ಬ್ಲಾಗುಗಳು, ನಾನು-ನೀವು ಅತ್ಯಂತ ಸುಲಭವಾಗಿ ಪಡೆದುಕೊಳ್ಳಬಹುದಾದ ಜಾಲತಾಣಗಳು. ಜಾಲತಾಣ ಅನ್ನುವುದಕ್ಕಿಂತ ಅಂತರಜಾಲದಲ್ಲಿರುವ ದಿನಚರಿ ಎಂದರೆ ಇನ್ನೂ ಸೂಕ್ತವೇನೋ.
ಓದಿದ ಪುಸ್ತಕ, ಇಷ್ಟವಾದ ತಿಂಡಿ, ಇಷ್ಟವಾಗದ ಚಲನಚಿತ್ರಗಳಿಂದ ಪ್ರಾರಂಭಿಸಿ ನಮ್ಮ ಹವ್ಯಾಸಗಳು, ಬರವಣಿಗೆ, ಅಭಿಪ್ರಾಯಗಳು - ಹೀಗೆ ಮನಸ್ಸಿಗೆ ಬಂದ ಯಾವುದೇ ವಿಷಯವನ್ನು ಇಡೀ ಜಗತ್ತಿನೊಡನೆ ಹಂಚಿಕೊಳ್ಳಲು ಅನುವುಮಾಡಿಕೊಟ್ಟದ್ದು ಬ್ಲಾಗುಗಳು. ನಿನ್ನೆಮೊನ್ನೆ ಗಣಕ ಬಳಸಲು ಕಲಿತವನೂ ಕೂಡ ಬಹಳ ಸುಲಭವಾಗಿ ಬ್ಲಾಗಮಂಡಲದ ಪ್ರಜೆಯಾಗಬಹುದು.
ಇತಿಹಾಸದ ದೃಷ್ಟಿಯಿಂದ ನೋಡಿದರೆ ಬ್ಲಾಗುಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿ ಹತ್ತುವರ್ಷಗಳ ಮೇಲಾಗಿದೆ. ಮೊದಲ ಕನ್ನಡ ಬ್ಲಾಗು ಸೃಷ್ಟಿಯಾಗಿದ್ದೂ ಐದಾರು ವರ್ಷಗಳ ಹಿಂದೆಯೇ. ಈಗಂತೂ ಲೇಖಕರು, ಪತ್ರಕರ್ತರು, ಅಂಕಣಕಾರರು, ತಂತ್ರಜ್ಞರು, ಹವ್ಯಾಸಿ ಬರಹಗಾರರು, ವಿವಿಧ ವಿಷಯಗಳ ಪರಿಣತರು - ಹೀಗೆ ಅನೇಕರು ಬ್ಲಾಗ್ ಪ್ರಪಂಚದಲ್ಲಿ ಸಕ್ರಿಯರಾಗಿ ಕನ್ನಡದ ಬೆಳವಣಿಗೆಗಾಗಿ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ; ಇವರು ಸೃಷ್ಟಿಸಿರುವ ನೂರಾರು ಬ್ಲಾಗುಗಳು ಅಂತರಜಾಲದ ಉದ್ದಗಲಕ್ಕೂ ಕನ್ನಡದ ಕಂಪನ್ನು ಪಸರಿಸುತ್ತಿವೆ.
ಗಣಕ ಜಗತ್ತಿನಲ್ಲಿ ಹತ್ತು ವರ್ಷ ಎನ್ನುವುದು ಬಹಳ ದೀರ್ಘವಾದ ಅವಧಿ. ಅದೂ ಒಂದೇ ಪರಿಕಲ್ಪನೆ ಇಷ್ಟೊಂದು ಕಾಲ ಜನಪ್ರಿಯವಾಗಿ ಉಳಿದುಕೊಳ್ಳುವುದು ಅದ್ಭುತವೇ ಸರಿ.
ಬದಲಾವಣೆಯೇ ಜಗದ ನಿಯಮ ಅಲ್ಲವೇ, ಇನ್ನು ಬ್ಲಾಗ್ ಜಗತ್ತು ಅದು ಹೇಗೆ ಬೇರೆಯಾಗಲು ಸಾಧ್ಯ?
ಹೀಗಾಗಿಯೇ ಬ್ಲಾಗ್ ಜಗತ್ತು ಈಗ ಬದಲಾಗುತ್ತಿದೆ. ಎರಡುಮೂರು ವರ್ಷಗಳ ಹಿಂದೆ ಹುಟ್ಟಿಕೊಂಡ ಹೊಸದೊಂದು ಪರಿಕಲ್ಪನೆಯ ಪುಟ್ಟ ಸಸಿ ಬ್ಲಾಗಮಂಡಲದಲ್ಲಿ ಹೊಸ ಸಂಚಲನೆ ಮೂಡಿಸಿದೆ.
ಈ ಪರಿಕಲ್ಪನೆಯ ಹೆಸರೇ ಮೈಕ್ರೋಬ್ಲಾಗಿಂಗ್ - ಪುಟ್ಟಪುಟ್ಟ ಬರಹಗಳ ಮೂಲಕ ಮಾಹಿತಿ ಸಂವಹನವನ್ನು ಇನ್ನಷ್ಟು ಸರಳ, ಕ್ಷಿಪ್ರ ಹಾಗೂ ಪರಿಣಾಮಕಾರಿಯಾಗಿಸುವ ಸುಂದರ ಪ್ರಯತ್ನ.
ಇದನ್ನು ಬ್ಲಾಗುಲೋಕದ ಎಸ್ಸೆಮ್ಮೆಸ್ ಎಂದೇ ಕರೆಯಬಹುದೇನೋ. ಸಾಮಾನ್ಯ ಬ್ಲಾಗುಗಳಿಗೂ ಮೈಕ್ರೋಬ್ಲಾಗುಗಳಿಗೂ ಇರುವ ವ್ಯತ್ಯಾಸ ಕೂಡ ಇದೇ. ಮೈಕ್ರೋಬ್ಲಾಗಿನಲ್ಲಿ ಪ್ರಕಟವಾಗುವ ಬರಹಗಳು ಎಸ್ಸೆಮ್ಮೆಸ್ಸಿನಂತೆಯೇ ೧೪೦ ಅಕ್ಷರಗಳ ಮಿತಿಯನ್ನು ಹೊಂದಿರುತ್ತವೆ. ಮೈಕ್ರೋಬ್ಲಾಗ್ ತಾಣಗಳಲ್ಲಿ ಪಠ್ಯ ಸಂದೇಶಗಳಿಗೇ ಮಹತ್ವ; ಆದರೆ ಸಾಮಾನ್ಯ ಬ್ಲಾಗುಗಳಂತೆ ಚಿತ್ರಗಳು ಹಾಗೂ ಇತರ ಕಡತಗಳನ್ನೂ ಸೇರಿಸಲು ಅನುವುಮಾಡಿಕೊಡುವ ತಾಣಗಳೂ ಇವೆ.
ಮೈಕ್ರೋಬ್ಲಾಗ್ ತಾಣಗಳಿಗೆ ಮಾಹಿತಿ ಸೇರಿಸಲು ಮೊಬೈಲ್ ಅಥವಾ ಇಮೇಲ್ ಕೂಡ ಬಳಸಬಹುದು; ಅಲ್ಲಿನ ಹೊಸ ಮಾಹಿತಿಯನ್ನೂ ಮೊಬೈಲ್ನಲ್ಲೇ ಪಡೆದುಕೊಳ್ಳಬಹುದು. ಹೀಗಾಗಿಯೇ ಮೈಕ್ರೋಬ್ಲಾಗ್ ತಾಣಗಳ ಜನಪ್ರಿಯತೆ ದಿನೇದಿನೇ ಹೆಚ್ಚುತ್ತಿದೆ. ನಾನೇನು ಮಾಡುತ್ತಿದ್ದೇನೆ ಅಥವಾ ಮಾಡುತ್ತಿಲ್ಲ ಎನ್ನುವುದನ್ನು ಲೋಕಕ್ಕೆಲ್ಲ ಹೇಳುವ ವೇದಿಕೆಯಾಗಿ, ಬ್ರೇಕಿಂಗ್ ನ್ಯೂಸ್ ಪಡೆಯುವ ಹೊಸ ಹಾದಿಯಾಗಿ, ಸ್ನೇಹಿತರೊಡನೆ ಹರಟೆಹೊಡೆಯುವ ಸೋಮಾರಿಕಟ್ಟೆಯಾಗಿ, ಚುನಾವಣಾ ಪ್ರಚಾರದ ಹೊಸ ರೀತಿಯಾಗಿ, ಕಡಿಮೆ ಖರ್ಚಿನ ಜಾಹೀರಾತು ಮಾಧ್ಯಮವಾಗಿ - ಒಟ್ಟಾರೆಯಾಗಿ ಮೈಕ್ರೋಬ್ಲಾಗಿಂಗ್ ಪರಿಕಲ್ಪನೆ ಅಂತರಜಾಲದ ಲೇಟೆಸ್ಟ್ ಟೆಂಡ್ ಆಗಿ ಬೆಳೆದಿದೆ. ಶಿಕ್ಷಣ ಮಾಧ್ಯಮವಾಗಿ ಹಾಗೂ ಕಚೇರಿಯಲ್ಲಿ ಕಾರ್ಯಕ್ಷಮತೆ ಹೆಚ್ಚಿಸುವ ಹೊಸ ಉಪಕರಣವಾಗಿಯೂ ಮೈಕ್ರೋಬ್ಲಾಗ್ಗಳು ಉಪಯುಕ್ತವಾಗಲಿವೆ ಎಂಬ ಅಭಿಪ್ರಾಯಗಳೂ ಇವೆ.
ಟ್ವೀಟರ್ (www.twitter.com) ಮೈಕ್ರೋಬ್ಲಾಗಿಂಗ್ ತಾಣಗಳಲ್ಲೇ ಅತ್ಯಂತ ಜನಪ್ರಿಯವಾದದ್ದು. ಟ್ವೀಟ್ಗಳೆಂಬ ಹೆಸರಿನ ಪುಟ್ಟ ಸಂದೇಶಗಳ ರೂಪದಲ್ಲಿ ಮಾಹಿತಿವಿನಿಮಯಕ್ಕೆ ಅನುವುಮಾಡಿಕೊಡುವ ವಿಶಿಷ್ಟ ತಾಣ ಇದು.
ಯಾವಾಗ ಎಲ್ಲಿಂದ ಬೇಕಾದರೂ ಸಂದೇಶಗಳನ್ನು ಕಳಿಸಿಕೊಂಡು ಗೆಳೆಯರ ಬಳಗದೊಡನೆ ಸಂಪರ್ಕದಲ್ಲಿರುವುದನ್ನು ಸಾಧ್ಯವಾಗಿಸಿರುವ ಟ್ವೀಟರ್ ತಾಣದಲ್ಲಿ ಲಕ್ಷಾಂತರ ಮಂದಿ ಸದಸ್ಯರಿದ್ದಾರೆ. ಒಂದು ನಯಾಪೈಸೆ ಆದಾಯ ಇಲ್ಲದಿದ್ದರೂ ಈ ತಾಣಕ್ಕೆ ಸುಮಾರು ನೂರು ಮಿಲಿಯ ಡಾಲರುಗಳ ಬೆಲೆ ಕಟ್ಟಲಾಗಿದೆ!
ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಪ್ರಚಾರ, ಜಿ-೨೦ ಶೃಂಗಸಭೆ ಮುಂತಾದ ಅನೇಕ ಸಂದರ್ಭಗಳಲ್ಲಿ ಟ್ವೀಟರ್ ವ್ಯಾಪಕವಾಗಿ ಬಳಕೆಯಾಗಿರುವುದು ಅದರ ಜನಪ್ರಿಯತೆಗೆ ಸಾಕ್ಷಿ. ಕೆಲಸಮಯದ ಹಿಂದೆ ಅಮೆರಿಕಾದಲ್ಲಿ ವಿಮಾನವೊಂದು ನದಿಯ ಮೇಲೆ ಇಳಿದ ಸುದ್ದಿ ಮೊದಲು ಬಂದದ್ದೇ ಟ್ವೀಟರಿನಲ್ಲಿ. ನಮ್ಮನಿಮ್ಮಂಥವರ ಜೊತೆಗೆ ಅನೇಕ ಪತ್ರಿಕೆಗಳು, ಟೀವಿ ವಾಹಿನಿಗಳು ಕೂಡ ಟ್ವೀಟರ್ ಬಳಸುತ್ತಿವೆ. ೨೦೦೯ರ ಲೋಕಸಭಾ ಚುನಾವಣೆ ಪ್ರಚಾರದಲ್ಲಿ ನಮ್ಮ ರಾಜಕೀಯ ಪಕ್ಷಗಳೂ ಟ್ವೀಟರ್ ಬಳಸಿವೆ.
ಮೈಕ್ರೋಬ್ಲಾಗಿಂಗ್ ಎಂದಾಕ್ಷಣ ಟ್ವೀಟರ್ ನೆನಪಿಗೆ ಬರುವಷ್ಟು ಅದರ ಜನಪ್ರಿಯತೆ ಬೆಳೆದಿದೆ, ನಿಜ. ಆದರೆ ಮೈಕ್ರೋಬ್ಲಾಗಿಂಗ್ ಸೇವೆ ಒದಗಿಸುತ್ತಿರುವ ತಾಣ ಟ್ವೀಟರ್ ಒಂದೇ ಅಲ್ಲ. ಗೂಗಲ್ನ ಜೈಕು (www.jaiku.com) ಹಾಗೂ ಪ್ಲರ್ಕ್ (www.plurk.com) ಕೂಡ ಸಾಕಷ್ಟು ಹೆಸರುಮಾಡಿರುವ ಮೈಕ್ರೋಬ್ಲಾಗಿಂಗ್ ತಾಣಗಳು. ಫೇಸ್ಬುಕ್, ಮೈಸ್ಪೇಸ್, ಲಿಂಕ್ಡ್ಇನ್ ಮುಂತಾದ ತಾಣಗಳು ಕೂಡ ತಮ್ಮ ಸದಸ್ಯರಿಗೆ ಸ್ಟೇಟಸ್ ಅಪ್ಡೇಟ್ಸ್ ಹೆಸರಿನಲ್ಲಿ ಸಣ್ಣಪ್ರಮಾಣದ ಮೈಕ್ರೋಬ್ಲಾಗಿಂಗ್ ಸೌಲಭ್ಯ ನೀಡುತ್ತಿವೆ. ಪೋಸ್ಟೆರಸ್ (www.posterous.com) ಎಂಬಲ್ಲಂತೂ ಎಲ್ಲಿಯೂ ಲಾಗಿನ್ ಆಗುವ ಅಗತ್ಯವಿಲ್ಲದೆ ಬರಿಯ ಇಮೇಲ್ ಮೂಲಕವೇ ಮೈಕ್ರೋಬ್ಲಾಗಿಂಗ್ ಸಾಧ್ಯ!
ಸಾಮಾನ್ಯವಾಗಿ ಕೆಲವು ನೂರು ಪದಗಳಷ್ಟೆ ಇರುವ ಬ್ಲಾಗ್ ಬರಹಗಳು ತೀರಾ ಉದ್ದ, ಬೋರಿಂಗು ಎಂದ ಜನ ನೂರಾ ನಲವತ್ತು ಅಕ್ಷರಗಳನ್ನು ಓದುವುದೂ ಕಷ್ಟ ಅಂದುಬಿಟ್ಟರೆ? ಅದಕ್ಕೆ ಉತ್ತರ ಹುಡುಕಿರುವುದು ಅಡೊಕು (www.adocu.com) ಎಂಬ ತಾಣ. ಟ್ವೀಟರ್ನಲ್ಲಿ ಒಂದು ಎಸ್ಸೆಮ್ಮೆಸ್ನಷ್ಟು ಉದ್ದದ ಮಾಹಿತಿ ಹಾಕುವಂತೆ ಇಲ್ಲಿ ಕೇವಲ ಒಂದು ಪದವನ್ನಷ್ಟೆ ಬರೆಯಬಹುದು. ಹಾಗಾಗಿ ಇದು ಮೈಕ್ರೋಬ್ಲಾಗಿಂಗ್ ಅಲ್ಲ, ನ್ಯಾನೋಬ್ಲಾಗಿಂಗ್!
ನಾನೀಗಊಟಮಾಡ್ತಾಇದೀನಿ, ನೀನ್ಯಾವಾಗ್ಸಿಗ್ತೀಯ? ಎಂಬಂತಹ ಸಂದೇಶಗಳನ್ನು ಪ್ರಕಟಿಸುತ್ತಿರುವ ಈ ತಾಣ ಮೇಲ್ನೋಟಕ್ಕೆ ನಗೆತರಿಸಿದರೂ ಅಂತರಜಾಲ ಲೋಕದ ಸಾಧ್ಯತೆಗಳ ಬಗ್ಗೆ ಕುತೂಹಲವನ್ನೂ ಮೂಡಿಸಿದೆ.
ಇಲ್ಲಿ ಇನ್ನೂ ಏನೇನು ಆಗಲಿದೆಯೋ, ಬಲ್ಲವರಾರು?
ಏಪ್ರಿಲ್ನಲ್ಲಿ ಬರೆದ ಲೇಖನ, ಆಗಸ್ಟ್ ೨೦೦೯ರ 'ವಿಜ್ಞಾನ ಲೋಕ'ದಲ್ಲಿ ಪ್ರಕಟವಾಗಿದೆ
6 ಕಾಮೆಂಟ್ಗಳು:
august 2009?
ನೀವ್ ಹೇಳೋದು ಸರಿಯಾಗಿದೆ. ಆದ್ರೆ ಇತ್ತೀಚಿನ young generation ಬ್ಲಾಗನ್ನು ಒಂದು personal dairy ರೀತಿ ಬಳಸ್ತಾ ಇದೆ ಅಲ್ವಾ. ಜಗತ್ತು ಒಂದು ಕಡೆ ಇದ್ರೆ ನಾನು ಮತ್ತೊಂದು ಕಡೆ ಎಂಬಂತೆ ಬ್ಲಾಗ್ atleast ಒಂದು ಚೌಕಟ್ಟು ಇರೋದು ಒಳ್ಳೆದಲ್ವೆ? ಪಾಶ್ಚಾತ್ಯ ದೇಶಗಳಲ್ಲಿ ಬ್ಲಾಗ್ ಹಳಸಲಾಗಿದೆ. ಅದಕ್ಕೆ ಕೋರ್ಟಗಳಲ್ಲಿ ಮಾನ್ಯತೆ ಇಲ್ಲವಂತೆ (ಅಂದರೆ ಬ್ಲಾಗಲ್ಲಿ ಪ್ರಕಟವಾದದ್ದನ್ನು ಕೋರ್ಟನಲ್ಲಿ ಸಾಕ್ಷಿಯಾಗಿ ತೆಗೆದುಕೊಳ್ಳುವಂತೆ)! ಹೌದಾ....?
ಆದ್ರೆ ಒಂದಂತೂ ಸತ್ಯ ಇತ್ತೀಚಿಗಿನ ಬರೆವಣಿಗೆ ತಾವು ಹೇಳಿದಂತೆ "ಮೈಕ್ರೊ ಬರೆವಣಿಗೆ"ಯಾಗಿದೆ.
ಒಟ್ಟಿನಲ್ಲಿ ತಾವು ನೀಡಿದ ಬ್ಲಾಗಗಳ ಮಾಹಿತಿಪೂರಕವಾದದ್ದು.
ಲೇಖಕರಿಗೆ ಒಂದು ಥ್ಯಾಂಕ್ಸ್.
ನೀವ್ ಹೇಳೋದು ಸರಿಯಾಗಿದೆ. ಆದ್ರೆ ಇತ್ತೀಚಿನ young generation ಬ್ಲಾಗನ್ನು ಒಂದು personal dairy ರೀತಿ ಬಳಸ್ತಾ ಇದೆ ಅಲ್ವಾ. ಜಗತ್ತು ಒಂದು ಕಡೆ ಇದ್ರೆ ನಾನು ಮತ್ತೊಂದು ಕಡೆ ಎಂಬಂತೆ ಬ್ಲಾಗ್ atleast ಒಂದು ಚೌಕಟ್ಟು ಇರೋದು ಒಳ್ಳೆದಲ್ವೆ? ಪಾಶ್ಚಾತ್ಯ ದೇಶಗಳಲ್ಲಿ ಬ್ಲಾಗ್ ಹಳಸಲಾಗಿದೆ. ಅದಕ್ಕೆ ಕೋರ್ಟಗಳಲ್ಲಿ ಮಾನ್ಯತೆ ಇಲ್ಲವಂತೆ (ಅಂದರೆ ಬ್ಲಾಗಲ್ಲಿ ಪ್ರಕಟವಾದದ್ದನ್ನು ಕೋರ್ಟನಲ್ಲಿ ಸಾಕ್ಷಿಯಾಗಿ ತೆಗೆದುಕೊಳ್ಳುವಂತೆ)! ಹೌದಾ....?
ಆದ್ರೆ ಒಂದಂತೂ ಸತ್ಯ ಇತ್ತೀಚಿನ ಬರೆವಣಿಗೆ "ಮೈಕ್ರೋ ಬರೆವಣಿಗೆ"ಯಾಗಿದೆ.
ಬ್ಲಾಗಗಳ ಬಗ್ಗೆ ಪೂರಕ ಮಾಹಿತಿ ನೀಡಿದ ಲೇಖಕರಿಗೆ ನನ್ನದೊಂದು ಥ್ಯಾಂಕ್ಸ್...
ನೀವ್ ಹೇಳೋದು ಸರಿಯಾಗಿದೆ. ಆದ್ರೆ ಇತ್ತೀಚಿನ young generation ಬ್ಲಾಗನ್ನು ಒಂದು personal dairy ರೀತಿ ಬಳಸ್ತಾ ಇದೆ ಅಲ್ವಾ. ಜಗತ್ತು ಒಂದು ಕಡೆ ಇದ್ರೆ ನಾನು ಮತ್ತೊಂದು ಕಡೆ ಎಂಬಂತೆ. ಬ್ಲಾಗ್ge atleast ಒಂದು ಚೌಕಟ್ಟು ಇರೋದು ಒಳ್ಳೆದಲ್ವೆ? ಪಾಶ್ಚಾತ್ಯ ದೇಶಗಳಲ್ಲಿ ಬ್ಲಾಗ್ ಹಳಸಲಾಗಿದೆ. ಅದಕ್ಕೆ ಕೋರ್ಟಗಳಲ್ಲಿ ಮಾನ್ಯತೆ ಇಲ್ಲವಂತೆ (ಅಂದರೆ ಬ್ಲಾಗಲ್ಲಿ ಪ್ರಕಟವಾದದ್ದನ್ನು ಕೋರ್ಟನಲ್ಲಿ ಸಾಕ್ಷಿಯಾಗಿ ತೆಗೆದುಕೊಳ್ಳುವಂತೆ)! ಹೌದಾ....?
ಆದ್ರೆ ಒಂದಂತೂ ಸತ್ಯ ಇತ್ತೀಚಿನ ಬರೆವಣಿಗೆ "ಮೈಕ್ರೋ ಬರೆವಣಿಗೆ"ಯಾಗಿದೆ.
ಬ್ಲಾಗಗಳ ಬಗ್ಗೆ ಪೂರಕ ಮಾಹಿತಿ ನೀಡಿದ ಲೇಖಕರಿಗೆ ನನ್ನದೊಂದು ಥ್ಯಾಂಕ್ಸ್...
ನೀವ್ ಹೇಳೋದು ಸರಿಯಾಗಿದೆ. ಆದ್ರೆ ಇತ್ತೀಚಿನ young generation ಬ್ಲಾಗನ್ನು ಒಂದು personal dairy ರೀತಿ ಬಳಸ್ತಾ ಇದೆ ಅಲ್ವಾ. ಜಗತ್ತು ಒಂದು ಕಡೆ ಇದ್ರೆ ನಾನು ಮತ್ತೊಂದು ಕಡೆ ಎಂಬಂತೆ. ಬ್ಲಾಗ್ atleast ಒಂದು ಚೌಕಟ್ಟು ಇರೋದು ಒಳ್ಳೆದಲ್ವೆ? ಪಾಶ್ಚಾತ್ಯ ದೇಶಗಳಲ್ಲಿ ಬ್ಲಾಗ್ ಹಳಸಲಾಗಿದೆ. ಅದಕ್ಕೆ ಕೋರ್ಟಗಳಲ್ಲಿ ಮಾನ್ಯತೆ ಇಲ್ಲವಂತೆ (ಅಂದರೆ ಬ್ಲಾಗಲ್ಲಿ ಪ್ರಕಟವಾದದ್ದನ್ನು ಕೋರ್ಟನಲ್ಲಿ ಸಾಕ್ಷಿಯಾಗಿ ತೆಗೆದುಕೊಳ್ಳುವಂತೆ)! ಹೌದಾ....?
ಆದ್ರೆ ಒಂದಂತೂ ಸತ್ಯ ಇತ್ತೀಚಿನ ಬರೆವಣಿಗೆ "ಮೈಕ್ರೋ ಬರೆವಣಿಗೆ"ಯಾಗಿದೆ.
ಬ್ಲಾಗಗಳ ಬಗ್ಗೆ ಪೂರಕ ಮಾಹಿತಿ ನೀಡಿದ ಲೇಖಕರಿಗೆ ನನ್ನದೊಂದು ಥ್ಯಾಂಕ್ಸ್...
ನೀವ್ ಹೇಳೋದು ಸರಿಯಾಗಿದೆ. ಆದ್ರೆ ಇತ್ತೀಚಿನ young generation ಬ್ಲಾಗನ್ನು ಒಂದು personal dairy ರೀತಿ ಬಳಸ್ತಾ ಇದೆ ಅಲ್ವಾ. ಜಗತ್ತು ಒಂದು ಕಡೆ ಇದ್ರೆ ನಾನು ಮತ್ತೊಂದು ಕಡೆ ಎಂಬಂತೆ ಬ್ಲಾಗ್ atleast ಒಂದು ಚೌಕಟ್ಟು ಇರೋದು ಒಳ್ಳೆದಲ್ವೆ? ಪಾಶ್ಚಾತ್ಯ ದೇಶಗಳಲ್ಲಿ ಬ್ಲಾಗ್ ಹಳಸಲಾಗಿದೆ. ಅದಕ್ಕೆ ಕೋರ್ಟಗಳಲ್ಲಿ ಮಾನ್ಯತೆ ಇಲ್ಲವಂತೆ (ಅಂದರೆ ಬ್ಲಾಗಲ್ಲಿ ಪ್ರಕಟವಾದದ್ದನ್ನು ಕೋರ್ಟನಲ್ಲಿ ಸಾಕ್ಷಿಯಾಗಿ ತೆಗೆದುಕೊಳ್ಳುವಂತೆ)! ಹೌದಾ....?
ಆದ್ರೆ ಒಂದಂತೂ ಸತ್ಯ ಇತ್ತೀಚಿನ ಬರೆವಣಿಗೆ "ಮೈಕ್ರೋ ಬರೆವಣಿಗೆ"ಯಾಗಿದೆ.
ಬ್ಲಾಗಗಳ ಬಗ್ಗೆ ಪೂರಕ ಮಾಹಿತಿ ನೀಡಿದ ಲೇಖಕರಿಗೆ ನನ್ನದೊಂದು ಥ್ಯಾಂಕ್ಸ್...
ಕಾಮೆಂಟ್ ಪೋಸ್ಟ್ ಮಾಡಿ