ಕೃತಿಪರಿಚಯ: ಡಾ. ಎಸ್. ವಿ. ನರಸಿಂಹನ್
ಉಳಿದ ಪ್ರಾಣಿಗಳೆಲ್ಲ ತಾವು ಇರುವ ಪರಿಸರಕ್ಕೆ ಹೊಂದಿಕೊಂಡು ಬದುಕಲು ಯತ್ನಿಸುತ್ತವೆ. ಆದರೆ ತನ್ನ ಅನುಕೂಲಕ್ಕೆ ತಕ್ಕಂತೆ ಪರಿಸರವನ್ನು ಬದಲಿಸಿಕೊಳ್ಳುವ ಶಕ್ತಿ ಇರುವುದು ಮಾನವನಿಗೆ ಮಾತ್ರ. ಈ ಶಕ್ತಿ ಏಕಕಾಲಕ್ಕೆ ಅವನ ಉನ್ನತಿಯನ್ನೂ ಅವನತಿಯನ್ನೂ ಸಂಕೇತಿಸುತ್ತದೆ. ಮನುಷ್ಯನ ಈ ಸಾಮರ್ಥ್ಯದ ಪರಿಣಾಮವಾಗಿ ಪ್ರಕೃತಿಯ ಮೂಲರೂಪವೇ ಅಸ್ತವ್ಯಸ್ತವಾಗಿಬಿಟ್ಟಿದೆ.
ಹಿರಿಯರು ನಮ್ಮ ತಲೆಮಾರಿಗೆ ಬಿಟ್ಟುಕೊಟ್ಟ ಪ್ರಕೃತಿ ಪರಿಸರಗಳನ್ನು ಸುಸ್ಥಿತಿಯಲ್ಲಿ ಮುಂದಿನ ತಲೆಮಾರಿಗೆ ಒಪ್ಪಿಸುವ ಜವಾಬ್ದಾರಿ ನಮ್ಮದು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಈ ವಿಷಯದಲ್ಲಿ ಸೂಕ್ತ ತಿಳಿವಳಿಕೆಯನ್ನು ನೀಡುವುದು ಅವಶ್ಯಕ. - ಇದು ಶ್ರೀ ಟಿ. ಎಸ್. ಗೋಪಾಲ್ರವರು ಇತ್ತೀಚೆಗೆ ಹೊರತಂದ 'ಕಾಡು ಕಲಿಸುವ ಪಾಠ' ಪುಸ್ತಕದ ಒಟ್ಟು ಸಾರಾಂಶ.
ಗೋಪಾಲ್ರವರು ಸ್ವತಃ ಉಪನ್ಯಾಸಕರು. ಅದರಲ್ಲಿ ಅವರಿಗೆ ಮೂವತ್ತೈದಕ್ಕೂ ಹೆಚ್ಚು ವರ್ಷಗಳ ಅನುಭವ. ಅವರಿಗೆ ವಿದ್ಯಾರ್ಥಿಗಳ ಹಣೆಬರಹ, ಕಲಿಕೆಯ ಗುಣಮಟ್ಟ ಎಲ್ಲರಿಗಿಂತ ಚೆನ್ನಾಗಿ ಗೊತ್ತು. ಅವರು ಬರೆದದ್ದು ಕನ್ನಡ ಭಾಷಾಶಾಸ್ತ್ರದ ಪುಸ್ತಕವೇ ಆಗಿರಲಿ (ಕನ್ನಡ ವ್ಯಾಕರಣ ಪ್ರವೇಶ), ಅನುಭವ ಕಥನವೇ ಆಗಿರಲಿ (ಕಾಡಿನೊಳಗೊಂದು ಜೀವ), ವಿಜ್ಞಾನದ ವಿಷಯವೇ ಆಗಿರಲಿ (ಹುಲಿರಾಯನ ಆಕಾಶವಾಣಿ) ವಿಷಯ ನಿರೂಪಣೆಯಲ್ಲಿ ಶ್ರೀ ಗೋಪಾಲ್ರವರದ್ದು ಎತ್ತಿದ ಕೈ.
'ಕಾಡು ಕಲಿಸುವ ಪಾಠ'ದಲ್ಲಿ ನಾಗರಹೊಳೆಯ ನಿವೃತ್ತ ಅರಣ್ಯಾಧಿಕಾರಿ ಶ್ರೀ ಕೆ. ಎಂ. ಚಿಣ್ಣಪ್ಪನವರೇ ಸೂತ್ರಧಾರ. ವಿದ್ಯಾರ್ಥಿಗಳಿಗಾಗಿ ಅವರು ರಾಜ್ಯದ ವಿವಿಧ ಅಭಯಾರಣ್ಯಗಳಲ್ಲಿ ನಡೆಸಿಕೊಟ್ಟ ಹೆಚ್ಚಿನ ಪ್ರಕೃತಿಶಿಬಿರಗಳಲ್ಲಿ ಶ್ರೀ ಗೋಪಾಲ್ರವರದ್ದೇ ಮೇಲುಸ್ತುವಾರಿ, ಅವರದ್ದೇ ನಿರೂಪಣೆ. ಅಲ್ಲಿ ಅವರು ತೋರುವ ಶಿಸ್ತುಬದ್ಧತೆ, ಅಚ್ಚುಕಟ್ಟುತನ ಅವರ ಪುಸ್ತಕದಲ್ಲೂ ಪ್ರತಿಫಲಿತಗೊಂಡಿದೆ.
![]() |
ಪುಸ್ತಕ ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ |