೇತ ಪಡೆದುಕೊಂಡು ಉಪಗ್ರಹಕ್ಕೂ ತನಗೂ ನಡುವಿನ ಅಂತರವನ್ನು ಪತ್ತೆಹಚ್ಚಲು ಶಕ್ತವಾಗಿರುತ್ತದೆ. ನಾಲ್ಕು ಉಪಗ್ರಹಗಳಿಂದ ಈ ಬಗೆಯ ಸಂಕೇತ ದೊರಕುತ್ತಿದ್ದಂತೆಯೇ ಜಿಪಿಎಸ್ ರಿಸೀವರ್ ಭೂಮಿಯ ಮೇಲೆ ಯಾವ ಸ್ಥಳದಲ್ಲಿದೆ ಎನ್ನುವ ಅಂಶ, ಮೂರು ಆಯಾಮಗಳಲ್ಲಿ, ಸ್ಪಷ್ಟವಾಗಿಬಿಡುತ್ತದೆ.
ಬಹಳಷ್ಟು ಸಂದರ್ಭಗಳಲ್ಲಿ ಈ ಮಾಹಿತಿ ನಾವಿರುವ ಜಾಗದಿಂದ ಹೆಚ್ಚೆಂದರೆ ಕೆಲವೇ ಮೀಟರುಗಳಷ್ಟು ಆಚೀಚೆ ಹೋಗಿರಬಹುದು ಅಷ್ಟೆ. ಹೆಚ್ಚು ಸ್ಪಷ್ಟ ವಿವರಗಳನ್ನು ಬೇಡುವ ಕೆಲಸಗಳಿಗಾಗಿ (ಉದಾ: ಮಿಲಿಟರಿ ಕ್ಷೇತ್ರ) ಅತ್ಯಂತ ನಿಖರ ರಿಸೀವರುಗಳೂ ಇವೆ. ಅವುಗಳ ಬೆಲೆ ದುಬಾರಿಯಷ್ಟೇ ಅಲ್ಲ, ಕೆಲವೊಮ್ಮೆ ಅಂತಹ ಉಪಕರಣಗಳು ಸಾರ್ವಜನಿಕ ಉಪಯೋಗಕ್ಕಾಗಿ ದೊರಕದಿರುವುದೂ ಉಂಟು.
ಪ್ರಸ್ತುತ ಈ ಸೌಲಭ್ಯ ಒದಗಿಸಲಿಕ್ಕಾಗಿ ಕೆಲಸಮಾಡುತ್ತಿರುವ ಉಪಗ್ರಹಗಳನ್ನು ಅಮೆರಿಕಾ ಸರಕಾರ ನಿರ್ವಹಿಸುತ್ತದೆ. ಹೀಗಾಗಿ ಜಿಪಿಎಸ್ ಬಳಕೆದಾರರೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಅಮೆರಿಕಾದ ಮೇಲೆಯೇ ಅವಲಂಬಿಸಬೇಕಾದ ಪರಿಸ್ಥಿತಿ ಇದೆ.
ಸಾಮಾನ್ಯ ಬಳಕೆದಾರರ ದೃಷ್ಟಿಯಲ್ಲಿ ಇದೇನು ಅಂತಹ ದೊಡ್ಡ ವಿಷಯವಲ್ಲ, ನಿಜ. ಆದರೆ ಮಿಲಿಟರಿ ಅಥವಾ ಆಂತರಿಕ ಭದ್ರತೆಯಂತಹ ಮಹತ್ವದ ಉಪಯೋಗಗಳಿಗೆಂದು ಈ ಮಾಹಿತಿ ಬಳಸುವಾಗ ಬೇರೊಂದು ದೇಶದ ಮೇಲೆ ಅವಲಂಬಿತರಾಗುವುದು ಅಷ್ಟೇನೂ ಒಳ್ಳೆಯದಲ್ಲ.
ಹೀಗಾಗಿ ಅನೇಕ ರಾಷ್ಟ್ರಗಳು ಜಿಪಿಎಸ್‌ಗೆ ತಮ್ಮದೇ ಆದ ಪರ್ಯಾಯಗಳನ್ನು ರೂಪಿಸಿಕೊಳ್ಳುತ್ತಿವೆ. ಚೀನಾದ ಬೇಡೋ (BeiDou), ಯುರೋಪಿಯನ್ ಒಕ್ಕೂಟದ ಗೆಲಿಲಿಯೋ, ರಷ್ಯಾದ ಗ್ಲೋಬಲ್ ನ್ಯಾವಿಗೇಶನ್ ಸ್ಯಾಟಲೈಟ್ ಸಿಸ್ಟಂ (GLONASS) ಮುಂತಾದವುಗಳನ್ನೆಲ್ಲ ಇಲ್ಲಿ ಹೆಸರಿಸಬಹುದು.
ಜಿಪಿಎಸ್‌ಗೆ ಪರ್ಯಾಯ ವ್ಯವಸ್ಥೆ ರೂಪಿಸಿಕೊಳ್ಳುತ್ತಿರುವ ರಾಷ್ಟ್ರಗಳ ಸಾಲಿನಲ್ಲಿ ಭಾರತವೂ ಇದೆ ಎನ್ನುವುದು ಹೆಮ್ಮೆಯ ವಿಷಯ. ಇಂಡಿಯನ್ ರೀಜನಲ್ ನ್ಯಾವಿಗೇಶನ್ ಸ್ಯಾಟಲೈಟ್ ಸಿಸ್ಟಂ (IRNSS) ಎಂಬ ಹೆಸರಿನ ಈ ವ್ಯವಸ್ಥೆಯಲ್ಲಿ ಏಳು ಉಪಗ್ರಹಗಳು ಬಳಕೆಯಾಗಲಿದ್ದು ಆ ಪೈಕಿ ಮೂರು ಈಗಾಗಲೇ ಯಶಸ್ವಿಯಾಗಿ ತಮ್ಮ ಕಕ್ಷೆಯನ್ನು ತಲುಪಿವೆ. ೨೦೧೫ರಲ್ಲಿ ಎಲ್ಲ ಉಪಗ್ರಹಗಳೂ ಉಡಾವಣೆಯಾದ ನಂತರ ಈ ವ್ಯವಸ್ಥೆ ಭಾರತೀಯ ಸೇನೆಗಷ್ಟೇ ಅಲ್ಲದೆ ಸಾಮಾನ್ಯ ಬಳಕೆದಾರರಿಗೂ ಅಗತ್ಯ ಮಾಹಿತಿಯನ್ನು ಒದಗಿಸುವ ನಿರೀಕ್ಷೆಯಿದೆ.
ಜಿಪಿಎಸ್ ಎಂದರೇನು?
ಜಿಪಿಎಸ್ ಅಂದರೆ ಗ್ಲೋಬಲ್ ಪೊಸಿಶನಿಂಗ್ ಸಿಸ್ಟಂ. ವಾಹನ ಚಲಾಯಿಸುವಾಗ ನಮಗೆ ಮಾರ್ಗದರ್ಶನ ನೀಡುವ ಯಂತ್ರಗಳಲ್ಲಿ (ನ್ಯಾವಿಗೇಶನ್ ಡಿವೈಸ್), ಯಾವ ಸಮಯದಲ್ಲಿ ಯಾವ ವಾಹನ ಎಲ್ಲಿದೆ ಎಂದು ನಿಗಾವಹಿಸುವ ಟ್ರಾಕಿಂಗ್ ವ್ಯವಸ್ಥೆಗಳಲ್ಲೆಲ್ಲ ಬಳಕೆಯಾಗುವ ತಂತ್ರಜ್ಞಾನ ಇದು.
ಕಾರ್ಯಾಚರಣೆ ಹೇಗೆ?
ಭೂಮಿಯ ಸುತ್ತ ಸುತ್ತುತ್ತಿರುವ ಕೃತಕ ಉಪಗ್ರಹಗಳ ಜಾಲವನ್ನು ಈ ವ್ಯವಸ್ಥೆ ಬಳಸುತ್ತದೆ. ಆ ಉಪಗ್ರಹಗಳಿಂದ ಪ್ರಸಾರವಾಗುವ ಸಂಕೇತವನ್ನು ಜಿಪಿಎಸ್ ರಿಸೀವರ್ ಮೂಲಕ ಪಡೆದುಕೊಂಡು ಆ ರಿಸೀವರ್ ಇರುವ ನಿರ್ದಿಷ್ಟ ಸ್ಥಳವನ್ನು ಗುರುತಿಸುವುದು ಸಾಧ್ಯ.
ಪರ್ಯಾಯಗಳು
ಜಿಪಿಎಸ್ ವ್ಯವಸ್ಥೆ ಅಮೆರಿಕಾ ಸರಕಾರದ ನಿರ್ವಹಣೆಯಲ್ಲಿ ಕೆಲಸಮಾಡುತ್ತದೆ. ಅಮೆರಿಕಾ ಮೇಲಿನ ಅವಲಂಬನೆ ತಪ್ಪಿಸಲು ಅನೇಕ ರಾಷ್ಟ್ರಗಳು ಇದಕ್ಕೆ ಪರ್ಯಾಯ ವ್ಯವಸ್ಥೆಗಳನ್ನು ರೂಪಿಸಿಕೊಳ್ಳುತ್ತಿವೆ. ನಮ್ಮ ದೇಶದ ಇಂಡಿಯನ್ ರೀಜನಲ್ ನ್ಯಾವಿಗೇಶನ್ ಸ್ಯಾಟಲೈಟ್ ಸಿಸ್ಟಂ ಕೂಡ ಇದೀಗ ಸಿದ್ಧವಾಗುತ್ತಿದೆ.
ಡಿಸೆಂಬರ್ ೮, ೨೦೧೪ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನದ ಪೂರ್ಣರೂಪ

2 ಕಾಮೆಂಟ್‌ಗಳು:
ಕೆಲವು ವರ್ಷ ಹಿಂದೆ ನಾನು ಜಿಪಿಎಸ್ ಬಗೆಗೆ ಬಹಳ ಆಸಕ್ತಿ ಹೊಂದಿದ್ದೆ. ಆ ಕಾಲದ ಬರಹಗಳ ಕೊಂಡಿ - http://halliyimda.blogspot.in/search/label/GPS
ನಕ್ಷೆಗಳು ಪೂರಾ ಗೂಗಲ್ ಸೊತ್ತು ಮತ್ತು ನಮ್ಮಲ್ಲಿ ಸ್ವತಂತ್ರ ಮಾಹಿತಿ ದಾಕಲಾತಿ ಕೊರತೆ ಇದೆ ಎಂದು ಸಾಕಷ್ಟು ಮಾಹಿತಿ ಸಂಗ್ರಹ ಮಾಡಿ openstreet ನಲ್ಲಿ ಹಾಕಿದ್ದೂ ಉಂಟು. ಕೊನೆಗೆ ಗೂಗಲ್ ನನ್ನ ಜಿಪಿಎಸ್ ಗೆ ಇಳಿಸುವ ತಂತ್ರಜ್ನಾನ ಲಭಿಸಿ ಇದರ ಆಸಕ್ತಿ ಕಡಿಮೆಯಾಯಿತು.

ಕಾಮೆಂಟ್ ಪೋಸ್ಟ್ ಮಾಡಿ